Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ? - Vistara News

ಕ್ರೈಂ

Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ?

ಬೆಂಗಳೂರಿನಲ್ಲಿ ಇತ್ತೀಚೆಗೆ ನಡುಬೀದಿಯಲ್ಲೇ ಎರಡು ಕೊಲೆಗಳಾಗಿವೆ. ಆರೋಪಿಗಳು ಪರಾರಿಯಾಗಿದ್ದಾರೆ. ಹೊಯ್ಸಳ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

VISTARANEWS.COM


on

hoyasala police
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿಯ ಜನನಿಬಿಡ ಬೀದಿಗಳಲ್ಲೇ ರಾತ್ರೋರಾತ್ರಿ ಹೆಣಗಳು ಬೀಳುತ್ತಿವೆ. ಕೊಲೆಪಾತಕಿಗಳು ಬೇರೆ ಜಿಲ್ಲೆಗೆ ಎಸ್ಕೇಪ್‌ ಆಗುತ್ತಾರೆ. ರೌಡಿಗಳು ಹೊಡೆದಾಡಿಕೊಳ್ಳುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ, ಬೆಂಗಳೂರಿನಲ್ಲಿ ನಿಜಕ್ಕೂ ಹೊಯ್ಸಳ ಪೊಲೀಸ್ ಗಸ್ತು ವ್ಯವಸ್ಥೆ ಸರಿಯಾಗಿ ಇದೆಯಾ‌ ಎಂಬ ಅನುಮಾನ ಮೂಡಿದೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಎರಡು ಕೊಲೆ ಪ್ರಕರಣಗಳು ಪೊಲೀಸ್ ಗಸ್ತಿನ ಬಗ್ಗೆ ಅನುಮಾನ ಹುಟ್ಟು ಹಾಕಿವೆ. ಕೆ.ಪಿ ಆಗ್ರಹಾರದಲ್ಲಿ, ವಾಸದ ಮನೆಗಳೇ ಹೆಚ್ಚಾಗಿರುವ ಜಾಗದಲ್ಲಿ ನಡುಬೀದಿಯಲ್ಲಿ ಆರು ಮಂದಿಯ ತಂಡ ವ್ಯಕ್ತಿಯೊಬ್ಬನನ್ನು ಭೀಕರ ವಾಗಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಆರಾಮವಾಗಿ ಬೇರೆ ಜಿಲ್ಲೆಗೆ ಪರಾರಿಯಾಗಿದ್ದರು. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಕೊಲೆ ಮಾಡಿ, ಹೆಣವನ್ನು ಠಾಣೆ ಪಕ್ಕದಲ್ಲೇ ಹಾಕಿ ಹೋಗಿದ್ದರು. ಇತ್ತೀಚೆಗೆ ಕೆಲವು ಕಡೆ ಬೀದಿಗಳಲ್ಲಿ ಹಾಗೂ ಬಾರ್‌ಗಳಲ್ಲಿ ರೌಡಿ ಗ್ಯಾಂಗ್‌ಗಳು ಹೊಡೆದಾಡಿಕೊಂಡಿದ್ದವು.

ಇದನ್ನೂ ಓದಿ | Murder by husband | ಪೇಟೆಗೆ ಕರೆ ತಂದು ಲಾರಿ ಕೆಳಗೆ ತಳ್ಳಿ ಪತ್ನಿಯನ್ನು ಕೊಲೆ ಮಾಡಿದ ಪತಿ!

