ನ್ಯೂಯಾರ್ಕ್​ನಲ್ಲಿ ಶಾಲೆಗಳಿಗೆ ದೀಪಾವಳಿಯಂದು ರಜೆ; ಮೇಯರ್​ ಘೋಷಣೆ, ಮಕ್ಕಳಿಗೆ ಖುಷಿಯೋ ಖುಷಿ - Vistara News

ವಿದೇಶ

ನ್ಯೂಯಾರ್ಕ್​ನಲ್ಲಿ ಶಾಲೆಗಳಿಗೆ ದೀಪಾವಳಿಯಂದು ರಜೆ; ಮೇಯರ್​ ಘೋಷಣೆ, ಮಕ್ಕಳಿಗೆ ಖುಷಿಯೋ ಖುಷಿ

ದೀಪಾವಳಿ ಹಬ್ಬದಂದು ನ್ಯೂಯಾರ್ಕ್​​ನಲ್ಲಿ ಶಾಲೆಗಳಿಗೆ ರಜಾ ಕೊಡಬೇಕು ಎಂಬ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ನ್ಯೂಯಾರ್ಕ್​ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್​ಕುಮಾರ್ ಅವರು ಇದೀಗ ಖುಷಿ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Diwali School Holiday Announced By Eric Adams And Jenifer Rajkumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ಶಾಲಾ-ಕಾಲೇಜುಗಳಿಗೆ ರಜಾ ಇರುವಂತೆ, ಇನ್ನುಮುಂದೆ ಯುಎಸ್​ನ ನ್ಯೂಯಾರ್ಕ್​​ನಲ್ಲೂ ಕೂಡ ದೀಪಾವಳಿಗೆ ಶಾಲೆಗಳಿಗೆ ರಜಾ (Diwali Holiday In New York) ಇರಲಿದೆ. ಇನ್ಮುಂದೆ ನ್ಯೂಯಾರ್ಕ್​ನಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಸಾರ್ವತ್ರಿಕ ರಜಾ ಕೊಡಲಾಗುವುದು ಎಂದು ಅಲ್ಲಿನ ಮೇಯರ್​ ಎರಿಕ್ ಅಡಮ್ಸ್ (Mayor Eric Adams) ಸೋಮವಾರ​ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನ್ಯೂಯಾರ್ಕ್​​ನಲ್ಲಿ ದೀಪಾವಳಿಯಂದು ಶಾಲೆಗಳಿಗೆ ಸಾರ್ವತ್ರಿಕ ರಜಾ (School Holiday) ಕೊಡಬೇಕು ಎಂಬ ಹೋರಾಟ ಮಾಡಿಕೊಂಡು ಬಂದಿದ್ದ ಭಾರತೀಯ ಸಮುದಾಯದವರು ಮತ್ತು ಇಲ್ಲಿನ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್​ಕುಮಾರ್​ ಅವರೊಂದಿಗೆ ನಾನೂ ದೃಢವಾಗಿ ನಿಂತಿದ್ದೆ. ಇದೀಗ ಆ ಹೋರಾಟಕ್ಕೆ ಜಯ ಸಿಕ್ಕಿದೆ. ಶುಭ ದೀಪವಳಿ’ ಎಂದಿದ್ದಾರೆ.

ಇನ್ನು ದೀಪಾವಳಿ ಹಬ್ಬದಂದು ನ್ಯೂಯಾರ್ಕ್​​ನಲ್ಲಿ ಶಾಲೆಗಳಿಗೆ ರಜಾ ಕೊಡಬೇಕು. ಮಕ್ಕಳು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂಬ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ನ್ಯೂಯಾರ್ಕ್​ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್​ಕುಮಾರ್ ಅವರು ಇದೀಗ ಖುಷಿ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರ ಬಹುಕಾಲದ ಬೇಡಿಕೆ ಇದಾಗಿತ್ತು. 2 ದಶಕಗಳಿಂದ ಈ ಬಗ್ಗೆ ಆಗ್ರಹ ಕೇಳಿಬಂದಿತ್ತು. ಅದೀಗ ಈಡೇರಿದ್ದು ತುಂಬ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

