ಅಯ್ಯೋ ಆ ವ್ಯಕ್ತಿ ಕುಳಿತಲ್ಲೇ ತೀವ್ರ ಅಸ್ವಸ್ಥನಾಗಿದ್ದಾನೆ ಚೆಕ್ ಮಾಡಿ ಎಂದ ಮಹಿಳೆ; ಆಮೇಲಷ್ಟೇ ಆಕೆಗೆ ಗೊತ್ತಾಯ್ತು ತಾನು ಮೂರ್ಖಳಾದೆನೆಂದು! - Vistara News

ವಿದೇಶ

ಅಯ್ಯೋ ಆ ವ್ಯಕ್ತಿ ಕುಳಿತಲ್ಲೇ ತೀವ್ರ ಅಸ್ವಸ್ಥನಾಗಿದ್ದಾನೆ ಚೆಕ್ ಮಾಡಿ ಎಂದ ಮಹಿಳೆ; ಆಮೇಲಷ್ಟೇ ಆಕೆಗೆ ಗೊತ್ತಾಯ್ತು ತಾನು ಮೂರ್ಖಳಾದೆನೆಂದು!

ಟಿವಿ ಮತ್ತು ಸಿನಿಮಾ ಏಜೆಂಟ್ ಆಗಿರುವ ಎಮ್ಮಾ ಒಬಾಂಕಾ ಅವರ ಈ ಟ್ವೀಟ್​ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು ಎಮ್ಮಾ ಕಾಲೆಳೆದಿದ್ದರೆ, ಇನ್ನೂ ಕೆಲವರು ನಿಮ್ಮ ಹೃದಯವಂತಿಕೆಗೆ ನಮ್ಮದೊಂದು ನಮನ ಎಂದಿದ್ದಾರೆ.

VISTARANEWS.COM


on

Passenger concerned About A unwell man and after She realized that is Statue
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗ್ಲೆಂಡ್​ನ ದಕ್ಷಿಣ ಭಾಗದ ಸರ್ರೆಯಲ್ಲಿರುವ ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲಿ ತನಗಾದ ಒಂದು ವಿಚಿತ್ರ ಅನುಭವವನ್ನು ಎಮ್ಮಾ ಒಬಾಂಕ್​ ಎಂಬ ಮಹಿಳೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಅದು ಹಳೇ ಟ್ವೀಟ್ ಆಗಿದ್ದು, ಮತ್ತೀಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎಂಬುದರ ವಿವರ ಇಲ್ಲಿದೆ ನೋಡಿ.

2018ರಲ್ಲಿ ಒಮ್ಮೆ ಎಮ್ಮಾ ಒಬಾಂಕ್ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸರ್ರೆಯಲ್ಲಿರುವ ವೋಕಿಂಗ್ ರೈಲ್ವೆ ಸ್ಟೇಶನ್​ನಲ್ಲಿ ಆ ರೈಲು ನಿಂತಿತ್ತು. ರೈಲಿನಲ್ಲಿ ಕುಳಿತಿದ್ದ ಎಮ್ಮಾ ಕಣ್ಣಿಗೆ ಅಲ್ಲಿಯೇ ಪ್ಲಾಟ್​ಫಾರ್ಮ್​​ನ ಬೆಂಚ್​ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದಂತೆ ಕಂಡಿತು. ಆತ ತಟಸ್ಥವಾಗಿ ಕುಳಿತುಕೊಂಡಿದ್ದಾನೆ, ಮೈಮೇಲೆಲ್ಲ ಅಲ್ಲಲ್ಲಿ ಹಿಮ ಬಿದ್ದಂತೆ ಕಾಣುತ್ತಿತ್ತು. ಅದನ್ನ ನೋಡಿದ ಎಮ್ಮಾ ಒಬಾಂಕ್​ ಅವರು, ಕೂಡಲೇ ಅದೇ ರೈಲ್ವೆ ನಿಲ್ದಾಣದ ಸಿಬ್ಬಂದಿಯನ್ನು ಟ್ಯಾಗ್​ ಮಾಡಿ ಟ್ವೀಟ್ ಮಾಡಿದ್ದರಂತೆ. ‘ಆ ವ್ಯಕ್ತಿಯನ್ನು ನೋಡಿ, ತೀವ್ರ ಅಸ್ವಸ್ಥನಾದಂತೆ ಕಾಣಿಸುತ್ತಾನೆ. ಇದ್ದಾನೋ, ಜೀವ ಹೋಗಿದೆಯೋ ಗೊತ್ತಾಗುತ್ತಿಲ್ಲ. ಚಳಿಗೆ ಅವನ ದೇಹ ಹೆಪ್ಪುಗಟ್ಟಿದಂತೆ ಕಾಣಿಸುತ್ತಿದೆ. ಯಾರಾದರೂ ಚೆಕ್ ಮಾಡುತ್ತೀರಾ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ರೈಲ್ವೆ ಸ್ಟೇಶನ್​​ ಟಿವಿ ಪರದೆ ಮೇಲೆ ಪ್ರಸಾರವಾದ ಅಶ್ಲೀಲ ವಿಡಿಯೊ; ಪ್ರಯಾಣಿಕರಿಗೆ ಮುಜುಗರ, ಅದನ್ನೂ ಚಿತ್ರೀಕರಿಸಿ ವೈರಲ್ ಮಾಡಿದ ಮಂದಿ!

