Pakistan Earthquake: ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ; 11 ಮಂದಿ ಸಾವು - Vistara News

ವಿದೇಶ

Pakistan Earthquake: ಪಾಕಿಸ್ತಾನ-ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ; 11 ಮಂದಿ ಸಾವು

ಭೂಕಂಪನದ ಕೇಂದ್ರವಾದ ಜರ್ಮ್​​ನಿಂದ 40 ಕಿಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಹಿಂದು ಕುಶ್​ ಪ್ರಾಂತ್ಯದಲ್ಲಿ ಭೂಕಂಪ ತೀವ್ರವಾಗಿ ಪರಿಣಾಮ ಬೀರಿದ್ದರೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹಾನಿಯಾಗಿದೆ.

VISTARANEWS.COM


on

Pakistan Afghanistan Earthquake 11 Died
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಮಂಗಳವಾರ ತೀವ್ರ ಭೂಕಂಪ (Pakistan Earthquake) ಉಂಟಾಗಿದ್ದು, ಎರಡೂ ದೇಶಗಳಿಂದ ಸೇರಿ ಸುಮಾರು 11 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಫ್ಘಾನಿಸ್ತಾನದ ಜರ್ಮ್​​ ಎಂಬಲ್ಲಿ, ಭೂ ಮೇಲ್ಮೈನಿಂದ ಸುಮಾರು 180 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.6ರಷ್ಟು ದಾಖಲಾಗಿದೆ ಎಂದು ಯುಎಸ್​ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಹಾಗೇ, ಭೂಕಂಪನದ ಕೇಂದ್ರವಾದ ಜರ್ಮ್​​ನಿಂದ 40 ಕಿಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಹಿಂದು ಕುಶ್​ ಪ್ರಾಂತ್ಯದಲ್ಲಿ ಭೂಕಂಪ ತೀವ್ರವಾಗಿ ಪರಿಣಾಮ ಬೀರಿದ್ದರೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹಾನಿಯಾಗಿದೆ.

ಭೂಕಂಪನವಾಗುತ್ತಿದ್ದಂತೆ ಜನರೆಲ್ಲ ಗಾಬರಿಯಾಗಿದ್ದರು. ಕೆಲವು ಸಣ್ಣಪುಟ್ಟ ಮನೆಗಳು, ಕಟ್ಟಡಗಳು ಉರುಳಿಬಿದ್ದಿದ್ದಾಗಿ ವರದಿಯಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿ 11 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದ್ದು, ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿ 100 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಭೂಕಂಪನವಾದ ಸ್ಥಳ ತಜಿಕಿಸ್ಥಾನಕ್ಕೂ ಗಡಿ ಪ್ರದೇಶವಾಗಿದ್ದು ಅಲ್ಲಿಯೂ ಗುಡ್ಡಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಹಾಗೇ, ಪಾಕಿಸ್ತಾನ ಇಸ್ಲಮಾಬಾದ್​ನಲ್ಲಿನ ಕೆಲವು ಅಪಾರ್ಟ್​ಮೆಂಟ್​ಗಳು ಬಿಟ್ಟಿದ್ದಾಗಿ ವರದಿಯಾಗಿದೆ. ಭೂಕಂಪದ ಬಗ್ಗೆ ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಪ್ರತಿಕ್ರಿಯೆ ನೀಡಿ, ‘ಯಾವುದೇ ರೀತಿಯ ಪರಿಸ್ಥಿತಿ ನಿಭಾಯಿಸಲು ಸಿದ್ಧರಿದ್ದೇವೆ. ವಿಪತ್ತು ನಿರ್ವಹಣಾ ಅಧಿಕಾರಿಗಳು ಅಲರ್ಟ್​ ಆಗಿರುವಂತೆ ಹೇಳಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ: Earthquake: ದೆಹಲಿ, ಉತ್ತರ ಪ್ರದೇಶ, ಕಾಶ್ಮೀರ ಸೇರಿ ಹಲವೆಡೆ ಪ್ರಬಲ ಭೂಕಂಪ, ಆತಂಕದಲ್ಲಿ ಮನೆ ಬಿಟ್ಟು ಓಡಿದ ಜನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Cattle Smuggling: ಗಡಿಯಲ್ಲಿ ಬಿಎಸ್‌ಎಫ್‌ ಮಹಿಳಾ ಪೇದೆ ಶೌರ್ಯ; ಗೋವುಗಳ ಸಾಗಣೆ ತಡೆದ ದಿಟ್ಟೆ

