World Agnihotra Day : ಅಗ್ನಿಹೋತ್ರ; 'ಇದಂ ನ ಮಮ'-ಇದು ನನಗಾಗಿ ಅಲ್ಲ! - Vistara News

ಧಾರ್ಮಿಕ

World Agnihotra Day : ಅಗ್ನಿಹೋತ್ರ; ‘ಇದಂ ನ ಮಮ’-ಇದು ನನಗಾಗಿ ಅಲ್ಲ!

ಇಂದು ವಿಶ್ವ ಅಗ್ನಿಹೋತ್ರ ದಿನ (World Agnihotra Day). ವಾತಾವರಣವನ್ನು ಶುದ್ಧವಾಗಿಸುವ, ದೇಹ ಮತ್ತು ಮನಸ್ಸುಗಳಿಗೆ ಚೈತನ್ಯವನ್ನು ನೀಡುವ ಅಗ್ನಿಹೋತ್ರದ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

agnihotra day significance, puja vidhi and more about this day in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆ. ಎನ್‌. ಶೈಲೇಶ್‌ ಹೊಳ್ಳ
ಇಂದು ವಿಶ್ವ ಅಗ್ನಿಹೋತ್ರ ದಿನ. (World Agnihotra Day). 1984ರಂದು ಪ್ರಪಂಚವನ್ನೇ ನಿಬ್ಬರಗೊಳಿಸಿದ್ದ ಈ “ಅಗ್ನಿಹೋತ್ರ” ಕ್ರಿಯೆ ಯಜ್ಞಗಳಲ್ಲೇ ಮೊಟ್ಟ ಮೊದಲ ಕರ್ಮ ಮತ್ತು ನಿತ್ಯಕರ್ಮ ಕಾರ್ಯಗಳಲ್ಲಿ ಒಂದು. ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಇದರ ಮೂಲ ತತ್ವ. ಇದರ ಮೂಲವು ವೇದಕಾಲದಲ್ಲಿಯೇ ಲಭ್ಯವಿದ್ದು, ಪುರಾತನ ಋಷಿಮುನಿಗಳು ಆಚರಿಸುತ್ತಿದ್ದ ಯಾಗ, ರಾಜಮಹಾರಾಜರು ಅರಮನೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಹೋಮ, ಹವನಗಳು ಅಗ್ನಿಹೋತ್ರದ ತತ್ವವನ್ನು ಸಾರುತ್ತವೆ. ಆಗಿನ ಕಾಲದಲ್ಲಿ ಇಂತಹ ಯಾಗಗಳು ಲೋಕ ಕಲ್ಯಾಣಕ್ಕಾಗಿ ಆಚರಿಸಲ್ಪಡುತ್ತಿದ್ದವು.

ಅಗ್ನಿಹೋತ್ರ ಕ್ರಿಯೆಯ ಆಚರಣೆಯಲ್ಲಿ ತಾಮ್ರದ ಪಾತ್ರೆಯನ್ನೇ ಬಳಸಬೇಕೆಂದಿದೆ. ಅದಕ್ಕೆ ನಿಶ್ಚಿತವಾದ ಕಾರಣವು ಇದೆ. ತಾಮ್ರಕ್ಕೆ ಅಣು ಜೀವಿಗಳನ್ನು ನಾಶ ಮಾಡುವ ವಿಶೇಷ ಗುಣವಿದೆ. ಹಾಗೆಯೇ ಇದರ ಆಚರಣೆಗೆ ಅತಿ ಅವಶ್ಯಕವಾದುದು ದೇಸಿ ಗೋವಿನ ತುಪ್ಪ ಮತ್ತು ಗೋಮಯದ ಬೆರಣಿ. ಕೆಲವೊಂದು ಕಡೆ ಅಕ್ಕಿಯ ಕಾಳನ್ನು ಬಳಸುವುದೂ ಇದೆ. ಹೀಗಾಗಿ ದೇಸಿ ಆಕಳ ಗೋಮಯದಿಂದ ಮಾಡಿದ ಬೆರಣಿ ಮತ್ತು ತುಪ್ಪ ಹಾಗೂ ಆ ತುಪ್ಪದಲ್ಲಿ ಅದ್ದಿದ ಅಕ್ಕಿಯ ಅಕ್ಷತೆ ಕಾಳಿಗೂ ಒಂದು ವಿಶೇಷವಾದ ಅರ್ಥವಿದೆ.

