ಕ್ರೈಂ
Crime News: ಮುತ್ತಪ್ಪ ರೈ ಮಗ ಮತ್ತು ಉದ್ಯಮಿ ನಾಯ್ಡು ನಡುವೆ ಮತ್ತೆ ಜಟಾಪಟಿ
ಈ ಹಿಂದೆ ಉದ್ಯಮಿ ಶ್ರೀನಿವಾಸ ನಾಯ್ಡುಗೆ ಸೇರಿದ ಒಂದು ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನು ರಿಕ್ಕಿ ರೈ ಸಹಚರರು ಸುಟ್ಟುಹಾಕಿದ್ದಾರೆ ಎಂದು ನಾಯ್ಡು ದೂರು ನೀಡಿದ್ದರು. ಇದಕ್ಕೂ ಮೊದಲು ಒಡನಾಡಿಗಳಾಗಿದ್ದ ರಿಕ್ಕಿ ರೈ ಹಾಗೂ ಶ್ರೀನಿವಾಸ ನಾಯ್ಡು ನಡುವೆ ಬಳಿಕ ವೈಮನಸ್ಯ ಬೆಳೆದಿತ್ತು.
ಬೆಂಗಳೂರು: ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿರುವ ಬೆಂಗಳೂರಿನ ಭೂಗತ ಜಗತ್ತಿನ (Bangalore underworld) ಇಬ್ಬರು ರೌಡಿ ಶೀಟರ್‌ಗಳ ನಡುವೆ ಮತ್ತೊಮ್ಮೆ ಜಟಾಪಟಿ ನಡೆದಿದೆ. ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಹಾಗೂ ಉದ್ಯಮಿ ಶ್ರೀನಿವಾಸ್ ನಾಯ್ಡು ಮತ್ತೊಮ್ಮೆ ಕೈ ಮಿಲಾಯಿಸಿಕೊಂಡಿದ್ದಾರೆ.
ಲ್ಯಾವೆಲ್ಲೆ ರೋಡ್ ಖಾಜೆ ಬಾರ್ ಅಂಡ್ ಕಿಚನ್ ಹೊಟೇಲ್‌ನಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ 1 ಗಂಟೆಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೂ ಉದ್ಯಮಿ ಶ್ರೀನಿವಾಸ್ ನಾಯ್ಡು ಮುಖಾಮುಖಿಯಾಗಿದ್ದು, ಇಬ್ಬರ ನಡುವೆ ಜಗಳ ಹತ್ತಿಕೊಂಡಿದೆ. ಮದ್ಯದ ಅಮಲಿನಲ್ಲಿ ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ರಿಕ್ಕಿ ರೈ ಹಣೆಗೆ ಗಾಯವಾಗಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಬಗ್ಗೆ ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಗಲಾಟೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈ ಹಿಂದೆ ಉದ್ಯಮಿ ಶ್ರೀನಿವಾಸ ನಾಯ್ಡುಗೆ ಸೇರಿದ ಒಂದು ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನು ರಿಕ್ಕಿ ರೈ ಸಹಚರರು ಸುಟ್ಟುಹಾಕಿದ್ದಾರೆ ಎಂದು ನಾಯ್ಡು ದೂರು ನೀಡಿದ್ದರು. ಇದಕ್ಕೂ ಮೊದಲು ಒಡನಾಡಿಗಳಾಗಿದ್ದ ರಿಕ್ಕಿ ರೈ ಹಾಗೂ ಶ್ರೀನಿವಾಸ ನಾಯ್ಡು ನಡುವೆ ಬಳಿಕ ವೈಮನಸ್ಯ ಬೆಳೆದಿತ್ತು.
ಇದನ್ನೂ ಓದಿ: Crime News: ಮುತ್ತಪ್ಪ ರೈ ಮಗನಿಂದ ಕೋಟಿ ರೂ. ಬೆಲೆಯ ಕಾರಿಗೆ ಬೆಂಕಿ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಕೆ
ಕರ್ನಾಟಕ
ಒಂಟಿಯಾಗಿದ್ದ ವೃದ್ಧೆಯ ಭೀಕರ ಹತ್ಯೆ; ಗಂಡ ಕಟ್ಟಿದ ಮನೆಯೆಂದು ಮಗನ ಜತೆಗೂ ಹೋಗಿರಲಿಲ್ಲ
ಈ ವೃದ್ಧೆಯ ಹೆಸರು ಕಮಲಮ್ಮ ಎಂದಾಗಿದ್ದು, ಮನೆ ಇರುವುದು ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿ. ರಾತ್ರಿ ಮನೆಗೆ ನುಗ್ಗಿದವರು ವೃದ್ಧೆಯ ಕೈಯಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಉಸಿರುಗಟ್ಟಿ ಕೊಂದಿದ್ದಾರೆ.
