Accident | ಖಾಸಗಿ ಶಾಲೆ ಬಸ್‌ ಡಿಕ್ಕಿಯಾಗಿ ಸರ್ಕಾರಿ ಶಾಲೆ ಬಾಲಕ ಸಾವು - Vistara News

ಕ್ರೈಂ

Accident | ಖಾಸಗಿ ಶಾಲೆ ಬಸ್‌ ಡಿಕ್ಕಿಯಾಗಿ ಸರ್ಕಾರಿ ಶಾಲೆ ಬಾಲಕ ಸಾವು

ಮಹದೇವಪುರ ಕ್ಷೇತ್ರದ ಮುನ್ನೇಕೊಳಾಲದಲ್ಲಿ ನಡೆದ ಅಪಘಾತದಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಆಂತರಿಕ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

VISTARANEWS.COM


on

Accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖಾಸಗಿ ಶಾಲೆ ಬಸ್‌ ಡಿಕ್ಕಿಯಾಗಿ(Accident) ಸರ್ಕಾರಿ ಶಾಲೆ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ನಗರದ ಮಹದೇವಪುರ ಕ್ಷೇತ್ರದ ಮುನ್ನೇಕೊಳಾಲ ನಿವಾಸಿ ರಾಜೇಶ್, ಪ್ರಿಯಾ ದಂಪತಿಯ ಪುತ್ರ ನಿತೀಶ್ ಕುಮಾರ್ (7) ಮೃತ ಬಾಲಕ.

ಮುನ್ನೇಕೊಳಾಲ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಬಾಲಕ, ಬೆಳಗ್ಗೆ ಮನೆಯಿಂದ ಶಾಲೆಗೆ ತೆರಳುವಾಗ ರಾಯನ್ ಇಂಟರ್ ನ್ಯಾಷನಲ್ ಶಾಲೆ ಬಸ್ ಡಿಕ್ಕಿಯಾಗಿ ಬಾಲಕನ ತಲೆಗೆ ಗಾಯವಾಗಿದೆ. ಆದರೆ, ಶಾಲಾ ಬಸ್‌ ಚಾಲಕ ಬಾಲಕನನ್ನು ಮೇಲೆತ್ತಿ ನೀರು ಕುಡಿಸಿದ ನಂತರ, ಬಾಲಕ ಶಾಲೆಗೆ ನಡೆದುಕೊಂಡು ಹೋಗಿದ್ದಾನೆ.

ಅಪಘಾತದ ವೇಳೆ ತಲೆಗೆ ಗಾಯವಾಗಿರುವುದು ಬಾಲಕನ ಗಮನಕ್ಕೆ ಬಂದಿಲ್ಲ. ತರಗತಿಯಲ್ಲಿದ್ದಾಗ ತಲೆಯಲ್ಲಿ ಊತ ಕಾಣಿಸಿಕೊಂಡು ಅಸ್ವಸ್ಥನಾಗಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗಂಭೀರ ಗಾಯವಾಗಿ ಆಂತರಿಕ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ ಒಂದು ಗಂಟೆ ಅವಧಿಯಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಎಚ್ಎಎಲ್ ಸಂಚಾರ ಠಾಣೆ ಪೊಲೀಸರು, ಖಾಸಗಿ ಬಸ್ ಚಾಲಕ ವಿಠಲ್‌ ಎಂಬಾತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | ಕೊಳಗಲ್‌ ಆಟೊ ದುರಂತ| ಆರು ಬಡ ಹೆಣ್ಮಕ್ಕಳ ಬಾಳಿಗೆ ಚರಮ ಗೀತೆ ಹಾಡಿತು ಆ ಒಂದು ಕಲ್ಲು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Chetan Chandra: ಬೆಂಗಳೂರಿನ ಕಗ್ಗಲಿಪುರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ನಟ ಚೇತನ್ ಚಂದ್ರ ಅವರನ್ನು ಅಡ್ಡಗಟ್ಟಿ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

VISTARANEWS.COM


on

Chetan Chandra
Koo

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Mother's Day 2024 Duniya Vijay jaggesh Post Viral

