ಗೊಂದಲದಲ್ಲಿ ಜನೋತ್ಸವ: 3ನೇ ಬಾರಿ ಮುಂದೂಡಿಕೆ ಸಾಧ್ಯತೆ ಕಡಿಮೆ, ಕತ್ತಿ ಸಾವಿನಿಂದಾಗಿ ಬೇಡ ಅಂತಿರುವ ಶಾಸಕರು - Vistara News

ಉಮೇಶ್ ಕತ್ತಿ

ಗೊಂದಲದಲ್ಲಿ ಜನೋತ್ಸವ: 3ನೇ ಬಾರಿ ಮುಂದೂಡಿಕೆ ಸಾಧ್ಯತೆ ಕಡಿಮೆ, ಕತ್ತಿ ಸಾವಿನಿಂದಾಗಿ ಬೇಡ ಅಂತಿರುವ ಶಾಸಕರು

ಉಮೇಶ್‌ ಕತ್ತಿ ಅವರ ಸಾವಿನ ಹಿನ್ನೆಲೆಯಲ್ಲಿ ಸೆ. 8ರಂದು ಆಯೋಜಿಸಲಾಗಿರುವ ಬಿಜೆಪಿ ಜನೋತ್ಸವದ ಮೇಲೆ ಮತ್ತೆ ಕರಿನೆರಳು ಬಿದ್ದಿದೆ. ಆದರೆ, ಈ ಬಾರಿ ನಡೆದೇ ನಡೆಯುತ್ತದೆ ಎಂಬ ಅಭಿಪ್ರಾಯ ಹೆಚ್ಚಾಗಿದೆ.

VISTARANEWS.COM


on

BJP and Gujarat Election
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಜೆಪಿ ಸರಕಾರದ ಮೂರು ವರ್ಷಗಳ ಸಾಧನೆ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿರುವ ಸಂದರ್ಭದಲ್ಲಿ ಆಯೋಜಿಸಲಾಗಿರುವ ಜನೋತ್ಸವ ಕಾರ್ಯಕ್ರಮ ಬುಧವಾರ ನಡೆಯುವುದೇ ಇಲ್ಲವೇ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ಪ್ರಮುಖರು ಜನೋತ್ಸವ ನಡೆಸೋಣ ಎಂಬ ಅಭಿಪ್ರಾಯ ಹೊಂದಿದ್ದರೆ, ಬಿಜೆಪಿ ಶಾಸಕರಿಂದ ಇದಕ್ಕೆ ಆಕ್ಷೇಪ ಹೊಂದಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್‌ ೮ರಂದು ಈ ಕಾರ್ಯಕ್ರಮ ಆಯೋಜನೆಯಾಗಿದೆ. ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಜನೋತ್ಸವವನ್ನು ಮುಂದೂಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿರುವ ನಡುವೆಯೇ ಉನ್ನತ ಮೂಲಗಳು ಈ ಸಾಧ್ಯತೆಯನ್ನು ಅಲ್ಲಗಳೆದಿವೆ.

