Banking Recruitment 2024: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಯ್ಕೆ ಪ್ರಕ್ರಿಯೆ ಹೇಗೆ? Complete Details - Vistara News

ಉದ್ಯೋಗ

Banking Recruitment 2024: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಯ್ಕೆ ಪ್ರಕ್ರಿಯೆ ಹೇಗೆ? Complete Details

Banking Recruitment 2024: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 896ಕ್ಕೂ ಹೆಚ್ಚು ಸ್ಪೆಶಲಿಸ್ಟ್ ಆಫೀಸರ್ಸ್ ಹುದ್ದೆಗಳ ನೇಮಕಾತಿಗೆ ಐ.ಬಿ.ಪಿ.ಎಸ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಆಗಸ್ಟ್ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್ಲೈನ್ ಮೂಲಕ (https://www.ibps.in) ಅರ್ಜಿ ಸಲ್ಲಿಸಬೇಕು. ಎಲ್ಲ ಹುದ್ದೆಗಳು ಸ್ಕೇಲ್ -1 ಅಧಿಕಾರಿ ಹಂತದ ಹುದ್ದೆಗಳಾಗಿವೆ. ಆಯ್ಕೆ ಪ್ರಕ್ರಿಯೆ ಹೇಗೆ? ಪರೀಕ್ಷೆ ಹೇಗೆ ನಡೆಯುತ್ತದೆ? ಅರ್ಜಿ ಹೇಗೆ ಸಲ್ಲಿಸಬೇಕು ಇತ್ಯಾದಿ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
R K Balachandra

-ಆರ್‌.ಕೆ. ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್‌ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು
ಈ ವರ್ಷದಲ್ಲಿ ಇಲ್ಲಿಯವರೆಗೆ 20,566ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ (Banking Recruitment 2024) ನೇಮಕಾತಿಗೆ ಅರ್ಜಿ ಕರೆದಂತಾಗಿದೆ. ಪದವೀಧರ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿ ಸಿಕೊಳ್ಳಬೇಕಾಗಿದೆ. ಭಾರತದಲ್ಲಿ, ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಬ್ಯಾಂಕ್‌ಗಳು ತನ್ನ ಉದ್ಯೋಗಿಗಳಿಗೆ ಸುಂದರವಾದ ಪ್ಯಾಕೇಜ್‌ಗಳು, ಆಕರ್ಷಕ ಸಂಬಳ, ಉದ್ಯೋಗ ಭದ್ರತೆಯ ಜೊತೆಗೆ ಇತರ ಸವಲತ್ತುಗಳನ್ನು ನೀಡುತ್ತವೆ ಎಂಬುದು ಬಹಿರಂಗ ಸತ್ಯವಾಗಿದೆ. ಪ್ರತಿ ವರ್ಷ ದೇಶದಾದ್ಯಂತ ವಿವಿಧ ಬ್ಯಾಂಕ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳು ನಡೆಸುವ ಬಹು ಬ್ಯಾಂಕ್ ಪರೀಕ್ಷೆಗಳಿವೆ.ಇಂತಹ ಕಾರಣಗಳಿಂದಾಗಿ ಬ್ಯಾಂಕ್ ಉದ್ಯೋಗಗಳನ್ನ ಪಡೆದುಕೊಳ್ಳಲು ಪೈಪೋಟಿ ಅತ್ಯಂತ ವೇಗದಲ್ಲಿ ಹೆಚ್ಚುತ್ತಿದೆ. ಆಕಾಂಕ್ಷಿಗಳು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮತ್ತು ಬ್ಯಾಂಕ್ ಉದ್ಯೋಗಿಯಾಗಿ ಆಯ್ಕೆಯಾಗಲು ಸರಿಯಾದ ತಯಾರಿಯನ್ನು ಹೊಂದಿರಬೇಕು ಎಂಬುದನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಸ್ಸಂಖ್ಯೆ ಸೂಚಿಸುತ್ತದೆ.

ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರು ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕಗಳಲ್ಲಿ ಉದ್ಯೋಗ ಎನ್ನುವಂತಿತ್ತು. ಆದರೆ, ಈಗ ಇವೆರಡರ ಜೊತೆಗೆ, ಕಾನೂನು, ಎಂಜಿನಿಯರಿಂಗ್, ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್ ಸೇರಿದಂತೆ ಬೇರೆ ಬೇರೆ ವಿಷಯಗಳಲ್ಲಿ ಪದವಿ ಪಡೆದಿರುವವರಿಗೂ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯುತ್ತಿದೆ. ಇಂಥ ವಿಶೇಷ ಪದವಿಗಳೊಂದಿಗೆ ಕೆಲಸದ ಅನುಭವವಿರುವನ್ನು ವಿಶೇಷ ಅಧಿಕಾರಿ (ಸ್ಪೆಷಲಿಸ್ಟ್ ಆಫೀಸರ್) ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್- ಐಬಿಪಿಎಸ್) ದೇಶದ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಇಂಥ ಸ್ಪೆಷಲ್ ಆಫೀಸರ್ಸಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಗಾಗ್ಗೆ ನೇಮಕ ಮಾಡಿಕೊಳ್ಳುತ್ತಿರುತ್ತದೆ. ಅದರಂತೆ ಈ ವರ್ಷವೂ ದೇಶದ ಐದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ 896 ಸ್ಪೆಷಲ್ ಆಫೀಸರ್ಸ್ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದೆ.