ಹಾಗಿದ್ದಾಗ್ಯೂ ಈ ವರ್ಷ ನ್ಯೂಯಾರ್ಕ್​​ನಲ್ಲಿ ಶಾಲೆಗಳಿಗೆ ರಜೆ ಇರುವುದಿಲ್ಲ. ದೀಪಾವಳಿ ರಜೆಯ ಕಾನೂನು ರಚನೆಗೊಳ್ಳುವ ಮೊದಲೇ 2023-2024ನೇ ಸಾಲಿನ ಕ್ಯಾಲೆಂಡರ್​ ಸಿದ್ಧವಾಗಿಬಿಟ್ಟಿತ್ತು. ಅದರಲ್ಲಿ ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜಾ ಎಂದು ಪ್ರಕಟಿಸಿಲ್ಲ. ಇನ್ನು ಮಸೂದೆ ಪಾಸ್​ ಆಗಿದ್ದು, ನ್ಯೂಯಾರ್ಕ್​ ಸಿಟಿಯ ಗವರ್ನರ್ ಕ್ಯಾಥಿ ಹೋಚುಲ್ ಸಹಿ ಆಗುವುದು ಬಾಕಿ ಇದೆ. ಅದಾದ ಮೇಲೆ ಅಧಿಕೃತಗೊಳ್ಳಲಿದೆ. ಇನ್ನು ಭಾರತೀಯ ಸಮುದಾಯದ ಮಕ್ಕಳಂತೂ ದೀಪಾವಳಿ ಆಚರಣೆಗೆ ಶಾಲೆಗೆ ರಜಾ ಸಿಗುತ್ತಿರುವುದಕ್ಕೆ ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ದೀಪಾವಳಿಗೆ ಯುಎಸ್​​ನಲ್ಲಿ ಸಾರ್ವತ್ರಿಕ ರಜೆ ಕೊಡಬೇಕು; ಮಸೂದೆ ಮಂಡನೆ ಮಾಡಿದ ಅಮೆರಿಕ ಜನಪ್ರತಿನಿಧಿ

2023ರಿಂದ ನ್ಯೂಯಾರ್ಕ್​ ಸಿಟಿಯಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡಲಾಗುವುದು ಮೇಯರ್​ ಎರಿಕ್​ ಅಡಮ್ಸ್​ ಅವರು ಕಳೆದವರ್ಷವೇ ಹೇಳಿದ್ದರು. ದೀಪಾವಳಿ ಹಬ್ಬ ಆಚರಣೆಗೆ ಪ್ರೋತ್ಸಾಹ ಕೊಡುವುದೇ ನಮ್ಮ ಪ್ರಮುಖ ಉದ್ದೇಶ. ನ್ಯೂಯಾರ್ಕ್​ ಸಿಟಿಯಲ್ಲಿ ಅನೇಕರು ಈ ದೀಪಗಳ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅವರ ಸಂಭ್ರಮದಲ್ಲಿ ನಾವೂ ಜತೆಯಾಗುವ ಜತೆ, ಮಕ್ಕಳಿಗೆ ಹಬ್ಬಗಳ ಪ್ರಾಮುಖ್ಯತೆ ತಿಳಿಸಬೇಕು. ಶೈಕ್ಷಣಿಕವಾಗಿಯೂ ಇದು ಮಹತ್ವ ಪಡೆದಿದೆ. ದೀಪಗಳ ಹಬ್ಬ ದೀಪಾವಳಿ, ನಮ್ಮೊಳಗೂ ಕೂಡ ಬೆಳಕು ಮೂಡಿಸುತ್ತದೆ ಎಂಬುದು ಮಕ್ಕಳಿಗೆ ಅರ್ಥವಾಗಬೇಕು’ ಎಂದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Landslide: ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ; ಜೀವಂತ ಸಮಾಧಿಯಾದವರ ಸಂಖ್ಯೆ 2000ಕ್ಕೆ ಏರಿಕೆ

Landslide: ಗುಡ್ಡಗಾಡು ಪ್ರದೇಶವಾಗಿರುವ ಎಂಗಾ ಪ್ರದೇಶದಲ್ಲಿ ಸಂಪೂರ್ಣವಾಗಿ ಭೂಕುಸಿತಕ್ಕೆ ತುತ್ತಾಗಿದೆ. ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.