ಮೂಲತಃ ಜುಲೈ ೨೮ಕ್ಕೆ ನಿಗದಿಯಾಗಿದ್ದ ಜನೋತ್ಸವ ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದೆ. ಜುಲೈ ೨೬ರಂದು ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಕೊಲೆ ನಡೆದ ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ಸರಕಾರ ಮತ್ತು ನಾಯಕರ ವಿರುದ್ಧ ಕಾರ್ಯಕರ್ತರೇ ತಿರುಗಿಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಅವರು ಜುಲೈ ೨೭ರ ಮಧ್ಯರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಸಮಾವೇಶ ಮುಂದೂಡಿದ್ದಾಗಿ ಘೋಷಿಸಿದ್ದರು. ಮುಂದೆ ಆಗಸ್ಟ್‌ ೨೮ರಂದು ಜನೋತ್ಸವಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಅದು ಗಣೇಶ ಚೌತಿಯ ಆಸುಪಾಸಾಗಿರುವುದರಿಂದ ಮತ್ತು ಜನೋತ್ಸವದಲ್ಲಿ ಭಾಗವಹಿಸಬೇಕಾಗಿರುವ ನಾಯಕರಿಗೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದೆ ಎಂಬ ಕಾರಣಕ್ಕೆ ಜನೋತ್ಸವವನ್ನು ಎರಡನೇ ಬಾರಿ ಮುಂದೂಡಲಾಗಿತ್ತು. ಮೂರನೇ ಬಾರಿ ನಿಗದಿಯಾಗಿದ್ದು ಸೆಪ್ಟೆಂಬರ್‌ ೮ಕ್ಕೆ. ಜನೋತ್ಸವ ಆಯೋಜನೆಗೊಂಡಿರುವ ದೊಡ್ಡಬಳ್ಳಾಪುರ ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಮತ್ತು ಇಡೀ ರಾಜ್ಯ ಮಳೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಜನೋತ್ಸವ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಇದಾದ ನಂತರ ಮಂಗಳವಾರ ರಾತ್ರಿ ಸಚಿವ ಉಮೇಶ್‌ ಕತ್ತಿ ನಿಧನರಾದ ಹಿನ್ನೆಲೆಯಲ್ಲಿ ಮುಂದೂಡಿಕೆ ಪಕ್ಕಾ ಎಂದೇ ಹೇಳಲಾಗಿತ್ತು. ಯಾಕೆಂದರೆ ಸಚಿವರೊಬ್ಬರು ತೀರಿಕೊಂಡರೆ ಮೂರು ದಿನ ಶೋಕಾಚರಣೆ ಇರುತ್ತದೆ ಎಂಬ ನೆಲೆಯಲ್ಲಿ ಹೊರಗಡೆಯೂ ಇದೇ ಅಭಿಪ್ರಾಯ ಇತ್ತು. ಆದರೆ, ಈಗ ಬರುತ್ತಿರುವ ಮಾಹಿತಿ ಪ್ರಕಾರ ಜನೋತ್ಸವ ಮುಂದೂಡಿಕೆ ಸಾಧ್ಯತೆ ಕಡಿಮೆ.

ಮುಂದೂಡಿಕೆ ಬೇಡ ಎಂಬ ಅಭಿಪ್ರಾಯ
ಜನೋತ್ಸವವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಮತ್ತೆ ಮುಂದೂಡುವುದು ಬೇಡ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿದೆ. ಅದಲ್ಲದೆ ಈ ಬಾರಿ ಸುಮಾರು ಮೂರು ಲಕ್ಷ ಮಂದಿ ಕಾರ್ಯಕರ್ತರಿಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಹೀಗಾಗಿ ಮುಂದೂಡುವುದು ಬೇಡ ಎಂಬ ಅಭಿಪ್ರಾಯವಿದೆ.

ಒಂದೇ ದಿನ ಶೋಕಾಚರಣೆ
ಸಾಮಾನ್ಯವಾಗಿ ಮಂತ್ರಿಯಾಗಿದ್ದವರು ಮೃತಪಟ್ಟಾಗ ಮೂರು ದಿನದ ಶೋಕಾಚರಣೆ ಮಾಡಲಾಗುತ್ತದೆ. ಆದರೆ, ಉಮೇಶ್‌ ಕತ್ತಿ ಅವರ ಸಾವಿನ ನಂತರ ಒಂದೇ ದಿನ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದೆ. ಅಂದರೆ ಬುಧವಾರ ಮಾತ್ರ ಯಾವುದೇ ಸರಕಾರಿ ಇಲ್ಲವೇ ದೊಡ್ಡ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಜನೋತ್ಸವವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಶಾಸಕರ ವಲಯದಲ್ಲಿ ಉಮೇಶ್‌ ಕತ್ತಿ ಅವರ ಸಾವನ್ನು ಮುಂದಿಟ್ಟುಕೊಂಡು ಸಂಭ್ರಮಪಡುವುದು ಬೇಡ ಎಂಬ ಅಭಿಪ್ರಾಯವಿದೆ. ಜತೆಗೆ ಜನರು ಮಳೆಯ ಸಂಕಷ್ಟದಲ್ಲಿರುವಾಗ ಉತ್ಸವ ಆಚರಣೆ ಮಾಡುವುದು ಸರಿಯೇ ಎನ್ನುವ ಚರ್ಚೆಯೂ ಜೋರಾಗಿದೆ.

