Vivekananda Jayanti 2023 | ವಿವೇಕ ವಂದನೆ ಕಾರ್ಯಕ್ರಮದಲ್ಲಿ ವಿವೇಕ ಶಪಥ ಬೋಧನೆ; ಏನಿದೆ ಶಪಥದಲ್ಲಿ? - Vistara News

ಧಾರ್ಮಿಕ

Vivekananda Jayanti 2023 | ವಿವೇಕ ವಂದನೆ ಕಾರ್ಯಕ್ರಮದಲ್ಲಿ ವಿವೇಕ ಶಪಥ ಬೋಧನೆ; ಏನಿದೆ ಶಪಥದಲ್ಲಿ?

ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲಿ ವಿಸ್ತಾರ ನ್ಯೂಸ್‌ ಏರ್ಪಡಿಸಿದ್ದ ವಿವೇಕ ವಂದನೆ ಕಾರ್ಯಕ್ರಮದಲ್ಲಿ (Vivekananda Jayanti 2023) ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ವಿವೇಕ ಶಪಥ ಬೋಧಿಸಿದರು.

VISTARANEWS.COM


on

Vivekananda Jayanti 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ (Vivekananda Jayanti 2023) ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಿಮ್ಮ ನೆಚ್ಚಿನ ಸುದ್ದಿ ಸಂಸ್ಥೆ ವಿಸ್ತಾರ ನ್ಯೂಸ್‌ ಶುಕ್ರವಾರ ಏರ್ಪಡಿಸಿದ್ದ “ವಿವೇಕ ವಂದನೆʼʼ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ವಿವೇಕ ಶಪಥ ಬೋಧಿಸಿದರು.

Vivekananda Jayanti 2023

ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ ಸಿ ನಾಗೇಶ್‌, ಸಚಿವರಾದ ಮುರುಗೇಶ್‌ ನಿರಾಣಿ, ಬಿ. ಶ್ರೀರಾಮುಲು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳು “ವಿವೇಕ ಶಪಥʼʼ ಸ್ವೀಕರಿಸಿದರು.

ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಬೋಧಿಸಿದ ಶಪಥ ಹೀಗಿದೆ;

  • ನಾನು ಶೀಲವೇ ನನ್ನ ಪರಮಶಕ್ತಿ ಎಂದು ಅರಿತು ಉತ್ತಮ ಚಾರಿತ್ರ್ಯವಂತನಾಗುತ್ತೇನೆ.
  • ನನ್ನ ಗುರುಹಿರಿಯರು ಹಾಗೂ ಪರಂಪರೆ ತೋರಿದ ಅತ್ಯುನ್ನತ ಆದರ್ಶದೆಡೆ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ನಿರ್ಭೀತಿಯಿಂದ ಋಜುಮಾರ್ಗದಲ್ಲಿ ಜವಾಬ್ದಾರಿಯುತನಾಗಿ ಮುನ್ನಡೆಯುತ್ತೇನೆ.
  • ಸಕಲರೊಂದಿಗೂ ಸೌಜನ್ಯದಿಂದ ವರ್ತಿಸುತ್ತೇನೆ.
  • ಜೀವನೋಪಾಯಕ್ಕಾಗಿ ಯಾವುದೇ ವೃತ್ತಿಯನ್ನು ಕೈಗೊಂಡರೂ ನಿಷ್ಠೆಯಿಂದ ಅದನ್ನು ನಿರ್ವಹಿಸುವುದರ ಮೂಲಕ ನನ್ನ ತಾಯ್ನಾಡಿನ ಗೌರವವನ್ನು ಎತ್ತಿ ಹಿಡಿಯುತ್ತೇನೆ.
  • ನನಗೆ ಸಕಲವನ್ನೂ ನೀಡಿದ ನನ್ನ ತಾಯ್ನಾಡಿನ ಗೌರವಕ್ಕೆ ಯಾರಿಂದಲೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಆದ್ಯಕರ್ತವ್ಯವೆಂದು ತಿಳಿದಿದ್ದೇನೆ.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ಮಕ್ಕಳಿಗೆ ವಿವೇಕಾನಂದರ ವಿವೇಕದ ಹೇಳಿಕೆಯೊಂದನ್ನು ಕೂಡ ಈ ಸಂದರ್ಭದಲ್ಲಿ ಬೋಧಿಸಿದರು. ಆ ಹೇಳಿಕೆ ಹೀಗಿದೆ;

Vivekananda Jayanti 2023

“ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಶಕ್ತಿಯೇ ಆನಂದ, ಶಕ್ತಿಯೇ ಅಮೃತ, ಅದೊಂದೇ ಶಾಶ್ವತ. ದೌರ್ಬಲ್ಯವು ಮರಣವೇ ಸರಿ. ಜನ ಹೇಳುತ್ತಾರೆ, ಅವನನ್ನು ನಂಬು, ಇವನನ್ನು ನಂಬು ಎಂದು. ಆದರೆ ಆದರೆ ನಾನು ಹೆಳುತ್ತೇನೆ. ಮೊದಲು ನಿನ್ನನ್ನು ನೀನು ನಂಬು. ನಿನಗೆ ೩೩ ಕೋಟಿ ದೇವರುಗಳಲ್ಲಿ ನಂಬಿಕೆ ಇದ್ದು, ಪಾಶ್ಚಿತ್ಯರಿಂದ ಎರವಲು ಪಡೆದ ದೇವರುಗಳಲ್ಲಿಯೂ ನಂಬಿಕೆ ಇದ್ದು, ನಿನ್ನಲ್ಲಿ ನಿನಗೆ ನಂಬಿಕೆ ಇರದಿದ್ದರೆ ನೀನು ಏನನ್ನೂ ಸಾಧಿಸಲಾರೆ. ಹಳೆಯ ವೇದಂತ ಹೇಳುತ್ತದೆ, ಯಾರಿಗೆ ದೇವರಲ್ಲಿ ನಂಬಿಕೆ ಇದೆಯೋ ಅವನು ಆಸ್ತಿಕ, ಯಾರಿಗೆ ದೇವರಲ್ಲಿ ನಂಬಿಕೆ ಇಲ್ಲವೋ ಅವನು ನಾಸ್ತಿಕ ಎಂದು. ಆದರೆ ನಾನು ಹೇಳುತ್ತೇನೆ. ಯಾರಿಗೆ ದೇವರಲ್ಲಿ ನಂಬಿಕೆ ಇದ್ದೂ ತನ್ನಲ್ಲಿ ತನಗೆ ನಂಬಿಕೆ ಇಲ್ಲದಿದ್ದರೆ ಅವನು ನಾಸ್ತಿಕʼʼ

