Imran Khan: ಇಮ್ರಾನ್ ಖಾನ್ ವಿರುದ್ಧ 121 ಕೇಸ್​ !; ಅಲ್​ ಖಾದಿರ್​ ಟ್ರಸ್ಟ್​ ಪ್ರಕರಣದಲ್ಲಿ ಜಾಮೀನು - Vistara News

ವಿದೇಶ

Imran Khan: ಇಮ್ರಾನ್ ಖಾನ್ ವಿರುದ್ಧ 121 ಕೇಸ್​ !; ಅಲ್​ ಖಾದಿರ್​ ಟ್ರಸ್ಟ್​ ಪ್ರಕರಣದಲ್ಲಿ ಜಾಮೀನು

ಮೇ 9ರ ನಂತರ ಇಮ್ರಾನ್ ಖಾನ್ ವಿರುದ್ಧ ಯಾವುದೇ ಕೇಸ್​ಗಳು ದಾಖಲಾಗಿದ್ದರೂ, ಅದರಡಿಯಲ್ಲಿ ಇಮ್ರಾನ್​ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

Imran Khan has been granted bail in Al Qadir Trust case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೋಷಖಾನಾ ಭ್ರಷ್ಟಾಚಾರ, ಅಲ್-ಖಾದಿರ್ ಟ್ರಸ್ಟ್ ಪ್ರಕರಣ, ದಂಗೆಗೆ ಕುಮ್ಮಕ್ಕು, ಕೊಲೆಯತ್ನ ಹೀಗೆ ಹಲವು ಕೇಸ್​ಗಳಲ್ಲಿ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imran Khan)​ರನ್ನು ಇತ್ತೀಚೆಗೆ ಇಸ್ಲಮಾಬಾದ್ ಹೈಕೋರ್ಟ್ ಆವರಣದಿಂದ ಬಂಧಿಸಲಾಗಿತ್ತು. ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಗಾಗಿ ಹೈಕೋರ್ಟ್​ಗೆ ತೆರಳಿದ್ದ ಅವರನ್ನು ಬಂಧಿಸಿದ್ದ ಕ್ರಮವನ್ನು ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿತ್ತು. ಇಮ್ರಾನ್​ ಖಾನ್​ ಬಂಧನ ಕಾನೂನು ಬಾಹಿರವಾಗಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ಅರ್ಜಿ ವಿಚಾರಣೆ ನಡೆಸುತ್ತಿರುವ ಇಸ್ಲಮಾಬಾದ್ ಹೈಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದರಂತೆಯೇ ಕಾನೂನು ಕ್ರಮ ಆಗಬೇಕು ಎಂದು ಆದೇಶಿಸಿತ್ತು.

ಅದರ ಬೆನ್ನಲ್ಲೇ ಇಮ್ರಾನ್ ಖಾನ್​ ಅವರಿಗೆ ಅಲ್ ಖಾದಿರ್​ ಟ್ರಸ್ಟ್​ ಕೇಸ್​ನಲ್ಲಿ ಇಸ್ಲಮಾಬಾದ್ ಹೈಕೋರ್ಟ್​ನಿಂದ ಜಾಮೀನು ಸಿಕ್ಕಿದೆ. 2 ವಾರಗಳ ಅವಧಿಯ ಜಾಮೀನನ್ನು ಕೋರ್ಟ್ ನೀಡಿದೆ. ಇಂದು ಇಸ್ಲಮಾಬಾದ್ ಹೈಕೋರ್ಟ್​ಗೆ ಅವರು ಬಿಗಿ ಭದ್ರತೆ ನಡುವೆ ಹೋಗಿದ್ದಾರೆ. ಪೊಲೀಸರು, ಪ್ಯಾರಾಮಿಲಿಟರಿ ಸಿಬ್ಬಂದಿ ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದರು. ಒಳಗೆ ಇಮ್ರಾನ್ ಖಾನ್ ವಿಚಾರಣೆ ನಡೆಯುತ್ತಿದ್ದರೆ, ಹೊರಗೆ ಅವರ ಬೆಂಬಲಿಗರು ಸಾವಿರಾರು ಮಂದಿ ನಿಂತು ಇಮ್ರಾನ್ ಖಾನ್ ಪರ ಘೋಷಣೆಗಳನ್ನು ಕೂಗುತ್ತಿದ್ದರು. ’ಖಾನ್​ ನಿನ್ನ ಭಕ್ತರ ಸಂಖ್ಯೆಯಲ್ಲಿ ಲೆಕ್ಕವಿಲ್ಲ’ ‘ವಕೀಲರು ಇನ್ನೂ ಜೀವಂತವಾಗಿದ್ದಾರೆ’ ಎಂಬಿತ್ಯಾದಿ ಬರಹಗಳುಳ್ಳ ಪೋಸ್ಟರ್​ ಹಿಡಿದು ನಿಂತಿದ್ದರು. ಅಂದರೆ ಇಮ್ರಾನ್ ಖಾನ್ ಅವರು ಕಾನೂನು ತೊಡಕುಗಳಿಂದ ಹೊರಬರುತ್ತಾರೆ ಎಂದು ಅವರೆಲ್ಲ ಹೇಳುತ್ತಿದ್ದರು.

