Accident News: ಅಜಾಗರೂಕ ಚಾಲನೆ, ಸ್ಕೂಟರ್‌ ಸವಾರನ ಪ್ರಾಣ ತೆಗೆದ ಕಾರು ಚಾಲಕಿ - Vistara News

Latest

Accident News: ಅಜಾಗರೂಕ ಚಾಲನೆ, ಸ್ಕೂಟರ್‌ ಸವಾರನ ಪ್ರಾಣ ತೆಗೆದ ಕಾರು ಚಾಲಕಿ

ಟಿ. ದಾಸರಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಅಜಾಗರೂಕವಾಗಿ ಕಾರು ಚಲಾಯಿಸಿದ ಮಹಿಳೆಯೊಬ್ಬರು ಸ್ಕೂಟರ್‌ ಸವಾರನ ಪ್ರಾಣವನ್ನು ಬಲಿ ಪಡೆದಿದ್ದಾರೆ.

VISTARANEWS.COM


on

dasarahalli accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜ್ಞಾನಭಾರತಿ ಹಿಟ್‌ ಆಂಡ್‌ ರನ್ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಸ್ಕೂಟರ್‌ ಸವಾರನ ಪ್ರಾಣವನ್ನೇ ಒಬ್ಬಾಕೆ ತೆಗೆದಿದ್ದಾಳೆ.

ದುರ್ಘಟನೆಯಲ್ಲಿ, ತಂದೆಯನ್ನು ನೋಡಲು ಹೋದ ಮಗನೇ ಶವವಾಗಿದ್ದಾರೆ. ಅವರ ಜತೆಗಿದ್ದ ಅವರ ಪುತ್ರನೂ ತೀವ್ರವಾಗಿ ಗಾಯಗೊಂಡಿದ್ದು ಸರ್ಜರಿಗೆ ಒಳಗಾಗಿದ್ದಾನೆ.

ಟಿ.ದಾಸರಹಳ್ಳಿಯಲ್ಲಿ ಈ ಭೀಕರ ಅಪಘಾತ ನಡೆದಿದೆ. ಸಂಜಯ್‌ ಬಾಬು ಎಂಬವರು ತಮ್ಮ ತಂದೆಯನ್ನು ನೋಡಲು ಮಗ ವೇದಾಂತ್‌ ಜತೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಶುಭಾ ಎಂಬವರು ಚಲಾಯಿಸುತ್ತಿದ್ದ ವ್ಯಾಗನಾರ್ ಕಾರ್ ಡಿಕ್ಕಿಯಾದ ಪರಿಣಾಮ ತಂದೆ ಮಗ ಕೆಳಗೆ ಬಿದ್ದು ಗಾಯಗೊಂಡರು. ತಂದೆ ಮಗನನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದು, ಹಲವಾರು ಶಸ್ತ್ರಚಿಕಿತ್ಸೆಗಳ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಬಾಬು ನಿಧನರಾಗಿದ್ದಾರೆ.

ಮಹಿಳೆ ಕಾರನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮಗ ವೇದಾಂತ್‌ಗೂ ಬಲಭಾಗದ ಕೈಯ 4 ರಿಬ್ಸ್ ಮುರಿದಿದ್ದು, ಎಡಗೈ ಭುಜದ ಮೂಳೆ ಮುರಿದಿದೆ. ಆತನಿಗೂ ಶಸ್ತ್ರಚಿಕಿತ್ಸೆ ಅವಶ್ಯಕವೆಂದು ವೈದ್ಯರು ತಿಳಿಸಿದ್ದಾರೆ. ಕಾರಿನ ಮಾಲಕಿ ಶುಭ ಅವರನ್ನು ಪೀಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Accident news: ಬೆಳಗ್ಗೆ ಮೋದಿ ಕಾರ್ಯಕ್ರಮಕ್ಕೆ ಹೋದ ವಿದ್ಯಾರ್ಥಿಗಳು ಸಂಜೆ ಅಪಘಾತದಲ್ಲಿ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಮಂದಿರವೂ ವಿಶ್ವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ (Jagannath Puri Temple) ಒಂದಾಗಿದೆ. ಇಲ್ಲಿನ ಏಳು ವಿಚಾರಗಳು ಇವತ್ತಿಗೂ ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಏಳು ಅಚ್ಚರಿಗಳೇನು ಎಂಬ ವಿವರಣೆ ಇಲ್ಲಿದೆ.

