Nijjar Killing: ಒಂದೇ ದಿನದಲ್ಲಿ ಸ್ಟೂಡೆಂಟ್‌ ವೀಸಾ ಪಡೆದು ಕೆನಡಾಕ್ಕೆ ಬಂದಿದ್ನಂತೆ ನಿಜ್ಜರ್‌ ಹಂತಕ - Vistara News

ವಿದೇಶ

Nijjar Killing: ಒಂದೇ ದಿನದಲ್ಲಿ ಸ್ಟೂಡೆಂಟ್‌ ವೀಸಾ ಪಡೆದು ಕೆನಡಾಕ್ಕೆ ಬಂದಿದ್ನಂತೆ ನಿಜ್ಜರ್‌ ಹಂತಕ

Nijjar Killing:ಮೇ 3ರಂದು ಬಂಧನಕ್ಕೊಳಗಾಗಿರುವ ಕರಣ್‌ ಬ್ರಾರ್‌ 2019ರಲ್ಲಿ ಪಂಜಾಬ್‌ನ ಭಟಿಂಡಾದಲ್ಲಿರುವ ಎಥಿಕ್‌ವರ್ಕ್ಸ್‌ ಇಮಿಗ್ರೇಶನ್‌ ಕೇಂದ್ರದಲ್ಲಿ ವಿದ್ಯಾರ್ಥಿ ವೀಸಾ ಪಡೆದಿದ್ದ. ಕೆನಡಾ ವಿದ್ಯಾರ್ಥಿ ವೀಸಾ ಪಡೆಯಲು ಸಾಮಾನ್ಯವಾಗಿ 7–9ವಾರಗಳು ಬೇಕಾಗುತ್ತದೆ. ಆದರೆ ಈತ ಕೇವಲ ಒಂದೇ ದಿನದಲ್ಲಿ ವೀಸಾ ಪಡೆದಿದ್ದ ಎಂಬ ಗಂಭೀರ ವಿಚಾರ ಬೆಳಕಿಗೆ ಬಂದಿದೆ.

VISTARANEWS.COM


on

Nijjar Killling
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಟ್ಟವಾ:ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊಲೆ(Nijjar Killing) ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಮೂವರು ಭಾರತೀಯ ಮೂಲದ ಆರೋಪಿಗಳಲ್ಲಿ ಒಬ್ಬ ತಾನೂ ವಿದ್ಯಾರ್ಥಿ ವೀಸಾ(Student Visa)ದಲ್ಲಿ ಕೆನಡಾಗೆ(Canada) ಬಂದಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಮೇ 3ರಂದು ಬಂಧನಕ್ಕೊಳಗಾಗಿರುವ ಕರಣ್‌ ಬ್ರಾರ್‌ 2019ರಲ್ಲಿ ಪಂಜಾಬ್‌ನ ಭಟಿಂಡಾದಲ್ಲಿರುವ ಎಥಿಕ್‌ವರ್ಕ್ಸ್‌ ಇಮಿಗ್ರೇಶನ್‌ ಕೇಂದ್ರದಲ್ಲಿ ವಿದ್ಯಾರ್ಥಿ ವೀಸಾ ಪಡೆದಿದ್ದ. ಕೆನಡಾ ವಿದ್ಯಾರ್ಥಿ ವೀಸಾ ಪಡೆಯಲು ಸಾಮಾನ್ಯವಾಗಿ 7–9ವಾರಗಳು ಬೇಕಾಗುತ್ತದೆ. ಆದರೆ ಈತ ಕೇವಲ ಒಂದೇ ದಿನದಲ್ಲಿ ವೀಸಾ ಪಡೆದಿದ್ದ ಎಂಬ ಗಂಭೀರ ವಿಚಾರ ಬೆಳಕಿಗೆ ಬಂದಿದೆ.

