Jill Biden: ಕೀನ್ಯಾ ಯುವಕರೊಂದಿಗೆ ಸುರಕ್ಷಿತ ಸೆಕ್ಸ್​, ಕಾಂಡೊಮ್​ ಬಳಕೆ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷರ ಪತ್ನಿ ಜಿಲ್ ಬೈಡೆನ್​ - Vistara News

ವಿದೇಶ

Jill Biden: ಕೀನ್ಯಾ ಯುವಕರೊಂದಿಗೆ ಸುರಕ್ಷಿತ ಸೆಕ್ಸ್​, ಕಾಂಡೊಮ್​ ಬಳಕೆ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷರ ಪತ್ನಿ ಜಿಲ್ ಬೈಡೆನ್​

ಆಫ್ರಿಕಾ ಖಂಡದ ದೇಶಗಳೊಂದಿಗೆ ಯುಎಸ್ ಸಂಬಂಧವನ್ನು ಗಾಢಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮುಂದಾಗಿದ್ದಾರೆ. ಈ ಯೋಜನೆಯ ಒಂದು ಭಾಗವಾಗಿಯೇ ಜಿಲ್ ಬೈಡೆನ್​ ಅವರು ಐದು ದಿನಗಳ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿದ್ದಾರೆ.

VISTARANEWS.COM


on

Jill Biden Talk About Safe Sex with youths of Kenya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಅಮೆರಿಕ ಪ್ರಥಮ ಮಹಿಳೆ, ಅಧ್ಯಕ್ಷ ಜೋ ಬೈಡೆನ್​ ಪತ್ನಿ ಜಿಲ್​ ಬೈಡೆನ್ (Jill Biden)​ ಅವರು ಕೀನ್ಯಾದ ನೈರೋಬಿಯಲ್ಲಿ ಶನಿವಾರ ಯುವಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು ಯುವ ಸಬಲೀಕರಣದ ಬಗ್ಗೆ ಚರ್ಚಿಸಿದರು. ಸುರಕ್ಷಿತ ಲೈಂಗಿಕ ಸಂಪರ್ಕ, ಡೇಟಿಂಗ್​, ಕಾಂಡೊಮ್​ ಬಳಕೆ, ಸಂತಾನ ನಿರೋಧ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಸುರಕ್ಷಿತ ಸೆಕ್ಸ್​, ಡೇಟಿಂಗ್​ ಮತ್ತಿತರ ಸೂಕ್ಷ್ಮ ವಿಷಯಗಳ ಬಗ್ಗೆ ಎಷ್ಟೋ ಜನರು ಇಂಥ ವಿಷಯಗಳನ್ನು ಮುಕ್ತವಾಗಿ ಮಾತನಾಡುವುದಿಲ್ಲ. ಸರಿಯಾದ ತಿಳಿವಳಿಕೆ ಹೊಂದಿರುವುದಿಲ್ಲ. ಆದರೆ ಅರಿವಿಗೋಸ್ಕರ ಇದನ್ನೆಲ್ಲ ಬಹಿರಂಗವಾಗಿ ಮಾತನಾಡುವುದು ತಪ್ಪಲ್ಲ. ಕೀನ್ಯಾ ಯುವಕರು ಈ ಬಗ್ಗೆ ಅಪಾರ ಅರಿವು ಹೊಂದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದು ನನಗೆ ಇಷ್ಟವಾಯಿತು ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಯುವಕರೊಂದಿಗೆ ಸಂವಾದದ ನಂತರ ಅವರು, ತಮ್ಮದೇ ಬ್ಯಾಂಕಿಂಗ್​ ವ್ಯವಸ್ಥೆ ರಚಿಸಿಕೊಂಡು, ಸ್ವಾವಲಂಬಿಗಳಾದ ಮಹಿಳೆಯರನ್ನು, ರೈತರಿಗೆ ನೆರವಾಗುವ ಉತ್ಪನ್ನಗಳನ್ನು ತಯಾರಿಸುತ್ತಿರುವ ಸ್ಥಳೀಯ ಉದ್ಯಮಿಗಳನ್ನು ಭೇಟಿಯಾಗಿ ಅವರೊಂದಿಗೂ ಮಾತುಕತೆ ನಡೆಸಿದರು.

