Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ Vistara News
Connect with us

ಉದ್ಯೋಗ

Job Alert| 60 ʼಸಹಾಯಕ ನಗರ ಯೋಜಕʼ ಹುದ್ದೆಗಳಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ʼಸಹಾಯಕ ನಗರ ಯೋಜಕರʼ ಹುದ್ದೆಗೆ ಒಟ್ಟು 60 ಸ್ಥಾನಗಳಿವೆ. ಉಳಿಕೆ ಮೂಲ ವೃಂದದಲ್ಲಿ 50 ಹಾಗೂ ಹೈದ್ರಬಾದ್‌ ಕರ್ನಾಟಕ ವೃಂದಕ್ಕೆ 10 ಸ್ಥಾನಗಳನ್ನು ಮೀಸಲಿಡಲಾಗಿದೆ.

VISTARANEWS.COM


on

Koo

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದೆ. ಆಯೋಗವು ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ಗ್ರೂಪ್‌ ʼಸಿʼ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ʼಸಹಾಯಕ ನಗರ ಯೋಜಕರʼ ಹುದ್ದೆಗೆ ಒಟ್ಟು 60 ಸ್ಥಾನಗಳಿವೆ. ಉಳಿಕೆ ಮೂಲ ವೃಂದದಲ್ಲಿ 50 ಹಾಗೂ ಹೈದರಾಬಾದ್‌ ಕರ್ನಾಟಕ ವೃಂದಕ್ಕೆ 10 ಸ್ಥಾನಗಳನ್ನು ಮೀಸಲಿಡಲಾಗಿದೆ.

ಪ್ರಮುಖ ದಿನಾಂಕಗಳು:

  1. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 30-04-2022
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-05-2022
  3. ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 31-05-2022

ಅರ್ಜಿ ಸಲ್ಲಿಸುವ ಹಂತಗಳು

ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಬೇಕು. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅರ್ಜಿಗಳು ಲಭ್ಯವಿರಲಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೂರು ಹಂತಗಳಲ್ಲಿ ಪೂರ್ಣಗೊಳ್ಳಲಿದೆ.

  1. ಮೊದಲನೇ ಹಂತ: ಪ್ರೊಫೈಲ್‌ ಸಿದ್ಧಪಡಿಸುವುದು (profile creation/updation)
  2. ಎರಡನೇ ಹಂತ: ಅರ್ಜಿ ಸಲ್ಲಿಸುವಿಕೆ (Application Submission)
  3. ಮೂರನೇ ಹಂತ: ಹಣ ಪಾವತಿ (Fees Payment through My Application section)

ಶುಲ್ಕ:

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: ₹600/-
ಪ್ರವರ್ಗ 2(ಎ),2(ಬಿ),3(ಎ),2(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ: ₹300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹50/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಪಾವತಿಯಿಂದ ವಿನಾಯಿತಿ ಇದೆ

ಎಲ್ಲಾ ಅಭ್ಯರ್ಥಿಗಳೂ ₹35 ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾತಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಬಳಸಿ

ಅರ್ಜಿಯನ್ನು ಸಲ್ಲಿಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷಾ ವಿಧಾನದಲ್ಲಿ ತೇರ್ಗಡೆಯನ್ನು ಹೊಂದಿದವರು ಈ ಹುದ್ದೆಗೆ ಅರ್ಹರಾಗುತ್ತಾರೆ.

ಇದನ್ನೂ ಓದಿ: Job Alert | RBI ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇಂದು ಕೊನೇದಿನ

ಉದ್ಯೋಗ

Artificial Intelligence : ಭಾರತದಲ್ಲಿ ಎಐ ವಲಯದಲ್ಲಿ 45,000 ಜಾಬ್ಸ್‌, ಸಂಬಳ ಎಷ್ಟು

ಭಾರತದಲ್ಲಿ ಎಐ ವಲಯದಲ್ಲಿ 45,000 ಉದ್ಯೋಗಾವಕಾಶಗಳು (Artificial Intelligence) ಈಗ ಲಭ್ಯವಿದೆ ಎಂದು ಟೀಮ್‌ಲೀಸ್‌ ತಿಳಿಸಿದೆ. ವಿವರ ಇಲ್ಲಿದೆ.

