ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ - Vistara News

ವಿದೇಶ

ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

Joe Biden: ಬೃಹತ್‌ ಗಾತ್ರದ ಹಡಗು ಡಿಕ್ಕಿಯಾಗಿ ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಟಾಟ್‌ ಕೀ ಸೇತುವೆ ಕುಸಿದಿತ್ತು. ಈ ವೇಳೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ತೋರಿದ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮೆಚ್ಚುಗೆ ಸೂಚಿಸಿದ್ದಾರೆ.

VISTARANEWS.COM


on

Joe Biden
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಬೃಹತ್‌ ಗಾತ್ರದ ಸರಕು ಹಡಗೊಂದು ಡಿಕ್ಕಿಯಾಗಿ ಮಂಗಳವಾರ (ಮಾರ್ಚ್‌ 26) ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಟಾಟ್‌ ಕೀ ಸೇತುವೆ (Francis Scott Key Bridge in Baltimore) ಕುಸಿದ ಪ್ರಕರಣದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ಮಾತನಾಡಿದ್ದಾರೆ. ಈ ವೇಳೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗೆ ಜೋ ಬೈಡನ್‌ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ತಕ್ಷಣ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಯನ್ನೂ ಶ್ಲಾಘಿಸಿದ್ದಾರೆ.

ಜೋ ಬೈಡನ್‌ ಹೇಳಿದ್ದೇನು?

ʼʼಹಡಗಿನ ಸಿಬ್ಬಂದಿ ಮೇರಿಲ್ಯಾಂಡ್‌ ಸಾರಿಗೆ ಇಲಾಖೆಗೆ ತಕ್ಷಣ ಕರೆ ಮಾಡಿ ಹಡಗಿನ ಮೇಲೆ ತಾವು ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಇದರಿಂದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಗೆ ತುರ್ತಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ಅವರು ಸೇತುವೆಯಲ್ಲಿನ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲʼʼ ಎಂದು ಬೈಡನ್‌ ವಿವರಿಸಿದ್ದಾರೆ. ವಿಶೇಷ ಎಂದರೆ ಹಡಗಿನಲ್ಲಿದ್ದ ಸಿಬ್ಬಂದಿಯೆಲ್ಲ ಭಾರತೀಯರಾಗಿದ್ದರು. ಇದೇ ವೇಳೆ ಸೇತುವೆಯನ್ನು ಪುನರ್‌ನಿರ್ಮಿಸಲು ಸರ್ಕಾರ ಬದ್ಧ ಎಂದು ಬೈಡನ್ ಘೋಷಿಸಿದ್ದಾರೆ.

ಏನಿದು ಘಟನೆ?

ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಉಕ್ಕಿನ ಸೇತುವೆಗೆ ಕಂಟೈನರ್‌ ನೌಕೆಯೊಂದು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಸಂಪೂರ್ಣವಾಗಿ ನೀರುಗುರುಳಿತ್ತು. ನಡುರಾತ್ರಿ ಈ ಘಟನೆ ನಡೆದ ಕಾರಣ ಸೇತುವೆಯ ಮೇಲೆ ಹೆಚ್ಚಿನ ವಾಹನಗಳು ಇರಲಿಲ್ಲ. ಜನದಟ್ಟಣೆಯ ಸಮಯದಲ್ಲಿ ಈ ಘಟನೆ ಸಂಬಂಧಿಸಿದ್ದರೆ ನೂರಾರು ಜನರ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು.

ಬಾಲ್ಟಿಮೋರ್‌ ಮುನ್ಸಿಪಲ್ ನಗರದ ನೈಋತ್ಯಕ್ಕೆ ಇರುವ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ಈ ನಾಲ್ಕು-ಲೇನ್ ಸೇತುವೆಯನ್ನು ಕಟ್ಟಲಾಗಿದೆ. ಇದು 1.6 ಮೈಲಿ (2.6-ಕಿಲೋಮೀಟರ್) ಉದ್ದವಿದೆ. 1977ರಲ್ಲಿ ಕಟ್ಟಲಾಗಿದ್ದ ಇದರ ಮೇಲೆ ವರ್ಷಕ್ಕೆ 1.10 ಕೋಟಿ ವಾಹನಗಳು ಓಡಾಡುತ್ತವೆ. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗ. ಬಾಲ್ಟಿಮೋರ್‌, ರಾಜಧಾನಿ ವಾಷಿಂಗ್ಟನ್ ಡಿಸಿಯ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.