ಕೊಲೆ ಮಾಡಿ ಅನಾಯಸವಾಗಿ ಆರೋಪಿಗಳು ಹೋಗುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಹೊಯ್ಸಳ ಗಸ್ತು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದೆ. ಜನನಿಬಿಡ ಸ್ಥಳಗಳಲ್ಲೇ ಕೊಲೆ ಮಾಡಿ ಹೋದರೂ ಪೊಲೀಸ್ ಗಸ್ತಿಗೆ ಮಾತ್ರ ಆರೋಪಿಗಳು ಸಿಗುತ್ತಿಲ್ಲ. ಈ ಹಿಂದೆ ಬೀಟ್‌ನಲ್ಲಿ ಘಟನೆ ನಡೆದಿದ್ದರೆ ಆಯಾ ಬೀಟ್ ಪೊಲೀಸರೇ ಹೊಣೆ ಎಂದು ಆಗಿನ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದರು. ಅಷ್ಟಲ್ಲದೆ ತಮ್ಮ ಚೇಂಬರ್‌ನಲ್ಲಿಯೇ ಕೂತು ಹೊಯ್ಸಳ ಬೀಟ್ ಅನ್ನು ಮಾನಿಟರ್ ಮಾಡುತ್ತಿದ್ದರು. ಹೀಗಾಗಿ ಬೀಟ್‌ಗಳನ್ನು ಪೊಲೀಸರು ಶ್ರದ್ಧೆಯಿಂದ ಮಾಡುತ್ತಿದ್ದರು.

ಸದ್ಯ ಅಂತಹ ಬಿಗಿ ಇಲ್ಲದ ಕಾರಣ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೃತ್ಯಗಳು ನಡೆದ ಬಳಿಕವೂ ಆರೋಪಿಗಳು ಸಿಗದೆ ಪರಾರಿಯಾಗುತ್ತಿದ್ದಾರೆ. ಹೊಯ್ಸಳ ಬೀಟ್‌ ಇನ್ನಷ್ಟು ಚುರುಕಾಗಬೇಕಿದೆ ಎನ್ನುತ್ತಿದ್ದಾರೆ ಜನ.

ಇದನ್ನೂ ಓದಿ | Murder Case | 24 ಬಾರಿ ಕಲ್ಲು ಎತ್ತಿಹಾಕಿ ಯುವಕನ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯಪುರ

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Love Case : ಪ್ರೀತಿಸಿದವಳು ಬೇಕೆ ಬೇಕೆಂದು ಪ್ರೇಯಸಿಯ ಮನೆಗೆ ಹೋದವನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸುಟ್ಟ ಗಾಯಗಳಿಂದ ಯುವಕ-ಯುವತಿ ಮನೆಯವರು ಆಸ್ಪತ್ರೆ ಪಾಲಾಗಿದ್ದಾರೆ.

VISTARANEWS.COM


on

By

Love Case
Koo

ವಿಜಯಪುರ: ಪ್ರೀತಿ ವಿಚಾರಕ್ಕೆ (Love Case) ಎರಡು ಕುಟುಂಬಗಳು ಠಾಣೆ ಮೆಟ್ಟಿಲೇರಿವೆ. ಪ್ರೀತಿಸಿದ ಹುಡುಗಿಯೇ ಬೇಕು‌ ಎಂದು ಪ್ರೇಯಸಿಯ ಮನೆಗೆ ಹೋದ ಪ್ರಿಯಕರ ಸುಟ್ಟಗಾಯದಿಂದ ಆಸ್ಪತ್ರೆ ಪಾಲಾಗಿದ್ದಾನೆ. ಯುವತಿಯ ಮನೆಯವರೇ ತಲೆಗೆ ರಾಡ್‌ನಿಂದ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಘಟನೆ ನಡೆದಿದೆ.

ರಾಹುಲ್ ರಾಮನಗೌಡ ಬಿರಾದಾರ ಹಾಗೂ ಐಶ್ವರ್ಯ ಇಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದಾಗ ರಾಹುಲ್‌ ಮನೆಯವರಿಗೆ ಐಶ್ವರ್ಯ ತಂದೆ ಬರಲು ಹೇಳಿದ್ದರು. ಆದರೆ ಹುಡುಗನ ಮನೆಯವರು ಬಂದಾಗ ಅವನ ಗುಣ ಸರಿ ಇಲ್ಲ, ನಾನು ಮದುವೆ ಆಗಲ್ಲ ಎಂದು ಐಶ್ವರ್ಯ ನಿರಾಕರಿಸಿದ್ದಳು.

