ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಭಾರತ; 'ಹಮಾಸ್'‌ ಹೆಸರಿರದ ವಿಶ್ವಸಂಸ್ಥೆ ನಿರ್ಣಯಕ್ಕೆ ಮತ ಇಲ್ಲ - Vistara News

ಪ್ರಮುಖ ಸುದ್ದಿ

ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಭಾರತ; ‘ಹಮಾಸ್’‌ ಹೆಸರಿರದ ವಿಶ್ವಸಂಸ್ಥೆ ನಿರ್ಣಯಕ್ಕೆ ಮತ ಇಲ್ಲ

Israel Palestine War: ಗಾಜಾದಲ್ಲಿ ಕದನವಿರಾಮ ಘೋಷಣೆ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದು, ಹಮಾಸ್‌ ಉಗ್ರರ ದಾಳಿ ಪ್ರಸ್ತಾಪಿಸದ ಕಾರಣ ಭಾರತವು ಮತದಾನದಿಂದ ದೂರ ಉಳಿದಿದೆ.

VISTARANEWS.COM


on

Narendra Modi And Benjamin Netanyahu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವಸಂಸ್ಥೆ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ದಾಳಿ-ಪ್ರತಿದಾಳಿ (Israel Palestine War) ಮುಂದುವರಿದಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು (Hamas Terrorists), ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಪ್ರತಿದಾಳಿಗೆ ಇದುವರೆಗೆ 7 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಗಾಜಾ ನಗರದಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸುವ ದಿಸೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ಆದರೆ, ನಿರ್ಣಯದಲ್ಲಿ ಹಮಾಸ್‌ ದಾಳಿಯ ಪ್ರಸ್ತಾ ಇರದ ಕಾರಣ ಭಾರತವು ಮತದಾನದಿಂದ ದೂರ ಉಳಿದಿದೆ. ಜೋರ್ಡಾನ್ ಪ್ರಸ್ತಾಪಿಸಿದ ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದೆ. ಆದರೆ ಹಮಾಸ್ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಇದರಿಂದಾಗಿಯೇ ಭಾರತವು ನಿರ್ಣಯದ ಮತದಾನದಿಂದ ದೂರ ಉಳಿದಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಇದು ಪರೋಕ್ಷವಾಗಿ ಇಸ್ರೇಲ್‌ಗೆ ಬೆಂಬಲ ನೀಡಿದಂತಾಗಿದ್ದು, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ.

ಜೋರ್ಡಾನ್ ಪ್ರಸ್ತಾವಿಸಿದ ‘ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಕಟ್ಟುಪಾಡುಗಳನ್ನು ಎತ್ತಿಹಿಡಿಯುವುದು’ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು. 120 ರಾಷ್ಟ್ರಗಳು ಅದರ ಪರವಾಗಿ, 14 ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್, ಬ್ರಿಟನ್ ಸೇರಿ 45 ದೇಶಗಳು ಮತದಾನದಿಂದ ದೂರ ಉಳಿದವು.

ಎರಡು ಪ್ರಮುಖ ಪದಗಳಿಲ್ಲ

ನಿರ್ಣಯದಲ್ಲಿ ಹಮಾಸ್ ಮತ್ತು ಒತ್ತೆಯಾಳುಗಳು ಎರಡು ಪ್ರಮುಖ ಪದಗಳು ಕಾಣೆಯಾಗಿವೆ ಎಂದು ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಮತದಾನಕ್ಕೆ ಮೊದಲು ತಿಳಿಸಿದರು. “ನಮ್ಮ ಮುಂದಿರುವ ನಿರ್ಣಯದಲ್ಲಿ ಎರಡು ಪ್ರಮುಖ ಪದಗಳು ಕಾಣೆಯಾಗಿವೆ. ಮೊದಲನೆಯದು ಹಮಾಸ್. ಅಕ್ಟೋಬರ್ 7ರ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಾದ ಹಮಾಸ್ ಹೆಸರನ್ನು ಹೇಳಲು ಈ ನಿರ್ಣಯವು ವಿಫಲವಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ನಿರ್ಣಯವು ಮುಗ್ಧ ಜನರ ಬಗ್ಗೆ ಉಲ್ಲೇಖವನ್ನು ಹೊಂದಿಲ್ಲ. ಇವು ಗಂಭೀರ ಲೋಪಗಳು. ಇದು ಹಮಾಸ್‌ನ ಕ್ರೌರ್ಯಕ್ಕೆ ರಕ್ಷಣೆ ನೀಡುವಂತಾಗುತ್ತದೆ. ಯಾವುದೇ ಸದಸ್ಯ ರಾಷ್ಟ್ರ ಇದಕ್ಕೆ ಅವಕಾಶ ನೀಡಬಾರದು” ಎಂದು ಅವರು ಎಚ್ಚರಿಸಿದ್ದಾರೆ.