VISTARANEWS.COM


on

By

Jagannath Puri Temple
Koo

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Continue Reading

ಆಟೋಮೊಬೈಲ್

Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

Magnite GEZA CVT: ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್​ ಮೂಲಕ ಅದ್ಭುತ ಸಂಗೀತ ಅನುಭವ ಪಡೆಯಬಹುದು.

VISTARANEWS.COM


on

Nissan Magnite GEZA CVT
Koo

ಬೆಂಗಳೂರು : 2023ರ ಮ್ಯಾಗ್ನೈಟ್ ಗೆಝಾದ ಸ್ಪೆಷಲ್ ಎಡಿಷನ್ ನ ಯಶಸ್ಸಿನಿಂದ ಪ್ರೇರಣೆಗೊಂಡಿರುವ ನಿಸ್ಸಾನ್ ಮೋಟಾರ್ ಇಂಡಿಯಾ 9.84 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಹೆಚ್ಚು ಫೀಚರ್​ಗಳನ್ನು ಒಳಗೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್​ ಎಡಿಷನ್ (Magnite GEZA CVT) ಕಾರನ್ನು ಗುರುವಾರ ಬಿಡುಗಡೆ ಮಾಡಿದೆ. 2023ರ ಗೆಝಾ ಸ್ಷೆಷಲ್ ಎಡಿಷನ್ ಗೆ ಸಿಕ್ಕ ಪ್ರತಿಕ್ರಿಯೆ ಮತ್ತು ವ್ಯಾಪಕವಾದ ಗ್ರಾಹಕರ ಪ್ರತಿಕ್ರಿಯೆಯಿಂದ ಹರ್ಷಗೊಂಡು ಮ್ಯಾಗ್ನೈಟ್ ಗೆಝಾ ಸ್ಪೆಷಲ್ ಎಡಿಷನ್ ನ ಮೊದಲ ವಾರ್ಷಿಕೋತ್ಸವದಂದೇ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ.

ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್​ ಮೂಲಕ ಅದ್ಭುತ ಸಂಗೀತ ಅನುಭವ ಪಡೆಯಬಹುದು.

ಇದೇ ಮೊದಲ ಬಾರಿಗೆ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಫೀಚರ್​​ ನೀಡಲಾಗುತ್ತಿದೆ. ಈ ಕಾರಣಕ್ಕೆ ಗ್ರಾಹಕರು ಮತ್ತಷ್ಟು ಖುಷಿ ಪಡಬಹುದಾಗಿದೆ. ವಿಶೇಷವಾಗಿ ಇದು ನಿಸ್ಸಾನ್‌ನ ಅತ್ಯಂತ ಸುಲಭವಾಗಿ ಕೈಗೆಟಕುವ ಬಿ ಎಸ್​ಯುವಿ (ಸಬ್​ ಕಾಂಪ್ಯಾಕ್ಟ್​​​) ವಿಭಾಗದ ಪ್ರೀಮಿಯಂ ಸಿವಿಟಿ ಟರ್ಬೊ ಎಂಜಿನ್ ಹೊದಿರುವ ಕಾರು ಎನಿಸಿಕೊಂಡಿದೆ. ಹೀಗಾಗಿ ಕೊಟ್ಟ ಹಣಕ್ಕೆ ತಕ್ಕ ಕಾರು ಎಂಬ ಖ್ಯಾತಿ ಪಡೆದುಕೊಂಡಿದೆ.