ಯುವತಿಗೆ ಬ್ಲ್ಯಾಕ್‌ಮೇಲ್‌?

ಹುಡುಗಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ರಾಹುಲ್‌ ಕುಟುಂಬದವರು ವಾಪಸ್ ಆಗಿದ್ದರು. ಇತ್ತ ಪ್ರೀತಿಸಿದ ಹುಡುಗಿಯೇ ಬೇಕು ಎಂದು ಹಠ ಹಿಡಿದ ರಾಹುಲ್‌ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಮದುವೆ ಆಗದಿದ್ದರೆ ನನ್ನೊಟ್ಟಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನಂತೆ. ಇತ್ತ ಐಶ್ವರ್ಯ ತಂದೆ ಮಗಳು ಒಪ್ಪಿದರೆ ಮದುವೆ ಮಾಡಿ ಕೊಡುವುದಾಗಿ ಹೇಳಿ ರಾಜಿ ಪಂಚಾಯ್ತಿ ಮಾಡಿ ವಾಪಸ್ ಕಳುಹಿಸಿದ್ದಾರೆ.

ಹಲವು ಬಾರಿ ರಾಜಿ ಪಂಚಾಯತಿ ಮಾಡಿದರೂ ಮತ್ತೆ ನಿನ್ನೆ ಸೋಮವಾರ ಹುಡುಗಿ ಮನೆಗೆ ಹೋಗಿ ಫೋಟೋ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಐಶ್ವರ್ಯ ಮನೆಗೆ ಹೋಗುವಾಗಲೇ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದನಂತೆ. ನಮ್ಮ ಕುಟುಂಬದವರನ್ನು ಸುಡಲೆಂದೇ ಪೆಟ್ರೋಲ್ ತಂದಿದ್ದ ಎಂದು ಐಶ್ಚರ್ಯ ತಂದೆ ಆರೋಪಿಸಿದ್ದಾರೆ. ಪೆಟ್ರೋಲ್‌ ಎರಚಿ ಸುಡಲು ಬಂದಾಗ ನಮ್ಮ ತಮ್ಮ ಹಾಗೂ ತಮ್ಮನ ಹೆಂಡತಿ, ಮನೆ ಕೆಲಸದವನ ಮಗ ಬಿಡಿಸಲು ಬಂದವನಿಗೂ ಬೆಂಕಿ ತಗುಲಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

ಇತ್ತ ರಾಹುಲ್‌ ತಂದೆಯ ಆರೋಪವೇ ಬೇರೆಯಾಗಿದೆ. ನಮ್ಮ ಮಗನನ್ನು ಮನೆಗೆ ಕರೆದು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಮಗನಿಗೆ ಮೊದಲು ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಮೊಬೈಲ್ ಕೊಡದೇ ಇದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪೆಟ್ರೋಲ್ ಸುರಿದಿದ್ದಾರೆ ಎಂದಿದ್ದಾರೆ.

ಸದ್ಯ ಸುಟ್ಟು ಗಾಯದಿಂದ ಬಳಲುತ್ತಿರುವ ರಾಹುಲ್‌ಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಹುಲ್‌ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಶೇ 70ರಷ್ಟು ದೇಹ ಸುಟ್ಟು ಹೋಗಿದೆ ಎಂದು ಹೇಳಿದ್ದಾರೆ. ಹುಡುಗಿ ತಂದೆ ಹಾಗೂ ಅವರ ಕುಟುಂಬದವರೇ ನಮ್ಮ ಅಣ್ಣನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ರಾಹುಲ್‌ ಸಹೋದರ ಐಶ್ವರ್ಯ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಎರಡು ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಎರಡು ಕುಟುಂಬದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರಲ್ಲಿ ತಪ್ಪು ಯಾರದು ಎಂಬುದು ಪೊಲೀಸ್ ತನಿಖೆನಿಂದ ತಿಳಿಯಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Viral Video: ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಡೆಹ್ರಾಡೂನ್‌: ಇಬ್ಬರು ದಿಗಂಬರ ಜೈನ ಮುನಿಗಳ ಮೇಲೆ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್‌(Viral Video) ಆಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನು ಆರೋಪಿಯನ್ನು ಯೂಟ್ಯೂಬರ್‌(Youtuber) ಸೂರಜ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಘಟನೆ ವಿವರ:

ತೆಹ್ರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚತ್ತುಕೊಂಡ ಪೊಲೀಸರು ಸೂರಜ್‌ ಸಿಂಗ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದ ಜೈನ ಮುನಿಗಳ ಆಸ್ಥೆಗೆ, ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಉತ್ತರಾಖಂಡ ಎಲ್ಲಾ ಧರ್ಮವನ್ನು ಸಮಾನವಾಗಿ ಗೌರವಿಸುತ್ತದೆ. ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದನ್ನು ಉತ್ತರಾಖಂಡ ಎಂದಿಗೂ ಸಹಿಸುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಯುವಕನ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

Continue Reading

ಕರ್ನಾಟಕ

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Prajwal Revanna Case: ಕೆ.ಆರ್.ನಗರ ಸಂತ್ರಸ್ಥ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದರಿಂದ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುರಾಗಿತ್ತು. ಹೀಗಾಗಿ ಅವರು ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮೇ 29ರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ. ಹಾಸನ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಕೆ.ಆರ್.ನಗರ ಸಂತ್ರಸ್ಥ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದರಿಂದ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ನಾಳೆಗೆ ವಿಚಾರಣೆ ಮುಂದೂಡಿದೆ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಸೋಮವಾರ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿ ಎಸ್‌ಪಿಪಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಧೀಶರು ನೋಟೀಸ್ ನೀಡಿದ್ದರು. ಭವಾನಿ ರೇವಣ್ಣ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಮತ್ತೊಂದೆಡೆ ಆಕ್ಷೇಪಣೆ ಸಲ್ಲಿಸಲು ಎಸ್ಐಟಿ ಕಾಲಾವಕಾಶ ಕೋರಿದ್ದರಿಂದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಇದನ್ನೂ ಓದಿ | Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಅರ್ಹವಾಗಿದೆ. ಅಕ್ಷೇಪಣೆ ಸಲ್ಲಿಸುವವರೆಗೂ ಬಂಧನದಿಂದ ರಕ್ಷಣೆ ನೀಡಬೇಕು. ಇವತ್ತು ಬಂಧನ ಮಾಡಿದರೆ ಏನು ಮಾಡಲು ಆಗುತ್ತೆ. ಹೀಗಾಗಿ ನನ್ನ ಕಕ್ಷಿದಾರರಿಗೆ ಕಾನೂನು ರಕ್ಷಣೆ ಕೊಡಬೇಕು ಎಂದು ಭವಾನಿ ಪರ ವಕೀಲರು ಮನವಿ ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿ ದಿನೇ ದಿನೇ ಆರೋಪಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಕೆಎಂಎಫ್ ಮಾಜಿ ಅಧ್ಯಕ್ಷರನ್ನು ಈ ಪ್ರಕರಣದಲ್ಲಿ 7ನೇ ಆರೋಪಿಯನ್ನಾಗಿ‌ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ. ವಾದ-ಪ್ರತಿ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

4 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಜೂ.3ಕ್ಕೆ ವಿಚಾರಣೆ ಮುಂದೂಡಿಕೆ

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನವೀನ್‌ ಗೌಡ, ಎಚ್.ಪಿ. ಪುಟ್ಟರಾಜು, ಕಾರ್ತಿಕ್‌ ಹಾಗೂ ಚೇತನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೂನ್ 3 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.