ಈ ಎಲ್ಲ ಗೊಂದಲಗಳು ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಮುಖ್ಯಮಂತ್ರಿಗಳು ಬಳಿಕ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ| ಜನೋತ್ಸವ ಮತ್ತೆ ಮುಂದೂಡಿಕೆ, ಗಣೇಶೋತ್ಸವದ ಬಳಿಕ ಮಾಡ್ತೀವಿ ಎಂದ ಸಿಎಂ, ಕಾಲೆಳೆದ ಕಾಂಗ್ರೆಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಉಮೇಶ್ ಕತ್ತಿ

ಅಧಿವೇಶನ | ಕತ್ತಿ ಅಜಾತಶತ್ರು, ಬೆಳಗಾವಿಗೆ ಹೋದಾಗ ಜತೆಗೇ ಊಟ ಕೂಡಾ ಮಾಡ್ತಾ ಇದ್ವಿ ಎಂದ ಸಿದ್ದರಾಮಯ್ಯ

ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಿದ್ದರಾಮಯ್ಯ ಅವರು ಉಮೇಶ್‌ ಕತ್ತಿ ಅವರ ಬಗ್ಗೆ ಮಾತನಾಡಿದರು.

VISTARANEWS.COM


on

election-2023-siddaramaiah to contest from only one constituency
Koo

ಬೆಂಗಳೂರು: ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಮೊದಲ ದಿನ ನಮ್ಮನ್ನು ಅಗಲಿದ ಮಾಜಿ ಸಚಿವರಾದ ಉಮೇಶ್‌ ಕತ್ತಿ, ಪ್ರಭಾಕರ ರಾಣೆ ಸೇರಿದಂತೆ ಹಲವು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಉಮೇಶ್‌ ಕತ್ತಿ ನನಗೂ ಬಹಳ ಆತ್ಮೀಯ. ಲೋಕೋಪಯೋಗಿ ಸಚಿವನಾಗಿದ್ದಾಗ ನನ್ನ ಬಳಿ ಯಾವಾಗಲೂ ಬರುತ್ತಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋಗಿದ್ದಾಗ ಊಟಕ್ಕೆ ಕರೆದಿದ್ದರು. ತುಂಬ ಹೊತ್ತು ರಾಜಕೀಯವಾಗಿ ಚರ್ಚೆ ಮಾಡಿದೆವುʼʼ ಎಂದು ನೆನಪಿಸಿಕೊಂಡರು.

ʻʻಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ಉಮೇಶ್‌ ಕತ್ತಿ ವರ್ಣರಂಜಿತ ರಾಜಕಾರಣಿ. ಆಡಳಿತ ಮತ್ತು ವಿಪಕ್ಷ ಶಾಸಕರ ಜತೆ ಸ್ನೇಹ ಜೀವಿಯಾಗಿ ಇದ್ದ ಅವರು ಅಜಾತಶತ್ರುʼʼ ಎಂದರು ಸಿದ್ದರಾಮಯ್ಯ. ಅವರು ಕಾಲಿಟ್ಟ ಎಲ್ಲ ರಂಗಗಳಲ್ಲೂ ಯಶಸ್ವಿ ಆಗಿದ್ದರು ಎಂದು ನೆನಪು ಮಾಡಿಕೊಂಡರು.