ಅದಕ್ಕೆ ವೋಕಿಂಗ್ ರೈಲ್ವೆ ಸ್ಟೇಶನ್​​ನ ಸಿಬ್ಬಂದಿ ತಕ್ಷಣವೇ ಉತ್ತರ ಕೊಟ್ಟಿದ್ದಾರೆ ಮತ್ತು ಆ ಉತ್ತರ ಕೇಳಿ ಎಮ್ಮಾ ಒಂದು ಕ್ಷಣ ಬೆಪ್ಪಾದರಂತೆ. ‘ಎಮ್ಮಾ ಅವರೇ, ಏನೂ ಗಾಬರಿಯಾಗಬೇಡಿ. ಅದೊಂದು ಪ್ರತಿಮೆಯಷ್ಟೇ. ಈ ಪಟ್ಟಣದಲ್ಲಿ ಇಂಥ ಸ್ಟ್ಯಾಚ್ಯೂಗಳು ಹಲವು ಇವೆ. ಹಾಗೇ, ರೈಲ್ವೆ ಸ್ಟೇಶನ್​​ನಲ್ಲೂ ಇಂಥ ವಿವಿಧ ಪ್ರತಿಮೆಗಳಿವೆ ಎಂದು ಆ ರೈಲ್ವೆ ಸ್ಟೇಶನ್​ ಸಿಬ್ಬಂದಿ ಹೇಳಿದ್ದಾರೆ. ಅಂದರೆ, ಆ ಮನುಷ್ಯನ ಪ್ರತಿಮೆಯಲ್ಲಿ ಅಷ್ಟು ಜೀವತುಂಬಿದ ಕಳೆಯಿತ್ತು. ಥೇಟ್ ಮನುಷ್ಯನಂತೆ ಕಾಣುತ್ತಿತ್ತು. ಅದನ್ನು ನೋಡಿ ನಾನು ಮೂರ್ಖಳಾಗಿದ್ದೆ ಎಂದು ಎಮ್ಮಾ ತಿಳಿಸಿದ್ದಾರೆ.

ಟಿವಿ ಮತ್ತು ಸಿನಿಮಾ ಏಜೆಂಟ್ ಆಗಿರುವ ಎಮ್ಮಾ ಒಬಾಂಕಾ ಅವರ ಈ ಟ್ವೀಟ್​ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು ಎಮ್ಮಾ ಕಾಲೆಳೆದಿದ್ದರೆ, ಇನ್ನೂ ಕೆಲವರು ನಿಮ್ಮ ಹೃದಯವಂತಿಕೆಗೆ ನಮ್ಮದೊಂದು ನಮನ ಎಂದಿದ್ದಾರೆ. ಇಂಥ ಮುಜುಗರದ ಸನ್ನಿವೇಶ ನಡೆದಾಗ ಅದೆಷ್ಟೋ ಜನರು ಹೇಳಿಕೊಳ್ಳುವುದೇ ಇಲ್ಲ, ಆದರೆ ನೀವು ಹೇಳಿಕೊಂಡಿರುವುದೇ ಖುಷಿ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Senior citizen: 2050ರ ವೇಳೆಗೆ ಭಾರತವು ವಿಶ್ವದ ಶೇ. 17 ಹಿರಿಯ ನಾಗರಿಕರನ್ನು ಹೊಂದಲಿದೆ. ಇದರಿಂದ ಅವರ ಅಗತ್ಯತೆಗಳನ್ನು ಪೂರೈಸವು ಹಿರಿಯ ನಾಗರಿಕ ಕೇಂದ್ರಗಳ ಬೇಡಿಕೆಯೂ ಹೆಚ್ಚಾಗಲಿದೆ ಎನ್ನುತ್ತದೆ ವರದಿಯೊಂದು. ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Senior citizen
Koo

ನವದೆಹಲಿ: ಭಾರತವು (india) 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು (Senior citizen) ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ (population) ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ ಇ (CBRE) ಸೌತ್ ಏಷ್ಯಾದ ವರದಿ ಬುಧವಾರ ತಿಳಿಸಿದೆ.

ವಿಶ್ವದಲ್ಲೇ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆರೈಕೆ ಮತ್ತು ಜೀವನಶೈಲಿಯ ಆಯ್ಕೆಗಳನ್ನು ಬಯಸುತ್ತಿರುವ ಹಿರಿಯರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಹಿರಿಯ ಜೀವನ ಸೌಲಭ್ಯಗಳ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳೂ ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ರಾಷ್ಟ್ರದಾದ್ಯಂತ 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

2024ರಲ್ಲಿ ಹಿರಿಯ ಜೀವನ ಸೌಲಭ್ಯಗಳ ಒಟ್ಟು ಅಂದಾಜು ಗುರಿ ಸುಮಾರು 1 ಮಿಲಿಯನ್ ಆಗಿದ್ದು, ಮುಂದಿನ 10 ವರ್ಷಗಳಲ್ಲಿ 2.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ವೇಗವಾಗಿ ಹೆಚ್ಚಳ

ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಇದು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಾಗಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ತಿಳಿಸಿದ್ದಾರೆ.


ಹೆಚ್ಚುತ್ತಿದೆ ಬೇಡಿಕೆ

ಕಳೆದ ದಶಕದಲ್ಲಿ ಭಾರತವು ಹಿರಿಯ ಜೀವನ ಯೋಜನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಸ್ವೀಕಾರ ಮತ್ತು ಬೇಡಿಕೆಯನ್ನುಇದು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಆರೈಕೆ ಘಟಕಗಳಲ್ಲಿ ಹೆಚ್ಚಿನವು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಪುಣೆ ಮತ್ತು ದೆಹಲಿ- ಎನ್ ಸಿಆರ್ ನಗರಗಳಲ್ಲಿ ಕೇಂದ್ರೀಕೃತವಾಗಿದೆ.

