Book Release: ಬೇಕು ಅನ್ನೋದೇ ಬಡತನ, ಸಾಕು ಅನ್ನೋದೇ ಸಿರಿತನ!; ಸಾವಣ್ಣ ಪ್ರಕಾಶನದ ಪುಸ್ತಕಗಳ ಬಿಡುಗಡೆ - Vistara News

ಬೆಂಗಳೂರು

Book Release: ಬೇಕು ಅನ್ನೋದೇ ಬಡತನ, ಸಾಕು ಅನ್ನೋದೇ ಸಿರಿತನ!; ಸಾವಣ್ಣ ಪ್ರಕಾಶನದ ಪುಸ್ತಕಗಳ ಬಿಡುಗಡೆ

Book Release: ಸಾವಣ್ಣ ಪ್ರಕಾಶನದ ಐದು ಪುಸ್ತಕಗಳ ಬಿಡುಗಡೆ ಬೆಂಗಳೂರಿನಲ್ಲಿ ಭಾನುವಾರ ಅರ್ಥಪೂರ್ಣ ಸಂವಾದದೊಂದಿಗೆ ನಡೆಯಿತು.

VISTARANEWS.COM


on

book Release
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾವಣ್ಣ ಪ್ರಕಾಶನ ಪ್ರಕಟಿಸಿರುವ ರಂಗಸ್ವಾಮಿ ಮೂಕನಹಳ್ಳಿ ಅವರ “ಸಿರಿವಂತಿಕೆಗೆ ಸರಳ ಸೂತ್ರಗಳುʼ ಸೇರಿದಂತೆ 5 ಕೃತಿಗಳು (Book Release) ಬೆಂಗಳೂರಿನಲ್ಲಿ ಭಾನುವಾರ ಅರ್ಥಪೂರ್ಣ ಸಂವಾದದೊಂದಿಗೆ ಬಿಡುಗಡೆಯಾದವು.

ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ, ಡಾ. ನಾ. ಸೋಮೇಶ್ವರ ಅವರ “ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?ʼ, ಜಗದೀಶ ಶರ್ಮಾ ಸಂಪ ಅವರ “ಮಹಾಭಾರತ ಅನ್ವೇಷಣೆʼ ಮತ್ತು ಸತೀಶ್ ವೆಂಕಟಸುಬ್ಬು ಅವರ “ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ? (ಕನ್ನಡ ಮತ್ತು ಇಂಗ್ಲಿಷ್) ಬಿಡುಗಡೆಗೊಂಡ ಕೃತಿಗಳು.

ಈ ಕಾರ್ಯಕ್ರಮದಲ್ಲಿ ಲೇಖಕರೊಡನೆ ವಿಶೇಷ ಸಂವಾದವನ್ನು‌ ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಅಂಕಣಕಾರರು, ಸ್ಟಾರ್ಟಪ್ ಮಾರ್ಗದರ್ಶಕರಾದ ಎನ್. ರವಿಶಂಕರ್ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಎನ್. ರವಿಶಂಕರ್ ಅವರು ನಾಲ್ಕೂ ಪುಸ್ತಕಗಳ ಹೂರಣವನ್ನು ಒಂದಕ್ಕೊಂದು ಬೆಸೆದು, “ಬೇಕು ಮತ್ತು ಸಾಕುʼ ಎಂಬ ಚೌಕಟ್ಟಿನಲ್ಲಿ ಸಂವಾದವನ್ನು ಕುತೂಹಲ ಹುಟ್ಟಿಸುತ್ತ ಮುನ್ನಡೆಸಿದ್ದು ಬೆರಗು ಮೂಡಿಸಿತು. ಈ ಸಂವಾದದಲ್ಲಿ ಲೇಖಕರು ವ್ಯಕ್ತಪಡಿಸಿದ ಅಭಿಮತದ ಸಾರ ಇಲ್ಲಿದೆ.

ರಂಗಸ್ವಾಮಿ ಮೂಕನಹಳ್ಳಿ

  • – ಒಂದು ಹಂತದ ನಂತರ ಏನೇ ಸಂಪಾದಿಸಿದರೂ ಅದು ಕೇವಲ ಸಂಖ್ಯೆಯಷ್ಟೇ ಆಗುತ್ತದೆ. ಸಾಕು ಎನ್ನುವುದೇ ಸಿರಿವಂತಿಕೆ, ಬೇಕು ಎನ್ನುವುದೇ ಬಡತನ ಎಂಬ ಸತ್ಯ ನಮಗೆ ತಿಳಿದಿರಬೇಕು. ಎಲ್ಲದಕ್ಕೂ ಒಂದು ಮಿತಿ ಎನ್ನುವುದು ಇರಬೇಕು.
  • – ಯಶಸ್ಸಿನ ಸರಳ ಸೂತ್ರಗಳನ್ನು ಕೇವಲ ಓದಿದರೆ ಸಾಲದು. ಅವುಗಳನ್ನು ಪಾಲಿಸಿದರೆ, ಜಾರಿಗೆ ತಂದರೆ ಸಿರಿವಂತಿಕೆ ಕನಸಲ್ಲವೇ ಅಲ್ಲ.
  • – ಅತಿಯಾದ ಭಾವುಕತೆ ತೊರೆದು ಸ್ಥಿತಪ್ರಜ್ಞೆಯಿಂದ ಇದ್ದರೆ ಸಿರಿವಂತಿಕೆಯ ದಾರಿ ಸುಗಮ.

