PM Modi Ukraine Viisit: ಜಾಗತಿಕ ಮಾಧ್ಯಮಗಳ ಗಮನ ಸೆಳೆದ ಪ್ರಧಾನಿ ಮೋದಿಯ ಐತಿಹಾಸಿಕ ಉಕ್ರೇನ್‌ ಭೇಟಿ - Vistara News

ವಿದೇಶ

PM Modi Ukraine Viisit: ಜಾಗತಿಕ ಮಾಧ್ಯಮಗಳ ಗಮನ ಸೆಳೆದ ಪ್ರಧಾನಿ ಮೋದಿಯ ಐತಿಹಾಸಿಕ ಉಕ್ರೇನ್‌ ಭೇಟಿ

PM Modi Ukraine Viisit: ಬರೋಬ್ಬರಿ 30 ವರ್ಷಗಳ ಬಳಿಕ ಉಕ್ರೇಗೆ ಭೇಟಿ ನೀಡಿದ ಭಾರತದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. 6 ವಾರಗಳ ಹಿಂದೆ ರಷ್ಯಾಕ್ಕೆ ತೆರಳಿದ್ದ ಅವರು ಇದೀಗ ಉಕ್ರೇನ್‌ಗೆ ಭೇಟಿ ನೀಡಿದ್ದು, ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ. ಹೀಗಾಗಿ ಜಾಗತಿಕ ಮಾಧ್ಯಮಗಳು ಈ ಐತಿಹಾಸಿಕ ಭೇಟುಯನ್ನು ಹೇಗೆ ವರದಿ ಮಾಡಿವೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

PM Modi Ukraine Viisit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೀವ್‌: ವಿದೇಶ ಪ್ರವಾಸದಲ್ಲಿರುವ ನರೇಂದ್ರ ಮೋದಿ (Narendra Modi) ಅವರು ಉಕ್ರೇನ್‌ಗೆ ಭೇಟಿ ನೀಡಿದ್ದು, ಬರೋಬ್ಬರಿ 30 ವರ್ಷಗಳ ಬಳಿಕ ಅಲ್ಲಿಗೆ ತೆರಳಿದ ಭಾರತದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PM Modi Ukraine Viisit). ರಷ್ಯಾ-ಉಕ್ರೇನ್‌ ಯುದ್ಧ ಮುಂದುವರಿದಿರುವ ಮಧ್ಯೆ ಮೋದಿ ಅವರ ಈ ಭೇಟಿ ಅತ್ಯಂತ ಮಹತ್ವ ಪಡೆದಿದೆ. 6 ವಾರಗಳ ಹಿಂದೆ ರಷ್ಯಾಕ್ಕೆ ತೆರಳಿದ್ದ ಅವರು ಇದೀಗ ಉಕ್ರೇನ್‌ಗೆ ಭೇಟಿ ನೀಡಿದ್ದು, ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ. ಉಕ್ರೇನ್‌ ರಾಜಧಾನಿ ಕೀವ್‌ಗೆ ಬಂದಿಳಿದ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ  (Volodymyr Zelensky) ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಉಭಯ ನಾಯಕರು ಪರಸ್ಪರ ಕೈ ಕುಲುಕಿ ಆತ್ಮೀಯವಾಗಿ ಅಪ್ಪಿಕೊಂಡರು.

ಜಾಗತಿಕ ಮಾಧ್ಯಮಗಳಲ್ಲಿ ಮೋದಿ ಭೇಟಿ

ಮೋದಿಯ ಉಕ್ರೇನ್‌ ಭೇಟಿಯನ್ನು ವರದಿ ಮಾಡಿದ ಸುದ್ದಿಸಂಸ್ಥೆ ರಾಯಿಟರ್ಸ್‌, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕೋಗೆ ಭೇಟಿ ನೀಡಿ ಶಾಂತಿಗಾಗಿ ಕರೆ ನೀಡಿದ್ದನ್ನು ಉಲ್ಲೇಖಿಸಿದೆ. ಜತೆಗೆ ಆಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನೂ ಮೋದಿ ಆತ್ಮೀಯವಾಗಿ ಅಪ್ಪಿಕೊಂಡಿದ್ದರು ಎಂದು ನೆನಪಿಸಿಕೊಂಡಿದೆ.

