Viral video: ಗುದ್ದಾಟ, ಕಿತ್ತಾಟ, ರಣರಂಪ: ಇದು ಬಾಕ್ಸಿಂಗ್‌ ಕಣವಲ್ಲ, ಮಾಲ್ದೀವ್ಸ್‌ ಪಾರ್ಲಿಮೆಂಟ್!‌ - Vistara News

ವಿದೇಶ

Viral video: ಗುದ್ದಾಟ, ಕಿತ್ತಾಟ, ರಣರಂಪ: ಇದು ಬಾಕ್ಸಿಂಗ್‌ ಕಣವಲ್ಲ, ಮಾಲ್ದೀವ್ಸ್‌ ಪಾರ್ಲಿಮೆಂಟ್!‌

ಇದೀಗ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ (Viral video), ಮಾಲ್ದೀವ್ಸ್‌ ಸಂಸತ್ತಿನಲ್ಲಿ (Maldives Parliament) ನಡೆದ ಕೋಲಾಹಲದ ದೃಶ್ಯಗಳು ಬಿತ್ತರವಾಗುತ್ತಿದ್ದು, ನೋಡುಗರಲ್ಲಿ ನಗೆ ಉಕ್ಕಿಸುವಂತಿದೆ.

VISTARANEWS.COM


on

Maldives Parliament
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಲೆ: ಭಾರತದ ವಿರುದ್ಧ ಮುಸುಕಿನ ಸಮರ ಸಾರಿದ್ದ ಮಾಲ್ದೀವ್ಸ್‌ ಅಧ್ಯಕ್ಷ (Maldives president) ಮೊಹಮ್ಮದ್‌ ಮುಯಿಜು (Mohamed Muizzu) ಅವರಿಗೆ ಅವರ ತವರಿನಲ್ಲೇ ಮುಜುಗರ ತರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಇದೀಗ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ (Viral video), ಮಾಲ್ದೀವ್ಸ್‌ ಸಂಸತ್ತಿನಲ್ಲಿ (Maldives Parliament) ನಡೆದ ಕೋಲಾಹಲದ ದೃಶ್ಯಗಳು ಬಿತ್ತರವಾಗುತ್ತಿದ್ದು, ನೋಡುಗರಲ್ಲಿ ನಗೆ ಉಕ್ಕಿಸುವಂತಿದೆ.

ಈ ವಿಡಿಯೋದಲ್ಲಿ ಸೂಟ್‌ ಧರಿಸಿಕೊಂಡ ಎಂಪಿಗಳು ಒಬ್ಬರಿನ್ನೊಬ್ಬರ ಮೇಲೆ ಬಿದ್ದು ಹುಚ್ಚರಂತೆ ಗುದ್ದಾಡಿಕೊಂಡಿದ್ದಾರೆ. ಪರಸ್ಪರ ಪಂಚ್‌, ಕಿಕ್‌ ಮಾಡಿ, ತಳ್ಳಾಡಿಕೊಂಡು, ಉರುಳಿಬಿದ್ದಿದ್ದಾರೆ. ನೋಡುಗರು ಇದೇನು ಸಂಸತ್ತೋ ಬಾಕ್ಸಿಂಗ್‌ ರಿಂಗೋ ಎಂದು ಕೇಳುವಂತಾಗಿದೆ.

ಮೊಹಮ್ಮದ್‌ ಮುಯಿಜು ಅವರ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಲ್ದೀವ್ಸ್‌ ಸಂಸತ್ತು ಈ ಕಿತ್ತಾಟಕ್ಕೆ ಸಾಕ್ಷಿಯಾಯಿತು. ಮುಯಿಜು ಅವರ ಕ್ಯಾಬಿನೆಟ್‌ಗೆ ಒಪ್ಪಿಗೆಯನ್ನು ಸಂಸತ್ತಿನಲ್ಲಿ ಮತಕ್ಕೆ ಹಾಕಿದಾಗ ಈ ಸಂದರ್ಭ ಸೃಷ್ಟಿಯಾಗಿದೆ.

