ಉಲ್ಲಾಳುದಲ್ಲಿ ₹209.80 ಕೋಟಿ ವೆಚ್ಚದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ - Vistara News

ಪ್ರಮುಖ ಸುದ್ದಿ

ಉಲ್ಲಾಳುದಲ್ಲಿ ₹209.80 ಕೋಟಿ ವೆಚ್ಚದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

ಬಿಡಿಎ ಅಭಿವೃದ್ಧಿಪಡಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್ 80 ಅಡಿ ರಸ್ತೆಯ ಉಲ್ಲಾಳು ಮುಖ್ಯರಸ್ತೆಯಲ್ಲಿರುವ 10,525 ಚದರ ಅಡಿಗಳ ಜಾಗವನ್ನು ಸರ್ಕಾರಿ ಆಸ್ಪತ್ರೆಗೆ ಮೀಸಲಿರಿಸಲಾಗಿದೆ.

VISTARANEWS.COM


on

ಸಿಎಂ ಬೊಮ್ಮಾಯಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ನೀಡಿದ ಭರವಸೆಯಂತೆ ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ಗ್ರಾಮದಲ್ಲಿ 209.80 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡದ ಜೊತೆಗೆ ಆಸ್ಪತ್ರೆ ಹಾಗೂ ಸಿಬ್ಬಂದಿ ವರ್ಗದವರಿಗೆ ವಸತಿ ಗೃಹ, ಲ್ಯಾಬ್ ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಎರಡು ಹಂತದಲ್ಲಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿ ಒಳಗೊಂಡಂತೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು ಎರಡನೇ ಹಂತದಲ್ಲಿ 4 ಮತ್ತು 5ನೇ ಮಹಡಿ, ವಸತಿ ಗೃಹಗಳು, ಮೂಲಭೂತ ಸೌಕರ್ಯ ಕಾಮಗಾರಿಗಳು, ವೈದ್ಯಕೀಯ ಉಪಕರಣಗಳು ಹಾಗೂ ಪೀಠೋಪಕರಣಗಳು ಒಳಗೊಂಡಿರುತ್ತದೆ.

ಬಿಡಿಎ ಅಭಿವೃದ್ಧಿಪಡಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್ 80 ಅಡಿ ರಸ್ತೆಯ ಉಲ್ಲಾಳು ಮುಖ್ಯರಸ್ತೆಯಲ್ಲಿರುವ ಸಿಎ-1 (ಸರ್ವೆ ನಂ.150/1ರಲ್ಲಿ)10,525 ಚದರ ಅಡಿಗಳ ಜಾಗವನ್ನು ಸರ್ಕಾರಿ ಆಸ್ಪತ್ರೆಗೆ ಮೀಸಲಿರಿಸಲಾಗಿದೆ. ಈ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು ಇದಕ್ಕಾಗಿ ಬಿಡಿಎಗೆ 8.50 ಕೋಟಿ ರೂ. ಹಣವನ್ನು ಕೂಡ ಆಸ್ಪತ್ರೆ ನಿರ್ಮಾಣದ ಮೊದಲ ಹಂತದಲ್ಲಿ ಪಾವತಿಸಲು ಉದ್ದೇಶಿಸಲಾಗಿದೆ.

ಉಲ್ಲಾಳು ಗ್ರಾಮದಲ್ಲಿ 250 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗುವುದರಿಂದ ಬೆಂಗಳೂರು ನಗರದ ಪಶ್ಚಿಮ ಭಾಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರವು ಬೆಂಗಳೂರಿನ ಪಶ್ಚಿಮ ಭಾಗದಲ್ಲಿದೆ. ಈ ಭಾಗದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆ ಇಲ್ಲದೆ ವಿಕ್ಟೋರಿಯಾ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಂತೂ ಜನತೆ ಚಿಕಿತ್ಸೆಗಾಗಿ ಪರದಾಡುವುದನ್ನು ಕಂಡು ಈ ಭಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಮೂಲಕ ಆರೋಗ್ಯ ಸೇವೆ ಒದಗಿಸುವುದಾಗಿ ಜನತೆಗೆ ಭರವಸೆ ನೀಡಲಾಗಿತ್ತು.

ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರಿಗೆ ಅನಂತ ಧನ್ಯವಾದಗಳು. ಆದಷ್ಟು ಶೀಘ್ರದಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವಲ್ಲಿ ಶ್ರಮಿಸಲಾಗುವುದು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Multi Speciality Hospital | ಉ.ಕ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಪ್ರಯತ್ನ: ಕಾಗೇರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Lok Sabha Election: ಮೂರನೇ ಹಂತದಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಶೇ.85.45, ಗೋವಾದಲ್ಲಿ ಶೇ.76.06, ಉತ್ತರ ಪ್ರದೇಶ ಶೇ.57.55 ಹಾಗೂ ಬಿಹಾರದಲ್ಲಿ ಶೇ.59.15ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಕರ್ನಾಟಕದಲ್ಲಿ ಶೇ.71.84ರಷ್ಟು ಮತದಾನ ದಾಖಲಾಗಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು ಮೇ 7ರಂದು ನಡೆದಿದ್ದು, ಮತದಾನ ಪ್ರಮಾಣದ (Voter Turnout) ಕುರಿತು ಚುನಾವಣೆ ಆಯೋಗವು ನಿಖರ ಮಾಹಿತಿ ಒದಗಿಸಿದೆ. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದಲ್ಲಿ ಶೇ.71.84ರಷ್ಟು ಮತದಾನ ದಾಖಲಾಗಿದೆ ಎಂಬುದಾಗಿ ಚುನಾವಣೆ ಆಯೋಗವು (Election Commission) ಮಾಹಿತಿ ನೀಡಿದೆ.

ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ

ಮೂರನೇ ಹಂತದಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಶೇ.85.45, ಗೋವಾದಲ್ಲಿ ಶೇ.76.06, ಉತ್ತರ ಪ್ರದೇಶ ಶೇ.57.55 ಹಾಗೂ ಬಿಹಾರದಲ್ಲಿ ಶೇ.59.15ರಷ್ಟು ಮತದಾನ ದಾಖಲಾಗಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಪಶ್ಚಿಮ ಬಂಗಾಳ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿಯೇ ಮತದಾನ ನಡೆದಿತ್ತು.

ರಾಜ್ಯವಾರು ಮತದಾನ ಪ್ರಮಾಣ

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಮತದಾನ ಪ್ರಮಾಣ

ಮೇ 13ರಂದು 4ನೇ ಹಂತದ ಮತದಾನ

ಮೇ 13ರಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 10 ರಾಜ್ಯಗಳ 96 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Continue Reading

ಪ್ರಮುಖ ಸುದ್ದಿ

Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

Babar Azam: 296 ಟಿ 20 ಪಂದ್ಯಗಳಲ್ಲಿ 89 ಅರ್ಧಶತಕಗಳು ಮತ್ತು 11 ಶತಕಗಳ ಪ್ರಭಾವಶಾಲಿ ದಾಖಲೆಯೊಂದಿಗೆ, ಬಾಬರ್ 100 50+ ಸ್ಕೋರ್​ಗಳ ಮೈಲಿಗಲ್ಲನ್ನು ಸಾಧಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಐರ್ಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಬಾಬರ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 38 ಅರ್ಧಶತಕಗಳನ್ನು ಬಾರಿಸಿದ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು.

VISTARANEWS.COM


on

Babar Azam
Koo

ಡಬ್ಲಿನ್, : ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್​ (Babar Azam) ಹೊಸ ದಾಖಲೆ ಬರೆದಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ 20 ಐ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಬರ್ ಅರ್ಧಶತಕ ಬಾರಿಸಿ ವಿರಾಟ್ ಕೊಹ್ಲಿಯಿರುವ ಎಲೈಟ್ ಗುಂಪಿಗೆ ಸೇರಿದರು. ಪಾಕಿಸ್ತಾನದ ಬಲಗೈ ಬ್ಯಾಟರ್​ ಟಿ 20 ಕ್ರಿಕೆಟ್​ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್​ ಗಳಿಸಿದ ವಿಶ್ವದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (110), ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (110) ಮತ್ತು ವಿರಾಟ್ ಕೊಹ್ಲಿ (105) ಟಿ20 ಕ್ರಿಕೆಟ್​​ನಲ್ಲಿ 100ಕ್ಕೂ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದರು.