ಭಾರತದ ಪ್ರತಿನಿಧಿ ಹೇಳಿದ್ದೇನು?

ಮತದಾನದ ನಂತರ ಮಾತನಾಡಿದ ಭಾರತದ ಪ್ರತಿನಿಧಿ ಯೋಜ್ನಾ ಪಟೇಲ್, “ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ ಮತ್ತು ಖಂಡನಾರ್ಹ. ಭಯೋತ್ಪಾದಕ ಕೃತ್ಯಗಳ ಯಾವುದೇ ಸಮರ್ಥನೆಯನ್ನು ಜಗತ್ತು ಅಂಗೀಕರಿಸಬಾರದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡೋಣ ಮತ್ತು ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳೋಣ” ಎಂದು ಅವರು ಹೇಳಿದ್ದಾರೆ. ʼʼಹಮಾಸ್ ದಾಳಿಗಳು ಮೂಲಭೂತ ಮಾನವೀಯ ಮೌಲ್ಯಗಳಿಗೆ ಅವಮಾನಕರವಾದ ಪ್ರಮಾಣ ಮತ್ತು ತೀವ್ರತೆಯಲ್ಲಿವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Sponge Bomb: ಇಸ್ರೇಲಿ ಪಡೆಗಳಿಗೆ ಹೊಸ ಶಸ್ತ್ರ! ಏನಿದು ‘ಸ್ಪಾಂಜ್ ಬಾಂಬ್’?

“ಉದ್ವಿಗ್ನತೆಯನ್ನು ಕಡಿಮೆ ಮಾಡಲು, ಹಿಂಸಾಚಾರವನ್ನು ತ್ಯಜಿಸಲು ಮತ್ತು ನೇರ ಶಾಂತಿ ಮಾತುಕತೆಗಳನ್ನು ಶೀಘ್ರವಾಗಿ ಪುನರಾರಂಭಿಸಲು ನಾವು ಆಗ್ರಹಿಸುತ್ತೇವೆ. ಈ ಸಭೆಯ ಚರ್ಚೆಗಳು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ‘ಹಮಾಸ್‌ನ ಭಯೋತ್ಪಾದಕ ದಾಳಿಗಳನ್ನು’ ಖಂಡಿಸುವ ವಿಚಾರವನ್ನು ಸೇರಿಸುವ ತಿದ್ದುಪಡಿಯನ್ನು ಕೆನಡಾ ಪ್ರಸ್ತಾಪಿಸಿತ್ತು. ಕೆನಡಾದ ಪ್ರಸ್ತಾವಿತ ತಿದ್ದುಪಡಿಯ ಪರವಾಗಿ ಭಾರತವು ಇತರ 87 ರಾಷ್ಟ್ರಗಳೊಂದಿಗೆ ಮತ ಚಲಾಯಿಸಿತು. ಆದರೆ ಅದು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿಲ್ಲದ ಕಾರಣ ಅದನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಭವಿಷ್ಯ