ಇದನ್ನೂ ಓದಿ: 2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

ರೂ.9.84 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿರುವ ಈ ವೇರಿಯಂಟ್ ಈಗ ರೂ.10 ಲಕ್ಷದ ಕೆಳಗಿನ ಬೆಲೆಯಲ್ಲಿ ಲಭ್ಯವಾಗುವ ಬಿ-ಎಸ್ ಯು ವಿ ವಿಭಾಗದ ಕೈಗೆಟುವ ದರದ ಪ್ರೀಮಿಯಂ ಸಿವಿಟಿ ಟರ್ಬೋ ಕಾರು ಆಗಿದೆ. ಗೆಝಾ ಜಪಾನೀಸ್ ಥಿಯೇಟರ್‌ ಮತ್ತು ಅದರ ಸಂಗೀತದ ಥೀಮ್ ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಸಿವಿಟಿ ಟರ್ಬೋಗೆ ತಕ್ಕಂತೆ ಸುಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. 22.86 ಸೆಂಮೀನ ಹೈ ರೆಸೆಲ್ಯೂಶನ್ ಟಚ್‌ಸ್ಕ್ರೀನ್, ಜೆಬಿಎಲ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಆಂಡ್ರಾಯ್ಡ್ ಕಾರ್ ಪ್ಲೇ ಜೊತೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಗೆಝಾ ಆಪ್ ಆಧಾರಿತ ಆಂಬಿಯೆಂಟ್ ಲೈಟ್ ವ್ಯವಸ್ಥೆಯನ್ನು ಹೊಂದಿದ್ದು, ಹಲವಾರು ಬಣ್ಣಗಳು ಲಭ್ಯವಿದೆ.

ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ವೈಶಿಷ್ಟ್ಯಗಳು

  • 22.86 ಸೆಂಮೀನ ಹೈ-ರೆಸೆಲ್ಯೂಶನ್ ಟಚ್‌ಸ್ಕ್ರೀನ್
  • ವೈರ್‌ಲೆಸ್ ಸಂಪರ್ಕ ಹೊಂದಿರುವ ಆಂಡ್ರಾಯ್ಡ್ ಕಾರ್ ಪ್ಲೇ
  • ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಸಿಸ್ಟಮ್
  • ಟ್ರಾಜೆಕ್ಟರಿ ಲೈನ್ ಹೊಂದಿರುವ ರೇರ್ ಕ್ಯಾಮೆರಾ
  • ನಿಸ್ಸಾನ್ ಆಪ್ ಆಧಾರಿತ ಆಂಬಿಯೆಂಟ್ ಲೈಟಿಂಗ್
  • ಐಚ್ಛಿಕವಾಗಿ ಬೀಜ್ ಬಣ್ಣದ ಪ್ರೀಮಿಯಂ ಸೀಟ್ ಅಪ್ ಹೋಲ್ ಸ್ಟರಿ
  • ವಿಶಿಷ್ಟವಾದ ಗೆಝಾ ಎಡಿಷನ್ ಬ್ಯಾಡ್ಜ್

ಇದು ನಿಸ್ಸಾನ್ ಮ್ಯಾಗ್ನೈಟ್ ಸಿವಿಟಿ ವೇರಿಯಂಟ್ ಗಳಲ್ಲಿಯೇ ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಬಯಸುವವರಿಗೆ ಎಚ್ ಆರ್ 10 ಟರ್ಬೋ ಸಿವಿಟಿ ವೇರಿಯಂಟ್ ಲಭ್ಯವಿದೆ. ಈ ಕಾರು ಬಿಡುಗಡೆ ಸಂದರ್ಭದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸ ಹರ್ಷ ವ್ಯಕ್ತಪಡಿಸಿದ್ದಾರೆ .

