ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್ ಸೇನಾಧಿಕಾರಿ ಹತ್ಯೆ - Vistara News

ವಿದೇಶ

ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್ ಸೇನಾಧಿಕಾರಿ ಹತ್ಯೆ

Shot Dead: ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್, ಆರು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯ ಸಂಚುಕೋರ ಎನ್ನಲಾದ ಅಮೀರ್ ಹಮ್ಜಾ ನನ್ನು ಪಾಕಿಸ್ತಾನದ ಪಂಜಾಬ್‌ನ ಝೀಲಂ ಪ್ರದೇಶದ ಲಿಲ್ಲಾ ಇಂಟರ್‌ಜಾರ್ಜ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.  ಬ್ರಿಗೇಡಿಯರ್ ಹಮ್ಜಾ ಕಾರಿನಲ್ಲಿ ತನ್ನ ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ.

VISTARANEWS.COM


on

Shot Dead
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್, ಆರು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯ ಸಂಚುಕೋರ ಎನ್ನಲಾದ ಅಮೀರ್ ಹಮ್ಜಾ (Ameer Hamza)ನನ್ನು ಪಾಕಿಸ್ತಾನದ ಪಂಜಾಬ್‌ನ ಝೀಲಂ ಪ್ರದೇಶದ ಲಿಲ್ಲಾ ಇಂಟರ್‌ಜಾರ್ಜ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ (Shot Dead). ಬ್ರಿಗೇಡಿಯರ್ ಹಮ್ಜಾ ಕಾರಿನಲ್ಲಿ ತನ್ನ ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ಪತ್ನಿ ಮತ್ತು ಮಗಳು ಗಾಯಗೊಂಡಿದ್ದಾರೆ.

ದಾಳಿಕೋರರು ಯಾವುದೇ ಬೇಡಿಕೆಯಿಲ್ಲದೆ ಏಕಾಏಕಿ ಗುಂಡು ಹಾರಿಸಿದರು. ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿ ಎಂದು ವರದಿ ಹೇಳಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ʼʼಈ ಕೊಲೆ ಪ್ರಕರಣದ ತನಿಖೆ ಆರಂಭಿಸಿದ್ದೇವೆ. ಎಫ್‌ಐಆರ್‌ ದಾಖಲಿಸಲಾಗಿದೆ. ಇದು ಭಯೋತ್ಪಾದಕರ ದಾಳಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲʼʼ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ತುರ್ತು ಸೇವೆಗಳ ಅಕಾಡೆಮಿ 1122ರ ಮಾಜಿ ಡಿಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ಶಂಕಿತ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ ಎನ್ನಲಾಗಿದೆ. 2018ರ ಫೆಬ್ರವರಿ 10ರಂದು ನಡೆದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು (ಜೆಸಿಒ) ಮತ್ತು ಸೈನಿಕನ ತಂದೆ ಸೇರಿದಂತೆ ಐವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಆರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತು ಜನರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈಗ ಪ್ರತಿಕಾರ ತೀರಿಸಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

ಪಾಕಿಸ್ತಾನದಲ್ಲಿ ಮುಂದುವರಿದ ಅಪರಿಚಿತ ವ್ಯಕ್ತಿಗಳ ದಾಳಿ

ಭಾರತಕ್ಕೆ ದ್ರೋಹ ಬಗೆದು ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಅನೇಕರನ್ನು ಗುರಿಯಾಗಿಸಿ ಅವರನ್ನು ಹೊಡೆದುರುಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚಿನ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ವರದಿ ಮಾಡಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾ ಎಂಬಾತನನ್ನು ಏಪ್ರಿಲ್‌ 14ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಇನ್ನು ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಡಾನ್‌ ದಾವೂದ್‌ ಇಬ್ರಾಹಿಂ ಕೂಡ ಈ ಅಪರಿಚಿತರಿಗೆ ಹೆದರಿ ಮುಕ್ತವಾಗಿ ಹೊರಗೆ ಓಡಾಡುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಭಾರತದ ವಿರುದ್ಧ ಸಂಚು ರೂಪಿಸಿದವರಿಗೆ ಅಪರಿಚಿತ ವ್ಯಕ್ತಿಗಳು ನಡುಕ ಹುಟ್ಟಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Women Arrest: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

Women Arrest: ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಾಳೆ. ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ.