ಇದನ್ನೂ ಓದಿ: Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ

ಆಫ್ರಿಕಾ ಖಂಡದ ದೇಶಗಳೊಂದಿಗೆ ಯುಎಸ್ ಸಂಬಂಧವನ್ನು ಗಾಢಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮುಂದಾಗಿದ್ದಾರೆ. ಈ ಯೋಜನೆಯ ಒಂದು ಭಾಗವಾಗಿಯೇ ಜಿಲ್ ಬೈಡೆನ್​ ಅವರು ಐದು ದಿನಗಳ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿದ್ದು, ಇಂದು ಭಾನುವಾರ ಆಫ್ರಿಕಾದಲ್ಲಿ ಕೊನೇ ದಿನ. ಅವರು ನಮೀಬಿಯಾ, ಕೀನ್ಯಾಗಳಿಗೆ ಭೇಟಿ ನೀಡಿ, ಅಲ್ಲೆಲ್ಲ ಕಡೆಗಳಲ್ಲೂ ಮಹಿಳೆಯರು ಮತ್ತು ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಸಂವಾದ ನಡೆಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

VISTARANEWS.COM


on

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆಯ ಟ್ರೆಂಡ್‌ ಪಕ್ಕದ ಬಾಂಗ್ಲಾದೇಶಕ್ಕೆ ಆತಂಕ ಉಂಟುಮಾಡಿದೆ. ಎಂಟು ಎಕ್ಸಿಟ್‌ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ಸೂಚನೆ ನೀಡಿವೆ. ಈ ಮುನ್ಸೂಚನೆಯೇ ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಸಂಸದ ಆಖ್ತರ್‌ ಹೊಸೈನ್‌ ಈ ವಿಷಯವನ್ನು ಅಲ್ಲಿನ ಸಂಸತ್ತಿನಲ್ಲಿ ಎತ್ತಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಅಲ್ಲಿನ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟುತ್ತದೆ. ಇದು ಬಾಂಗ್ಲಾದೇಶದಲ್ಲಿ ಅತಿದೊಡ್ಡ ಮಾನವೀಯ, ಅರ್ಥಿಕ ಹಾಗೂ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ಇದು ನಮ್ಮ ಅತಿದೊಡ್ಡ ಆತಂಕಕ್ಕೆ ಕಾರಣವಾಗಿದೆʼʼ ಎಂದು ಹೇಳಿದ್ದಾರೆ.
ಗಡಿದಾಟಿ ಭಾರತಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ದೇಶಿ ನುಸುಳುಕೋರರನ್ನು ಬಿಜೆಪಿ ಹೊರಗಟ್ಟಿದರೆ ಅವರಿಗೆ ಹೊಸ ನೆಲೆ ಕಲ್ಪಿಸುವುದು ಹೇಗೆ ಎಂಬ ಚಿಂತೆ ಬಾಂಗ್ಲಾದೇಶವನ್ನು ಕಾಡುತ್ತಿದೆ. ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಮಸ್ಯೆಯೇ ಪಶ್ಚಿಮ ಬಂಗಾಳದ ಅತಿದೊಡ್ಡ ಚುನಾವಣಾ ವಿಷಯವಾಗಿತ್ತು. ಅಧಿಕಾರಕ್ಕೇರಿದ ತಕ್ಷಣವೇ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವುದಾಗಿ ಬಿಜೆಪಿ ಹೇಳಿತ್ತು.

Continue Reading

Latest

ಜಕಾರ್ತಾದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ: 7 ಮಂದಿ ಸಾವು, 81 ಜನರಿಗೆ ಗಾಯ! ಅಪಘಾತಕ್ಕೆ ಕಾರಣವಾಯಿತೇ ಟ್ಯಾಕ್ಸಿ?