VISTARANEWS.COM


on

Edited by

AI
Koo

ನವ ದೆಹಲಿ: ಭಾರತದಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial Intelligence) ವಲಯದಲ್ಲಿ 45,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ ಎಂದು ಟೀಮ್‌ಲೀಸ್‌ ಡಿಜಿಟಲ್‌ ವರದಿ ತಿಳಿಸಿದೆ. ಡೇಟಾ ಸೈಂಟಿಸ್ಟ್‌ಗಳು(data scientists) ಮತ್ತು ಮೆಶೀನ್‌ ಲರ್ನಿಂಗ್‌ ಎಂಜಿನಿಯರ್‌ ಹುದ್ದೆಗಳಿಗೆ (Machine Learning engineers) ಬೇಡಿಕೆ ಇದೆ ಎಂದು ವರದಿ ತಿಳಿಸಿದೆ.

ಟೆಕ್‌ ಸ್ಟಾಫಿಂಗ್‌ ಕಂಪನಿಯಾದ ಟೀಮ್‌ಲೀಸ್‌, ಎಐ ವಲಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಬೆಳಕು ಚೆಲ್ಲಿದೆ. ಡೇಟಾ ಮತ್ತು ಎಂಎಲ್‌ ಎಂಜಿನಿಯರ್‌ಗಳಿಗೆ ವಾರ್ಷಿಕ 14 ಲಕ್ಷ ರೂ. ವೇತನ ಸಿಗುತ್ತದೆ. ಡೇಟಾ ಆರ್ಕಿಟೆಕ್ಟ್‌ಗಳು 12 ಲಕ್ಷ ರೂ. ತನಕ ಗಳಿಸಬಹುದು. 8 ವರ್ಷ ಅನುಭವ ಇರುವವರು ವಾರ್ಚಿಕ 25ರಿಂದ 45 ಲಕ್ಷ ರೂ. ಸಂಪಾದಿಸಬಹುದು. ಕರಿಯರ್‌ ಬೆಳವಣಿಗೆಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕೌಶಲವನ್ನು ಗಳಿಸುವುದು ಸೂಕ್ತ ಎಂದು ಟೀಮ್‌ಲೀಸ್‌ ವರದಿ ತಿಳಿಸಿದೆ.

37% ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎಐ ತಂತ್ರಜ್ಞಾನದ ತರಬೇತಿ ನೀಡಿವೆ. 30% ಕಂಪನಿಗಳು ತರಬೇತಿ ಒದಗಿಸಲು ಮುಂದಾಗಿವೆ. ಎಐ ಕೌಶಲಕ್ಕೆ ಬೇಡಿಕೆ ಮತ್ಯು ಪೂರೈಕೆಯ ನಡುವೆ ಭಾರಿ ಅಂತರ ಉಂಟಾಗಿದೆ ಎಂದು ವರದಿ ತಿಳಿಸಿದೆ.

Continue Reading

ಉದ್ಯೋಗ

KPSC Recruitment 2023 : ಹೈಕದ ಗ್ರೂಪ್‌ ಸಿ ಹುದ್ದೆಗಳಿಗೆ ಪರೀಕ್ಷೆ; ಕೀ ಉತ್ತರ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಹೈದರಾಬಾದ್‌ ಕರ್ನಾಟಕ ವೃಂದದ ಗ್ರೂಪ್‌ ʻಸಿʼ ಹುದ್ದೆಗಳಿಗೆ (KPSC Recruitment 2023) ಮಾ. 19 ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

VISTARANEWS.COM


on

Edited by

Key answers for the examination held on 19 03 2023 for various posts is published
Koo

