Ram Navami 2023: ನಮ್ಮ ಅಜ್ಜಿಯರು ರಾಮನವಮಿಯ ಪಾನಕ ಹೀಗೆ ಮಾಡುತ್ತಿದ್ದರು! - Vistara News

ಆಹಾರ/ಅಡುಗೆ

Ram Navami 2023: ನಮ್ಮ ಅಜ್ಜಿಯರು ರಾಮನವಮಿಯ ಪಾನಕ ಹೀಗೆ ಮಾಡುತ್ತಿದ್ದರು!

ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು ತಿಳಿಸಲಾಗಿದೆ.

VISTARANEWS.COM


on

ram navami panaka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನವಮಿ ಎಂದರೆ ಪಾನಕ. ಪಾನಕ ಎಂದರೆ ರಾಮನವಮಿ! ಹೌದು. ಪಾನಕ ಕುಡಿಯಬೇಕು ಎನಿಸಿದಾಗ ರಾಮನವಮಿಯ ನೆನಪಾಗುವುದುಂಟು. ಯಾಕೆಂದರೆ, ರಾಮನವಮಿ ಬಂದಾಕ್ಷಣ ದೇವಸ್ಥಾನಗಳಲ್ಲಿ, ರಾಮ ಮಂದಿರಗಳಲ್ಲಿ, ನಮ್ಮ ಮನೆಗಳಲ್ಲಿ, ನೆಂಟರಿಷ್ಟರ ಮನೆಗಳಲ್ಲಿ ಪಾನಕದ ಮಳೆಯಾಗುತ್ತದೆ. ಚಳಿಗಾಲ ಮುಗಿದು ಬೇಸಗೆ ಬರುವಾಗ ಸೂರ್ಯನ ಝಳ ಮೈಯನ್ನು ತಾಕುವಾಗ ರಾಮನವಮಿಯ ನೆಪದಲ್ಲಿ ಸಿಗುವ ಈ ಪಾನಕ ಕುಡಿದರೆ ಆಹಾ ಎಂಬ ಸ್ವರ್ಗ ಸುಖ. ದಕ್ಷಿಣ ಭಾರತದೆಲ್ಲೆಡೆ, ರಾಮನವಮಿಯ ದಿನದಂದು ಸಿಗುವ ಈ ಸಿಹಿ ಖಾರದ ಈ ಪಾನಕ ಮಾಡುವುದು ಕೂಡಾ ಕಲೆಯೇ. ಬೇರೆ ಶರಬತ್ತುಗಳಿಗಿಂತ ಕೊಂಚ ಭಿನ್ನವಾಗಿ ಕಾಣುವ ಈ ಪಾನಕ ನಮ್ಮ ಹಿರಿಯರು ನಮಗೆ ದಾಟಿಸಿ ಹೋದ ಒಂದು ಅದ್ಭುತ ಪಾನೀಯ. ಹಬ್ಬಗಳ ನೆಪದಲ್ಲಾದರೂ ಇಂತಹ ದೇಸೀ ಪಾನೀಯಗಳನ್ನು ನಾವು ಕುಡಿಯಬೇಕು!

ಪಾನಕ ಸಂಸ್ಕೃತ ಮೂಲದಿಂದ ಬಂದ ಶಬ್ದ. ಅಂದರೆ, ಸಿಹಿಯಾದ ಪಾನೀಯ ಎಂದು ಅರ್ಥ. ಪಾನಕ ದೇಹವನ್ನು ತಂಪು ಮಾಡುವ ಪಾನೀಯವಾದ್ದರಿಂದ ರಾಮನವಮಿ ಬೇಸಿಗೆಯಲ್ಲಿ ಬರುವುದರಿಂದ ದೇಹಕ್ಕೆ ತಂಪು ಎಂಬ ಅರ್ಥದಲ್ಲಿ ರಾಮನವಮಿಯ ದಿನ ಇದನ್ನು ತಯಾರಿಸುವ ಸಂಪ್ರದಾಯ ಬಂದಿದೆ ಎಂಬ ಮಾತಿದೆ. ಪಾನಕದಲ್ಲೂ ಬಹಳ ವಿಧಗಳಿವೆ. ನಿಂಬೆಹಣ್ಣು ಹಿಂಡಿದ ಪಾನಕ, ಒಣ ಶುಂಠೀ ಹಾಕಿದ ಪಾನಕ, ತುಳಸಿ ಹಾಗೂ ಜೇನು ತುಪ್ಪ ಹಾಕಿದ ಪಾನಕ ಎಂಬಿತ್ಯಾದಿ ಬಗೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾದರೂ ಹೆಸರು ಮಾತ್ರ ಬದಲಾಗುವುದಿಲ್ಲ.

ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು ತಿಳಿಸಲಾಗಿದೆ.

ಹೀಗೆ ಮಾಡಿ: ಎರಡು ಕಪ್‌ ನೀರು, ನಾಲ್ಕೈದು ಚಮಚ ತುರಿದ ಬೆಲ್ಲ, ಒಂದು ಚಿಟಿಕೆ ಏಲಕ್ಕಿ, ಒಂದು ಚಿಟಿಕೆ ಒಣ ಶುಂಠಿ ಪುಡಿ, ಎರಡು ಚಿಟಿಕೆ ಕರಿಮೆಣಸಿನ ಪುಡಿ ಇಷ್ಟಿದ್ದರೆ ಪಾನಕ ಮಾಡಬಹುದು. ಮೊದಲು ನೀರಿಗೆ ಬೆಲ್ಲದ ಹುಡಿ ಹಾಕಿ ಚೆನ್ನಾಗಿ ಕಲಕಿ. ಬೆಲ್ಲ ಕರಗಿದ ಮೇಲೆ ಅದಕ್ಕೆ ಏಲಕ್ಕಿ, ಶುಂಠಿ ಪುಡಿ, ಹಾಗೂ ಕರಿಮೆಣಸಿನ ಪುಡಿ ಸೇರಿಸಿ. ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿದ ಪುಡಿಯಾದರೆ ರುಚಿ ಹೆಚ್ಚು. ಹಿಂದಿನ ಕಾಲದಲ್ಲಿ ಇಂತಹ ಮಸಾಲೆ ಪುಡಿಗಳನ್ನೆಲ್ಲ ಹಿರಿಯರು, ಅಜ್ಜಿಯರು ಮನೆಯಲ್ಲೇ ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿ ಬೇಕಾದ ಅಡುಗೆಗೆ ಬಳಸುತ್ತಿದ್ದರು. ಅದಕ್ಕಾಗಿಯೇ, ಕೈಯಲ್ಲೇ ಮಾಡಿದ ಪುಡಿಗಳು ಆಹಾರದ ರುಚಿ ಹಾಗೂ ಘಮವನ್ನು ಹೆಚ್ಚಿಸುತ್ತಿದ್ದವು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಶುಂಠಿ ಹಾಗೂ ಕರಿಮೆಣಸಿನ ಖಾರ ಬೆಲ್ಲದ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಸಿಹಿ ಖಾರದ ಪಾನಕ ಸಿದ್ಧ. ಏಲಕ್ಕಿಯ ಘಮ ಇದಕ್ಕೆ ಅಪೂರ್ವ ಸ್ವಾದವನ್ನೂ ನೀಡುತ್ತದೆ. ನಿಂಬೆಹಣ್ಣು ಬೇಕಾದವರು, ಅರ್ಧ ನಿಂಬೆಹಣ್ಣನ್ನೂ ಇದಕ್ಕೆ ಹಿಂಡಿಕೊಳ್ಳಬಹುದು. ಈ ಪಾನಕವನ್ನು ದೇವರ ಮುಂದೆ ನೈವೇದ್ಯ ರೂಪದಲ್ಲಿ ಇಟ್ಟು, ಪೂಜೆಯ ನಂತರ ಪ್ರತಿಯೊಬ್ಬರೂ ಹಂಚಿಕೊಂಡು ಕುಡಿಯುವುದೇ ರಾಮನವಮಿಯ ಖುಷಿಗಳಲ್ಲೊಂದು.

