ಊಟಕ್ಕೆ ಹೋಗಿದ್ದ ಸ್ನೇಹಿತರ ಜೊತೆ ಹಂತಕರ ಕಿರಿಕ್‌: ಮಾರಕಾಸ್ತ್ರಗಳಿಂದ ಅಟ್ಯಾಕ್! - Vistara News

ಕರ್ನಾಟಕ

ಊಟಕ್ಕೆ ಹೋಗಿದ್ದ ಸ್ನೇಹಿತರ ಜೊತೆ ಹಂತಕರ ಕಿರಿಕ್‌: ಮಾರಕಾಸ್ತ್ರಗಳಿಂದ ಅಟ್ಯಾಕ್!

ಜೆ.ಜೆ.ನಗರದಲ್ಲಿ ಹತ್ಯೆ ಪ್ರಕರಣ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಬೈಕ್ ಟಚ್ ಆಗಿದ್ದನ್ನ ಪ್ರಶ್ನಿಸಿದ್ದಕ್ಕೆ ಹಂತಕರು ಚಂದ್ರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

VISTARANEWS.COM


on

Accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಏಪ್ರಿಲ್‌ 4ರಂದು ಜೆ.ಜೆ.ನಗರದಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹತ್ಯೆಯಾದ ಚಂದ್ರು ಸ್ನೇಹಿತ ಸೈಮನ್‌ ರಾಜ್‌ ಜೆ.ಜೆ,ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆರೋಪಿ ಶಾಹಿದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸೈಮನ್‌ ನೀಡಿರುವ ದೂರಿನಲ್ಲಿ ಏನಿದೆ..?

ಏಪ್ರಿಲ್‌ 4ರ ಮಧ್ಯರಾತ್ರಿ 12 ಗಂಟೆಗೆ ಸ್ನೇಹಿತ ಸೈಮನ್‌ ರಾಜ್‌ ಮನೆಗೆ ತೆರಳಿದ್ದ ಚಂದ್ರು ಕೇಕ್‌ ಕಟ್‌ ಮಾಡಿಸಿ ಹುಟ್ಟುಹಬ್ಬ ಆಚರಿಸಿದ್ದ. ಬಳಿಕ ಚಿಕನ್ ರೋಲ್ ಕೊಡಿಸು ಎಂದು ಕೇಳಿದ್ದ ಸ್ನೇಹಿತ ಸೈಮನ್‌ನನ್ನು ಚಂದ್ರು ಕೇಳಿದ್ದ. ಬಳಿಕ ಚಿಕನ್ ರೋಲ್ ತರಲು ಸೈಮನ್‌ ರಾಜ್‌ ಹಾಗೂ ಚಂದ್ರು ಇಬ್ಬರು ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ತೆರಳಿದ್ದರು. ಚಾಮರಾಜಪೇಟೆ ಸುತ್ತಮುತ್ತ ಸುತ್ತಾಡಿದ್ದ ಸ್ನೇಹಿತರು ಬಳಿಕ ರಂಜಾನ್ ಹಿನ್ನಲೆ ಗೋರಿಪಾಳ್ಯದಲ್ಲಿ ಸಿಗುತ್ತೆ ಎಂದು ಮಧ್ಯರಾತ್ರಿ 2.15ರ ಸುಮಾರಿನಲ್ಲಿ ಹಳೇ ಗುಡ್ಡದಹಳ್ಳಿಗೆ ಹೋಗಿದ್ದರು.

ಹಳೇ ಗುಡ್ಡದಹಳ್ಳಿಯ 9ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ಚಂದ್ರು ಬೈಕ್‌ಗೆ ಆರೋಪಿಗಳ ಬೈಕ್‌ ಡಿಕ್ಕಿ ಹೊಡೆದಿದೆ. ಇದನ್ನು ಚಂದ್ರು ಹಾಗೂ ಸೈಮನ್‌ ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದರು. ಈ ವೇಳೆ ಆರೋಪಿ ಶಾಹಿದ್‌ ಅದನ್ನ ಕೇಳಲು ನೀವು ಯಾರು ಎಂದು ಅವಾಚ್ಯ ಪದಗಳಿಂದ ಬೈದಿದ್ದ. ನಾನು ಇದೇ ಏರಿಯಾದವನು, ಏನ್ ಮಾಡಿಕೊಳ್ತೀಯಾ ಎಂದು ಅಲ್ಲಿನ ಕೆಲವರನ್ನು ಸೇರಿಸಿಕೊಂಡು ಶಾಹಿದ್ ಗಲಾಟೆ ಕೂಡ ಮಾಡಿದ್ದ.