ಹಲವು ಕ್ರಮ

ಭಾರತದಲ್ಲಿ ವರ್ಧಿತ ವಯೋಸಹಜ ಆರೈಕೆಗಾಗಿ ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (NPHCE), ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳಂತಹ ಹಲವಾರು ನೀತಿ ಉಪಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತದೆ.

ವಯಸ್ಸಾದ ಜನಸಂಖ್ಯೆಯ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ರಚನಾತ್ಮಕ ಆರೈಕೆ ಕಾರ್ಯಕ್ರಮಗಳು, ಉದ್ದೇಶಿತ ನೀತಿಗಳು ಮತ್ತು ವಿಶೇಷ ವೈದ್ಯಕೀಯ ಸೇವೆಗಳ ಅಗತ್ಯವನ್ನು ಗುರುತಿಸಲಾಗಿದೆ. ಭಾರತ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ಆರೈಕೆ ಕ್ಷೇತ್ರದ ಉದ್ಯಮದ ಬಗ್ಗೆ ಜನ ನಾಯಕರು ಮಾತನಾಡುತ್ತಿದ್ದಾರೆ ಎಂದು ಕನ್ಸಲ್ಟಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮಿ ಕೌಶಲ್ ತಿಳಿಸಿದ್ದಾರೆ.

Continue Reading

ದೇಶ

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಎಲಾನ್‌ ಮಸ್ಕ್‌ ಅವರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ, ನಾವು ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಬಯಸುತ್ತೇವೆ ಎಂದು ಅಮೆರಿಕ ಕೂಡ ಹೇಳಿದೆ. ಆ ಮೂಲಕ ಭಾರತದ ಪರವಾಗಿ ನಿಂತಿದೆ.

VISTARANEWS.COM


on

Modi Biden
Koo

ವಾಷಿಂಗ್ಟನ್:‌ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಕಾಯಂ ಸ್ಥಾನ (UN Permanent Seat) ಸಿಗಲು ಪ್ರಯತ್ನಿಸಲಾಗುವುದು ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ಬಿಜೆಪಿಯು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇನ್ನು, ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂದು ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರೂ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕ ಕೂಡ ಭಾರತಕ್ಕೆ ಬೆಂಬಲ ಘೋಷಿಸಿದೆ. ಇದು ಈಗ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ.

“ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂಬುದರ ಕುರಿತು ಅಮೆರಿಕ ಅಧ್ಯಕ್ಷರೇ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿಯವರ ಅಭಿಪ್ರಾಯವೂ ಇದೇ ಆಗಿದೆ. ಆದಾಗ್ಯೂ, ಅಮೆರಿಕವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಬಯಸುತ್ತದೆ. ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದು, ಸುಧಾರಣೆಯನ್ನು ಬಯಸುತ್ತೇವೆ” ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಹೇಳಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಭಾರತಕ್ಕೆ ಕಾಯಂ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಎಲಾನ್‌ ಮಸ್ಕ್‌ ಹೇಳಿದ್ದೇನು?

“ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯು 5 ಕಾಯಂ ಹಾಗೂ 10 ಕಾಯಂ ಅಲ್ಲದ ಅಥವಾ ತಾತ್ಕಾಲಿಕವಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಗಳನ್ನು ಹೊಂದಿದೆ. ಕಳೆದ 16 ವರ್ಷದಿಂದಲೂ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಕಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಕಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದ್ದು, ಎಲ್ಲ ದೇಶಗಳು ಬೆಂಬಲಿಸುತ್ತಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ ಅವರೊಂದಿಗೆ ನಡೆದ ಸಭೆಯಲ್ಲಿ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆಯ್‌ ಲಾವ್ರೋವ್‌ ಅವರು ಕೂಡ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: PM Modi: ಅಮೆರಿಕ ಪತ್ರಿಕೆಗೆ ಮೋದಿ ಸಂದರ್ಶನ; ಮಂದಿರ, ಚೀನಾ ಸೇರಿ ಹಲವು ವಿಷಯಗಳ ಬಗ್ಗೆ ಹೇಳಿದ್ದಿಷ್ಟು!

Continue Reading

ದೇಶ

Samsung: ಎಐ ಫೀಚರ್‌ಗಳ ನಿಯೋ ಕ್ಯೂಎಲ್ಇಡಿ 8ಕೆ, 4ಕೆ, ಒಎಲ್ಇಡಿ ಟಿವಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ದರ ಎಷ್ಟು?

Samsung: ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಬುಧವಾರ ನಡೆದ ‘ಅನ್‌ಬಾಕ್ಸ್‌ & ಡಿಸ್ಕವರ್‌’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಒಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡಲಾಯಿತು.

VISTARANEWS.COM


on

Samsung launches Neo QLED 8K 4K OLED TV in India
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್‌ಸಂಗ್ (Samsung) ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಪ್ರಾರಂಭಿಸಿದೆ.

ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಬುಧವಾರ ನಡೆದ ‘ಅನ್‌ಬಾಕ್ಸ್‌ & ಡಿಸ್ಕವರ್‌’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡಲಾಯಿತು.

