ಅಮೆರಿಕದಲ್ಲಿ ಮತ್ತೆ ಶೂಟೌಟ್​​; ದುಷ್ಕರ್ಮಿಯ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಸಾವು - Vistara News

ವಿದೇಶ

ಅಮೆರಿಕದಲ್ಲಿ ಮತ್ತೆ ಶೂಟೌಟ್​​; ದುಷ್ಕರ್ಮಿಯ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಸಾವು

ಅಮೆರಿಕದಲ್ಲಿ ಇತ್ತೀಚೆಗೆ ಪದೇಪದೆ ಶೂಟೌಟ್​ ನಡೆಯುತ್ತಿದೆ. ಮೇ ತಿಂಗಳಲ್ಲಿ ಟೆಕ್ಸಾಸ್​​ನ ಶಾಲೆಯೊಂದರ ಮೇಲೆ ಗುಂಡಿನ ದಾಳಿಯಾಗಿ, ಅದರಲ್ಲಿ 19 ಮಕ್ಕಳು ಮೃತಪಟ್ಟಿದ್ದರು.

VISTARANEWS.COM


on

Mass shooting in North Carolina Of US 6 Died
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್​: ಯುಎಸ್​​ನಲ್ಲಿ ಮತ್ತೊಮ್ಮೆ ಗುಂಡಿನ ದಾಳಿಯಾಗಿದೆ. ಈ ಸಲ ಉತ್ತರ ಕೆರೊಲಿನಾದ ನ್ಯೂಸ್​ ರಿವರ್​ ಗ್ರೀನ್​ ವೇ ಬಳಿ ಶೂಟೌಟ್​​ ನಡೆದಿದ್ದು, ಇದರಲ್ಲಿ ಒಬ್ಬ ಪೊಲೀಸ್​ ಅಧಿಕಾರಿ ಸೇರಿ, ಆರು ಮಂದಿ ಹತ್ಯೆಯಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಮುಖ್ಯ ಆರೋಪಿಯನ್ನು ಜಾರ್ಜಿಯಾ ಬಳಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಲಿ ಪೊಲೀಸರು, ನಾವು ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಭಾಗದ ಜನರು ನಮ್ಮ ಮುಂದಿನ ಸೂಚನೆವರೆಗೆ ಯಾರೂ ಮನೆಯಿಂದ ಹೊರಬೀಳಬಾರದು ಎಂದು ಹೇಳಿದ್ದಾರೆ.

ಇಂದಿನ ಶೂಟೌಟ್​​ನಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಷ್ಟೇ ಅಲ್ಲದೆ, ಅದರ ಅಕ್ಕಪಕ್ಕದ ಸ್ಥಳಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಕಾನೂನು-ಸುವ್ಯವಸ್ಥೆ ಪಾಲನೆ ಮಾಡುವಂತೆ ಅಲ್ಲಿನ ಜನರಿಗೆ ಪೊಲೀಸರು ಸೂಚಿಸಿದ್ದಾರೆ. ಉತ್ತರ ಕೆರೊಲಿನಾದ ಗವರ್ನರ್​ ರಾಯ್​ ಕೂಪರ್​ ಅವರು ರಾಲಿ ಮೇಯರ್ ಬಾಲ್ಡ್ವಿನ್​ ಜತೆ ಈ ಶೂಟೌಟ್​ ಬಗ್ಗೆ ಮಾತನಾಡಿದ್ದಾರೆ. ಜನರ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಪದೇಪದೆ ಶೂಟೌಟ್​ ನಡೆಯುತ್ತಿದೆ. ಮೇ ತಿಂಗಳಲ್ಲಿ ಟೆಕ್ಸಾಸ್​​ನ ಶಾಲೆಯೊಂದರ ಮೇಲೆ ಗುಂಡಿನ ದಾಳಿಯಾಗಿತ್ತು. ಅದರಲ್ಲಿ 19 ಮಕ್ಕಳು ಮೃತಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲೇ ಅದೊಂದು ಭಯಾನಕವಾದ ದಾಳಿಯಾಗಿತ್ತು. ಹಾಗೇ, ಜುಲೈ 4ರಂದು ನಡೆದ ಯುಎಸ್​ ಸ್ವಾತಂತ್ರ್ಯ ದಿನಾಚರಣೆ ವೇಳೆ ಚಿಕಾಗೋದ ಉಪವಲಯದಲ್ಲಿ ಸ್ವಾತಂತ್ರ್ಯೋತ್ಸವ ಪರೇಡ್​​ ಮೇಲೆ ಶೂಟೌಟ್​ ನಡೆದಿತ್ತು. ಇದರಲ್ಲಿ ಕೂಡ ಆರು ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಒಂದೇ ರಾತ್ರಿಯಲ್ಲಿ 3 ಕಡೆ ಶೂಟೌಟ್‌; 9 ಮಂದಿ ಸಾವು, 28 ಜನರಿಗೆ ಗಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Chinese Apps: ಟಿಕ್‌ಟಾಕ್‌ ಮಾತ್ರ ಅಲ್ಲ.. ಚೀನಾದ ಈ ಆಪ್‌ಗಳೂ ಅಷ್ಟೇ ಡೇಂಜರಸ್‌; ಶಾಕಿಂಗ್‌ ವರದಿ ಔಟ್‌