ಇದನ್ನೂ ಓದಿ: Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Cake Tragedy: ಕೇಕ್‌ ತಿಂದು ಬಾಲಕಿ ಸಾವಿನ ಪ್ರಕರಣ; ಸಾವಿಗೆ ನಿಖರ ಕಾರಣ ಬಯಲು

Cake Tragedy: ಹುಟ್ಟು ಹಬ್ಬದಂದು ಕೇಕ್ ತಿಂದು ಬಾಲಕಿ ಮೃತಪಟ್ಟ ಪ್ರಕರಣದಲ್ಲಿ ಬಾಲಕಿ ತಿಂದ ಕೇಕ್ ನಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಸಿಹಿಕಾರಕ ಬೆರೆಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆ ದೇಶಾದ್ಯಂತ ಆತಂಕ ಮೂಡಿಸಿತ್ತು.

VISTARANEWS.COM


on

By

Cake Tragedy
Koo

ಪಟಿಯಾಲಾ: ಹುಟ್ಟು ಹಬ್ಬದಂದು (birthday) ಬೇಕರಿಯೊಂದರಿಂದ ಆನ್‌ಲೈನ್ (online) ಮೂಲಕ ತರಿಸಲಾಗಿದ್ದ ಕೇಕ್ (Cake Tragedy) ತಿಂದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ (death) ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಯಲ್ಲಿ ಕೇಕ್ ನಲ್ಲಿ ಹೆಚ್ಚಿನ ಸಾಂದ್ರತೆಯ ಕೃತಕ ಸಿಹಿಕಾರಕ ಬೆರೆಸಲಾಗಿತ್ತು; ಸಾವಿಗೆ ಇದೇ ಕಾರಣ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಂಜಾಬ್‌ನ (punjab) ಪಟಿಯಾಲಾದಲ್ಲಿ (patiyala) ಮಾರ್ಚ್ 24ರಂದು ಈ ಘಟನೆ ನಡೆದಿತ್ತು. ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಬಾಲಕಿ ಮಾನ್ವಿಯ ಸಾವಿನ ತನಿಖೆಗೆ ಆದೇಶಿಸಿದ್ದರು.

ಮಾನ್ವಿಯ ಹುಟ್ಟುಹಬ್ಬದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಚಾಕೊಲೇಟ್ ಕೇಕ್ ಅನ್ನು ತರಿಸಲಾಗಿತ್ತು. ಇದನ್ನು ತಿಂದು ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು.

ಇದನ್ನೂ ಓದಿ: Belagavi News: ಬಿಲ್ ಮಂಜೂರಾತಿ ವಿಚಾರ ಗ್ರಾಪಂ ಅಧ್ಯಕ್ಷ-ಸದಸ್ಯರ ಮಧ್ಯೆ ಮಾರಾಮಾರಿ; ಸಿಸಿ ಕ್ಯಾಮೆರಾದಲ್ಲಿ ಸೆರೆ

ಕೃತಕ ಸಿಹಿ

ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಲಾಗಿದೆ ಎಂದು ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ. ವಿಜಯ್ ಜಿಂದಾಲ್ ತಿಳಿಸಿದ್ದಾರೆ.

ಸಣ್ಣ ಪ್ರಮಾಣದ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗಿದ್ದರೂ ಹೆಚ್ಚಿನ ಮಟ್ಟಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

ಬೇಕರಿ ವಿರುದ್ಧ ಕ್ರಮ

ಶೀಘ್ರದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಏನಾಗಿತ್ತು?

10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್‌ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿತ್ತು. ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದರು. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕಿ ಮೃತಪಟ್ಟಿದ್ದಳು.

ಬಾಲಕಿಯ ಸಾವಿನ ಕುರಿತು ತನಿಖೆಗೆ ಮುಂದಾದ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯದಿಂದ ಕೇಕ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವೀಡಿಯೊದಲ್ಲಿ ಮಾನ್ವಿ ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಳು.