2024ರ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳ ಶ್ರೇಣಿಯು ಅತ್ಯಂತ ಶಕ್ತಿಶಾಲಿ ಎಐ ಫೀಚರ್‌ಗಳನ್ನು ಹೊಂದಿದ್ದು, ನಿಮ್ಮ ಮನೆಯಲ್ಲಿ ಮನರಂಜನೆ ಪಡೆಯುವ ಅನುಭವವನ್ನು ಅದ್ಭುತಗೊಳಿಸಲಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಆರಂಭ

ಈ ಕುರಿತು ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್ ಮಾತನಾಡಿ, ಸ್ಯಾಮ್‌ಸಂಗ್ ಗ್ರಾಹಕರ ಜೀವನಶೈಲಿಯಲ್ಲಿ ಬದಲಾವಣೆ ತರಲು ತನ್ನ ಉನ್ನತ ವರ್ಗದ ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಅದ್ಭುತ ಶಕ್ತಿಯನ್ನು ಹೊಂದಿಸುತ್ತಿದೆ. ನಾವು ನಮ್ಮ ಗ್ರಾಹಕರಿಗೆ ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ನೀಡಲು ಎಐ ಫೀಚರ್‌ಗಳನ್ನು ನೀಡುತ್ತಿದ್ದೇವೆ. ನಮ್ಮ 2024 ರ ಶ್ರೇಣಿಯ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳು ಪ್ರತೀ ಮನೆಯ ಮನರಂಜನೆಯ ಅನುಭವವನ್ನು ಅದ್ಭುತಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಮಾತನಾಡಿ, ದೃಶ್ಯ ವೀಕ್ಷಣೆ ಮತ್ತು ಧ್ವನಿ ಗುಣಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲೆಂದೇ ವಿನ್ಯಾಸಗೊಳಿಸಲಾಗಿರುವ ಎಐ ಟಿವಿಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಹೊಸ ಶ್ರೇಣಿಯ ಎಐ-ಚಾಲಿತ 8ಕೆ ನಿಯೋ ಕ್ಯೂಎಲ್ಇಡಿಗಳು, 4K ನಿಯೋ ಕ್ಯೂಎಲ್ಇಡಿಗಳು ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆಯ ಮೂಲಕ ನಾವು ಭಾರತದಲ್ಲಿ ನಮ್ಮ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸುವ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್‌ನ ಪ್ರಮುಖ ಟಿವಿ ಆಗಿರುವ ನಿಯೋ ಕ್ಯೂಎಲ್ಇಡಿ 8ಕೆ ಟಿವಿಯು ಅತ್ಯಾಧುನಿಕ ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್‌ ಹೊಂದಿದೆ. ಇದು ಎಐ ಟಿವಿ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್‌ಪಿಯು) ಅನ್ನು ಹೊಂದಿದೆ, ಅದು ಅದರ ಹಿಂದಿನ ಪ್ರೊಸೆಸರ್ ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ, ಜತೆಗೆ ನ್ಯೂರಲ್ ನೆಟ್‌ವರ್ಕ್‌ಗಳಲ್ಲಿ 64 ರಿಂದ 512 ವರೆಗೆ ಎಂಟು ಪಟ್ಟು ಹೆಚ್ಚಳವಾಗಿದ್ದು ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಕಾಣಿಸುವ ಮೂಲಕ ಗ್ರಾಹಕರಿಗೆ ಅಸಾಧಾರಣ ವೀಕ್ಷಣಾ ಅನುಭವ ಒದಗಿಸಲಿದೆ.

2024ರ ನಿಯೋ ಕ್ಯೂಎಲ್ಇಡಿ 8ಕೆಯಲ್ಲಿ ಲಭ್ಯವಿರುವ ಹಲವು ಎಐ ಫೀಚರ್‌ಗಳು

ಎಐ ಪಿಚ್ಚರ್ ಟೆಕ್ನಾಲಜಿ: ಮುಖಭಾವ ಮತ್ತು ಇತರ ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಅತ್ಯುತ್ತಮವಾದ ಸ್ಪಷ್ಟತೆ ಮತ್ತು ಸಹಜತೆಯೊಂದಿಗೆ ಇದು ನೋಡುಗರಿಗೆ ದಾಟಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Kodagu News: ಶ್ರದ್ಧಾ-ಭಕ್ತಿಯಿಂದ ಜರುಗಿದ ಮಳೂರು ಶ್ರೀ ಬೆಳ್ಳಾರಿಕಮ್ಮ ದೇವಾಲಯದ ಜಾತ್ರಾ ಮಹೋತ್ಸವ

ಎಐ ಅಪ್‌ಸ್ಕೇಲಿಂಗ್ ಪ್ರೊ: ಈ ವೈಶಿಷ್ಯ್ಟವು ಎಲ್ಲಾ ಕಂಟೆಂಟ್ ಅನ್ನು 8ಕೆ ಡಿಸ್‌ಪ್ಲೇಗೆ ಸರಿ ಹೊಂದಿಸುತ್ತದೆ.

