Police Corruption | ಬೆಂಗಳೂರು ಪೋಲೀಸ್‌ ಸಿಬ್ಬಂದಿಯಿಂದ ಮತ್ತೆ ಸುಲಿಗೆ? ಮಾನವ ಹಕ್ಕು ಆಯೋಗದಿಂದ ತನಿಖೆ - Vistara News

ಕ್ರೈಂ

Police Corruption | ಬೆಂಗಳೂರು ಪೋಲೀಸ್‌ ಸಿಬ್ಬಂದಿಯಿಂದ ಮತ್ತೆ ಸುಲಿಗೆ? ಮಾನವ ಹಕ್ಕು ಆಯೋಗದಿಂದ ತನಿಖೆ

ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ಕೆಲ ಪೊಲೀಸರ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೂ, ಪೊಲೀಸ್ ಸಿಬ್ಬಂದಿ ವಿರುದ್ಧ ಸುಲಿಗೆ ಆರೋಪ ಮುಂದುವರಿದಿದೆ.

VISTARANEWS.COM


on

police extortion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ಕೆಲ ಪೊಲೀಸರ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೂ, ಪೊಲೀಸ್ ಸಿಬ್ಬಂದಿ ವಿರುದ್ಧ ಸುಲಿಗೆ ಆರೋಪ ಮುಂದುವರಿದಿದೆ.

ಯುವಕನೊಬ್ಬನನ್ನು ಸ್ಟೇಷನ್‌ನಲ್ಲಿ ಕೂಡಿಹಾಕಿ 40 ಸಾವಿರ ರೂ. ಹಣ ವಸೂಲಿ ಮಾಡಿದ ಆರೋಪವನು ಬೊಮ್ಮನಹಳ್ಳಿ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಲಕ್ಷ್ಮಣ್ ಕೆ. ಪವಾರ್ ಎಂಬವರ ಮೇಲೆ ಹೊರಿಸಲಾಗಿದೆ. ಕಳೆದ ಜುಲೈ 29ರಂದು ಈಜಿಪುರ ಸಿಗ್ನಲ್ ಬಳಿ ನಿಂತಿದ್ದ ಆಶೀಶ್ ಅವರನ್ನು ಕರೆದೊಯ್ದಿದ್ದ ಹೆಡ್ ಕಾನ್‌ಸ್ಟೇಬಲ್, ಎರಡು ಗಂಟೆಗಳ ಕಾಲ ಲಾಕಪ್‌ನಲ್ಲಿ ಕೂಡಿ ಹಾಕಿ ಡ್ರಗ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ 40 ಸಾವಿರ ಹಣ ಪಡೆದಿದ್ದರು. ಲಕ್ಷ್ಮಣ್‌ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆಸಿದ್ದ ಕೃತ್ಯ ಇದಾಗಿದೆ.

ಇದನ್ನೂ ಓದಿ | Hoysala Police Corruption | ಮಧ್ಯರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ದಂಪತಿಯನ್ನು ತಡೆದು ಹಣ ಸುಲಿಗೆ, ಇಬ್ಬರು ಹೊಯ್ಸಳ ಪೊಲೀಸರು ಮನೆಗೆ!

ಹಣ ಕೊಟ್ಟು ಹೊರಬಂದಿದ್ದ ಆಶೀಶ್ ಪೊಲೀಸರ ದೌರ್ಜನ್ಯದ ವಿರುದ್ಧ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಆಯೋಗಕ್ಕೆ ಲಕ್ಷ್ಮಣ್ ಕರ್ತವ್ಯಲೋಪ ಎಸಗಿರುವುದು ಖಚಿತವಾಗಿದೆ. ಆಶೀಶ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಮೊಬೈಲ್ ಸಿಡಿಆರ್ ಮಾಹಿತಿ ಪಡೆದಾಗ, ಆ ವೇಳೆ ಆಶೀಶ್ ಹಾಗೂ ಲಕ್ಷ್ಮಣ್ ಬಂಡೇಪಾಳ್ಯ ಪೊಲೀಸ್ ಠಾಣೆ ಮೊದಲ ಮಹಡಿಯಲ್ಲಿ ಒಟ್ಟಿಗೆ ಇದ್ದ ಮಾಹಿತಿ ದೊರೆತಿದೆ. ಆದರೆ ಆಶೀಶ್‌ನನ್ನು ಠಾಣೆಗೆ ಕರೆತಂದಿರಲಿಲ್ಲ, ಅಲ್ಲೇ ವಿಚಾರಣೆ ಮಾಡಿ ಬಿಟ್ಟಿದ್ದಾಗಿ ಲಕ್ಷ್ಮಣ್‌ ಹೇಳಿದ್ದರು.

