Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌ - Vistara News

ದೇಶ

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Donald Trump Gifts: ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಟ್ರಂಪ್‌ ಸೇರಿ ಅವರ ಕುಟುಂಬಸ್ಥರು ವಿವಿಧ ದೇಶಗಳ ನಾಯಕರಿಂದ ಪಡೆದ ಉಡುಗೊರೆಗಳ ಕುರಿತು ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ.

VISTARANEWS.COM


on

Donald Trump failed to disclose 17 gifts from India, including Narendra Modi Gift
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಜಾಗತಿಕ ನಾಯಕರು ಅಧಿಕಾರದಲ್ಲಿದ್ದಾಗ ಬೇರೆ ದೇಶಗಳ ನಾಯಕರಿಂದ ಪಡೆದ ಉಡುಗೊರೆಗಳೇ ಅವರಿಗೆ ಸಮಸ್ಯೆಯುಂಟು ಮಾಡುತ್ತಿವೆ ಅಥವಾ ಅವರೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ವಿದೇಶಿ ನಾಯಕರಿಂದ ಸಿಕ್ಕ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಿಕೊಂಡ ಆರೋಪದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತೋಷಖಾನಾ (ಖಜಾನೆ) ಪ್ರಕರಣದಲ್ಲಿ ಜೈಲು ಸೇರುವುದು ಒಂದೇ ಬಾಕಿ ಇದೆ. ಈಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump Gifts) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಜಗತ್ತಿನ ಹಲವು ನಾಯಕರಿಂದ ಪಡೆದ ಉಡುಗೊರೆಗಳ ಮಾಹಿತಿಯನ್ನು ಬಹಿರಂಗಪಡಿಸದೆ ವಿವಾದಕ್ಕೆ ಸಿಲುಕಿದ್ದಾರೆ.

ನರೇಂದ್ರ ಮೋದಿ ಸೇರಿ ಭಾರತದ ಹಲವು ನಾಯಕರು ನೀಡಿದ ಉಡುಗೊರೆಗಳನ್ನು ಒಳಗೊಂಡು ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ನೀಡಿದ 2.06 ಕೋಟಿ ರೂ. ಮೌಲ್ಯದ (2.5 ಲಕ್ಷ ಡಾಲರ್)‌ 117 ಉಡುಗೊರೆಗಳ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಕುಟುಂಬಸ್ಥರು ವಿಫಲರಾಗಿದ್ದಾರೆ ಎಂದು ಆಡಳಿತ ಪಕ್ಷವಾದ ಡೆಮಾಕ್ರಟಿಕ್‌ನ ಸಮಿತಿ ನೀಡಿದ ವರದಿ ಬಹಿರಂಗಪಡಿಸಿದೆ.

ಭಾರತದ ನಾಯಕರು ಕೊಟ್ಟ ಉಡುಗೊರೆ ಯಾವವು?

ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದಾಗ ನರೇಂದ್ರ ಮೋದಿ ಅವರು 1.57 ಲಕ್ಷ ರೂ. ಮೌಲ್ಯದ ಕಫ್‌ಲಿಂಕ್‌ಗಳನ್ನು ನೀಡಿದ್ದರು. ಹಾಗೆಯೇ, ಆಗ ರಾಷ್ಟ್ರಪತಿ ಆಗಿದ್ದ ರಾಮನಾಥ್‌ ಕೋವಿಂದ್‌ ಅವರು ಅವರು 3.8 ಲಕ್ಷ ರೂ. ಮೌಲ್ಯದ ತಾಜ್‌ಮಹಲ್‌ ಕಲಾಕೃತಿ ನೀಡಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 7 ಲಕ್ಷ ರೂ. ಮೌಲ್ಯದ ಮಕ್ರಾನ ಮಾರ್ಬಲ್‌ಅನ್ನು ಉಡುಗೊರೆ ನೀಡಿದರು. ಮೋದಿ ಅವರು ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರಿಗೂ ಬ್ರೇಸ್‌ಲೆಟ್‌ ಉಡುಗೊರೆ ನೀಡಿದ್ದರು. ಹೀಗೆ, ಭಾರತದ ನಾಯಕರು ನೀಡಿದ ಸುಮಾರು 41 ಲಕ್ಷ ರೂ. ಮೌಲ್ಯದ 17 ಉಡುಗೊರೆಗಳ ಮಾಹಿತಿಯನ್ನು ಟ್ರಂಪ್‌ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.