ಎಐ ಮೋಷನ್ ಎನ್ ಹ್ಯಾನ್ಸರ್ ಪ್ರೊ- ಕ್ರೀಡೆಯಂತಹ ತೀವ್ರ ಭಾವನೆ ಉದ್ದೀಪಿಸುವ ಕಂಟೆಂಟ್ ಗಳನ್ನು ತುಂಬಾ ಸ್ಪಷ್ಟವಾಗಿ ಕಾಣಿಸಲು ಅತ್ಯಾಧುನಿಕ ಮೋಷನ್ ಡಿಟೆಕ್ಷನ್ ಅಲ್ಗಾರಿದಮ್ ಅನ್ನು ಈ ಫೀಚರ್ ಬಳಸುತ್ತದೆ. ಈ ಮೂಲಕ ಬಳಕೆದಾರರಿಗೆ ಪ್ರತಿ ಕ್ಷಣವನ್ನು ಆನಂದಿಸಲು ಸಹಾಯ ಮಾಡುತ್ತದೆ. ಪಂದ್ಯದ ಸಮಯದಲ್ಲಿ, ಯಾವುದೇ ಅಸ್ಪಷ್ಟತೆ ಇಲ್ಲದೆ ಚೆಂಡನ್ನು ನೋಡಲು ಇದು ಸಹಾಯ ಮಾಡುತ್ತದೆ. ಬಳಕೆದಾರರು ಕ್ರೀಡಾಂಗಣದಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವ ಅನುಭವವನ್ನು ಹೊಂದಲಿದ್ದಾರೆ.

ರಿಯಲ್ ಡೆಪ್ತ್ ಎನ್‌ಹಾನ್ಸರ್ ಪ್ರೊ ವೈಶಿಷ್ಟ್ಯವು ಚಿತ್ರಗಳಿಗೆ ತೀವ್ರತೆಯನ್ನು ಒದಗಿಸುತ್ತದೆ ಮತ್ತು ವೀಕ್ಷಕರು ದೃಶ್ಯದಲ್ಲಿ ಮುಳುಗಿಹೋಗುವಂತೆ ಮಾಡುತ್ತದೆ.

ಎಐ ಸೌಂಡ್ ಟೆಕ್ನಾಲಜಿ– ಇದು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊ ಮೂಲಕ ನಿಖರವಾದ ಆಡಿಯೊವನ್ನು ಒದಗಿಸಲು ಸಹಾಯ ಮಾಡುತ್ತದೆ. ಹಿನ್ನೆಲೆ ಶಬ್ದಗಳನ್ನು ಗ್ರಹಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ವಾಲ್ಯೂಮ್ ಅನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸುತ್ತದೆ. ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊ ತೆರೆಯ ಮೇಲಿನ ದೃಶ್ಯಕ್ಕೆ ಸೂಕ್ತವಾಗಿ ಧ್ವನಿಯನ್ನು ಸಿಂಕ್ ಮಾಡುವ ಮೂಲಕ ಆಡಿಯೊ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ. ಜತೆಗೆ ಹೆಚ್ಚು ಆಕರ್ಷಕ ಮತ್ತು ಆಹ್ಲಾದಕರ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ. ಅಡಾಪ್ಟಿವ್ ಸೌಂಡ್ ಪ್ರೊ ಆಡಿಯೊವನ್ನು ಕಂಟೆಂಟ್ ಮತ್ತು ಕೋಣೆಗೆ ತಕ್ಕಂತೆ ಅತಿ ಬುದ್ಧಿವಂತಿಕೆಯಿಂದ ಹೊಂದಿಸುವ ಮೂಲಕ ಆಡಿಯೊ ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ ಮತ್ತು ಶ್ರೀಮಂತಗೊಳಿಸುತ್ತದೆ.

ಎಐ ಆಟೋ ಗೇಮ್ ಮೋಡ್- ಇದು ಆಟ ಮತ್ತು ಆಟದ ಪ್ರಕಾರ ಎರಡನ್ನೂ ಗುರುತಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ದೃಶ್ಯದ ಗುಣಮಟ್ಟ ಮತ್ತು ಧ್ವನಿ ಗುಣಮಟ್ಟದ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.

ಎಐ ಕಸ್ಟಮೈಸೇಷನ್ ಮೋಡ್- ಇದು ಬಳಕೆದಾರರ ಆದ್ಯತೆಯ ಆಧಾರದ ಮೇಲೆ ಕಂಟೆಂಟ್ ಅನ್ನು ಆಧರಿಸಿ ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಚಿತ್ರವನ್ನು ಸರಿಹೊಂದಿಸುತ್ತದೆ.

ಎಐ ಎನರ್ಜಿ ಮೋಡ್– ಇದು ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿದ್ಯುತ್ ಉಳಿಸುತ್ತದೆ.

ನಿಯೋ ಕ್ಯೂಎಲ್ಇಡಿ 8ಕೆ ಟಿವಿ: ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಕ್ಯೂಎನ್900ಡಿ ಮತ್ತು ಕ್ಯೂಎನ್800ಡಿ ಎರಡು ಮಾದರಿಗಳಲ್ಲಿ ಲಭ್ಯವಿದೆ. 65, 75 ಮತ್ತು 85 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.

ನಿಯೋ ಕ್ಯೂಎಲ್ಇಡಿ 4ಕೆ ಟಿವಿ: ನಿಯೋ ಕ್ಯೂಎಲ್ಇಡಿ 4ಕೆ ಟಿವಿ ಕ್ಯೂಎನ್85ಡಿ ಮತ್ತು ಕ್ಯೂಎನ್90ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. 55, 65, 75, 85 ಮತ್ತು 98 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.