ಇದನ್ನೂ ಓದಿ | Vivekananda Jayanti | ನಿಮ್ಮ ಮೇಲೆ ನಂಬಿಕೆಯಿದ್ದರೆ ಮಾತ್ರವೇ ಬದಲಾವಣೆ ಸಾಧ್ಯ: ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಬರದ ಮಧ್ಯೆಯೂ ಭರ್ಜರಿ ಕಾಣಿಕೆ; ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 11 ಕೋಟಿ ರೂ. ಸಂಗ್ರಹ!

ಬರಗಾಲದ ಮಧ್ಯೆಯೂ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ದೇವಿ ದೇಗುಲಕ್ಕೆ ಭಾರಿ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ. ಒಂದೇ ವರ್ಷದಲ್ಲಿ 11 ಕೋಟಿ ರೂ. ಸಂಗ್ರಹವಾಗಿದೆ.

VISTARANEWS.COM


on

Savadatti Yallamma
Koo

ಬೆಳಗಾವಿ: ಕುಂದಾ ನಗರಿ ಬೆಳಗಾವಿ ಸೇರಿ ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೃಷಿ ಚುಟುವಟಿಕೆ ಬಿಡಿ, ಕುಡಿಯಲು ಕೂಡ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿ ಮಧ್ಯೆಯೂ ಬೆಳಗಾವಿ (Belagavi) ಜಿಲ್ಲೆ ಸವದತ್ತಿಯಲ್ಲಿರುವ ಯಲ್ಲಮ್ಮ ದೇವಿ (Savadatti Yallamma Devi Temple) ದೇವಾಲಯಕ್ಕೆ ಭರಪೂರ ಕಾಣಿಕೆ ಹರಿದುಬಂದಿದೆ. ದೇವಾಲಯದ ಹುಂಡಿ ಹಣವನ್ನು (Donation Box) ಎಣಿಕೆ ಮಾಡಲಾಗಿದ್ದು, ಒಂದೇ ವರ್ಷದಲ್ಲಿ 11 ಕೋಟಿ ರೂ. ಕಾಣಿಗೆ ಸಂಗ್ರಹವಾಗಿದೆ.

ಸವದತ್ತಿ ಯಲ್ಲಮ್ಮ ದೇವಿ ದೇವಾಲಯವು ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಹಾಗಾಗಿ, ಬರಗಾಲದ ಮಧ್ಯೆಯೂ ದೇವಾಲಯದ ಹುಂಡಿಯಲ್ಲಿ 2023-24ನೇ ಸಾಲಿನಲ್ಲಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನಗದು, ಚಿನ್ನ, ಬೆಳ್ಳಿಯ ಆಭರಣಗಳನ್ನು ಹುಂಡಿಗೆ ಹಾಕಿ ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.4 ಕೋಟಿ ರೂ. ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ.

ದೇವಾಲಯದ ಹುಂಡಿಯಲ್ಲಿ 2022–23ರಲ್ಲಿ 8.01 ಕೋಟಿ ರೂ. ನಗದು, 66.28 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 15.43 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿ ಒಟ್ಟು 8.83 ಕೋಟಿಯ ಕಾಣಿಕೆ ಸಂಗ್ರಹವಾಗಿತ್ತು. ಇನ್ನು 2023–24ರಲ್ಲಿ ತೀವ್ರ ಬರಗಾಲದ ಮಧ್ಯೆಯೂ 10.22 ಕೋಟಿ ರೂ. ನಗದು, 84.14 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 16.65 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಜತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಕೂಡ ಪತ್ತೆಯಾಗಿವೆ.

ಇದನ್ನೂ ಓದಿ: Koppala News: ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ; 9.29 ಲಕ್ಷ ರೂ. ಸಂಗ್ರಹ

ಶಿವಮೊಗ್ಗ ಜಿಲ್ಲೆ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಕಳೆದ ಡಿಸೆಂಬರ್ ತಿಂಗಳಲ್ಲಿ ಕಾಣಿಕೆ ಹುಂಡಿ ಎಣಿಸಿದಾಗ 31,35,360 ರೂ. ಸಂಗ್ರಹವಾಗಿತ್ತು. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 22,52,700 ರೂ. ಕಾಣಿಕೆ ಸಂಗ್ರಹವಾಗಿದೆ, ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Hindu Temple: ಜಾತ್ರೆ, ಉತ್ಸವಗಳಲ್ಲಿ ಹಿಂದುಯೇತರರ ಅಂಗಡಿಗೆ ಅನುಮತಿ ನೀಡಬೇಡಿ; ಜಿಲ್ಲಾಧಿಕಾರಿಗೆ ಮನವಿ

Hindu Temple: ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದುಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನಿರಾಕರಿಸಿ ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬೆಂಗಳೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

VISTARANEWS.COM


on

bengaluru dc
Koo

ಬೆಂಗಳೂರು: ದೇವಸ್ಥಾನದ (Hindu Temple) ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದುಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನಿರಾಕರಿಸಿ ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಯಿತು.

ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ಅವರು ಮಾತನಾಡಿ, ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಶ್ರದ್ಧಾ ಕೇಂದ್ರ. ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವವಿದೆ. ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜೆ, ಅರ್ಚನೆ, ಹೋಮ-ಹವನ ಮುಂತಾದ ಧಾರ್ಮಿಕ ವಿಧಿಗಳಿಂದ ದೇವಸ್ಥಾನದಲ್ಲಿ, ದೇವತೆಗಳ ಸ್ಥಾನದಲ್ಲಿ ಸಾತ್ವಿಕತೆ ನಿರ್ಮಾಣವಾಗಿರುತ್ತದೆ. ಅದರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಕ್ತ, ವಿಶ್ವಸ್ಥರ ಕರ್ತವ್ಯ. ಇದರ ಸಂರಕ್ಷಣೆಗಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 1997ರ ಕಾಯಿದೆಗೆ 2002ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.

ಈಗ ಮಾರ್ಚ್, ಏಪ್ರಿಲ್‌ನಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳ ವಾರ್ಷಿಕ ಜಾತ್ರೆಯು ಪ್ರಾರಂಭವಾಗುತ್ತಿದೆ. ಉದಾ: ಬೆಂಗಳೂರು ಕರಗ, ಬನ್ನೇರುಘಟ್ಟ ರಸ್ತೆಯಲ್ಲಿನ ಚಂಪಕ ರಾಮ ದೇವಸ್ಥಾನ ಜಾತ್ರೆ. ಈ ವಾರ್ಷಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೊಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರ ದುರುಪಯೋಗವನ್ನು ಪಡೆಯಲು ಅನ್ಯ ಸಮುದಾಯದವರು, ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ದೇವಸ್ಥಾನದ ಪ್ರಾಂಗಣ, ಪರಿಸರದಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡುವುದು ಗಮನಕ್ಕೆ ಬರುತ್ತದೆ. ಇದರಿಂದ ದೇವಸ್ಥಾನದ ಸಾತ್ತ್ವಿಕ ವಾತಾವರಣವು ಹಾಳಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 1997ರ ಕಾಯಿದೆಯ ಕಲಂ 29 (8)ರಲ್ಲಿ ಹಿಂದೂ ದೇವಸ್ಥಾನದ ಸಮೀಪದ ಜಮೀನು, ಕಟ್ಟಡ, ನಿವೇಶನಗಳು ಸೇರಿ ಯಾವುದೇ ಸ್ವತ್ತನ್ನು ಹಿಂದೂಯೇತರರಿಗೆ ನೀಡಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಂದೂ ದೇವಸ್ಥಾನಗಳ ಜಾಗವನ್ನು ಅಕ್ರಮವಾಗಿ ಕಬಳಿಸಿ, ಅಲ್ಲಿ ಹಿಂದೂಯೇತರರು ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅಂಗಡಿಯನ್ನು ಹಾಕಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ಅಧಿಕಾರಿಗಳು ದೇವಸ್ಥಾನಗಳ ಜಾಗದ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಬೇಜವ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಮೋಹನ್ ಗೌಡ ಅವರು ತಿಳಿಸಿದರು.

ಈಗಲಾದರೂ ಇಲಾಖೆಯು ಎಚ್ಚೆತ್ತುಕೊಂಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಜಾಗದಲ್ಲಿ ಧಾರ್ಮಿಕ ದತ್ತಿ ಕಾಯಿದೆಗೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿಯನ್ನು ಹಾಕಿದ್ದರೆ ಕೂಡಲೇ ತೆರವುಗೊಳಿಸಬೇಕು. ತುಂಡು ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಬಾರದು. ಅಷ್ಟೇ ಅಲ್ಲದೇ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು, ಹಿಂದೂ ಧಾರ್ಮಿಕ ನಂಬಿಕೆಯನ್ನು ಗೌರವಿಸದವರಿಗೆ ಅಂಗಡಿಯನ್ನು ಹಾಕಲು ಅವಕಾಶ ನೀಡದಂತೆ ವಿಶೇಷ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಧರ್ಮ ದಂಗಲ್‌ | ಮುಸ್ಲಿಂ ವ್ಯಕ್ತಿಯಿಂದ ಹಿಂದು ಹೆಸರಲ್ಲಿ ಅಂಗಡಿ ಆರೋಪ; ಹಿಂದು ಸಂಘಟನೆಗಳ ಆಕ್ರೋಶ, ಪೊಲೀಸ್‌ ದೂರು

ಈ ವೇಳೆ ನ್ಯಾಯವಾದಿ ಪ್ರಸನ್ನ ಡಿ.ಪಿ., ರಾಘವೇಂದ್ರಾಚಾರ್, ಶ್ಯಾಮಸುಂದರ್, ಆರ್ಚಕ ಎಂ. ಭಾಗ್ವತ್, ಹಿಂದೂ ಜನಜಾಗೃತಿ ಸಮಿತಿಯ ನೀಲೇಶ್ವರ ಬಿ.ಎಂ ಮತ್ತಿತರರು ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Tumkur News : ತುಮಕೂರಿನಲ್ಲಿ ಮತ್ತೆ ದುರಂತ; ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ

Fire Accident : ನಿನ್ನೆಯಷ್ಟೇ ತುಮಕೂರಲ್ಲಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದು ಅರ್ಚಕ ಹಾಗೂ ಅವರ ಮಗ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ.

VISTARANEWS.COM


on

By

tumkur News Kondothsava in Temple
Koo

ತುಮಕೂರು: ದೇವರನ್ನು ಹೊತ್ತು ಕೊಂಡ ಹಾಯುವಾಗ (Kondothsava in Temple) ಅರ್ಚಕ ಕಾಲು ಜಾರಿ (Fire Accident) ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ಘಟನೆ (Tumkur News) ನಡೆದಿದೆ.

ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಚಕ ಮಧು ತಲೆ ಮೇಲೆ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಓಡಿ ಬಂದಿದ್ದಾರೆ. ಆದರೆ ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅದೃಷ್ಟವಶಾತ್‌ ಬೆಂಕಿ ಕೆಂಡದ ಮೇಲೆ ಬೀಳದೇ ಪಕ್ಕಕ್ಕೆ ಎಗರಿದ್ದಾರೆ.

ಇದೇ ವೇಳೆ ಕೈಯಲ್ಲಿ ಹಿಡಿದುಕೊಂಡಿದ್ದ ದೇವರ ಮೂರ್ತಿಯನ್ನು ಕೊಂಡಕ್ಕೆ ಬೀಳಿಸಿದ್ದಾರೆ. ಅರ್ಚಕ ಮಧುಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಂಡದೊಳಗೆ ಬಿದ್ದ ದೇವಿಯ ಮೂರ್ತಿಯನ್ನು ಅಲ್ಲಿದ್ದ ಸ್ಥಳೀಯರು ಮೇಲೆತ್ತಿದ್ದಾರೆ.

ಸುಟ್ಟಗಾಯಗಳಾದ ಹಿನ್ನೆಲೆಯಲ್ಲಿ ಅರ್ಚಕ ಮಧುನನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Water Crisis: ಇನ್ನೆರಡು ತಿಂಗಳು ಕಾವೇರಿ ನೀರು ಹೊಸ ಕನೆಕ್ಷನ್‌ ಇಲ್ಲ; 11 ಸಾವಿರ ಮಂದಿ ಕಂಗಾಲು

ದೇವರನ್ನು ಹೊತ್ತು ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ, ಮಗ

ತುಮಕೂರು: ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಕೊಂಡೋತ್ಸವದ (Kondothsava in Temple) ವೇಳೆ ಬೆಂಕಿ ಕೊಂಡಕ್ಕೆ ಬಿದ್ದು ಗಾಯಗೊಳ್ಳುವ ಘಟನೆಗಳು (Fire accident) ಹೆಚ್ಚುತ್ತಿವೆ. ಎರಡು ದಿನದ ಹಿಂದಷ್ಟೇ ಮಂಡ್ಯದಲ್ಲಿ ವೀರಗಾಸೆ ಕಲಾವಿದರೊಬ್ಬರು ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದರು. ಇದೀಗ ತುಮಕೂರಿನಲ್ಲಿ ಅಂಥಹುದೇ ಇನ್ನೊಂದು ಘಟನೆ ನಡೆದು ಅರ್ಚಕರು ಮತ್ತು ಅವರ ಮಗ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆಯ (Tumkur News) ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಶ್ರೀ ದಂಡಿನಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ನಡೆದ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಂಡವನ್ನು ಸಿದ್ಧಪಡಿಸಿ ಅದರ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ ಅದರ ಮೇಲೆ ದೇವರನ್ನು ಹೊತ್ತ ಅರ್ಚಕರು ಓಡುವುದು ಕ್ರಮವಾಗಿದೆ.

ಈ ವೇಳೆ ದೇವರನ್ನು ಹೊತ್ತ ಅರ್ಚಕ ವೆಂಕಟಪ್ಪ ಅವರು ಕೆಂಡದ ಮೇಲೆ ಓಡುತ್ತಿದ್ದಂತೆಯೇ ಮುಗ್ಗರಿಸಿ ಬಿದ್ದರು. ಅವರ ಮಗ ಕೃಷ್ಣಮೂರ್ತಿ ಬೆಂಕಿಯ ಮೇಲೆ ಬಿದ್ದರು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದರು. ತೀವ್ರ ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ಪೂಜಾರಿ; ಮತ್ತೊಬ್ಬ ಅರ್ಚಕ ಜಸ್ಟ್‌ ಮಿಸ್‌

ಮಂಡ್ಯ: ಬಸವೇಶ್ವರ ಕೊಂಡೋತ್ಸವದ ವೇಳೆ ಕೊಂಡ ಹಾಯುವಾಗ ವೀರಗಾಸೆ ಪೂಜಾರಿಯೊಬ್ಬರು ಎಡವಿ ಬಿದ್ದ ಘಟನೆ (Fire Accident) ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದರಿಂದ ಮೈ-ಕೈ ಸುಟ್ಟುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವದ ಅಗ್ನಿ ಕೊಂಡೋತ್ಸವದಲ್ಲಿ ಈ ಅವಘಡ (Fire Accident) ನಡೆದಿದೆ. ಹುಳಗನಹಳ್ಳಿ ಗ್ರಾಮದಲ್ಲಿ ಬಸವೇಶ್ವರನ ಕೊಂಡೋತ್ಸವ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಬೆಂಕಿದಿಂದ ಮೇಲೆತ್ತಿದ್ದಾರೆ.

ಇದಾದ ಮೇಲೂ ಮುಂಜಾಗ್ರತಾ ವಹಿಸಿದೇ ಮತ್ತೊಬ್ಬ ಪೂಜಾರಿ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಮುಂದಾಗಿದ್ದಾರೆ. ಈ ವೇಳೆ ಆತನೂ ಕೆಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೆ ಬಿಟ್ಟು ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಪೂಜಾರಿ ಪಾರಾಗಿದ್ದಾರೆ. ಇನ್ನೂ ಗಾಯಗೊಂಡಿರುವ ವೀರಗಾಸೆ ಪೂಜಾರಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Holi 2024: ಭಾವ್ಯಕ್ಯತೆಯನ್ನು ಬೆಸೆಯುವ ವಿಶಿಷ್ಟ ಹಬ್ಬ ಹೋಳಿ ಹುಣ್ಣಿಮೆ

ಭಾರತ ಸಂಪ್ರದಾಯವನ್ನು ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೇ (Holi 2024) ಮಹತ್ವದ್ದು.