ಭಾರತ ಮಾತ್ರವಲ್ಲ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಕುಟುಂಬಸ್ಥರು ಜಪಾನ್‌, ಸೌದಿ ಅರೇಬಿಯಾ ಸೇರಿ ಹಲವು ರಾಷ್ಟ್ರಗಳಿಂದ ಪಡೆದ ಉಡುಗೊರೆಗಳ ಕುರಿತು ಮಾಹಿತಿ ನೀಡಿಲ್ಲ. ಇವುಗಳಲ್ಲಿ ಕೆಲವು ಉಡುಗೊರೆಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಯಾವುದೇ ಜಾಗತಿಕ ನಾಯಕರು ಉಡುಗೊರೆಗಳನ್ನು ಪಡೆದರೆ, ಅವುಗಳನ್ನು ದೇಶದ ಮ್ಯೂಸಿಯಂ ಅಥವಾ ಖಜಾನೆಗಳಿಗೆ ನೀಡುತ್ತಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ನೀಡಲಾದ ಉಡುಗೊರೆಗಳನ್ನು ಹರಾಜು ಹಾಕಿ, ಅದರ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ್ದಾರೆ.

ಇದನ್ನೂ ಓದಿ: Donald Trump: ಮಾರ್ಚ್‌ 21ರಂದು ನನ್ನ ಬಂಧನ ಎಂದ ಡೊನಾಲ್ಡ್‌ ಟ್ರಂಪ್‌, ಪ್ರತಿಭಟನೆಗೆ ಕರೆ; ಏನಿದು ಕೇಸ್?‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

Innova Hycross: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಅನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ GX (O) ಗ್ರೇಡ್ 10 ಕ್ಕೂ ಹೆಚ್ಚು ಅಡ್ವಾನ್ಸ್ ಟೆಕ್ನಾಲಜಿ ಮತ್ತು ಕಂಫರ್ಟ್ ಫೀಚರ್‌ಗಳನ್ನು ಹೊಂದಿರುವ ವಾಹನ ಇದಾಗಿದೆ.

VISTARANEWS.COM


on

Toyota Kirloskar Motor Launches New Innova Hicross Petrol GX (O) Grade
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅನುಗುಣವಾಗಿ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ಹೊಸ ಇನ್ನೋವಾ ಹೈಕ್ರಾಸ್ GX (O) ಗ್ರೇಡ್ ಅನ್ನು ಪೆಟ್ರೋಲ್ ರೂಪಾಂತರದಲ್ಲಿ ಪರಿಚಯಿಸುವುದಾಗಿ (Innova Hycross) ಘೋಷಿಸಿದೆ.

ಇನ್ನೋವಾ ಹೈಕ್ರಾಸ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿರುವ GX (O) ಗ್ರೇಡ್ 10 ಕ್ಕೂ ಹೆಚ್ಚು ಸುಧಾರಿತ ಆರಾಮದಾಯಕ ಮತ್ತು ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಜಿಎಕ್ಸ್ (ಒ) ಹೆಚ್ಚಿನ ಅಗತ್ಯತೆಗಳನ್ನು ಬಯಸುವ ಗ್ರಾಹಕರಿಗೆ ಮೌಲ್ಯಾಧಾರಿತವಾಗಿದೆ.

ಇದನ್ನೂ ಓದಿ: NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

ವಿಶೇಷತೆಗಳೇನು?

ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್ಸ್ , ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ರಿಯರ್ ಡೀಫಾಗರ್ ಫೀಚರ್‌ಗಳನ್ನು ಇದು ಒಳಗೊಂಡಿದೆ. ಸುಪೀರಿಯರ್ ಕಂಫರ್ಟ್ – ಚೆಸ್ಟ್ ನಟ್ ಥೀಮ್ ಇಂಟೀರಿಯರ್, ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನಲ್, ಮಿಡ್-ಗ್ರೇಡ್ ಫ್ಯಾಬ್ರಿಲ್ ಸೀಟ್ಸ್, ರಿಯರ್ ಸನ್ ಶೇಡ್ ವೈಶಿಷ್ಟ್ಯವನ್ನು ಹೊಂದಿದ್ದು, ಆಟೋ ಎಸಿ, 10.1″ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಪನೋರಮಿಕ್ ವ್ಯೂ ಮಾನಿಟರ್‌ಗಳನ್ನು ಒಳಗೊಂಡಿದೆ.

7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯ

7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ GX (O) ಗ್ರೇಡ್ 7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯವಿದೆ. ಬ್ಲ್ಯಾಕಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್ , ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಅವಂಟ್ ಗ್ರೇಡ್ ಬ್ರೋನ್ಜ್ ಮೆಟಾಲಿಕ್ ಕಲರ್ ಗಳಲ್ಲಿ ದೊರೆಯಲಿದೆ.

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ನಿರಂತರವಾಗಿ ಮಾರುಕಟ್ಟೆಯ ಅಗತ್ಯಗಳನ್ನು ಆಲಿಸುತ್ತೇವೆ. ಇದರಿಂದಾಗಿ ನಾವು ನೀಡುವ ಪ್ರತಿಯೊಂದು ವಾಹನವು ನಮ್ಮ ಗ್ರಾಹಕರ ವಿಕಸನಗೊಳ್ಳುವ ಅಗತ್ಯಗಳಿಗೆ ಹೊಂದಿಕೆಯಾಗುತ್ತದೆ. ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಈ ತತ್ವಕ್ಕೆ ನಿದರ್ಶನವಾಗಿದೆ.