ಆಶಿಶ್‌ ಹೇಳಿದ ಠಾಣೆಯ ಸ್ಕೆಚ್ ಹಾಕಿಸಿದಾಗ, ಅದು ಬಂಡೇಪಾಳ್ಯ ಠಾಣೆ ಎಂದು ದೃಢಪಟ್ಟಿದೆ. ಪೊಲೀಸರು ಪಡೆದ ಹಣ ಎಟಿಎಂನಿಂದ ಡ್ರಾ ಆಗಿದ್ದುದಕ್ಕೆ ಎಟಿಎಂ ಸ್ಲಿಪ್ ದಾಖಲೆಯಿದೆ. ಈ ಎಲ್ಲಾ ಆಧಾರದ ಮೇಲೆ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಣ್ ಹಣ ಪಡೆದಿರುವುದು ಸಾಬೀತಾಗಿದ್ದು, ಸೂಕ್ತ ಕ್ರಮಕ್ಕೆ ಆಯೋಗದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಜನವರಿ 5ರೊಳಗೆ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ | Theft case | ಏಳು ಮಂದಿ ಖತರ್ನಾಕ್‌ ಕಳ್ಳರು, ಸುಲಿಗೆಕೋರರ ಬಂಧನ: 2೦ ಲಕ್ಷ ಮೌಲ್ಯದ ಸೊತ್ತು ವಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

PSI Death: ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

VISTARANEWS.COM


on

psi death yadgir
Koo

ಯಾದಗಿರಿ: ಯಾದಗಿರಿ (Yadgir news) ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ (Heart Attack) ನಿನ್ನೆ (PSI Death) ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್‌ಗೆ ದೂಡಿದೆ. ಪರಶುರಾಮ್‌ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

ಈ ಕುರಿತು ಪರಶುರಾಮ್‌ ಅವರ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೂ ಪಿಎಸ್ಐ ಪರಶುರಾಮ್‌ ಫೋನ್‌ನಲ್ಲಿ ಮಾತಾಡಿದ್ದರು ಎಂದು ಪತ್ನಿ ಹೇಳಿದ್ದಾರೆ. ಸ್ಥಳಕ್ಕೆ ಶಾಸಕ ಬರುವಂತೆ ಪಿಎಸ್ಐ ಪತ್ನಿ ಪಟ್ಟು ಹಿಡಿದಿದ್ದು, ಅವರ ಗೋಳಾಟ ಕರುಳು ಚುರ್ ಎನ್ನುವಂತಿದೆ. ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು, ಶಾಸಕ ಎಲ್ಲಿ ಕರಿರಿ ಎಂದು ಪತ್ನಿ ಗೋಳಾಡಿದ್ದಾರೆ. ಮಧ್ಯರಾತ್ರಿಯೂ ನನ್ನ ಗಂಡ ಎಸ್ಪಿ‌ ಮೇಡಂ ಪೋನ್ ಹಚ್ಚಿದರು ಅಂತ ಓಡುತ್ತಿದ್ದರು. ಈ ಸಾವಿಗೆ ನನ್ನ ಗಂಡ ಏನು ಅನ್ಯಾಯ ಮಾಡಿದ್ದರು. ಎಂಎಲ್ಎ ಬರುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಯಾದಗಿರಿ ಎಸ್ಪಿ ಜಿ.‌ಸಂಗೀತಾ ಎದುರು ಪತ್ನಿ ಶ್ವೇತಾ ಕಣ್ಣೀರಿಟ್ಟಿದ್ದಾರೆ.

ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ದೂರು

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ವಿರುದ್ಧ ದೂರು ಪಿಎಸ್ಐ ಪತ್ನಿ ಶ್ವೇತಾ ಯಾದಗಿರಿ ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಪೋಸ್ಟಿಂಗ್‌ಗಾಗಿ ಪದೇ ಪದೆ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ದಾಖಲಿಸಲಾಗಿದೆ. ಶಾಸಕ, ಅವರ ಪುತ್ರ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಬಗ್ಗೆ ಪತ್ನಿಗೆ ಪರಶುರಾಮ ಹೇಳಿದ್ದರು. 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜಾತಿ ನಿಂದನೆಯನ್ನೂ ಮಾಡಿದ್ದರು. ಶಾಸಕರ ಕಿರುಕುಳದಿಂದ ಪರಶುರಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ದೂರಿದ್ದಾರೆ.

ಶಾಸಕ, ಆತನ ಪುತ್ರನ‌ ಮೇಲೆ ಕೇಸ್ ದಾಖಲಿಸಿದ ಬಳಿಕ‌ ಮರಣೋತ್ತರ ಪರೀಕ್ಷೆಗೆ ಪತ್ನಿ ಒಪ್ಪಿಗೆ ಸೂಚಿಸಿದ್ದು, ಯಾದಗಿರಿ ಯಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಪರಶುರಾಮ ಶವ ರವಾನೆಯಾಗಿದೆ.

ಪರಶುರಾಮ ಮಾವ ವೆಂಕಟಸ್ವಾಮಿ ಕೂಡ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯಾದಗಿರಿ ಎಂಎಲ್‌ಗೆ ದುಡ್ಡಿನ ಆಸೆ ವಿಪರೀತವಾಗಿದೆ. ಅವಧಿ ಪೂರ್ವ ವರ್ಗಾವಣೆಯಿಂದ ಪರಶುರಾಮ ನೊಂದಿದ್ದರು. 7 ತಿಂಗಳ ಅವಧಿಯಲ್ಲಿ ಎಂಎಲ್‌ಎ ಬೇರೆಯವರನ್ನು ಪಿಎಸ್‌ಐ ಆಗಿ ಹಾಕಿಸಿದ್ದಾರೆ. ವರ್ಗಾವಣೆ ಆಗುತ್ತಿರುವುದು ಹೋಂ ಮಿನಿಸ್ಟರ್ ಹಾಗೂ ಸಿಎಂ ಗಮನಕ್ಕೆ ಬರುತ್ತಿಲ್ಲವೇ? ದಕ್ಷ ಅಧಿಕಾರಿಗಳು ಸಾಯುವುದಕ್ಕೆ ಇರುವುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಂಘಟನೆಗಳಿಂದ ಪ್ರತಿಭಟನೆ

ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಮೂಡುತ್ತಿದ್ದು, ಯಾದಗಿರಿಯ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಆಂಬ್ಯುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ ಮಾಡುತ್ತಿದ್ದಾಗ ಆಂಬ್ಯುಲೆನ್ಸ್‌ ಅಡ್ಡಗಟ್ಟಿ ಕುಳಿತ ಸಂಘಟನೆಗಳ ಕಾರ್ಯಕರ್ತರು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Road Accident: ಆಡಿ ಕಾರ್‌ ಮರಕ್ಕೆ ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ದುರ್ಮರಣ; ಐಷಾರಾಮಿ ಕಾರಿನಲ್ಲಿ ಏರ್‌ಬ್ಯಾಗ್‌ ಇರಲೇ ಇಲ್ಲ!

Continue Reading

ಕೋಲಾರ

Road Accident: ಆಡಿ ಕಾರ್‌ ಮರಕ್ಕೆ ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ದುರ್ಮರಣ; ಐಷಾರಾಮಿ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಸಹ ಚಿಂದಿ!

Road Accident: ಕೋಲಾರ ‌ಹೊರವಲಯದ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರ ಬಳಿ ಘಟನೆ ನಡೆದಿದೆ. ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ.

VISTARANEWS.COM


on

audi car road accident kolar
Koo

ಕೋಲಾರ: ಕೋಲಾರದ (Kolar news) ಹೊರವಲಯದಲ್ಲಿ ಭೀಕರ ದುರಂತ ಸಂಭವಿಸಿದೆ. ಆಡಿ ಕಾರ್ ಮರಕ್ಕೆ ಡಿಕ್ಕಿಯಾಗಿ (Audi Car Accident) ನಡೆದ ಭೀಕರ ಅಪಘಾತದಲ್ಲಿ (Road Accident) ಮೂವರು ವಿದ್ಯಾರ್ಥಿಗಳು (Students Death) ಸ್ಥಳದಲ್ಲೇ ಮೃತಪಟ್ಟಿದ್ದು, ಇತ್ತೊಬ್ಬ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಆಗಿದ್ದಾನೆ.