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಒಟ್ಟು ಮೂರು ಅಧಿಸೂಚನೆಗಳಿಗೆ (KPSC Recruitment 2023) ಸಂಬಂಧಿಸಿದಂತೆ, ಹೈದರಾಬಾದ್‌ ಕರ್ನಾಟಕ ವೃಂದದ ಗ್ರೂಪ್‌ ʻಸಿʼ ಹುದ್ದೆಗಳಿಗೆ ಮಾ.19 ರಂದು ನಡೆಸಿದ್ದ ಪರೀಕ್ಷೆಯ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಪ್ಪು ಉತ್ತರ ಗುರುತಿಸಿದ್ದರೆ 1/4 (0.25) ಅಂಕ ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ. ಮಾ.19 ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ರ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ನಡೆದ ಮಾರನೇ ದಿನವೇ ಅಂದರೆ ಮಾ.20 ರಂದೇ ಕೀ ಉತ್ತರ ಪ್ರಕಟಿಸಲಾಗಿದೆ. ಎರಡೂ ಪತ್ರಿಕೆಗಳ ಕೀ ಉತ್ತರಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಈ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿರುತ್ತದೆ. ಆಕ್ಷೇಪಣೆಯ ಮಾದರಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಕೀ ಉತ್ತರವನ್ನು ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಆಸಕ್ತರು ಪ್ರಮಾಣೀಕೃತ ಪುಸ್ತಕ, ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಯನ್ನು ಮಾರ್ಚ್‌ 27ರ ಒಳಗೆ ಆಯೋಗದ ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ಆಕ್ಷೇಪಣೆಗೆ 50 ರೂ. ಶುಲ್ಕವನ್ನು ಪಾವತಿಸಬೇಕಿರುತ್ತದೆ. ಡಿಡಿಯ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ -5, ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು -6, ಆರ್ಥಿಕ ಮತ್ತು ಸಾಂಖ್ಯೆಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರ 17 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿತ್ತು.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ : https://kpsc.kar.nic.in

ಇದನ್ನೂ ಓದಿ : KMF TUMUL Recruitment 2023 : ಹಾಲು ಒಕ್ಕೂಟದಲ್ಲಿ 219 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Continue Reading

ಉದ್ಯೋಗ

KMF TUMUL Recruitment 2023 : ಹಾಲು ಒಕ್ಕೂಟದಲ್ಲಿ 219 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇರುವ 219 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು(KMF TUMUL Recruitment 2023) ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Edited by

KMF TUMUL Recruitment 2023 Apply Online for 219 Posts
Koo

ಬೆಂಗಳೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಖಾಲಿ ಇರುವ (KMF TUMUL Recruitment 2023 ) ವಿವಿಧ 219 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಒಟ್ಟು 35 ಪದನಾಮಗಳಲ್ಲಿ 219 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್‌ 17 ಕೊನೆಯ ದಿನವಾಗಿರುತ್ತದೆ. ಖುದ್ದಾಗಿ, ಅಂಚೆ, ಕೋರಿಯರ್‌ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತುಮುಲ್‌ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-04-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17-04-2023
ಸಹಾಯವಾಣಿ ಸಂಖ್ಯೆ: 9036072155
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ವೆಬ್‌ ವಿಳಾಸ:
https://www.tumul.coop/recruitment-2023

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

ಸಹಾಯಕ ವ್ಯವಸ್ಥಾಪಕರು (ಪ.ವೈ ಮತ್ತು ಕೃ.ಗ) – 14, ಸಹಾಯಕ ವ್ಯವಸ್ಥಾಪಕರು (ಮೆಕ್ಯಾನಿಕಲ್ ಎಂಜಿನಿಯರ್) – 01, ಸಹಾಯಕ ವ್ಯವಸ್ಥಾಪಕರು (ಇಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯುನಿಕೇಷನ್) – 01, ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌ ) – 03, ವೈದ್ಯಾಧಿಕಾರಿ – 01, ಆಡಳಿತಾಧಿಕಾರಿ- 01, ಖರೀದಿ (ಉಗ್ರಾಣಾಧಿಕಾರಿ)- 03, MES (ಸಿಸ್ಟಮ್ಸ್‌ ಅಧಿಕಾರಿ) – 03,, ಲೆಕ್ಕಾಧಿಕಾರಿ- 02, ಮಾರುಕಟ್ಟೆ ಅಧಿಕಾರಿ- 03,ತಾಂತ್ರಿಕ ಅಧಿಕಾರಿ (ಡಿ.ಟಿ) – 11, ತಾಂತ್ರಿಕ ಅಧಿಕಾರಿ (ವಿವಿಧ ವಿಭಾಗ)- 3, ವಿಸ್ತರಣಾ ಅಧಿಕಾರಿ (ದರ್ಜೆ)- 3: 22, MES (ದರ್ಜೆ 01) – 02, ಆಡಳಿತ ಸಹಾಯಕ ದರ್ಜೆ( 02)- 13, ಲೆಕ್ಕ ಸಹಾಯಕ (ದರ್ಜೆ-2) – 12, ಮಾರುಕಟ್ಟೆ ಸಹಾಯಕ (ದರ್ಜೆ-2)- 18, ಖರೀದಿ ಸಹಾಯಕ (ದರ್ಜೆ-2) -06, ಕೆಮಿಸ್ಟ್‌ (ದರ್ಜೆ-2)- 04, ಕಿರಿಯ ಸಿಸ್ಟಂ ಆಪರೇಟರ್ – 10, ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – 02, ಟೆಲಿಫೋನ್ ಆಪರೇಟರ್ – 02, ಕಿರಿಯ ತಾಂತ್ರಿಕ (ವಿವಿಧ ಟ್ರೇಡ್)- 59, ಚಾಲಕರು – 08, ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ)- 02 ಹುದ್ದೆ ಹೀಗೆ ಒಟ್ಟು 219 ಹುದ್ದೆಗಳಿಗೆ ನೇಮಕ ನಡೆಯಲಿದೆ.