ಇದನ್ನೂ ಓದಿ: Bridge Collapse: ನೌಕೆ ಡಿಕ್ಕಿಯಾಗಿ ಮಕ್ಕಳಾಟಿಕೆಯಂತೆ ಕುಸಿದ 2.5 ಕಿ.ಮೀ. ಉದ್ದದ ಸೇತುವೆ!

ಸಿಂಗಾಪುರ ಧ್ವಜ ಹೊಂದಿರುವ ಕಂಟೇನರ್ ಹಡಗು ʼಡಾಲಿʼ ಬಾಲ್ಟಿಮೋರ್​ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಂಬಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆದಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಸೇತುವೆ ಕುಸಿದಿತ್ತು. ಈ ವೇಳೆ ಸೇತುವೆಯ ದುರಸ್ತಿ ಕಾಮಗಾರಿ ನಡೆಸುತ್ತಿದ್ದ 6 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼಡಾಲಿʼ 10,000 ಟಿಇಯು ಸಾಮರ್ಥ್ಯ ಹೊಂದಿತ್ತು. ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಹಡಗಿನ ಮಾಲೀಕತ್ವವನ್ನು ಹೊಂದಿದೆ. ಹಡಗು ಬಾಲ್ಟಿಮೋರ್‌ನಿಂದ ಕೊಲಂಬೊಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸೇತುವೆ ಕುಸಿದಿರುವುದು ಈ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಿದೆ. ಬಾಲ್ಟಿಮೋರ್ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Road Accident: ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

VISTARANEWS.COM


on

car accident USA
Koo

ನ್ಯೂಯಾರ್ಕ್‌: ಅಮೇರಿಕಾದಲ್ಲಿ (US) ನಡೆದ ಭೀಕರ ಕಾರು ಅಪಘಾತ ಒಂದರಲ್ಲಿ (Road Accident) ಗುಜರಾತ್‌ನ ಮೂವರು ಮಹಿಳೆಯರು (Women killed) ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ (Car accident) ಮೃತಪಟ್ಟವರು.

ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ಅವರು ವೇಗವಾಗಿ ಎಸ್‌ಯುವಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

“ಅವರು ನಿಗದಿಪಡಿಸಲಾದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದರು. ಬೇರೆ ಯಾವುದೇ ಕಾರುಗಳು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಚೆಲ್ಲಿದ್ದು, ಡಿಕ್ಕಿ ಹೊಡೆದ ವೇಗಕ್ಕೆ ಸಾಕ್ಷಿಯಾಗಿದೆ.

“ರಸ್ತೆಮಾರ್ಗವನ್ನು ಅತಿ ವೇಗದಲ್ಲಿ ಬಿಟ್ಟು ಜಿಗಿಯುವ ವಾಹನಗಳು ವಿರಳ. ಇದು 4-6 ಲೇನ್ ಟ್ರಾಫಿಕ್ ಅನ್ನು ದಾಟಿದೆ ಮತ್ತು ಸುಮಾರು 20 ಅಡಿ ಎತ್ತರದ ಮರಗಳ ಮೇಲೆ ಕೂತಿದೆ. ವಾಹನವು ಹಲವು ಲೇನ್ ಟ್ರಾಫಿಕ್ ಅನ್ನು ಹಾರಿದಾಗ, ಅದು ಬಹುಶಃ ನೆಲದಿಂದ ಕನಿಷ್ಠ 20 ಅಡಿಗಳಷ್ಟು ಎತ್ತರದಲ್ಲಿ ಮರಗಳಿಗೆ ಡಿಕ್ಕಿ ಹೊಡೆದಿದೆ” ಎಂದು ಎಲ್ಲಿಸ್‌ ತಿಳಿಸಿದರು.