ಜಗದೀಶ ಶರ್ಮಾ ಸಂಪ

  • – ಬೇಕು ಅನ್ನೋದಕ್ಕೆ ಒಂದು “ಮಿತʼ ಅನ್ನೋದು ಇರಬೇಕು. “ಮಿತʼ ಹಿಡಿತ ತಪ್ಪಿದಾಗ ಮಹಾಭಾರತ ನಡೆಯಿತು. ದುರ್ಯೋಧನ ಮತ್ತು ಯುಧಿಷ್ಠಿರ ಇಬ್ಬರಿಗೂ ಬೇಕಿತ್ತು. ಆದರೆ ಬೇಕು ಎಂಬ ವಿಚಾರದಲ್ಲಿ ಇವರಿಬ್ಬರ ನಡುವೆ ಸಣ್ಣದೊಂದು ಗೆರೆ ಇತ್ತು. ಮಹಾಭಾರತ ಯುದ್ಧದಲ್ಲಿ ಗೆದ್ದು ರಾಜ್ಯಭಾರ ಮಾಡಿದ ಬಳಿಕವೂ ಪಾಂಡವರು 36 ವರ್ಷಗಳ ಬಳಿಕ ಇನ್ನು ಸಾಕು ಎಂದುಕೊಂಡು ಸ್ವರ್ಗಕ್ಕೆ ನಡೆದರು.
  • – ವಿವೇಕ ಕಳೆದುಕೊಂಡರೆ ಅಧಪತನ ಖಚಿತ. ರಾವಣ ಮತ್ತು ದುರ್ಯೋಧನರು ವಿವೇಕ ಕಳೆದುಕೊಂಡು ಏನಾದರು ಎನ್ನುವುದು ನಮಗೆಲ್ಲ ಗೊತ್ತೇ ಇದೆ.

ಡಾ. ನಾ. ಸೋಮೇಶ್ವರ

  • – ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲೂ ವಿವೇಕ ಅಗತ್ಯ. ಜಾಹೀರಾತಿನಲ್ಲಿ ಹೇಳುವುದನ್ನೆಲ್ಲ ನಂಬದೆ ವಿವೇಕ, ವಿವೇಚನೆ ಬಳಸಬೇಕು. ಉದಾ: ಇಂಥ ಪೇಸ್ಟ್‌ ಬಳಸಿದರೆ ಹಲ್ಲು ಫಳಫಳ ಹೊಳೆಯುತ್ತದೆ ಎನ್ನುವುದು ಬೊಗಳೆ. ಆ ಪೇಸ್ಟ್‌ಗಿಂತ ಹಲ್ಲು ಉಜ್ಜುವ ಸಮರ್ಪಕ ಕ್ರಿಯೆ ಮುಖ್ಯ. ಮಾಹಿತಿಯ ಹಿಂದೆ ಬಿದ್ದು ವಿವೇಕ ಕಳೆದುಕೊಳ್ಳಬೇಡಿ.
  • – ನಮ್ಮ ಬದುಕು ಬದಲಾಯಿತು. ಆದರೆ ಜೀನ್‌ ಬದಲಾಗಿಲ್ಲ ಎನ್ನುವುದನ್ನು ಮರೆಯದಿರೋಣ. ಬಯಸಿದ್ದು ತಿನ್ನೋಣ. ಆದರೆ ತಿಂದಿದ್ದನ್ನು ಅಂದೇ ಜೀರ್ಣಿಸಿಕೊಳ್ಳೋಣ.
  • – ನಮ್ಮ ದೇಹದಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಾಣುಗಳಿರುತ್ತವೆ. ಅದಕ್ಕೆ ಬೇಕಾಗಿರುವುದು ನಾರಿನಂಶ ಇರುವ ಆಹಾರ. ಆದರೆ ನಾವು ಪಿಜ್ಜಾ, ಬರ್ಗರ್‌ನಂಥ ಆಹಾರ ತಿಂದಾಗ ಆ ಜೀವಾಣುಗಳು ದಂಗೆ ಏಳುತ್ತವೆ. ಆಗಲೇ ನಮ್ಮ ಅವಸಾನ ಶುರುವಾಗುತ್ತದೆ.
  • – ದಿನಾಲೂ ನಾವು ಒಂದೇ ಆಹಾರ ಸೇವಿಸಬಾರದು. ಬೇರೆ ಬೇರೆ ಧಾನ್ಯ ಸೇವಿಸಬೇಕು. ಅಡುಗೆಗೆ ಬೇರೆ ಬೇರೆ ಎಣ್ಣೆ ಬಳಸಬೇಕು.
  • – ಆಹಾರ ಸಂಸ್ಕೃತಿಯನ್ನು ನಾವು ಮರೆಯಬಾರದು. ಊಟ ಮಾಡುವಾಗ ಟಿವಿ ನೋಡಬಾರದು, ಮಾತನಾಡಬಾರದು, ಜಗಳ ಮಾಡಬಾರದು…ಏಕೆಂದರೆ ಆಹಾರ ಸೇವಿಸುವಾಗ ದೇಹದೊಳಗೆ ಗಾಳಿ ಸೇರಬಾರದು. ದೇಹದೊಳಗೆ ಗಾಳಿಯ ಅತಿಯಾದ ಸಂಗ್ರಹವು ಜೀರ್ಣ ಕ್ರಿಯೆಗೆ ತೊಂದರೆಯುಂಟು ಮಾಡುತ್ತದೆ.
  • – ಪೆಪ್ಸಿ, ಕೊಕೊ ಕೋಲಾದಂಥ ರೆಡಿಮೇಡ್‌ ಪಾನೀಯದಿಂದ ಇರ ಇರಿ. ಪಾರಂಪರಿಕ ಪಾನೀಯ ಸೇವಿಸಿ.