VISTARANEWS.COM


on

Women Arrest
Koo

ಜರ್ಮನಿ : 2020ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನ ಬಗ್ಗೆ ಅವಮಾನವೀಯ ಹೇಳಿಕೆ ನೀಡಿದ 20 ವರ್ಷದ ಜರ್ಮನ್ ಮಹಿಳೆಗೆ ಜೈಲು ಶಿಕ್ಷೆ (Women Arrest) ವಿಧಿಸಲಾಗಿದೆ ಹಾಗೂ ಮಹಿಳೆ ವಾರಾಂತ್ಯವನ್ನು ಜೈಲಿನಲ್ಲಿ ಕಳೆಯಲು ಆದೇಶಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 16-20 ವರ್ಷದೊಳಗಿನ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10 ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಳು. ಇದರಿಂದ ಆ ವ್ಯಕ್ತಿಗೆ ಹೊರಗಡೆ ಮುಖ ತೋರಿಸಲೂ ಕಷ್ಟವಾಗಿದೆ. ಆದರೆ ಆ ಮಹಿಳೆಗೂ ಸಂತ್ರಸ್ತ ಬಾಲಕಿ ಹಾಗೂ ಅತ್ಯಾಚಾರಿಗಳಿಗೂ ಯಾವುದೇ ಸಂಬಂಧವಿರಲಿಲ್ಲ.

ಅತ್ಯಾಚಾರ ನಡೆದ ಸ್ಥಳ

ಹಾಗಾಗಿ ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ. ಅದರಂತೆ ಆಕೆಗೆ ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಹ್ಯಾನೋಫರ್ ಸಂಡ್ ಯುವ ಬಂಧನ ಕೇಂದ್ರದಲ್ಲಿ ಬಂಧಿಯಾಗಿರಲು ಸೂಚಿಸಲಾಗಿದೆ.

ಹ್ಯಾಂಬರ್ಗ್‌ ಸಿಟಿ ಪಾರ್ಕ್‌

ಹಾಗೇ ಕೊಲೆ ಬೆದರಿಕೆಗಳು, ಹಿಂಸೆ ಮತ್ತು ಜನಾಂಗೀಯ ನಿಂದನೆ ಸೇರಿದಂತೆ ಅತ್ಯಾಚಾರಿಗಳ ಬಗ್ಗೆ ಇದೇ ರೀತಿಯ ಅವಮಾನವೀಯ ಹೇಳಿಕೆಗಳ ಕುರಿತು ಪೊಲೀಸರು ಇತರ 140 ಮಂದಿಯನ್ನು ತನಿಖೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ಶಿಕ್ಷೆಯಾದ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನ್ಯಾಯಾಧೀಶರ ವಿರುದ್ಧ ಕಿಡಿಕಾರಿದ್ದಾರೆ. ಅವರ ತೀರ್ಪನ್ನು ತಪ್ಪು ಎಂದು ದೂಷಿಸಿದ್ದಾರೆ. ಹಾಗೇ ಆಕೆ ಅತ್ಯಾಚಾರಿ ಯುವಕನಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆಯುವಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

ಸೆಪ್ಟೆಂಬರ್ 19, 2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ರಾತ್ರಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕುಡಿದ ಮತ್ತಿನಲ್ಲಿದ್ದ 10 ಮಂದಿ ಪುರುಷರು ಸೇರಿ ಆಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣವು ಪ್ರಪಂಚದಾದ್ಯಂತ ಆಘಾತವನ್ನುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ಅವರಲ್ಲಿ 19 ವರ್ಷದ ಯುವಕನಿಗೆ ಎರಡು ವರ್ಷ ಎಂಟು ತಿಂಗಳು ಜೈಲು ಶಿಕ್ಷೆ ವಿಧಿಸಿದರೆ ಒಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು, ಉಳಿದ ಎಂಟು ಮಂದಿಗೆ ಮುಕ್ತವಾಗಿ ನಡೆಯಲು ಅವಕಾಶ ನೀಡಲಾಗಿದೆ.