ಬೆಂಗಳೂರಿನ ಉತ್ತರ ವಿಭಾಗದಲ್ಲಿ ಕಳೆದ ಒಂದು ವಾರದಿಂದಲೂ ಕೊಲೆ, ಕೊಲೆಯತ್ನ, ರಾಬರಿ ಪ್ರಕರಣಗಳು ನಡೆಯುತ್ತಲೇ ಇವರ. ಈಗ ಮೇ 27ರಂದು ರಾತ್ರಿ ಹಂತಕರು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮನೆಯೊಂದರಲ್ಲಿ ಒಂಟಿಯಾಗಿ ಇದ್ದ 80ವರ್ಷದ ವೃದ್ಧೆಯನ್ನು (Old Lady Murder) ಭಯಾನಕವಾಗಿ ಹತ್ಯೆಗೈದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಸಿಸಿಟಿವಿ ಫೂಟೇಜ್ಗಳನ್ನೆಲ್ಲ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ವೃದ್ಧೆಯ ಹೆಸರು ಕಮಲಮ್ಮ ಎಂದಾಗಿದ್ದು, ಮನೆ ಇರುವುದು ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿ. ರಾತ್ರಿ ಮನೆಗೆ ನುಗ್ಗಿದವರು ವೃದ್ಧೆಯ ಕೈಯಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಉಸಿರುಗಟ್ಟಿ ಕೊಂದಿದ್ದಾರೆ. ವೃದ್ಧೆಗೆ ಮೂರು ಮಕ್ಕಳಿದ್ದು ಮಗ ವೈಟ್ಫೀಲ್ಡ್ನಲ್ಲಿ ಮತ್ತು ಹೆಣ್ಣುಮಕ್ಕಳಿಬ್ಬರು ಜೆಪಿ ನಗರದಲ್ಲಿ ಇದ್ದಾರೆ. ಮಗ ಅದೆಷ್ಟೋ ಬಾರಿ ಇವರನ್ನು ತನ್ನ ಜತೆಗೆ ಬಂದಿರು ಎಂದು ಕರೆದರೂ ವೃದ್ಧೆ ಹೋಗಿರಲಿಲ್ಲ. ನನ್ನ ಗಂಡ ಕಟ್ಟಿಸಿದ ಮನೆ ಇದು, ಇಲ್ಲಿಯೇ ಇರುತ್ತೇನೆ ಎಂದು ಹೇಳಿ ಈ ಮನೆಯಲ್ಲೇ ಒಬ್ಬರೇ ಇದ್ದರಂತೆ.
ಹಂತಕರು ಸಂಜೆ ವೇಳೆ ಮನೆಗೆ ನುಗ್ಗಿದಾಗ ಕಮಲಮ್ಮ ತಮ್ಮ ಮಲಗುವ ಕೋಣೆಯಲ್ಲಿ ಇದ್ದರು. ಅಲ್ಲಿಗೇ ಹೋಗಿ ಅವರ ಕೈಕಾಲು ಕಟ್ಟಿದ್ದಾರೆ. ಬಳಿಕ ಉಸಿರುಗಟ್ಟಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳು, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನು ಏಳುಗಂಟೆ ಹೊತ್ತಿಗೆ ಪಕ್ಕದ ಮನೆ ಮಕ್ಕಳು ಅಜ್ಜಿಯನ್ನು ಹುಡುಕಿ ಬಂದಾಗ, ಬಾಗಿಲು ತೆರೆದೇ ಇತ್ತು. ಒಳಗೆ ಹೋದರೆ ಅಜ್ಜಿ ಬಿದ್ದಿದ್ದರು. ಅದನ್ನು ನೋಡಿ ತಮ್ಮ ಮನೆಯವರಿಗೆ ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆ ಸಾವು; ಭೀಕರ ಅಪಘಾತದಲ್ಲಿ ಚಾಲಕ ದುರ್ಮರಣ
ಸ್ಥಳಕ್ಕಾಗಮಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಶ್ವಾನದಳ, ಪಿಂಗರ್ ಪ್ರಿಂಟ್ ತಜ್ಞರು ಹಾಗೂ ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ ಮಾಡಿಸಿದ್ದಾರೆ. ಹಂತಕರ ಸುಳಿವಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೊಟಕ್ಕೆ ಕಮಲಮ್ಮನನ್ನ ವೃತ್ತಿಪರ ಹಂತಕರೇ ಚಿನ್ನಾಭರಣ ದೋಚುವ ಸಲುವಾಗಿ ಹತ್ಯೆಗೈದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕರ್ನಾಟಕ
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
Tumkur News: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ 9 ಮಂದಿಗೆ ಗಾಯಗಳಾಗಿವೆ.