ಸತೀಶ್‌ ವೆಂಕಟಸುಬ್ಬು

  • – ನಮ್ಮನ್ನು ಯಾರೂ ಮೋಸ ಮಾಡಲಾರರು ಎಂಬ ಅತಿಯಾದ ಆತ್ಮವಿಶ್ವಾಸವೇ ನಾವು ಮೋಸ ಹೋಗಲು ಕಾರಣ!
  • – ಅತಿಯಾಸೆ ಗತಿಗೇಡು ಎಂಬುದು ಸಾರ್ವಕಾಲಿಕ ಸತ್ಯ.
  • – ನಾವು ಮೋಸ ಹೋಗಲು ನಮ್ಮ ಅಜ್ಞಾನವೂ ಒಂದು ಕಾರಣ.

ಇದನ್ನೂ ಓದಿ | Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ

ಸಪ್ನ ಬುಕ್‌ ಹೌಸ್‌ನ ದೊಡ್ಡೇಗೌಡ ಅವರು “ಸಾವಣ್ಣ ಪ್ರಕಾಶನದ ಜಮೀಲ್‌ ಹೃದಯವಂತ. ಅನ್ಯ ಭಾಷಿಕರಾದರೂ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.

ಖ್ಯಾತ ಲೇಖಕ ಜೋಗಿ ಅವರು ಮಾತನಾಡಿ “ಜಮೀಲ್‌ ಅವರು ಮರು ಮದ್ರಣದ ಪರಿಣತ. ಜಮೀಲ್‌ ಅವರ ಪುಸ್ತಕ ಪ್ರೀತಿ; ಪುಸ್ತಕವನ್ನು ಅವರು ಲಾಲಿಸಿ, ಪೋಷಿಸುವ ರೀತಿ ಮೆಚ್ಚುವಂಥದ್ದುʼʼ ಎಂದು ಪ್ರಶಂಸಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Hassan Pen Drive Case: ಪ್ರಜ್ವಲ್‌ ರೇವಣ್ಣ ಕೇಸ್‌; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್‌ ಏನು?

Hassan Pen Drive Case: ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಅವರನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ. ಮೊದಲು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್‌ ನೀಡಿ ಕಾಲಾವಕಾಶವನ್ನು ನಿಗದಿ ಮಾಡಬಹುದು. ಅದಾದ ಬಳಿಕವೂ ಹಾಜರಾಗದೇ ಇದ್ದರೆ ಪ್ರಕರಣದ ತನಿಖೆಯ ಗತಿ ಕುಂಠಿತವಾಗುತ್ತದೆ. ಆದರೆ, ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಿ ಕರೆತರುವ ಸಾಧ್ಯತೆಯೂ ಇದೆ.

VISTARANEWS.COM


on

Prajwal Revanna Hassan Pen Drive Case What will SIT probe look like
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ರಚನೆಯಾಗಿರುವ ಎಸ್‌ಐಟಿಯಿಂದ ಹೇಗೆ ಸಾಗಲಿದೆ? ಪ್ರಜ್ವಲ್‌ ಮುಂದಿರುವ ಕಾನೂನು ಅವಕಾಶಗಳೇನು ಎಂಬ ಬಗ್ಗೆ ಈಗ ಬಹುವಾಗಿ ಚರ್ಚೆಯಾಗುತ್ತಿದೆ.

