Drug peddlers | ಎರಡು ಪ್ರಕರಣದಲ್ಲಿ ನಾಲ್ವರ ಬಂಧನ - Vistara News

ಕ್ರೈಂ

Drug peddlers | ಎರಡು ಪ್ರಕರಣದಲ್ಲಿ ನಾಲ್ವರ ಬಂಧನ

ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಒಂದು ಗುಂಪು, ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಗಿರಿನಗರ ಬಳಿ ಡ್ರಗ್ಸ್‌ ಮಾರುತ್ತಿದ್ದ ಮತ್ತೊಂದು ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿಗೆ ಇತ್ತೀಚೆಗೆ ಡ್ರಗ್ಸ್‌ ಮಾರಾಟಗಾರರ ಸಂಖ್ಯೆ ಹೆಚ್ಚಾಗಿತ್ತಿದೆ. ಕುಮಾರ್‌ಸ್ವಾಮಿ ಲೇಔಟ್‌ ಬಳಿ ಅಮಾಯಕ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಒಂದು ಗುಂಪು, ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಗಿರಿನಗರ ಬಳಿ ಡ್ರಗ್ಸ್‌ ಮಾರುತ್ತಿದ್ದ ಮತ್ತೊಂದು ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್:

ಕುಮಾರಸ್ವಾಮಿ ಲೇಔಟ್ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ₹10 ಲಕ್ಷ ಮೌಲ್ಯದ ಡ್ರಗ್ಸ್‌ ಕೂಡ ಈ ವೇಳೆ ಜಪ್ತಿ ಮಾಡಲಾಗಿದೆ. ಬಂಧಿತರಾದ ಆರೋಪಿಗಳನ್ನು ಸುರೇಂದ್ರ ಹಾಗು ರಾಜೇಶ ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ಅವರಿಗೆ ಡ್ರಗ್ಸ್‌ ಮಾರಾಟ ಮಾಡಲಾಗುತ್ತಿತ್ತು. ಕಾಲೇಜಿ ವಿದ್ಯಾರ್ಥಿಗಳನ್ನು ಸಾದಿ ತಪ್ಪಿಸಿ ಈ ರೀತಿಯ ದುಷ್ಚಟಗಳಿಗೆ ಒಳಪಡಿಸಲಾಗುತ್ತಿತ್ತು.

ಈ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಖಚಿತ ಮಾಹಿತಿ ಸಿಕ್ಕ ಕೂಡಲೇ ಸಿಸಿಬಿ ಅಧಿಕಾರಿಗಳು ಕ್ರಮ ಕೈಗೊಂಡಿಂದ್ದಾರೆ. ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ ಐದು ಕೆಜಿ ಗಾಂಜಾ, 250 ಗ್ರಾಂ ಹ್ಯಾಶಿಶ್ ಆಯಿಲ್, 20 ಎಲ್ಎಸ್‌ಡಿ ಸ್ಟ್ರಿಪ್ಸ್‌ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದು, ಅವರನ್ನು ಶೀಘ್ರವೇ ಸೆರೆ ಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಿರಿನಗರ

ಐಷಾರಾಮಿ ಜೀವನಕ್ಕಾಗಿ ಅಕ್ರಮ ಮಾದಕ ವಸ್ತು ಮಾರಾಟದ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಐಷಾರಾಮಿ ಜೀವನ ನಡೆಸುವ ಆಸೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರು. ತಮ್ಮ ಐಷಾರಾಮಿ ಜೀವನಕ್ಕಾಗಿ ಅಮಯಾಕರನ್ನು ಬಲಿ ನೀಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಸಕೆರೆಹಳ್ಳಿ ಬಳಿ ಕಾರ್‌ನಲ್ಲಿ ಮಾದಕ ವಸ್ತಗಳನ್ನು ಸಾಗಿಸುತ್ತಿರುವ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ವಿ. ಮನೋರಂಜಿತ್‌ ಬಿನ್‌ ವೆಂಕಟೇಶ (20) ಹಾಗೂ ಎಂ. ಸುಗೇಶ್‌ ಕುಮಾರನ್‌ (20) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಗಿರಿನಗರ ಠಾಣೆಯ ಪಿಎಸ್‌ಐ ಡಿ. ರಾಕೇಶ್‌ ಅವರು ಬಾತ್ಮೀದಾರರಿಂದ ಲಭಿಸಿದ ಮಾಹಿತಿಯ ಮೇರೆಗೆ ದೂರು ದಾಖಲಿಸಿದ್ದರು. ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು ದಾಳಿ ನಡೆಸಿದ್ದರು. ದಾಳಿಯಲ್ಲಿ ಒಟ್ಟು 51.44 ಗ್ರಾಂ ತೂಕದ ಮಾದಕ ವಸ್ತು ಎಕ್ಸ್‌ಟಸಿ ಟ್ಯಾಬ್ಲೆಟ್ಸ್‌, 3,850 ನಗದು ಹಣ, 2 ಐ-ಘೋನ್‌ಗಳು ಹಾಗೂ ಒಂದು ಕಾರ್‌ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Drug peddler ಬಂಧನ! ₹20 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