ʻʻಕತ್ತಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡ ಅಂತ ವೈಯಕ್ತಿಕ ಸಲಹೆ ಕೊಟ್ಟಿದ್ದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಡಿಕೆ ಇಡು, ಅಭಿವೃದ್ಧಿ ಬಗ್ಗೆ ಮಾತಾಡು, ಪ್ರತ್ಯೇಕತೆ ಮಾತು ಬೇಡ ಅಂದಿದ್ದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಸಲೀಂ ಅಹ್ಮದ್ ಸಂತಾಪ
ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಎಂಎಲ್‌ಸಿ ಸಲೀಂ ಅಹಮದ್‌ ಅವರು ವಿಧಾನಪರಿಷತ್‌ನಲ್ಲಿ ಮಾತನಾಡಿದರು. ʻʻಉಮೇಶ್‌ ಕತ್ತಿ ಅವರು ಅಪರೂಪದ ರಾಜಕಾರಣಿ, ಮೊನ್ನೆ ಸೆಪ್ಟೆಂಬರ್‌ ೧ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಿಗೆ ಸಿಕ್ಕರು. ಎರಡು ಗಂಟೆಯಲ್ಲಿ ಅನೇಕ ವಿಚಾರಗಳು ಚರ್ಚೆ ಮಾಡಿದೆವು. ಅವರು ತುಂಬಾ ಜನರಿಗೆ ಉದ್ಯೋಗ ಕೊಟ್ಟರು. ಅವರ ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲʼʼ ಎಂದರು.

Continue Reading

ಉಮೇಶ್ ಕತ್ತಿ

ಅಧಿವೇಶನ | ಎಲ್ಲ ಪಕ್ಷಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಅಂತಿದ್ದರು ಕತ್ತಿ, ನೆನಪು ಮಾಡಿಕೊಂಡ ಬೊಮ್ಮಾಯಿ

ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದ ಉಮೇಶ್‌ ಕತ್ತಿ ಸೇರಿದಂತೆ ಈ ಅವಧಿಯಲ್ಲಿ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

VISTARANEWS.COM


on

Umesh katti bommai
ಬೆಳಗಾವಿಯಲ್ಲಿ ನಡೆದ ಚುನಾವಣೆ ಸಂಬಂಧಿತ ಸಭೆಯಲ್ಲಿ ಉಮೇಶ್‌ ಕತ್ತಿ ಮತ್ತು ಸಿಎಂ ಬೊಮ್ಮಾಯಿ
Koo

ಬೆಂಗಳೂರು: ಉಮೇಶ್‌ ಕತ್ತಿ ಅವರು ತುಂಬಾ ಆತ್ಮೀಯ ನಡವಳಿಕೆಯ ವ್ಯಕ್ತಿ. ಕ್ಷೇತ್ರದ ಜನರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರಲ್ಲದೆ, ಎಲ್ಲ ರಾಜಕೀಯ ನಾಯಕರ ಜತೆಗೂ ತುಂಬ ಒಳ್ಳೆಯ ಸಂಬಂಧ ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಆರಂಭದ ದಿನ ಉಮೇಶ್‌ ಕತ್ತಿ ಸೇರಿದಂತೆ ಹಲವು ನಾಯಕರು, ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ ಅವರು ಮಾತನಾಡಿದರು.