application from
Businesswoman Interviewing

ಆಗಸ್ಟ್ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್ಲೈನ್ ಮೂಲಕ (https://www.ibps.in) ಅರ್ಜಿ ಸಲ್ಲಿಸಬೇಕು. ಎಲ್ಲ ಹುದ್ದೆಗಳು ಸ್ಕೇಲ್ -1 ಅಧಿಕಾರಿ ಹಂತದ ಹುದ್ದೆಗಳಾಗಿವೆ.

ಯಾವ್ಯಾವಹುದ್ದೆಗಳು?/ಯಾವ್ಯಾವ ಬ್ಯಾಂಕ್‌ಗಳಲ್ಲಿ ಹುದ್ದೆ?

  ಐಟಿ ಆಫೀಸರ್ಅಗ್ರಿಕಲ್ಬರಲ್ ಫೀಲ್ಡ್ ಆಫೀಸರ್ರಾಜ್ಭಾ ಷಾ ಅಧಿಕಾರಿಲಾ ಆಫೀಸರ್ಎಚ್ಆರ್/ಪರ್ಸನಲ್ ಆಫೀಸರ್ಮಾರ್ಕೆಟಿಂಗ್ ಆಫೀಸರ್
1ಬ್ಯಾಂಕ್ ಆಫ್ ಇಂಡಿಯಾ   510 
2ಇಂಡಿಯನ್ ಒವರಸೀಸ್ ಬ್ಯಾಂಕ್20  15 5
3uco bank 36    
4Canara bk   5  
5ಪಂಜಾಬ್ ನ್ಯಾಷನಲ್ ಬ್ಯಾಂಕ್1503102510015200
 total1703462512525205
ಅರ್ಜಿ ಶುಲ್ಕ : ಸಾಮಾನ್ಯ , ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ: ₹850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹175. ನೋಂದಣಿ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕದ ಜೊತೆಯಲ್ಲಿ ಇಂಟಿಮೇಷನ್ ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ.

ವಯೋಮಿತಿ:  01.08.2024 ಕ್ಕೆ ಕನಿಷ್ಠ 20 ವರ್ಷ  ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.08.1994 ಕ್ಕಿಂತ ಮುಂಚಿತವಾಗಿ ಮತ್ತು 01.08.2004ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

Businesswoman Interviewing
Businesswoman Interviewing

ನೇಮಕಾತಿ ಪ್ರಕ್ರಿಯೆ: ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ. ಎರಡೂ ಲಿಖಿತ ಪರೀಕ್ಷೆಗಳೂ ಆನ್ಲೈನ್ ಮೂಲಕ ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದವರು, ಮುಖ್ಯ ಪರೀಕ್ಷೆಗೆ ಹಾಜರಾಗಬೇಕು. ಮುಖ್ಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿದೆ. ಪರೀಕ್ಷೆಗಳು ಇಂಗ್ಲಿಷ್/ ಹಿಂದಿ ಭಾಷೆಯಲ್ಲಿರಲಿದೆ.

ನೆನಪಿಡಿ: ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವೆಬ್ ಲಿಂಕ್: https://www.ibps.in/index.php/specialist-officers-xiv/https:/ ಹಾಗೂ ಅಧಿಸೂಚನೆಗೆ:www.ibps.in

ಪರೀಕ್ಷಾ ಪ್ರಕ್ರಿಯೆ: ಮೊದಲನೇ ಹಂತ– ಪೂರ್ವಬಾವಿ ಪರೀಕ್ಷೆ. ಇದು ಈ ವರ್ಷದ  ನವೆಂಬರ್‌ ನಲ್ಲಿ ನಡೆಯಲಿದೆ. ಎರಡನೇ ಹಂತ– ಮುಖ್ಯ ಪರೀಕ್ಷೆ. ಇದು ಡಿಸೆಂಬರ್ ನಲ್ಲಿ ನಿಗದಿಯಾಗಿದೆ. ಮೂರನೇ ಹಂತ– ಸಂದರ್ಶನ– 2025 ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಕೇಂದ್ರಗಳು

ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್): ಬೆಂಗಳೂರು,ಬೆಳಗಾವಿ, ಧಾರವಾಡ, ಕಲಬುರಗಿ, ಹುಬ್ಬಳ್ಳಿ- ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಮುಖ್ಯ ಪರೀಕ್ಷೆ: ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮಂಗಳೂರು

ಶೈಕ್ಷಣಿಕ ಅರ್ಹತೆ: (21.08.2024 ಕ್ಕೆ ಅನ್ವಯಿಸುವಂತೆ)

1) ಐಟಿ ಆಫೀಸರ್ ಹುದ್ದೆಗೆ: ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಸಂಬಂಧಿಸಿದ ನಾಲ್ಕು ವರ್ಷಗಳ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಸ್ನಾತಕೋತ್ತ ರ ಪದವಿ ಪಡೆದಿರಬೇಕು ಅಥವಾ ಪದವಿ ಜೊತೆಯಲ್ಲಿ DOEACC “B” ಲೆವೆಲ್ ಪರೀಕ್ಷೆ ಪಾಸಾಗಿರಬೇಕು.

2) ಅಗ್ರಿಕಲ್ಬ ರಲ್ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ / ಪಶುಸಂಗೋಪನೆ,/ ಪಶು ವೈದ್ಯಕೀಯ ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿ ಎಂಜಿನಿಯರಿಂಗ್/ ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ /ಅರಣ್ಯ / ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯ ವಹಾರ ನಿರ್ವ ಹಣೆ/ ಆಹಾರ ತಂತ್ರಜ್ಞಾನ/ ಡೇರಿ ತಂತ್ರಜ್ಞಾನ / ಕೃಷಿ ಎಂಜಿನಿಯರಿಂಗ್/ ರೇಷ್ಮೆ ಕೃಷಿ/ ಮೀನುಗಾರಿಕೆ ಎಂಜಿನಿಯರಿಂಗ್ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು.

3) ಲಾ ಆಫೀಸರ್: ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಬಾರ್ ಕೌನ್ಸಿಲ್ನ ಸದಸ್ಯ ತ್ವ ಪಡೆದಿರಬೇಕು.

4) ರಾಜ್ಯ ಭಾಷಾ ಅಧಿಕಾರಿ ಹುದ್ದೆಗೆ: ಹಿಂದಿಯಲ್ಲಿ ಸ್ನಾತಕೋತ್ತ ರ ಪದವಿ, ಜೊತೆಗೆ – ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು.

5) ಎಚ್ ಆರ್ / ಪರ್ಸನಲ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ ಎಚ್ಆರ್/ ಎಚ್ ಆರ್‌ಡಿ / ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಮಾಡಿರಬೇಕು.

6)ಮಾರ್ಕೆಟಿಂಗ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಎರಡು ವರ್ಷಗಳ ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್)/ PGDBA /PGDBM/PGPM/PGDM ಮಾರ್ಕೆಟಿಂಗ್ ನಲ್ಲಿ ಸ್ಪೆಷಲೈಸೇಷನ್ ಮಾಡಿರಬೇಕು.

ಗಮನಿಸಿ: IT ಆಫೀಸರ್ ಸ್ಕೇಲ್-I ಹೊರತುಪಡಿಸಿ ಬೇರೆ ಹುದ್ದೆಗಳಿಗೆ: ಅಭ್ಯರ್ಥಿಯು ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರ ವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

ಕ್ರೆಡಿಟ್ ಇತಿಹಾಸ

(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸ (Credit History) ಹೊಂದಿರಬೇಕು. ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ (CIBIL)ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.

(ii) ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು CIBIL ಸ್ಥಿತಿ ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ (NOC)ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.

ಗಮನಿಸಿ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು CIBIL ಸ್ಥಿತಿಯನ್ನು ಒದಗಿಸುವ ಅಗತ್ಯ ವಿಲ್ಲ.

ನೇಮಕ ಹೇಗೆ?

ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  40 ನಿಮಿಷಗಳಂತೆ  ಒಟ್ಟಾರೆ 120 ನಿಮಿಷಗಳು) 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಇಂಗ್ಲೀಷ್ ಲಾಂಗ್ವೇಜ್‌ ಗೆ 50, ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಗೆ 50 ಹಾಗೂ ರೀಸನಿಂಗ್ ಎಬಿಲಿಟಿಯ 50 ಪ್ರಶ್ನೆಗಳಿರಲಿವೆ.( ಇದು ರಾಜ್‌ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆಗಳಿಗೆ  ಹೊರತಾಗಿ.ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಪರೀಕ್ಷೆ ಬದಲಾಗಿ General Awareness with Special Reference to Banking Industry 50 ಪ್ರಶ್ನೆಗಳಿರಲಿವೆ.) ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ) ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು, ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಪರೀಕ್ಷೆ ನಡೆಯಲಿವೆ. ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನಕ್ಕೆ ಸಂಭಂದಿಸಿದ್ದು 45 ನಿಮಿಷಗಳ ಕಾಲ ನಡೆಯಲಿದ್ದು, 60 ಪ್ರಶ್ನೆಗಳನ್ನು  60 ಅಂಕಗಳಿಗೆ ಕೇಳಲಾಗುತ್ತದೆ.(ರಾಜ ಭಾಷಾ ಅಧಿಕಾರಿಗಳ ಹುದ್ದೆಗಳಿಗೆ ಡಿಸ್ಕೃಪ್ಟಿವ್ ಟೆಸ್ಟ್ ಎರಡು ಹಂತಗಳಲ್ಲಿ ನಡೆಯಲಿದ್ದು  ವೃತ್ತಿಪರ ಜ್ಞಾನಕ್ಕೆ ಸಂಭಂದಿಸಿದ 45 ಪ್ರಶ್ನೆ ಒಬ್ಜೆಕ್ಟಿವ್ ಮಾದರಿಯಲ್ಲಿದ್ದು,ವ್ತತ್ತಿಪರ ಜ್ಞಾನಕ್ಕೆ ಸಂಬಂದಿಸಿದಂತೆ ಇನ್ನೊಂದು ಡಿಸ್ಕ್ರೆಪ್ಟಿವ್ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿರಲಿದ್ದು ಅವಧಿ ಎರಡೂ ಪರೀಕ್ಷೆಗೆ 30 ನಿಮಿಷಗಳಂತೆ ಒಟ್ಟಾರೆ ಒಂದು ಗಂಟೆಯ ಅವಧಿ ನೀಡಲಾಗಿದ್ದು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

ಬಾಕ್ಸ ಗಮನಿಸಿ: ಈ ಹಿಂದಿನಂತೆ ಇದ್ದ  ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಿದ್ದು ಈ ಸಲ ವೃತ್ತಿಪರ ಜ್ಞಾನದ ಪರೀಕ್ಷೆ ಬರೆಯಬೇಕು (ಸ್ಪೇಶಲಿಸ್ಟ್ ಹುದ್ದೆಗಳಾಗಿರೋದರಿಂದ)

ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ಕನ್ನಡದಲ್ಲಿ ಪರೀಕ್ಷೆ ನಡೆಯೊಲ್ಲ. ಮುಖ್ಯ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಸಂದರ್ಶನ (100 ಅಂಕಗಳು) ಬ್ಯಾಂಕ ನಡೆಸಲಿವೆ. ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿ ಕೊಂಡಿರುವ ಆದರೆ (‘Non-Creamy layer’)’ಕೆನೆರಹಿತ ಪದರ’ ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. EWS ವರ್ಗದ ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. EWS ಎಂದು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅಂತವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ಇದನ್ನೂ ಓದಿ: Job Alert: CDACಯಲ್ಲಿದೆ 250 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

ಆಯ್ಕೆ ಪಟ್ಟಿ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಮುಖ್ಯ ಪರೀಕ್ಷೆಯಲ್ಲಿ  ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (60 ಅಂಕಗಳನ್ನು 100 ಕ್ಕೆ ಪರಿವರ್ತನೆ ಮಾಡಿ) ಅದರ  80% ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3 ರಲ್ಲಿ ಪಡೆದ ಅಂಕಗಳನ್ನು (100 ಅಂಕಗಳಲ್ಲಿ)  ಅದರ 20% ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ-2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Good News: ಅನುದಾನಿತ ಶಾಲೆ, ಕಾಲೇಜುಗಳ ಬೋಧಕ ಹುದ್ದೆ ಭರ್ತಿಗೆ ಆದೇಶ

Good News: ಖಾಸಗಿ ಅನುದಾನಿತ ಪ್ರೌಢಶಾಲೆ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2016ರಿಂದ 2020ರವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅನುಮೋದನೆ ನೀಡಿದೆ.

VISTARANEWS.COM


on

Teacher jobs good news
Koo

ಬೆಂಗಳೂರು: ಶಿಕ್ಷಕ, ಬೋಧಕ (Teachers) ಹುದ್ದೆಗಳ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ (good news) ದೊರೆತಿದೆ. ದಿನಾಂಕ 1-1-2016ರಿಂದ 31.12 2020 ರ ವರೆಗೆ ಅನುದಾನಿತ ಶಾಲೆಗಳಲ್ಲಿ (Aided Schools) ಹಾಗೂ ಕಾಲೇಜುಗಳಲ್ಲಿ ಖಾಲಿ ಇರುವ ಇರುವ ಬೋಧಕ ಹುದ್ದೆಗಳನ್ನು ತುಂಬಲು ಸರ್ಕಾರ ಅಧಿಕೃತ ಆದೇಶ ನೀಡಿದೆ.