296 ಟಿ 20 ಪಂದ್ಯಗಳಲ್ಲಿ 89 ಅರ್ಧಶತಕಗಳು ಮತ್ತು 11 ಶತಕಗಳ ಪ್ರಭಾವಶಾಲಿ ದಾಖಲೆಯೊಂದಿಗೆ, ಬಾಬರ್ 100 50+ ಸ್ಕೋರ್​ಗಳ ಮೈಲಿಗಲ್ಲನ್ನು ಸಾಧಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಐರ್ಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಬಾಬರ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 38 ಅರ್ಧಶತಕಗಳನ್ನು ಬಾರಿಸಿದ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು.

ಇದನ್ನೂ ಓದಿ: IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

ಕೊಹ್ಲಿ ಟಿ 20 ಐ ಕ್ರಿಕೆಟಿಗನಾಗಿ ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಹೊಂದಿದ್ದಾರೆ. ಆದರೆ ಬಾಬರ್ ಇಲ್ಲಿಯವರೆಗೆ ಪಾಕಿಸ್ತಾನಕ್ಕಾಗಿ ಮೂರು ಶತಕಗಳು ಮತ್ತು 35 ಅರ್ಧಶತಕಗಳನ್ನು ಗಳಿಸಿದ್ದಾರೆ. ಇಬ್ಬರೂ ಆಟಗಾರರು ಟಿ 20 ಮಾದರಿಯಲ್ಲಿ ಗರಿಷ್ಠ 122 ರನ್​ ಬಾರಿಸಿದ್ದಾರೆ. ಅದರಲ್ಲಿ ಕೊಹ್ಲಿ ಅಜೇಯವಾಗಿ ಉಳಿದಿದ್ದಾರೆ.

ರನ್​ಗಳ ಅಗ್ರಸ್ಥಾನದಲ್ಲಿ ಕೊಹ್ಲಿ

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ಐ ಕ್ರಿಕೆಟ್​​ನಲ್ಲಿ 4037 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಬಾಬರ್ ಇಲ್ಲಿಯವರೆಗೆ 3880 ಟಿ 20 ಐ ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ (34), ಮೊಹಮ್ಮದ್ ರಿಜ್ವಾನ್ (27) ಮತ್ತು ಡೇವಿಡ್ ವಾರ್ನರ್ (27) ಟಿ 20 ಪಂದ್ಯಗಳಲ್ಲಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಇತರ ಆಟಗಾರರು.

ಪಂದ್ಯದಲ್ಲಿ ಏನಾಯಿತು?

ಐರ್ಲೆಂಡ್​ ಟೂರ್​ನಲ್ಲಿರುವ ಪಾಕಿಸ್ತಾನ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಎದುರಿಸಿದೆ. ಟಾಸ್​ ಸೋತ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 6 ವಿಕೆಟ್​​ಗೆ 183 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಐರ್ಲೆಂಡ್​ ಆ್ಯಂಡಿ ಬಲ್ಬಿರಿನ್ ಅವರ 77 ರನ್​ಗಳ ನೆರವಿನಿಂದ 1 ಎಸೆತ ಬಾಕಿ ಇರುವಾಗ ವಿಕೆಟ್​ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