ಇದನ್ನೂ ಓದಿ: Imran Khan: ವಿಷದ ಇಂಜೆಕ್ಷನ್​ ಕೊಡಬಹುದೆಂಬ ಭಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್​; ಪಾಕಿಸ್ತಾನ ರಣರಂಗ

ಇನ್ನು ತೋಷಖಾನಾ ಭ್ರಷ್ಟಾಚಾರ ಕೇಸ್​​ನಡಿ ಅರೆಸ್ಟ್​ ಆಗುವುದಕ್ಕೆ ಈಗಾಗಲೇ ಅವರು ಕೋರ್ಟ್​ನಿಂದ ತಡೆ ಪಡೆದಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಒಂದೆರಡಲ್ಲ 121 ಪ್ರಕರಣಗಳು ಇವೆ. ಸದ್ಯ ಎಲ್ಲ ಪ್ರಕರಣಗಳಲ್ಲೂ ಅವರಿಗೆ ಜಾಮೀನು ಸಿಕ್ಕಿದೆ. ಮೇ 9ರ ನಂತರ ಇಮ್ರಾನ್ ಖಾನ್ ವಿರುದ್ಧ ಯಾವುದೇ ಕೇಸ್​ಗಳು ದಾಖಲಾಗಿದ್ದರೂ, ಅದರಡಿಯಲ್ಲಿ ಇಮ್ರಾನ್​ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೇ, ಅಲ್ ಖಾದಿರ್​ ಟ್ರಸ್ಟ್​ ಕೇಸ್ ಎಂದರೆ ಅಲ್ ಖಾದಿರ್​ ಯೂನಿವರ್ಸಿಟಿ ಟ್ರಸ್ಟ್​​ನ ಪ್ರಕರಣ. ಇದೂ ಒಂದು ಭ್ರಷ್ಟಾಚಾರ ಕೇಸ್​. ಇಮ್ರಾನ್ ಖಾನ್​ ಮತ್ತು ಅವರ ಪತ್ನಿ ಒಡೆತನದಲ್ಲಿ ಇರುವ ಈ ಟ್ರಸ್ಟ್​ಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು, ಉದ್ಯಮಿ ಮಲಿಕ್ ರಿಯಾಜ್​​ನಿಂದ ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪವನ್ನು ಇಮ್ರಾನ್ ಖಾನ್​ ಎದುರಿಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Ancient snake: 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು.

VISTARANEWS.COM


on

Ancient snake vasuki indicus
Koo

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.

“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.

ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

Continue Reading

ವಿದೇಶ

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

Maldives Tourism: ಆಡಬಾರದ್ದನ್ನು ಆಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಮಾತು ಈಗ ಮಾಲ್ದೀವ್ಸ್‌ನ ಪಾಲಿಗೆ ನಿಜ ಎನಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದನ್ನು ಲೇವಡಿ ಮಾಡಿದ ಪರಿಣಾಮವನ್ನು ಈ ದ್ವೀಪ ರಾಷ್ಟ್ರ ಈಗ ಅನುಭವಿಸುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್‌ಗೆ ಇದು ಬಹು ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗುತ್ತಿದೆ.