ಅವಳು ಕೇಕ್ ಕತ್ತರಿಸಿ ಎಲ್ಲರೂ ತಿಂದ ಕೆಲವೇ ಗಂಟೆಗಳ ಅನಂತರ ಅವಳ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಮಾನ್ವಿ ಅವರ ಬಾಯಿಯಲ್ಲಿ ಶುಷ್ಕತೆ ಉಂಟಾಗಿತ್ತು ಎಂದು ಆಕೆಯ ಅಜ್ಜ ಹೇಳಿದರು.

ಆಕೆ ನಿತ್ರಾಣಗೊಂಡಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು ಆದರೆ ಯಾವುದಕ್ಕೂ ಸ್ಪಂದಿಸದೆ ಅವಳು ಮೃತಪಟ್ಟಿದ್ದಳು. ‘ಕೇಕ್ ಕನ್ಹಾ’ನಿಂದ ಆರ್ಡರ್ ಮಾಡಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಮಾನ್ವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Continue Reading

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ದೇಶ

Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Everest Spices: ಮಸಾಲಾ ಉತ್ಪನ್ನಗಳಿಗಾಗಿ ಜಾಗತಿಕವಾಗಿ ಹೆಸರು ಗಳಿಸಿರುವ ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳು ಈಗ ನಕಾರಾತ್ಮಕವಾಗಿ ಸುದ್ದಿಯಾಗುತ್ತಿವೆ. ಸಿಂಗಾಪುರ ಬಳಿಕ ಹಾಂಕಾಂಗ್‌ಲ್ಲೂ ಎವರೆಸ್ಟ್‌ ಹಾಗೂ ಎಂಡಿಎಚ್‌ ಕಂಪನಿಯ ನಾಲ್ಕು ಮಸಾಲಾ ಪದಾರ್ಥಗಳ ಮಾರಾಟ ನಿಷೇಧಿಸಿದ್ದು, ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

VISTARANEWS.COM


on

Everest Spices
Koo

ಸಿಟಿ ಆಫ್‌ ವಿಕ್ಟೋರಿಯಾ: ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest Spices) ಫಿಶ್ ಕರಿ ಮಸಾಲಾ (Fish Curry Masala) ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ (Hong Kong) ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

“ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

ಕ್ಯಾನ್ಸರ್‌ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್‌ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್‌ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್‌ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್‌ ಫಿಶ್‌ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Continue Reading

ಆಹಾರ/ಅಡುಗೆ

Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ

Food Expired Date: ತಿನ್ನುವ ಆಹಾರ ಎಷ್ಟು ಸುರಕ್ಷಿತ ಮತ್ತು ಗುಣಮಟ್ಟದಲ್ಲಿದೆ ಎಂಬುದನ್ನು ನಾವು ತಿಳಿದುಕೊಂಡಿರಲೇಬೇಕು. ಇಲ್ಲವಾದರೆ ಆರೋಗ್ಯ ಹಾಳಾಗಬಹುದು. ಇವುಗಳನ್ನು ಪರೀಕ್ಷಿಸುವ ಹಲವು ವಿಧಾನಗಳು ಇಲ್ಲಿವೆ.

VISTARANEWS.COM


on

By

Food products
Koo

ಎರಡು ದಿನಗಳ ಹಿಂದೆ ಡೇಟ್ ಎಕ್ಸ್‌ಪೈರ್‌ (Food Expired Date) ಆಗಿದ್ದ ಚಾಕಲೇಟ್ (Chocolate) ಸೇವಿಸಿ ಪಂಜಾಬ್‌ನ (punjab) ಪಟಿಯಾಲದಲ್ಲಿ (patiyala) ಬಾಲಕಿ ಒಬ್ಬಳು ಮೃತಪಟ್ಟಿದ್ದಳು, ವಾರದ ಹಿಂದೆ ಮಂಡ್ಯ (mandya) ಜಿಲ್ಲೆ ಶ್ರೀರಂಗಪಟ್ಟಣ (srirangapattana) ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್ ಕ್ರೀಮ್ (icecream) ತಿಂದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಈ ಎರಡೂ ಘಟನೆಗಳಲ್ಲಿ ಖರೀದಿ ಮಾಡಿದ ಆಹಾರದ (Food products) ಗುಣಮಟ್ಟದ (quality) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ ಮತ್ತು ಔಷಧ ಇವೆರಡೂ ನಿರ್ದಿಷ್ಟ ಸಮಯದ ಬಳಿಕ ಹಾಳಾಗುತ್ತದೆ ಮತ್ತು ವಿಷಕಾರಿಯಾಗುತ್ತದೆ. ಹೀಗಾಗಿ ಅರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಇವೆರಡನ್ನು ನಿಗದಿತ ಸಮಯದೊಳಗೆ ಸೇವಿಸುವುದು ಉತ್ತಮ.