ಇದನ್ನೂ ಓದಿ: Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

ಇದು ಹೆಚ್ಚಿನ ಆರಾಮದಾಯಕ ಮತ್ತು ಸುಧಾರಿತ ತಂತ್ರಜ್ಞಾನವನ್ನು ಐಷಾರಾಮಿ ಮತ್ತು ದಕ್ಷತೆಯೊಂದಿಗೆ ಎಚ್ಚರಿಕೆಯಿಂದ ಬೆರೆಸುತ್ತದೆ. ಕಾರ್ಯಕ್ಷಮತೆಯು ಉನ್ನತ ದರ್ಜೆಯದ್ದಾಗಿದ್ದು, 10ಕ್ಕೂ ಹೆಚ್ಚು ವೈಶಿಷ್ಟ್ಯಗಳು ತಮ್ಮ ವಿಕಸನಗೊಳ್ಳುತ್ತಿರುವ ಲೈಫ್‌ಸ್ಟೈಲ್ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಆಕರ್ಷಕ ಪ್ರಸ್ತಾಪದೊಂದಿಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪೆಟ್ರೋಲ್ ಆವೃತ್ತಿಯನ್ನು ಹುಡುಕುತ್ತಿರುವ ಗ್ರಾಹಕರಿಂದ ಹೆಚ್ಚಿನ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಎಕ್ಸ್‌ ಶೋರೂಂ ಬೆಲೆಗಳ ವಿವರಗಳು

Variant Ex Showroom Price (W.E.F 15th Apr 2024) Hycross Petrol GX (O) – 8-Seater 20.99 ಲಕ್ಷ ರೂ, ಮತ್ತು Hycross Petrol GX (O) – 7-Seater 21.13 ಲಕ್ಷ ರೂಗಳು ಆಗಿದೆ.

ಹೆಚ್ಚಿನ ಕಾರ್ಯಕ್ಷಮತೆ

ಇನ್ನೋವಾ ಹೈಕ್ರಾಸ್ 2 ಲೀ ಟಿಎನ್‌ಜಿಎ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಲಾಂಚ್ ಗೇರ್ ಕಾರ್ಯ ವಿಧಾನದೊಂದಿಗೆ ಡೈರೆಕ್ಟ್ ಶಿಫ್ಟ್ ಸಿವಿಟಿ ಮತ್ತು ಸುಗಮ ಹಾಗೂ ಸ್ಪಂದಿಸುವ ವೇಗವರ್ಧನೆಗಾಗಿ 10 ಸ್ಪೀಡ್ ಸೀಕ್ವೆನ್ಸಿಯಲ್ ಶಿಫ್ಟ್ ಜತೆಗೆ 16.13 ಕಿ.ಮೀ ಬೆಸ್ಕ್ ಇನ್‌ಕ್ಲಾಸ್‌ ಫ್ಯೂಯಲ್ ಎಕಾನಮಿಯನ್ನು ಹೊಂದಿದೆ.

ಇದನ್ನೂ ಓದಿ: Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

ಟಫ್ ಎಕ್ಸ್‌ಟೀರಿಯರ್

ಹೊಸ ಗ್ರೇಡ್ ಬೋಲ್ಡ್ ಮತ್ತು ಮಸ್ಕ್ಯುಲಾರ್ ಎಸ್‌ಯುವಿ ತರಹದ ಎಕ್ಸ್‌ಟೀರಿಯರ್ ಅನ್ನು ಹೊಂದಿದೆ. 16-ಇಂಚಿನ ಸಿಲ್ವರ್ ಅಲಾಯ್ ವೀಲ್ಸ್, ಎಲ್ಇಡಿ ಸ್ಟಾಪ್ ಲ್ಯಾಂಪ್‌ನೊಂದಿಗೆ ರೂಫ್ ಎಂಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಸ್ಪಾಟ್ ಲ್ಯಾಂಪ್ ಜತೆಗೆ ರೂಫ್ ಎಂಡ್ ಸ್ಪಾಯ್ಲರ್, ಆಟೋ ಫೋಲ್ಡ್ ಓಆರ್‌ವಿಎಂ, ಎಲೆಕ್ಟ್ರಿಕ್ ಅಡ್ಜಸ್ಟ್ ಮತ್ತು ಟರ್ನ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಹೊಂದಿದೆ.

ಐಷಾರಾಮಿ ಮತ್ತು ಆರಾಮದಾಯಕ ಇಂಟೀರಿಯರ್

ಇನ್ನೋವಾ ಹೈಕ್ರಾಸ್ GX (O) ಸುಧಾರಿತ ಕ್ಯಾಬಿನ್ ಸೌಂದರ್ಯವನ್ನು ಹೊಂದಿದೆ. ಡಾರ್ಕ್ ಚೆಸ್ಟ್ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳೊಂದಿಗೆ ಸಾಫ್ಟ್‌ ಟಚ್ ಲೆದರ್ ಮತ್ತು ಮೆಟಾಲಿಕ್ ಡೆಕೋರೇಟೆಡ್ ಲೈನಿಂಗ್ ಅನ್ನು ಒಳಗೊಂಡಿದೆ.