ರಾಜ್ಯದಲ್ಲಿ 1994-95ರ ಶೈಕ್ಷಣಿಕ ಅವಧಿಗೆ ಪೂರ್ವದಲ್ಲಿ ಆರಂಭಗೊಂಡು ಈಗಾಗಲೇ ವೇತನುದಾನಕ್ಕೆ ಒಳಪಟ್ಟ ಖಾಸಗಿ ಅನುದಾನಿತ ಪ್ರೌಢಶಾಲೆ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2016ರಿಂದ 2020ರವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅನುಮೋದನೆ ನೀಡಿದೆ.

ಈ ಮೊದಲು 1987ರಿಂದ 1994-95ರ ಅವಧಿಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹಣಕಾಸು ಇಲಾಖೆಯು ಅನುಮತಿ ನೀಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಮಾರ್ಪಡಿಸಿರುವ ಶಿಕ್ಷಣ ಇಲಾಖೆಯು, 1994-95ರ ಶೈಕ್ಷಣಿಕ ಅವಧಿಗೆ ಪೂರ್ವದಲ್ಲಿ ಆರಂಭಗೊಂಡ ಎಲ್ಲ ಸಂಸ್ಥೆಗಳಿಗೂ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ನಿಯಮಾನುಸಾರ ರೋಸ್ಟರ್ ಬಿಂದು ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 2016-17ರಿಂದ 2023-24ನೇ ಸಾಲಿನವರೆಗೆ ವಿದ್ಯಾರ್ಥಿಗಳ ದಾಖಲಾತಿ, ಪರೀಕ್ಷಾ ಲಿತಾಂಶ ಮತ್ತು ಮೂಲಭೂತ ಸೌಕರ್ಯಗಳು ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು. ಹುದ್ದೆ ಭರ್ತಿ ಮಾಡಿಕೊಳ್ಳುವ ಶಾಲಾ, ಕಾಲೇಜುಗಳು ಆರಂಭವಾದ ಅಂದಿನಿಂದ ನಿರಂತರವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕನ್ನಡಿಗರಿಗೆ ಉದ್ಯೋಗ ಕಡ್ಡಾಯಕ್ಕೆ ಕಾನೂನು ಸಮಸ್ಯೆ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲು (Karnataka Jobs Reservation) ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರದ (Karnataka Government) ನಿಲುವಿನಿಂದಾಗಿ ಸೃಷ್ಟಿಯಾದ ಗೊಂದಲದ ನಡುವೆ, ನಾಲ್ವರು ಸಚಿವರು ಇಂದು ವಿಧಾನಸಭೆಯಲ್ಲಿ (Vidhan sabha) ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಈ ವಿಚಾರದಲ್ಲಿ ಕಾನೂನಾತ್ಮಕ ಸಮಸ್ಯೆ ಇದ್ದು, ಇದರ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ (ಜು.16) ಅನುಮೋದನೆ ನೀಡಿತ್ತು. ಇದಕ್ಕೆ ಉದ್ಯಮಿ ಕಿರಣ್‌ ಮಜುಂದಾರ್‌ ಶಾ, ಮೋಹನ್​ ದಾಸ್​ ಪೈ ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಸರಕಾರ, ವಿಧೇಯಕ ಜಾರಿಗೆ ಹಿಂದೇಟು ಹಾಕಿದೆ. ಈ ಹಿನ್ನೆಲೆಯಲ್ಲಿ ಇಂದು (ಜು.18) ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಾಲ್ವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸಚಿವರಾದ ದಿನೇಶ್‌ ಗುಂಡೂರಾವ್​, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್‌ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

Continue Reading

Latest

Job Vacancies: ಸಾವಿರ ಮಹಿಳಾ ಪೊಲೀಸ್ ಕಾನ್‌‌ಸ್ಟೇಬಲ್ ಹುದ್ದೆಗಳಿಗೆ ಲಕ್ಷಕ್ಕೂ ಹೆಚ್ಚು ಅರ್ಜಿ! ಫುಟ್‌‌ಪಾತ್‌‌ನಲ್ಲೇ ಮಲಗಿದ್ದ ಮಹಿಳಾ ಅಭ್ಯರ್ಥಿಗಳು

Job Vacancies: ಮಹಿಳಾ ಕಾನ್ಸ್ಟೇಬಲ್ ಮತ್ತು ಮಹಿಳಾ ಕಾನ್ಸ್ಟೇಬಲ್ ಡ್ರೈವರ್ ಸೇರಿದಂತೆ 1,257 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಮುಂಬೈ ಪೊಲೀಸರು ರಾಜ್ಯಾದ್ಯಂತ 1.11 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅದರಂತೆ, ಸೋಮವಾರ ಮರೀನ್ ಡ್ರೈವ್ನಲ್ಲಿ ಡ್ರೈವರ್ ನೇಮಕಾತಿಗಾಗಿ ದೈಹಿಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಜಮಾಯಿಸಿದ್ದರು. ಅವರೆಲ್ಲಾ ಪುಟ್‌ಪಾತ್‌ನಲ್ಲಿ ಮಲಗಿದ್ದರು. ಈ ಘಟನೆ ಮಹಾರಾಷ್ಟ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Job Vacancies
Koo