ಇವೆರಡರ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧಗಳಲ್ಲಿ ಬಳಸುವ ರಾಸಾಯನಿಕ ಮಿಶ್ರಣವು ವಿಷವಾಗುತ್ತದೆ. ಅದಕ್ಕಾಗಿ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧವನ್ನು ಸೇವಿಸಬಾರದು ಮತ್ತು ಎಸೆಯಬೇಕು. ಇಲ್ಲಿ ಸುರಕ್ಷತೆ ಸಮಸ್ಯೆಯೇ ಹೊರತು ಗುಣಮಟ್ಟ ಅಲ್ಲ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಉತ್ಪನ್ನಗಳು ಕ್ರಮೇಣ ಹಾಳಾಗುತ್ತವೆ. ಅಪರೂಪ ಎಂಬಂತೆ ಕೆಲವೊಮ್ಮೆ ವಿಷಕಾರಿಯಾಗುತ್ತವೆ. ಆಹಾರ ವಿಷಕಾರಿ ಆಗುವ ಮೊದಲು ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ, ಗುಣಮಟ್ಟ ಪ್ರಮುಖ ವಿಚಾರವಾಗಿದೆಯೇ ಹೊರತು ಸುರಕ್ಷತೆ ಅಲ್ಲ. ಹೀಗಾಗಿ ಆಹಾರ ಉತ್ಪನ್ನಗಳಿಗೆ ಎಕ್ಸ್‌ಪೈರಿ ಡೇಟ್ ಈನ್ದು ಇರುವುದಿಲ್ಲ. ಬದಲಾಗಿ ಅವನ್ನು ತಯಾರಿಸಿದ, ಬಳಸಲಾಗುವ ದಿನಾಂಕಗಳನ್ನು ಮಾತ್ರ ಹೇಳಲಾಗುತ್ತದೆ.


ಆಹಾರ ಪೋಲು

ಇದರಿಂದಾಗಿ ಪ್ರಪಂಚದಾದ್ಯಂತ ಜನರು ಸೇವಿಸಲು ಯೋಗ್ಯವಾದ ಸಾಕಷ್ಟು ಉತ್ತಮವಾದ ಆಹಾರಗಳು ಕಸದ ಬುಟ್ಟಿ ಸೇರುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಮೆರಿಕ, ಮಲೇಷ್ಯಾ ದೇಶಗಳು ವಿಶ್ವದಲ್ಲೇ ಹೆಚ್ಚು ಆಹಾರ ಪೋಲು ಮಾಡುವ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ನಾವು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಜೊತೆಗೆ ಅವುಗಳ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಆಹಾರ ಉತ್ಪನ್ನಗಳ ದಿನಾಂಕ