Chinese Apps: ಆಸ್ಟ್ರೇಲಿಯನ್‌ ಸ್ಟ್ರಾಟೆಜಿಕ್‌ ಪಾಲಿಸಿ ಎಂಬ ಸಂಸ್ಥೆಯ ಸಂಶೋಧಕರು ನಡೆಸಿ ಈ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯನ್ನು ಮೇ 2 ರಂದು ಆಸ್ಟ್ರೇಲಿಯಾ ಸರ್ಕಾರ ಮತ್ತು ಇತರ ರಾಷ್ಟ್ರಗಳ ಸರ್ಕಾರಕ್ಕೆ ಸಲ್ಲಿಸಿದ್ದು, ಬೀಜಿಂಗ್‌ನ ಕೆಲವು ಮೂಲಭೂತವಾದ ಮುಖಂಡರು ಚೀನಾದ ಟೆಕ್‌ ಕಂಪನಿಗಳ ಜೊತೆ ಕೈಜೋಡಿಸಿ ಪ್ರಪಂಚಾದ್ಯಂತ ಸಾಮಾಜಿಕ ಜಾಲತಾಣ ಆಪ್‌ ಅಥವಾ ಆನ್‌ಲೈನ್‌ ಗೇಮಿಂಗ್‌ ಆಪ್‌ಗಳ ಬಳಕೆದಾರರ ವೈಯಕ್ತಿಕ ವಿವರ ಮತ್ತು ದಾಖಲೆಗಳನ್ನು ಕದಿಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

VISTARANEWS.COM


on

Chinese app
Koo

ಕ್ಯಾನ್‌ಬೆರಾ: ಭಾರತದಲ್ಲಿ ಮಾತ್ರವಲ್ಲದೇ ಟಿಕ್‌ ಟಾಕ್‌(TikTok) ಸೇರಿದಂತೆ ಅನೇಕ ಚೈನೀಸ್‌ ಆಪ್‌ಗಳ(Chinese apps) ಬಗ್ಗೆ ಇದೀಗ ಆಸ್ಟ್ರೇಲಿಯಾ(Australia)ದಲ್ಲೂ ಕಳವಳ ವ್ಯಕ್ತವಾಗಿದ್ದು, ಅಲ್ಲಿನ ಸರ್ಕಾರ ಅವುಗಳನ್ನು ಬ್ಯಾನ್‌ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಟಿಕ್‌ಟಾಕ್‌ ಮಾತ್ರವಲ್ಲದೇ ವಿವಿಧ ಚೀನಾ ನಿರ್ಮಿತ ಮನೋರಂಜನಾ ಆಪ್‌ಗಳು, ಗೇಮಿಂಗ್‌ ಆಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಅಥವಾ ದಾಖಲೆಗಳನ್ನು ಕಳೆ ಹಾಕುತ್ತಿದೆ ಎಂಬುದು ಬಯಲಾಗಿದೆ.

