Samana Samskara: ಮನುಷ್ಯ ಕೃತಜ್ಞನಾಗಲು ಸಂಸ್ಕಾರ ಅಗತ್ಯ: ಹರಿಪ್ರಕಾಶ್‌ ಕೋಣೆಮನೆ Vistara News

ಧಾರ್ಮಿಕ

Samana Samskara: ಮನುಷ್ಯ ಕೃತಜ್ಞನಾಗಲು ಸಂಸ್ಕಾರ ಅಗತ್ಯ: ಹರಿಪ್ರಕಾಶ್‌ ಕೋಣೆಮನೆ

Samana Samskara: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸನಾತನ ಹಿಂದು ಸಮಾಜ ಪರಿಷತ್‌ ವತಿಯಿಂದ ‘ಸಮಾನ ಸಂಸ್ಕಾರ ಕಾರ್ಯಾಗಾರʼ ಆಯೋಜಿಸಲಾಗಿತ್ತು.

VISTARANEWS.COM


on

Vistara News CEO and Editor In Chief Hariprakash Konemane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾವೆಲ್ಲರೂ ಆಸ್ತಿಕರು, ಮನುಷ್ಯನೆಂದರೆ ಆತ ಆಸ್ತಿಕನಾಗಿರಲೇಬೇಕು. ಇಡೀ ಚರಾಚರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದ ಜೀವಿಯೆಂದರೆ ಮನುಷ್ಯ. ಯಾಕೆ ಮನುಷ್ಯ ಶ್ರೇಷ್ಠ ಎಂದರೆ ಆತ ಕೃತಜ್ಞನಾಗಿರುತ್ತಾನೆ. ಆತ ಕೃತಜ್ಞನಾಗಿರಬೇಕೆಂದರೆ ಸಂಸ್ಕಾರ (Samana Samskara) ಹೊಂದಿರುತ್ತಾನೆ. ಹೀಗಾಗಿ ಮನುಷ್ಯನಿಗೆ ಸಂಸ್ಕಾರ ಅಗತ್ಯವಾಗಿದೆ ಎಂದು ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ನಗರದ ಮಹಾಲಕ್ಷ್ಮಿ ಲೇಔಟ್‌ನ ಹಿಂದು ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸನಾತನ ಹಿಂದು ಸಮಾಜ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ ‘ಸಮಾನ ಸಂಸ್ಕಾರ ಕಾರ್ಯಾಗಾರʼ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಅವರ ಚಾತುರ್ಮಾಸ್ಯ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ. ಯಾಕೆಂದರೆ ಚಾತುರ್ಮಾಸ್ಯದ ಸಂದರ್ಭದಲ್ಲಿ ಜಪ-ತಪ, ಅನುಷ್ಠಾನ ನಡೆಯುತ್ತದೆ. ಅವರ ಗುರಿ ಮೋಕ್ಷವಾಗಿರುತ್ತದೆ. ಆದರೆ, ಆ ಮಾರ್ಗದ ಯಶಸ್ಸಿಗಾಗಿ ಅವರು ಕೆಲಸ ಮಾಡುವ ಜತೆಗೆ ಸುತ್ತಮುತ್ತಲಿನ ಸಮಾಜಕ್ಕೂ ಏನಾದರೂ ಪ್ರಯೋಜನವಾಗಲಿ ಎಂದು ಸ್ವಾಮೀಜಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದವರು ಹೇಳಿದರು.

ಭಾರತೀಯರು ಸಾವಿರಾರು ದೇವರನ್ನು ನಂಬುತ್ತಾರೆ. ನಿತ್ಯವೂ ಶಾಲೆಗೆ ಹೋಗುವಾಗ ದೇವರಿಗೆ ನಮಿಸಿ ಹೋಗುವವರು ಆಸ್ತಿಕರು. ಆದರೆ, ತಂದೆ-ತಾಯಿಗೆ ನಮಸ್ಕಾರ ಮಾಡಿ ಹೋಗುವುದು ಸಂಸ್ಕಾರವಾಗಿದೆ. ಈ ರೀತಿಯ ಸಂಸ್ಕಾರ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದವರು ತಿಳಿಸಿದರು.