Continue Reading

ಕ್ರೈಂ

Indian Origin Doctor: ಅಮೆರಿಕದಲ್ಲಿ ಪತ್ನಿ ಮಕ್ಕಳ ಕೊಲೆಗೆ ಯತ್ನ; ಭಾರತೀಯ ಮೂಲದ ವೈದ್ಯನಿಗೆ ಜೈಲು ಶಿಕ್ಷೆ ಬದಲು ಮಾನಸಿಕ ಚಿಕಿತ್ಸೆ

Indian Origin Doctor: ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಾಜಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮೇಶ್‌ ಪಟೇಲ್‌, ಕಳೆದ ವರ್ಷ ತನ್ನ ಟೆಸ್ಲಾ ಕಾರಿನಲ್ಲಿ ಪತ್ನಿ ನೇಹಾ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಕರೆದೊಯ್ದು ಬಂಡೆಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಕಾರು 250 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿತ್ತು. ಆದರೆ ಚಮತ್ಕಾರ ಎಂಬಂತೆ ಇಡೀ ಕುಟುಂಬ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿತ್ತು. ಇದಾದ ಬಳಿಕ ಕೇಸ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ವೇಳೆ ತನ್ನ ಪತಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಳು. ಆದರೆ ಆತನ ವಿರುದ್ಧ ಮೊಕದ್ದಮೆ ಹೂಡಲು ನಿರಾಕರಿಸಿದ್ದಳು.

VISTARANEWS.COM


on

Indian Origin Doctor
Koo

ನ್ಯೂಯಾರ್ಕ್‌: ಕಾರು ಡಿಕ್ಕಿ ಹೊಡೆಸಿ ಪತ್ನಿ ಮತ್ತು ಇಬ್ಬರು ಮಕ್ಕಳ ಹತ್ಯೆಗೆ ಯತ್ನಿಸಿದ್ದ ಭಾರತೀಯ ಮೂಲದ ವೈದ್ಯ(Indian Origin Doctor)ನಿಗೆ ಜೈಲು ಶಿಕ್ಷೆ ನೀಡಲು ಕೋರ್ಟ್‌(Court) ನಿರಾಕರಿಸಿದ್ದು, ಆತನನ್ನು ಮಾನಸಿಕ ಚಿಕಿತ್ಸೆಗೊಳಪಡಿಸುವಂತೆ ಸೂಚನೆ ನೀಡಿದೆ. ಭಾರತೀಯ ಮೂಲದ ವೈದ್ಯ ಧರ್ಮೇಶ್‌ ಪಟೇಲ್‌(Dharmesh Patel) ಎಂಬಾತ ತನ್ನ ಪತ್ನಿ ಹಾಗೂ 7 ಮತ್ತು 4 ವರ್ಷ ಮಕ್ಕಳ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಎಲ್ಲರೂ ಅಪಾಯದಿಂದ ಪಾರಾಗಿದ್ದರು.

ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಾಜಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮೇಶ್‌ ಪಟೇಲ್‌, ಕಳೆದ ವರ್ಷ ತನ್ನ ಟೆಸ್ಲಾ ಕಾರಿನಲ್ಲಿ ಪತ್ನಿ ನೇಹಾ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಕರೆದೊಯ್ದು ಬಂಡೆಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಕಾರು 250 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿತ್ತು. ಆದರೆ ಚಮತ್ಕಾರ ಎಂಬಂತೆ ಇಡೀ ಕುಟುಂಬ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿತ್ತು. ಇದಾದ ಬಳಿಕ ಕೇಸ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ವೇಳೆ ತನ್ನ ಪತಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಳು. ಆದರೆ ಆತನ ವಿರುದ್ಧ ಮೊಕದ್ದಮೆ ಹೂಡಲು ನಿರಾಕರಿಸಿದ್ದಳು.