“2022ರ ಫೆಬ್ರವರಿಯಲ್ಲಿ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ ಮೃತಪಟ್ಟ ಎಲ್ಲ 570 ಮಕ್ಕಳನ್ನು ಸ್ಮರಿಸುವ ಉಕ್ರೇನ್‌ನ ಇತಿಹಾಸ ವಸ್ತುಸಂಗ್ರಹಾಲಯಕ್ಕೆ ಮೋದಿ ಅವರನ್ನು ಕರೆದೊಯ್ಯಲಾಯಿತುʼʼ ಎಂದು ಬಿಬಿಸಿ ವರದಿ ಮಾಡಿದೆ. ಭೇಟಿ ಬಳಿಕ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ “ರಷ್ಯಾ-ಉಕ್ರೇನ್‌ ಸಂಘರ್ಷವು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ. “ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಗಳಿಗಾಗಿ ನನ್ನ ಹೃದಯ ಮಿಡಿಯುತ್ತದೆ. ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ. ವಸ್ತುಸಂಗ್ರಹಾಲಯದ ಸ್ಮಾರಕದಲ್ಲಿ ಟೆಡ್ಡಿ ಬೇರ್‌ಗಳನ್ನು ಇರಿಸಿದ ಅವರು ಒಂದು ಕ್ಷಣ ಮೌನ ಆಚರಿಸಿದರು.

ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್, ಉಕ್ರೇನ್ ಭೇಟಿಯು ತಟಸ್ಥ ನಿಲುವನ್ನು ತೆಗೆದುಕೊಳ್ಳುವ ಮೋದಿ ಅವರ ಪ್ರಯತ್ನದ ಭಾಗ ಆಗಿರಬಹುದು ಎಂದು ವರದಿ ಮಾಡಿದೆ.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ಮೋದಿ ಅವರ ಭೇಟಿಯ ಮೊದಲು ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಅವರು ಸುದ್ದಿಸಂಸ್ಥೆ ರಾಯಿಟರ್ಸ್‌ ಜತೆ ಮಾತನಾಡಿ, ʼʼಈ ಪ್ರವಾಸ ಮಹತ್ವದ್ದಾಗಿದೆ. ಯಾಕೆಂದರೆ ನವದೆಹಲಿ ಮಾಸ್ಕೋ ಮೇಲೆ ನಿಜವಾಗಿಯೂ ಒಂದು ನಿರ್ದಿಷ್ಟ ಪ್ರಭಾವವನ್ನು ಹೊಂದಿದೆ” ಎಂದು ಹೇಳಿದ್ದರು. ಇನ್ನು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥ ಆ್ಯಂಡ್ರಿ ಯೆರ್ಮಾಕ್, ಮೋದಿ ಅವರ ಭೇಟಿ ಐತಿಹಾಸಿಕವಾಗಿದೆ ಮತ್ತು ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು ಎಂದು ನಿರೀಕ್ಷೆ ಹೊಂದಿದ್ದಾರೆ. ಪೋಲೆಂಡ್‌ ಪ್ರವಾಸ ಮುಗಿಸಿ ಶುಕ್ರವಾರ (ಆಗಸ್ಟ್‌ 23) ಉಕ್ರೇನ್‌ಗೆ ಬಂದಿಳಿದ ಮೋದಿ ಅವರು ವೊಲೊಡಿಮಿರ್​ ಝೆಲೆನ್ಸ್ಕಿ  ಜತೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಎರಡು ದೇಶಗಳ ಸಂಬಂಧ ವೃದ್ದಿಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Israel vs Hezbollah War: ಹೆಜ್ಬುಲ್ಲಾ ಉಗ್ರರ ಅಟ್ಟಹಾಸ; ಲೆಬನಾನ್‌ ಮೇಲೆ ರಾಕೆಟ್​ ದಾಳಿ ಆರಂಭಿಸಿದ ಇಸ್ರೇಲ್​; ಭಯಾನಕ ವಿಡಿಯೊ ಇಲ್ಲಿದೆ

Israel vs Hezbollah War: ಇಸ್ರೇಲ್‌ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್‌ ಅನ್ನು ಟಾರ್ಗೆಟ್‌ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ. ಜತೆಗೆ ರಾಕೆಟ್​ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ.