Love Jihad: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

VISTARANEWS.COM


on

love jihad
Koo

ಹುಬ್ಬಳ್ಳಿ: ನೇಹಾ ಹಿರೇಮಠ್‌ ಹತ್ಯೆ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ (Love Jihad Case) ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿಯ ಗಬ್ಬೂರನಲ್ಲಿ ಅನ್ಯಕೋಮಿನ ಯುವಕನ ಜತೆ ಬಾಲಕಿ ಇದ್ದಳು. ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಾಲಕಿಯನ್ನು ಯುವಕ ಕರೆತಂದಿದ್ದ. ಗಬ್ಬೂರ ಹೋಟೆಲ್‌ನಲ್ಲಿ ಇದ್ದವನನ್ನು ಗಮನಿಸಿ ಸ್ಥಳೀಯರು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡರು, ಯುವಕನಿಗೆ ಥಳಿಸಿ, ಹುಬ್ಬಳ್ಳಿಯ ಬೇಂಡಿಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಕುರಿತು ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

ಕೆರೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗಳು ಸಾವು

ಕೋಲಾರ: ಕೆರೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದ ವೃಷಭಾವತಿ ಕರೆಯಲ್ಲಿ ನಡೆದಿದೆ. ಮಜರಾಗೊಲ್ಲಹಳ್ಳಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಬಂದಿದ್ದ ತಂದೆ-ಮಗಳು, ಕೆರೆ ಬಳಿ ಸೆಲ್ಫಿ ತೆಗದುಕೊಳ್ಳಲು ಹೋದಾಗ, ಮಗಳು ಕಾಲು ಜಾರಿ ನೀರಗೆ ಬಿದ್ದಿದ್ದಾಳೆ. ಹೀಗಾಗಿ ಮಗಳನ್ನು ರಕ್ಷಿಸಲು ಹೋದ ತಂದೆಯೂ ಮುಳುಗಿದ್ದಾರೆ

ಬೆಂಗಳೂರು ಮೂಲದ ಸಯ್ಯದ್ ಅಯ್ಯೂಬ್ (35) ಹಾಗೂ ಫಾತಿಮಾ (10) ಮೃತ ತಂದೆ, ಮಗಳು. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Continue Reading

ಕರ್ನಾಟಕ

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾರ್ಗಸೂಚಿಗಳನ್ನು ಪಾಲಿಸದೆ ಇಬ್ಬರು ಆರೋಪಿಗಳು ನೋಟುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಹಾಗಾಗಿ, ಇಬ್ಬರಿಗೂ ನ್ಯಾಯಾಲಯವು ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Notes
Koo

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನಿಯಮಗಳನ್ನು ಉಲ್ಲಂಘಿಸಿ ನೋಟುಗಳನ್ನು ನಗದೀಕರಣ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯವು (CBI Special Court) ಇಬ್ಬರು ಆರೋಪಿಗಳಿಗೆ ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನೋಟು ನಗದೀಕರಣ ಮಾಡಿದ ಎಸ್.‌ ಗೋಪಾಲಯ್ಯ ಹಾಗೂ ಎಲ್‌ಐಸಿ ಏಜೆಂಟ್‌ ಕೆ.ರಾಘವೇಂದ್ರ ಎಂಬುವರಿಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

