Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು! - Vistara News

ಅಧ್ಯಾತ್ಮ

Siddheshwar swamiji | ಸಣ್ಣವರಿದ್ದಾಗಲೇ ಗುಡ್ಡದ ಮೇಲೆ ಹೋಗಿ ಒಬ್ಬರೇ ಧ್ಯಾನ ಮಾಡುತ್ತಿದ್ದರು ಪುಟ್ಟ ಸಿದ್ದು!

ಸಿದ್ದೇಶ್ವರ ಶ್ರೀಗಳಿಗೆ ಅಧ್ಯಾತ್ಮ ಎನ್ನುವುದು ಇನ್‌ಬಿಲ್ಟ್‌ ಆಗಿಯೇ ಬಂದಿತ್ತಾ? ಅವರು ಸಣ್ಣ ವಯಸ್ಸಲ್ಲೇ ಬೆಟ್ಟವೇರಿ ಧ್ಯಾನ ಮಾಡುತ್ತಿದ್ದರು ಎಂದು ಅವರ ಬಾಲ್ಯದ ಗೆಳೆಯ ನೆನಪು ಮಾಡಿಕೊಂಡಿದ್ದಾರೆ.

VISTARANEWS.COM


on

siddheshwara sri thande thayi
ಸಿದ್ದೇಶ್ವರ ಶ್ರೀಗಳ ಪೂರ್ವಾಶ್ರಮದ ತಂದೆ ಓಗೆಪ್ಪಗೌಡ ಬಿರಾದಾರ ಮತ್ತು ತಾಯಿ ಸಂಗವ್ವ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ: ಸೋಮವಾರ ರಾತ್ರಿ ದೇವರ ಪಾದ ಸೇರಿದ ಇಲ್ಲಿನ ಜ್ಞಾನ ಯೋಗಾಶ್ರಮದ ಶ್ರ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಅಧ್ಯಾತ್ಮ ಎನ್ನುವುದು ಸಾಧನಾ ಪಥವೇನೂ ಆಗಿರಲಿಲ್ಲ, ಬದಲಾಗಿ ಅದು ಅಯಾಚಿತವಾಗಿ ಬಂದ ಸಹಜ ಪ್ರಕ್ರಿಯೆಯಾಗಿತ್ತು. ಇದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ ಅವರ ಬಾಲ್ಯದ ಒಡನಾಡಿಯಾಗಿರುವ ಭೀಮರಾಯ ಶಿವಪ್ಪ ಪಟ್ಟಣ ಅವರು.

ಸಿದ್ದೇಶ್ವರ ಸ್ವಾಮಿಗಳ ಪ್ರಾಥಮಿಕ ಶಿಕ್ಷಣದ ಜತೆಗಾರ, ಗ್ರಾಮ ಸೇವಕರಾಗಿ ನಿವೃತ್ತರಾದ ಭೀಮರಾಯ ಶಿವಪ್ಪ ಪಟ್ಟಣ ಅವರು ಸೋಮವಾರ ಶ್ರೀಗಳ ದರ್ಶನಕ್ಕೆ ಬಂದ ಮೇಲೆ ಬಾಲ್ಯದ ಹಲವು ಕಥೆಗಳನ್ನು ತೆರೆದಿಟ್ಟರು. ಅದರ ಜತೆಗೆ ಒಮ್ಮೆ ಅಧ್ಯಾತ್ಮದ ಕಡೆಗೆ ವಾಲಿದ ಸಿದ್ದೇಶ್ವರರರು ಬಳಿಕ ತಮ್ಮ ಊರಿನ ವ್ಯಾಮೋಹವನ್ನೂ ಹೊಂದಿರಲಿಲ್ಲ ಎನ್ನುವುದನ್ನು ನೆನಪಿಸಿಕೊಂಡರು.