ಬೇರೆಬೇರೆ ಆಹಾರಗಳು ಬೇರೆಬೇರೆ ಅವಧಿಯವರೆಗೆ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಅಂದರೆ, ಎಲ್ಲಾ ಆಹಾರ ಪದಾರ್ಥಗಳು ಒಂದೇ ಪ್ರಮಾಣದಲ್ಲಿ, ಒಂದೇ ಸಮಯದಲ್ಲಿ ಹಾಳಾಗುವುದಿಲ್ಲ. ಆಹಾರ ಕಂಪನಿಗಳು ಶೆಲ್ಫ್ ಜೀವನವನ್ನು ಹೆಚ್ಚಿಸಲು ಸಂರಕ್ಷಕಗಳನ್ನು ಬಳಸುತ್ತವೆ. ಇದರ ಆಧಾರದ ಮೇಲೆ ಅವುಗಳ ಗುಣಮಟ್ಟದ ಬಾಳಿಕೆ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಆಹಾರದ ಗುಣಮಟ್ಟಕ್ಕೆ ದಿನಾಂಕಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ವಿಶ್ವದ ಯಾವುದೇ ದೇಶದಲ್ಲೂ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಹೊಂದಿಲ್ಲ. ಇದನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಲು ಆಹಾರ ತಯಾರಕರಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಹಾರ ಕಂಪೆನಿಗಳು ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸುತ್ತವೆ.

ವಿದೇಶಗಳಲ್ಲಿ ಆಹಾರ ಗುಣಮಟ್ಟ ನಿರ್ಧರಿಸುವ ದಿನಾಂಕಗಳನ್ನು ಉಲ್ಲೇಖಿಸಲಾಗುತ್ತದೆ. ಇದರ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಪ್ರವಾಸ ಮಾಡುವ ಯೋಜನೆ ಇದ್ದರೆ ಇದು ಹೆಚ್ಚು ಉಪಯುಕ್ತವಾಗಿರುತ್ತದೆ.


ಪ್ಯಾಕ್ಡ್ ಆನ್ / ಕ್ಲೋಸ್ಡ್ ಆನ್

ಆಹಾರ ಪದಾರ್ಥವನ್ನು ಕಂಟೇನರ್‌ನಲ್ಲಿ ಸೀಲ್ ಮಾಡಿದ ದಿನಾಂಕ ಮತ್ತು ಅದರ ಬಾಳಿಕೆ ಹಾಗೂ ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಇದು ಉಪಯುಕ್ತವಾಗಿದೆ.

ಸೆಲ್ ಬೈ / ಪುಲ್ ಬೈ

ಈ ಸಂದೇಶವು ತಯಾರಕರಿಂದ ಚಿಲ್ಲರೆ ವ್ಯಾಪಾರಿಗಳಿಗೆ. ನಿರ್ಧಿಷ್ಟ ದಿನಾಂಕದೊಳಗೆ ಉತ್ಪನ್ನವನ್ನು ಮಾರಾಟ ಮಾಡದಿದ್ದರೆ ಅದನ್ನು ಶೆಲ್ಫ್‌ನಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು.

ಬೆಸ್ಟ್ ಯೂಸ್ಡ್ ಬಿಫೋರ್/ ಬೆಸ್ಟ್ ಯೂಸ್ಡ್ ಬೈ

ಇದು ಆಹಾರ ಪದಾರ್ಥಗಳ ಗುಣಮಟ್ಟ ಕಡಿಮೆಯಾಗುವುದನ್ನು ಸೂಚಿಸುವ ದಿನಾಂಕವಾಗಿದೆ. ನಿರ್ದಿಷ್ಟ ದಿನಾಂಕದೊಳಗೆ ಬಳಸದೇ ಇದ್ದರೆ ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶದ ಮೌಲ್ಯವು ನಂತರ ಬದಲಾಗುತ್ತದೆ. ಈ ದಿನಾಂಕದ ಅನಂತರ ಕೆಲವು ದಿನಗಳವರೆಗೆ ಆಹಾರವು ಸೇವಿಸಲು ಸಾಕಷ್ಟು ಉತ್ತಮವಾಗಿರುತ್ತದೆ.

ಯೂಸ್ ಬೈ/ ಡು ನಾಟ್ ಯೂಸ್ ಆಫ್ಟರ್

ನಿಗದಿತ ಅವಧಿ ಮುಗಿದ ಬಳಿಕ ಆಹಾರದ ಗುಣಮಟ್ಟವು ಹದಗೆಟ್ಟಿರುತ್ತದೆ. ಅದನ್ನು ಕಸದ ಬುಟ್ಟಿಗೆ ಹಾಕಲೇ ಬೇಕು ಎಂಬುದನ್ನು ಇದು ಹೇಳುತ್ತದೆ.