ಕೋಲಾರ ‌ಹೊರವಲಯದ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರ ಬಳಿ ಘಟನೆ ನಡೆದಿದೆ. ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ.

ಬಂಗಾರಪೇಟೆ ಮೂಲದ ಸಾಯಿ ಗಗನ್ ಬಚಾವ್ ಆಗಿದ್ದಾನೆ. ಅಪಘಾತದ ರಭಸಕ್ಕೆ ಆಡಿ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಚಾವಾದ ಸಾಯಿಗಗನ್‌ ಮನೆಗೆ ಸ್ನೇಹಿತರು ಬಂದಿದ್ದರು. ಮನೆಯಿಂದ ಕೋಲಾರಕ್ಕೆ ಮರಳುವಾಗ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಅತಿ ವೇಗ ಕಾರಣ ಎನ್ನಲಾಗಿದೆ. ಮದ್ಯ ಸೇವನೆಯ ಸಾಧ್ಯತೆಯನ್ನು ಪೋಸ್ಟ್‌ ಮಾರ್ಟಂ ಮೂಲಕ ನಿರ್ಣಯಿಸಲಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಅಪಘಾತದ ಭೀಕರತೆಗೆ ಕಾರು ಚಿಂದಿಚಿಂದಿಯಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಕೂಡ ಚಿಂದಿಚಿಂದಿಯಾಗಿವೆ. ಸುಮಾರು 50 ಲಕ್ಷ ರೂಪಾಯಿ ಬೆಲೆಬಾಳುವ ಕಾರಿನಲ್ಲಿದ್ದ ಅಪಘಾತ ಸುರಕ್ಷತಾ ಕ್ರಮಗಳು ಕೆಲಸ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಬಸ್ಸಿಗೆ ಸಿಲುಕಿ ವಿದ್ಯಾರ್ಥಿ ಮೃತ್ಯು

ಕೋಲಾರ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ (Road Accidentಸಂಭವಿಸಿದೆ. ಜವರಾಯನ ಅಟ್ಟಹಾಸಕ್ಕೆ ವಿದ್ಯಾರ್ಥಿ ಮಸಣ ಸೇರಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ತಮಟಂಪಲ್ಲಿ ಗ್ರಾಮದ ಭಾರ್ಗವ್ ರೆಡ್ಡಿ (18) ಮೃತ ದುರ್ದೈವಿ. ಭಾರ್ಗವ್‌ ಚಿಂತಾಮಣಿ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಬಸ್ ಮಿಸ್ ಆದ ಕಾರಣ ದ್ವಿಚಕ್ರ ವಾಹನದಲ್ಲಿ ಅಡ್ಡಗಲ್ ಗ್ರಾಮಕ್ಕೆ ಬರುತ್ತಿದ್ದ. ಈ ವೇಳೆ ಬಸ್‌ವೊಂದು ಬೈಕ್‌ಗೆ ಗುದ್ದಿದೆ. ಪರಿಣಾಮ ಕೆಳಗೆ ಬಿದ್ದ ಭಾರ್ಗವ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಮಗನ ಮೃತ ದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಹಿಟ್‌ ಆ್ಯಂಡ್‌ ರನ್‌ ಮಾಡಿ ಎಸ್ಕೇಪ್‌ ಆದ ಬೈಕ್‌ ಸವಾರ

ಬೆಂಗಳೂರು: ಮಕ್ಕಳನ್ನು ರಸ್ತೆಯಲ್ಲಿ ಆಟವಾಡಲು ಬಿಡುವ ಪೋಷಕರೇ ಎಚ್ಚರವಾಗಿರಿ. ಯಾಕೆಂದರೆ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಿಟ್‌ ಆ್ಯಂಡ್‌ ರನ್‌ ಮಾಡಿ ಎಸ್ಕೇಪ್‌ ಆಗಿದ್ದಾನೆ. ಸೈಕಲ್ ತುಳಿಯುತ್ತಾ ಆಟವಾಡುತ್ತಿದ್ದ ಬಾಲಕನಿಗೆ ಗುದ್ದಿ ಕಾಲ್ಕಿತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಈ ಅಪಘಾತ ನಡೆದಿದೆ. ನಂಬರ್ ಪ್ಲೇಟ್‌ ಇಲ್ಲದ ಆರ್‌ಎಕ್ಸ್ ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯ ಮುಂಭಾಗದ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದ ಬಾಲಕನಿಗೆ ವೇಗವಾಗಿ ಬಂದು ಗುದ್ದಿದ್ದಾನೆ.