ಕಾಕ್‌ ಪಿಟ್ ಅನ್ನು ಸಮತಲ ಟೋನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಿದೆ. ಶಕ್ತಿಯುತ ಎಕ್ಸ್‌ಟೀರಿಯರ್ ಅನ್ನು ಪ್ರತಿಬಿಂಬಿಸಲು ಸೆಂಟ್ರಲ್ ಕ್ಲಸ್ಟರ್ ಮತ್ತು ಡೋರ್ ಡೆಕೋರ್‌ಗಾಗಿ ವರ್ಟಿಕಲ್ ಟೋನ್‌ಅನ್ನು ಬಳಸಲಾಗಿದೆ.

ಸುಧಾರಿತ ಸುರಕ್ಷತಾ ಕೊಡುಗೆ

ಇನ್ನೋವಾ ಹೈಕ್ರಾಸ್ ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್ 6 ಎಸ್‌ಆರ್‌ಎಸ್ ಏರ್ ಬ್ಯಾಗ್ ಮತ್ತು ಐಎಸ್ ಒಫಿಕ್ಸ್ ಆಂಕರ್‌ಗಳು ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಸಾಟಿಯಿಲ್ಲದ ಆರಾಮದೊಂದಿಗೆ ನೀಡುತ್ತಿದೆ. ವೈಯಕ್ತಿಕ ಐಷಾರಾಮಕ್ಕಾಗಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ, ಹೆಚ್ಚಿದ ಬೂಟ್ ಸ್ಪೇಸ್ ಗಾಗಿ 3ನೇ ಸಾಲಿನ ಫೋಲ್ಡ್-ಫ್ಲಾಟ್ ಸೀಟ್, ರೀಕ್ಲೈನ್ ಮೂರನೇ ಸಾಲಿನ ಸೀಟ್‌ಗಳು ಎಲ್ಲಾ ಪ್ರಯಾಣಿಕರಿಗೆ ಪ್ರತಿ ಪ್ರಯಾಣವು ಆನಂದದಾಯಕವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಮೌಲ್ಯವರ್ಧಿತ ಸೇವೆಗಳು

ಹೊಸ ಜಿಎಕ್ಸ್ (ಒ) ಗ್ರೇಡ್ ಐದು ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್ , ಮೂರು ವರ್ಷ ಅಥವಾ 1,00,000 ಕಿಲೋಮೀಟರ್ ಸ್ಟ್ಯಾಂಡರ್ಡ್ ವಾರಂಟಿ, ಪ್ರಮಾಣೀಕೃತ ವಿನಿಮಯ ಕಾರ್ಯಕ್ರಮದ ಜತೆಗೆ ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಸ್ತರಿತ ವಾರಂಟಿ ಕಾರ್ಯಕ್ರಮದಂತಹ ಮೌಲ್ಯವರ್ಧಿತ ಸೇವೆಗಳ ಈ ಶ್ರೇಣಿಯಲ್ಲಿ ದೊರೆಯಲಿವೆ.

Continue Reading

ಶಿಕ್ಷಣ

NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

NEET PG-2024: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಸ್ನಾತಕೋತ್ತರ ಅಥವಾ NEET PG-2024 ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಇಂದು ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭಿಸಲಿದ್ದು, ಅರ್ಜಿ ಸಲ್ಲಿಸಲು ಮೇ 6ರವರೆಗೆ ಅವಕಾಶವಿದೆ.

VISTARANEWS.COM


on

By

NEET PG-2024
Koo

ಹೊಸದಿಲ್ಲಿ: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (NBEMS) ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಸ್ನಾತಕೋತ್ತರ ಅಥವಾ ನೀಟ್ ಪಿಜಿ- 2024ಕ್ಕಾಗಿ (NEET PG-2024) ರಾಷ್ಟ್ರೀಯ ಅರ್ಹತೆ (National Eligibility) ಮತ್ತು ಪ್ರವೇಶ ಪರೀಕ್ಷೆಗಾಗಿ ( Entrance Test) ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ.

ಪರೀಕ್ಷೆ ಬರೆಯಲು ಅರ್ಹರಾಗಿರುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ natboard.edu.in ಮತ್ತು nbe.edu.inನಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಮೇ 6ರಂದು ರಾತ್ರಿ 11.55ರವರೆಗೆ ಅವಕಾಶವಿದೆ. ಕೊನೆಯ ಕ್ಷಣದವರೆಗೆ ಕಾಯುವ ಬದಲು ತಕ್ಷಣದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ಈ ಕುರಿತು ಎನ್‌ಬಿಇ ಮಾಹಿತಿ ಕರಪತ್ರವನ್ನೂ ಬಿಡುಗಡೆ ಮಾಡಿದ್ದು, ಅಧಿಕೃತ ವೇಳಾಪಟ್ಟಿಯ ಪ್ರಕಾರ NEET PG- 2024 ಪರೀಕ್ಷೆಯು ಜೂನ್ 23 ರಂದು ನಡೆಯಲಿದೆ ಮತ್ತು ಫಲಿತಾಂಶಗಳನ್ನು ಜುಲೈ 15 ರಂದು ಘೋಷಿಸಲಾಗುತ್ತದೆ. NEET PG- 2024 ಪರೀಕ್ಷೆಯ ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ಜೂನ್ 18ರಂದು ನೀಡಲಾಗುತ್ತದೆ.