ಅದಾಗ್ಯೂ ಪ್ರಕರಣದ ಸಂಬಂಧ ಕೋರ್ಟ್‌ ವಿಚಾರಣೆ ಮುಂದುವರೆದಿದೆ. ಧರ್ಮೇಶ್‌ ತನ್ನ ಮಕ್ಕಳು ಮಾನವ ಕಳ್ಳಸಾಗಾಟದ ದಂಧೆಗೆ ಬಲಿಯಾಗುತ್ತಾರೆ ಎಂಬ ಭೀತಿಯಲ್ಲಿದ್ದ. ಇದೇ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ. ಆತ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಆತ ಸ್ಕಿಜೋಆಫೆಕ್ಟಿವ್ ಡಿಸಾರ್ಡರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಘಟನೆಗೂ ಒಂದು ವಾರ ಹಿಂದೆ ಹೆಜ್ಜೆ ಸಪ್ಪಳ ಕೇಳಿಸಿಕೊಂಡು ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದೇ ಭಾವಿಸಿ ಭೀತಿಗೊಳಗಾಗಿದ್ದ. ವಾಸ್ತವದಲ್ಲಿ ಇಲ್ಲದಿರುವ ವಿಚಾರವನ್ನು ಇದೇ ಎಂದು ಭಾವಿಸಿಕೊಳ್ಳುವಂತಹ ಮಾನಸಿಕ ಸಮಸ್ಯೆಗೆ ಅವರು ತುತ್ತಾಗಿದ್ದಾರೆ ಎಂದು ವೈದ್ಯರು ಕೋರ್ಟ್‌ಗೆ ತಿಳಿಸಿದರು.

ಆತನಿಗೆ ತನ್ನ ಮಕ್ಕಳು ಅಪಹರಣಕ್ಕೊಳಗಾಗುತ್ತಾರೆ. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬೆಲ್ಲಾ ಕಲ್ಪನೆ ಮಾಡಿಕೊಂಡು ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಕೋರ್ಟ್‌ಗೆ ವೈದ್ಯರು ಮನವರಿಕೆ ಮಾಡಿಕೊಟ್ಟರು. ಈ ಎಲ್ಲಾ ವಾದವನ್ನು ಪರಿಗಣಿಸಿದ ಕೋರ್ಟ್‌ ಧರ್ಮೇಂದ್ರ ಪಟೇಲ್‌ನನ್ನು ತಕ್ಷಣ ಮಾನಸಿಕ ಚಿಕಿತ್ಸೆಗೊಳಪಡಿಸಬೇಕು. ಮಾನಸಿಕ ಸ್ಥಿಮಿತ ಸರಿ ಇರದಿರುವ ವ್ಯಕ್ತಿಯಿಂದ ಆಗಿರುವ ಅಪರಾಧಕ್ಕೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಬದಲಾಗಿ ಆತನಿಗೆ ಚಿಕಿತ್ಸೆ ನೀಡುವುದೇ ಸೂಕ್ತ. ಆತನನ್ನು ಜಿಪಿಎಸ್‌ ಮೂಲಕ ಮೇಲ್ವಿಚಾರಣೆ ಮಾಡುತ್ತಾ, ವಾರಕ್ಕೆ ಒಂದು ಬಾರಿ ಆತನ ಮಾನಸಿಕ ಸ್ಥಿತಿಗತಿ, ಚಿಕಿತ್ಸೆ ಬಗ್ಗೆ ಕೋರ್ಟ್‌ಗೆ ವರದಿ ನೀಡಬೇಕು. ಆತನಿಗೆ ದೇಶ ಬಿಟ್ಟು ಹೋಗಲು ಅನುಮತಿ ನಿರಾಕರಿಸಲಾಗಿದೆ. ಅಲ್ಲದೇ ಆತನ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಪಾಸ್‌ಪೋರ್ಟನ್ನು ಅಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ:Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Continue Reading

ಪ್ರಮುಖ ಸುದ್ದಿ

Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ

Sam Pitroda: ಲೋಕಸಭೆ ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ, ಭಾರಿ ವಿವಾದಕ್ಕೆ ಗುರಿಯಾಗಿ, ಕೊನೆಗೆ ಸ್ಯಾಮ್‌ ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಈಗ ಅವರನ್ನು ಮತ್ತೆ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ. “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಇದ್ದಾರೆ” ಎಂಬುದಾಗಿ ಸ್ಯಾಮ್‌ ಪಿತ್ರೋಡಾ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