VISTARANEWS.COM


on

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ ಸೋಮವಾರ ತಡರಾತ್ರಿ ಭೀಕರ ರೈಲು ಅಪಘಾತ ಸಂಭವಿಸಿದೆ. ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕ ರೈಲು ಮತ್ತು ಸ್ಥಳೀಯ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಮತ್ತು 81 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೊಳಗಾದ ರೈಲು ಬೋಗಿಗಳ ಒಳಗೆ ಅನೇಕರು ಸಿಲುಕಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ಲೋಹವನ್ನು ಕತ್ತರಿಸುವ ಯಂತ್ರಗಳನ್ನು ಬಳಸಿ ಜನರನ್ನು ಹೊರತೆಗೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೀಕರ ಅಪಘಾತಕ್ಕೆ ರೈಲು ಹಳಿ ಮೇಲೆ ಬಂದ ಟ್ಯಾಕ್ಸಿಯೇ ಕಾರಣ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಹಳಿಗಳ ಮೇಲೆ ಚಲಿಸುತ್ತಿದ್ದ ಟ್ಯಾಕ್ಸಿಯೊಂದಕ್ಕೆ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ರೈಲು, ಪಕ್ಕದ ಹಳಿಯಲ್ಲಿ ಮಹಿಳೆಯರು ಮಾತ್ರ ಪ್ರಯಾಣಿಸುತ್ತಿದ್ದ ಮತ್ತೊಂದು ರೈಲಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಟ್ಯಾಕ್ಸಿಯು ವಿಯೆಟ್ನಾಂ ಮೂಲದ ‘ಗ್ರೀನ್ ಎಸ್‌ಎಂ’ ಎಂಬ ಸಂಸ್ಥೆಗೆ ಸೇರಿದ್ದಾಗಿದ್ದು, ಕಂಪನಿಯು ಈಗಾಗಲೇ ಅಪಘಾತದ ತನಿಖೆಗೆ ಸಹಕರಿಸುವುದಾಗಿ ಘೋಷಿಸಿದೆ.

ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಘಟನೆಯ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ರೈಲು ಬೋಗಿಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವುದು ಈಗ ದೊಡ್ಡ ಸವಾಲಾಗಿದ್ದು, ತಜ್ಞರ ತಂಡವು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇಂಡೋನೇಷ್ಯಾದಲ್ಲಿ ಸಾರಿಗೆ ಸುರಕ್ಷತೆಯ ಕೊರತೆಯಿಂದಾಗಿ ರೈಲು ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ, ಆದರೆ ಎರಡು ರೈಲುಗಳ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿಯು ಇತ್ತೀಚಿನ ವರ್ಷಗಳಲ್ಲೇ ನಡೆದ ಅತ್ಯಂತ ದೊಡ್ಡ ದುರಂತ ಎಂದು ಹೇಳಲಾಗುತ್ತಿದೆ.

Continue Reading

Latest

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

VISTARANEWS.COM


on

ಜಾಗತಿಕ ಆರ್ಥಿಕ ಬದಲಾವಣೆಗಳ ನಡುವೆ ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಸವಾಲು ಎದುರಾಗಿದೆ. ತಾನು ನೀಡಿದ್ದ 3.5 ಬಿಲಿಯನ್ ಡಾಲರ್ ಮೊತ್ತದ ಸಾಲವನ್ನು ಮರಳಿ ನೀಡುವಂತೆ ಸಂಯುಕ್ತ ಅರಬ್ ಸಂಸ್ಥಾನ (UAE) ಪಾಕಿಸ್ತಾನಕ್ಕೆ ತಿಳಿಸಿದೆ. ಈ ಹಿಂದೆ ಆರ್ಥಿಕ ಸ್ಥಿರತೆಗಾಗಿ ಯುಎಇ ಈ ಮೊತ್ತವನ್ನು ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್‌ನಲ್ಲಿ ಇರಿಸಿತ್ತು. ಆದರೆ ಈಗಿನ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಮೊತ್ತವನ್ನು ವಾಪಸ್ ಪಡೆದಿರುವುದು ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿದೆ.

ಪಾಕಿಸ್ತಾನವು ನೆರೆಯ ರಾಷ್ಟ್ರಗಳಾದ ಇರಾನ್ ಮತ್ತು ಅಮೆರಿಕದ ಮೇಲೆ ಆರ್ಥಿಕ ನೆರವಿಗಾಗಿ ನಿರೀಕ್ಷೆ ಇಟ್ಟುಕೊಂಡಿತ್ತು. ಇರಾನ್ ಜೊತೆಗಿನ ಗಡಿ ಸಮಸ್ಯೆಗಳು ಮತ್ತು ಆಂತರಿಕ ಸಂಘರ್ಷಗಳ ಕಾರಣದಿಂದ ಅಲ್ಲಿಂದ ಬೆಂಬಲ ಸಿಗುವುದು ಕಷ್ಟಕರವಾಗಿದೆ. ಇತ್ತ ಅಮೆರಿಕ ಕೂಡ ಸಾಲದ ಮರುಪಾವತಿಯ ಶರತ್ತುಗಳನ್ನು ಕಠಿಣಗೊಳಿಸಿರುವುದರಿಂದ, ಪಾಕಿಸ್ತಾನಕ್ಕೆ ಹೊಸ ಸಾಲ ಪಡೆಯುವ ಹಾದಿಗಳು ಮುಚ್ಚಿದಂತಾಗಿವೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಸದ್ಯಕ್ಕೆ ಪಾಕಿಸ್ತಾನ ಸರ್ಕಾರವು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ಜೊತೆ ಮಾತುಕತೆ ನಡೆಸಿ ಈ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿದೆ. ಯುಎಇ ನಂತಹ ಮಿತ್ರ ರಾಷ್ಟ್ರಗಳು ಕೂಡ ಸಾಲದ ಅವಧಿಯನ್ನು ವಿಸ್ತರಿಸುವ ಬದಲು ವಾಪಸ್ ಕೇಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನವು ತನ್ನ ಆರ್ಥಿಕ ನೀತಿಗಳಲ್ಲಿ ಭಾರಿ ಬದಲಾವಣೆ ತರಬೇಕಾದ ಅನಿವಾರ್ಯತೆ ಎದುರಾಗಿದೆ.