– ಸಹಪಾಠಿಗಳು, ಮನೆಯ ಎಲ್ಲರೂ ಅವರನ್ನು ಪ್ರೀತಿಯಿಂದ ಸಿದ್ದು ಎಂದೇ ಕರೆಯುತ್ತಿದ್ದೆವು. ಶಾಲೆಯಲ್ಲಿ ಒಳ್ಳೆಯ ಹುಡುಗರೊಂದಿಗೆ ಮಾತ್ರ ಬೆರೆಯುತ್ತಿದ್ದರು. ಓದಿನಲ್ಲಿ ಚುರುಕು, ಕೆಲವು ಸಲ ನಮ್ಮೂರಿನ ಗುಡ್ಡದ ಮೇಲೆ ಒಬ್ಬರೇ ಕುಳಿತು ಧ್ಯಾನ ಮಾಡುತ್ತಿದ್ದರು. ಈಗ ಇದನ್ನೆಲ್ಲ ಗಮನಿಸಿದಾಗ ಅವರಿಗೆ ಬಾಲ್ಯದಲ್ಲೇ ಅಧ್ಯಾತ್ಮದ ಒಲವಿತ್ತು ಅನಿಸುತ್ತದೆ.

– 1ರಿಂದ 7ನೇ ತರಗತಿ ತನಕ ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಕಲಿತೆವು. ಸಿದ್ದುಗಿಂತ ನಾನು 6 ತಿಂಗಳು ದೊಡ್ಡವನು. ಅವರ ತಂದೆ ಓಗೆಪ್ಪಗೌಡ ಬಿರಾದಾರ ಚಿತ್ರಕಲಾವಿದರು. ಅವರ ತಾಯಿ ಸಂಗವ್ವ ಬಸವನಬಾಗೇವಾಡಿ ತಾಲೂಕಿನ ನಂದ್ಯಾಳದವರು. ಆರು ಮಕ್ಕಳಲ್ಲಿ ಸಿದ್ದಗೊಂಡ ಹಿರಿಯವರು.

– ನಾನು ಮತ್ತು ಸಿದ್ದೇಶ್ವರ ಸ್ವಾಮೀಜಿ ಕಲಿಯುವಾಗ ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೆವು. ಒಂದು ಸಾರಿ ಅವರು ಪರೀಕ್ಷೆಯ ಪೇಪರ್‌ ತುಂಬಾ ಕೇವಲ ಓಂ ನಮಃ ಶಿವಾಯ ಅಂತ ಬರೆದಿಟ್ಟು ಬಂದಿದ್ದರು.

– 1953ರಲ್ಲಿ ಮೂಲ್ಕಿ ಪರೀಕ್ಷೆ ಬರೆಯಲು ನಾವೆಲ್ಲ ಕೆಲ ದಿನ ವಿಜಯಪುರದಲ್ಲೇ ಇದ್ದೆವು. ಆ ವೇಳೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ತಿಂಗಳ ಪ್ರವಚನ ನಡೆದಿತ್ತು. ಸಿದ್ದು ನಿತ್ಯ ಪ್ರವಚನ ಕೇಳಲು ಹೋಗುತ್ತಿದ್ದರು. ನಂತರ ಮಲ್ಲಿಕಾರ್ಜುನ ಶ್ರೀಗಳು ವಿಜಯ ಕಾಲೇಜಿನಲ್ಲಿ ವಾಸ್ತವ್ಯ ಮಾಡಿದ್ದರು. ಆಗಲೂ ಇವರು ಅಲ್ಲಿಗೆ ಹೋಗುತ್ತಿದ್ದರು. ಒಂದು ದಿನ ಮಲ್ಲಿಕಾರ್ಜುನ ಶ್ರೀಗಳು ವಿಚಾರಿಸಿದಾಗ ಇವರ ಅಧ್ಯಾತ್ಮದ ಹಸಿವು ಗೊತ್ತಾಗಿ ಜತೆಗಿಟ್ಟುಕೊಂಡು ಓದಿಸುವುದಾಗಿ ಪಾಲಕರಲ್ಲಿ ಹೇಳಿದರು.