ಇದನ್ನೂ ಓದಿ: New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

ಅರ್ಜಿ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳು ಕಟ್-ಆಫ್ ದಿನಾಂಕವನ್ನು ಗಮನಿಸಿ. NEET- PG 2024ರ ಅರ್ಹತೆ ಪಡೆಯಲು ಇಂಟರ್ನ್‌ಶಿಪ್ ಆಗಸ್ಟ್ 15ರಂದು ಪೂರ್ಣಗೊಳ್ಳಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯ ವಿವರಗಳು ಮತ್ತು ಅನ್ವಯವಾಗುವ ಮೀಸಲಾತಿಗಳನ್ನು ಒಳಗೊಂಡಿರುವ ಪ್ರತ್ಯೇಕ ಕೈಪಿಡಿಯನ್ನು ಅನಂತರ ಗೊತ್ತುಪಡಿಸಿದ ಕೌನ್ಸೆಲಿಂಗ್ ಪ್ರಾಧಿಕಾರ ಬಿಡುಗಡೆ ಗೊಳಿಸಲಿದೆ.

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪ್ಲಾಟ್‌ಫಾರ್ಮ್‌ನಲ್ಲಿ ಜೂನ್ 23ರಂದು NEET PG- 2024ರ ಪರೀಕ್ಷೆ ನಡೆಸಲಿದೆ. ಅರ್ಹತಾ ಮಾನದಂಡಗಳು, ಶುಲ್ಕ ರಚನೆ, ಪರೀಕ್ಷೆಯ ಯೋಜನೆ ಮತ್ತು ಇತರ ವಿವರಗಳು NBEMS ವೆಬ್‌ಸೈಟ್ https://natboard.edu.in ಅನ್ನು ಏಪ್ರಿಲ್ 16ರಿಂದ ಲಭ್ಯವಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?

NEET PG- 2024ರ ಪರೀಕ್ಷೆ ಬರೆಯಲು ಆಸಕ್ತರಿರುವ ಅಭ್ಯರ್ಥಿಗಳು NBEಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣಿಸುವ NEET PG ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ತೆರೆಯುವ ಹೊಸ ಪುಟದಲ್ಲಿ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ಮಾಹಿತಿಯನ್ನು ಹಾಕಿ ನೊಂದಾಯಿಸಿಕೊಳ್ಳಿ.
ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಿ. ಬಳಿಕ ಸಲ್ಲಿಸು ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸ್ವೀಕರಿಸುವವರೆಗೆ ಕಾಯಿರಿ. ಶುಲ್ಕವನ್ನು ಪಾವತಿಸಿ. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಅಗತ್ಯಕ್ಕಾಗಿ ಅದರ ಹಾರ್ಡ್ ಪ್ರತಿಯನ್ನು ತೆಗೆದಿರಿಸಿಕೊಳ್ಳಿ.

ಅರ್ಜಿ ಶುಲ್ಕಗಳು

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 3,500 ರೂ., ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ 2,500 ರೂ. ಆಗಿದೆ.

ಹೇಗಿರುತ್ತದೆ ಪ್ರಶ್ನೆ ಪತ್ರಿಕೆ?

NEET PG ಪ್ರವೇಶ ಪರೀಕ್ಷೆಯನ್ನು ರಾಷ್ಟ್ರದ ವೈದ್ಯಕೀಯ ಎಂಡಿ, ಎಂಎಸ್ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಪರೀಕ್ಷೆಯ ಪತ್ರಿಕೆಯು 800 ಅಂಕಗಳನ್ನು ಹೊಂದಿರುತ್ತದೆ ಮತ್ತು ಒಟ್ಟು 200 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಸರಿಯಾದ ಉತ್ತರಕ್ಕಾಗಿ, ಅಭ್ಯರ್ಥಿಗೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪಾದ ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ.

Continue Reading

ಪ್ರಮುಖ ಸುದ್ದಿ

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

BSP List: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿಯು 11 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಇದರ ಬೆನ್ನಲ್ಲೇ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಪತ್ನಿಗೂ ಮಾಯಾವತಿ ಅವರು ಟಿಕೆಟ್‌ ನೀಡಿದ್ದಾರೆ.