ಬಾಲಕ ರಸ್ತೆಯಲ್ಲೇ ಬಿದ್ದು ಅಳುತ್ತಿದ್ದರು ಬೈಕ್‌ ಸವಾರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕಳೆದ ಆಗಸ್ಟ್ 1ರ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಗಾಗಿ ದಕ್ಷಿಣ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Love case : ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

Continue Reading

ಕರ್ನಾಟಕ

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ; ದರ್ಶನ್‌ ಗ್ಯಾಂಗ್ ವಿರುದ್ಧ ದೂರು

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಷ್ಯಗಳು ಹೊರಬರುತ್ತಿವೆ. ಇದರ ನಡುವೆ ಜೈಲಿನಲ್ಲಿದ್ದುಕೊಂಡೇ ದರ್ಶನ್ ಅಂಡ್ ಗ್ಯಾಂಗ್ ಬೆದರಿಕೆ ಹಾಕಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಾಕ್ಷಿದಾರ ದೂರು ದಾಖಲಿಸಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿ ಮಾಡಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಚಾರ್ಜ್ ಶೀಟ್ ಸಲ್ಲಿಕೆಗೆ ಪ್ರಮುಖ ಸಾಕ್ಷಿದಾರ ಪೊಲೀಸರಿಗೆ ಸಿಕ್ಕಂತಾಗಿದೆ. ಆದರೆ, ಜೈಲಿನಿಂದಲೇ ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ದರ್ಶನ್‌ ಗ್ಯಾಂಗ್‌ (Actor Darshan) ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೈಲಿನಲ್ಲಿದ್ದುಕೊಂಡೇ ದರ್ಶನ್ ಅಂಡ್ ಗ್ಯಾಂಗ್ ಬೆದರಿಕೆ ಹಾಕಿರೋದು ಬೆಳಕಿಗೆ ಬಂದಿದೆ. ಕೊಲೆ‌ ಪ್ರಕರಣದ‌ ಪ್ರಮುಖ ಸಾಕ್ಷಿಯಾಗಿರೋ ವ್ಯಕ್ತಿಗೆ ಸಾಕ್ಷಿ ನುಡಿಯದಂತೆ ಡಿ ಗ್ಯಾಂಗ್ ಬೆದರಿಕೆ ಹಾಕಿದೆ ಎನ್ನಲಾಗಿದೆ. ಸದ್ಯ ಬೆದರಿಕೆ ಸಂಬಂಧ ಸಾಕ್ಷಿದಾರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರೆಂಟ್ ಶಾಕ್ ಕೊಡಲು ಆನ್‌ಲೈನ್‌ನಲ್ಲಿ ಮೆಗ್ಗರ್‌ ಡಿವೈಸ್‌ ಖರೀದಿ

ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಯಲ್ಲಿ‌ ಪ್ರಮುಖವಾಗಿ ಬಳಸಿರೋ‌ ಸಾಧನ ಮೆಗ್ಗರ್ ಬಗ್ಗೆ ಮಹತ್ವದ ಮಾಹಿತಿ ತಿಳಿಸದುಬಂದಿದೆ. ಕರೆಂಟ್ ಶಾಕ್ ನೀಡಲೆಂದೇ ಮೆಗ್ಗರ್ ಅನ್ನು ಖರೀದಿ‌ ಮಾಡಿರೋದು ತನಿಖೆ ವೇಳೆ ಬೆಳಕಿಗೆ. ಪ್ರಕರಣದ ಆರೋಪಿ ಧನರಾಜ್‌ ಅಮೆಜಾನ್‌ನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ್ದು, ಅದರ ಬೆಲೆ 699 ರೂಪಾಯಿಗಳಾಗಿದೆ. ಇನ್ನು ಬುಕ್ ಮಾಡಿದ ಮೆಗ್ಗರ್ ಅನ್ನು ಸ್ವೀಕರಿಸುವ ವೇಳೆ ಸ್ಕ್ಯಾನರ್ ಮೂಲಕ ಹಣ ಪೇ ಮಾಡಲು ಧನರಾಜ್ ಯತ್ನಿಸಿದ್ದ. ಆದರೆ ಅಮೆಜಾನ್ ಪೇ ಕೋಡ್‌ ಸ್ಕ್ಯಾನ್ ಮಾಡಿದ ವೇಳೆ ಹಣ ಸೆಂಡ್ ಆಗದ ಕಾರಣ ಆನ್ ಲೈನ್ ಮೂಲಕ ಹಣವನ್ನು ಕಳುಹಿಸಿದ್ದ ಧನರಾಜ್. ಆ ಹಣವನ್ನು ಡೆಲಿವರಿ ಬಾಯ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದು ಕಂಪನಿಗೆ ನೀಡಿದ್ದ. ಸದ್ಯ ಆ ಮಾಹಿತಿ ಕಲೆ ಹಾಕಿರೋ ಪೊಲೀಸರು ಮೆಗ್ಗರ್ ಡಿವೈಸ್ ಧನರಾಜ್‌ಗೆ ತಂದುಕೊಟ್ಟ ಡೆಲಿವರಿ ಬಾಯ್‌ನ ವಿಚಾರಣೆ ಮಾಡಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಅಲ್ಲದೇ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಡೇಟಾ ರಿಟ್ರೀವ್ ಆಗಿದೆ. ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್ ಡೇಟಾವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ರಿಟ್ರೀವ್ ಆಗಿದ್ದು, ಪೆನ್ ಡ್ರೈವ್‌ನಲ್ಲಿ ಡೇಟಾ ಸಂಗ್ರಹಿಸಿ ಪಂಚನಾಮೆ ಮಾಡಲಾಗಿದೆ. ಈ ಮಧ್ಯೆ ಮೃತ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳ ಪರಿಶೀಲನೆ ಮಾಡಲಾಗಿದ್ದು, ಇದು ಕೂಡ ಪ್ರಮುಖ ಸಾಕ್ಷ್ಯವಾಗಿದ್ದು, ರೇಣುಕಾಸ್ವಾಮಿ ಮಾಡಿದ್ದ ಚಾಟಿಂಗ್‌ನಿಂದಲೇ ಕೊಲೆಗೆ ಪ್ರಮುಖ ಕಾರಣ ಎಂಬುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ | Actor Darshan: ನಟ ದರ್ಶನ್‌ಗೆ ಆ. 20ರವರೆಗೆ ಜೈಲೂಟವೇ ಫಿಕ್ಸ್‌; ವಿಚಾರಣೆ ಮುಂದೂಡಿದ ಹೈಕೋರ್ಟ್

ದರ್ಶನ್​ & ಗ್ಯಾಂಗ್​ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ ಮತ್ತು ಗ್ಯಾಂಗ್‌ಗೆ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ನಟ ದರ್ಶನ್‌ ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಆ.20ಕ್ಕೆ ಮುಂದೂಡಿದ ಬೆನ್ನಲ್ಲೇ ಗುರುವಾರ ನ್ಯಾಯಾಂಗ ಬಂಧನವನ್ನು ಕೋರ್ಟ್‌ ವಿಸ್ತರಿಸಿತ್ತು.

ಆಗಸ್ಟ್​ 1ರಂದು ಕೇಸ್​ನ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದ್ದರು. ಪವಿತ್ರಾ ಗೌಡ, ದರ್ಶನ್​ ಸೇರಿದಂತೆ ಪರಪ್ಪನ ಆಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Continue Reading

ಕ್ರೈಂ

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

Dog Attack: ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ವೃದ್ಧೆ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ. ಕರುಣಾಜನಕವಾದ ಈ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

VISTARANEWS.COM


on

By

Dog attack
Koo

ದೀರ್ಘಕಾಲದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಮೇಲೆ ರಾತ್ರಿ ಬೀದಿ ನಾಯಿಗಳು (street dog) ದಾಳಿ (Dog Attack) ನಡೆಸಿ ಕೊಂದು ಹಾಕಿರುವ ಘಟನೆ ತೆಲಂಗಾಣದ (telangana) ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಕರೀಂನಗರದಲ್ಲಿ ನಡೆದಿದೆ. 82 ವರ್ಷದ ಪಿಟ್ಲಾ ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಗುಡಿಸಿಲಿನಲ್ಲಿ ಮಲಗಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದವು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ರಾಜ್ಯಲಕ್ಷ್ಮಿ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ.

