BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ - Vistara News

ಕರ್ನಾಟಕ

BY Vijayendra : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ

ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಬೇಕು ಎನ್ನುವ ಆಗ್ರಹವೊಂದು ಶಾಸಕರ ಅಂತರಂಗದಲ್ಲಿರುವುದು ಚಿತ್ರದುರ್ಗದಲ್ಲಿ ಸಾರ್ವಜನಿಕವಾಗಿ ಬೆಳಕಿಗೆ ಬಂತು.

VISTARANEWS.COM


on

BS Yediyurappa BY Vijayendra b y vijayendra will not contest from varuna says bs yediyurappa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ರದುರ್ಗ: ರಾಜ್ಯದಲ್ಲಿ ಆಗಾಗ ಸುದ್ದಿಯಾಗುತ್ತಿರುವ ʻಮುಂದಿನ ಸಿಎಂವಿಜಯೇಂದ್ರʼ (BY Vijayendra) ಪ್ರಸ್ತಾಪ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮರುಕಳಿಸಿದೆ.

ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ಸಕ್ರಿಯ ಚುನಾವಣಾ ಸ್ಪರ್ಧಾ ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಅವರ ಸ್ಥಾನಕ್ಕೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಬರಲಿದ್ದಾರೆ ಎಂಬ ಗಾಸಿಪ್‌ಗಳು ಜೋರಾಗಿಯೇ ಹರಡಿದ್ದವು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಅದು ಚಾಲನೆಗೆ ಬಂದಂತಾಗಿದೆ. ಶಿಕಾರಿಪುರ ಕ್ಷೇತ್ರದಿಂದ ಮುಂದಿನ ಬಾರಿ ಕಣಕ್ಕಿಳಿಯುತ್ತಿರುವ ಬಿವೈ ವಿಜಯೇಂದ್ರ ಅವರನ್ನೇ ಸಿಎಂ ಮಾಡಬೇಕು ಎಂಬ ಕೂಗೂ ಒಳಗಿಂದೊಳಗೆ ಇದೆ. ಬಿ.ಎಸ್‌. ಯಡಿಯೂರಪ್ಪ ಅವರ ಜತೆಗಿದ್ದು ಕಲಿತ ರಾಜಕೀಯ ಪಟ್ಟುಗಳು, ಅವರ ಕಾಲದಲ್ಲಿ ಇವರೇ ನಡೆಸಿದ ಆಡಳಿತ ನಿರ್ವಹಣೆಗಳು, ಲಿಂಗಾಯತ ಸಮುದಾಯದ ಮೇಲೆ ಅವರಿಗಿರುವ ಹಿಡಿತ, ಚುನಾವಣೆಗಳನ್ನು ನಿಭಾಯಿಸುವ ರೀತಿಯ ಆಧಾರದಲ್ಲಿ ಹಲವಾರು ಬಿಜೆಪಿ ಶಾಸಕರು, ನಾಯಕರು ವಿಜಯೇಂದ್ರ ಅವರಲ್ಲಿ ಒಬ್ಬ ಭಾವಿ ಸಿಎಂ ಅನ್ನು ಕಾಣುತ್ತಿದ್ದಾರೆ. ಈ ಅಭಿಪ್ರಾಯ ಬಿಜೆಪಿಯ ದೊಡ್ಡ ವೇದಿಕೆಯಲ್ಲೇ ಹೊರಹೊಮ್ಮಿದೆ.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಬಿವೈ ವಿಜಯೇಂದ್ರ ಕೂಡಾ ಭಾಗವಹಿಸಿದ್ದರು. ಆಗ ಅವರನ್ನು ಸಂಬೋಧಿಸುವ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕರಾದ ಎಂ ಚಂದ್ರಪ್ಪ ಅವರು ʻಮುಂದಿನ ಸಿಎಂ ವಿಜಯೇಂದ್ರʼ ಎಂದು ಹೇಳಿದರು.