ವಿಡಿಯೋದಲ್ಲಿ ಒಬ್ಬ ಎಂಪಿ ಇನ್ನೊಬ್ಬನ ಕಾಲು ಗಟ್ಟಿಯಾಗಿ ನೆಲಕ್ಕೆ ಒತ್ತಿ ಹಿಡಿದಿದ್ದಾನೆ. ಇಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬ ಇನ್ನೊಬ್ಬನ ತಲೆಕೂದಲು ಕೀಳುತ್ತಿದ್ದಾನೆ. ಮತ್ತೊಬ್ಬ ತಳ್ಳುತ್ತಿದ್ದಾನೆ. ಇನ್ನೊಬ್ಬ ಎಂಪಿ ಸ್ಪೀಕರ್‌ನ ಕಿವಿಯಲ್ಲಿ ಒಂದು ಕಹಳೆಯನ್ನು ಊದುತ್ತಿದ್ದಾನೆ! ಸ್ಪೀಕರ್‌ ತನ್ನ ಕಿವಿ ಮುಚ್ಚಿಕೊಂಡಿದ್ದಾನೆ!

ಹೀಗೆ ಗುದ್ದಾಡಿಕೊಂಡ ಎಂಪಿಗಳಲ್ಲಿ ಇಬ್ಬರು ಪ್ರತಿಪಕ್ಷ ಮಾಲ್ದೀವಿಯನ್‌ ಡೆಮೊಕ್ರಾಟಿಕ್‌ ಪಾರ್ಟಿಯ (ಎಂಡಿಪಿ) ಇಸ್ಸಾ ಹಾಗೂ ಆಡಳಿತ ಪಕ್ಷ ಪಿಎನ್‌ಸಿಯ ಅಬ್ದುಲ್ಲಾ ಶಾಹೀಂ ಅಬ್ದುಲ್‌ ಹಕೀಂ ಎಂದು ಗೊತ್ತಾಗಿದೆ.

ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರ ಸಂಪುಟದ ಮೂವರು ಸದಸ್ಯರು ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಸಂದರ್ಭದಲ್ಲಿ ಅಪಹಾಸ್ಯದ, ಅವಹೇಳನದ ಮಾತನಾಡಿದ್ದರು. ಇದರಿಂದ ಭಾರತದ ಜನತೆ ಮಾತ್ರವಲ್ಲ, ಸ್ವತಃ ಮಾಲ್ದೀವ್ಸ್‌ ಜನತೆಯೂ ಸಿಟ್ಟಿಗೆದ್ದು ಛೀಮಾರಿ ಹಾಕಿದ್ದರು.

ಇದರಿಂದ ಸಂಪುಟದಿಂದ ಮೂವರು ಸಚಿವರ ತಲೆದಂಡವಾಗಿತ್ತು. ಆದರೂ ಅಧ್ಯಕ್ಷ ಮುಯಿಜು, ʼನಾವು ಯಾರಿಗೂ ಹೆದರುವ ಪ್ರಶ್ನೆ ಇಲ್ಲʼ ಎಂದು ಮುಸುಕಿನ ಹೇಳಿಕೆ ಕೊಟ್ಟಿದ್ದರು.

ಇದನ್ನೂ ಓದಿ: Boycott Maldives: ಭಾರತದ ಹೈಕಮಿಷನರ್‌ಗೂ ಮಾಲ್ದೀವ್ಸ್‌ ಸಚಿವಾಲಯದಿಂದ ಬುಲಾವ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Fidias Panayiotou: ನಮ್ಮ ಮೆಟ್ರೊದೊಳಗೆ ಅಕ್ರಮವಾಗಿ ನುಸುಳಿದವನು ಈಗ ಯುರೋಪ್ ಸಂಸದನಾಗಿ ಆಯ್ಕೆ!

Fidias Panayiotou: ಕೇವಲ 24 ವರ್ಷದವರಾದ, ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್‌ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್‌ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್‌ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು 2023ರಲ್ಲಿ ನಮ್ಮ ಮೆಟ್ರೋದಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿ ಚರ್ಚೆಗೆ ಕಾರಣರಾಗಿದ್ದರು.