– ಒಮ್ಮೆ ಅಧ್ಯಾತ್ಮದತ್ತ ಒಲವು ಮೂಡಿ ಊರು ಬಿಟ್ಟ ಸಿದ್ದೇಶ್ವರ ಅವರು ಕೆಲವೇ ಕಾರ್ಯಕ್ರಮ ಬಿಟ್ಟರೆ ಊರಿಗೆ ಬಂದದ್ದು ಕಡಿಮೆ. ತೀರಾ ಇತ್ತೀಚೆಗೆ ನಮ್ಮೂರಿನ ಹೈಸ್ಕೂಲ್‌ ಕಾರ್ಯಕ್ರಮ, ಮತ್ತೊಂದು ಕಾರ್ಯಕ್ರಮಕ್ಕಷ್ಟೇ ಬಂದಿದ್ದರು. ತಂದೆ, ತಾಯಿ ನಿಧನರಾದಾಗಲೂ ಬಿಜ್ಜರಗಿಗೆ ಬರಲಿಲ್ಲ. ಅವರು ಸನ್ಯಾಸತ್ವದ ತತ್ವ ಮೀರಲಿಲ್ಲ.

– ನಾವು ಭೇಟಿಯಾದಾಗ ಪೂರ್ವಾಶ್ರಮದ ದಿನಗಳನ್ನು ಶ್ರೀಗಳು ಚರ್ಚಿಸುತ್ತಿರಲಿಲ್ಲ. ಹಳೆಯ ಸ್ನೇಹಿತರ ಒಡನಾಟದ ಬಗ್ಗೆಯೂ ಮಾತಾಡುತ್ತಿರಲಿಲ್ಲ.

ಇದನ್ನೂ ಓದಿ | Siddheshwar Swamiji | ವೈಕುಂಠ ಏಕಾದಶಿಯ ಪುಣ್ಯದಿನದಂದೇ ದೇಹ ತ್ಯಜಿಸಿದ ಪುಣ್ಯ ಜೀವಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಅಂತಿಮ ವಿಧಿವಿಧಾನಗಳಲ್ಲಿ (Last Rites) ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು. ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Last Rites
Koo

ಪ್ರತಿಯೊಂದು ಧರ್ಮದಲ್ಲೂ ವಿವಿಧ ಆಚರಣೆಗಳಿವೆ (rituals). ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದಲ್ಲಿ (sanatana dharma) ಸಾಕಷ್ಟು ವಿಶೇಷ ಮತ್ತು ಅರ್ಥಪೂರ್ಣವಾದ ಆಚರಣೆಗಳಿವೆ. ಕೆಲವೊಂದು ಆಚರಣೆಗಳ ಬಗ್ಗೆ ನಮಗೆ ಗೊತ್ತಿದ್ದರೂ ಮರಣಾನಂತರದ (post-death ceremony) ಕೆಲವು ಆಚರಣೆಗಳ ನಾವು ತಿಳಿದಿರುವುದಿಲ್ಲ. ಈ ಆಚರಣೆಗಳನ್ನು (Last Rites) ಪಾಲಿಸುವುದು ಬಹುಮುಖ್ಯ.

ಮರಣಾನಂತರದ ಆಚರಣೆಗಳಲ್ಲಿ 16 ಪ್ರಮುಖ ಆಚರಣೆಗಳಿವೆ. ಇದರಲ್ಲಿ ಅನೇಕ ನಿಯಮಗಳಿವೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ.

ಅಂತಿಮ ವಿಧಿವಿಧಾನಗಳಲ್ಲಿ ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ.

ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯ ಕಡೆಗೆ ಹಿಂತಿರುಗಿ ನೋಡಿದರೆ ಮೃತನ ಆತ್ಮವು ಆ ವ್ಯಕ್ತಿಯೊಂದಿಗೆ ಬರುತ್ತದೆ ಮತ್ತು ಆ ಬಂಧವನ್ನು ಮುರಿಯಲಾಗುವುದಿಲ್ಲ.

ಹೀಗಾಗಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಆತ್ಮವು ಮರಣಾನಂತರದ ಜೀವನಕ್ಕೆ ಪರಿವರ್ತನೆ ಕಷ್ಟವಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು 13 ದಿನಗಳ ಕಾಲ ಹಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂತ್ಯಕ್ರಿಯೆಯಿಂದ ಹಿಂದಿರುಗಿದ ಅನಂತರ ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ತಕ್ಷಣ ಸ್ನಾನ ಮಾಡಿ ಮತ್ತು ವ್ಯಕ್ತಿಯ ಬಟ್ಟೆಗಳನ್ನು ತೊಳೆಯಬೇಕು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಗಂಗಾಜಲವನ್ನು ಇಡೀ ಮನೆಯಲ್ಲಿ ಸಿಂಪಡಿಸಬೇಕು. ವ್ಯಕ್ತಿ ಸತ್ತ ಮನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಗಾಗಿ 12 ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ಪಿತೃ ಪಕ್ಷದಲ್ಲಿ ಪಿಂಡದಾನ ಮಾಡಬೇಕು‌ ಎಂಬೆಲ್ಲ ಉಲ್ಲೇಖ ಗರುಡ ಪುರಾಣದಲ್ಲಿದೆ.

Continue Reading

ಧಾರ್ಮಿಕ

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಮನೆಯನ್ನು ಸ್ವಚ್ಛ ಮಾಡುವಾಗಲೂ ಪಾಲಿಸಬೇಕಾದ ವಾಸ್ತು ನಿಯಮಗಳಿವೆ. ಅದರಲ್ಲೂ ಮನೆ ಒರೆಸುವ ಕುರಿತು ವಾಸ್ತು ಶಾಸ್ತ್ರದಲ್ಲಿ (Vastu Tips) ಏನು ಹೇಳಿದೆ ಗೊತ್ತೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Continue Reading

ಧಾರ್ಮಿಕ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

ನಮ್ಮ ದೈನಂದಿನ ಜೀವನದಲ್ಲಿ ವಾಸ್ತು ಶಾಸ್ತ್ರದ (Vastu Tips) ಪ್ರಭಾವವು ಗಾಢವಾಗಿದೆ. ಮನೆ ಅಥವಾ ಕಾರ್ಯಸ್ಥಳದೊಳಗೆ ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದಾಗ ಅವು ಶಕ್ತಿಯ ಹರಿವನ್ನು ಸಮನ್ವಯಗೊಳಿಸುತ್ತವೆ. ಉತ್ತಮ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಸಂತೋಷವನ್ನು ನೀಡುವ ಉಡುಗೊರೆಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಾಗ ಹೆಚ್ಚು ಚಿಂತೆ ಮಾಡದೇ ಇವುಗಳನ್ನು ಆಯ್ಕೆ ಮಾಡಬಹುದು.

VISTARANEWS.COM


on

By

Vastu Tips
Koo

ಉಡುಗೊರೆಗಳನ್ನು (Gift) ಸ್ವೀಕರಿಸುವುದು ಯಾರಿಗೆ ಇಷ್ಟವಿಲ್ಲ? ಪ್ರತಿಯೊಬ್ಬರೂ ಉಡುಗೊರೆ ನೀಡುವಾಗ ಅದು ತೆಗೆದುಕೊಳ್ಳುವವರ ಮನಕ್ಕೆ ಇಷ್ಟವಾಗುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಉಡುಗೊರೆಗಳು ಪ್ರೀತಿಯ ಶುದ್ಧ ಸೂಚಕವಾಗಿದೆ ಮತ್ತು ಅವು ಭಾವನಾತ್ಮಕ ಮತ್ತು ಆಂತರಿಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಆಯ್ಕೆ ಮಾಡುವಾಗ ಯೋಚನೆ ಕಾಡುವುದು ಸಹಜ.

ನಾವು ಕೊಡುವ ಉಡುಗೊರೆಯು ಸ್ವೀಕರಿಸುವವರ ಜೀವನಕ್ಕೆ ಸಮೃದ್ಧಿ (prosperity), ಸಕಾರಾತ್ಮಕತೆ (positivity) ಮತ್ತು ಸಾಮರಸ್ಯವನ್ನು (harmony) ತರುವಂತೆ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ಉಡುಗೊರೆಗಳನ್ನು ಆಯ್ಕೆ ಮಾಡಲು ವಾಸ್ತು ಶಾಸ್ತ್ರವು ಕೆಲವೊಂದು ಮಾರ್ಗದರ್ಶನವನ್ನು ನೀಡುತ್ತದೆ.