ಮುಂಬೈ : ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟರ ಮಟ್ಟಿಗೆ ಇದೆ ಎಂದರೆ ಯಾವುದೇ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನಿಸಿದರೆ ಸಾಕು ಲಕ್ಷಾಂತರ ಜನರು ಆ ಕಚೇರಿಯ ಬಳಿ ಬರುತ್ತಾರೆ. ಅಷ್ಟೋ ಕಡೆ ನೂಕು ನುಗ್ಗುಲು ಕೂಡ ಉಂಟಾಗುತ್ತದೆ. ಇದೀಗ ಮಹಿಳಾ ಕಾನ್ಸ್ಟೇಬಲ್ ಮತ್ತು ಮಹಿಳಾ ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗಳಿಗೆ 1,257 ಹುದ್ದೆ (Job vacancies)ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಮುಂಬೈ ಪೊಲೀಸರು ರಾಜ್ಯಾದ್ಯಂತ 1.11 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅದರಂತೆ, ಸೋಮವಾರ ಮರೀನ್ ಡ್ರೈವ್‍ನಲ್ಲಿ ಡ್ರೈವರ್ ನೇಮಕಾತಿಗಾಗಿ ದೈಹಿಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಜಮಾಯಿಸಿದರು. ಅವರೆಲ್ಲಾ ಪುಟ್ಪಾತ್‍ನಲ್ಲಿ ಮಲಗಿದ್ದರು.

ವಿರೋಧ ಪಕ್ಷದ ನಾಯಕ ವಿಜಯ್ ವಡ್ಡೇಟಿವಾರ್ ಮಂಗಳವಾರ ತಡರಾತ್ರಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊ ಮತ್ತು ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಸರ್ಕಾರದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ಸಂದೇಶದಲ್ಲಿ, “ಮುಂಬೈನಲ್ಲಿ ಪೊಲೀಸ್ ನೇಮಕಾತಿಗಾಗಿ ಬಂದ ಹುಡುಗಿಯರು ಇದರಲ್ಲಿ ಕಂಡುಬರುತ್ತಾರೆ.

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಮುಂಬೈನಂತಹ ದೊಡ್ಡ ನಗರಗಳಿಗೆ ಬರುವ ಹುಡುಗಿಯರಿಗೆ ರಾತ್ರಿ ತಂಗಲು ಸರ್ಕಾರ ಮತ್ತು ಪೊಲೀಸ್ ಆಡಳಿತಕ್ಕೆ ವಸತಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ? ಮಳೆ ಬಂದಾಗ ಈ ಹುಡುಗಿಯರು ಎಲ್ಲಿ ಮಲಗುತ್ತಾರೆ? ಅವರ ಸುರಕ್ಷತೆಯ ಬಗ್ಗೆ ಏನು? ವಾಶ್ ರೂಮ್ ವ್ಯವಸ್ಥೆ ಬಗ್ಗೆ ಏನು? ಇದು ಬೇಜವಾಬ್ದಾರಿಯುತ ಕೆಲಸ “ ಎಂದು ತಿಳಿಸಿದ್ದಾರೆ. ಅಲ್ಲದೇ ಆಕಾಂಕ್ಷಿಗಳಿಗೆ ವಸತಿ ಸೌಕರ್ಯಗಳನ್ನು ಒದಗಿಸುವಂತೆ ವಡ್ಡೇಟಿವಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ನಿರುದ್ಯೋಗ ಸಮಸ್ಯೆ ದೇಶದಲ್ಲಿ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಈ ಹಿಂದೆ ಮುಂಬೈನಲ್ಲಿ ನಡೆದ ಈ ಘಟನೆಯೂ ಕೂಡ ಸಾಕ್ಷಿಯಾಗಿದೆ. ಈ ಹಿಂದೆ ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಎಐಎಎಸ್ಎಲ್) ಮುಂಬೈ ವಿಮಾನ ನಿಲ್ದಾಣದಲ್ಲಿ ಕೇವಲ 600 ಖಾಲಿ ಹುದ್ದೆಗಳಿಗೆ ಸ್ಪರ್ಧಿಸಲು 25,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಾಗಿದ್ದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಯಿತು. ಭಾರಿ ಜನಸಂದಣಿಯನ್ನು ನಿರ್ವಹಿಸಲು ಏರ್ ಇಂಡಿಯಾ ಸಿಬ್ಬಂದಿ ಹೆಣಗಾಡಬೇಕಾಯಿತು, ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಕೂಡ ಎದುರಾಗಿತ್ತು

Continue Reading

ಉದ್ಯೋಗ

Job Alert: CDACಯಲ್ಲಿದೆ 250 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job Alert: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್‌ ಎಂಜಿನಿಯರ್‌, ಪ್ರಾಜೆಕ್ಟ್‌ ಅಸೋಸಿಯೇಟ್‌, ಪ್ರಾಜೆಕ್ಟ್‌ ಮ್ಯಾನೇಜರ್‌ ಸೇರಿದಂತೆ ಒಟ್ಟು 250 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಬೆಂಗಳೂರು, ಶಿಮ್ಲಾ, ದಿಲ್ಲಿ ಮತ್ತು ಪುಣೆಯಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 16.