VISTARANEWS.COM


on

Maldives Tourism
Koo

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕೆಲವು ತಿಂಗಳ ಹಿಂದೆ ಲಕ್ಷದ್ವೀಪ (Lakshadweep)ಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದರು. ಅದಕ್ಕೆ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ (Maldives Tourism)ಕ್ಕೆ ಈಗ ಭಾರಿ ಹೊಡೆತ ಬಿದ್ದಿದೆ. ಈ ವರ್ಷದ ಜನವರಿಯಿಂದ ಮಾರ್ಚ್‌ ತನಕ ದ್ವೀಪ ರಾಷ್ಟ್ರಕ್ಕೆ ಕೇವಲ 34,847 ಮಂದಿ ಭೇಟಿ ನೀಡಿದ್ದಾರೆ. ಅದೇ ಕಳೆದ ವರ್ಷ ಈ ಅವಧಿಯಲ್ಲಿ ಮಾಲ್ಡೀವ್ಸ್‌ಗೆ 56,208 ಭಾರತೀಯರು ತೆರಳಿದ್ದರು ಎಂದು ಅಂಕಿ-ಅಂಶಗಳು ತಿಳಿಸಿವೆ. ಭಾರತ ಹಾಗೂ ಮೋದಿ ಕುರಿತು ಅಸಮಾಧಾನದ ಹೇಳಿಕೆ ನೀಡಿದ್ದ ಮಾಲ್ಡೀವ್ಸ್‌ ಈಗ ಅದಕ್ಕೆ ತಕ್ಕ ಪರಿಣಾಮ ಎದುರಿಸುತ್ತಿದೆ.

ʼʼಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 38ರಷ್ಟು ಕುಸಿತವಾಗಿದೆ. ಮತ್ತು ಇದು 2019ರ ಮೊದಲ ತ್ರೈ ಮಾಸಿಕದಲ್ಲಿ ಭೇಟಿ ನೀಡಿದ್ದ 36,053 ಭಾರತೀಯ ಪ್ರಯಾಣಿಕರ ಸಂಖ್ಯೆಗಿಂತಲೂ ಕಡಿಮೆʼʼ ಎಂದು ಮೂಲಗಳು ತಿಳಿಸಿವೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ʼಇಂಡಿಯಾ ಔಟ್ʼ ಅಭಿಯಾನ ಮತ್ತು ಅದರ ನಂತರ ಭಾರತೀಯರು ಮಾಲ್ಡೀವ್ಸ್ ಬಹಿಷ್ಕಾರದ ಕರೆ ನೀಡಿದ್ದರಿಂದ ಈ ಕುಸಿತ ಕಂಡು ಬಂದಿದೆ. ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಬಳಿಕ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ʼಮಾಲ್ಡೀವ್ಸ್ ಬಹಿಷ್ಕಾರʼ ಕೂಗಿನ ಜತೆಗೆ ʼಲಕ್ಷದ್ವೀಪಕ್ಕೆ ಭೇಟಿ ನೀಡಿʼ ಎಂಬ ಅಭಿಯಾನ ಆರಂಭವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಅದರ ಪರಿಣಾಮ ಈಗ ಅಂಕಿ-ಅಂಶದಲ್ಲಿ ಪ್ರತಿಫಲಿಸಿದೆ.

ಸದ್ಯ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರ ಪೈಕಿ ಚೀನಾದವರು ಅಗ್ರ ಸ್ಥಾನದಲ್ಲಿದ್ದಾರೆ. ಕೋವಿಡ್‌ ಪೂರ್ವದಲ್ಲಿ ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ಪಟ್ಟವನ್ನು ಚೀನಾ ಪಡೆದುಕೊಂಡಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 2018ರಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಭಾರತೀಯರು ಭೇಟಿ ನೀಡಿದ್ದರೆ 2.83 ಲಕ್ಷ ಚೀನೀ ಪ್ರವಾಸಿಗರು ತೆರಳಿದ್ದರು. ಇನ್ನು 2019ರಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 1.6 ಲಕ್ಷಕ್ಕೆ ಏರಿತ್ತು. 2021ರಲ್ಲಿ ದಾಖಲೆಯ 2.91 ಲಕ್ಷ ಭಾರತೀಯರು ಮಾಲ್ಡೀವ್ಸ್‌ಗೆ ತೆರಳಿದ್ದರು. ಕೋವಿಡ್‌ ನಿರ್ಬಂಧದ ಕಾರಣ ಆ ವರ್ಷ ಕೇವಲ 2,238 ಚೀನೀಯರು ಭೇಟಿ ನೀಡಿದ್ದರು.

ಇದನ್ನೂ ಓದಿ: ಮೋದಿ ಏಟಿಗೆ ತಬ್ಬಿಬ್ಬು; ಪ್ರವಾಸಿಗರ ಸೆಳೆಯಲು ಭಾರತದಲ್ಲಿ ರೋಡ್‌ಶೋಗೆ ಮಾಲ್ಡೀವ್ಸ್‌ ನಿರ್ಧಾರ!