ಇವೆಲ್ಲವೂ ಮುಚ್ಚಿರುವ ಆಹಾರಗಳಿಗೆ ಮಾತ್ರ ಅನ್ವಯಾವಾಗುತ್ತದೆ. ಒಮ್ಮೆ ಪ್ಯಾಕೆಟ್ ತೆರೆದರೆ ಅಥವಾ ಗಾಳಿಗೆ ಒಡ್ಡಿಕೊಂಡರೆ ಅವುಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಖರೀದಿ ಮಾಡುವಾಗ ಎಚ್ಚರ

ಪ್ಯಾಕೆಟ್ ನಲ್ಲಿರುವ ದಿನಾಂಕ ಕೇವಲ ಗುಣಮಟ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಆಹಾರದಲ್ಲಿ ನಾವು ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕು.

ಪ್ಯಾಕೆಟ್ ಆಹಾರ ಖರೀದಿ ಪ್ಯಾಕೆಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಆಹಾರ ಪ್ಯಾಕೇಜಿಂಗ್, ಸ್ಥಳಾಂತರದ ವೇಳೆ ಅದು ಹಾನಿಗೊಳಾಗಿರಬಹುದು. ಇಂತಹ ಪ್ಯಾಕೆಟ್‌ಗಳು ಇಲಿ, ನೊಣಗಳಿಂದ ಸೋಂಕಿಗೆ ಒಳಗಾಗಿ, ಗಾಳಿಯ ತೇವಾಂಶದಿಂದ ವಿಷಕಾರಿ ಆಗಿರಬಹುದು.

ಆಹಾರ ಡಬ್ಬಿಯಲ್ಲಿ ಬಿರುಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಕೆಲವೊಂದು ಡಬ್ಬಿಗಳು ಉಬ್ಬಿದ್ದರೆ ಆಹಾರದಲ್ಲಿ ತೀವ್ರವಾದ ಬ್ಯಾಕ್ಟೀರಿಯಾ ಇದ್ದು, ಆಹಾರ ವಿಷಕಾರಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.


ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಕೆಟ್ಟ ವಾಸನೆ, ಪ್ಯಾಕೆಟ್, ಕ್ಯಾನ್‌ನಲ್ಲಿ ಕಪ್ಪು ಕಲೆಗಳು- ಇದು ಇಲಿಗಳಿಂದ ಆಹಾರ ಹಾಳಾಗಿದೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಆಹಾರದ ಬಣ್ಣ ಬದಲಾಗಿದ್ದರೆ, ಅವುಗಳ ಮೇಲೆ ಹಸಿರು ಅಥವಾ ಕಪ್ಪು ತೇಪೆಗಳು ಕಂಡುಬಂದರೆ ಇದು ಶಿಲೀಂಧ್ರಗಳ ಬೆಳವಣಿಗೆಯಾಗಿದೆ. ಇದು ಹೆಚ್ಚಾಗಿ ಬೇಯಿಸಿದ ಪದಾರ್ಥಗಳಲ್ಲಿ ಕಾಣಿಸುತ್ತದೆ.

ಆಹಾರವು ತುಂಬಾ ಬಲವಾದ ಅಸಾಮಾನ್ಯ ವಾಸನೆಯನ್ನು ಹೊಂದಿದ್ದರೆ ಆಹಾರವು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ದೋಸೆ ಅಥವಾ ಇಡ್ಲಿ ಹಿಟ್ಟು ಮತ್ತು ಮೊಸರಿನಲ್ಲಿ ಹೀಗಾಗುತ್ತದೆ.

ಆಹಾರ ಪದಾರ್ಥವು ಲೋಳೆ ಅಥವಾ ಜಿಗುಟಾಗಿದ್ದರೆ ಬ್ಯಾಕ್ಟೀರಿಯಾ ಅಥವಾ ವೈರಲ್ ತಗಲಿದೆ ಎಂಬುದರ ಸೂಚಕವಾಗಿದೆ.