VISTARANEWS.COM


on

Sam Pitroda
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಭಾರತೀಯರ ಬಣ್ಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ರಾಜೀನಾಮೆ ನೀಡಿದ್ದ ಸ್ಯಾಮ್‌ ಪಿತ್ರೋಡಾ (Sam Pitroda) ಅವರನ್ನು ಮತ್ತೆ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ (Indian Overseas Congress) ನೇಮಕ ಮಾಡಲಾಗಿದೆ. “ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಸ್ಯಾಮ್‌ ಪಿತ್ರೋಡಾ ಅವರನ್ನು ಮರು ನೇಮಕ ಮಾಡಿ ಎಐಸಿಸಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ತತ್‌ಕ್ಷಣದಿಂದಲೇ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ” ಎಂಬುದಾಗಿ ಕಾಂಗ್ರೆಸ್‌ ಪ್ರಕಟಣೆ ತಿಳಿಸಿದೆ.

“ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಇದ್ದಾರೆ” ಎಂಬುದಾಗಿ ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಸ್ಯಾಮ್‌ ಪಿತ್ರೋಡಾ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಿಜೆಪಿಯ ಹಲವು ನಾಯಕರು ಸ್ಯಾಮ್‌ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಸ್ಯಾಮ್‌ ಪಿತ್ರೋಡಾ ಅವರು ಮೇ 8ರಂದು ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. “ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸ್ಯಾಮ್‌ ಪಿತ್ರೋಡಾ ನಿರ್ಧರಿಸಿದ್ದಾರೆ. ಇದು ಅವರು ಸ್ವ ಇಚ್ಛೆಯಿಂದ ತೆಗೆದುಕೊಂಡಿರುವ ತೀರ್ಮಾನವಾಗಿದೆ. ಅವರ ನಿರ್ಧಾರವನ್ನು ಕಾಂಗ್ರೆಸ್‌ ಅಧ್ಯಕ್ಷರು ಸ್ವಾಗತಿಸಿದ್ದಾರೆ” ಎಂಬುದಾಗಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದರು.

ಪಿತ್ರೋಡಾ ಹೇಳಿದ್ದೇನು?

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ಭಾರತದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿದ ಸ್ಯಾಮ್‌ ಪಿತ್ರೋಡಾ, ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.

ತಿರುಗೇಟು ಕೊಟ್ಟಿದ್ದ ಮೋದಿ

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ಯಾಮ್‌ ಪಿತ್ರೋಡಾ ಅವರಿಗೆ ತಿರುಗೇಟು ನೀಡಿದ್ದರು. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ (ರಾಹುಲ್‌ ಗಾಂಧಿ) ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ” ಎಂದು ಕುಟುಕಿದ್ದರು.

ಇದನ್ನೂ ಓದಿ: ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!

Continue Reading

ವಿದೇಶ

Kenya Violence: ಕೀನ್ಯಾದಲ್ಲಿ ಭುಗಿಲೆದ್ದ ಹಿಂಸಾಚಾರ; ಭಾರತೀಯರಿಗೆ ಎಚ್ಚರಿಕೆ ನೀಡಿದ ಹೈಕಮಿಷನ್

Kenya Violence: ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸುವ ವಿವಾದಾತ್ಮಕ ಮಸೂದೆಯನ್ನು ಕೀನ್ಯಾ ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ದೇಶದಲ್ಲಿ ಹಿಂಸೆ ಭುಗಿಲೆದ್ದಿದ್ದು, ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯರಿಗೆ ಎಚ್ಚರಿಕೆ ನೀಡಿದೆ. ಕ್ಷಣ ಕ್ಷಣದ ಮಾಹಿತಿಗಾಗಿ ಸ್ಥಳೀಯ ನ್ಯೂಸ್‌ ಚಾನಲ್‌ ನೋಡುವಂತೆ ಮತ್ತು ವೆಬ್‌ಸೈಟ್‌, ಸೋಷಿಯಲ್‌ ಮೀಡಿಯಾ ಗಮನಿಸುವಂತೆ ಸಲಹೆ ನೀಡಿದೆ. ಸುಮಾರು 20,000 ಭಾರತೀಯರು ಪ್ರಸ್ತುತ ಕೀನ್ಯಾದಲ್ಲಿ ವಾಸಿಸುತ್ತಿದ್ದಾರೆ.