ಆರೋಪಿ ಶಾಹಿದ್‌ ಹಾಗೂ ಕೆಲವರು ಚಂದ್ರು ಹಾಗೂ ಸೈಮನ್‌ ಇಬ್ಬರನ್ನು ತಳ್ಳಾಡಿದ್ದಾರೆ. ಅಲ್ಲದೆ, ಶಾಹಿದ್ ಮತ್ತು ಆತನ ಸಹಚರರು ಏಕಾಏಕಿ ಲಾಂಗ್ ಬೀಸಿದ್ದಾರೆ. ಈ ವೇಳೆ ಸೈಮನ್ ತಪ್ಪಿಸಿಕೊಂಡಿದ್ದ. ಆದರೆ ಚಂದ್ರು ತೊಡೆಗೆ ಶಾಹಿದ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವ ಆಗೋದನ್ನ ನೋಡಿ ಶಾಹಿದ್ & ಆತನ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ.

ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಚಂದ್ರುನನ್ನು ಆತನ ಸ್ನೇಹಿತ ಸೈಮನ್‌ ರಾಜ್‌ ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಮುಂಜಾನೆ 4 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚಂದ್ರು ಮೃತಪಟ್ಟಿದ್ದಾನೆಂದು ಆಸ್ಪತ್ರೆ ವೈದ್ಯರು ತಿಳಿಸಿದರು ಎಂದು ಸ್ನೇಹಿತ ಸೈಮನ್‌ ರಾಜ್‌ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಬಂಧನ: ಕಮಲ್‌ ಪಂತ್‌

ಜೆ.ಜೆ.ನಗರ ಯುವಕನ ಕೊಲೆ ಪ್ರಕರಣ ಸಂಬಂದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಪ್ರತಿಕ್ರಿಯಿಸಿದ್ದಾರೆ. ಏಪ್ರಿಲ್‌ 4ರ ಮಧ್ಯರಾತ್ರಿ ಸೈಮನ್ ರಾಜ್ ಮತ್ತು ಚಂದ್ರು ಊಟಕ್ಕೆ ಹೋಗಿದ್ದರು. ಈ ವೇಳೆ ಶಾಹಿದ್ ಗಾಡಿಗೆ ಟಚ್ ಆಗಿ ವಾದ-ವಿವಾದ ನಡೆದಿದೆ. ಇದೇ ವಿಚಾರವಾಗಿ ಗಲಾಟೆಯಾಗಿ ಕೊಲೆಯಾಗಿದೆ. ಪೊಲೀಸ್‌ ತನಿಖೆಯಲ್ಲಿ ಮೂವರು ಇರುವುದು ಗೊತ್ತಾಗಿದೆ. ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.

ಕೊಲೆಯಾದ ಚಂದ್ರು ಸ್ನೇಹಿತ ಸೈಮನ್ ರಾಜ್‌ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಜೆ.ಜೆ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಳಗಾವಿ

Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು

Drowned in water : ಬ್ರಿಡ್ಜ್ ಕಮ್ ಬ್ಯಾರೇಜ್‌ ಮೇಲೆ ಬಂದಾಗ ಟೈಲರ್ ಸಮೇತ ಟ್ರಾಕ್ಟರ್‌ವೊಂದು ನದಿಗೆ ಬಿದ್ದಿದೆ. 12 ಮಂದಿ ಅಪಾಯದಿಂದ ಪಾರಾಗಿದ್ದು, ಓರ್ವ ನೀರಿನ ರಭಸಕ್ಕೆ ಕಣ್ಮರೆಯಾಗಿದ್ದಾನೆ.

