Ugadi 2024: ಸಿಹಿ-ಕಹಿ ಹದವಾಗಿರಲಿ…ನವಚೈತ್ರ ಮೈ-ಮನ ತುಂಬಲಿ - Vistara News

ಧಾರ್ಮಿಕ

Ugadi 2024: ಸಿಹಿ-ಕಹಿ ಹದವಾಗಿರಲಿ…ನವಚೈತ್ರ ಮೈ-ಮನ ತುಂಬಲಿ

ಕ್ರೋಧಿನಾಮ ಸಂವತ್ಸರ ಪ್ರಾರಂಭವಾಗಿದೆ. ಹೊಸ ಸಂವತ್ಸರದಲ್ಲಿ (Ugadi 2024) ನಮ್ಮೆಲ್ಲರ ಬದುಕಿನಲ್ಲಿ, ಬೇವಿರಲಿ, ಬೆಲ್ಲವೂ ಬರಲಿ; ಯಾವುದೂ ಹೆಚ್ಚಾಗದಂತೆ ಸಿಹಿ-ಕಹಿ ಹದವಾಗಿರಲಿ. ನವಚೈತ್ರ ಮೈ-ಮನ ತುಂಬಲಿ. ಬರುವ ದಿನಗಳಲ್ಲಿ ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು. ಯುಗಾದಿ ಹಬ್ಬದ ಶುಭಾಶಯ.

VISTARANEWS.COM


on

Ugadi 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಅಲಕಾ ಕೆ

ಸುಮ್ಮನೆ ʻಯುಗಾದಿʼ (Ugadi 2024) ಎಂದರೆ ಆಗಲಿಕ್ಕಿಲ್ಲ… ಇದು ಹೊಸ ವರ್ಷದ ಆದಿ. ʻಹೊಹ್ಹೊ! ಯುಗಾದಿಯು, ಹರುಷಕೆಲ್ಲ ಗಾದಿಯು!ʼ ಎನ್ನುತ್ತದೊಂದು ಕವಿವಾಣಿ. ನಮ್ಮ ಭಾವನೆಗಳಿಗೂ ಪ್ರಕೃತಿಯ ಬದಲಾವಣೆಗಳಿಗೂ ಅವಿನಾಭಾವ ಸಂಬಂಧವಿದೆ. ಲೋಕವೆಲ್ಲ ತೊಳೆದು ಹೋಗುವಂಥ ಮಳೆ ಸುರಿಯುತ್ತಿದ್ದರೆ ನಮ್ಮ ಮನದಲ್ಲೂ ಮೋಡ ಮುಸುಕಿದ ವಾತಾವರಣ; ಗಡಗುಡುವ ಚಳಿ ಇದೆಯೆಂದಾದರೆ ನಮ್ಮ ಚೈತನ್ಯವೂ ಕಂಬಳಿ ಹೊದ್ದು ಕೂತಿರುತ್ತದೆ; ಕೆಟ್ಟ ಬಿಸಿಲಾದರೆ ನಮ್ಮ ಉತ್ಸಾಹವೂ ಸುಟ್ಟು ಹೋಗಿರುತ್ತದೆ. ಆದರೆ ಯುಗಾದಿಯ ಹೊತ್ತಿಗೆ ಹಾಗಲ್ಲ. ವಸಂತ ಮಾಸದ ಆರಂಭದ ಸಮಯ. ಅಪವಾದಕ್ಕೆ ಈ ಬಾರಿಯ ಬಿರುಬೇಸಿಗೆಯಂಥ ವರ್ಷಗಳನ್ನು ಹೊರತಾಗಿಸಿದರೆ, ಚೈತನ್ಯ ಹೆಚ್ಚಿಸುವಂಥ ವಾತಾವರಣವೇ ಇರುತ್ತದೆ. ಆಗಿನ್ನೂ ಪಲ್ಲವಿಸುತ್ತಿರುವ ಕೆಂಪಾದ ಚಿಗುರುಗಳು ಒಂದೆಡೆ, ಹೊಸದಾಗಿ ಮೂಡಿರುವ ಎಳೆ ಹಸಿರು ಇನ್ನೊಂದೆಡೆ. ನಡುವೆ ಮಾವು, ಬೇವು, ಹೊಂಗೆ, ಭೃಂಗ… ಹಬ್ಬಕ್ಕೆ ನಾವು ಮಾತ್ರವೇ ಅಲ್ಲ, ಇಡೀ ನಿಸರ್ಗವೇ ಹೊಸಬಟ್ಟೆ ತೊಟ್ಟು ನಿಂತಂತೆ ಕಂಡರೆ, ಸರಿಯೇ!