VISTARANEWS.COM


on

Landslide
Koo

ಪೋರ್ಟ್‌ ಮೋರ್‌ಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಕಂಡು ಕೇಳರಿಯದ ಭೂಕುಸಿತ (Landslide) ಸಂಭವಿಸಿದ್ದು, ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಭೂಮಿ ಅವಶೇಷಗಳ ಅಡಿಯಲ್ಲಿ ಹುದುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಂದರಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಎಂಗಾ ಪ್ರದೇಶದಲ್ಲಿ ಸಂಪೂರ್ಣವಾಗಿ ಭೂಕುಸಿತಕ್ಕೆ ತುತ್ತಾಗಿದೆ. ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.

ಶುಕ್ರವಾರದಿಂದಲೂ ಸಾಲು ಸಾಲು ಭೂಕುಸಿತ ಸಂಭವಿಸಿವೆ. ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಭಾನುವಾರದ ಹೊತ್ತಿಗೆ ಈ ಸಂಖ್ಯೆ 650ಕ್ಕೆ ಏರಿಕೆ ಆಗಿತ್ತು. ಸಂಬಂಧಿಕರನ್ನು ಕಳೆದುಕೊಂಡವರ ದುಃಖವು ಮುಗಿಲುಮುಟ್ಟಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೃತರ ಸಂಬಂಧಿಕರು ಶವಗಳನ್ನು ಹೊರತೆಗೆಯಲು ಭೂಮಿ ಅಗೆಯುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಕೂಡ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅವಶೇಷಗಳ ಅಡಿಯಲ್ಲಿ ಯಾರಾದರೂ ಬದುಕಿದ್ದಾರೇನೋ ಎಂಬ ವಿಶ್ವಾಸದಿಂದ ಭೂಮಿಯನ್ನು ಅಗೆಯಲಾಗುತ್ತಿದೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಜನರು ಕೂಡ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ. ಆದರೆ, ಗಾಯಾಳುಗಳ ಬದಲು ಶವಗಳನ್ನೇ ಹೊರ ತೆಗೆಯುವಂತಾಗಿದೆ. ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ 4 ಸಾವಿರ ಜನ ವಾಸವಿದ್ದರು. ದಿಢೀರನೆ ಭೂಕುಸಿತ ಉಂಟಾದ ಕಾರಣ ಇಡೀ ಗ್ರಾಮವೇ ನರಕಸದೃಶವಾಗಿದೆ ಎಂಬುದಾಗಿ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

ಈ ಭೀಕರ ಭೂಕುಸಿತ ಪ್ರವಾಹದೊಂದಾಗಿ ದೇಶದ ಆರ್ಥಿಕತೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಆಹಾರ ಪದಾರ್ಥಗಳಿಗೂ ಜನ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನು ಪೋರ್ಗೆರಾ ಮೈನಿಂಗ್‌ ಪ್ರದೇಶಕ್ಕೆ ಸಾಗುವ ಪ್ರಮುಖ ಹೆದ್ದಾರಿಯೂ ಸಂಪೂರ್ಣವಾಗಿ ಮುಚ್ಚಿದೆ. ಇನ್ನು ಸಂಕಷ್ಟದಲ್ಲಿರುವ ಪಪುವಾ ನ್ಯೂಗಿನಿಯಾಗೆ ಸಹಾಯ ಮಾಡುವಂತೆ ಮಿತ್ರ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.

Continue Reading

ವಿದೇಶ

Israel Palestine War: ಇಸ್ರೇಲ್‌ ಪ್ರತೀಕಾರದ ದಾಳಿ, 35 ಪ್ಯಾಲೆಸ್ತೀನೀಯರ ಸಾವು

ಇಸ್ರೇಲಿ ಸೈನ್ಯವು ತನ್ನ ದಾಳಿ ವಿಮಾನವು ರಫಾದಲ್ಲಿ ಹಮಾಸ್ ಆವರಣವನ್ನು ಘಾತಿಸಿದೆ ಎಂದು ವರದಿ ಮಾಡಿದೆ, ಇದರ ಪರಿಣಾಮವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಗಳಾದ ಯಾಸಿನ್ ರಬಿಯಾ ಮತ್ತು ಖಲೀದ್ ನಗರ್ ಸಾವನ್ನಪ್ಪಿದರು.