ನಾಲ್ವರು ಆರೋಪಿಗಳ ಪೈಕಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆಂದು ಮಂಗಳವಾರ ಹೈಕೋರ್ಟ್‌ಗೆ ಬಂದಿದ್ದ ಚೇತನ್‌ ಹಾಗೂ ನವೀನ್‌ಗೌಡನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಕೋರ್ಟ್‌ಗೆ ಹಾಜರುಪಡಿಸಲು ಹಾಸನಕ್ಕೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ | Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

ಹೈಕೋರ್ಟ್ ನ್ಯಾ. ಎಂ.ಜಿ. ಉಮಾ ಅವರಿದ್ದ ಪೀಠದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು,
ಎಸ್ಐಟಿ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಜೂನ್ 3ಕ್ಕೆ ನ್ಯಾಯಾಧೀಶೆ ಮುಂದೂಡಿದ್ದಾರೆ.

Continue Reading

ದಕ್ಷಿಣ ಕನ್ನಡ

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

Assault Case : ಅನುಮತಿಯಿಲ್ಲದೇ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂದು ರೊಚ್ಚಿ ಗೆದ್ದ ಸ್ಥಳೀಯರು ಸಂಸ್ಥೆಯೊಂದರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪ್ರಕರಣ ಸಂಬಂಧ ಪರಸ್ಪರ ದೂರು ಪ್ರತಿ ದೂರು ದಾಖಲಿಸಿದ್ದಾರೆ.

VISTARANEWS.COM


on

By

assault case
Koo

ಮಂಗಳೂರು: ಬೋರ್‌ವೆಲ್ ಕೊರೆಯುತ್ತಿದ್ದ (Assault Case) ಲಾರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಪ್ರಸಿದ್ಧ ಬಿಂದು ನೀರಿನ ಫ್ಯಾಕ್ಟರಿ ಪುರುಷರಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದೆ. ಈ ಫ್ಯಾಕ್ಟರಿಗೆ ಸೇರಿದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುತ್ತಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಸಂಘಟನೆಗೆ ಸೇರಿದ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಕಲ್ಲು ತೂರಾಟದಲ್ಲಿ ಸಣ್ಣ ಮಕ್ಕಳು ಕೂಡ ಭಾಗಿಯಾಗಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಅನ್ಯಕೋಮಿನಿಂದ ಕಲ್ಲು ತೂರಾಟದ ಬಳಿಕ ಎರಡೂ ಕಡೆಯಿಂದಲೂ ಪರಸ್ಪರ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಹೊಸ ಬೋರ್‌ವೆಲ್ ಕೊರೆಯಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಲಾಗಿದೆ. ಸದ್ಯ ಎರಡೂ ಗುಂಪುಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

ನರಿಮೊಗರು ಗ್ರಾಮದ ಮೇಘಾ ಫ್ರುಟ್‌ ಪ್ರೊಸೆಸಿಂಗ್‌ ಪ್ರೈ ಲಿ. ನಲ್ಲಿ ಅನುಮತಿ ಇಲ್ಲದೇ ಕೊಳವೆ ಬಾವಿ ಶುದ್ದೀಕರಿಸಲಾಗುತ್ತಿತ್ತು. ಈ ವಿಚಾರ ತಿಳಿದ ಸ್ಥಳೀಯರು ಸಂಸ್ಥೆಯ ಒಳಗೆ ಹೋಗಿ ಗ್ರಾಮ ಪಂಚಾಯತ್ ಅಧಿಕಾರಿ ಬಂದ ಬಳಿಕ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಆದರೆ ಸಂಸ್ಥೆಯವರು ಕೊಳವೆ ಬಾವಿಯ ಶುದ್ಧೀಕರಣ ಕೆಲಸವನ್ನು ಮುಂದುವರೆಸಿದ್ದಾರೆ. ಹೀಗಾಗಿ ಕೂಡಲೇ ಗ್ರಾ.ಪಂ ಅಧಿಕಾರಿ ರವಿಚಂದ್ರರವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ.