ಆಸ್ಟ್ರೇಲಿಯನ್‌ ಸ್ಟ್ರಾಟೆಜಿಕ್‌ ಪಾಲಿಸಿ(Australian Strategic Policy) ಎಂಬ ಸಂಸ್ಥೆಯ ಸಂಶೋಧಕರು ನಡೆಸಿ ಈ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯನ್ನು ಮೇ 2 ರಂದು ಆಸ್ಟ್ರೇಲಿಯಾ ಸರ್ಕಾರ ಮತ್ತು ಇತರ ರಾಷ್ಟ್ರಗಳ ಸರ್ಕಾರಕ್ಕೆ ಸಲ್ಲಿಸಿದ್ದು, ಬೀಜಿಂಗ್‌ನ ಕೆಲವು ಮೂಲಭೂತವಾದ ಮುಖಂಡರು ಚೀನಾದ ಟೆಕ್‌ ಕಂಪನಿಗಳ ಜೊತೆ ಕೈಜೋಡಿಸಿ ಪ್ರಪಂಚಾದ್ಯಂತ ಸಾಮಾಜಿಕ ಜಾಲತಾಣ ಆಪ್‌ ಅಥವಾ ಆನ್‌ಲೈನ್‌ ಗೇಮಿಂಗ್‌ ಆಪ್‌ಗಳ ಬಳಕೆದಾರರ ವೈಯಕ್ತಿಕ ವಿವರ ಮತ್ತು ದಾಖಲೆಗಳನ್ನು ಕದಿಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಚೀನಾ ಇಡೀ ಪ್ರಪಂಚದಲ್ಲಿ ಅತ್ಯಂತ ಬಲಶಾಲಿ ರಾಷ್ಟ್ರವೆಂದೆನಿಸಿಕೊಳ್ಳಬೇಕೆಂದು ಹವಣಿಸುತ್ತಿದೆ. ಅದಕ್ಕಾಗಿ ಜಾಗತಿಕ ಮಾಹಿತಿ ವ್ಯವಸ್ಥೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಮತ್ತು ಚೀನಾದ ಸಾಂಸ್ಕೃತಿಕ, ತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಪ್ರಭಾವವನ್ನು ಹೆಚ್ಚಿಸಬೇಕು ಪ್ರಯತ್ನ ನಡೆಸುತ್ತಿದೆ. ಆಪ್‌ಗಳು ಕೇಳುವ ಸ್ವವಿವರಗಳು ಚೀನಾಗೆ ಬಹಳ ಉಪಯೋಗ ಆಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಆಪ್‌ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು ಆಸ್ಟ್ರೇಲಿಯಾ ನೀಡಿರುವ ವರದಿ ಬಗ್ಗೆ ಇದುವರೆಗೆ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟಿಕ್ ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್​ಗಳನ್ನು ನಿಷೇಧಿಸಿದ್ದ ಭಾರತ ಸರ್ಕಾರ ಬಳಿಕ ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್​ಗಳನ್ನು ಬ್ಯಾನ್‌ ಮಾಡಿತ್ತು. ಅವುಗಳಲ್ಲಿ 138 ಬೆಟ್ಟಿಂಗ್ ಆ್ಯಪ್​ಗಳು ಮತ್ತು 94 ಲೋನ್ ಆ್ಯಪ್​ಗಳು ಸೇರಿದ್ದವು. ಈ ಆ್ಯಪ್​ಗಳನ್ನು ತಡೆಹಿಡಿಯಲು ಗೃಹ ಸಚಿವಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ನೇರವಾಗಿ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ:Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

ಮೊದಲಿಗೆ ಗೃಹ ಇಲಾಖೆಯು 28 ಚೀನೀ ಲೋನ್ ಆ್ಯಪ್​ಗಳ ಬಗ್ಗೆ ಪರಿಶೀಲನೆ ನಡೆಸಲು ಆರಂಭಿಸಿತ್ತು. ಆ ಸಂದರ್ಭದಲ್ಲಿ ಅಂಥ 94 ಆ್ಯಪ್​ಗಳು ಬೇರೆ ಬೇರೆ ಆನ್​ಲೈನ್ ತಾಣಗಳಲ್ಲಿ ಲಭ್ಯ ಇದ್ದುದು ಗಮನಕ್ಕೆ ಬಂದಿದೆ. ಈ ಆ್ಯಪ್​ಗಳು ಜನರ ಗಮನ ಸೆಳೆದು ಭಾರೀ ಪ್ರಮಾಣದಲ್ಲಿ ಹಣಕಾಸು ವಂಚನೆ ಎಸಗುತ್ತಿವುದು ಗೊತ್ತಾಗಿದೆ. ಅಲ್ಲದೇ, ಈ ಆ್ಯಪ್​ಗಳ ಮೂಲಕ ಗೂಢಚಾರಿಕೆ, ಪಿತೂರಿ ಇತ್ಯಾದಿ ಪಾತಕಗಳನ್ನು ಎಸಗುವುದರ ಜೊತೆಗೆ ಜನರ ವೈಯಕ್ತಿಕ ಮಾಹಿತಿಯನ್ನು ಕದ್ದು ಭದ್ರತಾ ಅಪಾಯ ಒಡ್ಡುವಂತೆ ತೋರಿದ್ದವು. ಹೀಗಾಗಿ, ಈ ಅಪ್ಲಿಕೇಶನ್​ಗಳನ್ನು ನಿಷೇಧಿಸಲು ಸರ್ಕಾರ ನಿರ್ಧಿಸಿತ್ತು.