ಇತರ ಕಾರಣಗಳು

ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿಯಲು ಇನ್ನೂ ಕೆಲವು ಕಾರಣಗಳಿವೆ. ವಿಯೆಟ್ನಾಂ ಮತ್ತು ಇಂಡೋನೇಷ್ಯಾಕ್ಕೆ ಸುಲಭ ಪ್ರವೇಶ, ನೇರ ಸಂಪರ್ಕ ಮತ್ತು ಥೈಲ್ಯಾಂಡ್ ಮತ್ತು ಮಲೇಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ ಇತ್ಯಾದಿ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮಾಲ್ಡೀವ್ಸ್‌ನ ಜನಪ್ರಿಯತೆ ಈಗ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಮಾಲ್ಡೀವ್ಸ್‌ ದುಬಾರಿ ಎನಿಸಿಕೊಂಡಿದೆ. ಇದೆಲ್ಲವೂ ಪರಿಣಾಮ ಬೀರಿದೆ.

Continue Reading

ಸಿನಿಮಾ

Banned Film: ಈ 9 ಹಾಲಿವುಡ್ ಚಿತ್ರಗಳು ಭಾರತದಲ್ಲಿ ಬ್ಯಾನ್!

Banned Film: ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಒಂದಷ್ಟು ಹಾಲಿವುಡ್ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿಲ್ಲ. ಭಾರತದಲ್ಲಿ ಪ್ರದರ್ಶನಗೊಳ್ಳದ ಆ ಸಿನಿಮಾಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Banned Films
Koo

ಬೆಂಗಳೂರು: ಭಾರತದಲ್ಲಿ ಯಾವುದೇ ಚಲನಚಿತ್ರಗಳು ಪ್ರದರ್ಶನ ಕಾಣಬೇಕೆಂದರೆ ಮೊದಲು ಭಾರತೀಯ ಸೆನ್ಸಾರ್ ಮಂಡಳಿಯ ಅನುಮತಿ ಪಡೆಯಬೇಕು.  ಭಾರತೀಯ ಸೆನ್ಸಾರ್ ಮಂಡಳಿಯು ಉತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಶ್ಲೀಲ ದೃಶ್ಯಾವಳಿ, ಕೆಟ್ಟ ಬೈಗುಳ ಪದಗಳಿರುವಂತಹ ಚಿತ್ರಗಳನ್ನು ಬ್ಯಾನ್ (Banned Film) ಮಾಡಲಾಗುತ್ತದೆ. ಇಂತಹ ಚಿತ್ರಗಳು ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಸೆನ್ಸಾರ್ ಮಂಡಳಿ ಅನುಮತಿ ನೀಡುವುದಿಲ್ಲ.

ಒಟಿಟಿ ಅಥವಾ ವಿದೇಶಿ ಮಾರುಕಟ್ಟೆಗಳಲ್ಲಿ ದೊಡ್ಡ ಹೆಸರು ಗಳಿಸಿರುವಂತಹ ಕೆಲವೊಂದು ಚಲನಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಸೆನ್ಸಾರ್ ಮಂಡಳಿ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಪ್ರಸಿದ್ಧ ಚಲನಚಿತ್ರಗಳನ್ನು ಭಾರತೀಯ ಸೆನ್ಸಾರ್ ಮಂಡಳಿಯು ಸ್ಪಷ್ಟ ವಿಷಯಗಳ ಕಾರಣದಿಂದ ಭಾರತದಲ್ಲಿ ನಿಷೇಧಿಸಿದೆ. ಅಂತಹ ಹಾಲಿವುಡ್ ಚಿತ್ರಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Banned Film

1. ಫಿಫ್ಟಿ ಶೇಡ್ಸ್ ಆಫ್ ಗ್ರೇ(Fifty Shade Of Gray)

ಈ ಚಿತ್ರದ ಕಥೆ ಅನಾ ಎಂಬ ಕಾಲೇಜು ವಿದ್ಯಾರ್ಥಿನಿಯ ಸುತ್ತ ಸುತ್ತುತ್ತದೆ. ಆಕೆ ಒಬ್ಬ ವ್ಯಾಪಾರಿ ಉದ್ಯಮಿ ಕ್ರಿಶ್ಚಿಯನ್ನೊಂದಿಗೆ ಸಂಬಂಧ ಹೊಂದುತ್ತಾಳೆ. ಈ ಚಿತ್ರದಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ಭಾರತೀಯ ಸೆನ್ಸರ್ ಮಂಡಳಿ ನಿಷೇಧಿಸಿದೆ.