IPL 2024: 2008 ರಲ್ಲಿ, ಐಪಿಎಲ್ ದಂತಕಥೆ ಬ್ರೆಂಡನ್ ಮೆಕಲಮ್ ಕೆಕೆಆರ್ ಪರ ಆರ್​ಸಿಬಿ ವಿರುದ್ಧ ಲೀಗ್​ನ ಮೊದಲ ಶತಕವನ್ನು ಗಳಿಸಿದ್ದರು. ಮೆಕಲಮ್ 158 ರನ್ ಗಳಿಸಿ ಶ್ರೀಮಂತ ಕ್ರಿಕೆಟ್ ಲೀಗ್​ನ ಯುಗವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇನ್ನೂ ಅನೇಕ ಆಟಗಾರರು ಶತಕಗಳನ್ನು ಗಳಿಸಿದ್ದಾರೆ. ಆದರೆ ಶುಬ್ಮನ್ ಗಿಲ್ ಐಪಿಎಲ್​ಗೆ ವಿಶೇಷ 100 ನೇ ಶತಕವಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 2024ರ (IPL 2024) ನಿಯಮ ಉಲ್ಲಂಘಿಸಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ನಾಯಕ ಶುಬ್ಮನ್ ಗಿಲ್​​ಗೆ (Shubhman Gill) ಸಿಎಸ್​ಕೆ (Chennai Super Kings) ವಿರುದ್ಧದ ಪಂದ್ಯದ ಶುಲ್ಕದಿಂದ 24 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಇದು ಗುಜರಾತ್ ಟೈಟಾನ್ಸ್ ಮತ್ತು ಶುಭ್ಮನ್ ಗಿಲ್ ಅವರ ನಿಧಾನಗತಿಯ ಓವರ್ ರೇಟ್​​ಗೆ ಸಂಬಂಧಿಸಿದ ಎರಡನೇ ಅಪರಾಧ. ಹೀಗಾಗಿ ಫ್ರಾಂಚೈಸಿ ನಾಯಕನಿಗೆ 24 ಲಕ್ಷ ದಂಡ ವಿಧಿಸಲಾಗಿದೆ. ಇದು ತಂಡದ ಎರಡನೇ ಅಪರಾಧವಾಗಿದೆ. ಹೀಗಾಗಿ ಅಹಮದಾಬಾದ್​ನಲ್ಲಿ ಆಡಿದ ಎಲ್ಲ ಆಟಗಾರರಿಗೂ ದಂಡ ಬಿದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2023 ಪಂದ್ಯ ಶುಬ್ಮನ್ ಗಿಲ್​ಗೆ ಡಬಲ್ ಸಂತೋಷವನ್ನು ನೀಡಿತು. ವೃದ್ಧಿಮಾನ್ ಸಹಾ ಅವರ ಕಳಪೆ ಫಾರ್ಮ್ ನಿಂದಾಗಿ ಅವರನ್ನು ಕೈಬಿಡಲಾಯಿತು. ಹೀಗಾಗಿ ಗಿಲ್​ ಸಾಯಿ ಸುದರ್ಶನ್ ಜತೆಗೆ ಇನಿಂಗ್ಸ್ ಆರಂಭಿಸಿದ್ದರು. ಇಬ್ಬರೂ ಸಿಎಸ್​ಕೆ ಬೌಲರ್​ಗಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಇಬ್ಬರೂ ಶತಕ ಬಾರಿಸಿದರು. ಗಿಲ್​ಗೆ ಇದು ಒಟ್ಟು ನಾಲ್ಕನೇ ಐಪಿಎಲ್ ಶತಕ ಹಾಗೂ ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 100 ನೇ ಶತಕವಾಗಿದೆ.

2008 ರಲ್ಲಿ, ಐಪಿಎಲ್ ದಂತಕಥೆ ಬ್ರೆಂಡನ್ ಮೆಕಲಮ್ ಕೆಕೆಆರ್ ಪರ ಆರ್​ಸಿಬಿ ವಿರುದ್ಧ ಲೀಗ್​ನ ಮೊದಲ ಶತಕವನ್ನು ಗಳಿಸಿದ್ದರು. ಮೆಕಲಮ್ 158 ರನ್ ಗಳಿಸಿ ಶ್ರೀಮಂತ ಕ್ರಿಕೆಟ್ ಲೀಗ್​ನ ಯುಗವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇನ್ನೂ ಅನೇಕ ಆಟಗಾರರು ಶತಕಗಳನ್ನು ಗಳಿಸಿದ್ದಾರೆ. ಆದರೆ ಶುಬ್ಮನ್ ಗಿಲ್ ಐಪಿಎಲ್​ಗೆ ವಿಶೇಷ 100 ನೇ ಶತಕವಾಗಿದೆ.

ಇದನ್ನೂ ಓದಿ: Rishabh Pant : 2024ರ ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

ಗಿಲ್​ ಇನ್ನಿಂಗ್ಸ್ 9 ಬೌಂಡರಿಗಳು ಮತ್ತು 6 ಸಿಕ್ಸರ್​ಗಳನ್ನು ಒಳಗೊಂಡಿತ್ತು. ಅವರ ಶತಕ ಪೂರ್ಣಗೊಂಡ ಸ್ವಲ್ಪ ಸಮಯದ ನಂತರ ಸಾಯಿ ಸುದರ್ಶನ್ ತಮ್ಮ ಮೊದಲ ಐಪಿಎಲ್ ಶತಕ ಪೂರ್ಣಗೊಳಿಸಿದರು. ಮೂಲತಃ ತಮಿಳುನಾಡಿನವರಾದ ಎಡಗೈ ಬ್ಯಾಟ್ಸ್ಮನ್, ಲೀಗ್​​ನ 101 ನೇ ಶತಕ ಬಾರಿಸಿದರು. ವಎಲ್ಲಕ್ಕಿಂತ ಮುಖ್ಯವಾಗಿ ಅವರು ಮೊದಲ ವಿಕೆಟ್​ಗೆ ಶುಭ್ಮನ್ ಗಿಲ್ ಅವರೊಂದಿಗೆ 210 ರನ್​ಗಳ ರೋಚಕ ಜೊತೆಯಾಟ ನೀಡಿದರು.