VISTARANEWS.COM


on

israel palestine war12
Koo

ಟೆಲ್‌ ಅವಿವ್:‌ ಇಸ್ರೇಲ್‌ನ (Israel) ವಾಣಿಜ್ಯ ಕೇಂದ್ರವಾದ ಟೆಲ್ ಅವೀವ್‌ನಲ್ಲಿ (Tel Aviv) “ದೊಡ್ಡ ರಾಕೆಟ್ ದಾಳಿ” ನಡೆಸಿರುವುದಾಗಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ (hamas) ಹೇಳಿಕೊಂಡ ಗಂಟೆಗಳ ನಂತರ, ಇಸ್ರೇಲ್ ಮಿಲಿಟರಿ ದಕ್ಷಿಣ ಗಾಜಾ ಪಟ್ಟಿಯ (Gaza Strip) ರಫಾದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ವೈಮಾನಿಕ ದಾಳಿ (Israel Palestine War) ನಡೆಸಿತು. ಭಾನುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು.

ತಿಂಗಳುಗಳಲ್ಲಿ ಮೊದಲ ಬಾರಿಗೆ ಇಂಥ ಭಾರಿ ದಾಳಿ ನಡೆಯುತ್ತಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ನೀಡಿದ ಹೇಳಿಕೆಯಲ್ಲಿ, “ಇಸ್ರೇಲ್‌ ದಾಳಿ 35 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಡಜನ್‌ಗಟ್ಟಲೆ ಜನ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು” ಎಂದು ಹೇಳಿದೆ. ರಫಾಹ್ ಬಳಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿ ನಿರ್ವಹಿಸುತ್ತಿದ್ದ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಹಮಾಸ್ ಮೀಡಿಯಾ ಕರೆದಿದೆ.

“ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬದ್ಧ ಗುರಿಗಳ ವಿರುದ್ಧ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಮತ್ತು ಪಶ್ಚಿಮ ದಂಡೆಯಲ್ಲಿ ಉಗ್ರ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಹಿರಿಯ ಹಮಾಸ್ ಅಧಿಕಾರಿಗಳನ್ನು ಕೊಂದಿದ್ದೇವೆ” ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ಸೈನ್ಯವು ತನ್ನ ದಾಳಿ ವಿಮಾನವು ರಫಾದಲ್ಲಿ ಹಮಾಸ್ ಆವರಣವನ್ನು ಘಾತಿಸಿದೆ ಎಂದು ವರದಿ ಮಾಡಿದೆ, ಇದರ ಪರಿಣಾಮವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಹಿರಿಯ ಅಧಿಕಾರಿಗಳಾದ ಯಾಸಿನ್ ರಬಿಯಾ ಮತ್ತು ಖಲೀದ್ ನಗರ್ ಸಾವನ್ನಪ್ಪಿದರು. ಇಸ್ರೇಲಿ ಸೈನ್ಯವು ದಾಳಿಯ ಪರಿಣಾಮವಾಗಿ, ಆ ಪ್ರದೇಶದಲ್ಲಿ ಹಲವಾರು ನಾಗರಿಕರಿಗೆ ಹಾನಿಯಾಗಿದೆ ಎಂದು ಸೂಚಿಸುವ ವರದಿಗಳ ಬಗ್ಗೆ ನಮಗೆ ತಿಳಿದಿದೆ ಎಂದು ಒಪ್ಪಿಕೊಂಡಿದೆ.

ಇಸ್ರೇಲಿ ಮಿಲಿಟರಿ ಮತ್ತು ಹಮಾಸ್ ನಡುವಿನ ಯುದ್ಧದ ತೀವ್ರತೆಯು ಇತ್ತೀಚೆಗೆ ರಫಾದಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿ ಸೇನಾಪಡೆಗಳು ಮೇ ಆರಂಭದಲ್ಲಿ ವ್ಯಾಪಕ ವಿರೋಧದ ಹೊರತಾಗಿಯೂ ಭೂಸೇನಾ ಕಾರ್ಯಾಚರಣೆಯನ್ನು ನಡೆಸಿವೆ.