Banned Film

2. ದ ಡಾ ವಿನ್ಸಿ ಕೋಡ್ (The Da Vinci Code)

ಈ ಚಿತ್ರ ಡಿ ವಿನ್ಸಿ ಕೋಡ್ ರಾಬರ್ಟ್ ಲ್ಯಾಂಗ್ಡನ್ ಎಂಬ ಸಂಕೇತಶಾಸ್ತ್ರಜ್ಞನ ಬಗ್ಗೆ ಚಿತ್ರಿಸುತ್ತದೆ. ಅವರು ಪ್ಯಾರಿಸ್ ನಿಂದ ಲಂಡನ್ ಗೆ ಒಂದು ಕೊಲೆಯ ಬಗ್ಗೆ ತಿಳಿಯಲು ಹೋಗುತ್ತಾರೆ. ಈ ಚಿತ್ರದಲ್ಲಿ ಕ್ರಿಶ್ಚಿಯನ್ ವಿರೋಧಿ ಸಂದೇಶವನ್ನು ನೀಡಲಾಗಿದೆ. ಹಾಗಾಗಿ ಈ ಚಿತ್ರವನ್ನು ನಿಷೇಧಿಸುವಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಾರತೀಯ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ಬ್ಯಾನ್ ಮಾಡಿದೆ.

3. ದ ಗರ್ಲ್ ವಿತ್ ಡ್ರ್ಯಾಗನ್ ಟ್ಯಾಟೂ (The Girl With Dragon Tattoo)

ಈ ಚಿತ್ರ ನಲವತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬಳ ಪ್ರಕರಣವನ್ನು ಭೇದಿಸಲು ಕಂಪ್ಯೂಟರ್ ಹ್ಯಾಕರ್ ಅನ್ನು ನೇಮಿಸಿಕೊಳ್ಳುವ ಪತ್ರಕರ್ತನ ಸುತ್ತ ಸುತ್ತುತ್ತದೆ. 2011ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಸೆನ್ಸರ್ ಮಂಡಳಿ ತೆಗೆದುಹಾಕುವಂತೆ ಹೇಳಿತು. ಆದರೆ ನಿರ್ದೇಶಕ ಡೇವಿಡ್ ಫಿಂಚರ್ ಇದನ್ನು ನಿರಾಕರಿಸಿದ್ದರಿಂದ ಭಾರತದಲ್ಲಿ ಈ ಚಿತ್ರ ಬಿಡುಗಡೆಯಾಗಲಿಲ್ಲ.

Banned Film

4. ಡರ್ಟಿ ಗ್ರ್ಯಾಂಡ್ ಪಾ( durty Grand pa)

ಇದು  ಯುಎಸ್ ನ ಮಿಲಿಟರಿ ಪರಿಣತರನ್ನು ಆಧರಿಸಿದ ಚಿತ್ರವಾಗಿದೆ. ಒಬ್ಬ ಅಜ್ಜ ಮೊಮ್ಮಗ ಜೇಸನ್ ಎನ್ನುವವನನ್ನು ತನ್ನ ಜೊತೆ ಪ್ಲೋರಿಡಾಕ್ಕೆ ಕರೆದೊಯ್ದರು. ಪ್ರವಾಸದ ವೇಳೆ ಅಜ್ಜನ ಸರಣಿ ದುಷ್ಕೃತ್ಯಗಳ ಬಗ್ಗೆ ಆತನಿಗೆ ತಿಳಿದಿರುವುದಿಲ್ಲ. ಈ ಚಿತ್ರದಲ್ಲಿ ಲೈಂಗಿಕತೆಯ ಬಗ್ಗೆ ಬಿಂಬಿಸಿದ ಕಾರಣ ಇದು ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Banned Film

5. ಬ್ಲೂ ಜಾಸ್ಮಿನ್ ( Blue Jasmine)

ಈ ಚಿತ್ರದಲ್ಲಿ ಕೆಲವು ಪಾತ್ರಗಳು ಹೆಚ್ಚು ಧೂಮಪಾನ ಮಾಡುತ್ತಿರುವುದು ಕಂಡುಬಂದ ಕಾರಣ ಅದನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ತಿಳಿಸಿದ್ದು, ಇದಕ್ಕೆ ನಿರ್ದೇಶಕರು ಒಪ್ಪದ ಕಾರಣ ಈ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

6. ಐ ಸ್ಪಿಟ್ ಆನ್ ಯುವರ್ ಗ್ರೇವ್ ( I Spit On Your Grave)

ಈ ಚಿತ್ರ ವಿವಾದಾತ್ಮಕವಾಗಿದ್ದು, ಹಲವಾರು ಭಯಾನಕ ಲೈಂಗಿಕ ಕಿರುಕುಳದ ದೃಶ್ಯಗಳನ್ನು ಹೊಂದಿದೆ. ಮೀರ್ ಜಾರ್ಚಿ ನಿರ್ದೇಶನದ ಈ ಚಿತ್ರವನ್ನು ಭಾರತ ಮಾತ್ರವಲ್ಲದೇ ಯುಕೆ, ಕೆನಡಾ, ಚೀನಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ.