VISTARANEWS.COM


on

By

Drowned in water
Koo

ಬೆಳಗಾವಿ: ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ಸೇತುವೆ (Drowned in water) ಮೇಲೆ 13 ಜನರನ್ನು ಹೊತ್ತು ಬರುತ್ತಿದ್ದ ಟ್ರಾಕ್ಟರ್‌ವೊಂದು ಮಗುಚಿಬಿದ್ದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿ ದುರ್ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್‌ ಮೇಲೆ ಬಂದಾಗ ಟೈಲರ್ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದೆ. ನೀರಿಗೆ ಬಿದ್ದೊಡನೆ 12 ಮಂದಿ ಈಜಿಕೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ನೀರಲ್ಲಿ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆಂದು‌ ಕಾರ್ಮಿಕರು ಟ್ರಾಕ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನದಿ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಟ್ರಾಕ್ಟರ್ ಬಿದ್ದಿತ್ತು. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಕೊಚ್ಚಿ ಹೋದವನಿಗಾಗಿ ಹುಡುಕಾಟ ನಡೆಯುತ್ತಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:Car Accident : ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ

ಕೋಲಾರದಲ್ಲಿ ಕೃಷಿ ಹೊಂಡಕ್ಕೆ ಜಾರಿ ಬಿದ್ದ ಬಾಲಕ ಸಾವು

ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಬಾಲಕನೊರ್ವ ಮೃತಪಟ್ಟಿದ್ದಾನೆ. ಕೋಲಾರ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚರಣ್ (11) ಮೃತ ದುರ್ದೈವಿ.

ಐದನೇ ತರಗತಿಯಲ್ಲಿ ಓದುತ್ತಿದ್ದ ಚರಣ್‌ ಕೃಷಿ ಹೊಂಡದ ಸಮೀಪ ಬಂದಾಗ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಪರಿಣಾಮ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕೋಡಿ

Car Accident : ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ

Car Accident : ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಇತ್ತ ಕಾರು ಚಾಲಕ ಪರಾರಿ ಆಗಿದ್ದಾರೆ.

VISTARANEWS.COM


on

By

Car Accident in chikkodi
Koo

ಬೆಳಗಾವಿ ಜಿಲ್ಲೆಯ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು (Car Accident) ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು.

ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್‌ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರಿಗೆ ತೀವ್ರ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ.

Car Accident

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ: Shivamogga Accident : ತಿರುವಿನಲ್ಲಿ ಖಾಸಗಿ ಬಸ್‌ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ

ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದ ಬೈಕ್ ಸವಾರ

ಬೆಂಗಳೂರು: ದಾರಿ ಬಿಡುವ ಸಂದರ್ಭದಲ್ಲಿ ಬೈಕ್‌ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರೋಡ್ ರೇಜ್‌ಗೆ ಮತ್ತೊಂದು ಘಟನೆ ಸೇರ್ಪಡೆಯಾದಂತಾಗಿದೆ.

ಜಕ್ಕೂರಿನಲ್ಲಿ ಯೂ ಟರ್ನ್ ಮಾಡುವ ವೇಳೆ ಕಾರು ಚಾಲಕ ಪ್ರವೀಣ್ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಕಾರನ್ನು ಅಡ್ಡ ಹಾಕಿ ಕಾರ್‌ನ ಬಾನೆಟ್‌ಗೆ ಒದ್ದು ಬೈಕ್‌ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಫಾಲೋ ಮಾಡಿಕೊಂಡು ಬಂದಿದ್ದ ದ್ವಿಚಕ್ರ ವಾಹನ ಸವಾರ ಶ್ರೀರಾಮಪುರ ವಿಲೇಜ್ ಬಳಿಯೂ ಕಿರಿಕ್‌ ಮಾಡಿದ್ದಾನೆ. ಕಾರ್ ಡ್ಯಾಷ್ ಕ್ಯಾಮ್‌ ಬೈಕ್‌ ಸವಾರನ ಕೃತ್ಯ ಸೆರೆಯಾಗಿದೆ.

ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್

ಬೆಂಗಳೂರು: ನಗರದಲ್ಲಿ ಹೊಸ ರೀತಿಯ ಕಳ್ಳತನ ಆರಂಭವಾಗಿದೆ. ಇದೀಗ ಕಳ್ಳರು ತುಪ್ಪವನ್ನೇ ಟಾರ್ಗೆಟ್‌ ಮಾಡಿ ಕಾರ್ಯ ಪ್ರವೃತ್ತರಾಗಿದ್ದಾರೆ. ನಂದಿನಿ ಪಾರ್ಲರ್‌ಗಳು, ಸೂಪರ್ ಮಾರ್ಕೆಟ್‌ಗಳೇ ಇವರ ಮುಖ್ಯ ಗುರಿ. ಅದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ಅನ್ನಪೂರ್ಣೇಶ್ವರಿ ನಗರದಲ್ಲಿ 15 ಲೀಟರ್ ತುಪ್ಪ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ತುಪ್ಪ ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ (Robbery Case).

ಒಬ್ಬರೇ ಇರುವ ಅಂಗಡಿಗಳನ್ನ ಟಾರ್ಗೆಟ್‌ ಮಾಡುವ ಕಳ್ಳರು ಕೆಜಿಗಟ್ಟಲೇ ತುಪ್ಪ ಖರೀದಿಸುವ ನೆಪದಲ್ಲಿ ಆಗಮಿಸುತ್ತಾರೆ. ವಳಿಕ ಮತ್ತೊಂದು ವಸ್ತು ಕೇಳಿ ಮಾಲೀಕರು ಅತ್ತ ತಿರುಗುವಷ್ಟರಲ್ಲಿ ತಂದಿಟ್ಟ ತುಪ್ಪವನ್ನು ಎತ್ತಿಕೊಂಡು ಪರಾರಿಯಾತ್ತಾರೆ. ಕಳೆದ ಒಂದು ತಿಂಗಳ ಹಿಂದೆ ಇದೇ ರೀತಿ ನಂದಿನಿ ಪಾರ್ಲರ್‌ ಒಂದರಿಂದ 15 ಕೆಜಿ ತುಪ್ಪ ಖರೀದಿಸಿ ಖದೀಮರು ಪಾರಾರಿಯಾಗಿದ್ದರು.

ಅಂದು ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್‌ನಲ್ಲಿ ಕೈಚಳಕ ತೋರಿದ್ದ ಕಳ್ಳರು ಪೇಡ ಖರೀದಿ ನೆಪದಲ್ಲಿ ತುಪ್ಪ ಕದ್ದೊಯ್ದಿದ್ದರು. ಇದೀಗ ಅದೇ ರೀತಿಯಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಕಳ್ಳರು ಕೈ ಚಳಕ ತೋರಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಪೇರ್ ಪ್ರೈಸ್ ಎಂಬ ಸೂಪರ್ ಮಾರ್ಕೇಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿಂದಲೂ 15 ಲೀಟರ್ ತುಪ್ಪ ಖರೀದಿಸಿದ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾ,ಮೆರಾದಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Shivamogga Accident : ತಿರುವಿನಲ್ಲಿ ಖಾಸಗಿ ಬಸ್‌ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ

Heavy Rain : ಭಾರಿ ಮಳೆಯಿಂದಾಗಿ ಬಸ್‌ವೊಂದು ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿ (Shivamogga Accident) ಹೊಡೆದಿದೆ. ಬಸ್‌ನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

By

Shivamogga Accident
Koo

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು (Shivamogga Accident) ಪಲ್ಟಿಯಾಗಿದೆ. ಪರಿಣಾಮ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ (Road Accident) ಘಟನೆ ನಡೆದಿದೆ.