ʻʻಎಲ್ಲವೂ ಸರಿ ಇದ್ದಿದ್ದರೆ ಇಂದು ಉಮೇಶ್ ಕತ್ತಿ ನಮ್ಮ ಜತೆ ಇರಬೇಕಿತ್ತು. ಮೊದಲ ಸಾಲಿನಲ್ಲಿ ಅವರು ಕೂರಬೇಕಿತ್ತುʼʼ ಎಂದು ಹೇಳಿದ ಬೊಮ್ಮಾಯಿ ಅವರು, ಉಮೇಶ್‌ ಕತ್ತಿ ಅವರು ಎಲ್ಲ ಪಾರ್ಟಿಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಎಂದು ಹೇಳ್ತಿದ್ದರುʼʼ ಎಂದರು. ೧೯೮೫ರಲ್ಲಿ ಮೊದಲ ಬಾರಿ ಶಾಸಕರಾದ ಕತ್ತಿ ಅವರು ಬಳಿಕ ಆರು ಪಕ್ಷಗಳಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಎಂಟು ಬಾರಿ ಗೆದ್ದು ಶಾಸಕರಾಗಿದ್ದಾರೆ. ೧೯೮೫ರಲ್ಲಿ ಜನತಾ ಪಕ್ಷದಿಂದ, ೧೯೮೯, ೧೯೯೪ರಲ್ಲಿ ಜನತಾ ದಳದಿಂದ, ೧೯೯೯ರಲ್ಲಿ ಸಂಯುಕ್ತ ಜನತಾದಳದಿಂದ, ೨೦೦೪ರಲ್ಲಿ ಕಾಂಗ್ರೆಸ್‌ನಿಂದ (ಆಗ ಸೋತಿದ್ದರು) ಸ್ಪರ್ಧಿಸಿದ್ದರು. ೨೦೦೪ರಲ್ಲಿ ಮತ್ತೆ ಜೆಡಿಎಸ್‌ಗೆ ಬಂದರಾದರೂ ಗೆದ್ದ ಬಳಿಕ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಅಲ್ಲಿಂದ ಬಳಿಕ ಅವರು ಬಿಜೆಪಿಯಲ್ಲೇ ಇದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆ ಜನಕ
ʻʻಬೆಳಗಾವಿ ಜಿಲ್ಲೆಯಲ್ಲಿ ಇಷ್ಟೊಂದು ಸಕ್ಕರೆ ಕಾರ್ಖಾನೆಗಳು ಬೆಳೆಯಲು, ಈ ಮಟ್ಟಕ್ಕೆ ಅಭಿವೃದ್ಧಿ ಕಾಣಲು ಉಮೇಶ್‌ ಕತ್ತಿ ಅವರೇ ಕಾರಣ. ಅದರಲ್ಲೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಇವರೇ ಮೂಲ ಪುರುಷರುʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

ಕತ್ತಿ ಅವರು ಜನರ ಜತೆ ಸೇರಿ ಬೆಳೆದ ರಾಜಕಾರಣಿ ಎಂದು ಹೇಳಿದ ಬೊಮ್ಮಾಯಿ ಅವರು ಹುಕ್ಕೇರಿ ಕ್ಷೇತ್ರವನ್ನು ದಾಟಿ ಹೋಗುವಾಗ ಬೆಲ್ಲದ ಚಹ ಕುಡಿದು ಸ್ನೇಹಯುತವಾಗಿ ಮಾತನಾಡಿಸಿಕೊಂಡೇ ಹೋಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.

ʻʻದೇವೇಗೌಡರು ಮೊದಲ ಬಾರಿ ಸಂಪುಟ ರಚನೆ ಮಾಡಿದಾಗ ಅವಕಾಶ ಕೊಡಲಿಲ್ಲ ಸಹಜವಾಗಿ ಬೇಸರ ವ್ಯಕ್ತಪಡಿಸಿದರು. ನಂತರ ನಡೆದ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ತಮ್ಮ ಟೀಮನ್ನು ಪ್ರತ್ಯೇಕವಾಗಿ ಗೆಲ್ಲಿಸಿಕೊಂಡುಬಂದರು. ಜೈಲು ಖಾತೆ ಕೊಟ್ಟಾಗ ಕಾಯಂ ಆಗಿ ನನ್ನನ್ನು ಜೈಲಿಗೆ ಹಾಕುವ ಯೋಚನೆ ಮಾಡಿದ್ದೀರಾ ಎಂದು ಹಾಸ್ಯ ಮಾಡಿದರು. ಖಾತೆಯನ್ನು ಚೆನ್ನಾಗಿ ನಿಭಾಯಿಸಿದರುʼʼ ಎಂದರು ಬೊಮ್ಮಾಯಿ.

