ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಪರಾರಿಯಾಗಲು ಬಳಸಿದ ವ್ಯಾನ್‌ ಪತ್ತೆ - Vistara News

ಪ್ರಮುಖ ಸುದ್ದಿ

ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಪರಾರಿಯಾಗಲು ಬಳಸಿದ ವ್ಯಾನ್‌ ಪತ್ತೆ

ತಾಲಿಬಾನ್‌ ಸಂಘಟನೆಯ ಸಂಸ್ಥಾಪಕ ಮುಲ್ಲಾ ಒಮರ್‌, ಅಮೆರಿಕದ ಸೈನ್ಯದ ಕೈಯಿಂದ ತಪ್ಪಿಸಿಕೊಳ್ಳಲು ಬಳಸಿದ್ದ ಟೊಯೊಟಾ ವ್ಯಾಗನ್‌ ಕಾರು ನೆಲದಡಿ ಪತ್ತೆಯಾಗಿದೆ.

VISTARANEWS.COM


on

mullah omar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಬೂಲ್:‌ ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಅಮೆರಿಕ ಸೈನ್ಯದ ಕೈಯಿಂದ ತಪ್ಪಿಸಿಕೊಂಡು ಹೋಗಲು ಬಳಸಿದ್ದ ವಾಹನವನ್ನು ಪತ್ತೆ ಹಚ್ಚಲಾಗಿದ್ದು, ನೆಲದಡಿಯಿಂದ ಅಗೆದು ತೆಗೆಯಲಾಗಿದೆ.

ಝಬುಲ್‌ ಮರಳುಗಾಡು ಪ್ರಾಂತ್ಯದಲ್ಲಿ ಈ ವಾಹನವನ್ನು ನೆಲದಡಿಯಿಂದ ತೆಗೆಯಲಾಗಿದೆ. ಇದು ಟೊಯೊಟಾ ವ್ಯಾಗನ್‌ ಆಗಿದ್ದು, 2001ರಲ್ಲಿ ಅಫ್ಘಾನಿಸ್ತಾನ ಅಮೆರಿಕದ ಕೈವಶವಾದ ಸಂದರ್ಭದಲ್ಲಿ ಕಂದಹಾರ್‌ನಿಂದ ಝಬುಲ್ ಪ್ರಾಂತ್ಯಕ್ಕೆ ಪರಾರಿಯಾಗಲು ಬಳಸಿದ್ದ ಎಂದು ಗೊತ್ತಾಗಿದೆ. ಈ ವಿಚಾರವನ್ನು ಪ್ರಯಾಣಿಸಲು ಬಳಸಿದ್ದ ಶಾಂತಿ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಮುಹಮ್ಮದ್ ಜಲಾಲ್ ಎಂಬ ಅಫ್ಘಾನಿಸ್ತಾನ ನಿವಾಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಲ್ಲಾ ಮಹಮ್ಮದ್ ಒಮರ್ ಮುಜಾಹಿದ್ 1980ರ ದಶಕದಲ್ಲಿ, ಸೋವಿಯತ್ ಒಕ್ಕೂಟ ವಿರುದ್ಧದ ಯುದ್ಧದಲ್ಲಿ ಅಫ್ಘಾನ್ ಮುಜಾಹಿದ್ದೀನ್‌ಗೆ ಸೇರಿ ಗೆರಿಲ್ಲಾ ಯುದ್ಧಕಲೆ ಕಲಿತಿದ್ದ. 1994ರಲ್ಲಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್ (ತಾಲಿಬಾನ್) ಅನ್ನು ಸ್ಥಾಪಿಸಿದ.

1995ರ ಹೊತ್ತಿಗೆ ದಕ್ಷಿಣ ಮತ್ತು ಪಶ್ಚಿಮ ಅಫ್ಘಾನಿಸ್ತಾನದ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡ. ಸೆಪ್ಟೆಂಬರ್ 1996ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ಒಮರ್ ಅನ್ನು ಅಫ್ಘಾನಿಸ್ತಾನದ ಮುಖ್ಯಸ್ಥ ಎಂದು ಘೋಷಿಸಲಾಯಿತು.