Cattle Smuggling: ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಅಕ್ರಮ ಸಾಗಣೆಯನ್ನು ಮಹಿಳಾ ಪೇದೆಯು ತಡೆದಿದ್ದಾರೆ. ಮಾಲ್ಡಾ ಜಿಲ್ಲೆಯ ಕೇದಾರಿಪರ ಬಳಿಯ ಗಡಿಯಲ್ಲಿ ಸುಮಾರು ಆರೇಳು ಅಕ್ರಮ ಸಾಗಣೆದಾರರನ್ನು ಬಿಎಸ್‌ಎಫ್‌ ಮಹಿಳಾ ಪೇದೆಯು ತಡೆದಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಮಹಿಳಾ ಪೇದೆಯು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Cattle Smuggling
Koo

ಕೋಲ್ಕೊತಾ: ಭಾರತದ ಗಡಿಯಲ್ಲಿ ಪುರುಷರು ಮಾತ್ರವಲ್ಲ ಮಹಿಳಾ ಯೋಧರು ಕೂಡ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆ. ಉಗ್ರರು, ಅಕ್ರಮ ಒಳನುಸುಳುಕೋರರನ್ನು ನಿಗ್ರಹಿಸುವ ಜತೆಗೆ ಗಡಿಯಲ್ಲಿ ಅಕ್ರಮ ಚಟುವಟಿಕೆಗಳನ್ನೂ ದಕ್ಷತೆಯಿಂದ ತಡೆಯುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್‌ ಮಹಿಳಾ ಪೇದೆಯೊಬ್ಬರು (BSF Woman Constable) ಚಾಣಾಕ್ಷತನದಿಂದ ಗೋವುಗಳ ಅಕ್ರಮ ಸಾಗಣೆಯನ್ನು (Cattle Smuggling) ತಡೆಯುವ ಮೂಲಕ ಶೌರ್ಯ ಮೆರೆದಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಅಕ್ರಮ ಸಾಗಣೆಯನ್ನು ಮಹಿಳಾ ಪೇದೆಯು ತಡೆದಿದ್ದಾರೆ. ಮಾಲ್ಡಾ ಜಿಲ್ಲೆಯ ಕೇದಾರಿಪರ ಬಳಿಯ ಗಡಿಯಲ್ಲಿ ಸುಮಾರು ಆರೇಳು ಅಕ್ರಮ ಸಾಗಣೆದಾರರನ್ನು ಬಿಎಸ್‌ಎಫ್‌ ಮಹಿಳಾ ಪೇದೆಯು ತಡೆದಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಮಹಿಳಾ ಪೇದೆಯು ಕಾರ್ಯಾಚರಣೆ ಕೈಗೊಳ್ಳುವ ಜತೆಗೆ ಅಪಾಯದ ಮುನ್ನೆಚ್ಚರಿಕೆ ಅರಿತು ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್‌ಎಫ್‌ ಮಹಿಳಾ ಪೇದೆಯು ಗೋವುಗಳ ಸಾಗಣೆದಾರರನ್ನು ತಡೆದ ಬಳಿಕ ದುಷ್ಕರ್ಮಿಗಳು ಮಹಿಳಾ ಪೇದೆ ಮೇಲೆ ದಾಳಿ ಆರಂಭಿಸಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆಗಲೂ ಜಗ್ಗದ ಪೇದೆಯು ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಬೆಚ್ಚಿದ ದುಷ್ಕರ್ಮಿಗಲೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗೋವುಗಳನ್ನು ಅಲ್ಲಿಯೇ ಬಿಟ್ಟು ಅವರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಾದ ಬಳಿಕ ಬಿಎಸ್‌ಎಫ್‌ ಯೋಧರ ತಂಡವು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಕತ್ತಲಿದ್ದ ಕಾರಣ ಸ್ವಯಂ ರಕ್ಷಣೆಗಾಗಿ ಮಹಿಳಾ ಪೇದೆಯು ಗುಂಡಿನ ದಾಳಿ ನಡೆಸಿದ್ದಾರೆ. ಕತ್ತಲಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಬಿಎಸ್‌ಎಫ್‌ ಯೋಧರು ಆರು ಎಮ್ಮೆಗಳು ಹಾಗೂ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Continue Reading

ವಿದೇಶ

Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

Sunita Williams: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ತಾಂತ್ರಿಕ ದೋಷದಿಂದ ಅವರು ಬಾಹ್ಯಾಕಾಶದಲ್ಲಿಯೇ ಉಳಿದಿದ್ದು, 2025ರ ಫೆಬ್ರವರಿವರೆಗೂ ಅವರು ಅಲ್ಲಿಯೇ ಇರಲಿದ್ದಾರೆ ಎಂಬುದಾಗಿ ನಾಸಾ ಮಾಹಿತಿ ನೀಡಿದೆ.