ದಕ್ಷಿಣ ಕೆರೊಲಿನಾ ಹೈವೇ ಪೆಟ್ರೋಲ್, ಗ್ಯಾಂಟ್ ಫೈರ್ ಮತ್ತು ಪಾರುಗಾಣಿಕಾ ತಂಡಗಳು ಮತ್ತು ಗ್ರೀನ್‌ವಿಲ್ಲೆ ಕೌಂಟಿ ಇಎಂಎಸ್ ಘಟಕಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಅನಿಶ್ಚಿತವಾಗಿದೆ. ವಾಹನದ ಪತ್ತೆ ವ್ಯವಸ್ಥೆಯು ಅಪಘಾತದ ಬಗ್ಗೆ ಕೆಲವು ಕುಟುಂಬ ಸದಸ್ಯರಿಗೆ ಅಲಾರ್ಮ್‌ ನೀಡಿತು. ನಂತರ ಅವರು ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Continue Reading

ವಿದೇಶ

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Miss Universe Buenos Aires: ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಬಂದ ರೋಡ್ರಿಗಸ್ ಕೇವಲ ಸೌಂದರ್ಯ ರಾಣಿಯಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತರು. ಸಮಕಾಲೀನ ಸೌಂದರ್ಯದ ಬಹುಮುಖಿ ಸ್ವಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಸೌಂದರ್ಯದ ಹಾಗೂ ವಯಸ್ಸಿನ ವಯಸ್ಸಿನ ಸಾಂಪ್ರದಾಯಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸುವಂತೆ ಮಾಡಿದೆ.

VISTARANEWS.COM


on

miss universe Buenos Aires
Koo

ಹೊಸದಿಲ್ಲಿ: ಅರ್ಜೆಂಟೀನಾದ (Argentina) ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ (Alejandra Marisa Rodriguez) ಅವರು `ಬ್ಯೂನಸ್ ಐರಿಸ್ ವಿಶ್ವ ಸುಂದರಿ’ (Miss Universe Buenos Aires) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ಸೌಂದರ್ಯ ಸ್ಪರ್ಧೆ (Beauty Pageant) ಗೆಲ್ಲಲು ಅಗತ್ಯವಾದ ಯವ್ವನದ ಬಗೆಗಿನ ಸ್ಟಿರಿಯೋಟೈಪ್‌ಗಳನ್ನು ಮುರಿದಿದ್ದಾರೆ. ಅಂದ ಹಾಗೆ ಈಕೆಯ ವಯಸ್ಸು 60 ವರ್ಷ!

ಈ ಮೂಲಕ ಈ ಆಂಟಿ ಇತಿಹಾಸ ಬರೆದಿದ್ದಾರೆ. ಬುಧವಾರ ನಡೆದ ಸ್ಪರ್ಧೆಯಲ್ಲಿ ಈಕೆಯ ಗೆಲುವು ಘೋಷಿಸಲಾಯಿತು. ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುತ್ತಿರುವುದರತ್ತವೂ ಇದು ಗಮನ ಸೆಳೆದಿದೆ.

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಬಂದ ರೋಡ್ರಿಗಸ್ ಕೇವಲ ಸೌಂದರ್ಯ ರಾಣಿಯಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತರು. ಸಮಕಾಲೀನ ಸೌಂದರ್ಯದ ಬಹುಮುಖಿ ಸ್ವಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಸೌಂದರ್ಯದ ಹಾಗೂ ವಯಸ್ಸಿನ ವಯಸ್ಸಿನ ಸಾಂಪ್ರದಾಯಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸುವಂತೆ ಮಾಡಿದೆ.

ಇಂತಹ ಪ್ರತಿಷ್ಠಿತ ಸೌಂದರ್ಯ ಪ್ರಶಸ್ತಿಯನ್ನು ಪಡೆದ ಈ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕೆಯ ಸೊಬಗು, ಚರಿಷ್ಮಾ ಮತ್ತು ಸಾಂಕ್ರಾಮಿಕ ನಗು ನ್ಯಾಯಾಧೀಶರು ಮತ್ತು ಪ್ರೇಕ್ಷಕರನ್ನು ಸಮಾನವಾಗಿ ಆಕರ್ಷಿಸಿತು.