VISTARANEWS.COM


on

Kenya Violence
Koo

ನೈರೋಬಿ: ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸುವ ವಿವಾದಾತ್ಮಕ ಮಸೂದೆಯನ್ನು ಕೀನ್ಯಾ ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ದೇಶದಲ್ಲಿ ಹಿಂಸೆ ಭುಗಿಲೆದ್ದಿದ್ದು (Kenya Violence), ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್ (Indian high commission) ಭಾರತೀಯರಿಗೆ ಎಚ್ಚರಿಕೆ ನೀಡಿದೆ.

“ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೀನ್ಯಾದಲ್ಲಿರುವ ಎಲ್ಲ ಭಾರತೀಯರಿಗೆ ಅತ್ಯಂತ ಎಚ್ಚರಿಕೆ ವಹಿಸಲು ಸೂಚಿಸುತ್ತಿದ್ದೇವೆ. ಅನಿವಾರ್ಯವಲ್ಲದ ಹೊರತಾಗಿ ಯಾರೂ ಓಡಾಡಬೇಡಿ. ಪರಿಸ್ಥಿತಿ ತಿಳಿಯಾಗುವವರೆಗೆ ಪ್ರತಿಭಟನೆ ಮತ್ತು ಹಿಂಸಾಚಾರದಿಂದ ಬಾಧಿತವಾದ ಪ್ರದೇಶಗಳಿಂದ ದೂರವಿರಿʼʼ ಎಂದು ಹೈ ಕಮಿಷನ್ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಭಾರತೀಯರಿಗೆ ಮನವಿ ಮಾಡಿದೆ.

ಜತೆಗೆ ಕ್ಷಣ ಕ್ಷಣದ ಮಾಹಿತಿಗಾಗಿ ಸ್ಥಳೀಯ ನ್ಯೂಸ್‌ ಚಾನಲ್‌ ನೋಡುವಂತೆ ಮತ್ತು ವೆಬ್‌ಸೈಟ್‌, ಸೋಷಿಯಲ್‌ ಮೀಡಿಯಾ ಗಮನಿಸುವಂತೆ ಸಲಹೆ ನೀಡಿದೆ. ಸುಮಾರು 20,000 ಭಾರತೀಯರು ಪ್ರಸ್ತುತ ಕೀನ್ಯಾದಲ್ಲಿ ವಾಸವಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ನೈರೋಬಿಯ ಸಂಸತ್ ಕಟ್ಟಡಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಒಂದು ದಿನದ ನಂತರ ಹೈಕಮಿಷನ್ ಈ ಹೇಳಿಕೆ ನೀಡಿದೆ. ರೊಚ್ಚಿಗೆದ್ದ ಪ್ರತಿಭಟನಾಕಾರರು ಸಂಸತ್ ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ್ದರು. ಅಶ್ರವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಅವರನ್ನು ಚದುರಿಸಲಾಯಿತು. ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ವಿಲಿಯಂ ರುಟೊ ಎಚ್ಚರಿಕೆ ನೀಡಿದ್ದಾರೆ.

13 ಮಂದಿ ಸಾವು

ಇನ್ನು ಕೀನ್ಯಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 13 ಮಂದಿ ಬಲಿಯಾಗಿದ್ದಾರೆ. ಮಂಗಳವಾರ ಕೀನ್ಯಾ ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಶ್ರುವಾಯು ಮತ್ತು ಜಲ ಫಿರಂಗಿ ಬಳಸಿ ಜನರನ್ನು ಚದುರಿಸಲು ವಿಫಲವಾದ ನಂತರ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಿದ್ದರು.