ತುಮಕೂರು: ಹೊಲದಲ್ಲಿ ಕೆಲಸ ಮಾಡುವಾಗ ಹೆಜ್ಜೇನು ದಾಳಿ ಮಾಡಿದ್ದರಿಂದ ಮೂವರು ಮಕ್ಕಳು ಸೇರಿ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೀಗಾಗಿ ಗಾಬರಿಗೊಂಡು ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಆದರೂ ಜೇನು ನೊಣಗಳು ಬೆನ್ನತ್ತಿ ಕಚ್ಚಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಬೆಂಗಳೂರು: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ನಗರಗೆರೆಯ ರಾಮಕೃಷ್ಣ (19) ಮೃತ ಯುವಕ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಮಲಮ್ಮ (80) ಕೊಲೆಯಾದವರು. ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದು, ವೃದ್ಧೆಯ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಮೃತ ಕಮಲಮ್ಮಗೆ ಮೂವರು ಮಕ್ಕಳು ಇದ್ದು, ಅವರು ಒಂಟಿಯಾಗಿ ವಾಸವಿದ್ದರು. ಮೂವರು ಮಕ್ಕಳು ಬೇರೆ ಬೇರೆ ಕಡೆ ವಾಸವಿದ್ದು, ಆರು ತಿಂಗಳ ಹಿಂದೆಯಷ್ಟೇ ಪತಿ ನಾಗರಾಜ್ ಮೃತಪಟ್ಟಿದ್ದರು. ನಂತರ ಒಂಟಿಯಾಗಿ ಕಮಲಮ್ಮ ವಾಸವಿದ್ದರು. ಹಂತಕರ ಸುಳಿವು ಪತ್ತೆಗೆ ಶ್ವಾನದಳ, ಎಫ್‌ಎಸ್ಎಲ್ ತಂಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕರ್ನಾಟಕ
Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
High temperature: ಬಿಸಿಲಿನ ಝಳ ಸಹಿಸಲಾಗದೆ ಕೆರೆಗೆ ಸ್ನಾನಕ್ಕೆ ಹೋಗಿದ್ದವರಲ್ಲಿ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ಕೋಲಾರ : ರಾಜ್ಯಾದ್ಯಂತ ಸೆಕೆ ವಿಪರೀತವಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಕೆಲವರು ನೀರಿನಲ್ಲಿ ಈಜಲೂ ಹೋಗುವುದುಂಟು. ಆದರೆ, ಇಲ್ಲೊಬ್ಬರು ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು (Drowned in Pond) ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕೋಲಾರದ (Kolar news) ಗಾಂಧಿ ನಗರದ ಮೂವರು ಯುವಕರು ಮಂಗಸಂದ್ರ-ಮಾಲೂರು ಮಾರ್ಗದ ರಸ್ತೆ ಬದಿಯ ಕೆರೆಯಲ್ಲಿ ಸ್ನಾನಕ್ಕೆಂದು ಹೋಗಿದ್ದವರು. ಮೂವರಲ್ಲಿ ಇಬ್ಬರಿಗೆ ಈಜು ಬರುತ್ತಿದ್ದರೆ ಒಬ್ಬನಿಗೆ ಬರುತ್ತಿರಲಿಲ್ಲ.
ಕೆರೆಯ ನೀರಿನಲ್ಲಿ ಸ್ನಾನ ಮಾಡುತ್ತಾ ಖುಷಿಪಡುತ್ತಿದ್ದಾಗ ಪ್ರಭಾಸ್ ಎಂಬ ಯುವಕ ನೀರಿನಲ್ಲಿ ಮುಳುಗಿದ್ದಾನೆ. ಆತನಿಗೆ ಈಜು ಬಾರದೆ ಮುಳುಗಿದ್ದಾನೆ. ಉಳಿದ ಇಬ್ಬರು ಆತನ ರಕ್ಷಣೆಗೆ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.
ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಎಸ್ ಎನ್ ಆರ್ ಆಸ್ಪತ್ರಗೆ ರವಾನಿಸಲಾಗಿದೆ.
ಸಿಗಂದೂರಿಗೆ ಲಾಂಚ್ ಸಂಚಾರ ಸ್ಥಗಿತ
ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಹಲ್ಕೆ-ಮುಪ್ಪಾನೆ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾರ್ಗಲ್, ಜೋಗದಿಂದ ಶ್ರೀ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ.