VISTARANEWS.COM


on

Sunita Williams
Koo

ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ಅವರು ಬಾಹ್ಯಾಕಾಶದಲ್ಲಿಯೇ ಸಿಲುಕಿದ್ದು, ಇವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ತಿಳಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ ಸುನೀತಾ ವಿಲಿಯಮ್ಸ್‌ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್‌ ಸ್ಟಾರ್‌ಲೈನರ್‌ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ” ಎಂಬುದಾಗಿ ನಾಸಾ ತಿಳಿಸಿದೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಇದನ್ನೂ ಓದಿ: 2025ರ ವೇಳೆಗೆ ಬಾಹ್ಯಾಕಾಶ, ಸಮುದ್ರದ ಆಳಕ್ಕೆ ಮಾನವ ಸಹಿತ ಮಿಷನ್;‌ ಕೇಂದ್ರ ಸಚಿವ ಮಹತ್ವದ ಘೋಷಣೆ

Continue Reading

Latest

Divorce Case: ಪ್ರತಿ ಬಾರಿ ʼಸರಸʼ ಆಡಿದಾಗಲೂ ಕಾಸು ಕೊಡಲೇಬೇಕು! ಹೆಂಡತಿಯ ಡಿಮ್ಯಾಂಡ್‌ ಕೇಳಿ ಡಿವೋರ್ಸ್‌ ಪಡೆದ ಗಂಡ!

Divorce Case: ತೈವಾನ್‌ನಲ್ಲಿ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬರುವ ತನ್ನ ಪತಿಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆಕೆ ಪ್ರತಿಬಾರಿ ಇದೇ ರೀತಿ ಮಾಡುತ್ತಿದ್ದರಿಂದ ನೊಂದ ಪತಿ ಆಕೆಗೆ ವಿಚ್ಛೇದನ ನೀಡಿದ್ದಾನೆ. ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗ ಪತ್ನಿ 1,260 ರೂ. ನೀಡುವಂತೆ ಬೇಡಿಕೆ ಇಡುತ್ತಿದ್ದಳು. ಅಲ್ಲದೇ ಪತ್ನಿ ತನ್ನ ಸಂಬಂಧಿಕರ ಬಳಿ “”ನನ್ನ ಪತಿ ತುಂಬಾ ದಪ್ಪ ಇದ್ದಾನೆ. ಹಾಗಾಗಿ ಆತ ಲೈಂಗಿಕ ತೃಪ್ತಿ ನೀಡಲು ಅಸಮರ್ಥನಾಗಿದ್ದಾನೆʼʼ ಎಂದು ಹೇಳುವ ಮೂಲಕ ಅವನನ್ನು ಅವಮಾನಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಗಂಡನ ಕತೆ ಇಲ್ಲಿದೆ.

VISTARANEWS.COM


on

Divorce Case
Koo


ದಂಪತಿ ನಡುವೆ ಪ್ರೀತಿ, ಪ್ರಣಯ ಇರುವುದು ಸಹಜ. ಆದರೆ ಲೈಂಗಿಕ ಸುಖ ನೀಡಲು ಹೆಂಡತಿ ಯಾವತ್ತಾದರೂ ಗಂಡನಲ್ಲಿ ಹಣ ಕೇಳುತ್ತಾಳೆಯೇ? ಹಾಗೇ ಮಾಡಿದರೆ ಪತ್ನಿಗೂ ಲೈಂಗಿಕ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬರುವ ತನ್ನ ಪತಿಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆಕೆ ಪ್ರತಿಬಾರಿ ಇದೇ ರೀತಿ ಮಾಡುತ್ತಿದ್ದರಿಂದ ನೊಂದ ಪತಿ ಆಕೆಗೆ ವಿಚ್ಛೇದನ (Divorce Case) ನೀಡಿದ ಘಟನೆ ತೈವಾನ್‍ನಲ್ಲಿ ನಡೆದಿದೆ.