VISTARANEWS.COM


on

Fidias Panayiotou
Koo

ಬ್ರುಸ್ಸೆಲ್ಸ್: ಆಧುನಿಕ ಕಾಲಘಟ್ಟದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಈಗ ಚೆಲ್ಲು ಚೆಲ್ಲು ಆಗಿ ವರ್ತಿಸುವವರು ಮುಂದೊಂದು ದಿನ ಮಹತ್ವದ ಸಾಧನೆ ಮಾಡಬಹುದು. ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಯಾಗಿದ್ದವ ಯುಟ್ಯೂಬರ್‌ ಆಗಿ ಖ್ಯಾತಿ, ಹಣ ಗಳಿಸಬಹುದು. ಫೇಲ್‌ ಆದವನು ಯಶಸ್ವಿ ಉದ್ಯಮಿಯಾಗಬಹುದು. ಇದಕ್ಕೆ ನಿದರ್ಶನ ಎಂಬಂತೆ, 2023ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದೊಳಗೆ (Namma Metro) ಅಕ್ರಮವಾಗಿ ನುಸುಳಿ ಕಪಿಚೇಷ್ಟೆ ಮಾಡಿದ್ದ ಯುಟ್ಯೂಬರ್‌ ಫೀಡಿಯಸ್‌ ಪನಾಯಿಯೋಟೊ (Fidias Panayiotou) ಅವರೀಗ ಯುರೋಪ್‌ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದಾರೆ.

ಹೌದು, ಕೇವಲ 24 ವರ್ಷದವರಾದ, ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್‌ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್‌ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್‌ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯುರೋಪ್‌ ಸಂಸತ್‌ ಪ್ರವೇಶಿಸಿದ್ದಾರೆ. ಇವರೀಗ ಸಿಪ್ರಸ್‌ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ನಮ್ಮ ಮೆಟ್ರೋದಲ್ಲಿ ಮಾಡಿದ್ದ ಕಪಿಚೇಷ್ಟೆ

2023ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಫೀಡಿಯಸ್‌ ಪನಾಯಿಯೋಟೊ, ನಮ್ಮ ಮೆಟ್ರೋವನ್ನು ಅಕ್ರಮವಾಗಿ ಪ್ರವೇಶಿಸಿ, ಟಿಕೆಟ್‌ ಇಲ್ಲದೆ ಪ್ರಯಾಣಿಸಿ, ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮೆಟ್ರೋ ರೈಲು ನಿಲ್ದಾಣದ ಪ್ರವೇಶಿಸಿದ್ದ ಫೀಡಿಯಸ್‌ ಪನಾಯಿಯೋಟೊ , ಗೇಟ್‌ಗಳಿಂದ ಜಿಗಿದು, ಮೆಟ್ರೋ ರೈಲಿನಲ್ಲಿ ಅಕ್ರಮವಾಗಿ ಪ್ರಯಾಣ ಮಾಡಿದ್ದರು. ಅಲ್ಲದೆ, “ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದನ್ನು ನಿಮಗೆ ತೋರಿಸುತ್ತೇನೆ” ಎಂದು ವಿಡಿಯೊದಲ್ಲಿ ಹೇಳಿದ್ದರು. ಇದಕ್ಕೆ ಬಿಎಂಆರ್‌ಸಿಎಲ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಇಂತಹ ಕುಚೇಷ್ಟೆ ಬುದ್ಧಿಯ ಫೀಡಿಯಸ್‌ ಪನಾಯಿಯೋಟೊ ಈಗ ಸಂಸತ್‌ ಸದಸ್ಯರಾಗಿದ್ದಾರೆ. “ನಾನು ಬೇಕಂತಲೇ ತಪ್ಪು ಮಾಡುತ್ತೇನೆ, ತಪ್ಪು ಮಾಡುವುದೇ ನನ್ನ ಗುರಿ (ಪ್ರೊಫೇಷನಲ್‌ ಮಿಸ್ಟೇಕ್‌ ಮೇಕರ್)‌” ಎಂದೆಲ್ಲ ಕರೆದುಕೊಳ್ಳುವ ಫೀಡಿಯಸ್‌ ಪನಾಯಿಯೋಟೊ ತುಂಬ ದೇಶಗಳನ್ನು ಸುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ಇವರಿಗೆ ಸುಮಾರು 26 ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಇವರು ಕುಚೇಷ್ಟೆ ಮಾಡುತ್ತ ಸೆರೆ ಹಿಡಿದ ವಿಡಿಯೊಗಳು ಲಕ್ಷಾಂತರ ಜನರನ್ನು ಸೆಳೆದಿವೆ.