ಹಿನ್ನೀರಿನಲ್ಲಿ ವಾಡಿಕೆಗಿಂತಲೂ ನೀರು ಕಡಿಮೆಯಾಗಿದೆ. ಹೀಗಾಗಿ, ಲಾಂಚ್ ಸಂಚಾರಕ್ಕೆ ಕಲ್ಲು, ಮರದ ದಿಮ್ಮಿ, ಮರಳಿನ ದಿಬ್ಬ ಅಡ್ಡಿಯಾಗಿದೆ. ಒಂದೊಮ್ಮೆ ಕಡಿಮೆ ನೀರಿನಲ್ಲಿ ಲಾಂಚ್ ಓಡಾಡಿದರೆ ಅಪಘಾತಕ್ಕೀಡಾಗುವ ಆತಂಕ ಎದುರಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಲಾಂಚ್ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ವಾಹನಿಗರು ವಾಹನಿಗರಿಗೆ 60 ಕಿ.ಮೀ. ದೂರ ಸುತ್ತು ಬಳಸಿ ದೇವಸ್ಥಾನಕ್ಕೆ ಹೋಗಬೇಕಾಗಿದೆ.
ಇದನ್ನೂ ಓದಿ: Students Drowned : ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು
ಕ್ರೈಂ
ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿ ನಿಗೂಢವಾಗಿ ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿನಿ
ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ.
ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ, ಟೆರೇಸ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ಆಕೆ ಶಾಲೆಯ ಟೆರೇಸ್ ಮೇಲಿಂದ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಈಕೆಯ ಸಾವು ನಿಗೂಢವೆನ್ನಿಸಿದೆ. ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸನ್ಬೀಮ್ ಎಂಬ ಶಾಲೆಯಲ್ಲಿ. ಮೇ 26ರ ಮುಂಜಾನೆ 8.45ರ ಹೊತ್ತಿಗೆ.
ಬಾಲಕಿಯ ಸಾವು ಈಗ ವಿವಾದಕ್ಕೂ ಕಾರಣವಾಗಿದೆ. ಶಾಲೆಗೆ ಬೇಸಿಗೆ ರಜಾ ಇದ್ದರೂ ನನ್ನ ಮಗಳನ್ನು ಶಾಲೆಗೆ ಕರೆಸಲಾಗಿತ್ತು ಎಂದು ಪಾಲಕರು ಆರೋಪಿಸಿದ್ದಾರೆ. ಶುಕ್ರವಾರ ಮುಂಜಾನೆಯೇ ಮಗಳು ಶಾಲೆಗೆ ಹೋಗಿದ್ದಳು. ಆದರೆ ಬೆಳಗ್ಗೆ 10 ಗಂಟೆ ಹೊತ್ತಿಗೆ ನಮಗೆ ಶಾಲೆಯಿಂದ ಕರೆಬಂತು. ನಿಮ್ಮ ಮಗಳು ಉಯ್ಯಾಲೆಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಅವರು ನಮಗೆ ಹೇಳಿದರು. ಹಾಗೇ, ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇಷ್ಟೆಲ್ಲ ಆದ ಮೇಲೆ ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಬಾಲಕಿಯ ಪಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: Cooker Blast: ರಾಮನಗರದಲ್ಲಿ ಎಲೆಕ್ಷನ್ ಪ್ರಚಾರದ ವೇಳೆ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಬಾಲಕಿ ಟೆರೇಸ್ನಿಂದ ಬಿದ್ದಿದ್ದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಇದರಲ್ಲೇನೋ ಸಂಚು ಇದೆ. ಈ ಸಾವು ನಿಗೂಢವಾಗಿದೆ. ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ. ಹುಡುಗಿಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಉಯ್ಯಾಲೆ ಇರುವುದು ನೆಲದಿಂದ ಒಂದು-ಒಂದೂವರೆ ಅಡಿ ಎತ್ತರದಲ್ಲಿ. ಆಕೆ ಅಲ್ಲಿಂದ ಬಿದ್ದರೆ ಸಾಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಸಾವಿನಲ್ಲಿ ಶಾಲೆಯ ಶಿಕ್ಷಕ ಅಭಿಷೇಕ್ ಕನೋಜಿಯಾ ಮತ್ತು ಆಡಳಿತ ವಿಭಾಗದ ಅಧಿಕಾರಿ ಬ್ರಿಜೇಶ್ ಯಾದವ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಶಾಲೆಯ ಪ್ರಾಂಶುಪಾಲರು ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ20 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ಕರ್ನಾಟಕ12 hours ago
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