2014ರಲ್ಲಿ ವಿವಾಹವಾದ ಈ ದಂಪತಿಯ ನಡುವೆ ಆರಂಭದಲ್ಲಿ ಸಾಮರಸ್ಯದ ಸಂಬಂಧವಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, 2017ರಲ್ಲಿ ಪತ್ನಿ ತಿಂಗಳಿಗೊಮ್ಮೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದಾಗ ಅವರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯಿತು. ಅಲ್ಲದೇ ಪತ್ನಿ ತನ್ನ ಸಂಬಂಧಿಕರ ಬಳಿ ತನ್ನ ಪತಿ ತುಂಬಾ ದಪ್ಪ ಇದ್ದಾನೆ. ಹಾಗಾಗಿ ಆತ ಲೈಂಗಿಕ ತೃಪ್ತಿ ನೀಡಲು ಅಸಮರ್ಥನಾಗಿದ್ದಾನೆ ಎಂದು ಹೇಳುವ ಮೂಲಕ ಅವನನ್ನು ಅವಮಾನಿಸುತ್ತಿದ್ದಳು. ಈ ವಿಚಾರ ತಿಳಿದ ಪತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿ 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಪತ್ನಿ ತನ್ನ ತಪ್ಪನ್ನು ಒಪ್ಪಿಕೊಂಡು ಸುಧಾರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾಳೆ. ಆಗ ಕೇಸ್ ವಾಪಸ್ ಪಡೆಯುವಂತೆ ಮನವೊಲಿಸಿದ್ದಾಳೆ.

ಅವಳ ಭರವಸೆಗಳನ್ನು ನಂಬಿ, ನಂತರ ಪತಿ ತಮ್ಮ ಆಸ್ತಿಯನ್ನು ಅವಳ ಹೆಸರಿಗೆ ನೋಂದಾಯಿಸಿದ್ದಾನೆ. ಇಷ್ಟಾದರೂ ಆಕೆ ಅವನನ್ನು ಭಾವನಾತ್ಮಕವಾಗಿ ನಿಂದನೆ ಮಾಡುವುದನ್ನು ಮುಂದುವರಿಸಿದ್ದಾಳೆ. ಅಲ್ಲದೇ ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗ ಪತ್ನಿ ಹಣ (ಭಾರತೀಯ ಮೌಲ್ಯದಲ್ಲಿ 1,260 ರೂ.) ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಹಾಗಾಗಿ ಈ ವರ್ಷ ಆತ ಮತ್ತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸರಿಪಡಿಸಲು ಸಾಧ್ಯವಿಲ್ಲ ಎಂದು ಅರಿತ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿದೆ. ಆದರೆ ಹೈಕೋರ್ಟ್‌ಗೆ ಪತ್ನಿ ಮನವಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅದನ್ನು ತಿರಸ್ಕರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಇಂಥ ಪ್ರಕರಣವು ತೈವಾನ್‍ನಲ್ಲಿ ಇದೇ ಮೊದಲಲ್ಲ. ಈ ಹಿಂದೆ ಇದೇ ರೀತಿಯ ಘಟನೆ ದಾಖಲಾಗಿದೆ. 2014ರಲ್ಲಿ ಇನ್ನೊಬ್ಬ ತೈವಾನ್ ಮಹಿಳೆ ತನ್ನ ಪತಿಗೆ ಲೈಂಗಿಕತೆಗಾಗಿ ಮತ್ತು ಊಟಕ್ಕಾಗಿ 5,000 ರೂ. ಶುಲ್ಕ ವಿಧಿಸಿದ್ದಳು. ಈ ವಿವಾದವು ಪೊಲೀಸ್ ಠಾಣೆಯಲ್ಲಿ ಇತ್ಯರ್ಥವಾಗಿತ್ತು. ಅಲ್ಲಿ ಪತಿ ತನ್ನ ಕುಟುಂಬಕ್ಕೆ ತಿಂಗಳಿಗೆ 50,000 ರೂ. ನೀಡಲು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತೈವಾನ್‍ನಲ್ಲಿ ವಿಚ್ಛೇದನ ಪ್ರಮಾಣವು ಕಳೆದ ವರ್ಷ ಶೇಕಡಾ 0.218 ರಷ್ಟಿತ್ತು ಎನ್ನಲಾಗಿದೆ.