Continue Reading

ಆಟೋಮೊಬೈಲ್

2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

2024 Maruti Swift: ಹೊಸ ಸ್ವಿಫ್ಟ್‌ಗಾಗಿ ಎಪಿಕ್ ರೂಫ್ ಮತ್ತು ಬಾನೆಟ್ ಮೇಲೆ ರೇಸಿಂಗ್ ಸ್ಟ್ರೈಪ್‌ಗಳನ್ನು ಪಡೆಯುತ್ತದೆ. ಇಲ್ಲಿ ಕಾಣುವ ಬಿಳಿ ಸ್ವಿಫ್ಟ್ ಕಪ್ಪು ಪಟ್ಟಿಗಳನ್ನು ಪಡೆಯುತ್ತದೆ. ಈ ಪಟ್ಟೆಗಳು ಮುಂಭಾಗದ ಫೆಂಡರ್‌ಗಳಿಗೂ ವಿಸ್ತರಿಸುತ್ತವೆ. ಕಾರ್ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್‌ಗಳಿಗೆ ಗ್ಲಾಸ್ ಕಪ್ಪು ಬಾಹ್ಯರೇಖೆಯನ್ನು ಪಡೆಯುತ್ತದೆ. ಫಾಗ್ ಲ್ಯಾಂಪ್‌ಗಳ ಪಕ್ಕದಲ್ಲಿ ಕ್ರೋಮ್ ಆಕ್ಸೆಂಟ್‌ಗಳಿವೆ.

VISTARANEWS.COM


on

2024 Maruti Swift
Koo

ಬೆಂಗಳೂರು: ಮಾರುತಿ ಸುಜುಕಿ ಕೆಲವು ವಾರಗಳ ಹಿಂದೆ ಭಾರತೀಯ ಮಾರುಕಟ್ಟೆ 2024ರ ಆವೃತ್ತಿಯ ಸ್ವಿಫ್ಟ್ ಕಾರನ್ನು (2024 Maruti Swift) ಬಿಡುಗಡೆ ಮಾಡಿತ್ತು. ಕಾರು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ ಮತ್ತು ಡೆಲಿವರಿ ಸಹ ಪ್ರಾರಂಭವಾಗಿದೆ. ರಸ್ತೆಗೆ ಬಂದ ಕಾರುಗಳು ಆಫ್ಟರ್ ಮಾರ್ಕೆಟ್​ ಮಾಡಿಫಿಕೇಷನ್​ನೊಂದಿಗೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮಾರುತಿ 2024 ಸ್ವಿಫ್ಟ್‌ ಲಾಂಚ್ ಮಾಡುವ ವೇಳೆ ಹಲವಾರು ಆ್ಯಕ್ಸೆಸರೀಸ್​ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಮಾರುತಿಯು ಬೇಸ್​ ವರ್ಷನ್ ಆಗಿರುವ ಎಲ್​ಎಕ್ಸ್​ಐಗೆ ಈ ಆ್ಯಕ್ಸೆಸರಿ ಪ್ಯಾಕ್ ಗಳನ್ನು ನೀಡಲಾಗಿದೆ. ಈ ಮಾದರಿನ್ನು ಎಪಿಕ್ ಎಡಿಷನ್ ಎಂದು ಕರೆಯಲಾಗಿದೆ.

ಹೊಸ ಸ್ವಿಫ್ಟ್‌ಗಾಗಿ ಎಪಿಕ್ ರೂಫ್ ಮತ್ತು ಬಾನೆಟ್ ಮೇಲೆ ರೇಸಿಂಗ್ ಸ್ಟ್ರೈಪ್‌ಗಳನ್ನು ಪಡೆಯುತ್ತದೆ. ಇಲ್ಲಿ ಕಾಣುವ ಬಿಳಿ ಸ್ವಿಫ್ಟ್ ಕಪ್ಪು ಪಟ್ಟಿಗಳನ್ನು ಪಡೆಯುತ್ತದೆ. ಈ ಪಟ್ಟೆಗಳು ಮುಂಭಾಗದ ಫೆಂಡರ್‌ಗಳಿಗೂ ವಿಸ್ತರಿಸುತ್ತವೆ. ಕಾರ್ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್‌ಗಳಿಗೆ ಗ್ಲಾಸ್ ಕಪ್ಪು ಬಾಹ್ಯರೇಖೆಯನ್ನು ಪಡೆಯುತ್ತದೆ. ಫಾಗ್ ಲ್ಯಾಂಪ್‌ಗಳ ಪಕ್ಕದಲ್ಲಿ ಕ್ರೋಮ್ ಆಕ್ಸೆಂಟ್‌ಗಳಿವೆ. ಮುಂಭಾಗದ ಫಾಕ್ಸ್ ಸ್ಕಿಡ್ ಪ್ಲೇಟ್ ಅಥವಾ ಬಂಪರ್‌ನ ಕೆಳಗಿನ ಭಾಗದಲ್ಲಿ ನಾವು ಕ್ರೋಮ್ ಸ್ಟ್ರಿಪ್ ನೀಡಲಾಗಿದೆ.