ಬೆಂಗಳೂರು: ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ (Mother’s Day 2024) ಮೊದಲನೆ ಕಂದನ ಅಳುವ ದನಿಯಿಂದ ʼಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್‌ ಅವರು ಇನ್‌ಸ್ಟಾದಲ್ಲಿ ಅಮ್ಮನ ತೊಡೆ ಮೇಲೆ ಮಲಗಿರುವ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ. ಧನ್ಯವಾದ ಜೀ ಕನ್ನಡ. ನನ್ನ ಪ್ರೀತಿಯ ಅಮ್ಮನ ಈ ರೀತಿ ನೆನೆಯುವಂತ ಕಾಣಿಕೆಗಾಗಿ.
ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ. ಅಂತಹ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ.
ಕಾರುಣ್ಯ ಸೆಲೆಯ ಓ ಅಮ್ಮಂದಿರೆ…ನೀವುಗಳು ಇರಬೇಕು ಶಾಶ್ವತ. ದೃವನಕ್ಷತ್ರದಂತೆ..! ಮರೆಯಾಗದೆ ಮಕ್ಕಳ ಮುಂದೆ..ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ದುನಿಯಾ ವಿಜಯ್‌ ಅವರು ಅಮ್ಮನ ಜತೆ ಇರುವ ಫೋಟೊ ಶೇರ್‌ ಮಾಡಿ ʻʻಈ ಉಸಿರು ಕೊಟ್ಟ ನಿನಗೆ
ನನ್ನ ಉಸಿರಿರೊವರೆಗೂ. ಪ್ರತಿ ದಿನ ಆಚರಣೆಯೇ ಅಮ್ಮʼʼ ಎಂದು ಬರೆದುಕೊಂಡಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ದುನಿಯಾ ವಿಜಯ್‌ ಅಮ್ಮ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾದರು.

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್‌ ಯೂ ಅಮ್ಮ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ | Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

Continue Reading

ಕರ್ನಾಟಕ

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

Rain News: ಬಾಗಲಕೋಟೆ ತಾಲೂಕಿನಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನ ಪರದಾಡುವಂತಾಗಿದೆ.

VISTARANEWS.COM


on

Rain News
Koo

ಬಾಗಲಕೋಟೆ/ಬಾಗಲಕೋಟೆ: ರಾಜ್ಯದ ವಿವಿಧೆಡೆ ಭಾನುವಾರವೂ ಭರ್ಜರಿ ಮಳೆ ಸುರಿದಿದೆ. ಇದರಿಂದ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನಲ್ಲಿ ನಡೆದಿದೆ. ಇನ್ನು ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ.

ಸಿಡಿಲು ಬಡಿದು ಬಾಲಕ ಸಾವು

ಬಾಗಲಕೋಟೆ: ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರು ಸಮೀಪ ನಡೆದಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೊನ್ಯಾಳ ನಿವಾಸಿ ಪ್ರಕಾಶ್ ವಗ್ಗರ್ (17) ಮೃತ.

ನಾಲ್ಕೈದು ದಿನಗಳ ಹಿಂದೆ ಬೇವೂರಿನ ಸಂಬಂಧಿಕರ ಮನೆಗೆ ಬಾಲಕ ಬಂದಿದ್ದ. ಬಾಗಲಕೋಟೆಯಿಂದ ಬೇವೂರು ಗ್ರಾಮಕ್ಕೆ ಭಾನುವಾರ ಬೈಕ್ ಮೇಲೆ ಹೊರಟಿದ್ದಾಗ ಮಳೆ ಬಂತೆಂದು ಹಳ್ಳೂರು ಸಮೀಪ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಈ ವೇಳೆ ಬಾಲಕ ಮೃತಪಟ್ಟಿದ್ದು, ಆತನ ಜೊತೆಗಿದ್ದ ಶ್ರೀಶೈಲ್ ಬನ್ನೆಪ್ಪನವರ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಹಲವು ಮನೆಗಳಿಗೆ ನುಗ್ಗಿದ ನೀರು

ಬೆಳಗಾವಿ: ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ ಘಟನೆ ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದಲ್ಲಿ ನಡೆದಿದೆ. ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಗ್ರಾಮದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ಶಾಸಕ ಅಭಯ ಪಾಟೀಲ ವಿರುದ್ಧ ಸ್ಥಳೀಯ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ವರ್ಷಗಳಿಂದ ಚರಂಡಿ ಸರಿಪಡಿಸಿಲ್ಲ, ಹೀಗಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಸತತ ಗಂಟೆ ಕಾಲ ಸುರಿದ ಭಾರಿ ಮಳೆಗೆ ಜನರು ಕಂಗಾಲಾಗಿದ್ದಾರೆ.