Continue Reading

ವಿದೇಶ

Bangladesh Unrest: ದೇವರ ಮೂರ್ತಿಗಳು ಪುಡಿ ಪುಡಿ; ಹಿಂದೂಗಳ ರಕ್ಷಣೆಗೆ ಸೇನೆ, ಪೊಲೀಸರೇ ಹಿಂದೇಟು

Bangladesh Unrest: ಸೇನೆಯಿಂದ ಭರವಸೆ ನೀಡಿದರೂ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸುವ ಪ್ರಯತ್ನ ನಡೆದಿಲ್ಲ. ವಾಸ್ತವವಾಗಿ, ಸೇನೆ ಮತ್ತು ಪೊಲೀಸರು ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Bangladesh Unrest
Koo

ಢಾಕಾ: ದಂಗೆ ಪೀಡಿತ ಬಾಂಗ್ಲಾದೇಶ(Bangladesh Unrest)ದಲ್ಲಿ ಹಿಂದೂಗಳ ಮೇಲೆ ದಾಳಿಗಳು(Attack on Hindus) ಹೆಚ್ಚುತ್ತಿದ್ದು, ಪರಿಸ್ಥಿತಿಗೆ ಸ್ಪಂದಿಸಲು ಪೊಲೀಸರು ಮತ್ತು ಸೇನೆ ನಿರಾಕರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಶಿಲ್ಪಗಳು, ವಿಗ್ರಹಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ. ಸೇನೆಯಿಂದ ಭರವಸೆ ನೀಡಿದರೂ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸುವ ಪ್ರಯತ್ನ ನಡೆದಿಲ್ಲ. ವಾಸ್ತವವಾಗಿ, ಸೇನೆ ಮತ್ತು ಪೊಲೀಸರು ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಲೂಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಹಿಂದೂ ಕುಟುಂಬಗಳ ಮೇಲೆ ಹಲ್ಲೆ, ಥಳಿಸಲಾಗುತ್ತಿದೆ. ಒಬ್ಬ ಹಿಂದೂ ಪ್ರಾಧ್ಯಾಪಕನನ್ನು ಬಡಿಗೆಯಿಂದ ಬರ್ಬರವಾಗಿ ಕೊಲ್ಲಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ ಮತ್ತು ಈಗಲೂ ಹಿಂದೂ ಸಂಘಟನೆಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿವೆ. ಈ ದಾಳಿಗಳು ಮೂಲಭೂತವಾದಿಗಳಿಂದ ಅಲ್ಲ, ಆದರೆ ಪ್ರತಿಭಟನೆಯು ಭಯೋತ್ಪಾದಕ ಚಳುವಳಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ನಾಯಕತ್ವವು ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಏಕೆಂದರೆ ಇದು ಹಲವು ವರ್ಷಗಳಿಂದ ನಡೆಯುತ್ತಿದೆ. 2013 ರಿಂದ ಹಿಂದೂಗಳ ಮೇಲೆ 4,000 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಸೌದಿ ಅರೇಬಿಯಾದಿಂದ ಹಣ ಮತ್ತು ಗಲ್ಫ್‌ ರಾಷ್ಟ್ರಗಳಿಂದ ಅಪಾರ ಹಣ ಪೂರೈಸುವ ಮೂಲಕ ಇಸ್ಲಾಮಿಸ್ಟ್ ಗುಂಪುಗಳಿಗೆ ಉತ್ತೇಜನ ನೀಡುತ್ತಿದೆ. ಇನ್ನು ಇಸ್ಲಾಮಿಸ್ಟ್‌ಗಳಿಗೆ ಸೇನೆ ಮತ್ತು ಪೊಲೀಸರು ಕೂಡ ಬೆಂಬಲ ಕೊಟ್ಟಿರುವುದು ಎಲ್ಲರುನ್ನು ಚಿಂತೆಗೀಡು ಮಾಡಿದೆ.