ಸೈಡ್ ಪ್ರೊಫೈಲ್‌ನಲ್ಲಿ, 14-ಇಂಚಿನ ಸ್ಟೀಲ್ ರಿಮ್‌ಗಳಿಗಾಗಿ ಕಾರು ಬ್ಲ್ಯಾಕ್ಡ್-ಔಟ್ ವೀಲ್ ಕ್ಯಾಪ್‌ಗಳನ್ನು ಪಡೆಯುತ್ತದೆ. ಇಂಡಿಕೇಟರ್​ಗಳು ಲೋ ವೇರಿಯೆಂಟ್​ಗಳಿಗೆ ಫೆಂಡರ್‌ನಲ್ಲಿವೆ. ORVM ಗಳು ಗ್ರಾಫಿಕ್ಸ್‌ನೊಂದಿಗೆ ಮಿಂಚುವ ಕಪ್ಪು ಕವರ್‌ಗಳನ್ನು ಪಡೆಯುತ್ತವೆ. ವಿಂಡೋ ಕ್ರೋಮ್ ಅಲಂಕರಿಸಲು ಮತ್ತು ಡೋರ್ ವಿಸರ್ ಕೂಡ ನೀಡಲಾಗಿದೆ. ಕಾರು ಗ್ಲಾಸ್ ಬ್ಲ್ಯಾಕ್ ಡೋರ್ ಬೀಡಿಂಗ್ ಮತ್ತು ಕ್ರೋಮ್ ಡೋರ್ ಹ್ಯಾಂಡಲ್ ಕವರ್‌ಗಳನ್ನು ಪಡೆಯುತ್ತದೆ.

ಹಿಂಬದಿ ಹೇಗಿದೆ?

ಹಿಂಭಾಗದಲ್ಲಿ, ಫಾಗ್​​ LED ಟೈಲ್ ಲ್ಯಾಂಪ್‌ಗಳು ಯಾವುದೇ ಇತರ ಆವೃತ್ತಿಗಳಂತೆಯೇ ಇರುತ್ತವೆ. ಆದಾಗ್ಯೂ, ಕಾರು ಟೈಲ್‌ಗೇಟ್‌ನಲ್ಲಿ ಕ್ರೋಮ್ ಅಪ್ಲಿಕ್ ಅನ್ನು ಮತ್ತು ಹಿಂಭಾಗದ ಬಂಪರ್‌ನಲ್ಲಿ ಕ್ರೋಮ್ ಪಡೆಯುತ್ತದೆ. ಹಿಂಬದಿಯ ವಿಂಡ್‌ಸ್ಕ್ರೀನ್‌ನ ಕೆಳಗಿನ ಭಾಗದಲ್ಲಿ ಕ್ರೋಮ್ ನೀಡಿದ್ದಅರೆ. ಹೊಳಪುಳ್ಳ ಕಪ್ಪು ರೂರ್ಫರ್ -ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ಇಲ್ಲಿ ಕಾರಿನ ಮೇಲೆ ಕಾಣಬಹುದು.