ಆಹಾರ ಸಾಮಾನ್ಯಕ್ಕಿಂತ ಹೆಚ್ಚು ಕಹಿ ಅಥವಾ ಹೆಚ್ಚು ಹುಳಿಯಾಗಿದ್ದಾರೆ ಬ್ಯಾಕ್ಟೀರಿಯಾದ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಯಬೇಕು.

ಯಾವತ್ತೂ ಆಹಾರದ ಮುಚ್ಚಳ ತೆರೆಯುವಾಗ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಳಸಲು ಯೋಗ್ಯವಾಗಿಲ್ಲ ಎಂದು ಅನಿಸಿದರೆ ಕೂಡಲೇ ಅದನ್ನು ಕಸದ ಬುಟ್ಟಿಗೆ ಹಾಕಿ.

ಗುಣಮಟ್ಟ ಕಾಪಾಡಿ

ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ವಸ್ತುಗಳ ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ. ಹಣ್ಣು ಅಥವಾ ತರಕಾರಿಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಡಿ. ಆಹಾರ ಪ್ಯಾಕೆಟ್‌ಗಳ ಮೇಲೆ ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ಸೂಚಿಸಲಾಗಿರುತ್ತದೆ. ಅದನ್ನು ತಿಳಿದುಕೊಳ್ಳಿ. ಉದಾ- ಬೀಜಗಳನ್ನು ತೆರೆದು ಇಡಬಾರದು ಏಕೆಂದರೆ ಅವುಗಳಲ್ಲಿನ ತೈಲಗಳು ಕಂದುಬಣ್ಣಕ್ಕೆ ತಿರುಗುವುದರಿಂದ ಅವು ಮೃದು ಮತ್ತು ಕಹಿಯಾಗಬಹುದು.
ಕೆಲವು ಉತ್ಪನ್ನಗಳನ್ನು ತಕ್ಷಣವೇ ಬಳಸಲಾಗುವುದಿಲ್ಲ. ಆದರೆ ಹೆಚ್ಚು ಕಾಲ ಉಳಿಯಬೇಕು. ಆಗ ಅವುಗಳನ್ನು ಫ್ರೀಜರ್ ನಲ್ಲಿ ಇರಿಸಿ.

ಆಹಾರದ ಪ್ಯಾಕೆಟ್ ಅನ್ನು ತೆರೆದ ಬಳಿಕ ತಕ್ಷಣವೇ ಖಾಲಿ ಮಾಡಿ. ಪದೇಪದೇ ಗಾಳಿಗೆ ಒಡ್ಡುವುದರಿಂದ ಅವುಗಳ ಸತ್ವ ನಾಶವಾಗುತ್ತದೆ.

Continue Reading
Advertisement
ಪ್ರಮುಖ ಸುದ್ದಿ4 mins ago

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

bhagavanth khuba poster lok sabha election 2024
ಬೀದರ್‌11 mins ago

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

dashamukha column madness
ಅಂಕಣ37 mins ago

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

bengaluru karaga in darga
ಬೆಂಗಳೂರು44 mins ago

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

gukesh dommaraju rajamarga column
ಅಂಕಣ47 mins ago

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

, Dr. Rajkumar's birthday
ಪ್ರಮುಖ ಸುದ್ದಿ52 mins ago

Rajkumar Birthday : ಇಂದು ಡಾ. ರಾಜ್​ಕುಮಾರ್ ಜನುಮದಿನ; ವರನಟನಿಗೆ ಕನ್ನಡಿಗರ ನಮನ

Karnataka Weather Forecast
ಮಳೆ1 hour ago

Karnataka Weather : ಸುಳಿಗಾಳಿ ಪ್ರಭಾವ; ರಭಸ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ

Benefits of Bamboo Shoots
ಆರೋಗ್ಯ2 hours ago

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Dina Bhavishya
ಭವಿಷ್ಯ3 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Bengaluru karaga
ಕರ್ನಾಟಕ6 hours ago

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