ಸ್ಯಾಮ್‌ಸಂಗ್ ವಿಶ್ವದಲ್ಲಿಯೇ ಮೊತ್ತ ಮೊದಲ ಗ್ಲೇರ್ ಫ್ರೀ ಓಎಲ್ಇಡಿ ಟಿವಿಯನ್ನು ಸಹ ಪರಿಚಯಿಸುತ್ತಿದೆ. ಇದು ಯಾವುದೇ ಬೆಳಕಿನ ಸ್ಥಿತಿಯಲ್ಲಿ ಸ್ಪಷ್ಟವಾದ ಚಿತ್ರಣವನ್ನು ತೋರಿಸುತ್ತದೆ. ಅನಗತ್ಯ ಪ್ರತಿಫಲನವನ್ನು ತೆಗೆದುಹಾಕುತ್ತದೆ. ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಯಂತೆಯೇ ಅದೇ ಅಸಾಧಾರಣ ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತದೆ. ಸ್ಯಾಮ್‌ಸಂಗ್‌ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್‌ಹಾನ್ಸರ್ ಮತ್ತು ಓಎಲ್ಇಡಿ ಎಚ್ ಡಿ ಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ದೃಶ್ಯಗಳ ಗುಣಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯುತ್ತವೆ.

ಹೆಚ್ಚುವರಿಯಾಗಿ, ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಸುಗಮ ಚಲನೆ ಮತ್ತು ತ್ವರಿತ ರೆಸ್ಪೋನ್ಸ್ ರೇಟ್ ಒದಗಿಸುತ್ತದೆ. ಅದರಿಂದಾಗಿಯೇ ಸ್ಯಾಮ್‌ಸಂಗ್ ಓಎಲ್ಇಡಿ ಗೇಮಿಂಗ್‌ಗೆ ಅತ್ಯುತ್ತಮ ಆಯ್ಕೆಯಾಗಿದೆ. ನಯವಾದ ಸುಂದರ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ವೀಕ್ಷಣೆಯ ಸ್ಥಳವನ್ನು ಹೆಚ್ಚು ನೀಡುತ್ತವೆ. ಸ್ಯಾಮ್‌ಸಂಗ್ ಓಎಲ್ಇಡಿ ಟಿವಿ ಎಸ್95ಡಿ ಮತ್ತು ಎಸ್90ಡಿ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. 55, 65, 77 ಮತ್ತು 83 ಇಂಚುಗಳ ಗಾತ್ರದಲ್ಲಿ ದೊರೆಯುತ್ತದೆ.

ಇದನ್ನೂ ಓದಿ: Karnataka Weather: ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ಇಂದು ರಾತ್ರಿ ಗುಡುಗು ಸಹಿತ ಮಳೆ ಸಾಧ್ಯತೆ

ಸ್ಯಾಮ್‌ಸಂಗ್ ಭಾರತೀಯ ಗ್ರಾಹಕರಿಗೆ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಹಲವಾರು ಸೇವೆಗಳನ್ನು ಒದಗಿಸಲು ಪ್ರಾದೇಶಿಕಗೊಳಿಸಿದ ಸ್ಮಾರ್ಟ್ ಸೌಲಭ್ಯಗಳನ್ನು ನೀಡುತ್ತದೆ.

2024ರ ನಿಯೋ ಕ್ಯೂಎಲ್ಇಡಿ 8ಕೆ, ಹೊಸ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಸೆಟಪ್ ಮಾಡಿದ ತಕ್ಷಣ ಸ್ಮಾರ್ಟ್ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಹೊಸ ಸ್ಯಾಮ್‌ಸಂಗ್ ಟಿವಿಯನ್ನು ಆನ್ ಮಾಡಿದ ತಕ್ಷಣ ಟಿವಿ ಗ್ರಹಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ಗಳು ಮತ್ತು ಸಾಧನಗಳಿಗೆ ಸಂಪರ್ಕ ನೀಡುತ್ತದೆ. ಜತೆಗೆ ಈ ಎಲ್ಲವನ್ನೂ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ನೋಟಿಫಿಕೇಷನ್ ಕಳುಹಿಸುವ ಮೂಲಕ ತಿಳಿಸುತ್ತದೆ. ಪ್ರಯಾಸವಿಲ್ಲದ ಸೆಟಪ್ ವ್ಯವಸ್ಥೆಯು ಮನೆಯಲ್ಲಿರುವ ಎಲ್ಲಾ ಸ್ಯಾಮ್‌ಸಂಗ್ ಸಾಧನಗಳಿಗೆ ಹಾಗೂ ಥರ್ಡ್-ಪಾರ್ಟಿ ಉಪಕರಣಗಳು ಮತ್ತು ಐಓಟಿ ಸಾಧನಗಳಿಗೂ ಸಂಪರ್ಕ ಸಾಧಿಸುತ್ತದೆ.

ಸ್ಯಾಮ್‌ಸಂಗ್‌ನ 2024ರ ಟಿವಿ ಶ್ರೇಣಿಯು ಬಳಕೆದಾರರ ಸ್ಮಾರ್ಟ್‌ಫೋನ್‌ಗಳೊಂದಿಗೆ ಅತ್ಯುತ್ತಮ ಏಕೀಕರಣ ಸಾಧಿಸಲಿದ್ದು, ಈ ವಿಚಾರದಲ್ಲಿ ಮತ್ತೊಂದು ಎತ್ತರವನ್ನು ಸಾಧಿಸಿದೆ. ಸ್ಮಾರ್ಟ್ ಮೊಬೈಲ್ ಕನೆಕ್ಟ್ ಫೀಚರ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಯ ಬಳಿ ತಂದರೆ ಸಾಕು, ಅದು ಫೋನ್ ಅನ್ನು ಟಿವಿ ಮತ್ತು ಸಂಪರ್ಕಿತ ಗೃಹೋಪಯೋಗಿ ಉಪಕರಣಗಳಿಗೆ ಸಾರ್ವತ್ರಿಕ ರಿಮೋಟ್ ಆಗಿ ಪರಿವರ್ತನೆ ಹೊಂದುತ್ತದೆ.