ವಾಸ್ತು ತತ್ತ್ವಗಳೊಂದಿಗೆ ಜೋಡಿಸಲಾದ ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡಿದಾಗ ಇದು ಕೇವಲ ವಸ್ತುವನ್ನು ನೀಡುವುದಿಲ್ಲ. ಅದರೊಂದಿಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತೀರಿ.

ಸ್ವೀಕರಿಸುವವರ ಯೋಗಕ್ಷೇಮ ಮತ್ತು ಯಶಸ್ಸನ್ನು ಹೆಚ್ಚಿಸುವ ನಿರ್ದಿಷ್ಟ ಉಡುಗೊರೆಗಳನ್ನು ವಾಸ್ತು ಶಾಸ್ತ್ರವು ಸೂಚಿಸುತ್ತದೆ. ಈ ಉಡುಗೊರೆಗಳು ಯಾವುದೇ ಚಿಂತೆ ಇಲ್ಲದೆ ಆಯ್ಕೆ ಮಾಡಬಹುದು. ಇದು ಉಡುಗೊರೆ ಸ್ವೀಕರಿಸುವವರ ಪರಿಸರದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀವನದ ವಿವಿಧ ಅಂಶಗಳಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ.

ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುವ 7 ಅದೃಷ್ಟದ ಉಡುಗೊರೆಗಳು

ಲಾಫಿಂಗ್ ಬುದ್ಧ

ಲಾಫಿಂಗ್ ಬುದ್ಧ ಅನೇಕರ ಕಚೇರಿ ಮತ್ತು ಮನೆಗಳಲ್ಲಿ ಕಂಡುಬರುವ ಜನಪ್ರಿಯ ಅಲಂಕಾರಿಕ ವಸ್ತುವಾಗಿದೆ. ಹರ್ಷಚಿತ್ತದ ವ್ಯಕ್ತಿ ಯಾವುದೇ ಜಾಗದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ರೋಮಾಂಚಕ ಮತ್ತು ಮಂಗಳಕರ ಶಕ್ತಿಯನ್ನು ಇದು ಸೃಷ್ಟಿಸುತ್ತದೆ.


ಗಣೇಶ ವಿಗ್ರಹ

ಗಣೇಶ ಹೊಸ ಆರಂಭ ಮತ್ತು ಯಶಸ್ಸಿನ ದೇವರು. ಗಣೇಶನ ಪ್ರತಿಮೆಯನ್ನು ನೀಡುವುದು ಉಡುಗೊರೆ ಸ್ವೀಕರಿಸುವವರಿಗೆ ಆಶೀರ್ವಾದವನ್ನು ಕೊಡುತ್ತದೆ. ಈ ಪ್ರತಿಮೆಯು ಶಕ್ತಿ, ಬುದ್ಧಿವಂತಿಕೆ ಮತ್ತು ಜೀವನದಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಶ್ರೀ ಮೇರು ಯಂತ್ರ

ಮೇರು ಶ್ರೀ ಯಂತ್ರವು ತನ್ನ ಆರಾಧಕರಿಗೆ ಶಾಂತಿ, ಸಂತೋಷ, ಜನಪ್ರಿಯತೆ, ಶಕ್ತಿ, ಅಧಿಕಾರ, ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಸಮರ್ಪಣೆ ಮತ್ತು ನಂಬಿಕೆಯಿಂದ ಇದನ್ನು ಪೂಜಿಸಿದರೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.