Continue Reading

Latest

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

VISTARANEWS.COM


on

ಅಮೆರಿಕವು ಇತ್ತೀಚೆಗಷ್ಟೇ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ಜಾಗತಿಕ ಸಂಘರ್ಷ ಶಮನಕ್ಕೆ ಹೊಸ ತಂತ್ರ ಹೂಡಿದೆ. ಪಾಕಿಸ್ತಾನದ ಸಂಧಾನಕಾರರ ಮೂಲಕ ವಾಷಿಂಗ್ಟನ್‌ಗೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಟೆಹ್ರಾನ್, ವಿಶ್ವದ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ಧ ಎಂಬ ಆಶಯ ವ್ಯಕ್ತಪಡಿಸಿದೆ. ಪ್ರಸ್ತುತ ನಡೆಯುತ್ತಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಅತ್ಯಂತ ವಿವಾದಾತ್ಮಕವಾಗಿರುವ ಪರಮಾಣು ಕಾರ್ಯಕ್ರಮದ ಚರ್ಚೆಯನ್ನು ಸದ್ಯಕ್ಕೆ ಬದಿಗಿಟ್ಟು, ಮೊದಲು ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಬಗ್ಗೆ ಮಾತುಕತೆ ನಡೆಸೋಣ ಎಂಬ ಪ್ರಸ್ತಾಪವನ್ನು ಇರಾನ್ ಮುಂದಿಟ್ಟಿದೆ.

ಇರಾನ್ ವಿಧಿಸಿರುವ ಈ ಹೊಸ ಷರತ್ತುಗಳ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕಾದರೆ ಅಮೆರಿಕವು ಮೊದಲು ಇರಾನ್ ಬಂದರುಗಳ ಮೇಲೆ ಹೇರಿರುವ ನೌಕಾ ದಿಗ್ಬಂಧನವನ್ನು (Naval Blockade) ಹಿಂಪಡೆಯಬೇಕು. ಅಲ್ಲದೆ, ತನ್ನ ಮೇಲೆ ಹೇರಲಾಗಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಿ, ಜಪ್ತಿ ಮಾಡಲಾಗಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಟೆಹ್ರಾನ್ ಒತ್ತಾಯಿಸಿದೆ. ಸದ್ಯಕ್ಕೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ಮತ್ತು ರಷ್ಯಾದಂತಹ ಸ್ನೇಹಿ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದು, ಇತರ ರಾಷ್ಟ್ರಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಇರಾನ್‌ನ ಈ ಷರತ್ತುಬದ್ಧ ಆಫರ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದಾರೆ. ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರದೆ ಅಮೆರಿಕ ಯಾವುದೇ ಶಾಶ್ವತ ಒಪ್ಪಂದಕ್ಕೆ ಸಹಿ ಹಾಕುವುದು ಅನುಮಾನ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಜಾಗತಿಕ ತೈಲ ಮಾರುಕಟ್ಟೆ ಮತ್ತು ಇಂಧನ ಬೆಲೆಗಳ ದೃಷ್ಟಿಯಿಂದ ಈ ಸಂಧಾನ ಪ್ರಕ್ರಿಯೆಯು ಅತ್ಯಂತ ಮಹತ್ವ ಪಡೆದಿದ್ದು, ಟ್ರಂಪ್ ಸರ್ಕಾರದ ಮುಂದಿನ ನಡೆ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

Continue Reading
Advertisement
Latest9 hours ago

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ

Latest9 hours ago

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Latest10 hours ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest1 day ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest1 day ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest3 days ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest3 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest3 days ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest3 days ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest3 days ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