ವಿದ್ಯಾರ್ಹತೆ ಏನು?

ಸಹಾಯಕ ವ್ಯವಸ್ಥಾಪಕರು
ಎಎಚ್‌/ಎಐ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್‌ ಎಹೆಚ್‌) ಪದವಿಯನ್ನು ಹೊಂದಿರಬೇಕು. ಕರ್ನಾಟಕ ವೆಟರ್ನರಿ ಕೌನ್ಸಿಲ್‌ ಪ್ರಮಾಣ ಪತ್ರ ಪಡೆದಿರಬೇಕು.
ಸಹಾಯಕ ವ್ಯವಸ್ಥಾಪಕರು (ಅಭಿಯಂತರ) ಹುದ್ದೆಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು ಮತ್ತು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.
ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್‌ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.
ಎಫ್‌ ಅಂಡ್‌ ಎಫ್‌ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ (ಅಗ್ರಿ) ಪದವಿಯನ್ನು ಅಗ್ರೋನಮಿ/ಸೀಡ್‌ ಟೆಕ್ನಾಲಜಿಯಲ್ಲಿ ಹೊಂದಿರಬೇಕು. ಕಂಪ್ಯೂಟರ್‌ ಜ್ಞಾನ ಇರಬೇಕು. ಹಾಗೂ ಸಂಬಂಧ ಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ ರೂ. 52,650-97,100

ವೈದ್ಯಾಧಿಕಾರಿ
ಎಂಬಿಬಿಎಸ್‌ ಪದವಿ ಪಡೆದಿರಬೇಕು ಮತ್ತು ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಪ್ರಮಾಣ ಪತ್ರ ಪಡೆದಿರಬೇಕು ಹಾಗೂ ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ : ರೂ. 52,650-97,100

ಆಡಳಿತಾಧಿಕಾರಿ
ಎಲ್‌ಎಲ್‌ಬಿ ಅಥವಾ ಬಿಎಎಲ್‌ ಎಲ್‌ಎಲ್‌ಬಿ/ ಎಂಬಿಎ (ಎಚ್‌ಆರ್‌)/ ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಸಂಬಂಧಪಟ್ಟ ಯಾವುದೇ ಕೈಗಾರಿಕೋದ್ಯಮದಲ್ಲಿ ಅಥವಾ ಕಾನೂನು ಸಂಸ್ಥೆಗಳಲ್ಲಿ ಅಥವಾ ಅಸೋಸಿಯೇಷನ್‌ಗಳಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ : ರೂ. 43,100-83,900

ಖರೀದಿ/ ಉಗ್ರಾಣಾಧಿಕಾರಿ
ಬಿಕಾಂ/ಬಿಬಿಎಂ/ಬಿಬಿಎಂ ಪದವಿ ಜತೆಗೆ ಎಂಕಾಂ/ಎಂಬಿಎ ಇನ್‌ ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌/ ಪಿಜಿ ಡಿಪ್ಲೊಮೊ ಇನ್‌ ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರಬೇಕು. ಸಂಬಂಧಪಟ್ಟ ಕ್ಷೇತ್ರದ ಯಾವುದೇ ಸಂಸ್ಥೆಯಲ್ಲಿ ಸಂಬಂಧಪಟ್ಟ ಯಾವುದೇ ಕೈಗಾರಿಕೋದ್ಯಮದಲ್ಲಿ ಅಥವಾ ಕಾನೂನು ಸಂಸ್ಥೆಗಳಲ್ಲಿ ಅಥವಾ ಅಸೋಸಿಯೇಷನ್‌ಗಳಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ : ರೂ. 43,100-83,900