ಇದನ್ನೂ ಓದಿ | Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಸಿಡಿಲಿನ ಹೊಡೆತಕ್ಕೆ ಧಗ ಧಗಿಸಿದ ತೆಂಗಿನಮರ

ಸಿಡಿಲಿನ ಹೊಡೆತಕ್ಕೆ ತೆಂಗಿನಮರ ಹೊತ್ತಿ ಉರಿದ ಘಟನೆ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವೆಂಕಟೇಶ್ವರ್ ನಗರದಲ್ಲಿ ನಡೆದಿದೆ. ಮಂಜುನಾಥ್ ಪಾಟೀಲ್ ಎಂಬುವವರ ತೆಂಗಿನಮರಕ್ಕೆ ಸಿಡಿಲು ಬಡಿದಿದೆ. ತೆಂಗಿನಮರ ಧಗ ಧಗಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Continue Reading

ಕ್ರೈಂ

Self Harming: ಎರಡು ಸಬ್ಜೆಕ್ಟ್‌ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Self Harming: ಎಂಜಿನಿಯರಿಂಗ್‌ 3ನೇ ವರ್ಷದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣವಾಗಿರುವುದು ತಂದೆಗೆ ತಿಳಿಯುತ್ತದೆ ಎಂದು ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ನಡೆದಿದೆ.

VISTARANEWS.COM


on

Self Harming
Koo

ಆನೇಕಲ್: ಎರಡು ಸಬ್ಜೆಕ್ಟ್‌ ಫೇಲ್‌ ಆಗಿರುವುದು ಪೋಷಕರಿಗೆ ತಿಳಿಯುತ್ತದೆ ಎಂದು ಹೆದರಿ, ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ನಗರ ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

ಬಿಹಾರ ಮೂಲದ ಹೇಮಲತಾ ಪಾಂಡೆ, ವಿಜಯ್ ಶಂಕರ್ ಪಾಂಡೆ ದಂಪತಿ ಪುತ್ರ ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿದ್ಯಾರ್ಥಿಯ ಕುಟುಂಬ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿತ್ತು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು, ಮೈಸೂರು ರಸ್ತೆಯ ಆರ್.ವಿ. ಕಾಲೇಜಿಗೆ ಸೇರಿಸಿದ್ದರು.

ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಆದರೆ, ಮೂರನೇ ವರ್ಷದಲ್ಲಿ ಎರಡು ವಿಷಯ ಫೇಲ್ ಆಗಿ, ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತದೆ ಎಂದು ಹೆದರಿಕೊಂಡಿದ್ದ. ಕಾಲೇಜಿನವರು ಪೋನ್ ಮಾಡುತ್ತಾರೆ ಎಂದು ತಂದೆ ಫೋನ್‌ನಲ್ಲಿದ್ದ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದ.

ಇದನ್ನೂ ಓದಿ | Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ಇತ್ತೀಚೆಗೆ ಆರನೇ ಸೆಮಿಸ್ಟರ್‌ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೀನಿ ಎಂದು ತಂದೆ ಹೇಳಿದ್ದರು. ಆದರೆ, ತಂದೆ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತದೆ ಎಂದು ಹೆದರಿದ್ದ ವಿದ್ಯಾರ್ಥಿ, ಮೇ 10ರಂದು ಮನೆಯಿಂದ ಹೊರಗೆ ಹೋಗಿದ್ದ. ಇದರಿಂದ ಎಲ್ಲೆಡೆ ಆತನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ, ಶನಿವಾರ ಜಿಗಣಿ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹ ದೊರೆತಿದೆ. ಕೂಡಲೇ ಜಿಗಣಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಹೀಗಾಗಿ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

Drowned in water

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಾಟದಹೊಸಳ್ಳಿ ಕೆರೆಯಲ್ಲಿ ಈಜಲು ಹೋದ ಟೆಕ್ಕಿ ನೀರಲ್ಲಿ (Drowned in water) ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ವಿನಯ್ ರಮೇಶ್ (42) ಎಂಬುವವರು ಮೃತಪಟ್ಟಿದ್ದರು. ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಭಾನುವಾರ ಟೆಕ್ಕಿ ಮೃತದೇಹವು ಪತ್ತೆಯಾಗಿದೆ.