ಇದನ್ನೂ ಓದಿ: Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Continue Reading

ಪ್ರಮುಖ ಸುದ್ದಿ

Turbulence: ಟರ್ಬುಲೆನ್ಸ್‌ಗೆ ತುತ್ತಾದ ಮತ್ತೊಂದು ವಿಮಾನ; 12 ಮಂದಿಗೆ ಗಂಭೀರ ಗಾಯ

Turbulence: ವಿಮಾನದಲ್ಲಿ ಏಕಾಏಕಿ ಪ್ರಕ್ಷುಬ್ಧತೆ ಉಂಟಾದ ಕಾರಣ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ 6 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗೆ ಗಾಯಗಳಾಗಿವೆ. “ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನವು ಡಬ್ಲಿನ್‌ನಲ್ಲಿ ಲ್ಯಾಂಡ್‌ ಆಯಿತು. ಲ್ಯಾಂಡ್‌ ಆದ ಕೂಡಲೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

turbulence
Koo

ದೋಹಾ: ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಏರ್‌ಲೈನ್‌ ವಿಮಾನವು ಪ್ರಕ್ಷುಬ್ಧತೆಗೆ (Turbulence) ಒಬ್ಬ ವ್ಯಕ್ತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೊಂದು ವಿಮಾನವು ಟರ್ಬುಲೆನ್ಸ್‌ಗೆ ತುತ್ತಾಗಿದೆ. ಕತಾರ್‌ ರಾಜಧಾನಿ ದೋಹಾದಿಂದ (Doha) ಐರ್ಲೆಂಡ್‌ ರಾಜಧಾನಿ ಡಬ್ಲಿನ್‌ಗೆ (Dublin) ತೆರಳುತ್ತಿದ್ದ ವಿಮಾನವು ಪ್ರಕ್ಷುಬ್ಧತೆಗೆ ಸಿಲುಕಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ದೋಹಾದಿಂದ ಡಬ್ಲಿಂಗ್‌ಗೆ ಹೊರಟಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿತು. ವಿಮಾನದಲ್ಲಿ ಏಕಾಏಕಿ ಪ್ರಕ್ಷುಬ್ಧತೆ ಉಂಟಾದ ಕಾರಣ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ 6 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗೆ ಗಾಯಗಳಾಗಿವೆ. “ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನವು ಡಬ್ಲಿನ್‌ನಲ್ಲಿ ಲ್ಯಾಂಡ್‌ ಆಯಿತು. ಲ್ಯಾಂಡ್‌ ಆದ ಕೂಡಲೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು” ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬ್ರಿಟನ್‌ ರಾಜಧಾನಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿತ್ತು. ಬಳಿಕ ಈ ಸಿಂಗಾಪುರ ಏರ್‌ಲೈನ್ಸ್‌ ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಗಿತ್ತು. ಕೂಡಲೇ ವೈದ್ಯರು ಧಾವಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿದ್ದರು. ವಿಮಾನದೊಳಗಿನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದವು.

ಏನಿದು ಟರ್ಬುಲೆನ್ಸ್?‌

ವಿಮಾನವು ಹಾರಾಟ ನಡೆಸುವಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ದಿಢೀರನೆ ಏರುಪೇರಾಗುತ್ತದೆ. ಇದರ ತೀವ್ರತೆಗೆ ವಿಮಾನವು ಹಾರಾಟ ನಡೆಸುವಾಗಲೇ ಏಕಾಏಕಿ ಅಲುಗಾಡುತ್ತದೆ. ಹೀಗೆ ದಿಢೀರನೆ ಅಲುಗಾಡುವುದನ್ನೇ ಟರ್ಬುಲೆನ್ಸ್‌ ಅಥವಾ ಪ್ರಕ್ಷುಬ್ಧತೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ಪ್ರಕ್ಷುಬ್ಧತೆ ಉಂಟಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಪ್ರಮಾಣದಲ್ಲಿ ಉಂಟಾದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಲಗೇಜ್‌ಗಳು ಪ್ರಯಾಣಿಕರ ಮೈಮೇಲೆ ಬೀಳುತ್ತವೆ. ಇನ್ನೂ ಹಲವು ತೊಂದರೆಗಳನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಟರ್ಬುಲೆನ್ಸ್‌ ಉಂಟಾದಾಗ ದಿಢೀರನೆ ವಿಮಾನ ಹಾರುವ ಎತ್ತರವನ್ನು ಕಡಿಮೆಗೊಳಿಸುವುದು ಕೂಡ ಅಪಾಯಕಾರಿ ಎನಿಸಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