ಬ್ರಾರ್‌ ವೀಸಾ ಪಡೆದಿದ್ದ ಬಗ್ಗೆ ಎಥಿಕ್‌ವರ್ಕ್ಸ್‌ ಇಮಿಗ್ರೇಶನ್‌ ಸೇವೆ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಫೊಟೋ, ವಿಡಿಯೋ ಸಹಿತ ಪ್ರಕಟಿಸಿತ್ತು. ಕೆನಡಾ ಸ್ಟಡಿ ವೀಸಾ ಪಡೆದಿರುವ ಬ್ರಾರ್‌ ಅವರಿಗೆ ಅಭಿನಂದನೆಗಳು…ಮತ್ತೊರ್ವ ಹ್ಯಾಪಿ ಕ್ಲೈಂಟ್‌ ಎಂದು ಪೋಸ್ಟ್‌ ಕೂಡ ಮಾಡಿತ್ತು. ಬಳಿಕ ಅದನ್ನು ಡಿಲೀಟ್‌ ಮಾಡಿತ್ತು ಎನ್ನಲಾಗಿದೆ. ಇದೀಗ ಪೊಲೀಸ್‌ ವಿಚಾರಣೆ ವೇಳೆ ತಾಬು ಸ್ಟಡಿ ವೀಸಾದಲಿ ಕೆನಡಾಗೆ ಬಂದಿದ್ದೆ ಎಂದು ಬ್ರಾರ್‌ ಒಪ್ಪಿಕೊಂಡಿದ್ದಾನೆ.

ಕಳೆದ ವರ್ಷ ಕೆನಡಾದ ಬ್ರಿಟೀಷ್‌ ಕೊಲಂಬಿಯಾದಲ್ಲಿ ಹರ್ದೀಪ್‌ ಸಿಂಗ್‌ನನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು ಮೂವರು ಹಂತಕರನ್ನು ಕೆನಡಾ ಪೊಲೀಸರು ಅರೆಸ್ಟ್‌ ಮಾಡಿದ್ದರು. ಬಂಧಿತರನ್ನು ಕರಣ್‌ ಪ್ರಿತ್‌ ಸಿಂಗ್(28) ಕಮಲ್‌ ಪ್ರಿತ್‌ ಸಿಂಗ್‌(22) ಮತ್ತು ಕರಣ್‌ ಬ್ರಾರ್‌(22) ಎಂದು ಗುರುತಿಸಲಾಗಿದೆ. ಅಲ್ಲದೇ ಪೊಲೀಸರು ಮೂವರು ಹಂತಕರ ಫೊಟೋವನ್ನೂ ಕೂಡ ರಿಲೀಸ್‌ ಮಾಡಿದ್ದರು. ಆರೋಪಿಗಳ ವಿರುದ್ಧ ಕೊಲೆಗೆ ಸಂಚು ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟ್‌ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ.

ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತೀಯ ಮೂಲದ ಮೂವರನ್ನು ಅರೆಸ್ಟ್‌ ಮಾಡಿರುವ ಬೆನ್ನಲ್ಲೇ ಕೆನಡಾ ಮತ್ತೆ ಭಾರತದತ್ತ ಬೊಟ್ಟು ಮಾಡಿ ತೋರಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೆನಡಾ ಸಂಸದ ಜಗ್ಮಿತ್‌ ಸಿಂಗ್‌, ಪ್ರಕರಣದಲ್ಲಿ ಭಾರತದ ಕೈವಾಡವಿರುವುದು ಸಾಬೀತಾಗಿದೆ. ಕೆನಡಾದಂತಹ ಪೂಜ್ಯನೀಯ ಸ್ಥಳದಲ್ಲಿ ಕೆನಡಾ ಪ್ರಜೆಯನ್ನು ಕೊಲ್ಲಲು ಭಾರತ ಹಂತಕರನ್ನು ನೇಮಿಸಿದೆ ಎಂದು ಆರೋಪಿಸಿದ್ದರು.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದರು. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

ಇದನ್ನೂ ಓದಿ: SSLC Exam Result 2024: ಇಂದು ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Zakir Naik: ಜಾಕೀರ್ ನಾಯಕ್‌ನನ್ನು ಭಯೋತ್ಪಾದಕನೆಂದು ಘೋಷಿಸಿ; ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Zakir Naik: ಹಿಂದೂ ದೇವಸ್ಥಾನದ ಬಗ್ಗೆ ಜಾತಿದ್ವೇಷ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಡಾ. ಜಾಕೀರ್ ನಾಯಕ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕು ಎಂದು ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಅಪರ ಜಿಲ್ಲಾಧಿಕಾರಿ ಟಿ. ಎನ್. ಕೃಷ್ಣಮೂರ್ತಿ ಹಾಗೂ ಮುಂಬಯಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