VISTARANEWS.COM


on

Israel vs Hezbollah War
Koo

ಟೆಲ್‌ ಅವಿವ್‌: ತಮ್ಮ ಮೇಲೆ ಹಠಾತ್‌ ಆಕ್ರಮಣಗೈಯಲು ಮುಂದಾಗಿರುವ ಹೆಜ್ಬುಲ್ಲಾ ಉಗ್ರ ಸಂಘಟನೆಗೆ ಇಸ್ರೇಲ್(Israel vs Hezbollah War)​ವೈಮಾನಿಕ ರಾಕೆಟ್​ ದಾಳಿಯ ಬಿಸಿ ಮುಟ್ಟಿಸಲು ಆರಂಭಿಸಿದೆ. ಭಾನುವಾರ ಬೆಳಗ್ಗಿನ ಜಾವ ಲೆಬನಾನ್​ ಮೇಲೆ ದಾಳಿ ಆರಂಭಿಸಿದೆ. ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿರುವ ಕಾರಣ ಇಸ್ರೇಲ್​ನಲ್ಲಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ದಾಳಿಯ ಭೀಕರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸಿದಂತೆ ರಾಕೆಟ್​ಗಳು ಸಿಡಿಯುತ್ತಿವೆ.

ಇಸ್ರೇಲ್‌ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್‌ ಅನ್ನು ಟಾರ್ಗೆಟ್‌ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ. ಜತೆಗೆ ರಾಕೆಟ್​ ದಾಳಿ ಕೂಡ ನಡೆಸಿ ಹಲವು ಕಟ್ಟಡಗಳನ್ನು ನಾಶಪಡಿಸಿದೆ. ವರದಿಗಳ ಪ್ರಕಾರ 300 ರಾಕೆಟ್​ಗಳ ದಾಳಿಯನ್ನು ನಡೆಸಲು ಇಸ್ರೇಲ್​ ಮಿಲಿಟರಿ ಪಡೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸದ್ಯ ಯಾವುದೇ ಸಾವು ನೋವುಗಳ ಬಗ್ಗೆ ತಿಳಿದುಬಂದಿಲ್ಲ. ಹಲವು ಕಟ್ಟಡಗಳು ಈಗಾಗಲೇ ದ್ವಂಸಗೊಂಡಿದೆ. ಲೆಬನಾನ್ ಗಡಿ ಭಾಗದಲ್ಲಿರುವ ನಾಗರಿಕರಿಗೆ ಇಸ್ರೇಲ್​ ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆಯನ್ನು ಕೂಡ ನೀಡಿದೆ.

ಹೆಜ್ಬುಲ್ಲಾ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶದ ಕಡೆಗೆ 150 ಕ್ಕೂ ಹೆಚ್ಚು ಸ್ಪೋಟಕಗಳನ್ನು ಉಡಾವಣೆ ಮಾಡಿದೆ. ನಾವು ಭಯೋತ್ಪಾದಕರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಅವರು ನಾಗರಿಕರನ್ನು ಗುರಿಯಾಗಿಸುತ್ತಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್‌ ತನ್ನ ವಶಕ್ಕೆ ಪಡೆದು­ಕೊಂಡಿರುವ ಗೋಲನ್‌ ಹೈಟ್ಸ್‌ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾ­ಯಿಸಿತ್ತು. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.

ಇದನ್ನೂ ಓದಿ Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಯುದ್ಧದಲ್ಲೇ ಮುಳುಗಿರುವ ಇಸ್ರೇಲ್​​ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಒಂದೆಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್​ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್​ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್​​ ಫೌದ್ ಶುಕರ್​ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್​ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.

Continue Reading

ವಿದೇಶ

Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

Pavel Durov Arrest:ರಷ್ಯಾ ಮೂಲದ ಪಾವೆಲ್‌ ದುರೋವ್‌, ದುಬೈನಲ್ಲಿ ನೆಲೆಸಿದ್ದಾರೆ. ಹಿಂದೊಮ್ಮೆ ಅವರು ಕೆಲವು ಸರ್ಕಾರಗಳು ತನ್ನ ಮೇಲೆ ಒತ್ತಡ ಹೇರಿದ್ದರೂ, ಟೆಲಿಗ್ರಾಮ್ “ತಟಸ್ಥ ವೇದಿಕೆ”ಯಾಗಿ ಉಳಿಯಬೇಕು ಎಂದು ಹೇಳಿದ್ದರು.