VISTARANEWS.COM


on

BSP Candidates List
Koo

ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಬಹುಜನ ಸಮಾಜ ಪಕ್ಷವು (BSP List) 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ವಾರಾಣಸಿಯಲ್ಲಿ (Varanasi) ನರೇಂದ್ರ ಮೋದಿ ಅವರ ವಿರುದ್ಧ ಅಥರ್‌ ಜಮಾಲ್‌ ಲರಿ (Athar Jamal Lari) ಅವರನ್ನು ಮಾಯಾವತಿ (Mayawati) ಅವರು ಕಣಕ್ಕಿಳಿಸಿದ್ದಾರೆ. ಮತ್ತೊಂದೆಡೆ, ಕೊಲೆ, ಸುಲಿಗೆ, ಅಪಹರಣ ಸೇರಿ ಹಲವು ಪ್ರಕರಣಗಳ ಆರೋಪಿ, ಜೈಲುಪಾಲಾಗಿರುವ ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿಗೂ ಬಿಎಸ್‌ಪಿ ಟಿಕೆಟ್‌ ಘೋಷಿಸಿದೆ.

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಈಗ ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಗ್ಯಾಂಗ್‌ಸ್ಟರ್‌ ಪತ್ನಿಗೆ ಟಿಕೆಟ್‌

ಉತ್ತರ ಪ್ರದೇಶದ ಜೌನ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿ ಶ್ರೀಕಲಾ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇನ್ನು, ಮೈನ್‌ಪುರಿಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಎಸ್‌ಪಿಯು, ಶಿವಪ್ರಸಾದ್‌ ಯಾದವ್‌ ಅವರಿಗೆ ಮಣೆ ಹಾಕಿದೆ. ಬರೇಲಿಯಲ್ಲಿ ಛೋಟಾಲಾಲ್‌ ಗಂಗ್ವಾರ್‌, ಬಂಡಾದಲ್ಲಿ ಮಯಾಂಕ್‌ ದ್ವಿವೇದಿ, ಘಾಜಿಪುರದಲ್ಲಿ ಉಮೇಶ್‌ ಕುಮಾರ್‌ ಸಿಂಗ್‌ ಸೇರಿ 11 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ

ಯಾರೀತ ಧನಂಜಯ್‌ ಸಿಂಗ್‌?

ಧನಂಜಯ್‌ ಸಿಂಗ್‌ ಉತ್ತರ ಪ್ರದೇಶ ಕಂಡ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾಗಿದ್ದಾನೆ. ಈತನ ವಿರುದ್ಧ 1991ರಿಂದ 2023ರ ಅವಧಿಯಲ್ಲಿ ದೆಹಲಿ, ಜೌನ್‌ಪುರ ಹಾಗೂ ಲಖನೌನಲ್ಲಿ ಕೊಲೆ, ಸುಲಿಗೆ, ಅಪಹರಣ, ಗಲಭೆ, ಅಪರಾಧಕ್ಕೆ ಪ್ರಚೋದನೆ ಸೇರಿ 46 ಪ್ರಕರಣಗಳು ದಾಖಲಾಗಿವೆ. ಇಂತಹ ಗ್ಯಾಂಗ್‌ಸ್ಟರ್‌ ಒಮ್ಮೆ ಶಾಸಕ ಹಾಗೂ ಒಮ್ಮೆ ಸಂಸದನಾಗಿ (ಜೌನ್‌ಪುರ ಕ್ಷೇತ್ರದ ಸಂಸದ) ಆಯ್ಕೆಯಾಗಿದ್ದ ಎಂಬುದೇ ವ್ಯವಸ್ಥೆಯ ಘೋರ ಅಣಕವಾಗಿದೆ. ನಮಾಮಿ ಗಂಗೆ ಯೋಜನೆಯ ಮ್ಯಾನೇಜರ್‌ ಒಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಈತನಿಗೆ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Lok Sabah Election : ಉತ್ತರ ದಿಲ್ಲಿಯಿಂದ ಕಾಂಗ್ರೆಸ್​ ಟಿಕೆಟ್ ಪಡೆದ ಕನ್ಹಯ್ಯ ಕುಮಾರ್​​

Continue Reading

ಕ್ರೈಂ

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

Rameshwaram Cafe Blast: ಬಾಂಬರ್‌ಗಳ ಟಾರ್ಗೆಟ್‌ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್‌ ಇಡಲು ಮೊದಲು ಪ್ಲಾನ್‌ ಮಾಡಿದ್ದರು. ಎಸ್ಇಜೆಡ್ ಏರಿಯಾದಲ್ಲಿ ಸ್ಫೋಟ ಮಾಡಬೇಕು ಅಂತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಟಾರ್ಗೆಟ್ ಮಾಡಿದ್ದರು.