VISTARANEWS.COM


on

Person's Hand Full Of Colored Powder
Koo
Naveenshastri-Puranik

:: ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ.ಪುರಾಣಿಕ
ಲೇಖಕರು ಸಂಸ್ಕೃತ ಉಪನ್ಯಾಸಕರು, ಅಂಕಣಕಾರರು ಹಾಗೂ ಖ್ಯಾತ ಜ್ಯೋತಿಷಿ

ಭವ್ಯ ಭಾರತದ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠತೆಯನ್ನು ಸಾರುವ ಪುರಾಣ ಇತಿಹಾಸಗಳ ಪುಟಗಳನ್ನು ನೋಡುತ್ತಾ ಅನಾದಿ ಕಾಲದಿಂದಲೂ ನಡೆದು ಬಂದಿರುವ ರೂಢಿಗಳನ್ನು ಆಚರಿಸುವ ಮೂಲಕ ಈ ಹಬ್ಬ ಹರಿದಿನಗಳು ಮನುಷ್ಯರ ಮನಸ್ಸನ್ನೂ ಸದಾ ನೆಮ್ಮದಿ ಮತ್ತು ಸಂತೋಷವಾಗಿ ಇರಲೆಂದು, ಕಾಲಕಾಲಕ್ಕೆ ಬದಲಾಗುವ ಋತು ನಿಯಮಗಳಿಗೆ ಅನುಗುಣವಾಗಿ ನಮ್ಮ ಹಿರಿಯರು ಭಗವಂತನ ಪ್ರತಿರೂಪವನ್ನು ಸೃಷ್ಟಿಯಲ್ಲಿ ದೃಷ್ಟಿಯಿಟ್ಟು ಮಾನವ ಜನಾಂಗದ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ್ದಾರೆ. ಪಂಚಭೂತಗಳಲ್ಲಿ ದೇವರನ್ನು ಹುಡುಕಿದ್ದಾರೆ. ಹಿಗಾಗಿ ಭಾರತ ಪ್ರತ್ಯಕ್ಷ ಸಂಸ್ಕೃತಿಯ ಜೀವಂತ ಸ್ವರ್ಗದ ಪ್ರತಿ ರೂಪ. ಭಾರತ ಸಂಪ್ರದಾಯವನ್ನ ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೆ ಸಂಪ್ರದಾಯ. ಪುರಾಣದ ಕಾಲದಿಂದಲೂ ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಮಾನವೀಯತೆಯ ಭಾವನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕತೆಯನ್ನು ಪ್ರತಿಬಿಂಬಿಸುವ ಬಾಂಧವ್ಯದ ವಿವಿಧ ಬಣ್ಣಗಳ ಓಕುಳಿಯಲ್ಲಿ (Holi 2024) ಮಿಂದು ನಾವೆಲ್ಲರೂ ಒಂದೇ ಎಂಬ ಭಾವನೆ ಸಾರುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುವುದಾಗಿದೆ.

Holi colors

ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಈ ಹೋಳಿ ಹಬ್ಬ. ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಅನೇಕ ಕಡೆ ವಿವಿಧ ಪದ್ಧತಿಗನುಣವಾಗಿ ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಈ ಹೋಳಿ ಹಬ್ಬದ (Holi 2024) ವಿಶೇಷತೆ.

Holi

ಹೋಳಿ ಹಬ್ಬದ ಹಿಂದಿನ ಪುರಾಣದ ಕಥೆಗಳು

ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ.
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸರಾಜ ಬ್ರಹ್ಮನ ವರ ಪಡೆದು,ಆ ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಯೋಗ ಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ(ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರೂ ಸಹ ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ,ಶಿವನ ತಪೋಭಂಗ ಮಾಡುತ್ತಾನೆ. ಇದರಿಂದ ಕೆರಳಿ ತನ್ನ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು,ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ನಾರದ ಪುರಾಣದಲ್ಲಿ ಉಲ್ಲೇಖವಾಗಿರುವ ಮತ್ತೊಂದು ಕಥೆ ಹೀಗಿದೆ

ಹಿಂದೆ ಹಿರಣ್ಯಕಶಿಪು ಎಂಬ ರಾಕ್ಷಸ ರಾಜನಿದ್ದನು. ತಾನು ಪಡೆದ ವರಗಳ ಆಧಾರದ ಮೇಲೆ ದುರಹಂಕಾರಿ ಹಿರಣ್ಯಕಶಿಪು ‘ತಾನೆ ದೇವರೆಂದು’ ಮೆರೆಯುತ್ತಿದ್ದನು. ತನ್ನನ್ನೇ ಪೂಜಿಸಬೇಕು ಎಂದು ತ್ರಿಲೋಕದಲ್ಲಿ ಆಜ್ಞೆಯನ್ನು ಹೊರಡಿಸಿದನು. ಆದರೆ ಅವನ ಮಗನಾದ ಪ್ರಹ್ಲಾದನು ಮಹಾನ್ ವಿಷ್ಣು ಭಕ್ತನಾಗಿದ್ದನು! ಇದನ್ನು ಸಹಿಸದ ಹಿರಣ್ಯಕಶಿಪು ಪ್ರಹ್ಲಾದನ ಭಕ್ತಿಯನ್ನು ಮುರಿಯಲು ಅನೇಕ ಪ್ರಯಾಸಗಳನ್ನು ಮಾಡಿ ಕೊನೆಗೆ ಅವನಿಗೆ ಮೃತ್ಯುದಂಡವನ್ನು ವಿಧಿಸಿದನು. ಹಿರಣ್ಯಕಶಿಪುವಿನ ಸಹೋದರಿ ‘ಹೋಲಿಕಾ’ ಎಂಬವಳಿಗೆ ಒಂದು ವಿಶೇಷ ವರವಿತ್ತು, ಅದೇನೆಂದರೆ ಅವಳಿಗೆ ಅಗ್ನಿಸ್ಪರ್ಶವಾಗುತ್ತಿರಲಿಲ್ಲ. ಆದುದರಿಂದ ಒಂದು ದಿನ ಹಿರಣ್ಯಕಶಿಪು, ಅವಳನ್ನು ಒಂದು ಚಿತೆಯ ಮೇಲೆ ಏರಿಸಿ, ಬಾಲಕ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿ ಆ ಚಿತೆಗೆ ಬೆಂಕಿಯನ್ನು ಹಚ್ಚಿಸಿದನು! ಆದರೆ ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದ ಪ್ರಹ್ಲಾದನ ರಕ್ಷಣೆಗೆ ಧಾವಿಸಿಬಂದ ಭಗವಂತನು, ಹೋಲಿಕಾ ಭಾಸ್ಮವಾಗುವ ಹಾಗೆ ಮಾಡಿ ಪ್ರಹ್ಲಾದನನ್ನು ರಕ್ಷಿಸಿದನು!ಹೋಲಿಕಾ ದಹನದ ಕಾರಣ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