Continue Reading

ದೇಶ

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Wagah Border: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ, ಅಮೃತಸರದಲ್ಲಿರುವ ವಾಘಾ ಗಡಿಯನ್ನು ಓಪನ್‌ ಮಾಡಲಾಗುವುದು ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ಚರಣ್‌ಜೀತ್‌ ಸಿಂಗ್‌ ಚನ್ನಿ ಹೇಳಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Wagah Border
Koo

ಚಂಡೀಗಢ: ಲೋಕಸಭೆ ಚುನಾವಣೆಯ (Lok Sabha Election 2024) 6ನೇ ಹಂತದ ಮತದಾನ ಮುಗಿದು, ಚುನಾವಣೆ ಕೊನೆಯ ಹಂತಕ್ಕೆ ಬಂದರೂ ರಾಜಕೀಯ ನಾಯಕರ ಹೇಳಿಕೆಗಳು ಮಾತ್ರ ತಣ್ಣಗಾಗಿಲ್ಲ. ಜಾತಿ, ಧರ್ಮ, ಪಾಕಿಸ್ತಾನ ಸೇರಿ ಹಲವು ವಿಷಯಗಳ ಕುರಿತು ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಜಲಂಧರ್‌ ಕಾಂಗ್ರೆಸ್‌ ಅಭ್ಯರ್ಥಿ ಚರಣ್‌ಜೀತ್‌ ಸಿಂಗ್‌ ಚನ್ನಿ (Charanjit Singh Channi) ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. “ದೇಶದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ-ಪಾಕಿಸ್ತಾನ ನಡುವಿನ ವಾಘಾ ಗಡಿಯನ್ನು (Wagah Border) ಸಂಚಾರಕ್ಕೆ ಮುಕ್ತಗೊಳಿಸಲಾಗುವುದು” ಎಂಬುದಾಗಿ ಅವರು ಹೇಳಿದ್ದಾರೆ.

ಪಂಜಾಬ್‌ನ ಜಲಂಧರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಚರಣ್‌ಜೀತ್‌ ಸಿಂಗ್‌ ಚನ್ನಿ ಮಾತನಾಡಿದರು. “ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದರೆ, ವಾಘಾ ಗಡಿಯನ್ನು ಓಪನ್‌ ಮಾಡುತ್ತೇವೆ. ಇದರಿಂದ ಪಾಕಿಸ್ತಾನದ ನಾಗರಿಕರು ಪಂಜಾಬ್‌ಗೆ ಬಂದು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಹೋಗಬಹುದಾಗಿದೆ. ಇದರಿಂದ ಜಲಂಧರ್‌ ಮೆಡಿಕಲ್‌ ಟೂರಿಸಂ ತಾಣವನ್ನಾಗಿ ಬದಲಾಯಿಸಲು ಸಾಧ್ಯವಾಗುತ್ತದೆ” ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಚರಣ್‌ಜೀತ್‌ ಸಿಂಗ್‌ ಚನ್ನಿ ಅವರು ಪಾಕಿಸ್ತಾನ ಗಡಿ ಕುರಿತು ಮಾತನಾಡುವ ಒಂದು ದಿನ ಮೊದಲು ಪಂಜಾಬ್‌ನಲ್ಲಿ ನರೇಂದ್ರ ಮೋದಿ ರ‍್ಯಾಲಿ ನಡೆಸಿದ್ದರು. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರವಾದವನ್ನು ಪೋಷಣೆ ಮಾಡುವ, ಭಾರತದ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ಸ್ನೇಹದ ಸಂದೇಶಗಳನ್ನು ರವಾನಿಸುತ್ತದೆ. ಆದರೆ, ನಾವು ಮಾತ್ರ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದೇವೆ. ಆ ಮೂಲಕ ದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಿದೇವೆ” ಎಂಬುದಾಗಿ ಮೋದಿ ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಇದು ಬಿಜೆಪಿಯ ಚುನಾವಣಾ ಸ್ಟಂಟ್”‌ ಎಂದು ಆರೋಪಿಸಿದ್ದರು. ಮೇ 4ರಂದು ಪೂಂಚ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ವಾಯುಪಡೆಯ ಒಬ್ಬ ಯೋಧ ಹುತಾತ್ಮರಾಗಿದ್ದರು. “ಚುನಾವಣೆ ಸಮೀಪಿಸುತ್ತಲೇ ಬಿಜೆಪಿಯು ಜನರ ಜೀವನದ ಜತೆ ಆಟವಾಡುತ್ತದೆ. ಉಗ್ರರ ದಾಳಿ ಪ್ರಕರಣಗಳು ಬಿಜೆಪಿಯ ಕುತಂತ್ರದ ಭಾಗವಾಗಿವೆ” ಎಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಚರಣ್‌ಜೀತ್‌ ಸಿಂಗ್‌ ಚನ್ನಿ ಅವರಿಗೆ ಚುನಾವಣೆ ಆಯೋಗವೂ ಖಡಕ್‌ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