ಅಫ್ಘಾನಿಸ್ತಾನದ ಮೇಲೆ 2001ರಲ್ಲಿ ಅಮೆರಿಕದ ಆಕ್ರಮಣದ ನಂತರ, ಒಮರ್ ಕಂದಹಾರ್‌ನಿಂದ ಝಬುಲ್ ಪ್ರಾಂತ್ಯಕ್ಕೆ ಓಡಿಹೋದ. ಅವನ ಪತ್ನಿಯರು ಪಾಕಿಸ್ತಾನಕ್ಕೆ ತೆರಳಿದರು. ಒಮರ್‌ನ ತಲೆಗೆ ಅಮೆರಿಕ 1 ಕೋಟಿ ಡಾಲರ್‌ ಬಹುಮಾನವನ್ನು ಘೋಷಿಸಿತ್ತು. ಆದರೂ ಆತ ಝಬುಲ್‌ನಲ್ಲಿ ಅಮೆರಿಕದ ಭದ್ರತಾ ನೆಲೆಗಳಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಬಹುಕಾಲ ಅಡಗಿಕೊಂಡಿದ್ದ!

ಅಮೆರಿಕದ ಸಶಸ್ತ್ರ ಪಡೆಗಳು ತನ್ನ ಅಡಗುತಾಣದಿಂದ ಕೆಲವೇ ನೂರು ಮೀಟರ್‌ಗಳ ದೂರದಲ್ಲಿ ಇನ್ನಷ್ಟು ವಿಸ್ತರಿಸಿದ ಸೇನಾನೆಲೆ ನಿರ್ಮಿಸಲು ಪ್ರಾರಂಭಿಸಿದಾಗ ಈತ ಅಲ್ಲಿಂದ ಹೊರಟು ಖಲಾತ್‌ನ ಆಗ್ನೇಯದಲ್ಲಿರುವ ಶಿಂಕೇ ಜಿಲ್ಲೆಯ ನದಿಯ ಪಕ್ಕದ ಕುಗ್ರಾಮದ ಗುಡಿಸಲಿಗೆ ಸ್ಥಳಾಂತರಗೊಂಡಿದ್ದ. 2013ರಲ್ಲಿ ಸಾಯುವವರೆಗೂ ತಾಲಿಬಾನ್‌ನ ನಾಯಕನಾಗಿದ್ದ. ಆತನ ಮರಣವನ್ನು ಜುಲೈ 2015ರವರೆಗೆ ಮರೆಮಾಚಲಾಗಿತ್ತು. ತಾಲಿಬಾನ್ ಆತನ ಹೆಸರಿನಲ್ಲಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿತು.

ಇದನ್ನೂ ಓದಿ: ವಿಸ್ತಾರ Explainer: ಭಾರತಕ್ಕೂ ಕಾಲಿಟ್ಟಿತೇ ISIS ಶಿರಚ್ಛೇದ ಕ್ರೌರ್ಯ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Powerful Bikes: 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ.

VISTARANEWS.COM


on

Powerful Bike
Koo

ಬೆಂಗಳೂರು: ಪರ್ಫಾಮೆನ್ಸ್​ ಬೈಕ್​ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್​ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್​ಶೋರೂಮ್​) ಬೆಲೆಹೊಂದಿರುವ ಕೆಲವು ಬೈಕ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)

ಕೆಟಿಎಂ ಡ್ಯೂಕ್ ಪವರ್​ಫುಲ್​ ಬೈಕ್​ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್​ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.

ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)

ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್​ನಂಥ ಸುರಕ್ಷತಾ ಫೀಚರ್​ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್​ಗಳು ದೊರೆಯುತ್ತವೆ.

ಬಜಾಜ್ ಡೊಮಿನಾರ್ 400 (40 ಎಚ್​ಪಿ)


ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್​​ನ ಪ್ಲಸ್​ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.

ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್​ಪಿ)

ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್​ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.

ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ಟ್ರಯಂಫ್ ಸ್ಪೀಡ್ 400 (40hp)

ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.

Continue Reading

ಶಿವಮೊಗ್ಗ

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Kannada stone inscription: ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

VISTARANEWS.COM


on

Kannada stone inscription found in Kashi Use as a foot bridge at the ghat
Koo

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಶಿಯಲ್ಲಿ (Kashi Vishwanath Temple) ಕನ್ನಡದ ಶಿಲಾ ಶಾಸನ (Kannada stone inscription) ಪತ್ತೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಶಾಸನ ಎಂದು ಗೊತ್ತಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದಿದ್ದ ಕೆಳದಿ ಸಂಸ್ಥಾನವು ಬರೆದಿದ್ದ ಶಿಲಾ ಶಾಸನ ಇದಾಗಿದೆ. ವಿಜಯನಗರದ ಸಾಮ್ರಾಜ್ಯಕ್ಕೆ ಕೆಳದಿಯ ಅರಸರು ಸಾಮಂತರಾಗಿದ್ದರು.