ಮೇ 2024ರಂದು ನಡೆಯಲಿರುವ ʼಮಿಸ್ ಯೂನಿವರ್ಸ್ ಅರ್ಜೆಂಟೀನಾʼಗೆ ಮುಂಬರುವ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲು ಈಕೆ ತಯಾರಿ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ಆಕೆಯ ನಿರ್ಣಯವನ್ನು ಬಹಿರಂಗಪಡಿಸಿವೆ. ಅವರು ಅಲ್ಲಿ ವಿಜಯಶಾಲಿಯಾದರೆ, ʼಮಿಸ್ ಯೂನಿವರ್ಸ್ ವರ್ಲ್ಡ್‌ʼನ ಜಾಗತಿಕ ವೇದಿಕೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾದ ಧ್ವಜವನ್ನು ಹಾರಿಸಲಿದ್ದಾರೆ. ಸ್ಪರ್ಧೆಯನ್ನು ಸೆಪ್ಟೆಂಬರ್ 28, 2024ರಂದು ಮೆಕ್ಸಿಕೋದಲ್ಲಿ ನಿಗದಿಪಡಿಸಲಾಗಿದೆ.

“ಸೌಂದರ್ಯ ಸ್ಪರ್ಧೆಗಳಲ್ಲಿ ಈ ಹೊಸ ಮಾದರಿ ರೂಪಿಸುವುದರ ಮೂಲಕ ನಾನು ರೋಮಾಂಚನಗೊಂಡಿದ್ದೇನೆ. ನಾವು ಹೊಸ ಹಂತವನ್ನು ಉದ್ಘಾಟಿಸುತ್ತಿದ್ದೇವೆ. ಇದರಲ್ಲಿ ಮಹಿಳೆಯರು ಕೇವಲ ದೈಹಿಕ ಸೌಂದರ್ಯವಲ್ಲ. ಮೌಲ್ಯಗಳ ಮತ್ತೊಂದು ಮಾದರಿ” ಎಂದು ಅವರು ಗೆದ್ದ ನಂತರ ಮಾಧ್ಯಮಗಳಿಗೆ ಹೇಳಿದರು.

“ಮಿಸ್ ಯೂನಿವರ್ಸ್ ಸ್ಪರ್ಧೆಯು ಇನ್ನು ಮುಂದೆ ಸ್ಪರ್ಧಿಗಳಿಗೆ ವಯಸ್ಸಿನ ಮಿತಿಗಳನ್ನು ಹೊಂದಿರುವುದಿಲ್ಲ” ಎಂದು ಕಳೆದ ವರ್ಷ ಘೋಷಿಸಲಾಗಿತ್ತು. ಈ ವರ್ಷದಿಂದ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಹಿಂದೆ, 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯನ್ನು ಪ್ರವೇಶಿಸಬಹುದಾಗಿತ್ತು. ಮಿಸ್ ಯೂನಿವರ್ಸ್ 2024ರಲ್ಲಿ ಡೊಮಿನಿಕನ್ ರಿಪಬ್ಲಿಕ್ ಅನ್ನು ಪ್ರತಿನಿಧಿಸುವ 47 ವರ್ಷದ ಹೈಡಿ ಕ್ರೂಜ್, ಈ ರೀತಿ ವಯಸ್ಸಿನ ಅಡೆತಡೆ ಮೀರಿದ ಇನ್ನೊಬ್ಬ ಸೌಂದರ್ಯ ಸ್ಪರ್ಧಿ.