VISTARANEWS.COM


on

Hindu Janajagruthi Samithi demands declaration of Zakir Naik as international terrorist
Koo

ಬೆಂಗಳೂರು: ಹಿಂದೂ ದೇವಸ್ಥಾನದ ಬಗ್ಗೆ ಜಾತಿದ್ವೇಷ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಡಾ. ಜಾಕೀರ್ ನಾಯಕ್‌ನನ್ನು (Zakir Naik) ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕು ಎಂದು ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಅಪರ ಜಿಲ್ಲಾಧಿಕಾರಿ ಟಿ. ಎನ್. ಕೃಷ್ಣಮೂರ್ತಿ ಹಾಗೂ ಮುಂಬಯಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಡಾ. ಜಾಕೀರ್ ನಾಯಕ್ ‘ಹುಡಾ ಟಿ.ವಿ’ ಹೆಸರಿನ ಯುಟ್ಯೂಬ್ ಚಾನೆಲ್‌ನವೊಂದರ ಸಂದರ್ಶನದಲ್ಲಿ ಅನೇಕ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾನೆ, ಇದರಿಂದ ಕೋಟ್ಯಾಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಹಿಂದೂ ದೇವಸ್ಥಾನಗಳ ಬಗ್ಗೆ ಸಮಾಜದಲ್ಲಿ ಜಾತೀಯ ದ್ವೇಷ, ತಿರಸ್ಕಾರ ಮತ್ತು ಶತ್ರುತ್ವದ ಭಾವನೆ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದುಷ್ಕೃತ್ಯ ಮಾಡಿದ್ದಾನೆ ಎಂದು ಆರೋಪಿಸಿರುವ ಹಿಂದೂ ಜನಜಾಗೃತಿ ಸಮಿತಿಯು, ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಜಾಕೀರ್ ನಾಯಕ್‌ ನನ್ನು ಅಂತರರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕು ಹಾಗೂ ಅವನನ್ನು ಭಾರತಕ್ಕೆ ಒಪ್ಪಿಸುವುದಕ್ಕಾಗಿ ಮಲೇಶಿಯಾ ಸರ್ಕಾರದ ಮೇಲೆ ಭಾರತ ಸರ್ಕಾರ ಒತ್ತಡ ಹೇರಬೇಕು ಎಂದು ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

ಕೇಂದ್ರ ಸರ್ಕಾರದಿಂದ ಭಯೋತ್ಪಾದಕ ಸಂಘಟನೆ ಎಂದು ನಿಷೇಧ ಹೇರಿದ ನಂತರವೂ ಜಾಕೀರ್ ನಾಯಕ್ ಮತ್ತು ಇಸ್ಲಾಮಿಕ ರಿಸರ್ಚ್ ಫೌಂಡೇಶನ್‌ನ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿನ ಅಕೌಂಟ್ ಮುಂದುವರೆದಿವೆ. ಅವುಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಸಮಿಯ ವತಿಯಿಂದ ಮನವಿ ಪತ್ರದಲ್ಲಿ ಆಗ್ರಹಿಸಿದೆ.

ಇದನ್ನೂ ಓದಿ: Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ನೀಲೇಶ್, ಸತೀಶ ಸೋನಾರ, ದೇವೇಗೌಡ, ವೆಂಕಟೇಶ ಮೂರ್ತಿ ಹಾಗೂ ರವೀಂದ್ರ ದಾಸಾರಿ, ಸಂದೀಪ್ ತುಳಸಿಕರ, ಸುಶೀಲ ಭುಜಬಳ, ವಿಲಾಸ ನಿಕಮ ಮತ್ತು ಮನೀಷ ಸೈನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಪ್ರಮುಖ ಸುದ್ದಿ

Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

Radhika Merchant : ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

VISTARANEWS.COM


on

Radhika Merchant
Koo

ಬೆಂಗಳೂರು: ದೈತ್ಯ ಉದ್ಯಮಿ ಮುಖೇಶ್ ಅಂಬಾನಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ವಿವಾಹ ಸಮಾರಂಭದ ಕುರಿತ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಫ್ರೆಂಚ್ ಕ್ರೂಸ್​ನಲ್ಲಿ ತಮ್ಮ ವಿವಾಹ ಪೂರ್ವ ಎರಡಡನೇ ಪಾರ್ಟಿಯನ್ನು ಪ್ರಾರಂಭಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದವು. ಸಂತೋಷಕೂಟಕ್ಕಾಗಿ ಅಂಬಾನಿ ದಂಪತಿಗಳು (Ambani Couple) ಫ್ರಾನ್ಸ್ ಮತ್ತು ಇಟಲಿಯಾದ್ಯಂತ ಪ್ರಯಾಣಿಸಿದ್ದರು ಮತ್ತು ಐಷಾರಾಮಿ ಹಡಗಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ವಈ ಆಚರಣೆಗಳ ನಡುವೆ, ದಂಪತಿಗಳು ಜುಲೈನಲ್ಲಿ ಮದುವೆಯಾಗಲಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಭಾರತೀಯ ಸಂಪ್ರದಾಯದ ಉಡುಪುಗಳು

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ವಿವಾಹ ಪೂರ್ವ ಪಾರ್ಟಿಯಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್, ಸಲ್ಮಾನ್ ಖಾನ್ ಮತ್ತು ಎಂಎಸ್ ಧೋನಿ ಭಾಗವಹಿಸುವ ನಿರೀಕ್ಷೆಯಿದೆ. ಬ್ಯಾಕ್ ಸ್ಟ್ರೀಟ್ ಬಾಯ್ಸ್ ಪಾರ್ಟಿಯಲ್ಲಿ ಪ್ರದರ್ಶನ ನೀಡುವ ದೃಶ್ಯಗಳು ಇತ್ತೀಚೆಗೆ ವೈರಲ್ ಆಗಿದ್ದವು. ಗುರು ರಾಂಧವ ಮತ್ತು ಪಿಟ್ಬುಲ್ ಕೂಡ ಈ ತಾರೆಗಳಿಂದ ಕೂಡಿದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂಬ ವದಂತಿಗಳಿವೆ.

Continue Reading

ದೇಶ

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

indo china border :ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ.

VISTARANEWS.COM


on

indo Chaina border
Koo

ನವದೆಹಲಿ: ಸಿಕ್ಕಿಂಗಿಂತ 150 ಕಿಲೋಮೀಟರ್​ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ -20 ಸ್ಟೆಲ್ತ್ ಫೈಟರ್ ಜೆಟ್ ಗಳನ್ನು ನಿಯೋಜಿಸಿರುವುದು ಮೇ 27 ರಂದು ಸಂಗ್ರಹಿಸಿದ ಉಪಗ್ರಹ ಚಿತ್ರಗಳ ಮೂಲಕ ಕಂಡು ಬಂದಿದೆ. ಈ ಚಿತ್ರವನ್ನು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಅನ್ನು ನೋಡುವ ಸಂಸ್ಥೆಯಾದ ಆಲ್ ಸೋರ್ಸ್ ಅನಾಲಿಸಿಸ್​​ನ ಅನುಮತಿಯೊಂದಿ ಅಭಿವೃದ್ಧಿ ಮಾಡಲಾಗಿದೆ. ಈ ಮೂಲಕ ಚೀನಾ, ಭಾರತ ಗಡಿಯಲ್ಲಿ (Indo China Border) ಅತ್ಯಂತ ಅಪಾಯಕಾರಿ ವಿಮಾನವನ್ನು ನಿಯೋಜಿಸುವ ಮೂಲಕ ಆತಂಕ ಸೃಷ್ಟಿಸುತ್ತಿದೆ.