Ugadi 2024

ಹೊಸವರ್ಷದ ಋತು

ವಸಂತದ ಆಗಮನವೆಂದರೆ ಜಗತ್ತಿನ ಹಲವಾರು ದೇಶಗಳಲ್ಲಿ, ಸಂಸ್ಕೃತಿಗಳಲ್ಲಿ ಹೊಸವರ್ಷದ, ನವಪರ್ವದ ಸಂಭ್ರಮ. ಇದು ಭಾರತಕ್ಕೆ ಸೀಮಿತವಲ್ಲ, ಕರ್ನಾಟಕಕ್ಕಂತೂ ಅಲ್ಲವೇ ಅಲ್ಲ. ನಮ್ಮಲ್ಲೇ ದಕ್ಷಿಣ ಭಾರತದ ಉದ್ದಗಲಕ್ಕೆ ಇದು ಹೊಸ ವರ್ಷದ ಋತು, ಹಬ್ಬದ ಹೆಸರು ಯಾವುದಾದರೇನು! ಎಲ್ಲೆಡೆ ಕಾಣುವುದು ಪ್ರಕೃತಿಯ ಆರಾಧನೆಯೇ. ಉಳಿದೆಲ್ಲ ಹಬ್ಬಗಳಿಗೆ ಇರುವಂಥ ಕಡುಬು, ಕಜ್ಜಾಯಗಳಲ್ಲ ಈ ಹಬ್ಬದಲ್ಲಿ. ಈಗ ಬೇವು, ಮಾವು ನಮಗೆ ಮುಖ್ಯವಾದ ವ್ಯಂಜನ. ಬೇವೆಂದರೆ ಕಠೋರ ಕಹಿಯ ಭಾಗಗಳೂ ಅಲ್ಲ, ಕಹಿಯನ್ನು ಹದವಾಗಿ ಹೊಂದಿರುವ ಚಿಗುರು ಮತ್ತು ಕಹಿ ಪರಿಮಳದ ಹೂವು. ಇದನ್ನೂ ತಿನ್ನುವುದಕ್ಕೆ ಕಳ್ಳಾಟ ಆಡುವ ನಾವು ಬೆಲ್ಲವನ್ನು ಜೊತೆಗೆ ಸೇರಿಸಿಕೊಂಡಿದ್ದೇವೆಂದರೆ ತಪ್ಪಲ್ಲ. ಇದರ ಜೊತೆಗೆ ಹುಳಿ-ಸಿಹಿಯ ಹೊಸ ಮಾವು. ಇನ್ನು ಹೊರಗಿನ ತೋರಣಕ್ಕೆ ಮೋಸವಾಗಬಾರದೆಂದು ಒಳಗಿಷ್ಟು ಹೋಳಿಗೆ-ಹೂರಣ… ಇತ್ಯಾದಿ

Ugadi

ಯುಗಾದಿಯ ವಿಶೇಷತೆಗಳೇನು?