holi

ಭವಿಷ್ಯಪುರಾಣದಲ್ಲಿಯು ಸಹ ಹೋಳಿಯ ಕುರಿತಾಗಿ ಹೀಗೆ ಉಲ್ಲೇಖಿಸಲಾಗಿದೆ

ಒಂದು ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ಒಬ್ಬ ರಾಕ್ಷಸಿಯು ಊರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಹಾಗೆಯೇ ಅವಳು ರೋಗಗಳನ್ನು ಸಹ ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು, ಆದರೆ ಅವಳು ಹೋಗಲಿಲ್ಲ. ಕೊನೆಗೆ ಜನರು ಅವಾಚ್ಯ ಮಾತುಗಳಿಂದ ಬೈಯುತ್ತಾ ಶಾಪ ಕೊಟ್ಟದ್ದಲ್ಲದೇ ಎಲ್ಲೆಡೆಯೂ ಬೆಂಕಿಯನ್ನು ಹಚ್ಚಿ ಅವಳನ್ನು ಹೆದರಿಸಿದರು. ಅದರಿಂದಾಗಿ ಅವಳು ಊರಿನ ಹೊರಗೆ ಓಡಿಹೋದಳು ಎಂದು ಉಲ್ಲೇಖಿಸಲಾಗಿದೆ.

ಶ್ರೀಕೃಷ್ಣನ ಪ್ರಸ್ತಾಪ

ಶ್ರೀಕೃಷ್ಣ ಪರಮಾತ್ಮನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಎದೆ ಹಾಲಿನೊಂದಿಗೆ ರಕ್ತವನ್ನು ಸಹ ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ಎಂಬ ರಾಕ್ಷಸಿಯನ್ನು ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.

ಮೇಲೆ ಹೇಳಿದ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.

Holi Fashion 2024

ಹೋಳಿ ಉತ್ಸವ ಆಚರಿಸುವ ವಿವಿಧ ಪದ್ಧತಿಗಳು

ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರಿಗೆ ,ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.
ಉತ್ತರ ಭಾರತದಲ್ಲಿ ಇದನ್ನು ಹೋರಿ, ದೋಲಾಯಾತ್ರಾ ಎಂದು ಕರೆಯುತ್ತಾರೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಶಿಮಗಾ, ಹೋಳಿ, ಹುತಾಶನಿ ಮಹೋತ್ಸವ, ಹೋಲಿಕಾದಹನ ಮತ್ತು ದಕ್ಷಿಣದಲ್ಲಿ ಕಾಮದಹನ ಎಂದು ಸಹ ಕರೆಯುತ್ತಾರೆ. ಬಂಗಾಲದಲ್ಲಿ ಹೋಳಿಹಬ್ಬವನ್ನು ದೌಲಾಯಾತ್ರಾ ಎಂದು ಆಚರಿಸುತ್ತಾರೆ. ಇದನ್ನು ವಸಂತೋತ್ಸವ ಅಥವಾ ವಸಂತಾಗಮನೋತ್ಸವ,ಅಂದರೆ ವಸಂತ ಋತುವಿನ ಆಗಮನದ ಪ್ರಯುಕ್ತ ಆಚರಿಸುವ ಉತ್ಸವವೆಂದು ಹೆಸರಿಸಲಾಗಿದೆ.
ಇನ್ನೂ ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಭಾಂಗ್ ಪಾನೀಯವನ್ನು ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ವ್ಯಕ್ತಿ ಒಂದು ರೀತಿಯ ಗುಂಗಿಗೆ ಒಳಗಾಗುತ್ತಾನೆ. ಆಗ ವ್ಯಕ್ತಿಯಲ್ಲಿ ಎಲ್ಲಾ ರೀತಿಯ ನಿರ್ಬಂಧಗಳು ಮರೆಯಾಗುತ್ತವೆ. ದ್ವೇಷಗಳನ್ನು ಮರೆಸಿ, ಉತ್ಸಾಹವನ್ನು ಹೆಚ್ಚಿಸುವುದು. ಹಾಗಾಗಿ ಹಬ್ಬದ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಭಾಂಗ್ ಎಲೆಯ ರಸವನ್ನು ಕುಡಿದು ಹಬ್ಬವನ್ನು ಆಚರಿಸುತ್ತಾರೆ.
ಕಾಠ್ಮಂಡುವಿನಲ್ಲಿ ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣದ ನೀರನ್ನು ತುಂಬಿದ ಪಿಚಕಾರಿ, ನೀರಿನ ಬಲೂನು, ವಿವಿಧ ಬಣ್ಣಗಳಿಂದ ಕೂಡಿದ ಬಿದಿರಿನ ಕಡ್ಡಿಗಳಿಂದ ಅಲಂಕಾರವನ್ನು ಮಾಡಿ ಹನುಮಂತನ ದೇವಾಲಯ ನಿರ್ಮಿಸುತ್ತಾರೆ. ಇದು ಹಬ್ಬದ ಆರಂಭವನ್ನು ಸೂಚಿಸುವುದು. ಇಲ್ಲಿ ಒಂದು ವಾರ ಮುಂಚಿತವಾಗಿಯೇ ಬಣ್ಣದ ನೀರಿನ ಸಿಂಚನಗಳು ಸಾಮಾನ್ಯವಾಗಿ ಇರುತ್ತವೆ. ಹಿಂದೂ ಧರ್ಮದಲ್ಲಿ ಹೋಳಿಯ ಆಚರಣೆಯು 16 ದಿನಗಳ ಕಾಲ ವಿಶೇಷ ಆಚರಣೆಯನ್ನು ಸೂಚಿಸುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೂ ಮುಂಚೆ 16 ದಿನಗಳ ಕಾಲ ವಿಶೇಷ ಅಲಂಕಾರ, ವೇಷ-ಭೂಷಣದಲ್ಲಿ ಮನೆ ಮನೆಗೆ ಹೋಗಿ ನೃತ್ಯವನ್ನು ಮಾಡುತ್ತಾರೆ. ಹಬ್ಬದ ದಿನ ಆ ಬಣ್ಣಗಳನ್ನು ತೆಗೆದು ಕಾಮದೇವನನ್ನು ದಹಿಸುವುದರ ಮೂಲಕ ಹಬ್ಬವನ್ನು ಆಚರಿಸುವರು.
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಸಹ ಆಚರಿಸುತ್ತಾರೆ.