ಟಿಬೆಟ್​​ನ ಎರಡನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುವ ಮಿ ಮತ್ತು ನಾಗರಿಕ ವಿಮಾನ ನಿಲ್ದಾಣ ಇದಾಗಿದ್ದು ಆರು ಚೀನೀ ವಾಯುಪಡೆಯ ಜೆ -20 ಸ್ಟೆಲ್ತ್ ಫೈಟರ್​​ ವಿಮಾನಗಳು ಅಲ್ಲಿ ಕಂಡು ಬಂದಿದೆ. ಈ ವಿಮಾನ ನಿಲ್ದಾಣವು 12,408 ಅಡಿ ಎತ್ತರದಲ್ಲಿದೆ, ಇದು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದು. ಜೆ -20 ಯುದ್ಧ ವಿಮಾನಗಳ ನಿಯೋಜನೆಯ ಬಗ್ಗೆ ತಿಳಿದಿರುವ ಭಾರತೀಯ ವಾಯುಪಡೆ (ಐಎಎಫ್) ಈ ಸಮಯದಲ್ಲಿ ಅವುಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ. “ಈ ವಿಮಾನಗಳು ಟಿಬೆಟ್​ನ ಶಿಗಾಟ್ಸೆಯಲ್ಲಿ ಕಾಣಿಸಿಕೊಂಡಿರುವುದು ವಿಷೇಷ. ಯಾಕೆಂದರೆ ಅವುಗಳನ್ನು ತಮ್ಮ ಸಾಮಾನ್ಯ ಕಾರ್ಯಾಚರಣೆಯ ಪ್ರದೇಶಗಳ ಹೊರಗೆ ಮತ್ತು ಭಾರತೀಯ ಗಡಿಯ ಸಮೀಪದಲ್ಲಿ ನಿಯೋಜಿಸಿರುವುದು ಅಚ್ಚರಿಯಾಗಿದೆ.

ಭಾರತವು ತನ್ನ 36 ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳೊಂದಿಗೆ ಜೆ -20 ಅನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಎಂಟು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ನ (ಯುಎಸ್ಎಎಫ್) ಸುಧಾರಿತ ವಾಯು ಯುದ್ಧ ರಿಹರ್ಸಲ್​​ಗಾಗಿ ಅಲಾಸ್ಕಾಕ್ಕೆ ಹಾರಿವೆ. ಗಮನಾರ್ಹವಾಗಿ, ಚೀನಾದ ಜೆ -20 ಪತ್ತೆಯಾದ ಶಿಗಾಟ್ಸೆ ಪಶ್ಚಿಮ ಬಂಗಾಳದ ಹಸಿಮಾರಾದಿಂದ (ಕೆಳಗೆ) 290 ಕಿ.ಮೀ ಗಿಂತ ಕಡಿಮೆ ದೂರದಲ್ಲಿದೆ. ಅಲ್ಲಿ ಭಾರತವು ತನ್ನ 16 ರಾಫೆಲ್​ ಎರಡನೇ ಸ್ಕ್ವಾಡ್ರನ್ ಅನ್ನು ನೆಲೆಗೊಳಿಸಲಾಗುತ್ತದೆ.

ಇದನ್ನೂ ಓದಿ: Azam Khan : ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ 10 ವರ್ಷ ಜೈಲು, 14 ಲಕ್ಷ ದಂಡ

ಟಿಬೆನಲ್ಲಿ ಜೆ – 20 ವಿಮಾನವನ್ನು ಅನ್ನು ನಿಯೋಜಿಸುತ್ತಿರುವುದು ಇದೇ ಮೊದಲಲ್ಲ. 2020 ಮತ್ತು 2023 ರ ನಡುವೆ ಚೀನಾದ ಹೋಟಾನ್ ಪ್ರಾಂತ್ಯದ ಕ್ಸಿನ್ಜಿಯಾಂಗ್ನಲ್ಲಿ ಜೆಟ್​ಗಳನ್ನು ಇಡಲಾಗಿತ್ತು. ಆದಾಗ್ಯೂ, ಇದು ಜೆ -20ನ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ನಿಯೋಜನೆ ಎಂದು ನಂಬಲಾಗಿದೆ.