ಯುಗಾದಿಯ ವಿಶೇಷತೆಗಳನ್ನು ಗಮನಿಸೋಣ. ಬೆಳಗೇಳುತ್ತಿದ್ದಂತೆ ಬಾಗಿಲಿಗೆ ಮಾವಿನೆಲೆಗಳ ತೋರಣ, ಅದಕ್ಕೆ ಬೇವಿನೆಲೆಗಳ ಅಲಂಕಾರ. ಮನೆಮಂದಿಗೆಲ್ಲ ಒಂದು ಹದವಾದ ಅಭ್ಯಂಜನ. ಈ ಸ್ನಾನಕ್ಕೆಂದೇ ಬಲಿತ ಬೇವಿನ ಎಲೆಗಳು ಹಂಡೆ ಸೇರುತ್ತವೆ. ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಬೇವಿಗಿಂತ ಮಿಗಿಲಾದ ಟಾನಿಕ್‌ ಇಲ್ಲ. ಬೇಸಿಗೆಯಲ್ಲಿ ಕಾಡುವ ಬೆವರುಸಾಲೆಯಿಂದ ಹಿಡಿದು ಕಜ್ಜಿತುರಿಯವರೆಗೆ ಸರ್ವರೋಗಕ್ಕೂ ಇದೇ ಮದ್ದು. ಹಾಗಂತ ಮದ್ದು ಮಾಡಿದರೆ ಅರ್ಧಂಬರ್ಧ ಮಾಡುವಂತಿಲ್ಲ. ಕೇವಲ ಮೈಗೆ ಲೇಪಿಸಿದರೆ ಸಾಕಾಗದಲ್ಲ, ಹಾಗಾಗಿ ಹೊಟ್ಟೆಯನ್ನೂ ಸೇರಬೇಕು ಬೇವು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಸ್ವಾಸ್ಥ್ಯ ವೃದ್ಧಿಸುತ್ತದೆ ಎಂಬುದೆಲ್ಲ ತಾತ್ವಿಕವಾಗಿ ಹೌದಾದರೂ, ಅದಕ್ಕೊಂದು ಪ್ರಮಾಣ, ಕ್ರಮ ಎಂಬುದೆಲ್ಲ ಬೇಕಲ್ಲ. ನಾವೇನು ಹಬ್ಬಕ್ಕೆ ಔಷಧಿಯಾಗಿ ತಿನ್ನುವುದಿಲ್ಲ ಬೇವನ್ನು! ಹೊಸ ಸಂವತ್ಸರದಲ್ಲಿ ಸಿಹಿ-ಕಹಿಯೆಲ್ಲ ಹದವಾಗಿ ಮಿಳಿತಗೊಂಡಿರಲಿ ಬದುಕಿನಲ್ಲಿ ಎಂಬ ಸದಾಶಯ ಇದರ ಹಿಂದಿರುವುದು.

ಯುಗಾದಿ ಪುರುಷನ ಆಗಮನ

ಪಂಚಾಂಗ ‍ಶ್ರವಣದ ಕ್ರಮ ಕರ್ನಾಟಕದ ಉದ್ದಗಲಕ್ಕೆ ಇದ್ದಂತೆ ಕಾಣುತ್ತದೆ. ಹಬ್ಬದೂಟ ಉಂಡು, ಕೊಂಚ ಅಡ್ಡಾಗಿ ಏಳುತ್ತಿದ್ದಂತೆ ಆಯಾ ಊರಿನ ದೇಗುಲಗಳಲ್ಲಿ ಅಥವಾ ಪ್ರಮುಖರ ಜಗುಲಿಯಲ್ಲಿ ಪುರೋಹಿತರಿಂದ ಪಂಚಾಂಗ ಶ್ರವಣ. ಆಧುನಿಕ ಕ್ಯಾಲೆಂಡರ್‌ಗಳು ಹೆಚ್ಚು ವ್ಯಾಪಿಸದ ಕಾಲದಲ್ಲಂತೂ, ಪಂಚಾಂಗವೇ ಅವರ ಯಾವತ್ತಿನ ಕ್ಯಾಲೆಂಡರ್‌ ಆಗಿತ್ತು. ಆಗಷ್ಟೇ ಬಂದಿದ್ದ ಹೊಸ ಪಂಚಾಂಗದ ಪ್ರಕಾರ ಆ ವರ್ಷದ ಮುನ್ನೋಟ ತಿಳಿಯಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಇದಕ್ಕೆ ವಿಶೇಷ ಅರ್ಥ, ಪ್ರಸ್ತುತತೆ ಇಲ್ಲದಿರಬಹುದು. ಆದರೆ ಹಿಂದೆ, ಆ ವರ್ಷದ ಮಳೆ-ಬೆಳೆ ಎಲ್ಲ ಹೇಗೆ, ಯುಗಾದಿ ಪುರುಷ ಯಾವುದರ ಮೇಲೆ ಬರುತ್ತಾನೆ, ಯಾವ ದಿಕ್ಕಿಗೆ ಹೋಗುತ್ತಾನೆ, ಯಾವ ದಿಕ್ಕನ್ನು ನೋಡುತ್ತಾನೆ, ಯಾವುದನ್ನು ತಿನ್ನುತ್ತಾನೆ ಮುಂತಾಗಿ ಅವನನ್ನು ವರ್ಣಿಸಲಾಗುತ್ತಿತ್ತು. ಆತನ ವರ್ಣನೆಯ ಆಧಾರದ ಮೇಲೆ, ಆ ವರ್ಷ ಯಾವ ಬೆಳೆಗೆ ಬೆಲೆ, ಯಾವುದು ತುಟ್ಟಿ, ಯಾವುದು ಅಗ್ಗ, ಯಾವುದನ್ನು ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು… ಹೌದಲ್ಲ, ಕೃಷಿ ಸಂಸ್ಕೃತಿ ಮತ್ತು ನಮ್ಮ ಧಾರ್ಮಿಕ ಸಂಸ್ಕೃತಿ ಎರಡೂ ಅಂಗೈ-ಮುಂಗೈ ಇದ್ದಂತೆ!