ರಾಗಿ, ಜೋಳ, ಸಿರಿಧಾನ್ಯದ ಮೂಲಕ ಪಡಿತರ ಕ್ರಾಂತಿ
ʻʻಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದ ಬಳಿಕ ಪಡಿತರಕ್ಕೆ ರಾಗಿ ಮತ್ತು ಜೋಳ ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಇವತ್ತು ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ಇದ್ದರೆ, ಸಿರಿಧಾನ್ಯ ಇದ್ದರೆ ಅದಕ್ಕೆ ಕಾರಣ ಉಮೇಶ್‌ ಕತ್ತಿʼʼ ಎಂದು ಶ್ಲಾಘಿಸಿದರು ಬೊಮ್ಮಾಯಿ.

ರಾಜ್ಯ ವಿಭಾಗ ಆಗಬೇಕು ಅನ್ನೋ ನಿಲುವಲ್ಲ ಅವರದು
ಕತ್ತಿ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಕೇಳುವವರು ಎಂಬ ಪ್ರತೀತಿ ಇದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದಕ್ಕೆ ಬೇರೆ ಆಯಾಮ ನೀಡಿದರು.
ʻʻಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಬೇಕು ಅನ್ನೋ ಆಸೆ ಅವರಿಗೆ ಇತ್ತು. ಹೀಗಾಗಿಯೇ ಅವರು ಕೆಲವು ಸಲ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದರು. ಆದರೆ, ಮೂಲತಃ ಅವರಿಗೆ ರಾಜ್ಯ ಎರಡಾಗಬೇಕು ಎನ್ನುವ ಯಾವುದೇ ಅಭಿಪ್ರಾಯ ಇರಲಿಲ್ಲ. ಅಭಿವೃದ್ಧಿಯ ಸಲುವಾಗಿ ನಿರಂತರ ಒತ್ತಡ ಇರಬೇಕು ಎಂದು ಭಾವಿಸಿದ್ದರುʼʼ ಎಂದು ಹೇಳಿದರು.

ʻʻಆನೆಗಳು ಊರಿನ ಒಳಗೆ ಬರುತ್ತಿವೆ ಏನು ಮಾಡಬೇಕುʼʼ ಎಂದು ಕೇಳಿದಾಗ ʻʻಜನ ಅರಣ್ಯಕ್ಕೆ ಹೋಗವುದನ್ನು ಬಿಡಲಿ. ಆನೆ ನಾಡಿಗೆ ಬರಲ್ಲʼʼ ಎಂದು ನೇರವಾಗಿ ಹೇಳುವಷ್ಟು ಖಡಕ್‌ತನ ಅವರಲ್ಲಿತ್ತು ಎಂದರು ಬೊಮ್ಮಾಯಿ.

Continue Reading

ಉಮೇಶ್ ಕತ್ತಿ

Umesh Katti | ಕತ್ತಿ ನಿವಾಸಕ್ಕೆ ಅರುಣ್‌ ಸಿಂಗ್‌ ಸೇರಿ ಬಿಜೆಪಿ ನಾಯಕರ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಉಮೇಶ್‌ ಕತ್ತಿ‌ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

VISTARANEWS.COM


on

Umesh Katti
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿವಂಗತ ಸಚಿವ ಉಮೇಶ್‌ ಕತ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ವಿವಿಧ ಸಚಿವರು ಭೇಟಿ ನೀಡಿದ್ದರು.
Koo

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಸಚಿವ ಉಮೇಶ್‌ ಕತ್ತಿ (Umesh Katti) ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಗುರುವಾರ ಭೇಟಿ ನೀಡಿ ‌ಸಾಂತ್ವನ ಹೇಳಿದರು.