VISTARANEWS.COM


on

Pavel Durov Arrest
Koo

ಪ್ಯಾರಿಸ್​: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ(Telegram) ಸಿಇಒ ಪಾವೆಲ್‌ ದುರೋವ್‌ (Pavel Durov) ಅವರನ್ನು ಪ್ಯಾರಿಸ್‌ ವಿಮಾನ ನಿಲ್ದಾಣದಲ್ಲಿ ಫ್ರೆಂಚ್(Pavel Durov Arrest) ಅಧಿಕಾರಿಗಳು ಬಂಧಿಸಿದ್ದಾರೆ. 39 ವರ್ಷದ ಟೆಕ್ ಉದ್ಯಮಿ ತನ್ನ ಖಾಸಗಿ ಜೆಟ್‌ನಲ್ಲಿ ಬಂದ ನಂತರ ಬಂಧಿಸಲಾಯಿತು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ. ಟೆಲಿಗ್ರಾಮ್ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ವಾರಂಟ್ ಅಡಿಯಲ್ಲಿ ಡುರೊವ್ ಅವರನ್ನು ಬಂಧನವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರೋವ್‌ ಅವರ ಬಂಧನದ ಸುದ್ದಿ ಕೇಳಿ ಕೆಲವು ರಷ್ಯಾದ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಫ್ರಾನ್ಸ್‌ನ ಕ್ರಮಗಳನ್ನು ಟೀಕಿಸಿದ್ದಾರೆ. ವಿಶ್ವಾದ್ಯಂತ ಫ್ರೆಂಚ್ ರಾಯಭಾರ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್, ಜಾಗತಿಕ ಸಂವಹನಗಳಲ್ಲಿ, ವಿಶೇಷವಾಗಿ ರಷ್ಯಾ, ಉಕ್ರೇನ್ ಮತ್ತು ಹಿಂದಿನ ಸೋವಿಯತ್ ಗಣರಾಜ್ಯಗಳಲ್ಲಿ ಗಮನಾರ್ಹವಾಗಿ ಮಾರ್ಪಟ್ಟಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಶೋಧಿಸದ ಮಾಹಿತಿಯ ಮೂಲವಾಗಿ ಟೆಲಿಗ್ರಾಮ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರು ಇಲ್ಲಿ ಹೆಚ್ಚಾಗಿ ಈ ಆ್ಯಪ್​ ಬಳಸುತ್ತಾರೆ.

ರಷ್ಯಾ ಮೂಲದ ಪಾವೆಲ್‌ ದುರೋವ್‌, ದುಬೈನಲ್ಲಿ ನೆಲೆಸಿದ್ದಾರೆ. ಹಿಂದೊಮ್ಮೆ ಅವರು ಕೆಲವು ಸರ್ಕಾರಗಳು ತನ್ನ ಮೇಲೆ ಒತ್ತಡ ಹೇರಿದ್ದರೂ, ಟೆಲಿಗ್ರಾಮ್ “ತಟಸ್ಥ ವೇದಿಕೆ”ಯಾಗಿ ಉಳಿಯಬೇಕು ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಪಾವೆಲ್‌ ದುರೋವ್‌ ಅವರು ಸ್ಫೋಟಕ ವಿಷಯವೊಂದನ್ನು ಬಹಿರಂಗಪಡಿದ್ದರು. ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ. ವೀರ್ಯ ದಾನದ ಮೂಲಕ 100 ಮಕ್ಕಳ ಜನನಕ್ಕೆ ಕಾರಣರಾಗಿದ್ದೇನೆ ಎಂದು ಹೇಳಿದ್ದರು.

“ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿದ್ದಾರೆ. ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದರು.

ಇದನ್ನೂ ಓದಿ Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂದು ಗೆಳೆಯ ಮನವರಿಕೆ ಮಾಡಿದ. “ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ” ಎಂಬುದಾಗಿ ನನ್ನನ್ನು ಒಪ್ಪಿಸಿದರು. “ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಟೆಲಿಗ್ರಾಂನಲ್ಲಿ ಪಾವೆಲ್‌ ದುರೋವ್‌ ಹೆಮ್ಮೆಯಿಂದ ಹೇಳಿಕೊಂಡಿದ್ದರು.

Continue Reading

ವಿದೇಶ

Israel strike: ರಾಕೆಟ್ ದಾಳಿ; ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Israel strike: ಇಸ್ರೇಲ್ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೆಬನಾನ್‌ನ್​ ವಿರುದ್ಧ ಸಮರಕ್ಕೆ ಇಳಿದಿರುವ ಇಸ್ರೇಲ್ ಮಿಲಿಟರಿ ಪಡೆ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.