ಎಂಐಎಸ್‌/ಸಿಸ್ಟಂ ಆಫೀಸರ್‌
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಕಂಪ್ಯೂಟರ್‌ ಸೈನ್ಸ್‌ / ಇನ್‌ಫಾರ್ಮೆಷನ್‌ ಸೈನ್ಸ್‌ /ಇ&ಸಿ ಪದವಿಯನ್ನು ಪಡೆದಿರಬೇಕು. ಕೈಗಾರೀಕೋದ್ಯ/ ಸಾಫ್ಟ್‌ವೇರ್‌ ಸಂಸ್ಥೆಯಲ್ಲಿ ಕನಿಷ್ಠ 2 ವರ್ಷ ಕೆಲಸ ನಿರ್ವಹಿಸಿದ ಅನುಭವ ಇರಬೇಕು.
ವೇತನ ಶ್ರೇಣಿ: ರೂ. 43,100-83,900

ಲೆಕ್ಕಾಧಿಕಾರಿ
ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಕಾಂ./ ಎಂಬಿಎ (ಫೈನಾನ್ಸ್‌) ವಿದ್ಯಾರ್ಹತೆ ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿಯಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ. 43,100-83,900

ಮಾರುಕಟ್ಟೆ ಅಧಿಕಾರಿ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ (ಮಾರುಕಟ್ಟೆ)/ ಬಿ.ಎಸ್ಸಿ (ಅಗ್ರಿಕಲ್ಚರಲ್‌ ಮಾರ್ಕೆಟಿಂಗ್‌ ಅಂಡ್‌ ಕೋ-ಆಪರೇಷನ್‌) ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಡೇರಿ ಉದ್ದಿಮೆಯಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಆಗಿ ಕನಿಷ್ಠ 4 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ : ರೂ. 43,100-83,900

ತಾಂತ್ರಿಕ ಅಧಿಕಾರಿ (ಡಿಟಿ)
ಬಿಟೆಕ್‌ (ಡಿಟಿ) ಪದವಿ ಪಡೆದಿರಬೇಕು. ಕನಿಷ್ಠ 2 ವರ್ಷಗಳ ಅನುಭವ ಇರಬೇಕು.
ವೇತನ ಶ್ರೇಣಿ : ರೂ. 43,100-83,900

ತಾಂತ್ರಿಕ ಅಧಿಕಾರಿ
ಅಭಿಯಂತರ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ (ಸಿವಿಲ್‌) ಪದವಿ ಹೊಂದಿರಬೇಕು. ಗುಣನಿಯಂತ್ರಣ ಅಧಿಕಾರಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ/ ಎಂಎಸ್ಸಿ (ಮೈಕ್ರೊಬಯಾಲಜಿ) ಸ್ನಾತಕೋತ್ತರ ಪದವಿ ಪಡೆದು ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ : ರೂ. 43,100-83,900

ವಿಸ್ತರಣಾಧಿಕಾರಿ ದರ್ಜೆ-3
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನದೊಂದಿರಬೇಕು. ತುಮಕೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಟ 05 ವರ್ಷಗಳ ಸೇವೆ ಸಲ್ಲಿಸಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ಇನ್ನು 12 ವಿಸ್ತರಣಾಧಿಕಾರಿ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ವೇತನ ಶ್ರೇಣಿ: ರೂ. 33,450-62,600

ಕೋ-ಆರ್ಡಿನೇಟರ್‌ (ಪ್ರೊಡಕ್ಷನ್‌)
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವೇತನ ಶ್ರೇಣಿ: ರೂ. 27,650-52,650

ಟೆಲಿಫೋನ್‌ ಆಪರೇಟರ್‌
ಪದವಿ ಹೊಂದಿರಬೇಕು. ಜೊತೆಗೆ ಟೆಲಿಫೋನ್‌ ನಿರ್ವಹಣೆಯಲ್ಲಿ ಪ್ರಮಾಣ ಪತ್ರ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: ರೂ. 27,650-52,650