ಮಕ್ಕಳು ಶ್ರದ್ಧಾ ಭಕ್ತಿಯಿಂದ ಇಷ್ಟಪಟ್ಟು ಭಗವದ್ಗೀತೆ, ದೇವರ ನಾಮ, ಸ್ತೋತ್ರಗಳು, ಶ್ಲೋಕಗಳ ಪುಸ್ತಕಗಳನ್ನು ಓದುವುದರಿಂದ ಒಳ್ಳೆಯದಾಗುತ್ತದೆ. ನಾವು ಯಾವುದೇ ಕೆಲಸ ಮಾಡುವ ಮೊದಲು ನಮಗೆ ಅತ್ಯಂತ ಆತ್ಮೀಯರು, ಹಿಂತಚಿಂತಕರಾದ ತಂದೆ-ತಾಯಿ, ಗುರುಗಳು, ಆಪ್ತರಾದ ಗೆಳೆಯ ಅಥವಾ ಗೆಳತಿ ಈ ಮೂವರಲ್ಲಿ ಯಾರಿಗಾದರೂ ಒಬ್ಬರಿಗೆ ಹೇಳಿ ಮಾಡುವುದು ಕೂಡ ಸಂಸ್ಕಾರವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : The POWER of GRATITUDE, ಕೃತಜ್ಞತೆ ಎಂಬ ಮಹಾಶಕ್ತಿ; ನಿಮಗೆ ಬೂಮರಾಂಗ್‌ ಆಟ ಗೊತ್ತಾ?

ಮನೆಯಲ್ಲಿ ದೇವರು, ತಂದೆ-ತಾಯಿಗೆ ಹಾಗೂ ಶಾಲೆಯಲ್ಲಿ ಗುರುಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಸಂಕಲ್ಪ ಮಾಡಿದರೆ ಇವತ್ತಿನ ಈ ಸಮಾನ ಸಂಸ್ಕಾರ ಶಿಬಿರ ನಿಶ್ಚಿತವಾಗಿ ಯಶಸ್ಸಾಗುತ್ತದೆ ಎಂದು ತಿಳಿಸಿದರು.

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ವಿಭು ಅಕಾಡೆಮಿಯ ಡಾ. ಆರತಿ ವಿ.ಬಿ. ಅವರು ದಿಕ್ಸೂಚಿ ಭಾಷಣ ಮಾಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

Vastu Tips: ಮನೆಯ ಪ್ರತಿಯೊಂದು ಕೋಣೆ ಯಾವ ರೀತಿ ಪ್ರಕಾಶ ಹೊಂದಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ.

VISTARANEWS.COM


on

home
Koo

ಬೆಂಗಳೂರು: ಮನೆ ನಿರ್ಮಾಣ ಎನ್ನುವುದು ಬಹುತೇಕರ ಎಷ್ಟೋ ವರ್ಷದ ಕನಸಾಗಿರುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಜೀವನ ಕಳೆಯುವಂತಿರಬೇಕು. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ನೆಮ್ಮದಿ, ಸಮೃದ್ಧಿ ಹೊಂದಿದ ಮನೆಗಾಗಿ ಕೆಲವೊಂದು ವಿಚಾರಗಳನ್ನು ಪ್ರಸ್ತಾವಿಸಿದೆ. ಯಾವ ರೂಮ್‌ ಹೇಗಿರಬೇಕು, ಅಲ್ಲಿ ಯಾವ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಆ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಹಾಲ್‌

ಇದು ಮನೆಯ ಮುಖ್ಯ ಭಾಗ. ಇಲ್ಲಿ ಗರಿಷ್ಠ ಬೆಳಕು ಇರುವುದು ಮುಖ್ಯ. ಹಾಲ್‌ನ ನೈಋತ್ಯ ಭಾಗದಲ್ಲಿ ಗೋಡೆ ಇದ್ದರೆ ಕುಟುಂಬದ ಸದಸ್ಯರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲು ಪ್ರಕಾಶಮಾನವಾದ ಸ್ಪಾಟ್ ಲೈಟ್ ಅಳವಡಿಸಿ. ಜತೆಗೆ ಕುಟುಂಬದ ಭಾವಚಿತ್ರವನ್ನು ಅಲ್ಲಿಡಬಹುದು. ಕಲಾಕೃತಿಗಳು ಅಥವಾ ಸಸ್ಯಗಳಿದ್ದರೆ ಅವುಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸುವುದು ಉತ್ತಮ.