Continue Reading
Advertisement
Viral Video
ವೈರಲ್ ನ್ಯೂಸ್6 mins ago

Viral Video: ರೈಫಲ್‌ ಜೊತೆ ಬಾರ್‌ಗೆ ನುಗ್ಗಿದ ಕಿಡಿಗೇಡಿ..ಡಿಜೆ ಮೇಲೆ ಗುಂಡಿನ ದಾಳಿ-ಶಾಕಿಂಗ್‌ ವಿಡಿಯೋ ನೋಡಿ

Mitchell Starc
ಕ್ರೀಡೆ9 mins ago

Mitchell Starc : ಐಪಿಎಲ್ ಯಶಸ್ಸಿನ ಶ್ರೇಯಸ್ಸನ್ನು ಪತ್ನಿಗೆ ಅರ್ಪಿಸಿದ ಸ್ಟಾರ್ಕ್​; ಅವರ ಪತ್ನಿಯೂ ಕ್ರಿಕೆಟರ್​

Love Propose
ಬಾಗಲಕೋಟೆ31 mins ago

Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

Dhruva Sarja Trainer Prashanth Was Attacked First Reaction
ಸ್ಯಾಂಡಲ್ ವುಡ್34 mins ago

Dhruva Sarja: ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ನೀಡಿದ ಸ್ಪಷ್ಟನೆ ಏನು?

Asaduddin Owaisi Party Leader
ದೇಶ47 mins ago

Asaduddin Owaisi: ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

BS Yediyurappa
ಪ್ರಮುಖ ಸುದ್ದಿ50 mins ago

BS Yediyurappa: ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದ ಮಹಿಳೆ ಸಾವು

Fire accident
ದೇಶ51 mins ago

Fire Accident: 4 ವರ್ಷ ನೀವು ನಿದ್ದೆಯಲ್ಲಿದ್ರಾ? ನಿಮಗೆ ಕಣ್ಣು ಕಾಣೋದಿಲ್ವಾ?-ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Sunil Narine
ಪ್ರಮುಖ ಸುದ್ದಿ58 mins ago

Sunil Narine : ಐಪಿಎಲ್​ 2024ರ ‘ಮೌಲ್ಯಯುತ ಆಟಗಾರ ಪ್ರಶಸ್ತಿ’ ಗೆದ್ದು ಹೊಸ ದಾಖಲೆ ಬರೆದ ಸುನಿಲ್ ನರೈನ್​​

deep fake
ಬೆಂಗಳೂರು1 hour ago

Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

Dhruva Sarja Gym trainer prashanth attacked
ಸ್ಯಾಂಡಲ್ ವುಡ್1 hour ago

Dhruva Sarja:  ಧ್ರುವ ಸರ್ಜಾ ಜತೆಗಿದ್ದ ಜಿಮ್ ಟ್ರೈನರ್ ಮೇಲೆ ಮಚ್ಚಿನಿಂದ‌ ಹಲ್ಲೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು21 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