Continue Reading

ಪ್ರಮುಖ ಸುದ್ದಿ

ಮಹಿಳೆಯ ಕುತ್ತಿಗೆಗೆ ಬೆಲ್ಟ್‌ನಿಂದ ಬಿಗಿದು, ರಸ್ತೆ ಬದಿಯೇ ಅತ್ಯಾಚಾರ ಎಸಗಿದ ದುಷ್ಟ; ಭೀಕರ ವಿಡಿಯೊ ಇಲ್ಲಿದೆ

ಮಹಿಳೆಯ ಕುತ್ತಿಗೆಗೆ ಹಿಂದಿನಿಂದ ಬೆಲ್ಟ್‌ ಮೂಲಕ ಬಿಗಿಯುವ, ಆಕೆಯನ್ನು ಎಳೆಯುವ, ಆಕೆಯನ್ನು ಪ್ರಜ್ಞೆತಪ್ಪಿಸಿದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನ ಮಧ್ಯೆಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

US
Koo

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ (New York City) ದುಷ್ಟನೊಬ್ಬ ಮಹಿಳೆಯ ಕುತ್ತಿಗೆಗೆ ಬೆಲ್ಟ್‌ ಬಿಗಿದು, ಆಕೆಯನ್ನು ದರದರನೆ ಎಳೆದುಕೊಂಡು ಹೋಗಿ, ರಸ್ತೆಯ ಬದಿಯೇ ಅತ್ಯಾಚಾರ ಎಸಗಿದ್ದಾನೆ. ಮಹಿಳೆಯ ಮೇಲೆ ಮೃಗೀಯವಾಗಿ ದೌರ್ಜನ್ಯ ಎಸಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದ್ದು, ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ನ್ಯೂಯಾರ್ಕ್‌ ಸಿಟಿಯ ಸೌತ್‌ ಬ್ರಾಂಕ್ಸ್‌ನ ಈಸ್ಟ್‌ 152ನೇ ಸ್ಟ್ರೀಟ್‌ನಲ್ಲಿ ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುವಾಗ ದುರುಳನು ಕೃತ್ಯ ಎಸಗಿದ್ದಾನೆ. ಸುಮಾರು 45 ವರ್ಷದ ಮಹಿಳೆಯು ನಡೆದುಕೊಂಡು ಹೋಗುವಾಗ ಮುಸುಕುಧಾರಿ ವ್ಯಕ್ತಿಯು ಆಕೆಯ ಕುತ್ತಿಗೆಗೆ ಬೆಲ್ಟ್‌ನಿಂದ ಬಿಗಿದಿದ್ದಾನೆ. ರಸ್ತೆ ಬದಿ ನಿಂತಿದ್ದ ಎರಡು ಕಾರುಗಳ ಮಧ್ಯದ ಜಾಗದವರೆಗೆ ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಹಿಳೆಯ ಕುತ್ತಿಗೆಗೆ ಹಿಂದಿನಿಂದ ಬೆಲ್ಟ್‌ ಮೂಲಕ ಬಿಗಿಯುವ, ಆಕೆಯನ್ನು ಎಳೆಯುವ, ಆಕೆಯನ್ನು ಪ್ರಜ್ಞೆತಪ್ಪಿಸಿದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನ ಮಧ್ಯೆಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ಪ್ರಜ್ಞೆ ತಪ್ಪಿಸಿದ ಬಳಿಕ ಅತ್ಯಾಚಾರ ಎಸಗಿದ ದುಷ್ಟನು, ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ಞೆ ತಪ್ಪಿಸಿ, ಅತ್ಯಾಚಾರ ಎಸಗಿದ ಬಳಿಕ ದುಷ್ಟನು ಮಹಿಳೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ರಸ್ತೆ ಬದಿ ಬಿದ್ದಿದ್ದ ಮಹಿಳೆಯನ್ನು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳಷ್ಟೇ ಮ್ಯಾನ್ಹಟನ್‌ನಲ್ಲಿ ಯುವತಿಯೊಬ್ಬರಿಗೆ ದುಷ್ಟನೊಬ್ಬ ರಾತ್ರಿ ಲೈಂಗಿಕ ಕಿರುಕುಳ ನೀಡಿದ್ದ. ಇದಾದ ಬಳಿಕವೂ ದುಷ್ಕರ್ಮಿಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಹಾಗಾಗಿ, ಅಮೆರಿಕದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Continue Reading