ಇದನ್ನೂ ಓದಿ: John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading

ದೇಶ

Narendra Modi: ನರೇಂದ್ರ ಮೋದಿಗೆ ಎಕ್ಸ್‌ ಜಾಲತಾಣದಲ್ಲಿ 10 ಕೋಟಿ ಫಾಲೋವರ್ಸ್;‌ ಜಗತ್ತಿನಲ್ಲೇ ನಂಬರ್‌ 1!

Narendra Modi: ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ದುಬೈನ ಶೇಖ್‌ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಭಾರತದಲ್ಲಿ ಜನಪ್ರಿಯ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾಗತಿಕವಾಗಿಯೂ ಖ್ಯಾತಿ ಹೊಂದಿದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಹೀಗೆ, ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳನ್ನು ಹೊಂದುವಲ್ಲಿ ಮೋದಿ ಅವರು ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಎಕ್ಸ್‌ (ಮೊದಲು Twitter) ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ (Modi Followers On X) ಸಂಖ್ಯೆ 100 ದಶಲಕ್ಷ ದಾಟಿದ್ದು (10 ಕೋಟಿ), ಜಗತ್ತಿನಲ್ಲೇ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ನಾಯಕ ಎನಿಸಿದ್ದಾರೆ.

ಹೌದು, ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ದುಬೈನ ಶೇಖ್‌ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ನು ಪೋಪ್‌ ಫ್ರಾನ್ಸಿಸ್‌ ಅವರು 1.85 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಜಗತ್ತಿನ ಯಾವುದೇ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಜಾಗತಿಕವಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳಿಗಿಂತ ಮೋದಿ ಅವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಭಾರತೀಯ ನಾಯಕರ ಫಾಲೋವರ್‌ಗಳು

ಜನಪ್ರಿಯತೆಯಲ್ಲೂ ಪ್ರಥಮ

ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯಲ್ಲಿಯೂ ಪ್ರಧಾನಿ ಮೋದಿ ಅವರು ನಂಬರ್‌ 1 ಆಗಿದ್ದಾರೆ. ಜನಪ್ರಿಯತೆಯ ಸಮೀಕ್ಷೆ ನಡೆಸಿ ಪಟ್ಟಿ ಮಾಡುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ (Ipsos IndiaBus) ಪ್ರಕಾರ, ಪ್ರಧಾನಿ ಮೋದಿ ಫೆಬ್ರವರಿ 2024ರಲ್ಲಿ ಶೇಕಡಾ 75ರಷ್ಟು ಅನುಮೋದನೆ ರೇಟಿಂಗ್ ಅನ್ನು ಸಾಧಿಸಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಡೇಟಾದಲ್ಲಿ, ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಾಗಿದೆ.

ಡಿಸೆಂಬರ್ 2022ರಿಂದ ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ ಹೆಚ್ಚಾಗಿದೆ. 2022ರ ಡಿಸೆಂಬರ್‌ನಲ್ಲಿ ಪ್ರಧಾನಿಯ ರೇಟಿಂಗ್ ಶೇಕಡಾ 60ರಷ್ಟಿತ್ತು . ಫೆಬ್ರವರಿ 2023ರಲ್ಲಿ ರೇಟಿಂಗ್ ಶೇಕಡಾ 67ರಷ್ಟಿತ್ತು. ಸೆಪ್ಟೆಂಬರ್ 2023ರಲ್ಲಿ ಎರಡು ಪ್ರತಿಶತದಷ್ಟು ಕುಸಿದಿದೆ ಮತ್ತು 65 ಪ್ರತಿಶತದಷ್ಟು ರೇಟಿಂಗ್ ಪಡೆದಿದೆ. ಈಗ ಫೆಬ್ರವರಿ 2024ರಲ್ಲಿ ಮೋದಿ ರೇಟಿಂಗ್ ಮತ್ತೆ ಹೆಚ್ಚಾ ಗಿದೆ.