ಬೆಲೆ ಮತ್ತು ಮುಂಗಡ ಬುಕ್ಕಿಂಗ್‌ ಆಫರ್ ಕುರಿತು

ಪ್ರೀ-ಆರ್ಡರ್ ಕೊಡುಗೆಯ ಭಾಗವಾಗಿ, ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಗ್ಲೇರ್ ಫ್ರೀ ಓಎಲ್ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ರೂ. 79990 ಮೌಲ್ಯದ ಉಚಿತ ಸೌಂಡ್‌ಬಾರ್, ರೂ. 59990 ಮೌಲ್ಯದ ಫ್ರೀಸ್ಟೈಲ್, ರೂ.29990 ಮೌಲ್ಯದ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಅನ್ನು ಅವಲಂಬಿಸಿರುತ್ತದೆ ಮತ್ತು ಏಪ್ರಿಲ್ 30, 2024ರವರೆಗೆ ಲಭ್ಯವಿರುತ್ತದೆ. ಗ್ರಾಹಕರು ಮಾಡೆಲ್ ಅನ್ನು ಅವಲಂಬಿಸಿ 20% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಬೆಲೆ ರೂ. 319990 ರಿಂದ ಪ್ರಾರಂಭ, ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯು ಬೆಲೆ ರೂ. 139990 ರಿಂದ ಪ್ರಾರಂಭ, ಸ್ಯಾಮ್‌ಸಂಗ್‌ನ ಒಎಲ್ಇಡಿ ಶ್ರೇಣಿಯು ಬೆಲೆ ರೂ. 164990 ರಿಂದ ಪ್ರಾರಂಭವಾಗುತ್ತದೆ.

Continue Reading

ವಿದೇಶ

Indian Woman: ಪಾಕ್‌ ವ್ಯಕ್ತಿಯನ್ನು ನಂಬಿ ಮದುವೆಯಾದ ಮುಂಬೈ ಮಹಿಳೆಗೆ ಭಾರಿ ಮೋಸ!

Indian Woman: ಮಹಾರಾಷ್ಟ್ರದವರಾದ ಫರ್ಜಾನಾ ಬೇಗಂ ಎಂಬ ಮಹಿಳೆಯು 2015ರಲ್ಲಿ ಪಾಕಿಸ್ತಾನದ ಮಿರ್ಜಾ ಮುಬಿನ್‌ ಇಲಾಹಿ ಎಂಬುವನನ್ನು ಮದುವೆಯಾಗಿ, ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಆಸ್ತಿಗಾಗಿ ಮಿರ್ಜಾ ಮುಬಿನ್‌ ಇಲಾಹಿ ಇಬ್ಬರು ಮಕ್ಕಳನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದಾನೆ. ಇದರಿಂದಾಗಿ ಆತಂಕಕ್ಕೀಡಾಗಿರುವ ಮಹಿಳೆಯು ನನಗೆ ನ್ಯಾಯ ಬೇಕು ಎಂದು ಪಾಕ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

VISTARANEWS.COM


on

Indian Woman
Koo

ಇಸ್ಲಾಮಾಬಾದ್:‌ ಪಾಕಿಸ್ತಾನದ ಸೀಮಾ ಹೈದರ್‌ ಹಾಗೂ ಭಾರತದ ಸಚಿನ್ ಮೀನಾ ಆನ್‌ಲೈನ್‌ ಮೂಲಕವೇ ಪ್ರೀತಿಸಿ, ಈಗ ಭಾರತಕ್ಕೆ ಬಂದಿರುವ ಸೀಮಾ ಹೈದರ್‌, ಸಚಿನ್‌ ಜತೆ ಸುಖವಾಗಿದ್ದಾರೆ. ಆದರೆ, ಮುಂಬೈ ಮೂಲದ ಮಹಿಳೆಯೊಬ್ಬರು ಪಾಕಿಸ್ತಾನದ (Pakistan) ವ್ಯಕ್ತಿಯನ್ನು ನಂಬಿ, ಆತನನ್ನು ಮದುವೆಯಾಗಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಮುಂಬೈ ಮೂಲದ ಫರ್ಜಾನಾ ಬೇಗಂ (Farzana Begum) ಅವರು ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿ, ಅಲ್ಲಿಯೇ ನೆಲೆಸಿದ್ದಾರೆ. ಆದರೆ, ಅವರ ಮಕ್ಕಳನ್ನು ಈಗ ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ನನ್ನ ಮಕ್ಕಳು ಅಪಾಯದಲ್ಲಿದ್ದಾರೆ. ಅವರನ್ನು ನನಗೆ ನೀಡದ ಹೊರತು ಪಾಕಿಸ್ತಾನ ತೊರೆಯುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ಫರ್ಜಾನಾ ಬೇಗಂ ಅವರು 2015ರಲ್ಲಿ ಅಬುಧಾಬಿಯಲ್ಲಿ ಪಾಕಿಸ್ತಾನದ ಮಿರ್ಜಾ ಮುಬಿನ್‌ ಇಲಾಹಿ ಎಂಬಾತನನ್ನು ಮದುವೆಯಾಗಿದ್ದರು. ಮೊದಲು ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿತ್ತು. 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕೆಲ ತಿಂಗಳಿಂದ ಫರ್ಜಾನಾ ಬೇಗಂ ಅವರ ಇಬ್ಬರು ಮಕ್ಕಳನ್ನು ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ. “ಫರ್ಜಾನಾ ಬೇಗಂ ನನಗೆ ಕಿರುಕುಳ ನೀಡಿದ್ದಾಳೆ” ಎಂಬುದಾಗಿ ಮಿರ್ಜಾ ಮುಬಿನ್‌ ಆರೋಪಿಸಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ವಿರಸ ಉಂಟಾಗಿದೆ ಎಂಬುದು ಸಾಬೀತಾಗಿದೆ. ಇದರ ಮಧ್ಯೆಯೇ, ಮಕ್ಕಳು ಕಾಣೆಯಾಗಿರುವ ಕುರಿತು ಫರ್ಜಾನಾ ಬೇಗಂ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆ ಹೇಳುವುದೇನು?

“ನನಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ 7 ವರ್ಷ, ಮತ್ತೊಬ್ಬನಿಗೆ 6 ವರ್ಷ ವಯಸ್ಸು. ಆದರೆ, ಇಬ್ಬರನ್ನೂ ಕಸ್ಟಡಿಯಲ್ಲಿ ಇರಿಸಲಾಗಿದ್ದು, ನನ್ನಿಂದ ದೂರ ಮಾಡಿದ್ದಾರೆ. ನನ್ನ ಪತಿಯೇ ಇದರ ಪಿತೂರಿದಾರನಾಗಿದ್ದಾನೆ. ನಾನು ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಹಾಗೊಂದು ವೇಳೆ ನಾನು ವಿಚ್ಛೇದನ ನೀಡಿದ್ದರೆ, ಪ್ರಮಾಣಪತ್ರ ಇರಬೇಕಲ್ಲವೇ? ನನ್ನ ಮಕ್ಕಳು ನನಗೆ ಬೇಕು. ನನ್ನ ಮಕ್ಕಳನ್ನು ನೀಡಿದರೆ ಮಾತ್ರ ನಾನು ಮತ್ತೆ ಭಾರತಕ್ಕೆ ಹೋಗುತ್ತೇನೆ” ಎಂಬುದಾಗಿ ಫರ್ಜಾನಾ ಬೇಗಂ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ತಿಯ ವಿಷಯಕ್ಕಾಗಿ ನನ್ನ ಪತಿಯೇ ಕುತಂತ್ರ ಮಾಡಿದ್ದಾನೆ. ಆಸ್ತಿಗಾಗಿಯೇ ಮಕ್ಕಳನ್ನು ಬಚ್ಚಿಟ್ಟಿದ್ದು, ಅವರ ಪ್ರಾಣವು ಅಪಾಯದಲ್ಲಿದೆ. ಲಾಹೋರ್‌ನ ರೆಹಮಾನ್‌ ಗಾರ್ಡನ್ಸ್‌ನಲ್ಲಿ ನನ್ನ ಹೆಸರಿನಲ್ಲಿ ಮನೆ ಇದೆ. ನನ್ನ ಮಕ್ಕಳ ಹೆಸರಿನಲ್ಲಿಯೂ ಆಸ್ತಿ ಇದೆ. ಆಸ್ತಿಯ ಕಾರಣಕ್ಕಾಗಿ ಮಿರ್ಜಾ ಮುಬಿನ್‌ ಇಲಾಹಿಯು ಮಕ್ಕಳನ್ನು ಬಚ್ಚಿಟ್ಟಿದ್ದಾನೆ. ಹಾಗಾಗಿ, ಪ್ರಕರಣದಲ್ಲಿ ಪಾಕಿಸ್ತಾನ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು. ನನಗೆ ನ್ಯಾಯ ಒದಗಿಸಿ, ನನ್ನ ಮಕ್ಕಳನ್ನು ಬಿಡುಗಡೆ ಮಾಡಿಸಬೇಕು. ನನ್ನ ಹಾಗೂ ಮಕ್ಕಳ ಪಾಸ್‌ಪೋರ್ಟ್‌ಗಳನ್ನು ಕೂಡ ಮಿರ್ಜಾ ಮುಬಿನ್‌ ಕಸಿದುಕೊಂಡಿದ್ದಾನೆ. ಪಾಕ್‌ ಸರ್ಕಾರ ನನಗೆ ಸಹಾಯ ಮಾಡಬೇಕು” ಎಂಬುದಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Continue Reading
Advertisement
Self Harming In chitradurga
ಚಿತ್ರದುರ್ಗ6 mins ago

Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

Saffron Row
ದೇಶ11 mins ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

gold rate today 18
ಚಿನ್ನದ ದರ27 mins ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ30 mins ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು39 mins ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Senior citizen
ಲೈಫ್‌ಸ್ಟೈಲ್45 mins ago

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Lok sabha election-2024
Latest49 mins ago

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Darshan and Sumalatha Ambareesh
ಪ್ರಮುಖ ಸುದ್ದಿ57 mins ago

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

Uttarakaanda Movie doodh peda diganth mirchi mallige
ಸ್ಯಾಂಡಲ್ ವುಡ್1 hour ago

Uttarakaanda Movie: ʻಉತ್ತರಕಾಂಡʼ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ ಈಗʻಮಿರ್ಚಿ ಮಲ್ಲಿಗೆʼ!

Shubman Gill
ಕ್ರೀಡೆ1 hour ago

Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