ಬೆಡ್‌ ರೂಮ್‌

ಇಡೀ ದಿನದ ಆಯಾಸ ಕಳೆದು ನೆಮ್ಮದಿಯಿಂದ, ಬೆಚ್ಚಗೆ ವಿಶ್ರಾಂತಿ ಪಡೆಯಲಿರುವ ಜಾಗ ಬೆಡ್‌ ರೂಮ್‌. ನಾವು ಇಲ್ಲಿ ಹೆಚ್ಚಿನ ಸಮಯ ಕಳೆಯುತ್ತೇವೆ. ಇಲ್ಲಿ ಓದುವುದು, ಸಿನಿಮಾ ನೋಡುವುದು, ನಿದ್ದೆ ಮಾಡುವುದು ಸೇರಿದಂತೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ನಿರತರಾಗಿರುತ್ತೇವೆ. ಹೀಗಾಗಿ ಈ ಕೋಣೆಯ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ. ಛಾಯಾಚಿತ್ರಗಳು ಅಥವಾ ವರ್ಣಚಿತ್ರಗಳಿಗೆ ಪ್ರತ್ಯೇಕ ಲೈಟ್‌ ಅಳವಡಿಸಿ. ಮಲಗುವ ಕೋಣೆಯಲ್ಲಿ ಹಿತಕರ ಬೆಳಕು ಸೂಸುವ ದೀಪ ಬಳಸಿ. ಟೇಬಲ್ ಲ್ಯಾಂಪ್‌ಗಳನ್ನು ಇರಿಸುವುದು ಸೂಕ್ತ.

ಡೈನಿಂಗ್‌ ರೂಮ್‌

ಇಲ್ಲಿ ಸ್ಫಟಿಕದ ಶಾಂಡ್ಲಿಯರ್ ದೀಪಗಳನ್ನು ಅಳವಡಿಸಿಕೊಳ್ಳಬಹುದು. ಇದು ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲಂಕಾರಿಕ ಹೋಲ್ಡರ್‌ಗಳಲ್ಲಿ ಕ್ಯಾಂಡಲ್‌ ಇರಿಸಬಹುದು. ಇದು ಡೈನಿಂಗ್‌ ರೂಮ್‌ ಅನ್ನು ಆಕರ್ಷಕವಾಗಿಸುತ್ತದೆ. ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಬೀರುವ ಬಲ್ಬ್‌ ಅಳವಡಿಸಿ. ಊಟ ಮಾಡುವಾಗ ಮಬ್ಬು ಇರಬಾರದು.

ಅಡುಗೆ ಕೋಣೆ

ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಮತ್ತು ತಮಗಾಗಿ ಆಹಾರ ಸಿದ್ಧಪಡಿಸುವ ಸ್ಥಳ ಅಡುಗೆ ಕೋಣೆ. ಇದು ಮನೆಯ ಇನ್ನೊಂದು ಬಹಳ ಮುಖ್ಯವಾದ ಸ್ಥಳವಾಗಿದ್ದು, ಇದನ್ನು ಸಮರ್ಪಕವಾಗಿ ಬೆಳಗಿಸಬೇಕು. ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ನಿರ್ದಿಷ್ಟ ಕಡೆಗಳಲ್ಲಿ ಲೈಟ್‌ ಅಳವಡಿಸಬೇಕು. ಇಲ್ಲಿ ಬೆಳಕು ಮತ್ತು ನೆರಳು ಸಮಾನವಾಗಿ ಹಂಚಿಕೆಯಾಗಬೇಕು. ಇಲ್ಲಿ ಟ್ಯೂಬ್‌ಲೈಟ್‌ಗಳನ್ನು ಬಳಸಬಹುದು. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾಸ್ತಾನು ಇರಿಸುವ ಜಾಗ ಪ್ರಕಾಶಮಾನವಾಗಿರಲಿ.