ಕಪಿಲಾ ಘಾಟ್ ಬಳಿ ಶಾಸನ ಪತ್ತೆ

ಕಾಶಿಯ ಕಪಿಲಾ ಘಾಟ್ ಬಳಿ ಶಾಸನ ಪತ್ತೆಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಶಾಸನ ಕಂಡುಬಂದಿದೆ. ಘಾಟ್‌ನಲ್ಲಿ ಪತ್ತೆಯಾದ ಈ ಶಾಸನಗಳಲ್ಲಿ ಕೆಲವು ಕಾಲು ಸಂಕವಾಗಿ ಬಳಕೆಯಾಗುತ್ತಿದೆ. ಮತ್ತೆ ಕೆಲವು ಬಟ್ಟೆ ತೊಳೆಯಲು ಬಳಕೆಯಾಗುತ್ತಿದೆ. ಈ ಮೂಲಕ ಅಪರೂಪದ ಶಿಲಾಶಾಸನವೊಂದು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗೊತ್ತಾಗಿದೆ.

ಕನ್ನಡದಲ್ಲಿ ಕೆತ್ತಲಾಗಿರುವ ಶಾಸನ

ಶಾಸನದಲ್ಲಿ ಕೆಳದಿ ಅರಸ ಶಿವಪ್ಪ ನಾಯಕನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು 16ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತಿದೆ. ಶಾಸನ ಕಾಲುಸಂಕವಾಗಿ ಬಳಕೆಯಾಗುತ್ತಿರುವುದಕ್ಕೆ ಶಾಸನ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಗರದ ವಕೀಲ ಹಾಗೂ ಶಾಸನ ಪ್ರಿಯ ಪ್ರವೀಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸನ ರಕ್ಷಣೆ ಆಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಶಾಸನ ರಕ್ಷಣೆಗೆ ಮುಂದಾಗಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿ ಶಾಸನವನ್ನು ರಕ್ಷಿಸಬೇಕು. ಕೇಂದ್ರ ಪುರಾತತ್ವ ಇಲಾಖೆಯು ತಕ್ಷಣವೇ ಶಾಸನ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

ಇನ್ನು ಈ ಶಾಸನವು ಕನ್ನಡ ಹಾಗೂ ಪರ್ಶಿಯನ್ ಭಾಷೆಯಲ್ಲಿದ್ದು, ಎರಡೂ ಶಾಸನವನ್ನು ರಕ್ಷಿಸಬೇಕು, ಇದು ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇದರ ರಕ್ಷಣೆಯ ಅವಶ್ಯಕತೆ ಇದೆ ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Hyderabadi Biryani :: ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

VISTARANEWS.COM


on

Hyderabadi Biryani
Koo

ಹೈದರಾಬಾದ್​​: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅವರ ಮಗಳು ಗ್ರೇಸ್ ಹೈದರಾಬಾದ್​ನಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾ ಮೋಜಿನ ದಿನವನ್ನು ಕಳೆಯುತ್ತಿದ್ದಾರೆ. ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಗ್ರೇಸ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್​​ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್​ಗೆ ಭೇಟಿ ನೀಡಿ ಮತ್ತು ಬಿರಿಯಾನಿ (Hyderabadi Biryani) ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್​​ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್​ಆರ್​ಎಚ್ ತಂಡದ ​​ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್​ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್​​ಗೆ ಪರಿಚಯಿಸಿದರು.

“ಹೈದರಾಬಾದ್ನಲ್ಲಿ ಬಿರಿಯಾನಿ ಒಂದು ಭಾವನೆ! @SunRisers ಅಭಿಮಾನಿಗಳೊಂದಿಗೆ ಅಪ್ರತಿಮ ಹೈದರಾಬಾದಿ ಬಿರಿಯಾನಿ ತಿನ್ನುವಾಗ ಐತಿಹಾಸಿಕ ಹೈದರಾಬಾದ್​ ನಗರದ ಸಾರವನ್ನು #GraceHayden ಅನುಭವಿಸಿದ್ದಾರೆ” ಎಂದು ಸ್ಟಾರ್ ಸ್ಪೋರ್ಟ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ವೈರಲ್ ಆಗಿರುವ ವೀಡಿಯೊಗೆ ಶೀರ್ಷಿಕೆ ನೀಡಿದೆ.

ಕೆಲವು ವಾರಗಳ ಹಿಂದೆ, ಎಸ್ಆರ್​ಎಚ್​ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ಬಿರಿಯಾನಿ ಸವಿದಿದ್ದರು. ಕಮಿನ್ಸ್ ಮತ್ತು ಅವರ ಕುಟುಂಬ ಹೈದರಾಬಾದ್​​ನ ಬಂಜಾರಾ ಹಿಲ್ಸ್​ನಲ್ಲಿರುವ ಸದರ್ನ್ ಮಿರ್ಚಿ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದರು.