VISTARANEWS.COM


on

Rameshwaram Cafe
Koo

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ (Blast in bengaluru) ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಬಂಧಿಸಲಾಗಿರುವ ಇಬ್ಬರು ಪ್ರಮುಖ ಉಗ್ರರನ್ನು (cafe bombers) ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬೆಚ್ಚಿ ಬೀಳಿಸುವ ಕೆಲವು ಸಂಗತಿಗಳನ್ನು ಇವರು ಹೊರಗೆಡಹಿದ್ದಾರೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಐಟಿ ಬಿಟಿ ಹಬ್‌ (IT hub) ಮೇಲೆಯೇ ಇವರು ಬಾಂಬ್‌ ದಾಳಿ (Bomb Blast) ನಡೆಸಲು ಸ್ಕೆಚ್‌ ಹಾಕಿದ್ದರು ಎಂಬುದು ಗೊತ್ತಾಗಿದೆ.

ರಾಮೇಶ್ವರಂ ಕೆಫೆ (Rameshwaram Cafe Blast) ಬಾಂಬರ್‌ಗಳನ್ನು ಎನ್‌ಐಎ (NIA) ಸತತವಾಗಿ ಡ್ರಿಲ್‌ ಮಾಡುತ್ತಿದ್ದು ವಿಚಾರಣೆಯ ವೇಳೆ ಬಾಂಬರ್‌ಗಳು ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಾಂಬರ್‌ಗಳ ಟಾರ್ಗೆಟ್‌ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್‌ ಇಡಲು ಮೊದಲು ಪ್ಲಾನ್‌ ಮಾಡಿದ್ದರು. ಎಸ್ಇಜೆಡ್ ಏರಿಯಾದಲ್ಲಿ ಸ್ಫೋಟ ಮಾಡಬೇಕು ಅಂತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಟಾರ್ಗೆಟ್ ಮಾಡಿದ್ದರು.

ಅದಕ್ಕೆ ಕಾರಣವೂ ಇತ್ತು. ಎಸ್ಎಜೆಡ್ ಏರಿಯಾದಲ್ಲಿ ಸ್ಫೋಟ ನಡೆಸಿದರೆ ದೇಶ ಹಾಗೂ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಎಸ್ಇಜೆಡ್ ಏರಿಯಾದಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಸಾಕಷ್ಟು ಸುದ್ದಿಯಾಗಿ ತಮ್ಮ ಕೃತ್ಯ ಅಂತಾರಾಷ್ಟ್ರೀಯವಾಗಿ ಮಿಂಚುತ್ತದೆ ಎಂದು ಪಾತಕಿಗಳು ವೈಟ್‌ಫೀಲ್ಡ್‌ನ ಹಲವೆಡೆ ಓಡಾಡಿದ್ದರು.

ಅದರೆ ಐಟಿಬಿಟಿ ಏರಿಯಾದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಲ್ಲ‌ ಎಂದು ಅವರಿಗೆ ಮನವರಿಕೆಯಾಗಿತ್ತು. ಕಂಪನಿಗಳು ಇರುವ ಪ್ರದೇಶದಲ್ಲಿ ಟೈಟ್ ಸೆಕ್ಯುರಿಟಿ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಕಂಡುಬಂದಿದ್ದು, ಕಂಪನಿ ಕಂಪೌಂಡ್‌ಗಳ ಒಳಗೆ ಹೋಗುವುದು ಅಷ್ಟು ಸುಲಭವಲ್ಲ ಎಂದು ಅರ್ಥವಾಗಿತ್ತು. ನಂತರ ಫ್ಲಾನ್ ಚೇಂಜ್‌ ಮಾಡಿ, ಅದೇ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಬೇಕು ಎಂದು ತೀರ್ಮಾನಿಸಿದ್ದರು.

ಈ ವೇಳೆ ಅವರಿಗೆ ಕಂಡಿದ್ದು ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ. ಅತಿ ಹೆಚ್ಚು ಜನ ಸೇರುತ್ತಾರೆ, ಇಲ್ಲಿಗೂ ಟೆಕ್ಕಿಗಳು ಬರುತ್ತಾರೆ. ಕೆಫೆ ಎಂಟ್ರಿಯಾಗಲು ಯಾವುದೇ ಅಡೆತಡೆ ಇರುವುದಿಲ್ಲ. ಸೆಕ್ಯುರಿಟಿ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲ. ಆದ್ದರಿಂದ ಬಾಂಬ್ ಸ್ಫೋಟ ನಡೆಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳ ಎಂದು ಸೆಲೆಕ್ಟ್ ಮಾಡಿದ್ದರು. ಅಲ್ಲದೆ ಇದೇ ವೇಳೆ ರಾಮಮಂದಿರ ಕೂಡ ಉದ್ಘಾಟನೆಯಾಗಿದ್ದು, ಈ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು.

ಮಾರ್ಚ್ 1ರಂದು ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿತ್ತು. ಕೇವಲ ಸಿಸಿಟಿವಿ ಫೂಟೇಜ್‌ನ ಪ್ರಾಥಮಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಎನ್‌ಐಎ ದೇಶಾದ್ಯಂತ ಭಾರಿ ಪ್ರಮಾಣದ ತಲಾಶೆ ನಡೆಸಿತ್ತು. ಕೊನೆಗೂ ಕೋಲ್ಕತ್ತಾದಲ್ಲಿ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.