ಮೂರೆಲೆಯೂ ಮಾಫಿ!

ಇನ್ನು ಜುಗಾರಿ ಅಥವಾ ಜೂಜಾಡುವುದರ ಗಮ್ಮತ್ತನ್ನು ಹೇಳಲೇಬೇಕು. ಈ ಪದ್ಧತಿ ರಾಜ್ಯದ ಎಲ್ಲೆಡೆ ಪ್ರಚಲಿತ ಇದ್ದಂತಿಲ್ಲ. ಆದರೆ ಹಳೆಮೈಸೂರು ಪ್ರಾಂತ್ಯದಲ್ಲಿ ಜೂಜಿನ ಗೌಜು ಜೋರಿತ್ತು. ಉಳಿದ ದಿನಗಳಲ್ಲಿ ಹಿಡಿದು, ಬಡಿದು, ಲಾಕಪ್‌ಗೆ ಹಾಕಿಸಿಕೊಳ್ಳುತ್ತಿದ್ದ ಇಸ್ಪೀಟುಕೋರರನ್ನು ಅಂದು ಮುಟ್ಟುವಂತಿಲ್ಲ. ಯುಗಾದಿಯಂದು ಆಸಕ್ತರು ರಾಜಾರೋಷವಾಗಿ ಜೂಜಾಡುತ್ತಿದ್ದರು ಮತ್ತು ಪ್ರಶ್ನಿಸಿದವರೇ ಅಂದು ತಪ್ಪಿತಸ್ಥರು! ಹೊಸ ವರ್ಷಕ್ಕೆ ಇದೆಂಥ ಹುಚ್ಚು ಆಚರಣೆ ಎನಿಸಬಹುದು. ಆದರೆ ಸಮಾಜದ ಒಪ್ಪಿತ ಚೌಕಟ್ಟಲ್ಲೇ ತಪ್ಪು ಮಾಡುವುದಕ್ಕೂ ಅವಕಾಶವಿತ್ತು ಎಂದರೆ, ನಮ್ಮೊಳಗಿನ ರಾಗ-ದ್ವೇಷಗಳು ಹರಿದುಹೋಗಿ ಮನಸ್ಸು ಸ್ವಚ್ಛವಾಗುವುದಕ್ಕೆ ಸರಳವಾದ ಮತ್ತು ಸುರಕ್ಷಿತವಾದ ದಾರಿಯಿದಾಗಿತ್ತು ಎಂದು ಅರ್ಥ ಮಾಡಿಕೊಳ್ಳೋಣವೇ?

ಶುಭ ಹಾರೈಕೆ

ಕ್ರೋಧಿನಾಮ ಸಂವತ್ಸರ ಪ್ರಾರಂಭವಾಗಿದೆ. ಹೊಸ ಸಂವತ್ಸರದಲ್ಲಿ ನಮ್ಮೆಲ್ಲರ ಬದುಕಿನಲ್ಲಿ, ಬೇವಿರಲಿ, ಬೆಲ್ಲವೂ ಬರಲಿ; ಯಾವುದೂ ಹೆಚ್ಚಾಗದಂತೆ ಸಿಹಿ-ಕಹಿ ಹದವಾಗಿರಲಿ. ನವಚೈತ್ರ ಮೈ-ಮನ ತುಂಬಲಿ. ಬರುವ ದಿನಗಳಲ್ಲಿ ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು. ʻನಗುತ ಬಾಳು ಜೀವವೆ ಮಾವು ಬೇವು ದಾಳಿಗೆ, ನಗುತ ಬಾಳು ಜೀವವೆ ಹುಳಿ ಬೆರೆಸದೆ ಹಾಲಿಗೆʼ ಎಂಬ ಕವಿವಾಣಿಯಂತೆ ನಮ್ಮ ಜಾಣ್ಮೆಯೇ ನಮ್ಮನ್ನು ಕಾಯಲಿ. ಹೊಸ ಸಂವತ್ಸದ ಶುಭ ಹಾರೈಕೆಗಳು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಎಂಜಿಆರ್‌, ಜಯಲಲಿತಾ ಹಾದಿಯಲ್ಲಿ ಜೋಸೆಫ್ ವಿಜಯ್‌: ಇಂದು ಕೊಲ್ಲೂರು ಮೂಕಾಂಬಿಕೆ ದರ್ಶನ