ಹಿಂದೂಗಳ ಮೇಲಿನ ದಾಳಿಗಳು ಭಾರತ ಸರ್ಕಾರದ ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಮತ್ತು ಢಾಕಾದ ಹಿಂದೂ ಅಲ್ಪಸಂಖ್ಯಾತ ಗುಂಪುಗಳ ಕಾರ್ಯಕರ್ತರು ಸುಮಾರು 97 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆ(Bangladesh Unrest) ಯಲ್ಲಿ ಅಲ್ಪಸಂಖ್ಯಾತ ಹಿಂದೂ ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಕಂಡ ಕಂಡಲ್ಲಿ ಹಿಂದೂಗಳನ್ನು, ಅವರಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕ(Bangladesh Singer)ನ ಮನೆಗೆ ಪ್ರತಿಭಟನಾಕಾರರು(Protester) ಬೆಂಕಿ ಹಚ್ಚಿದ್ದಾರೆ.

ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್(Rahul Anand) ಅವರ ಧಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಗಾಯಕನ ಆಪ್ತ ಕುಟುಂಬಸ್ಥರು ಬಾಂಗ್ಲಾದೇಶದ ಪತ್ರಿಕೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಪ್ರತಿಭಟನಾಕಾರರು ಗೇಟ್ ಮುರಿದು ನಂತರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಲಾರಂಭಿಸಿದ್ದರು.

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್‌ ಹಸೀನಾ(Sheikh Hasina) ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದೂಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ಇದನ್ನೂ ಓದಿ:Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Continue Reading
Advertisement
karnataka Weather Forecast
ಮಳೆ1 min ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Manu Bhaker
ಕ್ರೀಡೆ2 mins ago

Manu Bhaker : ಮನು ಭಾಕರ್​ಗೆ ಕ್ರೀಡಾ ಇಲಾಖೆಯಿಂದ ವಿಶೇಷ ಸನ್ಮಾನ; 30 ಲಕ್ಷ ರೂಪಾಯಿ ವಿತರಣೆ

Lalbagh Flower Show
ಬೆಂಗಳೂರು3 mins ago

Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

Cattle Smuggling
ದೇಶ16 mins ago

Cattle Smuggling: ಗಡಿಯಲ್ಲಿ ಬಿಎಸ್‌ಎಫ್‌ ಮಹಿಳಾ ಪೇದೆ ಶೌರ್ಯ; ಗೋವುಗಳ ಸಾಗಣೆ ತಡೆದ ದಿಟ್ಟೆ

Paris Olympics 2024
ಪ್ರಮುಖ ಸುದ್ದಿ49 mins ago

Paris Olympics 2024 : ರೇಸಿಂಗ್​ ಟ್ರ್ಯಾಕ್​ ಬಳಿಯೇ ಯುವಕನೊಬ್ಬನಿಗೆ ಪ್ರಪೋಸ್ ಮಾಡಿದ ಫ್ರಾನ್ಸ್​ನ ಮಹಿಳಾ ಅಥ್ಲೀಟ್​, ವಿಡಿಯೊ ಇದೆ

Naga Chaitanya deleated ex samantha
ಸಿನಿಮಾ51 mins ago

Naga Chaitanya: ನಿಶ್ಚಿತಾರ್ಥದ ಮೊದಲು ಮಾಜಿ ಪತ್ನಿಯ ಪೋಟೊ ಡಿಲಿಟ್‌ ಮಾಡಿದ ನಾಗ ಚೈತನ್ಯ!

Road Accident
ಉಡುಪಿ1 hour ago

Road Accident : ಚಲಿಸುತ್ತಿದ್ದ ಸ್ಕೂಟರ್‌ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ; ಸವಾರನ ಕುತ್ತಿಗೆಗೆ ತಂತಿ ಸಿಲುಕಿ ಗಂಭೀರ

Aman Sehrawat
ಕ್ರೀಡೆ1 hour ago

Aman Sehrawat: ಕುಸ್ತಿಯಲ್ಲಿ ಪದಕ ಭರವಸೆ ಮೂಡಿಸಿದ ಅಮನ್ ಸೆಹ್ರಾವತ್; ಸೆಮಿಗೆ ಲಗ್ಗೆ

Sunita Williams
ವಿದೇಶ1 hour ago

Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

Neeraj Chopra
ಕ್ರೀಡೆ1 hour ago

Neeraj Chopra : ನೀರಜ್​ ಚೋಪ್ರಾನನ್ನ ಅರ್ಷದ್​ ನದೀಮ್ ಸೋಲಿಸಿ ಬಂಗಾರ ಗೆಲ್ತಾರೆ; ಪಾಕ್​ನ ಕ್ರಿಕೆಟಿಗರ ಶುಭಾಶಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 min ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