ಇದು ಹೈಪ್ರೊಫೈಲ್‌ ಕೇಸ್‌ ಆಗಿದ್ದಲ್ಲದೆ, ಮಹಿಳೆಯರ ಮಾನ, ಮರ್ಯಾದೆಯ ವಿಚಾರವಾಗಿದೆ. ಜತೆಗೆ ದೂರುದಾರರ ರಕ್ಷಣೆಗೂ ಸಂಬಂಧಪಟ್ಟಿದೆ. ಈ ಕಾರಣದಿಂದಾಗಿ ಗೌಪ್ಯತೆಯಿಂದ ಸಂತ್ರಸ್ತೆಯಿಂದ ಸಿಆರ್‌ಪಿಸಿ 164 ಹೇಳಿಕೆಯನ್ನು ದಾಖಲು ಮಾಡಲಾಗುತ್ತದೆ. ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಸಂತ್ರಸ್ತೆಯ ದೂರನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇನ್ನು ದೂರುದಾರೆ ತನ್ನ ಮೇಲೆ ನಡೆದ ಲೈಂಗಿ ದೌರ್ಜನ್ಯದ ಸ್ಥಳವನ್ನೂ ಮಹಜರು ಮಾಡಲಾಗುತ್ತದೆ. ಹೀಗಾಗಿ ಘಟನೆ ನಡೆದ ಸ್ಥಳಕ್ಕೆ ವಿಶೇಷ ತನಿಖಾ ದಳದ ಅಧಿಕಾರಿಗಳು ಬಂದು ಸಂತ್ರಸ್ತೆ ಹೇಳಿದ ರೀತಿ ಸ್ಥಳ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಾರೆ.

ಇನ್ನು ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿಯ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗುತ್ತದೆ. ಅದರಲ್ಲಿ ಇರುವಂಥ ಡಾಟ ರೀಟ್ರೈವ್‌ ಮಾಡಲಾಗುತ್ತದೆ. ಜತೆಗೆ ಕಾಲ್ ಡಿಟೇಲ್ಸ್‌, ವಿಡಿಯೊ ಕಾಲ್ ಮಾಹಿತಿ ಸೇರಿದಂತೆ ಎಲ್ಲವನ್ನೂ ಕಲೆ ಹಾಕಲಾಗುತ್ತದೆ. ನಂತರ ಕಲೆ ಹಾಕಿದ ಟೆಕ್ನಿಕಲ್ ಎವಿಡೆನ್ಸ್‌ಗಳ ಸಹಿತ ಇನ್ನಿತರ ಸಾಕ್ಷ್ಯಗಳನ್ನು ಎಫ್‌ಎಸ್ಎಲ್‌ಗೆ ರವಾನೆ ಮಾಡಲಾಗುತ್ತದೆ. ಎಫ್.ಎಸ್.ಎಲ್ ವರದಿ ಆಧಾರದ ಮೇಲೆ ತನಿಖೆ ಹಾಗೂ ವಿಚಾರಣೆ ಆರಂಭವಾಗುತ್ತದೆ.

ಆದರೆ, ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಅವರನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ. ಮೊದಲು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್‌ ನೀಡಿ ಕಾಲಾವಕಾಶವನ್ನು ನಿಗದಿ ಮಾಡಬಹುದು. ಅದಾದ ಬಳಿಕವೂ ಹಾಜರಾಗದೇ ಇದ್ದರೆ ಪ್ರಕರಣದ ತನಿಖೆಯ ಗತಿ ಕುಂಠಿತವಾಗುತ್ತದೆ. ಆದರೆ, ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಿ ಕರೆತರುವ ಸಾಧ್ಯತೆಯೂ ಇದೆ. ಈ ವಿಚಾರವಾಗಿ ಎಸ್‌ಐಟಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಣಯವಾಗುತ್ತದೆ.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

ಪ್ರಜ್ವಲ್ ರೇವಣ್ಣಗೆ ಇರುವ ಕಾನೂನು ಅವಕಾಶಗಳು?

ಹಾಗಾದರೆ ಈ ಪ್ರಕರಣದಿಂದ ಪಾರಾಗಲು ಪ್ರಜ್ವಲ್‌ ರೇವಣ್ಣ ಅವರಿಗೆ ಕಾನೂನಿನಲ್ಲಿ ಯಾವ ಅವಕಾಶ ಇದೆ ಎಂಬುದನ್ನು ನೋಡುವುದಾದರೆ, ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಅಥವಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬೇಕು. ಏಳು ವರ್ಷದ ಒಳಗೆ ಶಿಕ್ಷೆ ಇರುವಂತಹ ಪ್ರಕರಣಗಳಿಗೆ ನೋಟಿಸ್‌ ನೀಡಬಹುದು. ಬಂಧನ ಮಾಡಿದರೂ ಜಾಮೀನು ಸಿಗುವಂತಹ ಪ್ರಕರಣ ಇದಾಗಿದ್ದರಿಂದ ಸದ್ಯ ನಿರೀಕ್ಷಣಾ ಜಾಮೀನು ಹಾಗೂ ಎಫ್‌ಐಆರ್ ಅನ್ನೇ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

Continue Reading

ಕರ್ನಾಟಕ

S M Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

S M Krishna: ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯದಲ್ಲಿ ಏರುಪೇರಾದ ಕಾರಣ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಅವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

VISTARANEWS.COM


on

S M Krishna
Koo

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (91) (S M Krishna) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಏರ್‌ಪೋರ್ಟ್‌ ರೋಡ್‌ನಲ್ಲಿರುವ (Airport Road) ಮಣಿಪಾಲ್‌ ಆಸ್ಪತ್ರೆಗೆ (Manipal Hospital) ಎಸ್‌.ಎಂ.ಕೃಷ್ಣ ಅವರನ್ನು ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರು ಕಳೆದ 12 ದಿನಗಳ ಹಿಂದೆಯೇ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಗೆ ದಾಖಲಾದಾಗ ಎರಡು ದಿನಗಳಲ್ಲೇ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಚೇತರಿಸಿಕೊಳ್ಳದ ಕಾರಣ ಚಿಕಿತ್ಸೆ ಮುಂದುವರಿಸಲಾಗಿತ್ತು ಎಂದು ತಿಳಿದುಬಂದಿದೆ.