VISTARANEWS.COM


on

ಜೋಸೆಫ್‌ ವಿಜಯ್‌

ಇಂದು ಮಧ್ಯಾಹ್ನ 3ಕ್ಕೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲಿರುವ ಜೋಸೆಫ್ ವಿಜಯ್‌

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಜಯ್‌ ಅವರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿಯೂ ಮೂಕಾಂಬಿಕೆ ದೇವಸ್ಥಾನಕ್ಕೆ ವಿಶೇಷ ಸ್ಥಾನಮಾನವಿದೆ. ಮಾಜಿ ಮುಖ್ಯಮಂತ್ರಿ ಎಂಜಿಆರ್‌ ತಮ್ಮ ಆಡಳಿತ ಅವಧಿಯಲ್ಲಿ ಹಲವು ಬಾರಿ ಕೊಲ್ಲೂರಿಗೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿರುವ ಸುಮಾರು 1 ಕೆ.ಜಿ. ತೂಕದ ಚಿನ್ನದ ಖಡ್ಗವನ್ನು ಎಂಜಿಆರ್‌ ದೇಣಿಗೆಯಾಗಿ ನೀಡಿದ್ದರು ಎಂಬುದು ವಿಶೇಷ.

ಎಂಜಿಆರ್‌ ಬಳಿಕ ಅವರ ರಾಜಕೀಯ ಉತ್ತರಾಧಿಕಾರಿಯಾಗಿದ್ದ ಜಯಲಲಿತಾ ಕೂಡ ಮೂಕಾಂಬಿಕೆ ದೇವಿಯ ಅಪಾರ ಭಕ್ತೆಯಾಗಿದ್ದರು. ರಾಜಕೀಯ ಹಾಗೂ ವೈಯಕ್ತಿಕ ಸವಾಲುಗಳ ಸಮಯದಲ್ಲಿ ಅವರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆಪ್ತ ಜ್ಯೋತಿಷಿಗಳ ಸಲಹೆ ಮೇರೆಗೆ ಜಯಲಲಿತಾ ಅವರು ಮೂಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾ ಹೋಮ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು.

ಈಗ ವಿಜಯ್‌ ಅವರ ಭೇಟಿ ಕೂಡ ಇದೇ ಪರಂಪರೆಯ ಮುಂದುವರಿಕೆಯೇ ಅಥವಾ ಕೇವಲ ವೈಯಕ್ತಿಕ ಭಕ್ತಿಯ ಅಭಿವ್ಯಕ್ತಿಯೇ ಎಂಬ ಚರ್ಚೆಗಳು ಜೋರಾಗಿವೆ. ಒಟ್ಟಾರೆ, ತಮಿಳುನಾಡು ರಾಜಕೀಯದ ಪ್ರಮುಖ ನಾಯಕರೊಂದಿಗೆ ಮೂಕಾಂಬಿಕೆ ದೇವಸ್ಥಾನದ ನಂಟು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದೆ.

Also Read: ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

❇️ Follow and Like us on Social Media Platforms

🟦 Facebook : https://www.facebook.com/vistaranews
❤️ Instagram : https://www.instagram.com/vistaranews

Continue Reading

Latest

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು

VISTARANEWS.COM


on

ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ತಿರುಪತಿಯ ಭವ್ಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಬೆಳಗಾವಿಯಲ್ಲಿಯೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸನ ಸನ್ನಿಧಿ ತಲೆಯೆತ್ತಲಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದ ಸುಮಾರು 7 ಎಕರೆ ಪ್ರದೇಶದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಭೂಮಿಯನ್ನು ಖರೀದಿಸಿ ಈಗಾಗಲೇ ಟಿಟಿಡಿ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಮೂಲಕ ಕುಂದಾನಗರಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಮೊದಲ ಭದ್ರ ಬುನಾದಿ ಬಿದ್ದಿದೆ.

ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ವಾಸ್ತುಶಿಲ್ಪ, ಲಡ್ಡು ವಿತರಣೆ ಮತ್ತು ಭಕ್ತರ ವಾಸ್ತವ್ಯದ ಸೌಲಭ್ಯ ಸೇರಿದಂತೆ ಪ್ರತಿಯೊಂದೂ ಅಂಶದಲ್ಲೂ ಮೂಲ ತಿರುಪತಿ ಕ್ಷೇತ್ರವನ್ನೇ ಹೋಲುವಂತೆ ನಿರ್ಮಾಣವಾಗಲಿದೆ. ನೂರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಶೇ. 10ರಷ್ಟು ಹಣವನ್ನು ಮಾತ್ರ ದಾನಿಗಳಿಂದ ಸಂಗ್ರಹಿಸಿ, ಉಳಿದ ವೆಚ್ಚವನ್ನು ಟಿಟಿಡಿ ಭರಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಟಿಟಿಡಿ ಪ್ರತ್ಯೇಕ ಟ್ರಸ್ಟ್ ರಚಿಸಿ ಸ್ಥಳೀಯರನ್ನು ಒಳಗೊಳ್ಳಲಿದೆ. ಈ ದೇವಾಲಯದ ನಿರ್ಮಾಣದಿಂದ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೆ, ನೆರೆಯ ಗೋವಾ ಮತ್ತು ಮಹಾರಾಷ್ಟ್ರದ ಭಕ್ತರಿಗೂ ತಿಮ್ಮಪ್ಪನ ದರ್ಶನ ಪಡೆಯಲು ಸುಲಭವಾಗಲಿದೆ.

ನೂತನ ದೇವಾಲಯಗಳ ನಿರ್ಮಾಣಕ್ಕಾಗಿ ಟಿಟಿಡಿ ಮೀಸಲಿಟ್ಟಿರುವ ಒಂಬತ್ತು ಸಾವಿರ ಕೋಟಿ ರೂಪಾಯಿ ನಿಧಿಯಲ್ಲಿ ಬೆಳಗಾವಿ ಯೋಜನೆಯೂ ಸೇರಿದೆ. ದೇಶದ ಆರು ಪ್ರಮುಖ ಸ್ಥಳಗಳಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಟಿಟಿಡಿ, ಬೆಳಗಾವಿಯಲ್ಲಿ ಶೀಘ್ರವೇ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದೆ. ರೆಡ್ಡಿ ಸಂಘದ ಈ ಉದಾರ ಕಾರ್ಯಕ್ಕೆ ಟಿಟಿಡಿ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ಬೆಳಗಾವಿ ನಗರವು ಧಾರ್ಮಿಕ ಭೂಪಟದಲ್ಲಿಯೂ ಹೊಸ ಗುರುತು ಪಡೆಯಲಿದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿರುವ ಬೆಳಗಾವಿಗೆ ಈ ವೆಂಕಟರಮಣನ ಸನ್ನಿಧಿ ಮತ್ತಷ್ಟು ಮೆರುಗು ನೀಡಲಿದೆ.

Continue Reading

ಕೊಡಗು

Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ

Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.

VISTARANEWS.COM


on

Deepavali festival held in Madikeri

ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ‌ ಸಂತೋಷವಾಗಿದೆ‌. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ‌. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

Deepavali festival held in Madikeri

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ‌ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್‌.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು‌‌. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.

VISTARANEWS.COM


on

mysore dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore dasara 2024

ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.

Continue Reading
Advertisement
ಬಿಡದಿ ಟೌನ್‌ಶಿಪ್‌
Latest1 day ago

ಬಿಡದಿ ಟೌನ್‌ಶಿಪ್‌ ರೈತರ ವಿರೋಧ : ಜೂನ್ 22ರಂದು ‘ಭೈರಮಂಗಲ ಚಲೋ’

ಸಿಎಂ ಡಿಕೆಶಿ
Latest1 day ago

ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳಿದ್ರೆ ಹುಷಾರ್‌: ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ನೀಟ್ 2026 ಪರೀಕ್ಷೆ
Latest2 days ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NEET ಪರೀಕ್ಷೆಗೆ ಹೆಚ್ಚುವರಿ ಸಮಯ

ಜೋಸೆಫ್‌ ವಿಜಯ್‌
Latest3 days ago

ಎಂಜಿಆರ್‌, ಜಯಲಲಿತಾ ಹಾದಿಯಲ್ಲಿ ಜೋಸೆಫ್ ವಿಜಯ್‌: ಇಂದು ಕೊಲ್ಲೂರು ಮೂಕಾಂಬಿಕೆ ದರ್ಶನ

ರಾಜ್ಯಸಭೆ
Latest3 days ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest3 days ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ5 days ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest5 days ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest5 days ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest5 days ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