ಬಾತ್‌ ರೂಮ್‌

ಬಾತ್‌ ರೂಮ್‌ನ ಎಲ್ಲ ಕಡೆ ಬೆಳಕು ಹರಡುವಂತಿರಬೇಕು. ಮಂದ ಬೆಳಕು ಬೀರಲು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಬಹುದು. ಸೋಪ್‌, ಪೇಸ್ಟ್‌, ಬ್ರಷ್‌ ಮುಂತಾದ ವಸ್ತುಗಳನ್ನು ಇರಿಸುವ ಸ್ಥಳಗಳ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಿ. ಅಪಾಯಗಳನ್ನು ತಪ್ಪಿಸಲು ಟಬ್ ಅಥವಾ ಶವರ್ ಮೇಲಿನ ಲೈಟ್‌ಗಳು ನೀರು ಮತ್ತು ಆವಿ-ನಿರೋಧಕ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ವಾಸ್ತು ಪ್ರಕಾರ ಲೈಟ್‌ ಅಳವಡಿಕೆಯ ಸಾಮಾನ್ಯ ನಿಯಮಗಳು

  • ಲೈಟ್‌ ಉತ್ತರ ಮತ್ತು ಪೂರ್ವ ಗೋಡೆಗಳ ಮೇಲಿರಿಸುವುದು ಸಕಾರಾತ್ಮಕತೆಯ ಸಂಕೇತ.
  • ಯಾವುದೇ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಲೈಟ್‌ ಅಳವಡಿಸಬೇಡಿ. ಇದನ್ನು ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.
  • ದಕ್ಷಿಣ ಭಾಗದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಇರಿಸಿ. ಇದರಿಂದ ವೃತ್ತಿ ಜೀವನದಲ್ಲಿ ಏಳಿಗೆ ಕಾಣಬಹುದು.
  • ದೇವರ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಬಿಳಿ ಬಣ್ಣದ ಬೆಳಕನ್ನು ಬಳಸಿ
  • ಮುಖ್ಯ ಬಾಗಿಲಿಗೆ ಹೋಗುವ ದಾರಿ ಸಾಕಷ್ಟು ಪ್ರಕಾಶಮಾನವಾಗಿರಬೇಕು.
  • ಮೆಟ್ಟಿಲು ಇಳಿಯುವ ಸ್ಥಳದಲ್ಲಿಯೂ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸಿ. ಇದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

Continue Reading

ದೇಶ

Ram Mandir: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಸಿದ್ಧ; 6 ಸಾವಿರ ಗಣ್ಯರಿಗೆ ಆಮಂತ್ರಣ

Ram Mandir: ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

VISTARANEWS.COM


on

Ram Mandir Invitations
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಸಿದ್ಧವಾಗಿದ್ದು, 6 ಸಾವಿರ ಗಣ್ಯರಿಗೆ ರವಾನಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ದೇಶಾದ್ಯಂತ ಇರುವ 6 ಸಾವಿರ ಗಣ್ಯರಿಗೆ ಟ್ರಸ್ಟ್‌ನಿಂದ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆಮಂತ್ರಣ ಪತ್ರಿಕೆಗಳ ಫೋಟೊಗಳು ಕೂಡ ಲಭ್ಯವಾಗಿವೆ. ದೇಶದ ಪ್ರಮುಖ ರಾಜಕಾರಣಿಗಳು, ಹಿಂದು ಸಂಘಟನೆಗಳ ಮುಖಂಡರು, ಸಾಧು-ಸಂತರಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆ ವಿಮಾನ ನಿಲ್ದಾಣವೂ ಸಿದ್ಧ