ಅಷ್ಟೇ ಅಲ್ಲದೆ ಅಗ್ನಿಹೋತ್ರ ಕ್ರಿಯೆಯ ನಂತರ ಉದ್ಭವವಾದ ಅನಿಲವು ಸುತ್ತಮುತ್ತಲಿನ ವಾತಾವರಣದ ವಾಯುಮಾಲಿನ್ಯ ಸೇರಿದಂತೆ ಎಲ್ಲಾ ವಿಷಾನಿಲದ ದುಷ್ಟರಿಣಾಮವನ್ನು ಸಹ ಪರಿಣಾಮಕಾರಿಯಾಗಿ ನಿಷ್ಫಲಗೊಳಿಸುವುದು ರುಜುವಾತಾಗಿದೆ. ಭೋಪಾಲ್‌ನ ಆ ದುರ್ಘಟನೆಯ ನಂತರ ಜರ್ಮನಿಯ ಮುನಿಚ್ ಮತ್ತು ರಷ್ಯಾದ ವಿಜ್ಞಾನಿಗಳು ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ನಡೆಸಿದ್ದಾರೆ. ನಂತರ ಅಲ್ಲಿನ ವಿಜ್ಞಾನಿಗಳು ಅಗ್ನಿಹೋತ್ರದ ಮಹಿಮೆಗೆ ಬೆರಗಾಗಿ, ಅದರ ವಿಸ್ಮಯವನ್ನು ಒಪ್ಪಿ, ಸನಾತನ ಭಾರತದ ಈ ಒಂದು ಕ್ರಿಯೆಯೇ ನಮ್ಮನ್ನು ಮುಂದೊಂದು ದಿನ ವಿಕಿರಣದಿಂದ ಉಳಿಸುವ ಏಕೈಕ ಮಾರ್ಗ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಪ್ರಪಂಚದ ಮುಂದೆ ಮಂಡಿಸಿದ್ದಾರೆ. ಹಾಗೆಯೇ ಅಗ್ನಿಹೋತ್ರ ಆಚರಣೆಯ ನಂತರ ಉಳಿದ ಬೂದಿಯಿಂದ ಮಾತ್ರೆಗಳನ್ನು ತಯಾರಿಸುವ ಮೂಲಕ ಮಾನವನ ಜೀವಕ್ಕೆ ಅತಿ ಅವಶ್ಯಕವಾದ 92 ಖನಿಜಾಂಶಗಳಿರುವುದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.

ನಂತರ ಅಮೆರಿಕಾ, ರಷ್ಯಾ, ಜರ್ಮನಿ, ಪೋಲಂಡ್ ಮುಂತಾದ ದೇಶಗಳಲ್ಲಿ ಅಗ್ನಿಹೋತ್ರದ ಕುರಿತ ಸಾಕಷ್ಟು ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುವಂತಾಗುತ್ತದೆ. ಆ ಎಲ್ಲಾ ಸಂಶೋಧನೆಯ ಅಂತ್ಯದಲ್ಲಿ ಅಲ್ಲಿಯ ವಿಜ್ಞಾನಿಗಳು ಹಾಗೂ ಸಂಶೋಧಕರು ಅಗ್ನಿಹೋತ್ರದಿಂದ ಹೊರ ಬೀಳುವ ಧೂಮವು ರಕ್ತಕ್ಕೆ ಸಮಸ್ಯೆ ಒಡ್ಡುವ ಸೂಕ್ಷ್ಮಾಣು ಜೀವಿಗಳನ್ನು ಹಾಗೂ ವೈರಾಣುಗಳನ್ನು ನಾಶಗೊಳಿಸುವ ಗುಣ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.