7. ಇಂಡಿಯಾನ ಜೋನ್ಸ್ ಆ್ಯಂಡ್ ದ ಟೆಂಪಲ್ ಆಫ್ ಡೂಮ್( Indiana Jones And The Temple Of Doom)

ಆರಾಧನೆಯ ಹೆಸರಿನಲ್ಲಿ ಬಲಿಪಶುಗಳನ್ನು ಬೆಂಕಿಗೆ ಎಸೆಯುವಂತಹ ಕ್ರೂರ ದೃಶ್ಯವನ್ನು ಒಳಗೊಂಡ ಈ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಿಲ್ಲ. ಭಾರತೀಯ ಸೆನ್ಸಾರ್ ಮಂಡಳಿ ಇದನ್ನು ಕೆಟ್ಟ ಆಚರಣೆಯ ಮನಸ್ಥಿತಿ ಎಂದು ನಿಷೇಧಿಸಿದೆ.

8. ಗೆಟ್ ಹಾರ್ಡ್(Get Hard)

ಕಾಮಿಡಿ ಥ್ರಿಲ್ಲರ್ ಜೇಮ್ಸ್ ಕಿಂಗ್ ಎಂಬ ವ್ಯಕ್ತಿಯನ್ನು ಬಗ್ಗೆ ತಿಳಿಸುತ್ತದೆ ಮತ್ತು ಅವರು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ. ಇದರಿಂದ ಜನರು ಆಕ್ರೋಶಗೊಳ್ಳಬಹುದು ಎಂದು ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Banned Film

9. ಮ್ಯಾಜಿಕ್ ಮೈಕ್ XXL( magic mike XXL)

ಈ ಚಿತ್ರ ಸ್ಟ್ರಿಪ್ಪರ್ ಎಂಬ ಪುರುಷನ ಜೀವನವನ್ನು ಬಿಂಬಿಸುತ್ತದೆ. ಈ ವ್ಯಕ್ತಿ ಸಮಾವೇಶಕ್ಕಾಗಿ ಮಿರ್ಟಲ್ ಬೀಚ್ ಗೆ ತಮ್ಮ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಾನೆ. ಆ ವೇಳೆ ಅವರು ತಮ್ಮ ಹಿಂದಿನ ಹಳೆಯ ನೆನಪುಗಳನ್ನು ಪುನರುಜ್ಜೀವನ ಗೊಳಿಸುತ್ತಾರೆ. ಇದರಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಬಿಂಬಿಸಲಾದ್ದರಿಂದ ಭಾರತದಲ್ಲಿ ಮೊದಲ ಬಾರಿಗೆ ನಿಷೇಧಗೊಂಡಿತ್ತು. ನಂತರ ಅದರಲ್ಲಿರುವ ದೃಶ್ಯವನ್ನು ಕತ್ತರಿಸಲು ಸೆನ್ಸಾರ್ ಮಂಡಳಿ ತಿಳಿಸಿದರೂ ಅದನ್ನು ನಿರಾಕರಿಸಿದ ಕಾರಣ ಅದು ಎರಡನೇ ಬಾರಿ ನಿಷೇಧಗೊಂಡಿತ್ತು. ಹಾಗಾಗಿ ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Continue Reading

ವಿದೇಶ

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Workers protest: ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಗೂಗಲ್ ಕಂಪೆನಿಯ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದ್ದು, ಇದೀಗ 28 ಮಂದಿಯನ್ನು ವಜಾಗೊಳಿಸಲಾಗಿದೆ.

VISTARANEWS.COM


on

By

Workers protest
Koo

ನ್ಯೂಯಾರ್ಕ್: ಇಸ್ರೇಲ್ ನೊಂದಿಗಿನ (Israel) ಕಂಪೆನಿ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಉದ್ಯೋಗಿಗಳನ್ನು (Workers protest) ಟೆಕ್ ದೈತ್ಯ ಗೂಗಲ್ (google) ವಜಾಗೊಳಿಸಿದೆ. ಇಸ್ರೇಲ್ ಸರ್ಕಾರ ಮತ್ತು ಸೇನೆಗೆ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸಲು ಗೂಗಲ್ ಅಮೆಜಾನ್ ನೊಂದಿಗೆ (Amazon) ಸೇರಿ 1.2 ಬಿಲಿಯನ್ ಡಾಲರ್ ನ ಒಪ್ಪಂದ ಮಾಡಿಕೊಂಡಿತ್ತು.