ವಿದೇಶ

ಮನೆಗೆ ನುಗ್ಗಿ ತಮ್ಮದೇ ದೇಶದ ಕಪ್ಪುವರ್ಣೀಯ ಸೇನಾಧಿಕಾರಿಯನ್ನು ಕೊಂದ ಅಮೆರಿಕ ಪೊಲೀಸರು; Video ಇದೆ

ಮೇ 3ರಂದು ಪೊಲೀಸರಿಗೆ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ. ಪಕ್ಕದ ಫ್ಲ್ಯಾಟ್‌ನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಅಕ್ಕ-ಪಕ್ಕದ ಫ್ಲ್ಯಾಟ್‌ನವರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಆದರೆ, ಪೊಲೀಸ್‌ ಅಧಿಕಾರಿಯು ಮಹಿಳೆ ಹೇಳಿದ ಅಪಾರ್ಟ್‌ಮೆಂಟ್‌ ಬದಲು, ಬೇರೊಂದು ಅಪಾರ್ಟ್‌ಮೆಂಟ್‌ಗೆ ತೆರಳಿದ್ದೇ ವಾಯುಪಡೆ ಅಧಿಕಾರಿಯ ದುರಂತ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

US Officer
Koo

ವಾಷಿಂಗ್ಟನ್:‌ ಯಾವುದೇ ದೇಶದ ಸೇನಾಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ಕೈಗೊಳ್ಳುವಾಗ, ಎನ್‌ಕೌಂಟರ್‌ ನಡೆಸುವಾಗ ತುಂಬ ಎಚ್ಚರಿಕೆಯಿಂದ ಇರುತ್ತಾರೆ. ಉಗ್ರರು, ದುಷ್ಕರ್ಮಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಸಾರ್ವಜನಿಕರಿಗೆ, ಅಮಾಯಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೆ, ಅಮೆರಿಕದಲ್ಲಿ (America) ಪೊಲೀಸ್‌ ಅಧಿಕಾರಿಯು (US Cop) ದುಷ್ಕರ್ಮಿಗಳ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು, ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರ (US Officer) ಫ್ಲ್ಯಾಟ್‌ಗೆ ನುಗ್ಗಿ, ಅವರನ್ನು ಹತ್ಯೆಗೈದಿದ್ದಾರೆ. ವಾಯುಪಡೆ ಅಧಿಕಾರಿಯು ಕಪ್ಪು ವರ್ಣದವರಾದ ಕಾರಣ, ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.

ಮೇ 3ರಂದು ಫ್ಲೊರಿಡಾದ ಫೋರ್ಟ್‌ ವ್ಯಾಲ್ಟನ್‌ ಬೀಚ್‌ನಲ್ಲಿರುವ ಶೆಜ್‌ ಎಲನ್‌ ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸ್‌ ಅಧಿಕಾರಿಯು ತಪ್ಪಾಗಿ ಭಾವಿಸಿ ಅಮೆರಿಕ ವಾಯುಪಡೆಯ ಅಧಿಕಾರಿ, ಕಪ್ಪು ವರ್ಣದವರಾದ ರೋಜರ್‌ ಫೋರ್ಟ್‌ಸನ್‌ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯು ಬೇರೊಂದು ಅಪಾರ್ಟ್‌ಮೆಂಟ್‌ಗೆ ತೆರಳಿ, ಹಿಂದೆ-ಮುಂದೆ ನೋಡದೆ ಶೂಟ್‌ ಮಾಡಿದ ಕಾರಣ ಕಪ್ಪು ವರ್ಣೀಯ ಅಧಿಕಾರಿಯಾಗಿದ್ದಾರೆ. ಇದಕ್ಕೆ ಅಮೆರಿಕದಲ್ಲಿರುವ ಕಪ್ಪು ವರ್ಣದ ಸಮುದಾಯದವರು (ಆಫ್ರಿಕಾ ಮೂಲದ ಅಮೆರಿಕದವರು) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಅಧಿಕಾರಿ ದಾಳಿ ಮಾಡಿದ್ದೇಕೆ?