ಇದನ್ನೂ ಓದಿ: 2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

ಇಂಟೀರಿಯರ್​

ಬೇಸ್​ ವೇರಿಯೆಂಟ್​ ಪಾರ್ಸೆಲ್ ಟ್ರೇನೊಂದಿಗೆ ಬರುವುದಿಲ್ಲ, ಆದರೆ ಅಗತ್ಯವಿದ್ದರೆ ಅದನ್ನು ಆ್ಯಕ್ಸೆಸರಿಯಾಗಿ ಖರೀದಿಸಬಹುದು. ಬಾಗಿಲಿನ ಮೇಲೆ ಯಾವುದೇ ವರ್ಣರಂಜಿತ ಟ್ರಿಮ್‌ಗಳು ಲಭ್ಯವಿಲ್ಲ. ಎಪಿಕ್ ಆವೃತ್ತಿಯು ವಿಂಡೋ ಶೇರ್​ ಪಡೆಯುತ್ತದೆ. ಇದನ್ನು ಹೊರತುಪಡಿಸಿ, ಕಾರು ಸ್ವಿಫ್ಟ್‌ಗೆ ಹೊಂದಿಕೆಯಾಗುವ ಸೀಟ್ ಕವರ್‌ಗಳನ್ನು ಪಡೆಯುತ್ತದೆ. ಇದಕ್ಕೆ ಆಫ್ಟರ್​ ಮಾರ್ಕೇಟ್​​ ಸೀಟ್ ಕವರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಏಕೆಂದರೆ ಹ್ಯಾಚ್‌ಬ್ಯಾಕ್ ಈಗ ಫ್ಯಾಕ್ಟರಿಯಿಂದಲೇ 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ.

ಎಪಿಕ್ ಎಡಿಷನ್​ನಲ್ಲಿ ಸ್ಟೀರಿಂಗ್ ಕವರ್ ಇದೆ. ಮತ್ತು ಇದು 7-ಇಂಚಿನ ಬೇಸಿಕ್​ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ 4-ಸ್ಪೀಕರ್ ಸಿಸ್ಟಮ್ ಅನ್ನು ಸಹ ನೀಡುತ್ತದೆ. ಬೇಸ್​​ ವೇರಿಯೆಂಟ್​ ಯಾವುದೇ ರೀತಿಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡುವುದಿಲ್ಲ. ಇದು ಪ್ಯಾಕೇಜ್‌ನ ಭಾಗವಾಗಿದೆ.

67 ಸಾವಿರ ರೂಪಾಯಿ ಹೆಚ್ಚು

ಮೇಲಿನ ಎಲ್ಲಾ ಬಿಡಿಭಾಗಗಳೊಂದಿಗೆ ಸ್ವಿಫ್ಟ್‌ನ ಬೇಸ್ ವರ್ಷನ್​ ಕಾರನ್ನು ಟಾಪ್ ವರ್ಷನ್​ ರೀತಿ ಕಾಣುವಂತೆ ಪರಿವರ್ತಿಸಬಹುದು. ಈ ಎಪಿಕ್ ಆವೃತ್ತಿಯ ಆಕ್ಸೆಸರಿ ಪ್ಯಾಕ್ ಅನ್ನು ಖರೀದಿಸಲು ಆಸಕ್ತಿ ಹೊಂದಿದ್ದರೆ, 67,000 ರೂಪಾಯಿ ಸ್ವಲ್ಪ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಹೊಸ ಪೀಳಿಗೆಯ ಸ್ವಿಫ್ಟ್ ಹೊಚ್ಚ ಹೊಸ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್​​ ಪೆಟ್ರೋಲ್ ಎಂಜಿನ್‌ನಿಂದ ಬರುತ್ತದೆ. ಅದು 82 Ps ಮತ್ತು 112 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹ್ಯಾಚ್‌ಬ್ಯಾಕ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.