ನಾಯಿಗಳು ಅವರನ್ನು ಕಚ್ಚಿ ಕೊಂದು ಮುಖ ಮತ್ತು ದೇಹದ ಕೆಲವು ಭಾಗಗಳನ್ನು ತಿಂದು ಹಾಕಿವೆ. ಸಮೀಪದಲ್ಲೇ ವಾಸಿಸುವ ಮಹಿಳೆಯ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ಆಕೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಮನೆ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಯಾವುದೇ ಬಾಗಿಲು ಇಲ್ಲದ ಕಾರಣ ಗಾಢ ನಿದ್ದೆಯಲ್ಲಿದ್ದ ಅವರ ಮೇಲೆ ನಾಯಿಗಳು ಸುಲಭವಾಗಿ ದಾಳಿ ನಡೆಸಿವೆ. ನಾಯಿಗಳು ಅವರ ತಲೆ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿವೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯ ಬಳಿ ನಾಯಿಯು ರಸ್ತೆಯಲ್ಲಿ ಮಾಂಸವನ್ನು ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಕೋಪಗೊಂಡು ಬೀದಿ ನಾಯಿಯನ್ನು ಕೊಂದು ಹಾಕಿದ್ದರು.

ಇದನ್ನೂ ಓದಿ: Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದು, ಇಬ್ಬರು ಪುತ್ರರಿದ್ದರೂ ತಾಯಿಯನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದರು ಎಂದು ಮುಸ್ತಾಬಾದ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪುತ್ರನ ದೂರಿನ ಮೇರೆಗೆ ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement
Neeraj Chopra
ಕ್ರೀಡೆ56 seconds ago

Neeraj Chopra: ನೀರಜ್​ ಚಿನ್ನ ಗೆದ್ದರೆ ನೀವು ಕೂಡ ಉಚಿತ ವಿದೇಶ ಪ್ರವಾಸ ಕೈಗೊಳ್ಳಬಹುದು; ಇದು ಹೇಗೆ ಸಾಧ್ಯ?

World Bank
ವಾಣಿಜ್ಯ7 mins ago

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

Rakshit Shetty Richard Anthony Produce By Hombale
ಅವಿಭಾಗೀಕೃತ11 mins ago

US Military: ಇರಾನ್, ಹಮಾಸ್, ಹಿಜ್ಬುಲ್ಲಾ ದಾಳಿಯಿಂದ ಇಸ್ರೇಲ್ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಅಮೆರಿಕ

Jr NTR -Janhvi Kapoor Devara Song take centre stage
ಟಾಲಿವುಡ್30 mins ago

Jr NTR -Janhvi Kapoor: ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜ್ಯೂನಿಯರ್‌ ಎನ್‌ಟಿಆರ್- ಜಾಹ್ನವಿ; ಆ.5ಕ್ಕೆ ಚಿತ್ರತಂಡದಿಂದ ಗಿಫ್ಟ್‌!​

IND vs SL
ಕ್ರೀಡೆ31 mins ago

IND vs SL: ಭಾರತ-ಲಂಕಾ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ?; ಇಲ್ಲಿದೆ ಉತ್ತರ

UGCET 2024
ಪ್ರಮುಖ ಸುದ್ದಿ51 mins ago

UGCET 2024: ಆ.7ರಂದು ಮಧ್ಯಾಹ್ನ 2 ಗಂಟೆಗೆ ಸಿಇಟಿ ಅಣಕು ಸೀಟು ಹಂಚಿಕೆ ಪ್ರಕಟ; ಆಪ್ಶನ್ ಎಂಟ್ರಿಗೆ ನಾಳೆ ಲಾಸ್ಟ್ ಡೇಟ್

Lion & Lioness Name
ದೇಶ60 mins ago

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Kamala Harris
ವಿದೇಶ1 hour ago

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

Kannada New Movie Tenant sonu gowda First look out
ಸ್ಯಾಂಡಲ್ ವುಡ್1 hour ago

Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

Rohit Sharma
ಕ್ರೀಡೆ1 hour ago

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