2016ರಲ್ಲಿ ಕೇಂದ್ರ ಸರ್ಕಾರವು ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ನಿಷೇಧಿತ ಕರೆನ್ಸಿಗಳ ನಗದೀಕರಣಕ್ಕೆ ಆರ್‌ಬಿಐ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಇಬ್ಬರೂ ಆರ್‌ಬಿಐ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನೋಟುಗಳನ್ನು ನಗದೀಕರಣ ಮಾಡಿಕೊಂಡಿದ್ದರು. ಹಾಗಾಗಿ, ಸಿಬಿಐ ನ್ಯಾಯಾಲಯವು ಇಬ್ಬರಿಗೂ ಜೈಲು ಶಿಕ್ಷೆಯ ಜತೆಗೆ ಭಾರಿ ದಂಡ ವಿಧಿಸಿದೆ. ಎಸ್‌.ಗೋಪಾಲಯ್ಯಗೆ 2.10 ಲಕ್ಷ ರೂ. ಹಾಗೂ ರಾಘವೇಂದ್ರಗೆ 1.6 ಲಕ್ಷ ರೂ. ದಂಡ ವಿಧಿಸಿದೆ.

money guide

ಮಾರ್ಗಸೂಚಿ ಅನುಸರಿಸದೆ ನೋಟುಗಳನ್ನು ನಗದೀಕರಣ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಬಿಐ 2017ರ ಮಾರ್ಚ್‌ನಲ್ಲಿ ಈಗ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆ ವೇಳೆ ಇವರ ದುರುದ್ದೇಶ ಬಯಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ತಂಡವು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಅದರಂತೆ, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

ಕೆಲ ತಿಂಗಳ ಹಿಂದಷ್ಟೇ, ರಾಷ್ಟ್ರೀಯ ತನಿಖಾ ದಳವು ನಕಲಿ ನೋಟು ಜಾಲದ ಮೇಲೆ ಮುಗಿಬಿದ್ದಿತ್ತು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ ಹಿಡಿದಿತ್ತು. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: Fake Currency: ಬಳ್ಳಾರಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರ ಬಂಧನ

Continue Reading

ಬೆಂಗಳೂರು

Car Accident: ಮಾದಾವರ ಟೋಲ್‌ಗೇಟ್ ಬಳಿ ಕಾರು ಅಪಘಾತ ಪ್ರಕರಣ; ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಸಾವು

Car Accident: ಬೆಂಗಳೂರು-ತುಮಕೂರು ಹೆದ್ದಾರಿಯ ಮಾದಾವರ ಟೋಲ್‌ಗೇಟ್ ಬಳಿ ಏ.21ರಂದು ಮಾರುತಿ ಓಮ್ನಿಗೆ ಬಲೆನೊ ಕಾರು ಡಿಕ್ಕಿಯಾಗಿ ಅಪಘಾತ ನಡೆದಿತ್ತು. ಅಂದು ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.

VISTARANEWS.COM


on

Car Accident
Koo

ಬೆಂಗಳೂರು: ಮಾದಾವರ ಟೋಲ್‌ಗೇಟ್ ಬಳಿ ಏ.21ರಂದು ನಡೆದಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣದಲ್ಲಿ ಸಾವಿನ ಸಂಖ್ಯೆ 4ಕ್ಕೇರಿದೆ. ಅಪಘಾತದಲ್ಲಿ ಮಾರುತಿ ಬಲೆನೊ ಕಾರು ಡಿಕ್ಕಿಯಾಗಿದ್ದರಿಂದ ಪಲ್ಟಿಯಾದ ಓಮ್ನಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಬಾಲಕಿಯೊಬ್ಬಳು ಸಜೀವ ದಹನವಾಗಿದ್ದಳು. ಘಟನೆಯಲ್ಲಿ (Car Accident) ಗಾಯಗೊಂಡಿದ್ದ 14 ಜನರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು, ಈ ಪೈಕಿ ಮೂವರು ಇದೀಗ ಕೊನೆಯುಸಿರೆಳೆದಿದ್ದಾರೆ.

ಘಟನೆಯ ವಿವರ

ಬೆಂಗಳೂರು-ತುಮಕೂರು ಹೆದ್ದಾರಿಯ ಮಾದಾವರ ಟೋಲ್‌ಗೇಟ್ ಬಳಿ ಏ.21ರಂದು ರಾತ್ರಿ ಮಾರುತಿ ಓಮ್ನಿ (Maruti Omni) ವಾಹನಕ್ಕೆ ಬಲೆನೊ ಕಾರು (Baleno) ಹಿಂದಿನಿಂದ ಡಿಕ್ಕಿಯಾದ (Road Accident) ಪರಿಣಾಮ ಬಾಲಕಿಯೊಬ್ಬಳು (girl death) ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿತ್ತು.