Holi Fashion 2024

ನಮ್ಮಲ್ಲಿ ಆಚರಣೆ ಹೇಗೆ?

ನಮ್ಮಲ್ಲಿ ದೇವಸ್ಥಾನದ ಮುಂದೆ ಅಥವಾ ಊರ ಮುಂದಿನ ಅನುಕೂಲತೆ ಇರುವ ಬಯಲು ಜಾಗೆಯಲ್ಲಿ,ಹುಣ್ಣಿಮೆಯ ಸಾಯಂಕಾಲದಿಂದ ಹಿಡಿದು ಬೆಳಗಿನ ಜಾವ ಕಾಮದಹನ ಮಾಡಿದ ನಂತರ ಹೋಳಿಯನ್ನು ಆಡುವ ಪದ್ಧತಿ ಕೆಲವುಕಡೆ
ಸ್ಥಾನ ಮತ್ತು ಸಮಯಕ್ಕನುಣವಾಗಿ ಆಚರಿಸುವ ಪದ್ದತಿಯು ಸಹ ಇದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ಆಚರಿಸಲಾಗುತ್ತದೆ.

ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡದ ಗರಿಗಳು, ಅಡಿಕೆಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಹೊಂದಿಸಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು ಮಾಡುತ್ತಾರೆ. ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಿ. ನಂತರ ‘ಹೋಲಿಕಾಯೈ ನಮಃ’। ಎಂದು ಹೇಳಿ ಹೋಳಿಯನ್ನು ಹೊತ್ತಿಸುತ್ತಾರೆ. ಹೋಳಿಯು ಹೊತ್ತಿದ ನಂತರ ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಿದ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಿ. ಆ ರಾತ್ರಿಯನ್ನು ನೃತ್ಯಗಾಯನಗಳಲ್ಲಿ ಕಳೆದು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸುತ್ತಾರೆ. ಆ ಹೋಳಿಯ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ ಎಂಬುದು ನಂಬಿಕೆ (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ) ನಂತರ ಉಳಿದ ಬೂಧಿಯನ್ನುವಿಸರ್ಜಿಸುವ ಪದ್ಧತಿ ಇದೆ. ಅನಂತರ ಹೋಳಿಯ ಪ್ರಾರ್ಥನೆ ಮಾಡುತ್ತಾರೆ.ಅದೇ ಧೂಳಿವಂದನ.

ಧೂಳಿವಂದನ
ಫಾಲ್ಗುಣ ಕೃಷ್ಣ ಪ್ರತಿಪದೆಯಂದು
ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಕರೇಣ ಚ।
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ॥

ಅರ್ಥ

ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ, ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು ಎಂದು.

holi colours

ರಂಗಪಂಚಮಿ

ಫಾಲ್ಗುಣ ಕೃಷ್ಣ ಪಂಚಮಿ, ಬಹಳ ಕಡೆಗಳಲ್ಲಿ ಹೋಳಿಯ ಮರುದಿನವಾಗಲಿ ಅಥವಾ ರಂಗಪಂಚಮಿಯ ದಿನ ಹೋಳಿ ಉತ್ಸವ ಆಚರಿಸಲಾಗುತ್ತದೆ. ಈ ದಿನದಂದು ಇತರರ ಮೇಲೆ ಗುಲಾಲು,ಬಣ್ಣದ ನೀರು ಮುಂತಾದವುಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಹೋಳಿದಹನಕ್ಕೆ ಬಳಸಬಹುದಾದ ಪದಾರ್ಥಗಳು