ರಾಮಮಂದಿರ ಲೋಕಾರ್ಪಣೆಗೆ ಮೊದಲೇ ಅಯೋಧ್ಯೆ ವಿಮಾನ ನಿಲ್ದಾಣವು ಸಿದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. “ಡಿಸೆಂಬರ್‌ 15ರ ವೇಳೆಗೆ ವಿಮಾನ ನಿಲ್ದಾಣ ಸಿದ್ಧವಾಗಿರಲಿದೆ. ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮುಗಿಯಲಿದ್ದು, ವಿಮಾನಗಳ ಹಾರಾಟ ಶುರುವಾಗಲಿದೆ. ಇದಾದ ಬಳಿಕ ಹಂತ ಹಂತವಾಗಿ ಬೃಹತ್‌ ವಿಮಾಣ ನಿಲ್ದಾಣ ನಿರ್ಮಿಸಲಾಗುವುದು” ಎಂದು ಯೋಗಿ ಆದಿತ್ಯನಾಥ್‌ ಮಾಹಿತಿ ನೀಡಿದ್ದಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಎಂಬುದಾಗಿ ಹೆಸರಿಡಲು ತೀರ್ಮಾನಿಸಲಾಗಿದೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ವಾಸ್ತು ಪ್ರಕಾರ ನಿಮ್ಮ ಬಾಲ್ಕನಿ ಹೇಗಿರಬೇಕು? ಇಲ್ಲಿದೆ ಸಲಹೆ

Vastu Tips: ಮನೆಯಲ್ಲಿ ಹಲವರ ನೆಚ್ಚಿನ ಜಾಗ ಬಾಲ್ಕನಿ. ವಾಸ್ತು ಪ್ರಕಾರ ಬಾಲ್ಕನಿ ಹೇಗಿರಬೇಕು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

home balcony
Koo

ಬೆಂಗಳೂರು: ಮನೆಯ ಬಾಲ್ಕನಿ (Balcony) ಎನ್ನುವುದು ಬಹುತೇಕರ ನೆಚ್ಚಿನ ಸ್ಥಳ. ಬೆಳಗ್ಗೆ ಎದ್ದ ಕೂಡಲೇ ಬಾಲ್ಕನಿಗೆ ಬಂದು ಸ್ವಚ್ಛ ಗಾಳಿಯನ್ನು ಉಸಿರಾಡುತ್ತ ಚಾ/ಕಾಫಿ ಕುಡಿಯುವುದು ಬಹುತೇಕರ ದಿನಚರಿಯ ಭಾಗವೇ ಆಗಿದೆ. ಫ್ರೀ ಸಮಯ ಕಳೆಯಲು, ಸ್ನೇಹಿತರೊಂದಿಗೆ ಹರಟೆ ಹೊಡೆಯಲು, ಯೋಗ, ಧ್ಯಾನ ಮಾಡಲು, ವ್ಯಾಯಾಮ ಮಾಡಲು, ಸಿನಿಮಾ ನೋಡಲು ಬಾಲ್ಕನಿಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಇಂತಹ ನಿಮ್ಮ ನೆಚ್ಚಿನ ಬಾಲ್ಕನಿಯನ್ನು ವಾಸ್ತು ಪ್ರಕಾರ ಹೇಗೆ ಇನ್ನಷ್ಟು ಉತ್ತಮಗೊಳಿಸಬಹುದು? ಬಾಲ್ಕನಿಯಲ್ಲಿ ಯಾವ ಅಂಶಗಳತ್ತ ಗಮನ ಹರಿಸಬೇಕು? ಎನ್ನುವುದರ ವಿವರ ಇಂದಿನ ವಾಸ್ತುಟಿಪ್ಸ್‌ (Vastu Tips)ನಲ್ಲಿದೆ.

ದಿಕ್ಕು

ಮನೆಯಲ್ಲಿ ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದು ಗರಿಷ್ಠ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುವ ಪ್ರದೇಶವಾಗಿರುವುದರಿಂದ ಇದು ಆದರ್ಶ ದಿಕ್ಕು. ಬಾಲ್ಕನಿ ನಿರ್ಮಿಸಲು ದಕ್ಷಿಣ ಅಥವಾ ಪಶ್ಚಿಮವನ್ನು ನಕಾರಾತ್ಮಕ ದಿಕ್ಕುಗಳು ಎಂದು ಪರಿಗಣಿಸಲಾಗುತ್ತದೆ.