ಓಮ್ನಿಯಲ್ಲಿದ್ದವರು ಅಬ್ಬಿಗೆರೆ, ದಾಸಾನುಪುರದ ಸಂಬಂಧಿಕರ ಮನೆಯಿಂದ ಬರುತ್ತಿದ್ದಾಗ ದುರಂತ ಘಟಿಸಿತ್ತು ಒಟ್ಟು ಎಂಟು ಜನ ಮಾರುತಿ ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಲೆನೊ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಬಲೆನೊ ಕಾರು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಮೂರು ಪಲ್ಟಿಯಾಗಿತ್ತು. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ 14 ವರ್ಷದ ಬಾಲಕಿ ದಿವ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಳು.

ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಟು ಜನರಲ್ಲಿ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್, ಶಾಂತಿಲಾಲ್ ಗಾಯಗೊಂಡಿದ್ದರು. ಎಲ್ಲರೂ ದಾಸನಪುರ ನಿವಾಸಿಗಳು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಮನ್, ಸುನಿತಾ, ಮಾಯಾಂಕ್ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

ಮತ್ತೊಂದು ಕಾರಿನಲ್ಲಿದ್ದ ಚಾಲಕ ರಕ್ಷಿತ್, ಚೇತನ್, ಮುಬಾರಕ್, ಸಲ್ಮಾ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಪಘಾತಕ್ಕೆ ಕಾರಣವಾದ ಬಾಲೆನೋ ಕಾರು ಚಾಲಕ ಇನ್ಶೂರೆನ್ಸ್ ಹಣ ಕಟ್ಟದೆ ಫೇಕ್ ನಂಬರ್ ಹಾಕಿದ್ದ ಎನ್ನಲಾಗಿದೆ. ಜತೆಗೆ ಇದರ ಅಸಲಿ ಕಾರಿನ ಕಾರು ನಂಬರ್ ಬೆಳಗಾವಿಯ ಪಲ್ಲವಿ ಎಂಬುವವರಿಗೆ ಸೇರಿದ್ದು, ಹೀಗಾಗಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಚುರಕುಗೊಂಡಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕರ್ನಾಟಕ

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Jatra Rathotsava: ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ.

VISTARANEWS.COM


on

Jatra Rathotsava Two killed and one serious after being hit by wheel of a chariot at Indi Kamarimath
Koo

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ (Kamarimatha Fair) ನಡೆದ ರಥೋತ್ಸವ (Jatra Rathotsava) ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ. ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

ಬೆಂಗಳೂರು: ಮಹದೇವ್ ಬೆಟ್ಟಿಂಗ್ ಆ್ಯಪ್ (Mahadev betting app case) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ (Betting App Case) ನಟ ಮತ್ತು ಫಿಟ್‌ನೆಸ್‌ ಪ್ರಭಾವಿ ಸಾಹಿಲ್ ಖಾನ್ (Sahil Khan Arrested) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ನಟನನ್ನು ಬಂಧಿಸಿದ್ದು, ಬಾಂಬೆ ಹೈಕೋರ್ಟ್‌ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದಕ್ಕೂ ಮೊದಲು, 2023ರ ಡಿಸೆಂಬರ್‌ನಲ್ಲಿ ಸಾಹಿಲ್ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಮೂವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಕರೆದಿತ್ತು. ಆದರೆ, ಅವರು ಹಾಜರಾಗಲಿಲ್ಲ. ತಾವು ಕೇವಲ ಬ್ರ್ಯಾಂಡ್ ಪ್ರಮೋಟರ್‌ ಎಂದು ಹೇಳಿಕೊಂಡು ಬಂದಿದ್ದರು. ಆದರೆ, ಸಾಹಿಲ್ ಆ್ಯಪ್‌ನ ಸಹ ಮಾಲೀಕ ಎಂಬುದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಸಾಹಿಲ್‌ ಈ ಬೆಟ್ಟಿಂಗ್ ಆ್ಯಪ್‌ ಸಂಬಂಧಿಸಿದ ಪ್ರಚಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ತಿಂಗಳಿಗೆ 3 ಲಕ್ಷ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಮಾತ್ರವಲ್ಲ 24 ತಿಂಗಳುಗಳ ಕಾಲ ಈ ಆ್ಯಪ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು.