go sampattu
column about cow

ಇಂತಹ ಬೆಲೆ ಕಟ್ಟಲಾಗದ ಅಗ್ನಿಹೋತ್ರದಲ್ಲಿ ಪ್ರಮುಖವಾಗಿ ಬಳಸುವ ದೇಸಿ ಗೋವಿನ ತುಪ್ಪವು ಸ್ವಾಭಾವಿಕವಾಗಿಯೇ ಅತಿ ಹೆಚ್ಚು ಗುಣಗಳನ್ನು ಹೊಂದಿದೆ. ಇಂತಹುದನ್ನು ಉರಿಯುತ್ತಿರುವ ಬೆಂಕಿಗೆ ಹಾಕಿದಾಗ ಅದು ಮತ್ತಷ್ಟು ಧನಾತ್ಮಕ ಗುಣಗಳನ್ನು ಪ್ರಕಟಿಸುತ್ತದೆ. ಇದರಿಂದ ಉಂಟಾದ ಹೊಗೆಯ ಪ್ರಭಾವ ಎಲ್ಲಿಯವರೆಗೆ ಹರಡಿರುತ್ತದೆಯೋ ಅಲ್ಲಿಯವರೆಗಿನ ಎಲ್ಲಾ ಕ್ಷೇತ್ರಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾ ಪ್ರಭಾವದಿಂದ ಮುಕ್ತವಾಗುತ್ತವೆ ಎಂಬುದು ಸಾಕಷ್ಟು ಸಂಶೋಧನೆಯಿಂದ ಸಾಬೀತಾಗಿದೆ.

ಗೋವಿನ ತುಪ್ಪ ಮತ್ತು ತುಂಡಾಗದ ಅಕ್ಕಿ, ಅಂದರೆ ಅಕ್ಷತೆಯನ್ನು ಮಿಶ್ರಣಮಾಡಿ ಉರಿಸುವುದರಿಂದ ಅತ್ಯಂತ ಮಹತ್ವಪೂರ್ಣ ಅನಿಲಗಳಾದ ಇಥಿಲಿನ್ ಆಕ್ಸೈಡ್, ಪ್ರೊಪಲೀನ್ ಆಕ್ಸೈಡ್ ಮತ್ತು ಫಾರ್ಮಲಾ ಡಿ ಹೈಡ್ ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾಗುವ ಹಲವು ಅನಿಲಗಳಲ್ಲಿ ಇಥಿಲಿನ್ ಆಕ್ಸೈಡ್ ಇಂದಿನ ಸಮಯದಲ್ಲಿ ಎಲ್ಲಕ್ಕಿಂತ ಅಧಿಕ ಉಪಯುಕ್ತ ಜೀವಾಣು ರೋಧಕ ಅನಿಲ ಎಂಬುದು ಸಾಬೀತಾಗಿದೆ. ಮೆಡಿಕಲ್ ಸೈನ್ಸ್‌ನಲ್ಲಿ ಈ ಅನಿಲವನ್ನು ಆಪರೇಷನ್ ಥಿಯೇಟರ್‌ನಿಂದ ಹಿಡಿದು ಜೀವ ರಕ್ಷಕ ಔಷಧಿಗಳನ್ನು ತಯಾರಿಸಲು ಉಪಯೋಗಿ ಸಲಾಗುತ್ತದೆ. ಇನ್ನು ಪ್ರೊಪಲೀನ್ ಆಕ್ಸೈಡ್‌ ಅನ್ನು ಕೃತಕ ಮಳೆಗೋಸ್ಕರ ಮಾಡುವ ಮೋಡಬಿತ್ತನೆಯಲ್ಲಿ ಇಂದಿನ ವೈಜ್ಞಾನಿಕರು ಬಹುಮುಖ್ಯವಾಗಿ ಇಂದಿಗೂ ಬಳಸುತ್ತಿದ್ದಾರೆ.