Continue Reading

ವಾಣಿಜ್ಯ

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Highest Paid CEO: 2024ರ ಹಣಕಾಸು ವರ್ಷದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಐಟಿ ಸಿಇಒ ವಿಪ್ರೊದ ಥಿಯೆರ್ರಿ ಡೆಲಾಪೋರ್ಟೆ ಅವರು ಏಪ್ರಿಲ್ 6ರಂದು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ 32 ವರ್ಷಗಳ ಕಾಲ ಅನುಭವಿ ಶ್ರೀನಿವಾಸ್ ಪಾಲ್ಲಿಯಾ ಅವರನ್ನು
ನೇಮಿಸಲಾಗಿದೆ. ಬೃಹತ್‌ ಐಟಿ ಕಂಪನಿಗಳ ಸಿಇಒಗಳು ಹೆಚ್ಚು ಸಂಬಳ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Highest Paid CEO
Koo

ವಿಪ್ರೋದ (Wipro) ಮಾಜಿ ಸಿಇಒ (ex-ceo) ಮತ್ತು ಆಡಳಿತ ನಿರ್ದೇಶಕ ಥಿಯೆರ್ರಿ ಡೆಲಾಪೋರ್ಟೆ (Thierry Delaporte) ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಗಳಿಸಿ ಸತತ ಎರಡನೇ ವರ್ಷ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ (Highest Paid CEO) ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಥಿಯೆರಿ ಡೆಲಾಪೋರ್ಟೆ ಅವರು ಏಪ್ರಿಲ್‌ 6ರಂದು ಕಂಪನಿಗೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಕಂಪನಿಯು 32 ವರ್ಷಗಳ ಕಾಲ ಅನುಭವ ಹೊಂದಿರುವ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ನೇಮಕ ಮಾಡಿದೆ. ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ವಿಪ್ರೊ ಸಲ್ಲಿಸಿರುವ 20 ಎಫ್ ಫೈಲಿಂಗ್‌ಗಳ ಪ್ರಕಾರ ಡೆಲಾಪೋರ್ಟೆ 3.9 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಸಂಬಳ ಮತ್ತು ಭತ್ಯೆ, 5 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಕಮಿಷನ್/ ವೇರಿಯಬಲ್ ಪೇ, ಸುಮಾರು 7 ಮಿಲಿಯನ್ ಡಾಲರ್ ಇತರ ಮತ್ತು 4 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ದೀರ್ಘಾವಧಿಯ ಪರಿಹಾರವನ್ನು ಗಳಿಸಿದ್ದಾರೆ.

ಶ್ರೀನಿವಾಸ್ ಪಲ್ಲಿಯಾ ಅವರು ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ಸಂಭಾವನೆ ಪ್ಯಾಕೇಜ್‌ ಸ್ವೀಕರಿಸಿದ್ದಾರೆ. ಇದರಿಂದ ಅವರು ಆರ್ಥಿಕ ವರ್ಷ 2025ರಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸಿಇಒ ಆಗಿದ್ದಾರೆ. ಕಂಪನಿಯ ಆದಾಯವು ಇಳಿಮುಖವಾಗುತ್ತಿರುವ ಹೊತ್ತಲ್ಲಿ ಹೊಸ ಸಿಇಒ ನೇಮಕ ವೇತನದ ನಡುವಿನ ಅಸಮಾನತೆಯನ್ನು ಹೆಚ್ಚಿಸಿದೆ. ಸಿಇಒ ವೇತನವು ಸತತ ಎರಡನೇ ವರ್ಷಕ್ಕೆ ಹೆಚ್ಚಾಗಿದೆ.

ಮತ್ತೊಂದೆಡೆ ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ಅವರು ಹೆಚ್ಚುತ್ತಿರುವ ಏಕೀಕೃತ ನಿವ್ವಳ ಲಾಭದ ಮೇಲೆ ಶೇ. 0.35ರಷ್ಟು ಕಮಿಷನ್‌ಗೆ ಅರ್ಹರಾಗಿದ್ದಾರೆ. ಕಂಪನಿಯ ಹಣಕಾಸಿನ ವರ್ಷದಲ್ಲಿ ನಷ್ಟವನ್ನು ಅನುಭವಿಸಿದ ಕಾರಣ ಅದನ್ನು ತಡೆಹಿಡಿಯಲಾಗಿದೆ.