ಇದರ ಹೊರತಾಗಿಯೂ, ಕಾನೂನುಬಾಹಿರ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ʻಸ್ಟೈಲ್ʼ ಮತ್ತು ʻಎಕ್ಸ್‌ಕ್ಯೂಸ್ ಮಿʼ ಸಿನಿಮಾ ಪಾತ್ರಗಳಿಗೆ ಹೆಸರುವಾಸಿಯಾದ ಸಾಹಿಲ್ ಈಗ ಫಿಟ್‌ನೆಸ್‌ನತ್ತ ಗಮನಹರಿಸಿದ್ದಾರೆ.

ಇದನ್ನೂ ಓದಿ: The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

2023ರಲ್ಲಿ, ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ವಿಚಾರಣೆ ನಡೆಸಿದ ಕ್ರೈಂ ಬ್ರ್ಯಾಂಚ್‌ ವಿಭಾಗವು ಡಿಸೆಂಬರ್ 15ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಾಹಿಲ್ ಖಾನ್ ಮತ್ತು ಇತರ ಮೂವರಿಗೆ ಸಮನ್ಸ್ ನೀಡಿತ್ತು ಎಂದು ವರದಿಯಾಗಿದೆ. ಆದರೆ, ಸಾಹಿಲ್ ಖಾನ್ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಲಿಲ್ಲ. ಇದಲ್ಲದೆ ಸೋಷಿಯಲ್‌ ಮೀಡಿಯಾಗಳಲ್ಲಿ ನಿರಂತರವಾಗಿ ಪೋಸ್ಟ್‌ ಮಾಡುತ್ತಲೇ ಇರುತ್ತಿದ್ದರು. ಪೊಲೀಸರ ಸಮನ್ಸ್‌ಗಳನ್ನು ಅವರು ನಿರ್ಲಕ್ಷಿಸುತ್ತಿರುವುದನ್ನು ಕಂಡು ನೆಟ್ಟಿಗರಿಂದ ಟೀಕೆಗೆ ಗುರಿಯಾಗುತ್ತಿದ್ದರು. ವರದಿಗಳ ಪ್ರಕಾರ, ಸಾಹಿಲ್ ಖಾನ್ ಅವರು ಈ ಆ್ಯಪ್ ಪ್ರಚಾರ ಮಾಡಲು ಸೆಲೆಬ್ರಿಟಿ ಕೂಟಗಳನ್ನು ಆಯೋಜಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಮಹದೇವ್​ ಬೆಟ್ಟಿಂಗ್​ ಪ್ರಕರಣ?

ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಭಾಗಿಯಾಗಿದ್ದಾರೆ ಎನ್ನಲಾದ ಬೆಟ್ಟಿಂಗ್ ಹಗರಣವೊಂದು ಹೊರಕ್ಕೆ ಬಂದಿತ್ತು. ಮಹದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದರು. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವು ಚರ್ಚೆಗೆ ಗ್ರಾಸವಾಗಿತ್ತು.

ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು. ಆಸಿಂ ದಾಸ್‌ ಎಂಬಾತನನ್ನು ಕೂಡ ಇ.ಡಿ ಬಂಧಿಸಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿತ್ತು.

Continue Reading
Advertisement
dina bhavishya read your daily horoscope predictions for April 29 2024
ಭವಿಷ್ಯ16 mins ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

love jihad
ಕರ್ನಾಟಕ5 hours ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ5 hours ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು6 hours ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ6 hours ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ6 hours ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Narendra Modi
Lok Sabha Election 20246 hours ago

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

cet exam karnataka exam authority
ಕರ್ನಾಟಕ6 hours ago

CET 2024: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಡಲು ನಿರ್ಧಾರ, ಮರು ಪರೀಕ್ಷೆ ಇಲ್ಲ; ಅಂಕ ಪರಿಗಣನೆ ಹೇಗೆ?

PM Narendra Modi
ಕರ್ನಾಟಕ7 hours ago

PM Narendra Modi: ನಾಳೆ ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

Paris Olympics
ಕ್ರೀಡೆ7 hours ago

Paris Olympics: ಬೆಳ್ಳಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಶೂಟರ್​ ಮಹೇಶ್ವರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ16 mins ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202412 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202415 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202417 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202417 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ20 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