ಇಸ್ರೇಲ್ ಸರ್ಕಾರದೊಂದಿಗೆ ಗೂಗಲ್ ಮಾಡಿರುವ 1.2 ಬಿಲಿಯನ್ ಡಾಲರ್ ಜಂಟಿ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ (Project Nimbus) ಅನ್ನು ವಿರೋಧಿಸಿ ಸಿಯಾಟಲ್, ನ್ಯೂಯಾರ್ಕ್ (New York) ಮತ್ತು ಕ್ಯಾಲಿಫೋರ್ನಿಯಾದ (California) ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ಕಾರ್ಮಿಕರು ಏಪ್ರಿಲ್ 16 ರಂದು ಪ್ರತಿಭಟನೆ ನಡೆಸಿದ್ದರು.

ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪನಿಯ ಕಚೇರಿಗಳಲ್ಲಿ ಮಂಗಳವಾರ ರಾತ್ರಿ ಧರಣಿ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಇದೀಗ 28 ಮಂದಿಯನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ಒಂಬತ್ತು ಮಂದಿ ಬಂಧನ

ಪ್ರಾಜೆಕ್ಟ್ ನಿಂಬಸ್ ವಿರುದ್ಧ ನೋ ಟೆಕ್ ಫಾರ್ ಅಪಾರ್ತೀಡ್ ಸಂಘಟನೆಯ ನೇತೃತ್ವದಲ್ಲಿ ಗೂಗಲ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ನ್ಯೂಯಾರ್ಕ್ ಕಚೇರಿ ಹಾಗೂ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ನಡೆದ ಪ್ರತಿಭಟನೆ ವೇಳೆ ಒಂಬತ್ತು ಗೂಗಲ್ ಉದ್ಯೋಗಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಇಸ್ರೇಲ್ ಜೊತೆಗಿನ ಒಪ್ಪಂದ ಏನು ?

ಇಸ್ರೇಲ್ ಸರ್ಕಾರ ಮತ್ತು ಮಿಲಿಟರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ನೀಡಲು ಗೂಗಲ್ ಮತ್ತು ಅಮೆಜಾನ್ ಜಂಟಿಯಾಗಿ 1.2 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು, ಡೇಟಾ ಕೇಂದ್ರಗಳು ಮತ್ತು ಇತರ ಕ್ಲೌಡ್ ಮೂಲಸೌಕರ್ಯಗಳು ಸೇರಿವೆ.

ತನಿಖೆ ಮುಂದುವರಿಯಲಿದೆ

ಗೂಗಲ್ ಉದ್ಯೋಗಿಗಳ ಪ್ರತಿಭಟನೆ ಬಳಿಕ ಸಂದೇಶ ಕಳುಹಿಸಿರುವ ಗ್ಲೋಬಲ್ ಸೆಕ್ಯುರಿಟಿಯ ಗೂಗಲ್‌ನ ಉಪಾಧ್ಯಕ್ಷ ಕ್ರಿಸ್ ರಾಕೋವ್, ಪ್ರಕರಣದ ತನಿಖೆಯ ಬಳಿಕ ಇದೀಗ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯವಿರುವಂತೆ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಬಂಧಿತರಾಗಿರುವ ಕೆಲವರನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಮುಂದೆ ಅವರು ಕೆಲಸಕ್ಕೆ ಮರಳಲು ಹೆಚ್ ಆರ್ ಮೂಲಕ ಸಂಪರ್ಕಿಸುವವರೆಗೆ ಕಾಯಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ನೋ ಟೆಕ್ ಫಾರ್ ವರ್ಣಭೇದ ನೀತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗೂಗಲ್ 28 ಮಂದಿ ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದೆ. 10 ಗಂಟೆಗಳ ಧರಣಿಯಲ್ಲಿ ನೇರವಾಗಿ ಭಾಗವಹಿಸದೇ ಇರುವವರೂ ಇದರಲ್ಲಿ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಾಜೆಕ್ಟ್ ನಿಂಬಸ್ ವಿರುದ್ಧ ಗುಂಪು ಸಂಘಟಿಸಲಾಗುತ್ತಿದೆ. ಅವರ ಕಾಳಜಿಗಳ ಬಗ್ಗೆ ಎಕ್ಸಿಕ್ಯೂಟಿವ್‌ನಿಂದ ಇದುವರೆಗೂ ಏನೂ ಕೇಳಿಲ್ಲ ಎಂದು ಅದು ಹೇಳಿದೆ.