ಕೋವಿಡ್-19 ಸಾಂಕ್ರಾಮಿಕ ರೋಗ, ಉಕ್ರೇನ್‌ನಲ್ಲಿನ ಯುದ್ಧ, ಸತತ ಎರಡು ವರ್ಷಗಳ ಬರಗಾಲ ಮತ್ತು ಕರೆನ್ಸಿಯ ಮೌಲ್ಯ ಕುಸಿತದಿಂದಾಗಿ ಉಂಟಾದ ಹಲವಾರು ಆರ್ಥಿಕ ಆಘಾತಗಳನ್ನು ನಿಭಾಯಿಸಲು ಸಾಧ್ಯವಾಗದೆ ಕೀನ್ಯಾದವರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪ ಅವರನ್ನು ರೊಚ್ಚಿಗೆಬ್ಬಿಸಿದ್ದು, ಅಧ್ಯಕ್ಷ ವಿಲಿಯಂ ರುಟೊ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರವು ಈಗಾಗಲೇ ಕೆಲವು ರಿಯಾಯಿತಿಗಳನ್ನು ನೀಡಿದ್ದು, ಬ್ರೆಡ್, ಅಡುಗೆ ಎಣ್ಣೆ, ಕಾರು ಮಾಲೀಕತ್ವ ಮತ್ತು ಹಣಕಾಸಿನ ವಹಿವಾಟುಗಳ ಮೇಲಿನ ಪ್ರಸ್ತಾವಿತ ಹೊಸ ತೆರಿಗೆಗಳನ್ನು ರದ್ದುಗೊಳಿಸುವ ಭರವಸೆ ನೀಡಿದೆ. ಅದಾಗ್ಯೂ ಪ್ರತಿಭಟನೆಯ ಕಿಚ್ಚು ಕಡಿಮೆಯಾಗಿಲ್ಲ.

ಇದನ್ನೂ ಓದಿ: Vijay Mallya: ದಿವಾಳಿಯೆಂದು ಪರಾರಿಯಾಗಿದ್ದ ವಿಜಯ್ ಮಲ್ಯಗೆ ಲಂಡನ್‌ನಲ್ಲಿದೆ 117 ಕೋಟಿಯ ಬಂಗಲೆ!

”ಕೀನ್ಯಾದಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಉಂಟಾದ ಭದ್ರತಾ ತುರ್ತುಸ್ಥಿತಿಯನ್ನು ನಿಯಂತ್ರಿಸಲು ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆʼʼ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಅಡೆನ್ ಬೇರ್ ಡ್ಯುಯಲ್ ತಿಳಿಸಿದ್ದಾರೆ. ಹಿಂಸಾಚಾರದ ಬಗ್ಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಕಳವಳ ವ್ಯಕ್ತಪಡಿಸಿವೆ. ಕೆನಡಾ, ಜರ್ಮನಿ, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ 13 ದೇಶಗಳ ರಾಯಭಾರ ಕಚೇರಿಗಳು ಮತ್ತು ರಾಜತಾಂತ್ರಿಕ ನಿಯೋಗಗಳು ಜಂಟಿ ಹೇಳಿಕೆಯಲ್ಲಿ ಆಘಾತ ವ್ಯಕ್ತಪಡಿಸಿವೆ.

Continue Reading
Advertisement
IND vs ENG
ಕ್ರೀಡೆ8 mins ago

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

Parliament Sessions
ದೇಶ20 mins ago

Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Bengaluru Metro
Latest21 mins ago

Bengaluru Metro: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

Nitin Gadkari
ಪ್ರಮುಖ ಸುದ್ದಿ25 mins ago

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

IND vs ENG Semi Final
ಕ್ರೀಡೆ41 mins ago

IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

Droupadi Murmu
ದೇಶ53 mins ago

Droupadi Murmu: ನೀಟ್‌ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

Fazalhaq Farooqi
ಕ್ರೀಡೆ54 mins ago

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Vande Bharath Train
Latest57 mins ago

Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

Actor Darshan
ಸಿನಿಮಾ1 hour ago

Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

cm siddaramaiah price hikes
ಕರ್ನಾಟಕ2 hours ago

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