ಇದನ್ನೂ ಓದಿ: Harnaaz Sandhu | ಮಿಸ್‌ ಯುನಿವರ್ಸ್‌ ವೇದಿಕೆ ಮೇಲೆ ಎಡವಿದ ಮಾಜಿ ಭುವನ ಸುಂದರಿ ಹರ್ನಾಜ್‌ ಸಂಧು, ವಿಡಿಯೊ ವೈರಲ್

Continue Reading

ದೇಶ

MDH, Everest Spices: ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಪತ್ತೆ

MDH, Everest Spices: ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ 527 ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

VISTARANEWS.COM


on

By

MDH, Everest Spices
Koo

ನವದೆಹಲಿ: ಎಂಡಿಎಚ್‌, ಎವರೆಸ್ಟ್‌ ಮಸಾಲೆ (MDH, Everest Spices) ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ (Ethylene oxide) ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ. ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ.

ಇನ್ನು ಅಪಾಯಕಾರಿ ಕೆಮಿಕಲ್‌ಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ರಾಮಯ್ಯ ಅಡ್ವಾನ್ಸ್ಡ್ ಟೆಸ್ಟಿಂಗ್ ಲ್ಯಾಬ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜುಬಿನ್ ಜಾರ್ಜ್ ಜೋಸೆಫ್, ಎಥಿಲೀನ್ ಆಕ್ಸೈಡ್‌ನ ಉಪಉತ್ಪನ್ನವಾದ ಎಥಿಲೀನ್ ಗ್ಲೈಕೋಲ್‌ನಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದ್ದರು. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲೂ ಪತ್ತೆಯಾಗಿತ್ತು. ಇದರಿಂದ ಆಫ್ರಿಕಾದಲ್ಲಿ ಸಾವಿಗೆ ಕಾರಣವಾಗಿತ್ತು.

ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎಂಡಿಚ್‌ ಮತ್ತು ಎವರೆಸ್ಟ್‌ನ ಮಸಾಲಾ ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿತ್ತು. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

Continue Reading

ಆರೋಗ್ಯ

Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!

Vampire Facial: ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಆದರೆ, ಇದು ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Vampire Facial
Koo

ನವದೆಹಲಿ: ಹೆಣ್ಣುಮಕ್ಕಳಿಗೆ ಸೌಂದರ್ಯದ (Beauty) ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಹೆಚ್ಚು ವಯಸ್ಸಾದರೂ 18ರ ಯುವತಿಯಂತೆ ಕಾಣಲು ಹಲವು ಕಸರತ್ತು ಮಾಡುತ್ತಾರೆ. ಇನ್ನು ನಗರ ಹಾಗೂ ಮಹಾನಗರಗಳಲ್ಲಂತೂ ಬ್ಯೂಟಿ ಪಾರ್ಲರ್‌ಗಳಿಗೆ ನಿಯಮಿತವಾಗಿ ತೆರಳಿ ಮೇಕಪ್‌, ಫೇಶಿಯಲ್‌ (Facial) ಮಾಡಿಸಿಕೊಳ್ಳುತ್ತಾರೆ. ಆದರೆ, ಅಮೆರಿಕದಲ್ಲಿ ಸ್ಪಾಗಳಲ್ಲಿ ಫೇಶಿಯಲ್‌ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು (HIV) ತಗುಲಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವ್ಯಾಂಪೈರ್‌ ಫೇಶಿಯಲ್‌ (Vampire Facial) ಮಾಡಿಸಿಕೊಂಡ ಕಾರಣ ಇವರಿಗೆ ಎಚ್‌ಐವಿ ತಗುಲಿದೆ ಎಂಬ ಮಾಹಿತಿಯು ಅಧ್ಯಯನ ವರದಿಯಿಂದ ಲಭ್ಯವಾಗಿದೆ.

ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್‌ ಇಂಜೆಕ್ಷನ್‌ ಪ್ರೊಸೀಜರ್‌ ಮೂಲಕ ನಡೆಸುವ ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್‌ ಫೇಶಿಯಲ್‌ಅನ್ನು ಕಡಿಮೆ ಬೆಲೆಗೆ ಮಾಡುವುದರಿಂದ ಹೆಚ್ಚಿನ ಮಹಿಳೆಯರು, ಅದರಲ್ಲೂ 40 ವರ್ಷ ದಾಟಿದವರು ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಈಗ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ಏನಿದು ವ್ಯಾಂಪೈರ್‌ ಫೇಶಿಯಲ್?‌

ವ್ಯಾಂಪೈರ್‌ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್‌ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್‌ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್‌ ರಿಚ್‌ ಫೈಬ್ರಿನ್‌ (PRF) ಎಂದು ಕೂಡ ಕರೆಯಲಾಗುತ್ತದೆ.

ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಇದನ್ನು ಭಾರತದ ಪ್ರಮುಖ ನಗರಗಳು ಸೇರಿ ಜಗತ್ತಿನಾದ್ಯಂತ ಸ್ಪಾಗಳಲ್ಲಿ ಮಾಡುತ್ತಾರೆ. ಆದರೆ, ಈ ಫೇಶಿಯಲ್‌ ಈಗ ಮಹಿಳೆಯರ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹೆಣ್ಣುಮಕ್ಕಳ ಕೈಗಳಿಂದ ರಕ್ತವನ್ನು ತೆಗೆದು, ಅದರಿಂದ ಪ್ಲೇಟ್‌ಲೆಟ್‌ಗಳನ್ನು ವಿಗಂಡಣೆ ಮಾಡಿ, ಆ ರಕ್ತವನ್ನು ಸಣ್ಣ ಸೂಜಿಯ ಮೂಲಕ ಮುಖಕ್ಕೆ ಅಳವಡಿಸುತ್ತಾರೆ. ಇದರಿಂದ ಚರ್ಮವು ಹೊಳೆಯುತ್ತದೆ. ಸುಕ್ಕುಗಳು ಮಾಯವಾಗುತ್ತಿವೆ. ಇದು ಸುಲಭ ಹಾಗೂ ಅಷ್ಟೇನೂ ಹೆಚ್ಚಿನ ಹಣ ಖರ್ಚಾಗದ ಕಾರಣ ಜಾಸ್ತಿ ಮಹಿಳೆಯರು ಈ ಫೇಶಿಯಲ್‌ ಮೊರೆಹೋಗುತ್ತಿದ್ದಾರೆ ಎನ್ನಲಾಗಿದೆ. ಇಂತಹ ಫೇಶಿಯಲ್‌ ಮಾಡಿಸಿಕೊಳ್ಳುವ ಮೊದಲು ಹೆಣ್ಣುಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!

Continue Reading
Advertisement
karnataka weather Forecast
ಮಳೆ5 mins ago

karnataka Weather : ದೂರ ಸರಿದ ಮಳೆ; ಬೆಂಗಳೂರಲ್ಲಿ 39ರ ಗಡಿದಾಟಲಿದೆ ಗರಿಷ್ಠ ಉಷ್ಣಾಂಶ! 15 ಜಿಲ್ಲೆಗಳಿಗೆ ಅಲರ್ಟ್‌

Home Remedy For Cracked Heels
ಆರೋಗ್ಯ17 mins ago

Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

IPL 2024
ಕ್ರೀಡೆ24 mins ago

IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್​ಕೆ?

Ujjwal Nikam
ದೇಶ26 mins ago

Ujjwal Nikam: ಪ್ರಮೋದ್‌ ಮಹಾಜನ್‌ ಪುತ್ರಿಗೆ ಕೊಕ್‌, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!

Money Guide
ಮನಿ-ಗೈಡ್32 mins ago

Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Murder case in Belgavi
ಬೆಳಗಾವಿ40 mins ago

Murder Case : ದೊಡ್ಡವರ ಹಣಕಾಸು ವಿಷ್ಯಕ್ಕೆ 3 ವರ್ಷದ ಮಗು ಬಲಿ; ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್​ಸಿಬಿ?

Chamarajanagar
ಪ್ರಮುಖ ಸುದ್ದಿ1 hour ago

ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Film Festival
ಬೆಂಗಳೂರು1 hour ago

Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

Parineeti Chopra talks about initial struggles in the Industry
ಬಾಲಿವುಡ್1 hour ago

Parineeti Chopra: ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನೆದು ಭಾವುಕರಾದ ಪರಿಣಿತಿ ಚೋಪ್ರಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20242 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ6 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ13 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