ಬೆಂಗಳೂರಿನ ಇಂದಿರಾನಗರ ನಿವಾಸಿಯಾದ ವಿನಯ್ ರಮೇಶ್, ಐದು ಜನ ಸ್ನೇಹಿತರೊಟ್ಟಿಗೆ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆಲವರು ಈ ದಡದಿಂದ ಆ ದಡಕ್ಕೆ ಯಾರು ಮೊದಲು ಈಜಿಕೊಂಡು ಬರುತ್ತಾರೆ ನೋಡೋಣಾ ಎಂದು ಸವಾಲು ಹಾಕಿಕೊಂಡಿದ್ದಾರೆ. ಈ ಚಾಲೆಂಜ್‌ ಅನ್ನು ಸ್ವೀಕರಿಸಿದ ರಮೇಶ್‌ ಜೋಶ್‌ನಲ್ಲಿ ನೀರಿಗೆ ಇಳಿದಿದ್ದಾರೆ. ಆದರೆ ವಿನಯ್ ರಮೇಶ್ ವಾಪಸ್ ಬಂದಿರಲಿಲ್ಲ.

ಹೀಗಾಗಿ ಜತೆಗೆ ಇದ್ದ ಸ್ನೇಹಿತರು ಗಾಬರಿಯಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಿನಯ್‌ ರಮೇಶ್‌ ವಿಮಾನದಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಸ್ನೇಹಿತರೊಟ್ಟಿಗೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ನಿರಂತರ ಪ್ರಯಾಣದಿಂದ ಬಳಲಿದ್ದ ವಿನಯ್ ಈಜಲು ಕೆರೆಗೆ ಇಳಿದಾಗ ಸುಸ್ತಾಗಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

ಈಜುವ ಚಾಲೆಂಜ್ ವಿನಯ್ ರಮೇಶ್‌ಗೆ ಮುಳುವಾಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ. 24 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಕೆರೆಯಿಂದ ಹೊರಗೆ ತಂದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Continue Reading

ಕರ್ನಾಟಕ

Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

Vijayapura News: ವಿಜಯಪುರ ಜಿಲ್ಲೆಯ ಮದಬಾವಿ ತಾಂಡಾದ ಹೊರವಲಯದಲ್ಲಿ ಘಟನೆ ನಡೆದಿದೆ. ಇನ್ನೆರಡು ದಿನದಲ್ಲಿ ಮೀನು‌ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಬಿಸಿಲಿನ‌ ತಾಪಕ್ಕೆ ಸಾವಿರಾರು ಮೀನುಗಳು ಮೃತಪಟ್ಟಿವೆ. ಇದರಿಂದ ಯುವ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

VISTARANEWS.COM


on

Koo

ವಿಜಯಪುರ: ಜಿಲ್ಲೆಯ ಮದಬಾವಿ ತಾಂಡಾದ ಹೊರವಲಯದ ತೋಟದಲ್ಲಿ (Vijayapura News) ಮೀನುಗಳ ಮಾರಣ ಹೋಮ ನಡೆದಿದೆ. ಬೇಸಿಗೆಯ ಬಿಸಿಲಿನ‌ (summer heat) ತಾಪಕ್ಕೆ 17 ಸಾವಿರ ಮತ್ಸ್ಯಗಳು ಮೃತಪಟ್ಟಿದ್ದು, ಇದರಿಂದ ಯುವ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ 46 ಡಿಗ್ರಿವರೆಗೆ ತಲುಪುತ್ತಿದೆ. ಇದರಿಂದ ವಿರೇಶ ಕವಟಗಿ ಎಂಬ ಯುವ ರೈತ ಸಾಕಿದ್ದ ಮೀನುಗಳು ಮೃತಪಟ್ಟಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದರಿಂದ ರೈತ ಕಂಗಾಲಾಗಿದ್ದಾನೆ.