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಗುರುವಾರ ಮಧ್ಯಾಹ್ನ 01:29 ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮಿಥುನ ರಾಶಿಯವರು ಭೂ ಸಂಬಂಧಿ ವ್ಯವಹಾರಗಳಲ್ಲಿ ಲಾಭವಾಗಲಿದೆ.ಉತ್ಸಾಹದ ಜೊತೆಗೆ ನಿಮ್ಮ ಕನಸು ನನಸಾಗುವ ಕಾಲ ಕೂಡಿ ಬರಲಿದೆ.ವ್ಯಾಪಾರದಲ್ಲಿ ಅಧಿಕ ಲಾಭ ಸಿಗಲಿದೆ. ಜೀವನ ಸಂಗಾತಿಯ ಮಹತ್ವ ಮನವರಿಕೆ ಆಗಲಿದೆ.ಆರೋಗ್ಯ ಪರಿಪೂರ್ಣವಾಗಿರಲಿದೆ.ಉದ್ಯೋಗಿಗಳಿಗೆ ಕೊಂಚ ಮಟ್ಟಿನ ಕಿರಿಕಿರಿ ಸಾಧ್ಯತೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (31-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷ.
ತಿಥಿ: ಚತುರ್ದಶಿ 15:52 ವಾರ: ಗುರುವಾರ
ನಕ್ಷತ್ರ: ಚಿತ್ತಾ 24:43 ಯೋಗ: ವಿಷ್ಕುಂಭ 09:49
ಕರಣ: ಶಕುನಿ 15:52 ಅಮೃತಕಾಲ: ಸಂಜೆ 05:32 ರಿಂದ 07:20
ದಿನದ ವಿಶೇಷ: ನರಕ ಚತುರ್ದಶಿ, ಉಲ್ಕಾ ದರ್ಶನ