ಉಮೇಶ್ ಕತ್ತಿ ಪತ್ನಿ ಶೀಲಾ, ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖಂಡರು, ಕತ್ತಿ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಉಮೇಶ್‌ ಕತ್ತಿ ನನ್ನ ಆತ್ಮೀಯ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಭೇಟಿಯಾದಾಗ ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ಹಲವು ಸಲಹೆ ನೀಡುತ್ತಿದ್ದರು. ಉಮೇಶ್‌ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಪಕ್ಷ, ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದರು.‌

ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ

ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ದೂರದೃಷ್ಟಿ, ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ಕತ್ತಿ ಅವರ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು.

ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಉಮೇಶ್‌ ಕತ್ತಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಕತ್ತಿ ಆಸ್ಪತ್ರೆಗೆ ದಾಖಲಾದಾಗ ನನಗೆ ಗೊತ್ತಾಯಿತು. ವೈದ್ಯರನ್ನು ಕರೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ವಿಧಿ ಆಟದ ಮುಂದೆ ನಮ್ಮ ಪ್ರಯತ್ನ ಫಲಿಸಲಿಲ್ಲ ಎಂದರು.

ಅದೇ ರೀತಿ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಭೇಟಿ ನೀಡಿ ಕತ್ತಿ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ಉಮೇಶ್ ಕತ್ತಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಅವರ ಅಕಾಲಿಕ ಸಾವು ನೋವು ತಂದಿದೆ ಎಂದರು.

ಬಾಲಚಂದ್ರ ಜಾರಕಿಹೊಳಿ ಭೇಟಿ
ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಉಮೇಶ್‌ ಕತ್ತಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಾಲಚಂದ್ರ ಜಾರಕಿಹೊಳಿ ಜತೆ ಅಣ್ಣನ ಇತ್ತೀಚಿನ ಸ್ವಾರಸ್ಯಕರ ಸಂಗತಿಗಳ ಬಗ್ಗೆ ರಮೇಶ್‌ ಕತ್ತಿ ಮಾಹಿತಿ ಹಂಚಿಕೊಂಡರು.

“ಒಂದು ತಿಂಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಅಣ್ಣ ಉಮೇಶ್ ಕತ್ತಿ ಸಂಚಾರ ಮಾಡಿದ್ದಾರೆ. ಅಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪ್ರತಿ ಹಳ್ಳಿ ಸುತ್ತಿ ಕುಡಿಯುವ ನೀರು, ಕೃಷಿಗೆ ನೀರಾವರಿ, ಸಮುದಾಯ ಭವನ ಸೌಲಭ್ಯವನ್ನು ಕಲ್ಪಿಸಿರುವೆ. ಇನ್ನೂ ಏನಾದರೂ ಕಡಿಮೆ ಆಗಿದ್ದರೆ ಹೇಳಿ” ಎಂದು ಜನರ ಬಳಿಯೇ ಕೇಳುತ್ತಿದ್ದರು ಎಂದು ರಮೇಶ್‌ ಕತ್ತಿ ಸ್ಮರಿಸಿದ್ದಾರೆ.

ಬಳಿಕ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಆಗಮಿಸಿ ಉಮೇಶ್‌ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಕತ್ತಿ ನಿವಾಸದತ್ತ ಅಭಿಮಾನಿಗಳ ದಂಡು
ಉಮೇಶ್ ಕತ್ತಿ ಕುಟುಂಬವರಿಗೆ ಸಾಂತ್ವನ ಹೇಳಲು ಬೆಲ್ಲದ ಬಾಗೇವಾಡಿಯತ್ತ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಧಾವಿಸಿದ್ದು, ಕತ್ತಿ ಕುಟಂಬದ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಣ್ಣ ಅಗಲಿದ ನೋವಲ್ಲಿ ಕಣ್ಣೀರು ಹಾಕುತ್ತಿರುವ ರಮೇಶ್ ಕತ್ತಿಯನ್ನು ಅಭಿಮಾನಿಗಳು ತಬ್ಬಿಕೊಂಡು ಸಮಾಧಾನ ಪಡಿಸಿದ್ದಾರೆ.