ಗಿಲ್ 55 ಎಸೆತಗಳಲ್ಲಿ 104 ರನ್ ಗಳಿಸಿ ಕ್ರೀಸ್ ತೊರೆದರೆ, ಸುದರ್ಶನ್ ಅದೇ ಓವರ್ನಲ್ಲಿ 51 ಎಸೆತಗಳಲ್ಲಿ 103 ರನ್ ಗಳಿಸಿದರು. ಅವರ ಪ್ರಯತ್ನಗಳ ಪರಿಣಾಮವಾಗಿ, ಜಿಟಿ 232 ರನ್​ಗಳ ರನ್​ ಶಿಖರ ದಾಖಲಿಸಿತು. ಹೀಗಾಗಿ ಪಂದ್ಯವನ್ನು ಸಿಎಸ್​ಕೆ 35 ರನ್​ಗಳಿಂದ ಕಳೆದುಕೊಂಡಿತು.

231 ರನ್ ಗಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗಿಲ್
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಶುಬ್ಮನ್ ಗಿಲ್, ತಮ್ಮ ತಂಡವು ಇನ್ನೂ 10-15 ರನ್​ಗಳ ಕೊರತೆ ಎದುರಿಸಿತು ಎಂದು ಹೇಳಿದ್ದಾರೆ. 231 ರನ್ ಗಳಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ ಅವರು ಒಟ್ಟು 250 ರನ್​ಗಳನ್ನು ಎದುರು ನೋಡುತ್ತಿದ್ದರು. ಆದರೆ ಡೆತ್ ಓವರ್​ಗಳಲ್ಲಿ ಸಿಎಸ್​ಕೆ ಪುನರಾಗಮನವು ಅವರನ್ನು 230 ರನ್​​ಗಳಿಗೆ ಸೀಮಿತಗೊಳಿಸಿತು ಎಂದು ಹೇಳಿದರು.

Continue Reading

ದೇಶ

ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್‌ ಕೇಜ್ರಿವಾಲ್‌ ಅವರು ಸುದ್ದಿಗೋಷ್ಠಿ ನಡೆಸಿದರು. ಇದೇ ವೇಳೆ ಅವರು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್‌ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ ಎಂದು ಆರೋಪಿಸಿದರು.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Delhi Excise Policy Case) ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. “ಒಂದು ದೇಶ, ಒಬ್ಬ ನಾಯಕ ಎಂಬುದು ನರೇಂದ್ರ ಮೋದಿ ಅವರ ಮಿಷನ್‌ ಆಗಿದೆ. ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಬದಲಿಸಲಿದ್ದಾರೆ” ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

“ನರೇಂದ್ರ ಮೋದಿ ಅವರಿಗೆ ಬೇರೆಯವರು ಬೆಳೆಯುವುದು ಇಷ್ಟವಿಲ್ಲ. ದೇಶಕ್ಕೆ ಒಬ್ಬನೇ ನಾಯಕ ಬೇಕು, ಅದು ಅವರೇ ಆಗಿರಬೇಕು. ಈಗಾಗಲೇ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್‌ ಸಿಂಗ್‌ ಚೌಹಾಣ್‌, ವಸುಂಧರಾ ರಾಜೆ, ಮನೋಹರ ಲಾಲ್‌ ಖಟ್ಟರ್‌, ರಮಣ್‌ ಸಿಂಗ್‌ ಸೇರಿ ಹಲವು ನಾಯಕರ ರಾಜಕೀಯ ಜೀವನವನ್ನು ಮೋದಿ ಕೊನೆಗೊಳಿಸಿದ್ದಾರೆ. ಶೀಘ್ರದಲ್ಲೇ, ಯೋಗಿ ಆದಿತ್ಯನಾಥ್‌ ಅವರ ರಾಜಕೀಯ ಜೀವನವನ್ನೂ ಇವರು ಕೊನೆಗಾಣಿಸಲಿದ್ದಾರೆ” ಎಂದು ದೂರಿದರು.

“ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್‌ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ. ಆದರೆ, ನಮ್ಮ ದೇಶದ ಇತಿಹಾಸವೇ ಬೇರೆ ಇದೆ. ದೇಶದಲ್ಲಿ ಇದುವರೆಗೆ ಯಾರೆಲ್ಲ ಸರ್ವಾಧಿಕಾರ ಮಾಡಲು ಹೊರಟಿದ್ದರೋ, ಅವರನ್ನೆಲ್ಲ ಜನ ಮನೆಗೆ ಕಳುಹಿಸಿದ್ದಾರೆ. ಈಗ ಮತ್ತೆ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದೇ ನನ್ನ ಮನವಿಯಾಗಿದೆ” ಎಂದರು.

“ನಾನು ಮಾತ್ರವಲ್ಲ ಪ್ರತಿಪಕ್ಷಗಳ ಇನ್ನೂ ಹಲವು ನಾಯಕರನ್ನು ಅವರು ಜೈಲಿಗೆ ಕಳುಹಿಸಲಿದ್ದಾರೆ. ಆ ಮೂಲಕ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲಿದ್ದಾರೆ. ಈಗಾಗಲೇ ನಮ್ಮ ಪಕ್ಷದ ಸಚಿವರು, ಜಾರ್ಖಂಡ್‌ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೊರೇನ್‌, ಟಿಎಂಸಿ ಸಚಿವರನ್ನು ಜೈಲಿಗೆ ಕಳುಹಿಸಲಾಗಿದೆ. ಹಾಗೇನಾದರೂ ಬಿಜೆಪಿಯೇ ಮತ್ತೆ ಗೆದ್ದರೆ, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿ ಇನ್ನೂ ಹಲವರು ಜೈಲು ಸೇರಲಿದ್ದಾರೆ. ಕೆಲವರ ರಾಜಕೀಯ ಜೀವನ ಅಂತ್ಯಗೊಳಿಸಲು ತಮ್ಮದೇ ಪಕ್ಷದ ನಾಯಕರನ್ನು ಕೂಡ ಜೈಲಿಗೆ ಕಳುಹಿಸಲಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: Arvind Kejriwal: ಜೈಲಿನಿಂದ ಬಂದ ಕೇಜ್ರಿವಾಲ್‌ಗೆ ಆರತಿ ಬೆಳಗಿ, ಹೂ ಹಾರ ಹಾಕಿ ಸ್ವಾಗತಿಸಿದ ತಾಯಿ! ವಿಡಿಯೊ ನೋಡಿ

Continue Reading
Advertisement
Sleeping tips
ಆರೋಗ್ಯ5 mins ago

Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

Lok Sabha Election
ದೇಶ5 mins ago

Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Babar Azam
ಪ್ರಮುಖ ಸುದ್ದಿ22 mins ago

Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

Money Guide
ಮನಿ-ಗೈಡ್23 mins ago

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Karnataka rain
ಮಳೆ35 mins ago

Karnataka Rain: ಶನಿವಾರ ಸಂಜೆ ಅಬ್ಬರಿಸಿದ ಗಾಳಿ ಮಳೆಗೆ ತೊಯ್ದು ತೊಪ್ಪೆಯಾದ ಮಂದಿ; ರಸ್ತೆಗೆ ಬಿದ್ದ ಮರಗಳು

IPL 2024
ಕ್ರೀಡೆ55 mins ago

IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

Arvind Kejriwal
ದೇಶ1 hour ago

ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Hair Color Fashion
ಫೋಟೊ1 hour ago

Hair Color Fashion: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

Akshaya Tritiya
ಬೆಂಗಳೂರು1 hour ago

Akshaya Tritiya: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಬಾಲ ರಾಮನ ಬೆಳ್ಳಿ ವಿಗ್ರಹದ ಪೂಜೆ ಸಂಪನ್ನ

Rishabh Pant
ಕ್ರೀಡೆ1 hour ago

Rishabh Pant : 2024ರ ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru News
ಬೆಂಗಳೂರು3 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ13 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

ಟ್ರೆಂಡಿಂಗ್‌