ಉಗ್ರರ ಕ್ಲೂ ಸಿಕ್ಕಿದ್ದು ಹೀಗೆ

ಉಗ್ರರು ಕೋಲ್ಕತ್ತಾದಲ್ಲಿಯೇ ಇದ್ದಾರೆ ಎಂಬುದು ಎನ್‌ಐಎಗೆ ಗೊತ್ತಾದದ್ದು ಹೇಗೆ? ಇದೂ ಕುತೂಹಲಕಾರಿಯಾಗಿದೆ. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದ ನಂತರ ಇಬ್ಬರೂ ರಾಜ್ಯದಿಂದ ಎಸ್ಕೇಪ್ ಆಗಿದ್ದರು. ತಮಿಳುನಾಡು, ಒಡಿಶಾಗಳಲ್ಲಿ ಸುತ್ತಾಡಿ ಪಶ್ಚಿಮ ಬಂಗಾಳ ಸೇರಿಕೊಂಡಿದ್ದರು. ಹಲವಾರು ದಿನ ಸುತ್ತಾಡಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು.

ಹ್ಯಾಂಡ್ಲರ್ ಮೂಲಕ ಇವರ ಬೇನಾಮಿ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತಿತ್ತು. ಶಂಕಿತರು ಬಳಸುತ್ತಿದ್ದ ಅಕೌಂಟ್ ಮಾಹಿತಿಯನ್ನು NIA ಸಂಗ್ರಹಿಸಿತ್ತು. ಇದೇ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಅಂತಿಮವಾಗಿ ಕೋಲ್ಕತ್ತಾದಲ್ಲಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಹಾಗಾಗಿ ಕೋಲ್ಕತ್ತಾದಲ್ಲಿ ತನಿಖಾ ತಂಡ ಬೀಡುಬಿಟ್ಟಿತ್ತು.

ನಂತರ ಅಲ್ಲಿನ ಲಾಡ್ಜ್‌ಗಳ ಲೆಡ್ಜರ್‌ಗಳು ಹಾಗೂ ಸಿಸಿಟಿವಿ ಫೂಟೇಜ್‌ಗಳನ್ನು ಇಟ್ಟುಕೊಂಡು ಪರಿಶೀಲಿಸಲಾಗಿತ್ತು. ನಕಲಿ ಗುರುತಿನ ದಾಖಲೆ ನೀಡಿ ಲಾಡ್ಜ್‌ನಲ್ಲಿ ವಾಸವಾಗಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬರ್‌ಗಳಿಗೆ 10 ದಿನ ಎನ್‌ಐಎ ಕಸ್ಟಡಿ; ಮತ್ತಷ್ಟು ಗ್ರಿಲ್‌ ಮಾಡಲು ಪೊಲೀಸರು ಸಜ್ಜು

Continue Reading
Advertisement
RR vs KKR
ಕ್ರೀಡೆ20 mins ago

RR vs KKR: ಅಗ್ರಸ್ಥಾನಕ್ಕೆ ಇಂದು ಕೆಕೆಆರ್​-ರಾಜಸ್ಥಾನ್ ಮಧ್ಯೆ ಹೈವೋಲ್ಟೇಜ್ ಕದನ

Toyota Kirloskar Motor Launches New Innova Hicross Petrol GX (O) Grade
ದೇಶ22 mins ago

Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

Lok Sabha Election 2024 IT companies to remain closed in Bengaluru on April 26 BBMP order
Lok Sabha Election 202434 mins ago

Lok Sabha Election 2024: ಏಪ್ರಿಲ್‌ 26ರಂದು ಬೆಂಗಳೂರಲ್ಲಿ ಐಟಿ ಕಂಪನಿಗಳಿಗೆ ಕಡ್ಡಾಯ ರಜೆ; ತುಷಾರ್ ಗಿರಿನಾಥ್ ಆದೇಶ

NEET PG-2024
ಶಿಕ್ಷಣ55 mins ago

NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

Auto Fare in Bengaluru
ಬೆಂಗಳೂರು57 mins ago

Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

Dinesh Karthik
ಕ್ರೀಡೆ1 hour ago

Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

gold rate today tapasi
ಚಿನ್ನದ ದರ1 hour ago

Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

Actor Dwarakish
ಪ್ರಮುಖ ಸುದ್ದಿ1 hour ago

Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

Theft Case in Bengaluru
ಬೆಂಗಳೂರು2 hours ago

Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

actor prakash Rai
ವೈರಲ್ ನ್ಯೂಸ್2 hours ago

Actor Prakash Rai: “ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ; ನಿರ್ದಿಗಂತಕ್ಕೆ ಹಣದ ಹೊಳೆ!” ಸಿಡಿದೆದ್ದ ಜೆಡಿಎಸ್‌ನಿಂದ ನಟ ಪ್ರಕಾಶ್‌ ರೈಗೆ ಚಾಟಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ8 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