ಉರಿಯುತ್ತಿರುವ ಬೆಂಕಿಗೆ ದೇಸಿ ಗೋವಿನ ತುಪ್ಪವನ್ನು ಹಾಕುವುದರಿಂದ ಉಂಟಾಗುವ ಧೂಮವು ವಿಕಿರಣದ ತೀವ್ರತೆಯನ್ನು ಕೂಡಲೇ ಕಡಿಮೆ ಮಾಡುತ್ತದೆ. ದೇಶಿ ಗೋವಿನ ತುಪ್ಪವು ಶೇಕಡಾ 90ರಷ್ಟು ಇಂಗಾಲವನ್ನು ಒಳಗೊಂಡಿದೆ. ಪ್ರಪಂಚದ ಯಾವುದೇ ವಸ್ತುವಿನಲ್ಲಿ ಇಷ್ಟು ಪ್ರಮಾಣದ ಇಂಗಾಲವಿಲ್ಲ. ಹೀಗಾಗಿ ಅಗ್ನಿಹೋತ್ರದಲ್ಲಿ ದಹಿಸಿದ ಈ ತುಪ್ಪವು ನಂತರ ಖನಿಜದಂತೆ ಕೆಲಸ ಮಾಡುವುದು ಕಂಡುಬಂದಿದೆ.

ದೇಸಿ ಗೋವಿನ ಗೋಮಯದಲ್ಲಿ ಅಣು ಜೀವಿಗಳನ್ನು ನಾಶಮಾಡುವ ವಿಶೇಷ ಗುಣವಿರುವುದರಿಂದಲೇ ಅಗ್ನಿಹೋತ್ರದಲ್ಲಿ ಬೆರಣಿಗಳನ್ನು ಉರುವಲಾಗಿ ಉಪಯೋಗಿಸಲಾಗುತ್ತದೆ. ಮನೆಯ ಗೋಡೆಗಳಿಗೆ ಗೋಮಯವನ್ನು ದಪ್ಪವಾಗಿ ಬಳಿದಿದ್ದೇ ಆದಲ್ಲಿ ಅದು ಅಣು ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಹಾಗೆಯೇ ಗೋಮಯವು ಅತಿ ಕೆಟ್ಟ ಪರಿಣಾಮ ಬೀರುವ ಆಲ್ಫಾ, ಬೀಟಾ ಮತ್ತು ಗಾಮ ಕಿರಣಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ನ್ಯೂಕ್ಲಿಯರ್‌ನ ಗಾಮ ಕಿರಣಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

World Agnihotra Day

ನಮ್ಮ ದೇಶದಲ್ಲೂ ಸಾಕಷ್ಟು ನ್ಯೂಕ್ಲಿಯರ್ ಪ್ಲಾಂಟ್‌ಗಳಿದ್ದು, ಒಂದೊಮ್ಮೆ ಏನಾದರೂ ಅನಾಹುತ ಘಟಸಿದರೆ ಅದಕ್ಕೆ ನಮ್ಮ ಸನಾತನ ಧರ್ಮದಲ್ಲಿರುವ ಈ ಅಗ್ನಿಹೋತ್ರ ಪದ್ಧತಿಯೊಂದೇ ನಮ್ಮನ್ನು ವಿಕಿರಣದಿಂದ ಕಾಪಾಡ ಬಹುದಾಗಿದೆ. ಹೀಗೆ ಆಧುನಿಕ ಯುಗದಲ್ಲೂ ಗೋವು ತನ್ನ ಮಹಿಮೆಯನ್ನು ಒಂದಲ್ಲ ಒಂದು ರೀತಿ ಸಾರುತ್ತಲೇ ಬಂದಿದೆ.