Padma Vibhushan SM Krishna has converted bengaluru as IT city says Dinesh Gooligowda

91 ವರ್ಷ ವಯಸ್ಸಿನ ಎಸ್​.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಮೊದಲು ಕಾಂಗ್ರೆಸ್​ನಲ್ಲಿದ್ದು ಕೇಂದ್ರ ಸಚಿವರು, ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್​.ಎಂ.ಕೃಷ್ಣ, ನಂತರ ಪಕ್ಷ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಎರಡು ವರ್ಷದ ಹಿಂದೆ ಅವರು ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವರ್ಷ ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. “ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದ ಮಾತ್ರಕ್ಕೆ ನಾನು ಸಂಪೂರ್ಣವಾಗಿ ಸನ್ಯಾಸಿಯಾಗುತ್ತೇನೆ ಎಂದಲ್ಲ, ಪಕ್ಷ ಇಲ್ಲವೇ ನಾಯಕರು ಸಲಹೆ ಕೇಳಿದರೆ ಕೊಡುವುದಾಗಿಯೂ ಅವರು ತಿಳಿಸಿದ್ದರು. ʻʻಮೀಸಲಾತಿ ವಿಚಾರವಾಗಿ ಕೇಳಿದ್ರೆ ಸಲಹೆ ಕೊಡುತ್ತೇನೆ. ನಾನು ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಬಂದು ಸಲಹೆ ಕೇಳಿದರೆ ಕೊಡುತ್ತೇನೆ” ಎಂದಿದ್ದರು.

ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪದ ವಿಚಾರವಾಗಿ ಸುದ್ದಿಗಾರರು ಪ್ರಶ್ನಿಸಿದಾಗ ʻʻನಾನೇ ರಿಟೈಡ್ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನೆ ಬರುವುದಿಲ್ಲ. ನಾನೇ ನಿವೃತ್ತಿ ಪಡೆಯುತ್ತಿದ್ದೇನೆʼʼ ಎಂದಿದ್ದರು. ರಾಜಕೀಯದಲ್ಲಿ ಯಾರೂ ಪೆನ್ಶನ್‌ ಕೊಡುವುದಿಲ್ಲ. ಹೀಗಾಗಿ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ” ಎಂದಿದ್ದರು.

ಇದನ್ನೂ ಓದಿ: Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್;‌ ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ

Continue Reading

ಕರ್ನಾಟಕ

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Hassan Pen Drive Case: ಈ ಪ್ರಕರಣದ ಬಗ್ಗೆ ಸ್ವಲ್ಪ ಸಮಯ ಕಾಯೋಣ ಎಂದು ಎಚ್.ಡಿ. ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ತಡ ಮಾಡಿದಷ್ಟು ಪಕ್ಷಕ್ಕೆ ಮುಜುಗರ ಜಾಸ್ತಿ. ಹೀಗಾಗಿ ಇಂದೇ ಉಚ್ಚಾಟನೆ ಮಾಡಿ. ಜತೆಗೆ ಶಾಸಕರು ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ಇದನ್ನು ಮುಂದುವರಿಸುವುದು ಬೇಡ ಎಂದು ಹಿರಿಯ ನಾಯಕರ ನಿಯೋಗ ದೇವೇಗೌಡರ ಬಳಿ ಹೇಳಿದೆ. ಕೊನೆಗೆ ದೇವೇಗೌಡರು ಕೋರ್ ಕಮಿಟಿಯಲ್ಲಿ ನಿರ್ಧಾರ ಮಾಡಿ ಎಂದು ಸೂಚನೆ ನೀಡಿದ್ದಾರೆ.

VISTARANEWS.COM


on

Hassan Pen Drive Case Deve Gowda refuses to expel Prajwal and What is the reason
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ವಿವಾದ ಭುಗಿಲೆದ್ದಿದೆ. ಪ್ರಜ್ವಲ್‌ ಅವರನ್ನು ಕೂಡಲೇ ಉಚ್ಚಾಟನೆ ಮಾಡುವಂತೆ ಪಕ್ಷದ ಶಾಸಕರಿಂದ ಒತ್ತಡ ಬರುತ್ತಿದ್ದರೂ, ಕ್ರಮ ಕೈಗೊಳ್ಳಲು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು (HD Devegowda) ಹಿಂದೇಟು ಹಾಕಿದ್ದಾರೆ.