ಗುರುವಾರ, ಕಮಿನ್ಸ್ ನೇತೃತ್ವದ ಎಸ್ಆರ್​ಎಚ್ಗು ಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ರದ್ದಾದ ನಂತರ ಐಪಿಎಲ್ 2024ರ ಪ್ಲೇಆಫ್​ನಲ್ಲಿ ಸ್ಥಾನ ಪಡೆದ ಮೂರನೇ ತಂಡ ಎನಿಸಿಕೊಂಡಿತು.

ಇದನ್ನೂ ಓದಿ: Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

ಎಸ್ಆರ್​ಎಚ್​​ ಈಗಾಗಲೇ ಅರ್ಹತೆ ಪಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಜತೆ ಪ್ಲೇಆಫ್​ ಪಟ್ಟಿಯಲ್ಲಿ ಸೇರಿಕೊಂಡಿದೆ. ನಾಲ್ಕನೇ ಮತ್ತು ಅಂತಿಮ ಪ್ಲೇಆಫ್ ಸ್ಥಾನ ಶನಿವಾರ ಸಂಜೆ ನಿರ್ಧಾರಗೊಳ್ಳಲಿದೆ. ಸಿಎಸ್ಕೆ, ಆರ್​ಸಿಬಿ ತಂಡಗಳು ಪ್ರಸ್ತುತ ಸ್ಪರ್ಧೆಯಲ್ಲಿವೆ.

Continue Reading

ಉದ್ಯೋಗ

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job alert: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕೊನೆಯ ದಿನ ಮೇ 24. ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದವರು ಈ ಸುವರ್ಣಾವಕಾಶ ಬಳಸಿಕೊಳ್ಳಿ.

VISTARANEWS.COM


on

Job Alert
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (India Post Payments Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IPPB Recruitment 2024). ಇನ್ಫರ್ಮೇಷನ್‌ ಟೆಕ್ನಾಲಜಿ ಎಕ್ಸಿಕ್ಯೂಟಿವ್‌ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗದ ಸ್ಥಳ: ಚೆನ್ನೈ, ಮುಂಬೈ, ದೆಹಲಿ. ಬಿಸಿಎ, ಬಿಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 24 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌ (ಅಸೋಸಿಯೇಟ್‌ ಕನ್ಸಲ್‍ಟೆಂಟ್‍) (Executive (Associate Consultant)- 28, ಎಕ್ಸಿಕ್ಯೂಟಿವ್‌ (ಕನ್ಸಲ್‍ಟೆಂಟ್‍) (Executive (Consultant) – 21 ಮತ್ತು ಎಕ್ಸಿಕ್ಯೂಟಿವ್‌ (ಸೀನಿಯರ್ ಕನ್ಸಲ್‍ಟೆಂಟ್‍)‌ (Executive (Senior Consultant) – 5 ಹುದ್ದೆಗಳಿವೆ. IPPB official notification ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಮತ್ತು ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.

IPPB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಮೊದಲು ನಿಮ್ಮ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ತೆರೆದುಕೊಳ್ಳುವ IPPB Online Application Form ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ, ಸಹಿ ಇತ್ಯಾದಿಯನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

Continue Reading
Advertisement
Pavithra Jayaram Chandrakant are just friends, daughter said
ಕಿರುತೆರೆ5 mins ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ7 mins ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Road Accident
ಶಿವಮೊಗ್ಗ18 mins ago

Road Accident : ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Kannada stone inscription found in Kashi Use as a foot bridge at the ghat
ಶಿವಮೊಗ್ಗ25 mins ago

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Road Accident
ಬೆಂಗಳೂರು ಗ್ರಾಮಾಂತರ48 mins ago

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Hyderabadi Biryani
ಪ್ರಮುಖ ಸುದ್ದಿ1 hour ago

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Job Alert
ಉದ್ಯೋಗ1 hour ago

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Sangeetha Sringeri Wore Lioness Logo On Her Belt
ಬಿಗ್ ಬಾಸ್1 hour ago

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

swati maliwal bibhav kumar
ಪ್ರಮುಖ ಸುದ್ದಿ1 hour ago

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

PM Modi wishes HD Deve Gowda on his 93rd birthday Jackfruit gift to former PM
ರಾಜಕೀಯ1 hour ago

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ18 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