ಹೀಗೆ ಭೋಪಾಲ್‌ನಲ್ಲಿ ಘಟಿಸಿದ ಆ ದುರ್ಘಟನೆಯ ನಂತರ ದೇಶಾದ್ಯಂತ ಅಗ್ನಿಹೋತ್ರ ಕ್ರಿಯೆಯನ್ನು ಪುರಸ್ಕರಿಸುವ ಸಂಸ್ಥೆಗಳು ಹುಟ್ಟಿಕೊಂಡವು. ಇದು ಕ್ರಮೇಣ ಇತರ ರಾಷ್ಟ್ರಗಳಿಗೂ ವಿಸ್ತರಿಸಿತು. ಅದರಲ್ಲೂ ಮಲೇಶಿಯಾದಲ್ಲಿ ಇದು ತೀವ್ರಗತಿಯಲ್ಲಿ ಪ್ರಚಾರವನ್ನು ಪಡೆಯಿತು. ನಂತರ ಅದು ಅಲ್ಲಿಯ ಆಕಾಶವಾಣಿಯ ಮೂಲಕ ದಿನಕ್ಕೆರಡು ಬಾರಿ ಅಗ್ನಿಹೋತ್ರದ ಪಾಠಗಳನ್ನು ಪ್ರಸಾರ ಮಾಡುವಷ್ಟು ಪ್ರಚಾರ ಮಾಡಲಾಯಿತು. ಅಲ್ಲಿ ಈ ಕ್ರಿಯೆಗೆ ಬೇಕಾದ ಗೋಮಯದ ಬೆರಣಿಗಳನ್ನು ಮಾಡುವುದೇ ಒಂದು ಬಹುದೊಡ್ಡ ಗೃಹೋದ್ಯೋಗವಾಯಿತು. ಇದರಂತೆ ಪೆರು ದೇಶದಲ್ಲಿಯೂ ಅಗ್ನಿಹೋತ್ರದ ಪ್ರಚಾರ ಮತ್ತು ಆಚರಣೆ ಜೋರಾದ ಪ್ರಚಾರದೊಂದಿಗೆ ಆಚರಣೆಗೆ ಬಂತು.

ಅಂತೆಯೇ ಅಗ್ನಿಹೋತ್ರದ ನಂತರ ಅದರ ಭಸ್ಮವನ್ನು ಸಸ್ಯಗಳಿಗೆ ಮತ್ತು ಗಿಡಗಳಿಗೆ ಗೊಬ್ಬರದಂತೆ ಬಳಸಿದಲ್ಲಿ ಅವುಗಳು ಚೆನ್ನಾಗಿ ಬೆಳೆಯುವುದು ಸಂಶೋಧನೆಯಿಂದ ಸಾಬೀತಾಗಿದೆ. ಇದರ ಭಸ್ಮವನ್ನು ಭೂಮಿಗೆ ಹಾಕಿದಾಗ ಸಸ್ಯಗಳಿಗೆ ಬೇಕಾದ ಪೊಟ್ಯಾಷಿಯಂ ಮತ್ತು ನೈಟ್ರೋಜನ್ ಹೇರಳವಾಗಿ ದೊರೆಯುತ್ತದೆ. ಇದರಿಂದ ಭೂಮಿಯೂ ಹೆಚ್ಚು ಫಲವತ್ತಾಗುವುದಲ್ಲದೆ ಅಲ್ಲಿ ಎರೆಹುಳುಗಳು ಸಮೃದ್ಧವಾಗಿ ಬೆಳೆಯುತ್ತವೆ. ಈಗಾಗಲೇ ಯುರೋಪ್ ದೇಶಗಳಲ್ಲಿ ಇದನ್ನರಿತು ಅಗ್ನಿಹೋತ್ರವನ್ನು ಕೃಷಿ ಉತ್ಪನ್ನಗಳ ವೃದ್ಧಿಗಾಗಿ ಬಳಸತೊಡಗಿದ್ದಾರೆ. ಜರ್ಮನಿಯಲ್ಲಿನ ಸುಮಾರು 60ಕ್ಕೂ ಹೆಚ್ಚು ಸಂಶೋಧಕರು ಈ ವಿಧಾನವನ್ನು ಯಶಸ್ವಿಯಾಗಿ ಪ್ರಯೋಗಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಸಂಸ್ಕರಿಸಿದ ಬೀಜಗಳು ಸಹ ಹೆಚ್ಚು ಆರೋಗ್ಯವಾಗಿಯೂ ಶಕ್ತಿಯುತವಾಗಿಯೂ ಇರುವುದನ್ನು ಅವರೆಲ್ಲರು ಕಂಡುಕೊಂಡಿದ್ದಾರೆ.