ರಾಧಾ ಕೃಷ್ಣನ ವಿಗ್ರಹ

ಶುಭ ಸೂಚಕವಾಗಿ ರಾಧಾ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಜೀವನದಲ್ಲಿ ಆಳವಾದ ಶಾಂತಿ, ಸಮೃದ್ಧ ಪ್ರೀತಿ ಮತ್ತು ಬಲವಾದ ಸಮರ್ಪಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಆಮೆ

ಆಮೆಗಳು ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಗಾಜಿನ ಅಥವಾ ಸ್ಫಟಿಕ ಆಮೆಯನ್ನು ಉಡುಗೊರೆಯಾಗಿ ನೀಡುವುದು ಅವರಿಗೆ ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಚೈಮ್ಸ್

ವಿಂಡ್ ಚೈಮ್ ಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ. ಅವುಗಳು ಅದೃಷ್ಟ, ಸಮೃದ್ಧಿ ಮತ್ತು ಪಾಲಿಸಬೇಕಾದ ನೆನಪುಗಳನ್ನು ಸಂಕೇತಿಸುತ್ತವೆ. ಅದರ ಸುಮಧುರ ರಾಗಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತವೆ. ಮನೆಗೆ ಧನಾತ್ಮಕ ಶಕ್ತಿ ಮತ್ತು ಶಾಂತಿಯುತ ವಾತಾವರಣವನ್ನು ತುಂಬುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ


ಗೋಮತಿ ಚಕ್ರ ವೃಕ್ಷ

ಗೋಮತಿ ಚಕ್ರವನ್ನು ಉಡುಗೊರೆಯಾಗಿ ನೀಡುವುದು ಆಧ್ಯಾತ್ಮಿಕ ಮಹತ್ವದಿಂದ ತುಂಬಿದ ಅರ್ಥಪೂರ್ಣ ಸೂಚಕವಾಗಿದೆ. ಗೋಮತಿ ನದಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪವಿತ್ರ ಕಲ್ಲುಗಳು ಸಕಾರಾತ್ಮಕ ಶಕ್ತಿ ಮತ್ತು ರಕ್ಷಣಾತ್ಮಕ ಗುಣಗಳಿಂದ ಮೌಲ್ಯಯುತವಾಗಿವೆ. ಗೋಮತಿ ಚಕ್ರವನ್ನು ನೀಡುವುದು ಸ್ವೀಕರಿಸುವವರಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಶೀರ್ವಾದಿಸುತ್ತದೆ.

Continue Reading

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading
Advertisement
LK Advani
ದೇಶ10 mins ago

LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು

Ashika Ranganath
ಸ್ಯಾಂಡಲ್ ವುಡ್38 mins ago

Ashika Ranganath: ಪುಷ್ಪ 2 ಹಾಡಿಗೆ ದಿಲ್‌ ಖುಷ್‌ ಆಗಿ ಕುಣಿದ ಆಶಿಕಾ ರಂಗನಾಥ್;‌ Video ಇದೆ ನೋಡಿ

Lokayukta Raid Honnavara Pattana Panchayat Chief Executive Engineer caught by lokayukta while recieving money
ಉತ್ತರ ಕನ್ನಡ50 mins ago

Lokayukta Raid: ಹೊನ್ನಾವರ ಪ.ಪಂ ʼಲಂಚ ಪ್ರವೀಣʼ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ

Viral Video
ವೈರಲ್ ನ್ಯೂಸ್1 hour ago

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

Pradhan Mantri Awas Yojana CM Siddaramaiah instructs to complete work on incomplete houses on priority
ಪ್ರಮುಖ ಸುದ್ದಿ1 hour ago

CM Siddaramaiah: ಪ್ರಧಾನಮಂತ್ರಿ ಆವಾಸ್‌ ಯೋಜನೆ; ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Toyota Kirloskar Motor has joined hands with the IISC to support the establishment of a Mobility Engineering Laboratory
ಬೆಂಗಳೂರು1 hour ago

Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

BJP Muslim Candidate
ಪ್ರಮುಖ ಸುದ್ದಿ2 hours ago

BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Uttar pradesh Politics
ದೇಶ2 hours ago

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Mangalore News
ಕರ್ನಾಟಕ2 hours ago

Mangalore News: ಫಲಿಸದ ಸತತ 6-7 ಗಂಟೆ ಕಾರ್ಯಾಚರಣೆ; ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

Positive woman drinking water
ಆರೋಗ್ಯ3 hours ago

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