ಪೀಠೋಪಕರಣಗಳ ಸ್ಥಾನ

ಪೀಠೋಪಕರಣಗಳು ಬಾಲ್ಕನಿಯ ಪ್ರಮುಖ ಭಾಗ. ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ವಿವಿಧ ರೀತಿಯ ಪೀಠೋಪಕರಣಗಳನ್ನು ಇಲ್ಲಿ ಜೋಡಿಸಿಡುತ್ತೇವೆ. ಹೀಗಾಗಿ ನಿಮ್ಮ ಬಾಲ್ಕನಿಗೆ ಸೂಕ್ತವಾದ ಪೀಠೋಪಕರಣಗಳು ಯಾವುವು ಎನ್ನುವುದರತ್ತ ಗಮನ ಹರಿಸಬೇಕು. ಕುರ್ಚಿಗಳು, ಸ್ಟೂಲ್‌ಗಳು ಮತ್ತು ಟೇಬಲ್‌ಗಳಂತಹ ಭಾರವಾದ ಪೀಠೋಪಕರಣಗಳನ್ನು ಬಾಲ್ಕನಿಯ ನೈಋತ್ಯ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಚಾವಣಿ ಹೀಗಿರಲಿ

ನಿಮ್ಮ ಬಾಲ್ಕನಿಯ ಚಾವಣಿ ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರಾಗಿರಬೇಕು. ಯಾವುದೇ ಕಾರಣಕ್ಕೂ ದಕ್ಷಿಣ ಅಥವಾ ಪಶ್ಚಿಮದ ಕಡೆಗೆ ಅಲ್ಲ. ಚಾವಣಿಯ ಎತ್ತರವು ಮುಖ್ಯ ಕಟ್ಟಡದ ಛಾವಣಿಗಿಂತ ಕಡಿಮೆ ಇರಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಲ್ಲದೆ ನಿಮ್ಮ ಬಾಲ್ಕನಿಯ ಚಾವಣಿಗೆ ಟಿನ್ ಬಳಕೆ ಬೇಡ.

ಅಲಂಕಾರ

ಬಾಲ್ಕನಿಯಲ್ಲಿ ಸಣ್ಣ ಹೂವಿನ ಕುಂಡಗಳನ್ನು ಇರಿಸಲು ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಯಾಕೆಂದರೆ ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ತುಂಬಾ ದೊಡ್ಡ ಸಸ್ಯಗಳನ್ನು ಇಡುವುದನ್ನು ತಪ್ಪಿಸಿ. ಅಲ್ಲದೆ ನಿಮ್ಮ ಬಾಲ್ಕನಿಗೆ ವರ್ಣರಂಜಿತ ಹೂವಿನ ಗಿಡಗಳನ್ನು ಆರಿಸಿ ಮತ್ತು ಬಳ್ಳಿಗಳನ್ನು ಎಂದಿಗೂ ಇಡಬೇಡಿ. ಇವು ಸೂರ್ಯನ ಬೆಳಕನ್ನು ತಡೆಯುತ್ತವೆ. ನಿಮ್ಮ ಬಾಲ್ಕನಿಯ ಪಶ್ಚಿಮ, ದಕ್ಷಿಣ ಅಥವಾ ನೈಋತ್ಯ ಭಾಗದಲ್ಲಿ ಯಾವಾಗಲೂ ಹೂವಿನ ಕುಂಡಗಳನ್ನು ಇರಿಸಿ. ಮಧ್ಯ ಭಾಗ ಖಾಲಿಯಾಗಿರಲಿ.

ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ

ಸೂಕ್ತ ಲೈಟ್‌ಗಳು

ಕತ್ತಲೆ ಅಥವಾ ತುಂಬಾ ಮಂದ ಬೆಳಕಿನ ಬಾಲ್ಕನಿಯಲ್ಲಿ ಕುಳಿತುಕೊಳ್ಳುವುದು ನಕಾರಾತ್ಮಕತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ನಿಮ್ಮ ಬಾಲ್ಕನಿಗೆ ತುಂಬಾ ತೀಕ್ಷ್ಣ ಬೆಳಕನ್ನು ನೀಡದ ಲೈಟ್‌ಗಳನ್ನು ಆರಿಸಿ.

ಯಾವ ಬಣ್ಣ ಸೂಕ್ತ?

ಬಾಲ್ಕನಿ ಮನೆಯ ಒಂದು ಪ್ರಮುಖ ಸ್ಥಳವಾಗಿ ಪರಿಗಣಿಸಲ್ಪಡುತ್ತದೆ. ಅಲ್ಲಿ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಬಯಸುತ್ತದೆ. ಬಾಲ್ಕನಿ ದಣಿದ ದೇಹಕ್ಕೆ ನೆಮ್ಮದಿ ಒದಗಿಸುತ್ತದೆ. ಹೀಗಾಗಿ ಗೋಡೆಗಳಿಗೆ ಮೇಲೆ ಗಾಢ ಬಣ್ಣವನ್ನು ಬಳಿಯಬೇಡಿ. ವಾಸ್ತು ಪ್ರಕಾರ, ಬಿಳಿ, ನೀಲಿ ಮತ್ತು ತಿಳಿ ಗುಲಾಬಿಯಂತಹ ಶಾಂತ ಬಣ್ಣಗಳು ನಿಮ್ಮ ಬಾಲ್ಕನಿಗೆ ಸೂಕ್ತ.

Continue Reading

ಕರ್ನಾಟಕ

Shabarimale Bus : ಶಬರಿಮಲೆ ಯಾತ್ರಿಕರಿಗೆ KSRTC ವಿಶೇಷ ಬಸ್‌ ಸೇವೆ, ಬುಕಿಂಗ್‌ ಹೇಗೆ?

Shabarimale Bus: ಬೆಂಗಳೂರಿನಿಂದ ಶಬರಿಮಲೆಗೆ ಡಿಸೆಂಬರ್‌ 11ರಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರ ಟೈಮಿಂಗ್ಸ್‌ ಮತ್ತು ಬುಕಿಂಗ್‌ ವಿವರ ಇಲ್ಲಿದೆ.

VISTARANEWS.COM


on

Shabarimale yatre KSRTC BUS
Koo

ಬೆಂಗಳೂರು: ಡಿಸೆಂಬರ್‌ ಆರಂಭವಾಗುತ್ತಿದ್ದಂತೆಯೇ ಕೇರಳದ ಪುಣ್ಯ ಕ್ಷೇತ್ರ ಶಬರಿಮಲೆಗೆ (Shabarimale yatre) ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ವ್ಯವಸ್ಥೆಯನ್ನು ಮಾಡಲು ಮುಂದಾಗಿದೆ. ಡಿಸೆಂಬರ್‌ 1ರಿಂದ ವಿಶೇಷ ಬಸ್‌ ಸೌಲಭ್ಯವನ್ನು (Special bus Service) ಒದಗಿಸಲಾಗುತ್ತಿದ್ದು, ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಿಕೊಳ್ಳಬಹುದು (Shabarimale Bus) ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಮತ್ತು ರಾಜಹಂಸ ಬಸ್ ಸಂಚರಿಸಲಿದೆ ಎಂದು ತಿಳಿಸಿರುವ ಕೆ.ಎಸ್‌.ಆರ್‌.ಟಿ.ಸಿಯು ವೋಲ್ವೊ ಬಸ್​​ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ದರ ಎಷ್ಟು, ಯಾವ ಹೊತ್ತಿಗೆ ಹೊರಡುತ್ತದೆ?