ಹೀಗಾಗಿಯೇ ಇಂದಿನ ಯುಗದಲ್ಲಿ ಅಗ್ನಿಹೋತ್ರ ಕ್ರಿಯೆಯನ್ನು ದೇಸಿ ಗೋವಿನ ಉತ್ಪನ್ನಗಳ ಒಂದು ವೈಜ್ಞಾನಿಕ ಪವಾಡ ಎಂದೇ ಹೇಳಬಹುದಾಗಿದೆ. ಇಂದು ಇಡೀ ಜಗತ್ತೇ ನಮ್ಮ ಸನಾತನ ಧರ್ಮದ ಪ್ರತೀಕವಾದ ಈ ಅಗ್ನಿಹೋತ್ರ ಕ್ರಿಯೆಗೆ ಪ್ರಚಾರ ಕೊಡುವ ಮೂಲಕ ಆಚರಣೆಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಸಂಘ ಸಂಸ್ಥೆಗಳು ನಿರಂತರ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಇದೆಲ್ಲದರ ಪರಿಣಾಮ ಸ್ವಲ್ಪಮಟ್ಟಿಗಾದರೂ ಇದಕ್ಕೆ ಪ್ರಚಾರ ಸಿಗುವಂತಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಹೀಗೆ ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ಈ ಕ್ರಿಯೆ ತದನಂತರ ಭಾಗಶಃ ಅಳಿದೇ ಹೋಗುವ ಸ್ಥಿತಿ ನಿರ್ಮಾ ಣವಾಗಿತ್ತು. ಈಗ ಇದಕ್ಕೆ ಸ್ವಲ್ಪ ಪ್ರಚಾರ ದೊರೆತು ಜೀವ ಪಡೆದುಕೊಳ್ಳುತ್ತಿದೆ. ಆದರೆ ಈ ಕ್ರಿಯೆ ಮುಂದೊಂದು ದಿನ ನಮ್ಮ ಜೀವವನ್ನು ಉಳಿಸುವ ಏಕೈಕ ಸಾಧನ ಎಂಬುದು ಬಹಳಷ್ಟು ಜನರಿಗೆ ಮನವರಿಕೆಯಾಗಬೇಕಾಗಿದೆ. ಹಾಗೆಯೇ ಈ ಕ್ರಿಯೆಗೆ ಪೂರಕವಾದ ದೇಶಿ ಗೋವು ಮತ್ತು ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಅವುಗಳ ಉಳಿವಲ್ಲೇ ಮನುಜ ತನ್ನ ಅಸ್ತಿತ್ವವನ್ನು ಕಾಣಬೇಕಾಗಿದೆ.

ಇದನ್ನೂ ಓದಿ : Prerane : ಆತ್ಮ ಪೂಜೋಪನಿಷತ್‌ನಲ್ಲಿ ಧ್ಯಾನದ ಬಗ್ಗೆ ಏನು ಹೇಳಲಾಗಿದೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
HD Deve gowda prajwal revanna case
ಪ್ರಮುಖ ಸುದ್ದಿ3 mins ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Thailand Open
ಕ್ರೀಡೆ29 mins ago

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

US Sanction
ವಿದೇಶ34 mins ago

US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Prajwal Revanna Case Devaraje Gowda
ಕ್ರೈಂ52 mins ago

Prajwal Revanna Case: ವಕೀಲ ದೇವರಾಜೇಗೌಡ ಇಂದು ಪೊಲೀಸ್‌ ಕಸ್ಟಡಿಗೆ

Federation Cup
ಕ್ರೀಡೆ59 mins ago

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Israel-Hamas Conflict
ವಿದೇಶ1 hour ago

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

IPL 2024 Points Table
ಕ್ರೀಡೆ1 hour ago

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

jayanagar murder case
ಕ್ರೈಂ1 hour ago

Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Viral News
ದೇಶ2 hours ago

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

HD Revanna Bail
ಪ್ರಮುಖ ಸುದ್ದಿ2 hours ago

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ15 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ16 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ16 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ16 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ17 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ23 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