ಇದನ್ನೂ ಓದಿ | Bharath jodo| ಭಾರತ್‌ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ

Continue Reading

ಉಮೇಶ್ ಕತ್ತಿ

Umesh katti ತಮ್ಮ ರಮೇಶ್‌ ಕತ್ತಿ ಆರೋಗ್ಯದಲ್ಲಿ ಏರುಪೇರು, ಹೃದಯ ತಪಾಸಣೆ

ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್‌ ಕತ್ತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಅವರ ತಮ್ಮ ರಮೇಶ್‌ ಕತ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.

VISTARANEWS.COM


on

Ramesh katti
Koo

ಬೆಳಗಾವಿ: ಮಾಜಿ ಸಚಿವ ಉಮೇಶ್‌ ಕತ್ತಿ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿರುವ ಅವರ ತಮ್ಮ ರಮೇಶ್‌ ಕತ್ತಿ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಏರುಪೇರು ಕಂಡುಬಂದಿದೆ. ಕೂಡಲೇ ಅವರ ಹೃದಯ ತಪಾಸಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ‌ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ರಮೇಶ್‌ ಕತ್ತಿ ಅವರ ಆರೋಗ್ಯದಲ್ಲೇ ಏರುಪೇರಾಗಿದೆ.

ಉಮೇಶ್‌ ಕತ್ತಿ ಅವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಮಂಗಳವಾರ ರಾತ್ರಿಯೇ ರಮೇಶ್‌ ಕತ್ತಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಧಾವಿಸಿದ್ದರು. ಮತ್ತು ರಾತ್ರಿ ನಿಧನದ ಸುದ್ದಿ ತಿಳಿಯುತ್ತಲೇ ತುಂಬ ನೋವು ಅನುಭವಿಸಿದ್ದರು. ರಾತ್ರಿ ಇಡೀ ನಿದ್ದೆ ಮಾಡದೆ ಅಣ್ಣನ ಜತೆಗಿದ್ದ ರಮೇಶ್‌ ಕತ್ತಿ ಅವರು ಮಧ್ಯಾಹ್ನ ಪಾರ್ಥಿವ ಶರೀರದೊಂದಿಗೆ ಬೆಳಗಾವಿಗೆ ಮರಳಿದ್ದರು.

ಅದಾದ ಬಳಿಕ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್‌ ಕತ್ತಿ ಅವರ ಪಾರ್ಥಿವ ಶರೀರದ ದರ್ಶನ ನಡೆಯುತ್ತಿದ್ದಾಗ ಅಲ್ಲೇ ಇದ್ದರು. ಈ ಹೊತ್ತಲ್ಲಿ ಅವರಲ್ಲಿ ಸಣ್ಣ ಮಟ್ಟದ ಅಸ್ವಸ್ಥತೆ ಕಾಣಿಸಿಕೊಂಡಿತು. ಹೀಗಾಗಿ ಹೊರಗಡೆ ಅಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾಗಲೇ ಒಳಗೆ ರಮೇಶ್‌ ಕತ್ತಿ ಅವರ ಆರೋಗ್ಯ ತಪಾಸಣೆ ನಡೆಯಿತು. ಅಲ್ಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವರ ಹೃದಯದ ಇಸಿಜಿ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿದುಬಂದಿದೆ.

ರಮೇಶ್ ಕತ್ತಿ ಅವರು ಈ ಹಿಂದೆ ಸಂಸದರಾಗಿದ್ದು, ಪ್ರಸಕ್ತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ| Umesh Katti | ಬೆಲ್ಲದ ಬಾಗೇವಾಡಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಸಿಎಂ, ಮಾಜಿ ಸಿಎಂ ಆಗಮನ

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