VISTARANEWS.COM


on

Israel strike
Koo

ಟೆಲ್ ಅವಿವ್​​​(ಇಸ್ರೇಲ್): ಲೆಬನಾನ್ ಗಡಿಯಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆಯೊಂದಿಗೆ (Hezbollah) ಸಂಘರ್ಷಕ್ಕೆ ಇಳಿದಿರುವ ಇಸ್ರೇಲ್(Israel strike)​, ಭಾನುವಾರ ಲೆಬನಾನ್‌ ಕಡೆ ಪೂರ್ವಭಾವಿ ದಾಳಿ ನಡೆಸಲು ತೀರ್ಮಾನಿಸಿದೆ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್‌ ತನ್ನ ವಶಕ್ಕೆ ಪಡೆದು­ಕೊಂಡಿರುವ ಗೋಲನ್‌ ಹೈಟ್ಸ್‌ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾ­ಯಿಸಿತ್ತು.

ಯುದ್ಧದಲ್ಲೇ ಮುಳುಗಿರುವ ಇಸ್ರೇಲ್​​ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಒಂದೆಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಲೆಬನಾನ್ ಗಡಿಯಲ್ಲಿ ಹೆಜ್ಬೊಲ್ಲಾದೊಂದಿಗೆ ಸಂಘರ್ಷಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

“ಇಸ್ರೇಲ್ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೆಬನಾನ್‌ನ್​ ವಿರುದ್ಧ ಸಮರಕ್ಕೆ ಇಳಿಯಲಿದ್ದೇವೆ, ಬೈರುತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ನಮ್ಮ ನಾಗರಿಕರನ್ನು ರಕ್ಷಿಸುವ ಸಲುವಾಗಿ ಎಲ್ಲ ರೀತಿಯ ಕಾರ್ಯ ವಿಧಾನವನ್ನು ಕಾರ್ಯಗತ ಮಾಡಲು ನಿರ್ಧರಿಸಿದ್ದೇವೆ” ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

2 ದಿನಗಳ ಹಿಂದೆ ಲೆಬನಾನಿನ ಶಿಯಾ ಇಸ್ಲಾಮಿಸ್ಟ್​ ಪೊಲಿಟಿಕಲ್ ಪಾರ್ಟಿ ಮತ್ತು ಉಗ್ರರ ಗುಂಪು ಹೆಜ್ಬುಲ್ಲಾ, ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿತ್ತು. ದಾಳಿಯ ಬಗ್ಗೆ ಮೊದಲೇ ಅರಿತಿದ್ದ ಇಸ್ರೇಲ್, ಹೆಜ್ಬೊಲ್ಲಾಗೆ ದಿಟ್ಟ ಉತ್ತರ ನೀಡಿತ್ತು ಎನ್ನಲಾಗಿದ್ದು, ರಾಕೆಟ್​​ಗಳನ್ನು ಮಧ್ಯದಲ್ಲಿಯೇ ತಡೆದು ಅದನ್ನು ನಾಶ ಮಾಡಿದೆ ಎಂದು ವರದಿಯಾಗಿತ್ತು. ಇದೀಗ ಇಸ್ರೇಲ್​ ನೇರವಾಗಿ ಲೆಬನಾನಿನ ಮೇಲೆ ದಾಳಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

ದಕ್ಷಿಣ ಲೆಬನಾನ್​​ನ ಡೀರ್ ಸಿರಿಯಾನ್​​ನ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ 17 ವರ್ಷದ ಬಾಲಕ ಸಾವನ್ನಪ್ಪಿ 6 ಜನರು ಗಾಯಗೊಂಡಿದ್ದರು. ಇದಾದ ಬಳಿಕ ಹೆಜ್ಬೊಲ್ಲಾ, ಇಸ್ರೇಲ್ ಮೇಲೆ ರಾಕೆಟ್ ಉಡಾಯಿಸಿತ್ತು. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.

ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್​ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್​ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್​​ ಫೌದ್ ಶುಕರ್​ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್​ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.

Continue Reading

ದೇಶ

Sunita Williams: ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಸುನೀತಾ ವಿಲಿಯಮ್ಸ್;‌ ನಾಸಾ ಘೋಷಣೆ

Sunita Williams: ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ಧರಿಸಿದೆ” ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

VISTARANEWS.COM


on

Sunita Williams
Koo

ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಅವರು ವಾಪಾಸಾಗುವ ಬಗ್ಗೆ ಅಮೆರಿಕಸ ಬಾಹ್ಯಾಕಾಶ ಸಂಸ್ಥೆ(NASA) ಮಹತ್ವದ ಸುದ್ದಿಯೊಂದನ್ನು ಹೊರಹಾಕಿದೆ. ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.

ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ ಸುನೀತಾ ವಿಲಿಯಮ್ಸ್‌ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್‌ ಸ್ಟಾರ್‌ಲೈನರ್‌ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ” ಎಂಬುದಾಗಿ ನಾಸಾ ತಿಳಿಸಿದೆ.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಇದನ್ನೂ ಓದಿ: Sunita Williams: 2025ರವರೆಗೂ ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌; ನಾಸಾ ಘೋಷಣೆ

Continue Reading
Advertisement
Revathy Sampath
ಸಿನಿಮಾ8 mins ago

Revathy Sampath: ನಟಿಯ ಮೇಲೆ ಹಿರಿಯ ನಟನಿಂದ ಲೈಂಗಿಕ ದೌರ್ಜನ್ಯ; ಕೇರಳ ಚಿತ್ರರಂಗದಲ್ಲಿ ಮತ್ತೊಂದು ಕರಾಳ ವಿದ್ಯಮಾನ!

Health Expenditure
ಪ್ರಮುಖ ಸುದ್ದಿ17 mins ago

MLCs Health Expenditure: ಆರೋಗ್ಯಕ್ಕಾಗಿ ಲಕ್ಷ ಲಕ್ಷ ಕ್ಲೇಮ್; ಅತಿ ಹೆಚ್ಚು ಸರ್ಕಾರದ ಹಣ ಪಡೆದ ಎಂಎಲ್‌ಸಿಗಳು ಇವರೇ ನೋಡಿ!

Industrial City
ಬೆಂಗಳೂರು53 mins ago

Industrial City: ಹೊಸೂರಿನಲ್ಲಿ ಟಾಟಾ ಗ್ರೂಪ್‌ನಿಂದ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣಕ್ಕೆ ಸಿದ್ಧತೆ; ಬೆಂಗಳೂರಿನ ಐಟಿ ಸಿಟಿ ಪಟ್ಟಕ್ಕೆ ಕುತ್ತು?

Yuvraj Singh
ಕ್ರೀಡೆ59 mins ago

Yuvraj Singh: ಐಪಿಎಲ್​ ಕೋಚಿಂಗ್​ ನಡೆಸಲಿದ್ದಾರೆ ಯುವರಾಜ್​ ಸಿಂಗ್; ಯಾವ ತಂಡ?

Physical abuse attempted rape of school girl The public who beat up the man
ಚಿಕ್ಕೋಡಿ1 hour ago

Physical Abuse : ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಾಮುಕನನ್ನು ಥಳಿಸಿದ ಸಾರ್ವಜನಿಕರು

ಬೆಂಗಳೂರು ಗ್ರಾಮಾಂತರ2 hours ago

Love Case : ಪ್ರೀತಿಗೆ ಪೋಷಕರ ವಿರೋಧ; ಒಬ್ಬರಿಗೊಬ್ಬರು ತಬ್ಬಿಕೊಂಡು ನೇಣಿಗೆ ಶರಣಾದ ಪ್ರೇಮಿಗಳು

Cricket meets shooting
ಕ್ರೀಡೆ2 hours ago

Cricket Meets Shooting: ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್​ ಕೊಟ್ಟ ಸೂರ್ಯಕುಮಾರ್​-ಮನು ಭಾಕರ್​

Gold Rate Today
ಚಿನ್ನದ ದರ2 hours ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬಂಗಾರ ಖರೀದಿಯ ಮುನ್ನ ಬೆಲೆ ಚೆಕ್‌ ಮಾಡಿ

Actor darshan
ಸ್ಯಾಂಡಲ್ ವುಡ್2 hours ago

Actor Darshan : ಕೊಲೆ ಕೇಸ್‌ನಲ್ಲಿ ದರ್ಶನ್‌ ಮೂಲಕವೇ ಪವಿತ್ರಾಗೌಡ ಲಾಕ್‌; ಜತೆಗೆ ಇದ್ದ ಹುಡುಗರನ್ನು ನಂಬಿ ಕೆಟ್ಟೆ ಎಂದ ನಟ!

Western Ghats
ಕರ್ನಾಟಕ3 hours ago

Western Ghats: ಭೂ ಕುಸಿತ ಹಿನ್ನೆಲೆ; ಪಶ್ಚಿಮ ಘಟ್ಟಗಳಲ್ಲಿನ ರೆಸಾರ್ಟ್, ಹೋಮ್ ಸ್ಟೇ, ತೋಟ, ಬಡಾವಣೆ ತೆರವಿಗೆ ಸರ್ಕಾರದ ಆದೇಶ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ23 hours ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