ಗೂಗಲ್ ಏನು ಹೇಳಿದೆ?

ಕಚೇರಿಗಳಲ್ಲಿ ನಡೆದ ಪ್ರತಿಭಟನೆಗಳ ವರದಿಗಳ ಬಗ್ಗೆ ನೋಡಿದ್ದೀರಿ, ಕೇಳಿದ್ದೀರಿ. ದುರದೃಷ್ಟವಶಾತ್ ಹಲವಾರು ಉದ್ಯೋಗಿಗಳು ನ್ಯೂಯಾರ್ಕ್ ಮತ್ತು ಸನ್ನಿವೇಲ್‌ನಲ್ಲಿರುವ ಕಟ್ಟಡಗಳಿಗೆ ಸೇರಿದ ಆಸ್ತಿಗೆ ಹಾನಿಗೊಳಿಸಿದ್ದಾರೆ. ಇತರ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಅವರ ನಡವಳಿಕೆಯು ಸ್ವೀಕಾರಾರ್ಹವಲ್ಲ. ಇದು ಇತರ ಸಹೋದ್ಯೋಗಿಗಳಲ್ಲಿ ಬೆದರಿಕೆಯನ್ನುಂಟು ಮಾಡಿತು. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಉದ್ಯೋಗಿಗಳನ್ನು ತನಿಖೆಯ ಅಡಿಯಲ್ಲಿ ಇರಿಸಿದ್ದೇವೆ. ನಮ್ಮ ಸಿಸ್ಟಮ್‌ಗಳಿಗೆ ಅವರ ಪ್ರವೇಶವನ್ನು ಕಡಿತಗೊಳಿಸಿದ್ದೇವೆ. ತನಿಖೆಯ ಬಳಿಕ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇನ್ನೂ ತನಿಖೆ ಮುಂದುವರಿಯಲಿದೆ. ಅಗತ್ಯವಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ.

ಈ ರೀತಿಯ ವರ್ತನೆಗೆ ನಮ್ಮ ಕೆಲಸದ ಸ್ಥಳದಲ್ಲಿ ಸ್ಥಾನವಿಲ್ಲ ಮತ್ತು ನಾವು ಅದನ್ನು ಸಹಿಸುವುದಿಲ್ಲ. ನಮ್ಮ ನೀತಿ ಸಂಹಿತೆ ಮತ್ತು ಕಿರುಕುಳ, ತಾರತಮ್ಯ, ಪ್ರತೀಕಾರ, ನಡವಳಿಕೆಯ ಮಾನದಂಡಗಳು ಮತ್ತು ಕಾರ್ಯಸ್ಥಳದ ಕಾಳಜಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳು ಅನುಸರಿಸಬೇಕಾದ ಬಹು ನೀತಿಗಳನ್ನು ಇದು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ನೀತಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಂಪೆನಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.

Continue Reading
Advertisement
Pragya Misra
ತಂತ್ರಜ್ಞಾನ2 mins ago

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Neha Murder case JDS slams hands for defending love jihad to protect accused
ಕ್ರೈಂ5 mins ago

Neha Murder Case: ನೇಹಾಳನ್ನು ಮದುವೆ ಮಾಡಿಸುವಂತೆ ಆಕೆಯ ಹೆತ್ತವರ ಪ್ರಾಣ ತಿಂದಿದ್ದ ಫಯಾಜ್!‌

Drunken Groom
ದೇಶ5 mins ago

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Nysa Devgan Kajol shares 3 new pics
ಸಿನಿಮಾ12 mins ago

Nysa Devgan: ಕಾಜೋಲ್‌ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ! ನೈಸಾಗೆ ವಯಸ್ಸೆಷ್ಟು?

IPL 2024
ಕ್ರೀಡೆ17 mins ago

IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್​, ರಾಹುಲ್​ಗೆ ದಂಡ

Neha Murder Case
ಹುಬ್ಬಳ್ಳಿ45 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Lok sabha election-2024
Latest57 mins ago

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Viral Video
ದೇಶ1 hour ago

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

AC Helmet
ದೇಶ1 hour ago

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

Tarak Ponnappa out of udho udho sri renuka yellamma serial
ಕಿರುತೆರೆ1 hour ago

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ45 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ21 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

ಟ್ರೆಂಡಿಂಗ್‌