VISTARANEWS.COM


on

Job Alert
Koo

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌(Centre for Development of Advanced Computing) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CDAC Recruitment 2024). ಪ್ರಾಜೆಕ್ಟ್‌ ಎಂಜಿನಿಯರ್‌, ಪ್ರಾಜೆಕ್ಟ್‌ ಅಸೋಸಿಯೇಟ್‌, ಪ್ರಾಜೆಕ್ಟ್‌ ಮ್ಯಾನೇಜರ್‌ ಸೇರಿದಂತೆ ಒಟ್ಟು 250 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಬೆಂಗಳೂರು, ಶಿಮ್ಲಾ, ದಿಲ್ಲಿ ಮತ್ತು ಪುಣೆಯಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಪ್ರಾಜೆಕ್ಟ್ ಅಸೋಸಿಯೇಟ್- 43 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಎಂಜಿನಿಯರ್- 100 ಹುದ್ದೆ, ವಿದ್ಯಾರ್ಹತೆ:
ಪ್ರಾಜೆಕ್ಟ್ ಮ್ಯಾನೇಜರ್- 1 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್‌ಡಿ
ಪ್ರಾಜೆಕ್ಟ್ ಮ್ಯಾನೇಜರ್ / ಪ್ರೋಗ್ರಾಂ ಮ್ಯಾನೇಜರ್ / ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್‌ ಪಾರ್ಟನರ್‌- 19 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್‌ಡಿ
ಪ್ರಾಜೆಕ್ಟ್‌ ಆಫೀಸರ್‌- 3 ಹುದ್ದೆ, ವಿದ್ಯಾರ್ಹತೆ: ಸಿಎ, ಸ್ನಾತಕೋತ್ತರ ಪದವಿ, ಎಂಬಿಎ, ಎಂ.ಕಾಂ., ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಸಪೋರ್ಟ್‌ ಸ್ಟಾಫ್‌- 5 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ, ಎಂ.ಕಾಂ, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ / ಮಾಡ್ಯೂಲ್ ಲೀಡ್ / ಪ್ರಾಜೆಕ್ಟ್ ಲೀಡರ್- 41 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ / ಮಾಡ್ಯೂಲ್ ಲೀಡ್- 16 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್- 22 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿ.ಟೆಕ್‌, ಎಂಇ ಅಥವಾ ಎಂ.ಟೆಕ್‌, ಸ್ನಾತಕೋತ್ತರ ಪದವಿ, ಪಿಎಚ್.ಡಿ.

ವಯೋಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30-50 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://careers.cdac.in/advt-details/PN-1972024-TYT1X).
  • ಮೊಬೈಲ್‌ ನಂಬರ್‌, ಇಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.

ಇದನ್ನೂ ಓದಿ: RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading

ಉದ್ಯೋಗ

SSC Recruitment 2024: ಗುಡ್‌ನ್ಯೂಸ್‌; 2,006 ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

SSC Recruitment 2024: ಭಾರತ ಸರ್ಕಾರದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಖಾಲಿ ಇರುವ ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಬರೋಬ್ಬರಿ 2,006 ಹುದ್ದೆ ಖಾಲಿ ಇದ್ದು, 12ನೇ ತರಗತಿ (ದ್ವಿತೀಯ ಪಿಯುಸಿ) ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 17.

VISTARANEWS.COM


on

SSC Recruitment 2024
Koo

ನವದೆಹಲಿ: ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತ ಸರ್ಕಾರದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (Staff Selection Commission) ಖಾಲಿ ಇರುವ ಸ್ಟೆನೋಗ್ರಾಫರ್ (Stenographer) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (SSC Recruitment 2024). ದೇಶಾದ್ಯಂತ ಬರೋಬ್ಬರಿ 2,006 ಹುದ್ದೆ ಖಾಲಿ ಇದ್ದು, 12ನೇ ತರಗತಿ (ದ್ವಿತೀಯ ಪಿಯುಸಿ) ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 17 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆ ಇದಾಗಿದ್ದು, ಆಯ್ಕೆಯಾದವರನ್ನು ಸ್ಟಾಫ್‌ ಸೆಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಕಚೇರಿಗಳಿಗೆ ನೇಮಕ ಮಾಡಿಕೊಳ್ಳಲಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಎಸ್‌ಎಸ್‌ಸಿ ಸ್ಟೆನೋಗ್ರಾಫರ್‌ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ

ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-30 ವರ್ಷದೊಳಗಿರಬೇಕು ಮತ್ತು ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-27 ವರ್ಷದೊಳಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್‌ಸಿ / ಎಸ್‌ಟಿ ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಆನ್‌ಲೈನ್‌ ಮೂಲಕ 100 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ, ಮಹಿಳಾ, ಮಾಜಿ ಸೈನಿಕ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕಂಪ್ಯೂಟರ್ ಆಧಾರಿತ ಆನ್‌ಲೈನ್‌ ಪರೀಕ್ಷೆ ಜತೆಗೆ ಸ್ಟೆನೋಗ್ರಾಫಿ ಸ್ಕಿಲ್‌ ಟೆಸ್ಟ್‌ ಇರುತ್ತದೆ. ಈ ಎರಡು ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರ ಮೂಲ ದಾಖಲೆಗಳ ಪರಿಶೀಲಿಸಲಾಗುತ್ತದೆ. ಕೊನೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ 30,000 ರೂ. – 39, 995 ರೂ. ಮಾಸಿಕ ವೇತನ ದೊರೆಯಲಿದೆ.

SSC Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://ssc.gov.in/login)
  • ವೈಯಕ್ತಿಕ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿ ಪ್ರಿಂಟ್‌ಔಟ್‌ ತೆಗೆದಿಡಿ.

ಇದನ್ನೂ ಓದಿ: RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading
Advertisement
Swapnil Kusale
ಕ್ರೀಡೆ11 mins ago

Swapnil Kusale: ತವರಿಗೆ ಮರಳಿದ ಸ್ವಪ್ನಿಲ್​ ಕುಸಾಲೆ; ಮುಂಬೈಯಲ್ಲಿ ಭರ್ಜರಿ ಸ್ವಾಗತ

Naga Chaitanya engagement Sobhita Dhulipala engaged
ಟಾಲಿವುಡ್13 mins ago

Naga Chaitanya: ನಾಗ ಚೈತನ್ಯ ಜತೆ ಎಂಗೇಜ್ ಆದ ಶೋಭಿತಾ ಧೂಳಿಪಾಲ; ಸಂಭ್ರಮದ ಫೋಟೋಸ್‌ ವೈರಲ್‌!

Parliament Session
ರಾಜಕೀಯ37 mins ago

Parliament Session: ವಿನೇಶ್‌ ಫೋಗಟ್‌ ಅನರ್ಹತೆಯ ವಿಚಾರ ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಸಭಾತ್ಯಾಗ

Assault Case
ಬೆಂಗಳೂರು39 mins ago

Assault Case : ಕಾರು ಚಾಲಕನ ಮುಖಕ್ಕೆ‌ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್‌

Abhishek Ambareesh wife aviva is pregnant actress samalatha will become grandmother
ಸಿನಿಮಾ45 mins ago

Abhishek Ambareesh: ಗುಡ್‌ ನ್ಯೂಸ್‌ ಕೊಟ್ಟ ಅಭಿಷೇಕ್ ಅಂಬರೀಶ್; ಮಂಡ್ಯದ ಗಂಡು ಹುಟ್ಟಿ ಬರ್ತಿದ್ದಾರೆ ಅಂದ್ರು ಅಂಬಿ ಫ್ಯಾನ್ಸ್‌!

Prajwal Revanna Case HD Revanna bail plea arguments and counter arguments
ಕ್ರೈಂ53 mins ago

Prajwal Revanna Case: ರೇವಣ್ಣ, ಪ್ರಜ್ವಲ್‌ ರೇವಣ್ಣ ಅರ್ಜಿಗಳ ವಿಚಾರಣೆ ಆ.29ಕ್ಕೆ ಮುಂದೂಡಿಕೆ

Vinesh Phogat
ಕ್ರೀಡೆ54 mins ago

Vinesh Phogat: ವಿನೇಶ್​ಗೆ 1.5 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

Bangladesh Unrest
ವಿದೇಶ1 hour ago

Bangladesh Unrest: ದೇವರ ಮೂರ್ತಿಗಳು ಪುಡಿ ಪುಡಿ; ಹಿಂದೂಗಳ ರಕ್ಷಣೆಗೆ ಸೇನೆ, ಪೊಲೀಸರೇ ಹಿಂದೇಟು

Paris Olympics
ಕ್ರೀಡೆ1 hour ago

Paris Olympics: ಒಲಿಂಪಿಕ್ಸ್​ನಲ್ಲಿಯೂ ಸದ್ದು ಮಾಡಿದ ‘​ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು; ವಿಡಿಯೊ ವೈರಲ್​

Buddhadeb Bhattacharjee
ದೇಶ2 hours ago

Buddhadeb Bhattacharjee: ಸರಳತೆಯಿಂದಲೇ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