ಈ ಪ್ರಕರಣದ ಬಗ್ಗೆ ಸ್ವಲ್ಪ ಸಮಯ ಕಾಯೋಣ ಎಂದು ಎಚ್.ಡಿ. ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ತಡ ಮಾಡಿದಷ್ಟು ಪಕ್ಷಕ್ಕೆ ಮುಜುಗರ ಜಾಸ್ತಿ. ಹೀಗಾಗಿ ಇಂದೇ ಉಚ್ಚಾಟನೆ ಮಾಡಿ. ಜತೆಗೆ ಶಾಸಕರು ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ಇದನ್ನು ಮುಂದುವರಿಸುವುದು ಬೇಡ ಎಂದು ಹಿರಿಯ ನಾಯಕರ ನಿಯೋಗ ದೇವೇಗೌಡರ ಬಳಿ ಹೇಳಿದೆ. ಕೊನೆಗೆ ದೇವೇಗೌಡರು ಕೋರ್ ಕಮಿಟಿಯಲ್ಲಿ ನಿರ್ಧಾರ ಮಾಡಿ ಎಂದು ಸೂಚನೆ ನೀಡಿದ್ದಾರೆ.

ದೇವೇಗೌಡರಿಗೆ ಕಾಡುತ್ತಿದೆಯಾ ಆ ಭಯ?

ಎಚ್.ಡಿ. ದೇವೇಗೌಡ ಅವರಿಗೆ ಉಚ್ಚಾಟನೆ ಮಾಡುವುದು ದೊಡ್ಡ ವಿಷಯ ಅಲ್ಲದಿದ್ದರೂ, ಮುಂದಿನ ಪರಿಣಾಮದ ಬಗ್ಗೆ ಭಯ ಇದೆ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿದರೆ, ಎಚ್.ಡಿ. ರೇವಣ್ಣ (HD Revanna) ಅವರೇ ಮುಂದಿನ ಟಾರ್ಗೆಟ್‌ ಆಗಲಿದ್ದಾರೆ. ಈ ಪ್ರಕರಣಗಳಲ್ಲಿ ರೇವಣ್ಣ ಹೆಸರು ಸಹ ಪ್ರಸ್ತಾಪ ಆಗಿರುವುದರಿಂದ ಕಾಂಗ್ರೆಸ್ ರೇವಣ್ಣ ವಿರುದ್ಧ ಮುಗಿಬೀಳುತ್ತದೆ. ರೇವಣ್ಣನ ವಿರುದ್ಧವೂ ಅಭಿಯಾನ ಶುರುವಾಗುತ್ತದೆ. ಆಗ ಅನಿವಾರ್ಯವಾಗಿ ರೇವಣ್ಣ ಅವರನ್ನೂ ಉಚ್ಚಾಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ಎಂಬ ಆತಂಕ, ಭಯ ಎಚ್.ಡಿ. ದೇವೇಗೌಡ ಅವರದ್ದಾಗಿದೆ.

ಪಕ್ಷ ಉಳಿಯುತ್ತಾ ಎಂಬ ಆತಂಕ!

ಒಂದು ವೇಳೆ ರೇವಣ್ಣ ಹಾಗೂ ಪ್ರಜ್ವಲ್‌ ಅವರನ್ನು ಉಚ್ಚಾಟನೆ ಮಾಡಿದ್ದೇ ಆದಲ್ಲಿ ಕುಟುಂಬದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಆ ಬಳಿಕ ಜೆಡಿಎಸ್ ಪಕ್ಷ ಉಳಿಯುವುದೇ ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಂಗ್ರೆಸ್‌ ಕೂಡಾ ಜೆಡಿಎಸ್‌ ಪಕ್ಷ ನಿರ್ನಾಮ ಆಗುವುದನ್ನೇ ಕಾಯುತ್ತಿದೆ. ಹೀಗಾಗಿ ಉಚ್ಚಾಟನೆ ಮಾಡಿ ಅವರ ಅಸ್ತ್ರ ಇನ್ನಷ್ಟು ಗಟ್ಟಿ ಮಾಡುವುದು ಬೇಡ ಎಂಬ ಯೋಚನೆಯಲ್ಲಿ ಎಚ್.ಡಿ. ದೇವೇಗೌಡ ಅವರು ಇದ್ದಾರೆ.

ಪಕ್ಷದ ನಾಯಕರ ವಾದ ಏನು?

ಇದು ಏನೇ ಇದ್ದರೂ ದಿಟ್ಟ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಜತೆಗೆ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಪಕ್ಷಕ್ಕೆ ಆದ ಮುಜುಗರ ತಪ್ಪಿಸಲು ಪ್ರಜ್ವಲ್ ಉಚ್ಚಾಟನೆ ಅನಿವಾರ್ಯ ಎಂದು ಹಿರಿಯ ನಾಯಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ನಾಳೆ ಉಚ್ಚಾಟನೆ?

ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS leader) ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಜೆಡಿಎಸ್‌ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೆಲವೇ ಕ್ಷಣದಲ್ಲಿ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ. ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ನಾಳೆ (ಏಪ್ರಿಲ್‌ 30) ಒಳಗೆ ಪ್ರಜ್ವಲ್ ವಿರುದ್ಧ ಶಿಸ್ತುಕ್ರಮ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಏಕೆ ಈ ಕ್ರಮ?

ಈಗಾಗಲೇ ಜೆಡಿಎಸ್‌ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ಈ ಪ್ರಕರಣ ಈಗ ದೇಶಾದ್ಯಂತ ಸಂಚಲನ ಉಂಟುಮಾಡಿದೆ. ಮೈತ್ರಿ ಪಕ್ಷ ಬಿಜೆಪಿ ಕೂಡ ಇದರಿಂದ ಮುಜುಗರ ಅನುಭವಿಸುತ್ತಿದೆ. ದೇಶದ ಹಲವು ಕಡೆ ಇನ್ನೂ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದಾದರೆ ಬಿಜೆಪಿಗೆ ಇದು ತೀವ್ರ ಇರಿಸುಮುರಿಸನ್ನು ತರುತ್ತದೆ. ಅಲ್ಲದೆ, ವಿಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಬಂದಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್, ಎಚ್.ಡಿ. ರೇವಣ್ಣ ಉಚ್ಚಾಟನೆಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಒತ್ತಾಯ

ಇನ್ನು ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿ ಎಂದು ಜೆಡಿಎಸ್‌ ಶಾಸಕ ಮಂಜುನಾಥ್ ಅವರು ತಮ್ಮ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ ಮೂಲಕ ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಸಮೃದ್ಧಿ ಮಂಜುನಾಥ್‌ ಮನವಿಯಲ್ಲೇನಿದೆ?

“ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕ್ರತರಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ.

ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಈ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯಾದರೇನು ಯೋಚಿಸಿ??

ಪಕ್ಷದ ರಾಷ್ಟ್ರಾಧ್ಯಕ್ಷರು ಎಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್‌ ಅವರು ಮುಖ್ಯವೋ ತೀರ್ಮಾನಿಸಬೇಕಿದೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ. ನಿಮ್ಮ ತೀರ್ಮಾನದ ಮೇಲೆ ಪಕ್ಷದ ಮುಂದಿನ ಭವಿಷ್ಯವಿದೆಯೆಂಬುದು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ” ಎಂದು ಫೇಸ್‌ಬುಕ್‌ನಲ್ಲಿ ಸಮೃದ್ಧಿ ಮಂಜುನಾಥ್ ಬರೆದುಕೊಂಡಿದ್ದಾರೆ.

ನಾಳೆಯ ಕೋರ್‌ ಕಮಿಟಿ ಸಭೆ ಬಳಿಕ ನಿರ್ಧಾರ

ಈ ಸಂಬಂಧ ನಾಳೆ (ಏಪ್ರಿಲ್‌ 30) ಜೆಡಿಎಸ್‌ ಕೋರ್‌ ಕಮಿಟಿ ಸಭೆ ಕರೆಯಲಾಗಿದ್ದು. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಈ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಬಳಿಕ ಉಚ್ಚಾಟನೆ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Continue Reading

ರಾಜಕೀಯ

Hassan Pen Drive Case: ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಉಚ್ಚಾಟನೆ? ಎಚ್‌.ಡಿ. ದೇವೇಗೌಡರ ನಿರ್ಧಾರ ಏನು?

Hassan Pen Drive Case: ಈಗಾಗಲೇ ಜೆಡಿಎಸ್‌ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ಈ ಪ್ರಕರಣ ಈಗ ದೇಶಾದ್ಯಂತ ಸಂಚಲನ ಉಂಟುಮಾಡಿದೆ. ಮೈತ್ರಿ ಪಕ್ಷ ಬಿಜೆಪಿ ಕೂಡ ಇದರಿಂದ ಮುಜುಗರ ಅನುಭವಿಸುತ್ತಿದೆ. ದೇಶದ ಹಲವು ಕಡೆ ಇನ್ನೂ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದಾದರೆ ಬಿಜೆಪಿಗೆ ಇದು ತೀವ್ರ ಇರಿಸುಮುರಿಸನ್ನು ತರುತ್ತದೆ. ಹೀಗಾಗಿ ಕ್ರಮಕ್ಕೆ ಬಿಜೆಪಿಯಿಂದಲೂ ಒತ್ತಡ ಇದೆ ಎನ್ನಲಾಗಿದೆ. ಅಲ್ಲದೆ, ಜೆಡಿಎಸ್‌ ಶಾಸಕರು ಸಹ ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ.

VISTARANEWS.COM


on

Hasan Pen Drive case Prajwal Revanna expelled from JDS
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS leader) ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಜೆಡಿಎಸ್‌ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೆಲವೇ ಕ್ಷಣದಲ್ಲಿ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ. ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ನಾಳೆ (ಏಪ್ರಿಲ್‌ 30) ಒಳಗೆ ಪ್ರಜ್ವಲ್ ವಿರುದ್ಧ ಶಿಸ್ತುಕ್ರಮ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಏಕೆ ಈ ಕ್ರಮ?