ಮೇ 3ರಂದು ಪೊಲೀಸರಿಗೆ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ. ಪಕ್ಕದ ಫ್ಲ್ಯಾಟ್‌ನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಅಕ್ಕ-ಪಕ್ಕದ ಫ್ಲ್ಯಾಟ್‌ನವರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಇದಾದ ಬಳಿಕ, ಪೊಲೀಸ್‌ ಅಧಿಕಾರಿಯೂ ಕೂಡಲೇ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಆದರೆ, ಮಹಿಳೆ ಕರೆ ಮಾಡಿ ತಿಳಿಸಿದ್ದೇ ಬೇರೆ, ಪೊಲೀಸ್‌ ಅಧಿಕಾರಿ ತೆರಳಿದ ಅಪಾರ್ಟ್‌ಮೆಂಟೇ ಬೇರೆಯಾದ ಕಾರಣ ಅಚಾತುರ್ಯ ಸಂಭವಿಸಿದೆ. ಪೊಲೀಸ್‌ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಇಡೀ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ವಾಯುಪಡೆ ಅಧಿಕಾರಿಯ ದುರಂತ ಸಾವಿನ ವಿಡಿಯೊ ವೈರಲ್‌ ಆಗಿದೆ.

ವಾಯುಪಡೆ ಅಧಿಕಾರಿ ಇದ್ದ ಫ್ಲ್ಯಾಟ್‌ಗೆ ನುಗ್ಗಿದ ಪೊಲೀಸ್‌ ಅಧಿಕಾರಿಯು ಪದೇಪದೆ ಬಾಗಿಲು ಬಡಿದಿದ್ದಾರೆ. ರೋಜರ್‌ ಫೋರ್ಟ್‌ಸನ್‌ ಅವರು ಬಾಗಿಲು ತೆಗೆಯುವುದು ತುಸು ವಿಳಂಬವಾಗಿದೆ. ಇದೇ ಕೋಪದಲ್ಲಿದ್ದ ಪೊಲೀಸ್‌ ಅಧಿಕಾರಿಯು, ಫೋರ್ಟ್‌ಸನ್‌ ಬಾಗಿಲು ತೆಗೆಯುತ್ತಲೇ ಹಿಂದೆ-ಮುಂದೆ ನೋಡದೆ ಗುಂಡಿನ ದಾಳಿ ನಡೆಸಿದ್ದಾರೆ. ಸತತ ಆರು ಗುಂಡು ಹಾರಿಸಿದ ಕಾರಣ ರೋಜರ್‌ ಫೋರ್ಟ್‌ಸನ್‌ ಅಲ್ಲಿಯೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ರೋಜರ್‌ ಫೋರ್ಟ್‌ಸನ್‌ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪು ವರ್ಣೀಯರ ಮೇಲೆ ಪೊಲೀಸರ ದೌರ್ಜನ್ಯದ ಕುರಿತು ತನಿಖೆಯಾಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Continue Reading

ದೇಶ

ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!

ಸಂಪತ್ತಿನ ಹಂಚಿಕೆ ಕುರಿತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ಪಾಕಿಸ್ತಾನದ ಕುರಿತು ಪಕ್ಷದ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ನೀಡಿರುವ ಹೇಳಿಕೆಗಳು ಕಾಂಗ್ರೆಸ್‌ಗೆ ಭಾರಿ ಮುಜುಗರ ತಂದಿವೆ. ಇಬ್ಬರೂ ನಾಯಕರ ವಿರುದ್ಧ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗುತ್ತದೆ. ಹಾಗಾಗಿ, ಕಾಂಗ್ರೆಸ್‌ ಪಕ್ಷವು ಇಬ್ಬರ ಹೇಳಿಕೆಗಳಿಂದಲೂ ಅಂತರ ಕಾಪಾಡಿಕೊಳ್ಳುವ ಮೂಲಕ ಮುಜುಗರದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ.