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಕಿರಿಯ ತಾಂತ್ರಿಕ
ಮೆಕ್ಯಾನಿಕಲ್‌: ಮೆಕ್ಯಾನಿಕಲಿನಲ್ಲಿ ಡಿಪ್ಲೊಮಾ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಎಲೆಕ್ಟ್ರಿಕಲ್‌&ಎಲೆಕ್ಟ್ರಾನಿಕ್ಸ್‌: ಎಲೆಕ್ಟ್ರಿಕಲ್‌&ಎಲೆಕ್ಟ್ರಾನಿಕ್ಸ್‌ ಡಿಪ್ಲೊಮಾ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಎಲೆಕ್ಟ್ರಾನಿಕ್ಸ್‌&ಕಮ್ಯೂನಿಕೇಷನ್‌: ಎಲೆಕ್ಟ್ರಾನಿಕ್ಸ್‌&ಕಮ್ಯೂನಿಕೇಷನ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ರೆಫ್ರಿಜಿರೇಷನ್‌&ಏರ್‌ಕಂಡೀಷನನಿಂಗ್‌: ರೆಫ್ರಿಜಿರೇಷನ್‌&ಏರ್‌ಕಂಡೀಷನನಿಂಗ್‌ನಲ್ಲಿ ಐಟಿಐ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಫಿಟ್ಟರ್‌: ಫಿಟ್ಟರ್‌ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವೆಲ್ಡರ್‌: ವೆಲ್ಡಿಂಗ್‌ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌: ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌: ಈ ಟ್ರೇಡ್‌ನಲ್ಲಿ ಐಟಿಐ ಮಾಡಿರಬೇಕು ಹಾಗೂ ಕೈಗಾರಿಕೋದ್ಯಮದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಬಾಯ್ಲರ್‌ : ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಡೈರೆಕ್ಟರ್‌ ಆಫ್‌ ಫ್ಯಾಕ್ಟರಿ &ಬಾಯ್ಲರ್‌ ರವರಿಂದ ಎರಡನೇ ದರ್ಜೆ ಬಾಯ್ಲರ್‌ ಅಟೆಂಡೆಂಟ್‌ ಸರ್ಟಿಫಿಕೇಟ್‌ ಹೊಂದಿರಬೇಕು.
ವೇತನ ಶ್ರೇಣಿ ರೂ. 21,400-42,000

ಚಾಲಕರು
ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾಗಿರಬೇಕು ( ಕನ್ನಡವನ್ನು ಒಂದು ವಿಷಯವಾಗಿ ಓದಿರಬೇಕು) ಹಾಗೂ ಎಲ್‌ಎಂವಿ/ಎಚ್‌ಎಂವಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ವೇತನ ಶ್ರೇಣಿ ರೂ. 21,400-42,000

ವಯೋಮಿತಿ ಎಷ್ಟು?

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ. ಗರಿಷ್ಠ ವಯೋಮಿತಿಯಲ್ಲಿ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗುತ್ತದೆ. ವಯೋಮಿತಿಯನ್ನು ನೇಮಕಾತಿ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ: 17-04-2023 ಕ್ಕೆ ಲೆಕ್ಕಾಚಾರ ಹಾಕಲಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಅರ್ಜಿ ಶುಲ್ಕ ಎಷ್ಟು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-3 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 (ಬ್ಯಾಂಕ್‌ ಶುಲ್ಕ ಪ್ರತ್ಯೇಕ) ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ. 1000 (ಬ್ಯಾಂಕ್‌ ಶುಲ್ಕ ಪ್ರತ್ಯೇಕ). ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ (ಡೆಬಿಟ್‌ ಕಾರ್ಡ್‌ / ಕ್ರೆಡಿಟ್‌ ಕಾರ್ಡ್‌/ ಇಂಟರ್‌ನೆಟ್‌ ಬ್ಯಾಂಕಿಂಗ್‌) ಮೂಲಕ ಪಾವತಿಸಬಹುದಾಗಿರುತ್ತದೆ. ಆಫ್‌ ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.

ನೇಮಕಾತಿಯ ಸಂಪೂರ್ಣ ಮಾಹಿತಿಯ ಅಧಿಸೂಚನೆಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ನೇಮಕ ಹೇಗೆ?

ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ (ಕಿರಿಯ ತಾಂತ್ರಿಕ ಹುದ್ದೆ) ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ನೆಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಟ 15 ಅಂಕಗಳನ್ನು ನಿಗದಿಪಡಿಸಲಾರುತ್ತದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85 ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್‌ ಪಟ್ಟಿಯನ್ನು ತಯಾರಿಸಿ ಮೆರಿಟ್‌ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : KPSC Recruitment 2023 : 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ; ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ

Continue Reading

ಉದ್ಯೋಗ

World Sleep Day : ಉದ್ಯೋಗಿಗಳಿಗೆ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಟ್

ಬೆಂಗಳೂರು ಮೂಲದ ಗೃಹೋಪಕರಣ ವಲಯದ ಸ್ಟಾರ್ಟಪ್‌ ವೇಕ್‌ಫಿಟ್‌, ತನ್ನ ಉದ್ಯೋಗಿಗಳಿಗೆ ವಿಶ್ವ ರಜಾ ದಿನಾಚರಣೆ ಪ್ರಯುಕ್ತ ನಿದ್ದೆ ಮಾಡಲು ರಜೆ ನೀಡುವ (World Sleep Day) ಮೂಲಕ ಗಮನ ಸೆಳೆದಿದೆ. ವಿವರ ಇಲ್ಲಿದೆ.

VISTARANEWS.COM


on

Edited by

sleep day
Koo

ಬೆಂಗಳೂರು: ನಿಮಗೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ಎಲ್ಲರೂ ಕಂಪನಿಗಳಲ್ಲಿ ಸಮಾ ದುಡಿದು ಬಸವಳಿದು ಮನೆಗೆ ಬರುತ್ತಾರೆ. ( world sleep day) ವಾರಾಂತ್ಯ ಬಂದರೆ ಸಾಕು ಎಂದು ಭಾವಿಸುತ್ತಾರೆ. ಆದರೆ ಈಗ ಕಾರ್ಪೊರೇಟ್‌ ಸಂಸ್ಕೃತಿ ಬದಲಾಗುತ್ತಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಭತ್ಯೆ, ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಹಣಕಾಸು ಪ್ಯಾಕೇಜ್‌ಗಳ ಜತೆಗೆ ವಿನೂತನ ಆಫರ್‌ಗಳನ್ನೂ ನೀಡುತ್ತಿವೆ. (World Sleep Day) ಅಂಥ ಒಂದು ವಿಶೇಷ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ವೇಕ್‌ಫಿಟ್‌ ಸಲ್ಯೂಷನ್ಸ್‌ (wakefit solutions) ತನ್ನ ಉದ್ಯೋಗಿಗಳಿಗೆ ಐಚ್ಛಿಕ ರಜೆಯನ್ನು ಇಂದು (ಮಾರ್ಚ್‌ 17) ನೀಡಿದೆ. ಏಕೆಂದರೆ ಇಂದು ವಿಶ್ವ ನಿದ್ದೆಯ ದಿನವಾಗಿದೆ. ಈ ಸ್ಟಾರ್ಟಪ್‌ ಹೋಮ್‌ & ಸ್ಲೀಪ್‌ ಸಲ್ಯೂಷನ್ಸ್‌ ನೀಡುತ್ತಿದ್ದು, ಗೃಹೋಪಕರಣಗಳ ಮಾರಾಟ ವಲಯದಲ್ಲಿ ( Home furnishings products) ವಹಿವಾಟು ನಡೆಸುತ್ತಿದೆ. ಈ ಸ್ಟಾರ್ಟಪ್‌ ಲಿಂಕ್ಡ್‌ ಇನ್‌ ಮೂಲಕ ಅಚ್ಚರಿಯ ಇ-ಮೇಲ್‌ನ ಸ್ಕ್ರೀನ್‌ಶಾಟ್‌ ಅನ್ನು ರವಾನಿಸಿದೆ.

ಈ ಇ-ಮೇಲ್‌ನಲ್ಲಿ ಅಚ್ಚರಿಯ ರಜಾ ದಿನ- ನಿದ್ದೆಯ ಕೊಡುಗೆ ಎಂಬ ಶೀರ್ಷಿಕೆ ಇದೆ. ವೇಕ್‌ಫಿಟ್‌ ಅಂತಾರಾಷ್ಟ್ರೀಯ ರಜಾ ದಿನವನ್ನು ಶುಕ್ರವಾರ ಘೋಷಿಸಿದೆ. ಇದು ಎಲ್ಲ ಉದ್ಯೋಗಿಗಳಿಗೆ ಐಚ್ಛಿಕ ರಜಾ ದಿನವಾಗಿದೆ. ನಿದ್ದೆಯ ದಿನವನ್ನು ನಾವು ಹಬ್ಬದ ದಿನ ಎಂದು ಪರಿಗಣಿಸಿದ್ದೇವೆ. ನೀವು ಯಾವುದೇ ಇತರ ದಿನದಲ್ಲೂ ಈ ದಿನದ ರಜೆಯನ್ನು ತೆಗೆದುಕೊಳ್ಳಬಹುದು ಎಂದು ವೇಕ್‌ಫಿಟ್‌ ಸಲ್ಯೂಷನ್ಸ್‌ ತನ್ನ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ತಿಳಿಸಿದೆ.