ಹೋಲಿಕಾ ದಹನದ ಸಂದರ್ಭದಲ್ಲಿ, ಆಯ್ದ ಕೆಲವು ಮರಗಳ ಕಟ್ಟಿಗೆಯನ್ನು ಮಾತ್ರ ಸುಡಬೇಕು ಎಂಬುದು ಪ್ರತಿತಿ. ಅವು ಯಾವುವೆಂದರೆ ಔಡಲ ಮರ ಅಥವಾ ಕ್ಯಾಸ್ಟರ್ ಮತ್ತು ಹತ್ತಿ ಮರದ ಕಟ್ಟಿಗೆ. ಈ ಸಮಯದಲ್ಲಿ ಔಡಲ ಮತ್ತು ಹತ್ತಿ ಎರಡು ಮರಗಳ ಎಲೆಗಳು ಉದುರುತ್ತವೆ. ಹಾಗಾಗಿ ಅವುಗಳನ್ನು ಸುಡದಿದ್ದರೆ, ಅವುಗಳಲ್ಲಿ ಕೀಟಗಳಾಗುತ್ತವೆ. ಈ ಕಾರಣದಿಂದ ಈ ಎರಡೂ ಮರಗಳ ಕಟ್ಟಿಗೆಯನ್ನು ಹೋಲಿಕಾ ದಹನದಲ್ಲಿ ಬಳಸುವುದು ವಾಡಿಕೆ.

cow dung

ಹಸುವಿನ ಸಗಣಿಯಿಂದ ತಯಾರಿಸಿದ ಭೆರಣಿ

ಹೋಲಿಕಾ ದಹನದ ವೇಳೆ ಬಳಸಲಾಗುತ್ತದೆ, ಗೋವಿನ ಸಗಣಿಯಿಂದ ತಯಾರಿಸಿದ ಭೆರಣಿ(ಕುಳ್ಳು)ನ್ನು ಬಳಸಿದರೆ ಶುಭ ಫಲ ಸಿಗುತ್ತದೆ ಎನ್ನುತ್ತಾರೆ.ಇದರ ಹಿಂದೆ ಇರುವ ವೈಜ್ಞಾನಿಕ ಉದ್ದೇಶವಿಷ್ಟೇ ಕುಳ್ಳಿನಿಂದ ಬರುವ ಧೂಮವು ವಾತಾವರಣ ಶುದ್ಧವಾಗಿಡುತ್ತದೆ ,ಹೋಲಿಕಾ ಬೆಂಕಿಯಲ್ಲಿ ಕಳೆಗಳನ್ನು ಸಹ ಸುಡಲಾಗುತ್ತದೆ. ಹೋಲಿಕಾ ದಹನ ದುಷ್ಟತೆಯ ಅಂತ್ಯವನ್ನು ಪ್ರತಿನಿಧಿಸುತ್ತದೆ.

Holi 2024

ಭಾವ್ಯಕ್ಯತೆಯನ್ನು ಸೂಚಿಸುವ ಹಬ್ಬ

ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುವ, ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.
ಫಾಲ್ಗುಣ ಮಾಸದ ಫೆಬ್ರುವರಿಯಿಂದ ಮಾರ್ಚ್ ನಡುವೆ ಬರುವ ಸಮಯದಲ್ಲಿ ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.
ಈ ಪುರಾಣ ಕಥೆಯ ಹಿನ್ನೆಲೆಯಲ್ಲಿಯೇ ಇಂದಿಗೂ ಸಹ ಕೆಲವು ಹಳ್ಳಿಗಳಲ್ಲಿ ಬೆಂಕಿಯ ಕೆಂಡದ ಮೇಲೆ ನಡೆದು ಸಾಗುವುದು, ಹಸುವನ್ನು ನಡೆಸುವ ಆಚರಣೆಯನ್ನು ಅನುಸರಿಸುತ್ತಾರೆ. ಬೆಂಕಿಯಲ್ಲಿ ನಡೆದು ಸಾಗಿದ ವ್ಯಕ್ತಿಗಳ ಕಾಲಿನಲ್ಲಿ ಒಂದೂ ಸುಟ್ಟ ಗುಳ್ಳೆಗಳು ಇರುವುದಿಲ್ಲ. ಅದನ್ನು ಒಂದು ದೈವ ಲೀಲೆ ಎಂದು ಪರಿಗಣಿಸಲಾಗುವುದು. ಈ ರೀತಿಯ ಅನೇಕ ಆಚರಣೆಗಳು ಶ್ರೇಷ್ಠವಾದ ನಂಬಿಕೆಯ ಮೂಲಕ ಇಂದಿಗೂ ಕೆಲವು ಪದ್ಧತಿಗಳು ಜೀವಂತವಾಗಿರುವುದು ವಿಶೇಷ. ಕೆಲವೆಡೆ ಕಾಮದೇವನನ್ನು ಸುಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು, ನೃತ್ಯ ಮಾಡುವುದು, ಆತ್ಮೀಯರಿಗೆ ಬಣ್ಣವನ್ನು ಬಳಿಯುವ ಆಚರಣೆಯನ್ನು ಕೈಗೊಳ್ಳುವುದು. ವಿವಿಧ ಕಥೆ ಹಾಗೂ ಆಚರಣೆಯಿಂದ ಕೂಡಿದ್ದರೂ ಏಕತೆ ಹಾಗೂ ಸಂತೋಷದ ಆಚರಣೆಯ ಮೂಲಕ ಬಣ್ಣದ ಹಬ್ಬವನ್ನು ಆಚರಿಸಲಾಗುವುದು.

Continue Reading
Advertisement
Juce Jacking
ಪ್ರಮುಖ ಸುದ್ದಿ7 mins ago

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Lok Sabha Election 2024
ಕರ್ನಾಟಕ29 mins ago

Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

Summer Nail Colours Trend
ಫ್ಯಾಷನ್51 mins ago

Summer Nail Colours Trend: ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Lok Sabha Election 202455 mins ago

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Board Exam
ಬೆಂಗಳೂರು60 mins ago

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

income Tax - how to save tax
ಪ್ರಮುಖ ಸುದ್ದಿ1 hour ago

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

Utthana Essay Competition 2023
ಕರ್ನಾಟಕ2 hours ago

Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Lok Sabha Election 20242 hours ago

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Kodagu University
ಕೊಡಗು2 hours ago

Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

Alia Bhatt wore diamond jewellery
ಸಿನಿಮಾ2 hours ago

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