VISTARANEWS.COM


on

Sam Pitroda
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಿಡಿದು, ಸ್ಥಳೀಯ ಪಕ್ಷದ ನಾಯಕನವರೆಗೆ ಭಾಷಣಗಳು, ಹೇಳಿಕೆಗಳು, ಆರೋಪ, ಟೀಕೆ, ವ್ಯಂಗ್ಯಗಳು ಮೊನಚಾಗಿವೆ. ಆದರೆ, ಕಾಂಗ್ರೆಸ್‌ನ ಕೆಲ ನಾಯಕರು ನೀಡುತ್ತಿರುವ ಹೇಳಿಕೆಗಳು ಆ ಪಕ್ಷಕ್ಕೇ ಮುಳುವಾಗುತ್ತಿವೆ. ಸಂಪತ್ತಿನ ಹಂಚಿಕೆ ಕುರಿತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ಪಾಕಿಸ್ತಾನದ ಕುರಿತು ಪಕ್ಷದ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ಅವರು ನೀಡಿರುವ ಹೇಳಿಕೆಗಳು ಕಾಂಗ್ರೆಸ್‌ಗೆ ಭಾರಿ ಮುಜುಗರ ತಂದಿವೆ. ಇದೇ ಕಾರಣಕ್ಕಾಗಿ, ಇಬ್ಬರೂ ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡಿದೆ.

ಸ್ಯಾಮ್‌ ಪಿತ್ರೋಡಾ ಅವಾಂತರಗಳು

“ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರ ಸಂಪತ್ತನ್ನು ಕಸಿದು, ಹಂಚಿಕೆ ಮಾಡುತ್ತದೆ. ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕುತ್ತದೆ” ಎಂಬುದಾಗಿ ನರೇಂದ್ರ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ, ಸ್ಯಾಮ್‌ ಪಿತ್ರೋಡಾ ಅವರು ಅಮೆರಿಕದ ಉದಾಹರಣೆ ಕೊಟ್ಟರು. “ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಅಪ್ಪನ ಆಸ್ತಿಯಲ್ಲಿ ಶೇ.55ರಷ್ಟು ಆಸ್ತಿಯನ್ನು ಸರ್ಕಾರಕ್ಕೆ ಕೊಡಬೇಕು” ಎಂಬುದಾಗಿ ಹೇಳಿದ್ದು ವಿವಾದಕ್ಕೆ ಕಾರಣವಾಯಿತು.

“ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಅವನು ಸತ್ತಾಗ ಕೇವಲ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು. 55 ಪ್ರತಿಶತವನ್ನು ಸರ್ಕಾರವು ಹೊಂದುತ್ತದೆ. ಅದು ಆಸಕ್ತಿದಾಯಕ ಕಾನೂನು. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ಮತ್ತು ನೀವು ಈಗ ಹೋಗುವಾಗ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನ್ಯಾಯೋಚಿತವಾಗಿದೆ” ಎಂದು ಪಿತ್ರೋಡಾ ಹೇಳಿದ್ದರು. ಇನ್ನು, ಅವರು ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಇದ್ದಾರೆ ಎಂದು ವರ್ಣ ಭೇದದ ಹೇಳಿಕೆಗಳಿಂದಾಗಿ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ

ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರೀಗ ಪಾಕಿಸ್ತಾನದ ಪರವಾಗಿ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದು ಅವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ, ಮಣಿಶಂಕರ್‌ ಅಯ್ಯರ್‌ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡಿದೆ.

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದಾರೆ.

ಇದನ್ನೂ ಓದಿ: Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Continue Reading
Advertisement
Protein Supplements
ಆರೋಗ್ಯ15 mins ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ30 mins ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ45 mins ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Dina Bhavishya
ಭವಿಷ್ಯ45 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

car catches fire
ಕ್ರೈಂ6 hours ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ7 hours ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು7 hours ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು7 hours ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್7 hours ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ45 mins ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು15 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