ಸೂರ್ಯೋದಯ : 06:12   ಸೂರ್ಯಾಸ್ತ : 05:54

ರಾಹುಕಾಲ: ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ
9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕಲೆ ಮತ್ತು ರಂಗಭೂಮಿಯ ಜತೆ ಸಂಪರ್ಕ ಹೊಂದಿರುವವರು ಸೃಜನಶೀಲವಾಗಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಧುರತೆ ಇರಲಿದೆ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ದೀರ್ಘಕಾಲೀನ ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಅನಗತ್ಯ ವಿಷಯಗಳ ಬಗ್ಗೆ ಸಮಯ ಕೊಡಬೇಡಿ.ಸಂಗಾತಿಯ ಸಲಹೆ ಹಿತಕರವೆನಿಸಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಭೂ ಸಂಬಂಧಿ ವ್ಯವಹಾರಗಳಲ್ಲಿ ಲಾಭವಾಗಲಿದೆ.ಉತ್ಸಾಹದ ಜೊತೆಗೆ ನಿಮ್ಮ ಕನಸು ನನಸಾಗುವ ಕಾಲ ಕೂಡಿ ಬರಲಿದೆ.ವ್ಯಾಪಾರದಲ್ಲಿ ಅಧಿಕ ಲಾಭ ಸಿಗಲಿದೆ. ಜೀವನ ಸಂಗಾತಿಯ ಮಹತ್ವ ಮನವರಿಕೆ ಆಗಲಿದೆ.ಆರೋಗ್ಯ ಪರಿಪೂರ್ಣವಾಗಿರಲಿದೆ.ಉದ್ಯೋಗಿಗಳಿಗೆ ಕೊಂಚ ಮಟ್ಟಿನ ಕಿರಿಕಿರಿ ಸಾಧ್ಯತೆ.ಕೌಟುಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕಟಕ: ದೈಹಿಕ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ವಿಶ್ರಾಂತಿ ತೆಗೆದುಕೊಳ್ಳಿ. ಹಳೆಯ ನೆನಪುಗಳು ತಮಗೆ ಸಂತಸ ತರಲಿದೆ.ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ, ಆದಷ್ಟು ಸಂಯಮ ಕಳೆದುಕೊಳ್ಳುವುದು ಬೇಡ.ಉದ್ಯೋಗಿಗಳಿಗೆ ಕಿರಿಕಿರಿ.ಆರ್ಥಿಕ ವ್ಯವಹಾರಗಳಲ್ಲಿ ಅಧಿಕ ಲಾಭ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಆರೋಗ್ಯದ ಕಡೆ ವಿಶೇಷ ಗಮನ ಹರಿಸಿ.ಅಧಿಕ ರಕ್ತ ಒತ್ತಡದ ರೋಗಿಗಳು ಆಲಸ್ಯವನ್ನು ಮಾಡಲೇಬೇಡಿ.ಉದ್ಯೋಗಿಗಳಿಗೆ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ.ಅರ್ಥಿಕವಾಗಿ ಸಾಧಾರಣ ಪ್ರಗತಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ: ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ.ಯಾವುದೇ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ, ನಷ್ಟ ಸಾಧ್ಯತೆ, ಎಚ್ಚರಿಕೆ ಇರಲಿ.ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸ ವಾತಾವರಣ ಇರಲಿದೆ. ಸೃಜನಶೀಲತೆಯಿಂದ ಕೆಲಸ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ. ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಾಧಾರಣ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಚೆನ್ನಾಗಿರುತ್ತದೆ. ಒಡಹುಟ್ಟಿದವರು ನಿಮ್ಮ ಸಹಾಯ ಯಾಚಿಸಬಹುದು.ಆರ್ಥಿಕವಾಗಿ ನಿಮಗೆ ಮಧ್ಯಮ ಫಲ ಇರಲಿದೆ.ಸ್ನೇಹಿತರ ವರ್ಗದಿಂದ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು.ಉದ್ಯೋಗಿಗಳಿಗೆ ಕೆಲಸದ ಒತ್ತಡ ಇದ್ದರೂ ದೈಹಿಕವಾಗಿ ನೀವು ಸದೃಢವಾಗಿ ಕೆಲಸ ನಿಭಾಯಿಸುವಲ್ಲಿ ಯಶಸ್ಸು ಪಡೆಯುವಿರಿ.ಕೌಟುಂಬಿಕವಾಗಿ ಶುಭ ಫಲವಿದೆ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ದೈಹಿಕವಾಗಿ ಮಾನಸಿಕವಾಗಿ ಬಳಲವ ಸಾಧ್ಯತೆ, ಆದಷ್ಟು ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ.ಆಧ್ಯಾತ್ಮ ಮತ್ತು ಯೋಗ ಹೆಚ್ಚಿನ ನೆಮ್ಮದಿ ತರಲಿದೆ.ಹೂಡಿಕೆ ವ್ಯವಹಾರಗಳಲ್ಲಿ ಲಾಭ ಸಿಗಲಿದೆ.ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ.ಸಹದ್ಯೋಗಿಗಳು ನಿಮ್ಮ ಹಿಂದೆ ಪಿತೂರಿ ನಡೆಸುವ ಸಾಧ್ಯತೆ ಆದಷ್ಟು ಎಚ್ಚರಿಕೆ ಇರಲಿ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಆರ್ಥಿಕವಾಗಿ ಸುಧಾರಣೆ ಆಗುವುದರಿಂದ,ಇಂದು ಕೊಂಚ ನೆಮ್ಮದಿಯಿಂದ ಇರುವಿರಿ.ದೀರ್ಘಕಾಲದ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಅದೃಷ್ಟದ ಬಾಗಿಲು ತೆರೆದು ಹೊಸ ಅವಕಾಶಗಳು ಸಿಗಲಿವೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮಕರ: ಸಾಲದ ಮರುಪಾವತಿ ಆಗಲಿದೆ ಹೀಗಾಗಿ ಆರ್ಥಿಕವಾಗಿ ಸದೃಢ.ದೈಹಿಕ ಆರೋಗ್ಯದ ಕಡೆ ಕೊಂಚ ಗಮನ ಹರಿಸಿ.ಅನಗತ್ಯ ಅನುಮಾನ ದಿನದ ಕೊನೆಯಲ್ಲಿ ನೆಮ್ಮದಿ ಹಾಳು ಮಾಡುವ ಸಾಧ್ಯತೆ,ಅದರ ಕಡೆಗೆ ಗಮನ ಹರಿಸದಿರಿ.ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಟ್ಟರೆ ಭರವಸೆಯ ಹೊಸ ಅವಕಾಶಗಳು ಸಿಕ್ಕಾವು ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ತೊಡಗಿ.ಉದ್ಯೋಗಿಗಳಿಗೆ ಒತ್ತಡ ಇದ್ದರೂ ಯಾವುದೇ ತೊಂದರೆ ಇಲ್ಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಿರಿ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಸರಿಯಾದ ಆಲೋಚನೆಗಳು ಹಾಗೂ ಕಾರ್ಯಗಳು ನಿಮಗೆ ಅಗತ್ಯವಿರುವ ಸಮಾಧಾನವನ್ನು ತರುತ್ತವೆ.ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ, ತಾತ್ಸಾರ ಮನೋಭಾವ ಬೇಡ.ಸಂಗಾಂತಿಯೊಂದಿಗೆ ವಿನಾಕಾರಣ ವಾದಕ್ಕೆ ಇಳಿದೆ ಮನೆಯಲ್ಲಿ ನೆಮ್ಮದಿ ವಾತಾವರಣ ಹಾಳು ಮಾಡುವುದು ಬೇಡ.ಉದ್ಯೋಗಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ.ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮೀನ: ಉದ್ಯೋಗದ ಸ್ಥಳದಲ್ಲಿ ನೀವು ಯಾವುದೇ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದರಿಂದ ಹೊರಬರಬಹುದು.ಕುಟುಂಬದಲ್ಲಿ ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು.ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ.
ಆರ್ಥಿಕವಾಗಿ ಬಲ ಹೆಚ್ಚಲಿದೆ. ಉದ್ಯೋಗಿಗಳಿಗೆ ಶುಭ ಫಲ.ದಾಂಪತ್ಯದಲ್ಲಿ ಮಧುರತೆ ಇರಲಿದೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಸಿನಿಮಾ

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

Actor Darshan: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, 6 ವಾರಗಳ ನಂತ್ರ ಮತ್ತೆ ಸರೆಂಡರ್‌ ಆಗಬೇಕಿದೆ

VISTARANEWS.COM


on

By

Hc grants interim bail to actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶ ನೀಡಿದೆ.

ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಏನಿದು ಕೊಲೆ ಕೇಸ್‌?

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಪವಿತ್ರಾಗೌಡ ಖುಷಿ

ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.

Continue Reading

ಭವಿಷ್ಯ

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ಕನ್ಯಾ ರಾಶಿಯಿಂದ ಮಂಗಳವಾರ ತುಲಾ ರಾಶಿಯನ್ನು ಮಧ್ಯರಾತ್ರಿ 12:29ಕ್ಕೆ ಪ್ರವೇಶಿಸುತ್ತಾನೆ. ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ಸತತ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಲಿದೆ. ಉದ್ಯೋಗಿಗಳಿಗೆ ಕೊಂಚ ಕೆಲಸದ ನಿರಾಳತೆ ಸಿಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (30-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷ.
ತಿಥಿ: ತ್ರಯೋದಶಿ 13:14 ವಾರ: ಬುಧವಾರ
ನಕ್ಷತ್ರ: ಹಸ್ತಾ 21:42 ಯೋಗ: ವೈಧೃತಿ 08:50
ಕರಣ: ವಣಿಜ 13:14 ಅಮೃತಕಾಲ: ಮಧ್ಯಾಹ್ನ 02:56 ರಿಂದ 04:45
ದಿನದ ವಿಶೇಷ: ಮಾದೇಶ್ವರ ಬೆಟ್ಟದಲ್ಲಿ ಜಾತ್ರಾರಂಭ