ಇತ್ತ ಸಂಸ್ಥೆಯ ಒಳಗಡೆ ನಡೆಯುತ್ತಿರುವುದನ್ನು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಾಗ ಕೆಲಸಗಾರರೊಬ್ಬರು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದರಂತೆ. ಮಾತ್ರವಲ್ಲದೆ ಕೆಲವರು ಒಳಗಿನಿಂದ ಸ್ಥಳೀಯರ ಮೇಲೆ ಕಲ್ಲು ಬಿಸಾಡಿದ್ದರಿಂದ ಗಾಯಗೊಂಡಿದ್ದಾರೆ. ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ಹೊಸ ಕೊಳವೆ ಬಾವಿಯನ್ನು ಅನುಮತಿಯಿಲ್ಲದೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಕೃತ್ಯವನ್ನು ಎಸಗಿದ್ದಾರೆ ದೂರು ನೀಡಿದ್ದಾರೆ.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಸಂಸ್ಥೆಯವರು ಹೇಳೋದು ಏನು?

ಮೇಘಾ ಫ್ರುಟ್‌ ಪ್ರೊಸೆಸಿಂಗ್‌ ಪ್ರೈ ಲಿ. ನಲ್ಲಿ ಮೆನೇಜರ್‌ ಆಗಿರುವ ಲಕ್ಷ್ಮಿನಾರಾಯಣ ಎಂಬುವವರು ಪ್ರತಿದೂರು ನೀಡಿದ್ದಾರೆ. ಆ ಪ್ರಕಾರ ಸಂಸ್ಥೆಯ ಕೊಳವೆ ಬಾವಿ ಶುದ್ದೀಕರಿಸುವ ಬಗ್ಗೆ ಭೂ ವಿಜ್ಞಾನ ಇಲಾಖೆ ಮತ್ತು ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದು ಕೊಂಡಿದ್ದೇವೆ. ಮೇ 27ರ ಸಂಜೆ ಸಂಸ್ಥೆಯ ಆವರಣದಲ್ಲಿ ಕೊಳವೆ ಬಾವಿ ಶುದ್ದೀಕರಿಸುವ ಸಮಯ ಸ್ಥಳೀಯ ನಿವಾಸಿಗಳಾಸ ಸಲೀಂ ಮತ್ತು ಇತರರು ಸೇರಿಕೊಂಡು ಸಂಸ್ಥೆಯ ಆವರಣದ ಒಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ.

ಬೋರ್‌ವೆಲ್‌ ಲಾರಿ ಹಾಗೂ ಅದರಲ್ಲಿದ್ದ ಕಾರ್ಮಿಕರ ಮೇಲೆ ಕಲ್ಲು ಬಿಸಾಡಿದ್ದಾರೆ. ಇದರಿಂದ ಕಾರ್ಮಿಕರಾದ ಸಾಂಗ್‌ಲಾಲ್‌ ಮತ್ತು ಶೇಖರ್‌ ಎಂಬವರಿಗೆ ಗಾಯವಾಗಿದೆ. ಲಾರಿಗೆ ಕಲ್ಲು ಬಿದ್ದು ಲಾರಿಯ ಗಾಜು ಪುಡಿಯಾಗಿದೆ. ಇದರಿಂದ ಸುಮಾರು ರೂ 10,000 ರೂ. ನಷ್ಟ ಉಂಟಾಗಿದೆ ಎಂದು ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
WhatsApp Update
ತಂತ್ರಜ್ಞಾನ12 mins ago

WhatsApp Update: ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

Mango For Diabetes
ಆರೋಗ್ಯ17 mins ago

Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

T20 World Cup 2024
ಕ್ರೀಡೆ22 mins ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

Love Case
ವಿಜಯಪುರ32 mins ago

Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

Bengaluru Traffic
ಬೆಂಗಳೂರು34 mins ago

Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಹೊಸ ತಂತ್ರಜ್ಞಾನ; ಸಂಚಾರ ಇಲಾಖೆಯ ಪ್ಲಾನ್

car care tips
ಆಟೋಮೊಬೈಲ್52 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್1 hour ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ1 hour ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ1 hour ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ2 hours ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

tumkur murder
ತುಮಕೂರು6 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ24 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ಟ್ರೆಂಡಿಂಗ್‌