ಇದನ್ನೂ ಓದಿ: Narendra Modi: ಅನಂತ್‌ ಅಂಬಾನಿ ಮದುವೆಯಲ್ಲಿ ಮೋದಿ ಭಾಗಿ; ನೂತನ ದಂಪತಿಗೆ ಆಶೀರ್ವಾದ; Video ಇದೆ

Continue Reading

ವಿದೇಶ

Donald Trump: ಡೊನಾಲ್ಡ್‌ ಟ್ರಂಪ್‌ ಕಿವಿಗೆ ತಾಗಿದ್ದು ಬುಲೆಟ್‌ ಅಲ್ಲ? ಹಾಗಾದ್ರೆ ಏನದು? ಹುಸಿ ದಾಳಿಯ ಅನುಮಾನ ಏಕೆ?

Donald Trump: ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ರ‍್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದೆ. ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ದೊಡ್ಡ ಸ್ಫೋಟದ ನಂತರ ಟ್ರಂಪ್ ಗಾಯಗೊಂಡಂತೆ ನೆಲಕ್ಕೆ ಬಿದ್ದರು. ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದರ ಬೆನ್ನಲ್ಲೇ, ಗುಂಡಿನ ದಾಳಿಯ ಕುರಿತು ಹಲವು ಅನುಮಾನ ವ್ಯಕ್ತವಾಗುತ್ತಿವೆ. ಇದೆಲ್ಲ ನಾಟಕ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ.

VISTARANEWS.COM


on

Donald Trump
ಡೊನಾಲ್ಡ್‌ ಟ್ರಂಪ್‌ ಅವರ ಕಿವಿ ಬಳಿ ಹಾದುಹೋಗುವ ಚೂಪಾದ ವಸ್ತುವಿನ ಫೋಟೊವನ್ನು ಸೆರೆ ಹಿಡಿದವರು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಫೋಟೊಗ್ರಾಫರ್‌ ಡೌಗ್‌ ಮಿಲ್ಸ್.‌
Koo

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣವು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರ ಕಿವಿಗೆ ಗುಂಡು ತಗುಲಿದ್ದು, ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ದಾಳಿ ಮಾಡಿದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂಬ ಯುವಕನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಇದರ ಮಧ್ಯೆಯೇ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ನಡೆದ ದಾಳಿಯೇ ಪಿತೂರಿ, ಇದೊಂದು ಹುಸಿ ದಾಳಿ ಎಂದು ಟ್ರಂಪ್‌ ವಿರೋಧಿಗಳು ಹೇಳುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ತಾಗಿದ್ದು ಬುಲೆಟ್‌ ಅಲ್ಲ, ಗಾಜಿನ ತುಣುಕು

ಡೊನಾಲ್ಡ್‌ ಟ್ರಂಪ್‌ ವಿರೋಧಿಗಳು ಗುಂಡಿನ ದಾಳಿಯ ಕುರಿತು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಹುಸಿ ದಾಳಿಯ ನಾಟಕ ಮಾಡಲಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರಿಗೆ ತಾಗಿರುವುದು ಗುಂಡು ಅಲ್ಲ, ಅದು ಗಾಜಿನ ತುಣುಕು. ಗುಂಡು ತಾಗಿದ ಕಾರಣ ಟೆಲಿಪ್ರಾಂಪ್ಟರ್‌ನ ಒಂದು ಗಾಜಿನ ತುಣುಕು ಹಾರಿ, ಟ್ರಂಪ್‌ ಅವರ ಕಿವಿಗೆ ಬಡಿದಿದೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಜನರ ಸಿಂಪತಿ ಗಳಿಸಲು ಇದೆಲ್ಲ ಕುತಂತ್ರ ಮಾಡಲಾಗಿದೆ. ಜನರ ಅನುಕಂಪಕ್ಕಾಗಿ ಇದೆಲ್ಲ ನಾಟಕ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ವರದಿ ಪ್ರಕಾರ ಒಬ್ಬ ದಾಳಿಕೋರನ ಗುರುತು ಪತ್ತೆಯಾಗಿದ್ದು, ಆತನ ಹೆಸರು ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌. ಟ್ರಂಪ್‌ ಮೇಲೆ ದಾಳಿಯಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಈತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಏಕೆ ಡೊನಾಲ್ಡ್‌ ಟ್ರಂಪ್‌ ಮೇಲೆ ದಾಳಿ ಮಾಡಿದ? ತಗುಲಿರುವುದು ಬುಲೆಟ್‌ ಅಥವಾ ಗಾಜಿನ ತುಂಡೋ ಎಂಬುದರ ಕುರಿತು ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ.