ಕೆ.ಎಸ್‌.ಆರ್‌.ಟಿಸಿ ವೋಲ್ವೋ ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಅದೇ ದಿನ ಸಂಜೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ವೋಲ್ವೋ ಬಸ್‌ನಲ್ಲಿ ಒಂದು ಟಿಕೆಟ್‌ನ ದರ 1600 ರೂ. ಆಗಿರುತ್ತದೆ.

ರಾಜಹಂಸ ಬಸ್ (ನಾನ್‌ಎಸಿ) ಬಸ್‌ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.

ಡಿಸೆಂಬರ್‌ ತಿಂಗಳಲ್ಲಿ ಶಬರಿಮಲೆ ಸನ್ನಿಧಿಯಲ್ಲಿ ಮಂಡಲೋತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಆ ಬಳಿಕ ಜನವರಿ 14ರಂದು ಮಕರ ವಿಳಕ್ಕು (ಮಕರ ಜ್ಯೋತಿ) ನಡೆಯುತ್ತದೆ. ಆ ಸಂದರ್ಭದಲ್ಲಿ 48 ದಿನಗಳ ಕಾಲ ಮಾಲಾ ಧಾರಣೆ ಮಾಡಿ ವ್ರತಧಾರಿಗಳಾದ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಹೊಸ ಬಸ್‌ ಸೇವೆ ಅನುಕೂಲಕರವಾಗಲಿದೆ.

ಇದನ್ನೂ ಓದಿ : Shobha Karandlaje: ಶಬರಿಮಲೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಬಸ್​ ಟಿಕೆಟ್ ಬುಕಿಂಗ್ ಹೇಗೆ?

ಶಬರಿಮಲೆಗೆ ಹೋಗುವ ಬಸ್‌ಗಳ ಬುಕಿಂಗ್‌ನ್ನು ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದು. ಅದಲ್ಲದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಇವೆ.

Continue Reading
Advertisement
plants
ಲೈಫ್‌ಸ್ಟೈಲ್2 mins ago

Vastu Tips: ವಾಸ್ತು ಪ್ರಕಾರ ಈ ಗಿಡಗಳನ್ನು ಮನೆಯೊಳಗೆ ಇಡಲೇಬಾರದು!

Junior Mehmood
ಬಾಲಿವುಡ್7 mins ago

Junior Mehmood: ‘ಮೇರಾ ನಾಮ್ ಜೋಕರ್’ ಖ್ಯಾತಿಯ ನಟ ಜೂನಿಯರ್ ಮೆಹಮೂದ್ ಇನ್ನಿಲ್ಲ

cm k chandrashekar rao
ದೇಶ11 mins ago

K Chandrasekhar Rao: ರೇವಂತ್‌ ರೆಡ್ಡಿ ಸಿಎಂ ಆದ ದಿನವೇ ಜಾರಿ ಬಿದ್ದು ಸೊಂಟ ಮುರಿದುಕೊಂಡ ಕೆಸಿಆರ್‌

Jasprit bumarh
ಕ್ರಿಕೆಟ್15 mins ago

Jasprit Bumrah : ಬುಮ್ರಾ ಚಿತ್ರ ಹಾಕಿ ಎಲ್ಲರಿಗೂ ಸಂದೇಶ ರವಾನಿಸಿದ ಮುಂಬಯಿ ಇಂಡಿಯನ್ಸ್​​​

Karthik threw the sandal to vinay Ugly Fight
ಬಿಗ್ ಬಾಸ್31 mins ago

BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

RBI governor Shaktikanta Das
ದೇಶ55 mins ago

RBI monetary policy: ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಇಂದು; ಬಡ್ಡಿ ದರ ಏರುತ್ತಾ?

Stamp duty
ಕರ್ನಾಟಕ1 hour ago

Assembly Session : ಭೂಮಿ ಬೆಲೆ ಹೆಚ್ಚಿಸಿದ್ದ ಸರ್ಕಾರದಿಂದ ಮುದ್ರಾಂಕ ಶುಲ್ಕವೂ ಹೆಚ್ಚಳ

dengue flue
ಆರೋಗ್ಯ1 hour ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ2 hours ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ2 hours ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ15 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ16 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ21 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ2 days ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