ಖಾಸಗಿ ಬಸ್‌ ಸಾಗರದಿಂದ ಬೆಳ್ತಂಗಡಿಗೆ ತೆರಳುತ್ತಿತ್ತು. ಮುಂಬಾಳು ತಿರುವಿನಲ್ಲಿ ಬರುವಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ನೋಡನೋಡುತ್ತಿದ್ದಂತೆ ಬಸ್‌ ಪಲ್ಟಿ ಹೊಡೆದಿದೆ. ಈ ವೇಳೆ ಬಸ್‌ನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡರು.

Shivamogga News

ಧಾರಾಕಾರವಾಗಿ ಸುರಿದ ಮಳೆಯಿಂದ ತಿರುವಿನಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಸಾಗರ, ಆನಂದಪುರ ಹಾಗೂ ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ರಸ್ತೆಗೆ ಅಡ್ಡಲಾಗಿ ಬಸ್‌ ಬಿದ್ದ ಪರಿಣಾಮ ಸ್ವಲ್ಪ ಸಮಯ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಹೀಗಾಗಿ ಪೊಲೀಸರು ಬಸ್‌ ತೆರವು ಕಾರ್ಯಚಾರಣೆಯಲ್ಲಿ ತೊಡಗಿದ್ದರು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ.

Shivamogga Accident

ಇದನ್ನೂ ಓದಿ:Robbery Case: ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್; ನಂದಿನಿ ಪಾರ್ಲರ್‌, ಸೂಪರ್ ಮಾರ್ಕೆಟ್‌ ಇವರ ಟಾರ್ಗೆಟ್‌

ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಸಾವು

ಬೆಳಗಾವಿ ಜಿಲ್ಲೆ ರಾಯಬಾದ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಮೃತ ದುರ್ದೈವಿಗಳು.

ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್‌ ಕಂಬ ಡಿಕ್ಕಿ ಹೊಡೆದಿದೆ. ಬಳಿಕ ಕಂಬದ ಸಮೇತ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಡಿಕ್ಕಿ ರಭಸಕ್ಕೆ ಕಾರಿನ ಹಿಂಬದಿ ಕುಳಿತಿದ್ದ ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಇವರಿಗೆಲ್ಲ ಸಚಿವ ಸ್ಥಾನ ಫಿಕ್ಸ್?‌

Modi 3.0 Cabinet: ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಕೇಳಿ ಬರುತ್ತಿದೆ. ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತ. 4+1 ಫಾರ್ಮುಲಾದ ಪ್ರಕಾರ ಒಟ್ಟು ಐವರು ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ.

VISTARANEWS.COM


on

Modi 3.0 Cabinet
Koo

ಬೆಂಗಳೂರು: ಬಹುಮತದೊಂದಿಗೆ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಹಾಗಾದರೆ ಸಚಿವ ಸ್ಥಾನದ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ (Modi 3.0 Cabinet).

ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತ. 4+1 ಫಾರ್ಮುಲಾದ ಪ್ರಕಾರ ಒಟ್ಟು ಐವರು ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ. ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುವುದು ಪಕ್ಕಾ ಎನ್ನಲಾಗಿದೆ. ಇವರ ಜತೆಗೆ ಪ್ರಹ್ಲಾದ ಜೋಶಿ ಅವರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಸಚಿವರಾಗಿ ಮುಂದುವರಿಯಲಿದ್ದು, ಕರ್ನಾಟಕದ ಕೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಎನ್ನುವ ಮಾತು ಕೇಳಿ ಬಂದಿದೆ. ಇನ್ನೊಂದು ಒಂದು ಸ್ಥಾನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಡಾ.ಮಂಜುನಾಥ್ ಅವರಿಗೆ ಲಭಿಸುವ ಸಾಧ್ಯತೆ ಇದೆ.

ಮತ್ತೊಂದು ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ. ಬಹುತೇಕ ಮಾಜಿ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಇದು ಒಲಿಯುವ ಸಾಧ್ಯತೆ ಇದೆ. ಈ ನಡುವೆ ನಾಲ್ಕು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರಿಂದಲೂ ಸಚಿವ ಸ್ಥಾನ ಪಡೆಯುವ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಇನ್ನೂ ಒಂದು ಸ್ಥಾನ ಹೆಚ್ಚು ಸಿಕ್ಕಿದರೆ ಬಹುತೇಕ ದಲಿತ ಕೋಟಾದಲ್ಲಿ ಗೋವಿಂದ ಕಾರಜೋಳ ಇಲ್ಲವೇ ರಮೇಶ್ ಜಿಗಜಿಣಿಗೆ ಲಕ್ ಹೊಡೆಯಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.