ಬಯೋಪ್ಲಾಕ್ ಹೊಂಡದಲ್ಲಿ ಯುವ ರೈತ ಮೀನು ಸಾಕಾಣಿಕೆ ಮಾಡಿದ್ದ. 180 ಅಡಿ ಉದ್ದ, 70 ಅಡಿ ಅಗಲವಾದ ಹೊಂಡದಲ್ಲಿ ಮರ್ಲ್ ಜಾತಿ ಮೀನುಗಳನ್ನು ಸಾಕಾಣಿಕೆ ಮಾಡಿದ್ದ. ವೃತ್ತಿಯಲ್ಲಿ ಸಾಪ್ಟವೇರ್ ಎಂಜಿನಿಯರ್‌ ಆಗಿದ್ದರೂ ವಿರೇಶ ಕೃಷಿ ಮಾಡಿಕೊಂಡಿದ್ದ.

ಇದನ್ನೂ ಓದಿ | Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿರೇಶ, ಬೆಂಗಳೂರಿನಿಂದ ಬಂದು ಮೀನು ಮಾರಾಟ ಮಾಡಬೇಕು ಎಂದುಕೊಂಡಿದ್ದ. ಹೀಗಾಗಿ ಗ್ರಾಮಕ್ಕೆ ಬಂದು ನೋಡಿದಾಗ ರಾತ್ರೋ ರಾತ್ರಿ ಯುವ ರೈತನಿಗೆ ಆಘಾತ ಉಂಟಾಗಿದೆ. ಬಿಸಿಲಿನ ತಾಪದಿಂದ ಬೆಳಗ್ಗೆವರೆಗೆ 17 ಸಾವಿರ ಮೀನುಗಳ ಮೃತಪಟ್ಟಿದ್ದು, ಇದರಿಂದ ಸುಮಾರು 35 ಲಕ್ಷ ರೂ. ನಷ್ಟವಾಗಿದೆ. ಮೀನುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕೊಡಿ ಎಂದು ಅಧಿಕಾರಿಗಳಿಗೆ ಯುವ ರೈತ ಮನವಿ ಮಾಡಿದ್ದಾನೆ.

ಚಿಕ್ಕಮಗಳೂರಿನಲ್ಲಿ ಮತ್ತೊಂದು ಕಾಡಾನೆ ಅನುಮಾನಾಸ್ಪದ ಸಾವು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಸರಣಿ ಸಾವು ಮುಂದುವರಿದಿದ್ದು, ತಾಲೂಕಿನ ಆಲ್ದೂರು ಬಳಿಯ ಕೆರೆಹಕ್ಲು ಗ್ರಾಮದ ಸಮೀಪ ಮತ್ತೊಂದು ಕಾಡಾನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. 35 ವರ್ಷದ ಒಂಟಿ ಸಲಗ ಕೊನೆಯುಸಿರೆಳೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ವಾರದ ಹಿಂದೆ ಈ ಭಾಗದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಬಲಿಯಾಗಿದ್ದ.

ಇದನ್ನೂ ಓದಿ | Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ.

ಬಾಗಲಕೋಟೆ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಯರಗೊಪ್ಪ ಸಮೀಪ ನಡೆದಿದೆ. ಘಟನೆಯಲ್ಲಿ ಯುವಕ ರುಂಡ, ಮುಂಡ ಬೇರೆ ಬೇರೆಯಾಗಿ ಬಿದ್ದಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading
Advertisement
Chetan Chandra
ಕರ್ನಾಟಕ11 mins ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest19 mins ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ37 mins ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ43 mins ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ50 mins ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ1 hour ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ1 hour ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ1 hour ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

IPL 2024
Latest2 hours ago

IPL 2024 : ಸಿಎಸ್​ಕೆ ವರ್ಸಸ್​ ಆರ್​ಆರ್​ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಿತಾ? ಅಭಿಮಾನಿಗಳ ಅನುಮಾನ

Self Harming
ಕ್ರೈಂ2 hours ago

Self Harming: ಎರಡು ಸಬ್ಜೆಕ್ಟ್‌ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ5 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ5 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ5 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ9 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ18 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