ಯಾರು ಈ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌?

ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ‍್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಚಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ.

ಇದನ್ನೂ ಓದಿ: Donald Trump: ಟ್ರಂಪ್‌ ಮೇಲೆ ಗುಂಡಿನ ದಾಳಿ; ಪ್ರಧಾನಿ ಮೋದಿ ಖಂಡನೆ

Continue Reading

ವಿದೇಶ

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

Donald Trump Assassination Bid: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ಶೇರ್‌ ಆಗುತ್ತಿದೆ. ಟ್ರಂಪ್‌ ರ್ಯಾಲಿ ನಡೆಯುತ್ತಿದ್ದ ವೇದಿಕೆಯಿಂದ ಕೆಲವೇ ದೂರದಲ್ಲಿರುವ ಕಟ್ಟಡದ ಮೇಲೆ ಇಬ್ಬರಲ್ಲಿ ಒಬ್ಬ ಸ್ನೈಪರ್‌ ಗನ್‌ ಸಮೇತ ಟ್ರಂಪ್‌ ಭದ್ರತೆಗೆ ನಿಯೋಜನೆಗೊಂಡಿದ್ದ. ಆತನಿಗೆ ಶೂಟರ್‌ ಕಂಡ ಕೂಡಲೇ ಶೂಟ್‌ ಮಾಡಿದ್ದಾನೆ. ಗುಂಡಿನ ಸದ್ದು ಕೇಳುತ್ತಿದತೆ ಟ್ರಂಪ್‌ ಸಮೇತ ಅಲ್ಲಿದ್ದ ಜನ ಕಕ್ಕಾಬಿಕ್ಕಿ ಆಗಿದ್ದಾರೆ. ಟ್ರಂಪ್‌ ತಕ್ಷಣ ಡಯಾಸ್‌ ಕೆಳಗೆ ಅವಿತು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Donald Trump Assassination Bid
Koo

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald trump) ಮೇಲಿನ ಗುಂಡಿನ ದಾಳಿ(Donald Trump Assassination Bid)ಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಟ್ರಂಪ್‌ ಮೇಲೆ ಗುಂಡು ಹಾರುತ್ತಿದ್ದಂತೆ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಪ್ರತಿದಾಳಿ ಹೇಗೆ ಇತ್ತು ಎಂಬುದನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ಶೇರ್‌ ಆಗುತ್ತಿದೆ. ಟ್ರಂಪ್‌ ರ್ಯಾಲಿ ನಡೆಯುತ್ತಿದ್ದ ವೇದಿಕೆಯಿಂದ ಕೆಲವೇ ದೂರದಲ್ಲಿರುವ ಕಟ್ಟಡದ ಮೇಲೆ ಇಬ್ಬರಲ್ಲಿ ಒಬ್ಬ ಸ್ನೈಪರ್‌ ಗನ್‌ ಸಮೇತ ಟ್ರಂಪ್‌ ಭದ್ರತೆಗೆ ನಿಯೋಜನೆಗೊಂಡಿದ್ದ. ಆತನಿಗೆ ಶೂಟರ್‌ ಕಂಡ ಕೂಡಲೇ ಶೂಟ್‌ ಮಾಡಿದ್ದಾನೆ. ಗುಂಡಿನ ಸದ್ದು ಕೇಳುತ್ತಿದತೆ ಟ್ರಂಪ್‌ ಸಮೇತ ಅಲ್ಲಿದ್ದ ಜನ ಕಕ್ಕಾಬಿಕ್ಕಿ ಆಗಿದ್ದಾರೆ. ಟ್ರಂಪ್‌ ತಕ್ಷಣ ಡಯಾಸ್‌ ಕೆಳಗೆ ಅವಿತು ಕೂರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಡೊನಾಲ್ಡ್‌ ಟ್ರಂಪ್‌ ಮೇಲಿನ ಗುಂಡಿನ ದಾಳಿ(Shootout) ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ FBI ಕೂಲಂಕುಷ ತನಿಖೆ ಕೈಗೆತ್ತಿಕೊಂಡಿದೆ. ತನಿಖೆ ಮೊದ ಭಾಗವಾಗಿ ದಾಳಿಕೋರನ ಗುರುತು ಪತ್ತೆ ಮಾಡಿದೆ. FBI ವರದಿ ಪ್ರಕಾರ ಒಬ್ಬ ದಾಳಿಕೋರನ ಗುರುತು ಪತ್ತೆಯಾಗಿದ್ದು, ಆತನ ಹೆಸರು ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌. ಟ್ರಂಪ್‌ ಮೇಲೆ ದಾಳಿಯಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಈತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ದಾಳಿಗೆ ನಿಜವಾದ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಆ ಬಗ್ಗೆ ತನಿಖೆ ಮುಂದುವರೆದಿದೆ ಎಂದು FBI ಹೇಳಿದೆ.

ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್‌ ಸಮೇತ ಇದ್ದ ಎನ್ನಲಾಗಿದೆ.

ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಇನ್ನು ಘಟನೆಯಲ್ಲಿ ಒಬ್ಬ ಶೂಟರ್ ಮತ್ತು ರ್ಯಾಲಿಯಲ್ಲಿ ಭಾಗವಹಿಸಿದ್ದವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: US Presidential Election: ನೀಲಿ ಚಿತ್ರ ತಾರೆ ಜತೆ ಡೊನಾಲ್ಡ್‌ ಟ್ರಂಪ್‌ ಸೆಕ್ಸ್;‌ ಚರ್ಚೆ ವೇಳೆ ಬೈಡೆನ್‌ ಆರೋಪ

Continue Reading
Advertisement
assembly session
ಪ್ರಮುಖ ಸುದ್ದಿ3 mins ago

Assembly Session: ಇಂದಿನಿಂದ ವಿಧಾನ ಮಂಡಲ ಅಧಿವೇಶನ, ರಂಗೇರಲಿರುವ ಕೈ- ಕಮಲ ಕದನ; ಚಕಮಕಿಗೆ ಅಸ್ತ್ರ- ಪ್ರತ್ಯಸ್ತ್ರಗಳು ಸಜ್ಜು

T20 World Cup 2026: Pakistan to boycott 2026 T20 World Cup in India
ಕ್ರೀಡೆ4 mins ago

T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ​

Kalki 2898 AD Prabhas thanks fans
ಟಾಲಿವುಡ್7 mins ago

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Mahanati Grand Finale priyanka from mysore is the winner season 1 dhanyashree runner up
ಕಿರುತೆರೆ30 mins ago

Mahanati Grand Finale: ʻಮಹಾನಟಿʼ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಪ್ರಿಯಾಂಕಾ; ಧನ್ಯಶ್ರೀಗೆ ಎರಡನೇ ಸ್ಥಾನ, ಬಹುಮಾನ ಏನು?

Suvendu Adhikari
ರಾಜಕೀಯ1 hour ago

Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

salary hike
ಪ್ರಮುಖ ಸುದ್ದಿ1 hour ago

Salary Hike: ಸರ್ಕಾರಿ ನೌಕರರಿಗೆ ಭರವಸೆಯ ಸುದ್ದಿ; ಇಂದು ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಸಮ್ಮತಿ?

Talguppa Honnavar Railway Line
ಉತ್ತರ ಕನ್ನಡ1 hour ago

Talguppa Honnavar Railway Line: ಹೊನ್ನಾವರ-ತಾಳಗುಪ್ಪ ರೈಲ್ವೆ ಮಾರ್ಗ; ಮಂಕಿಯ ಬಿಜೆಪಿ ಮುಖಂಡರಿಂದ ಸಂಸದ ಕಾಗೇರಿಯವರಿಗೆ ಮನವಿ

road accident chitradurga news
ಕ್ರೈಂ2 hours ago

Road Accident: ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

Shikakai For Hair
ಆರೋಗ್ಯ2 hours ago

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Terrorist Attack
ಪ್ರಮುಖ ಸುದ್ದಿ2 hours ago

Terrorist Attack: ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದ ಸೇನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ15 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ17 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ20 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