2017ರಿಂದ ಚೀನಾ ವಾಯುಸೇನೆ ಸೇರಿದ ಜೆ 20

ಮೈಟಿ ಡ್ರ್ಯಾಗನ್ ಎಂದೂ ಕರೆಯಲ್ಪಡುವ ಚೆಂಗ್ಡು ಜೆ -20 ಅವಳಿ ಎಂಜಿನ್ ಸ್ಟೆಲ್ತ್ ಫೈಟರ್ ಆಗಿದ್ದು, ಇದನ್ನು 2017 ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಕೆಲವು ವರದಿಗಳು ಚೀನಾ ಈಗಾಗಲೇ 250 ಸ್ಟೆಲ್ತ್ ಫೈಟರ್​ಗಳನ್ನು ನಿಯೋಜಿಸಿದೆ. ಇದು ಅತಿ ವೇಗದ ವಿಮಾನವಾಗಿದ್ದ ರಾಡಾರ್​ ಮೂಲಕ ಗಮನಿಸುವುದು ಕಷ್ಟ.

ಯುದ್ಧ ವಿಮಾನದ ಸೇರ್ಪಡೆಯೊಂದಿಗೆ, ಚೀನಾ ಸ್ಟೆಲ್ತ್ ಫೈಟರ್ಗಳನ್ನು ಕಾರ್ಯಾಚರಣೆಯಲ್ಲಿ ನಿಯೋಜಿಸಿದ ವಿಶ್ವದ ಮೂರನೇ ದೇಶವಾಗಿ ಹೊರಹೊಮ್ಮಿತು. ಈ ಜೆಟ್ ಅನ್ನು ನಿರಂತರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಪ್ರಾಥಮಿಕ ಜವಾಬ್ದಾರಿ ಯುದ್ಧ. ಇದು 300 ಕಿ.ಮೀ ದೂರದಲ್ಲಿರುವ ವೈಮಾನಿಕ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಚೀನಾ ಟಿಬೆಟ್ ಮತ್ತು ಭಾರತ ಗಡಿಯ ಬಳಿಯ ಇತರ ಪ್ರದೇಶಗಳಲ್ಲಿ ತನ್ನ ವಾಯು ಶಕ್ತಿ ಸಾಮರ್ಥ್ಯವನ್ನು ಸ್ಥಿರವಾಗಿ ಹೆಚ್ಚಿಸಿದೆ. ಇದು ಪ್ರಾಥಮಿಕವಾಗಿ ಹೊಸ ವಾಯುನೆಲೆಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ವಾಯುನೆಲೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದನ್ನು ಸೇರಿಕೊಂಡಿದೆ ಚೀನಾ ಜೆ -20 ಮತ್ತು ಅದರ ಎಚ್ -6 ಪರಮಾಣು ಸಾಮರ್ಥ್ಯದ ಬಾಂಬರ್ ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಲ್ಲಿ ನಿಯೋಜಿಸುತ್ತಿದೆ.

Continue Reading

ಕರ್ನಾಟಕ

Prajwal Revanna Case: ಜರ್ಮನಿಯಿಂದ ಬೆಂಗಳೂರಿನತ್ತ ಹೊರಟ ಪ್ರಜ್ವಲ್;‌ ಬಂದ ತಕ್ಷಣ ಏನಾಗತ್ತೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್

Prajwal Revanna Case: ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್‌ ಮಾಡಿದೆ ಎಂದು ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್‌ ಡೆಸ್ಕ್‌ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಒಂದು ತಿಂಗಳ ಬಳಿಕ ಕೊನೆಗೂ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್‌ ವಿಮಾನ ನಿಲ್ದಾಣದಲ್ಲಿ (Munich Airport) ವಿಮಾನ ಹತ್ತಿರುವ ಪ್ರಜ್ವಲ್‌ ರೇವಣ್ಣ ಇಂದು ರಾತ್ರಿ (ಮೇ 31) 12.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಲೇ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಏರ್‌ಪೋರ್ಟ್‌ಗೆ ಎಸ್‌ಐಟಿ ಅಧಿಕಾರಿಗಳ ಲಗ್ಗೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್‌ ಡೆಸ್ಕ್‌ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ವಿಮಾನ ಲ್ಯಾಂಡಿಂಗ್‌ ಕುರಿತು, ವಿಮಾನದಲ್ಲಿ ಯಾರಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅವರ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಇಮಿಗ್ರೇಷನ್‌ ಅಧಿಕಾರಿಗಳು ಸ್ಟ್ಯಾಂಪ್‌ ಹಾಕುತ್ತಾರೆ. ಸ್ಟ್ಯಾಂಪ್‌ ಹಾಕಿ, ಪರಿಶೀಲನೆ ಮುಗಿದ ಬಳಿಕವೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್‌ ಕರೆದೊಯ್ಯಲು ಎಸ್‌ಐಟಿ 4 ಪ್ಲಾನ್‌

ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್‌ ಮಾಡಿದೆ ಎಂದು ತಿಳಿದುಬಂದಿದೆ. ಟರ್ಮಿನಲ್‌ 2 ಆಗಮನದ ಗೇಟ್‌, ಟರ್ಮಿನಲ್‌ 2 ವಿಐಪಿ ಎಕ್ಸಿಟ್‌ ಗೇಟ್‌, ಟರ್ಮಿನಲ್‌ 2 ಒಳಭಾಗದಿಂದ ಟರ್ಮಿನಲ್‌ 1ರ ಮೂಲಕ ಹೊರತರುವುದು ಇಲ್ಲವೇ ಟರ್ಮಿನಲ್‌ 1 ಬಳಿಯ ಆಲ್ಫಾ ಗೇಟ್‌ನಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ ಜಾಮೀನು ಅರ್ಜಿ ವಿಚಾರಣೆ

ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್‌ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್‌ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇನ್ನು, ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ತೀರ್ಪು ಕೂಡ ಶುಕ್ರವಾರವೇ ಹೊರಬೀಳಲಿದೆ. ಇದರಿಂದಾಗಿ ಶುಕ್ರವಾರವು ಎಚ್‌.ಡಿ.ರೇವಣ್ಣ ಕುಟುಂಬಕ್ಕೆ ಬಿಗ್‌ ಡೇ ಆಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

Continue Reading
Advertisement
prajwal revanna case mobile
ಪ್ರಮುಖ ಸುದ್ದಿ28 mins ago

Prajwal Revanna Case: ವಿದೇಶದಲ್ಲಿಯೇ ಮೊಬೈಲ್‌ ನಾಶ ಮಾಡಿದರಾ ಪ್ರಜ್ವಲ್?

Cervical Cancer
ಆರೋಗ್ಯ1 hour ago

Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

prajwal revanna case airport arrest
ಕ್ರೈಂ1 hour ago

Prajwal Revanna Case: ಪ್ರಜ್ವಲ್ ರೇವಣ್ಣಗೆ ಮೊದಲು ನಡೆಯೋದೇ ಆ ಟೆಸ್ಟ್‌ ! ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?

Karnataka Weather
ಮಳೆ2 hours ago

Karnataka Weather : ರಾಜ್ಯದಲ್ಲಿಂದು ಭಾರಿ ಮಳೆಗೆ ಗುಡುಗು, ಮಿಂಚು ಸಾಥ್‌

Prajwal Revanna Case
ಕರ್ನಾಟಕ2 hours ago

Prajwal Revanna Case: ಮೇ 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

ICMR Guidelines
ಆರೋಗ್ಯ2 hours ago

ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

Prajwal revanna Case
ಪ್ರಮುಖ ಸುದ್ದಿ3 hours ago

Prajwal Revanna Case : ಪೆನ್​ಡ್ರೈವ್ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವುದರಿಂದ ಹಿಡಿದು ಪ್ರಜ್ವಲ್ ಬಂಧನದವರೆಗೆ; ಪ್ರಕರಣದ ಟೈಮ್​ಲೈನ್​ ಇಲ್ಲಿದೆ

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು; ಪ್ರೇಮಿಗಳಿಗೆ ಶುಭ ಸೂಚನೆ

Prajwal Revanna Case
ಕರ್ನಾಟಕ7 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೊನೆಗೂ ಬಂಧನ; ಮುಂದೇನಾಗುತ್ತದೆ? ಏನಿದೆ ಪ್ರಕ್ರಿಯೆ?

Prajwal Revanna Case
ಪ್ರಮುಖ ಸುದ್ದಿ7 hours ago

Prajwal Revanna Case: ಪ್ರಜ್ವಲ್ ರೇವಣ್ಣ ಬಂಧನ ಆಗಿದ್ದು ಹೇಗೆ? ಏರ್​ಪೋರ್ಟ್​​ನಲ್ಲಿ ನಡೆದ ಪ್ರಕ್ರಿಯೆಗಳೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ19 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