ಈಗಾಗಲೇ ಜೆಡಿಎಸ್‌ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ಈ ಪ್ರಕರಣ ಈಗ ದೇಶಾದ್ಯಂತ ಸಂಚಲನ ಉಂಟುಮಾಡಿದೆ. ಮೈತ್ರಿ ಪಕ್ಷ ಬಿಜೆಪಿ ಕೂಡ ಇದರಿಂದ ಮುಜುಗರ ಅನುಭವಿಸುತ್ತಿದೆ. ದೇಶದ ಹಲವು ಕಡೆ ಇನ್ನೂ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದಾದರೆ ಬಿಜೆಪಿಗೆ ಇದು ತೀವ್ರ ಇರಿಸುಮುರಿಸನ್ನು ತರುತ್ತದೆ. ಅಲ್ಲದೆ, ವಿಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಬಂದಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್, ಎಚ್.ಡಿ. ರೇವಣ್ಣ ಉಚ್ಚಾಟನೆಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಒತ್ತಾಯ

ಇನ್ನು ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿ ಎಂದು ಜೆಡಿಎಸ್‌ ಶಾಸಕ ಮಂಜುನಾಥ್ ಅವರು ತಮ್ಮ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ ಮೂಲಕ ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಸಮೃದ್ಧಿ ಮಂಜುನಾಥ್‌ ಮನವಿಯಲ್ಲೇನಿದೆ?

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕ್ರತರಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ.

ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಈ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯಾದರೇನು ಯೋಚಿಸಿ??

ಪಕ್ಷದ ರಾಷ್ಟ್ರಾಧ್ಯಕ್ಷರು ಎಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್‌ ಅವರು ಮುಖ್ಯವೋ ತೀರ್ಮಾನಿಸಬೇಕಿದೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ. ನಿಮ್ಮ ತೀರ್ಮಾನದ ಮೇಲೆ ಪಕ್ಷದ ಮುಂದಿನ ಭವಿಷ್ಯವಿದೆಯೆಂಬುದು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಸಮೃದ್ಧಿ ಮಂಜುನಾಥ್ ಬರೆದುಕೊಂಡಿದ್ದಾರೆ.

ನಾಳೆಯ ಕೋರ್‌ ಕಮಿಟಿ ಸಭೆ ಬಳಿಕ ನಿರ್ಧಾರ

ಈ ಸಂಬಂಧ ನಾಳೆ (ಏಪ್ರಿಲ್‌ 30) ಜೆಡಿಎಸ್‌ ಕೋರ್‌ ಕಮಿಟಿ ಸಭೆ ಕರೆಯಲಾಗಿದ್ದು. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಈ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಬಳಿಕ ಉಚ್ಚಾಟನೆ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Continue Reading
Advertisement
T20 World Cup 2024
ಕ್ರೀಡೆ7 mins ago

T20 World Cup 2024: ಆಸ್ಟ್ರೇಲಿಯಾದಿಂದ ಹಡಗಿನಲ್ಲೇ 3 ಕ್ರಿಕೆಟ್ ಪಿಚ್ ತಂದ ಅಮೆರಿಕ

Revanth Reddy
ದೇಶ15 mins ago

Revanth Reddy : ಅಮಿತ್​ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್​

Prajwal Revanna Hassan Pen Drive Case What will SIT probe look like
ಕ್ರೈಂ19 mins ago

Hassan Pen Drive Case: ಪ್ರಜ್ವಲ್‌ ರೇವಣ್ಣ ಕೇಸ್‌; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್‌ ಏನು?

Drown in Mekedatu
ಕರ್ನಾಟಕ28 mins ago

Drown in Mekedatu: ಮೇಕೆದಾಟು ಬಳಿ ಈಜಲು ಹೋಗಿದ್ದ ಬೆಂಗಳೂರಿನ ಐವರು ಪ್ರವಾಸಿಗರ ಸಾವು

T20 World Cup 2024
ಕ್ರೀಡೆ35 mins ago

T20 World Cup 2024: ವಿಶ್ವಕಪ್​ಗೆ ಪಂತ್​ ಮೊದಲ ಆಯ್ಕೆಯ ಕೀಪರ್​​ ಅಲ್ಲ; ಮತ್ಯಾರು?

S M Krishna
ಕರ್ನಾಟಕ48 mins ago

S M Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ವೈರಲ್ ನ್ಯೂಸ್53 mins ago

Viral Video: ಪಾಪಿ ಮಗನಿಂದ ತಂದೆ ಮೇಲೆ ಇದೆಂಥಾ ಕ್ರೌರ್ಯ! ವಿಡಿಯೋ ನೋಡಿ

facebook whatsapp instagram
ಪ್ರಮುಖ ಸುದ್ದಿ56 mins ago

WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

Dubai Airport
EXPLAINER1 hour ago

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

IPL 2024 Points Table
ಕ್ರೀಡೆ1 hour ago

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20243 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202423 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