ಸೂರ್ಯೋದಯ : 06:12   ಸೂರ್ಯಾಸ್ತ : 05:54

ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ
10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಬಣ್ಣದ ಮಾತುಗಳನ್ನು ನಂಬಿ ಇಂದು ಯಾವುದೇ ಹೂಡಿಕೆ ವ್ಯವಹಾರಗಳಲ್ಲಿ ತೊಡಗುವುದು ಬೇಡ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ಬೇಸರ ತರಿಸಬಹುದು. ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಹಾಸ್ಯಪ್ರಜ್ಞೆಯ ನಡವಳಿಕೆಯಿಂದಾಗಿ ಇತರರನ್ನು ಚುಂಬಕದಂತೆ ಆಕರ್ಷಿಸಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವಿರಿ. ಭೂ ಹಾಗೂ ಹೂಡಿಕೆ ವ್ಯವಹಾರಗಳಲ್ಲಿ ದಿನದ ಮಟ್ಟಿಗೆ ತೊಡುಗುವುದು ಬೇಡ. ಇದರಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ.
ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಮಿಶ್ರ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಉತ್ಸಾಹ ತುಂಬಿದ ವಾತಾವರಣ ಇರಲಿದೆ. ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಅನಾವಶ್ಯಕ ಖರ್ಚು ಮಾಡಿ ಆಮೇಲೆ ಹಳಹಳಿಸುವುದು ಬೇಡ.ಕುಟುಂಬದ ಯಜಮಾನನ ಬೆಂಬಲ ಸಿಗಲಿದೆ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಒತ್ತಡ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ನೀವು ಇತರರನ್ನು ಶ್ಲಾಘಿಸುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ.ಗೌಪ್ಯ ವಿಷಯಗಳನ್ನು ಇತತರೊಂದಿಗೆ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ.ಆರ್ಥಿಕವಾಗಿ ಪ್ರಗತಿ.ಪ್ರೇಮಿಗಳಿಗೆ ಶುಭ ಸುದ್ದಿ ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಆತ್ಮವಿಶ್ವಾಸತೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆಪ್ತರೊಂದಿಗೆ ವಾದಕ್ಕಿಳಿಯುವ ಸಾಧ್ಯತೆ, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಮನೋರಂಜನೆಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯ ಪರಿಪೂರ್ಣ. ಅನಿವಾರ್ಯ ಕಾರಣಗಳಿಂದ ಖರ್ಚು. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳು ನಿಮಗೆ ಪುಷ್ಟಿ ನೀಡಲಿವೆ.ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ. ವಿವಾಹ ಅಪೇಕ್ಷಿತರಿಗೆ ಶುಭ ಸೂಚನೆ ಸಿಗಲಿದೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಸದೃಢ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅತಿಯಾದ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವ ಸಾಧ್ಯತೆ.ಜೀವನದ ಪ್ರಮುಖ ನಿರ್ಧಾರಗಳ ಕುರಿತು ನೀವು ಕುಟುಂಬದೊಂದಿಗೆ ಚರ್ಚಸುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ: ಹಳೆಯ ಸ್ನೇಹಿತರೊಂದಿಗೆ ಆತ್ಮೀಯ ಮಾತುಕತೆ. ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಕುರಿತು ಆಲೋಚನೆ. ಸಂಗಾತಿಯಿಂದ ಸಲಹೆ ಪಡೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೋರ್ಟ್ ಕಚೇರಿ ವ್ಯಾಜ್ಯಗಳು ವಿಜಯವನ್ನು ತಂದು ಕೊಡಲಿವೆ. ದಿನದ ಕೊನೆಯಲ್ಲಿ ಯಾವುದಾದರೂ ಕಾರಣದಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ, ಆರ್ಥಿಕವಾಗಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಕರ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೋ ಮೂಲದಿಂದ ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಅಪಸ್ವರದಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಮಾತಿಗೆ ವಿರಾಮ ನೀಡಿ. ಉದ್ಯೋಗಿಗಳಿಗೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ನಿಮ್ಮ ಕೋಪದ ಮನಸ್ಥಿತಿ ಇತರರ ಮೇಲೆ ಪ್ರಭಾವ ಬೀರಬಹುದು. ಅನಿವಾರ್ಯ ಕಾರಣಗಳಿಂದ ಸ್ನೇಹಿತರ ಸಹಾಯ ಬೇಡವ ಸಾಧ್ಯತೆ.ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಹೊಂದಲಿದ್ದೀರಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮೀನ: ಅನಿವಾರ್ಯ ಕಾರಣಗಳಿಂದ ಕುಟುಂಬದ ಸದಸ್ಯರೊಂದಿಗೆ ಮನಸ್ತಾಪ ,ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ಆರೋಗ್ಯ ಪರಿಪೂರ್ಣ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

By

Doctors at Fortis Hospital remove fish bone from man's stomach for 5 years
Koo

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years
Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading
Advertisement
Dina Bhavishya
ಭವಿಷ್ಯ17 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ2 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು2 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು3 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ4 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

assault case
ಬೆಂಗಳೂರು4 ದಿನಗಳು ago

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌!

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