ಕಂಪನಿಯ ಆದಾಯ ಇಳಿಕೆ

ಆರ್ಥಿಕ ವರ್ಷ 2024ರ ಪೂರ್ಣ ವರ್ಷದಲ್ಲಿ ವಿಪ್ರೋ ಆದಾಯವು ವರ್ಷಕ್ಕೆ 90,486 ಕೋಟಿಗಳಿಂದ 89,760 ಕೋಟಿಗೆ ಇಳಿದಿದೆ.

ಅತಿ ಹೆಚ್ಚು ವಾರ್ಷಿಕ ಸಂಭಾವನೆ

2023- 24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ವಾರ್ಷಿಕ ಸಂಭಾವನೆ ಪ್ಯಾಕೇಜ್‌ನಲ್ಲಿ 56 ಕೋಟಿ ರೂ. ಆಗಿದೆ. ಎಚ್‌ಸಿಎಲ್‌ಟೆಕ್‌ನ ಸಿ ವಿಜಯಕುಮಾರ್, 28.4 ಕೋಟಿ ರೂ. ಗಳಿಸಿದ್ದಾರೆ. L&T ಮತ್ತು Mindtree ವಿಲೀನದ ಅನಂತರ ನವೆಂಬರ್ 2022 ರಲ್ಲಿ ಚುಕ್ಕಾಣಿ ಹಿಡಿದ ಅದರ ಸಿಇಒ ದೇಬಾಶಿಸ್ ಚಟರ್ಜಿ ಆರ್ಥಿಕ ವರ್ಷ 22-23ರಲ್ಲಿ 17.5 ಕೋಟಿ ರೂ. ಗಳಿಸಿದ್ದಾರೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

ಟೆಕ್ ಮಹೀಂದ್ರಾದ ಮೋಹಿತ್ ಜೋಶಿ ಅವರು ವಾರ್ಷಿಕವಾಗಿ 6.5 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಿಇಒ ಮತ್ತು ಎಂಡಿ ಕೆ. ಕೃತಿವಾಸನ್ ಅವರು 2024ರಲ್ಲಿ ವಾರ್ಷಿಕ ಪರಿಹಾರದಲ್ಲಿ 25.36 ಕೋಟಿ ರೂ. ಗಳನ್ನು ಪಡೆದರು.

2024ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಡೆಲಾಪೋರ್ಟೆ ಅವರಿಗೆ ನೀಡಿದ ಪರಿಹಾರವು 9,89,130 ಅನ್ವೆಸ್ಟೆಡ್ ಸ್ಟಾಕ್ ಆಯ್ಕೆ ಮತ್ತು 4.33 ಮಿಲಿಯನ್ ಡಾಲರ್ ಮೊತ್ತದ ನಗದು ಪರಿಹಾರವನ್ನು ಒಳಗೊಂಡಿದೆ.

Continue Reading
Advertisement
Glenn Maxwell
ಪ್ರಮುಖ ಸುದ್ದಿ8 mins ago

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Theatre
ಸಿನಿಮಾ11 mins ago

‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

Dengue Fever
ಆರೋಗ್ಯ13 mins ago

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Star Gown Fashion
ಫ್ಯಾಷನ್28 mins ago

Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

Accident Case
ಚಿಕ್ಕಮಗಳೂರು30 mins ago

Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

Jagannath Puri Temple
ಪ್ರವಾಸ40 mins ago

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

Medical negligence death case due to doctor negligence Dead body handed over without paying 30 lakh rupees
ಕ್ರೈಂ41 mins ago

Medical negligence: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವು ಕೇಸ್‌; 30 ಲಕ್ಷ ರೂ. ಕಟ್ಟಿಸಿಕೊಳ್ಳದೆ ಮೃತದೇಹ ಹಸ್ತಾಂತರ

Chardham Yatra
ಪ್ರವಾಸ42 mins ago

Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

Nissan Magnite GEZA CVT
ಆಟೋಮೊಬೈಲ್47 mins ago

Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

Mouth Sleeping
ಆರೋಗ್ಯ58 mins ago

Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ13 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