ಇಂಡಿಯನ್‌ ಸ್ಲೀಪ್‌ ಸ್ಕೋರ್‌ಕಾರ್ಡ್‌ ಪ್ರಕಾರ 2022ರಲ್ಲಿ ಉದ್ಯೋಗಿಗಳು ಕೆಲಸದ ವೇಳೆ ನಿದ್ದೆಯ ಮಂಪರಿಗೆ ಒಳಗಾಗುವ ಪ್ರವೃತ್ತಿಯಲ್ಲಿ 21% ಏರಿಕೆಯಾಗಿದೆ. ನಿದ್ರಾಹೀನತೆಯ ಸಮಸ್ಯೆಯನ್ನು ತಪ್ಪಿಸಲು ನಿದ್ದೆಯ ಕೊಡುಗೆ ಕೊಡುವುದು ಉತ್ತಮ ಎಂದು ಸ್ಟಾರ್ಟಪ್‌ ಇ-ಮೇಲ್‌ ಮೂಲಕ ತಿಳಿಸಿದೆ.

ವಿಶ್ವ ನಿದ್ದೆಯ ದಿನವನ್ನು ನಿದ್ದೆಯ ಮಹತ್ವವನ್ನು ಪ್ರಚುರಪಡಿಸಲು ಬಳಸಿಕೊಳ್ಳಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ನಿದ್ದೆ ಅವಶ್ಯಕವಾಗಿದೆ. ಗುಣಮಟ್ಟದ ನಿದ್ದೆ ಕೂಡ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಮಾಡಲು ಒಂದು ದಿನ ರಜೆ ನೀಡುವುದು ಉದ್ಯೋಗಿಗಳನ್ನು ಆರೋಗ್ಯದ ಕಾಳಜಿ ವಹಿಸುವಂತೆಯೂ ಮಾಡುತ್ತದೆ ಎಂದು ಸ್ಟಾರ್ಟಪ್‌ ವಿವರಿಸಿದೆ. ಕಳೆದ ವರ್ಷವೂ ವೇಕ್‌ಫಿಟ್‌ ಸಲ್ಯೂಷನ್ಸ್‌ ಉದ್ಯೋಗಿಗಳಿಗೆ ಕೆಲಸ ನಡುವೆ 30 ನಿಮಿಷಗಳ ಕಾಲ ನಿದ್ದೆ ಮಾಡಲು ಅವಕಾಶ ಕಲ್ಪಿಸಿತ್ತು.

ವೇಕ್‌ಫಿಟ್‌ನ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ, ಕಂಪನಿಯಲ್ಲಿ ಉದ್ಯೋಗಿಗಳಿಗೆ ಮಧ್ಯಾಹ್ನ 2ರಿಂದ 2.30 ತನಕ ಅಧಿಕೃತವಾಗಿ ನಿದ್ದೆಯ ಅವಧಿಯನ್ನು ಘೋಷಿಸಲಾಗಿದೆ. ಕಚೇರಿಯ ಪ್ರಶಾಂತ ಕೊಠಡಿಗಳಲ್ಲಿ ನಿದ್ರಿಸಬಹುದು ಎಂದಿದ್ದಾರೆ. ಉದ್ಯೋಗಿಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Continue Reading
Advertisement
ಸಿನಿಮಾ5 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ7 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್9 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ13 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

HP Pavilion Aero 13 Laptop Launched and Check details
ಗ್ಯಾಜೆಟ್ಸ್15 mins ago

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಕರ್ನಾಟಕ17 mins ago

Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ

congress says cm basavraj bommai will not get chance to contest inkarnataka election
ಕರ್ನಾಟಕ28 mins ago

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

Azam peer Khadri
ಕರ್ನಾಟಕ40 mins ago

Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

ಕಿರುತೆರೆ42 mins ago

Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

ಕರ್ನಾಟಕ45 mins ago

Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ2 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ6 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ7 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!