ಇನ್ನು ಹಿರಿಯ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಮತ್ತು ಡಾ.ಸುಧಾಕರ್‌ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇಲ್ಲ. ಹೀಗಾಗಿ ಸದ್ಯ ಯಾರೆಲ್ಲ ಸಚಿವರಾಗುತ್ತಾರೆ ಎನ್ನುವ ಕುತೂಹಲ ಮುಂದುವರಿದಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಜೂನ್‌ 7) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬೆಂಬಲ ನೀಡಿರುವ ಪತ್ರದೊಂದಿಗೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಅವರು ಹಕ್ಕು ಮಂಡಿಸಿದ್ದಾರೆ. ಇನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರಿಗೆ ದ್ರೌಪದಿ ಮುರ್ಮು ಅವರು ಸಕ್ಕರೆ ಮಿಶ್ರಣ ಆಗಿರುವ ಮೊಸರನ್ನು ತಿನ್ನಿಸಿ, ಶುಭ ಕೋರಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್11 mins ago

Viral Video: ಬಾಲಕಿಯ ಹಿಂಭಾಗ ಮುಟ್ಟಿದ ಮುಸ್ಲಿಂ ಯುವಕ; ಆಮೇಲೆ ನಡೆದಿದ್ದೇ ಬೇರೆ!

Drowned in water
ಬೆಳಗಾವಿ17 mins ago

Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು

Radhika Merchant archival Dior dress for her pre-wedding
ಸಿನಿಮಾ21 mins ago

Radhika Merchant: ಪ್ರಿವೆಡ್ಡಿಂಗ್‌ಗೆ ಅಂಬಾನಿ ಸೊಸೆ ಧರಿಸಿದ್ದು 65 ವರ್ಷ ಹಳೆಯ ಸ್ಕರ್ಟ್‌! ಇದರ ಬೆಲೆ?

Car Accident in chikkodi
ಚಿಕ್ಕೋಡಿ46 mins ago

Car Accident : ಚಿಕ್ಕೋಡಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಕಾರು ಬಿಟ್ಟು ಚಾಲಕ ಪರಾರಿ

Viral Video
ಕ್ರೀಡೆ50 mins ago

Viral Video: ಹೋಟೆಲ್ ಕಾರಿಡಾರ್​ನಲ್ಲಿ ಗಾಲ್ಫ್ ಆಡಿದ ಪಂತ್​-ಸೂರ್ಯಕುಮಾರ್​

Vastu Tips
ಧಾರ್ಮಿಕ51 mins ago

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

Shivamogga Accident
ಶಿವಮೊಗ್ಗ55 mins ago

Shivamogga Accident : ತಿರುವಿನಲ್ಲಿ ಖಾಸಗಿ ಬಸ್‌ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ

Ranbir Kapoor flaunts his Raha tattoo new look
ಬಾಲಿವುಡ್1 hour ago

Ranbir Kapoor: ರಣಬೀರ್ ಕಪೂರ್ ಹೊಸ ಲುಕ್‌ಗೆ ಫ್ಯಾನ್ಸ್‌ ಫಿದಾ; ಟ್ಯಾಟೂ ಹೈಲೈಟ್‌!

Modi 3.0 Cabinet
ದೇಶ1 hour ago

Modi 3.0 Cabinet: ಪ್ರಮಾಣ ವಚನಕ್ಕೂ ಮುನ್ನ ಗಾಂಧಿ, ಅಟಲ್‌ ಸಮಾಧಿಗೆ ಮೋದಿ ನಮನ

ಧವಳ ಧಾರಿಣಿ ಅಂಕಣ dasharatha sumantra
ಅಂಕಣ1 hour ago

ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