ಸಮಾವೇಶದಲ್ಲಿ ನಾನಾ ನಾಯಕರು ಮಾತನಾಡಿದರು. ಶಾಸಕರಾಗಿರುವ ಎಂ. ಚಂದ್ರಪ್ಪ ಅವರು ತಮ್ಮ ಪಾಳಿಯಲ್ಲಿ ಭಾಷಣ ಶುರು ಮಾಡಿದಾಗ, ವೇದಿಕೆಯಲ್ಲಿರುವ ಅತಿಥಿಗಳ ಹೆಸರು ಹೇಳುವ ವೇಳೆ, ʻʻರಾಜ್ಯದ ಯುವಕರ ಕಣ್ಮಣಿ, ಮುಂದಿನ ಸಿಎಂ ವಿಜಯೇಂದ್ರʼʼ ಎಂದು ಹೇಳಿದರು. ಆಗ ಇಡೀ ಸಭಾಂಗಣದಿಂದ ಜೋರಾದ ಶಿಳ್ಳು, ಕೇಕೆ ಕೇಳಿಬಂತು.

ವರದಕ್ಷಿಣೆ ತೆಗೆದುಕೊಳ್ಳೋರನ್ನು ಮದುವೆಯಾಗಲ್ಲ

ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು, ʻʻಹೆಣ್ಣು ಮಕ್ಕಳಲ್ಲಿ ಒಂದು ವಿನಂತಿ. ರಾಜ್ಯದಲ್ಲಿ 1000 ಗಂಡು ಮಕ್ಕಳಿಗೆ ಸುಮಾರು 940 ಹೆಣ್ಣು ಮಕ್ಕಳಿದ್ದಾರೆ. ಹೆಣ್ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಿದೆ. ಹೀಗಾಗಿ ನೀವೊಂದು ಶಪಥ ಮಾಡಬೇಕು. ವರದಕ್ಷಿಣೆ ತೆಗೆದುಕೊಳ್ಳುವವರನ್ನು ಮದುವೆ ಆಗಲ್ಲ ಎಂದು ನಿರ್ಧಾರ ಮಾಡಬೇಕುʼʼ ಎಂದರು.

ʻʻನಾನು ಕೂಡ ಮದುವೆ ಆಗುವಾಗ ವರದಕ್ಷಿಣೆ ತೆಗೆದುಕೊಂಡಿಲ್ಲ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಹಾಗಾಗಿ ಹೇಳ್ತಿದ್ದೀನಿ, ಯಾರೂ ಕೂಡಾ ವರದಕ್ಷಿಣೆ ತೆಗೆದುಕೊಳ್ಳುವ ಹುಡುಗರನ್ನು ಒಪ್ಪಬೇಡಿʼʼ ಎಂದರು ಬಿ.ಸಿ. ಪಾಟೀಲ್‌.

ʻʻಹೆಣ್ಣುಮಕ್ಕಳು ಕೈಗಾರಿಕೆ ಆರಂಭಿಸುತ್ತೀರಿ ಅಂದರೆ ಕೇವಲ ಶೇಕಡಾ ೪ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಹತ್ತು ಲಕ್ಷದವರೆಗಿನ ಮೊತ್ತಕ್ಕೆ ೫೦% ಸಬ್ಸಿಡಿ ಕೂಡಾ ಸರ್ಕಾರದ ವತಿಯಿಂದ ಸಿಗುತ್ತಿದೆ. ಇದನ್ನು ಬಳಸಿಕೊಂಡು ಉದ್ಯಮಿಗಳಾಗಬಹುದುʼʼ ಎಂದು ಹೇಳಿದ ಬಿ.ಸಿ. ಪಾಟೀಲ್‌, ʻʻಉತ್ತರ ಕನ್ನಡ ಜಿಲ್ಲೆಯಲ್ಲಿ ಲತಾ ಹೆಗಡೆ ಅನ್ನೋ ಮಹಿಳೆ ಬಾಳೆಕಾಯಿಯ ಉತ್ಪನ್ನಗಳನ್ನ ಮಾರಾಟ ಮಾಡಿ ತಿಂಗಳಿಗೆ 50 ಸಾವಿರ ದುಡಿಯುತ್ತಿದ್ದಾರೆʼʼ ಎಂದು ವಿವರಿಸಿದರು.

ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಭಾಗಿ

ಚಿತ್ರದುರ್ಗದ ಚಂದ್ರವಳ್ಳಿ ಆಟದ ಮೈದಾನದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ, ಅರಣ್ಯ ನಿಗಮದ ಅಧ್ಯಕ್ಷೆ ನಟಿ ತಾರಾ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಳಲ್ಕೆರೆ ಶಾಸಕ ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಇದನ್ನೂ ಓದಿ : BJP Yuva Morcha Meeting: ಸಕ್ಕರೆನಾಡಿನಲ್ಲಿ 2ನೇ ದಿನವೂ ಬಿ.ವೈ.ವಿಜಯೇಂದ್ರ ಹವಾ; ಯುವ ನಾಯಕನಿಗೆ ಅದ್ಧೂರಿ ಸ್ವಾಗತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

Bengaluru News: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Nari Samman 2024 award ceremony on June 15 in Bengaluru
Koo

ಬೆಂಗಳೂರು: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ, ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಂಬೆ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾ. ಮಂಜುಳಾ ಚೆಲ್ಲೂರು, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ಖ್ಯಾತ ಚಲನಚಿತ್ರ ನಟ ಶ್ರೀನಾಥ್‌, ಬೆಂಗಳೂರಿನ ಬಸವ ಪರಿಷತ್‌ ಅಧ್ಯಕ್ಷೆ ಎಂ.ಪಿ. ಉಮಾದೇವಿ, ಮಾಜಿ ಸಚಿವೆ ರಾಣಿ ಸತೀಶ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಇಸ್ರೋ ಸಂಸ್ಥೆ ವಿಜ್ಞಾನಿ ಬಿ.ಎಚ್‌.ಎಂ. ದಾರುಕೇಶ್‌, ಡಾ. ಎಚ್‌.ಆರ್‌. ಶಾಂತರಾಜಣ್ಣ, ಚಲನಚಿತ್ರ ನಟ ಸುಚೇಂದ್ರ ಪ್ರಸಾದ್‌, ಚಲನಚಿತ್ರ ನಟಿ ಭಾವನಾ, ಡಾ. ಮಂಜುಳಾ ಎ. ಪಾಟೀಲ್‌ ಪಾಲ್ಗೊಳ್ಳುವರು.

ಇದನ್ನೂ ಓದಿ: Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕಿರುತೆರೆ ನಿರೂಪಕಿ ಅನುಶ್ರೀ, ಚಲನಚಿತ್ರ ನಟಿ ಸೋನಾಲ್‌ ಮಂಥೇರೋ, ಉದ್ಯಮಿ ಪಲ್ಲವಿ ರವಿ, ಡಾ. ಮಮತಾ ಎಸ್‌.ಎಚ್‌., ಉಮಾಬಾಯಿ ಖರೆ, ಜ್ಯೋತಿ ಟೋಸೂರ, ಡಾ. ರತ್ನಮ್ಮ ಆರ್‌., ಹಿರಿಯ ನಿರೂಪಕಿ ನವಿತ ಜೈನ್‌, ಸುಜಾತ ಬಯ್ಯಾಪುರ, ಮಧುರ ಅಶೋಕ್‌ ಕುಮಾರ, ಡಾ. ಸುಮಾ ಬಿರಾದಾರ, ಸುಮಿತ್ರಾ ಎಂ.ಪಿ.ರೇಣುಖಾಚಾರ್ಯ, ಡಾ. ಸಂದರ್ಶಿನಿ ನರೇಂದ್ರಕುಮಾರ್‌, ಡಾ. ಪುಲಿಗೆರೆ ಸಂಪದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

ನಾಟ್ಯ ಸಂಪದ ನೃತ್ಯ ಶಾಲೆ ಸಂಸ್ಥಾಪಕಿ ಡಾ. ಮಾನಸ ಕಂಠಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್

Actor Darshan: ಆರ್‌.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಆರೋಪಿಗಳ ತಂಡ ಪಾರ್ಟಿ ಮಾಡಿತ್ತು. ಆರೋಪಿ ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ಸೀಜ್ ಮಾಡಲಾಗಿದೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka Swamy murder case) ಈಗಾಗಲೇ ದರ್ಶನ್‌ ಸೇರಿ 13 ಆರೋಪಿಗಳನ್ನು (Actor Darshan) ‌ಪೊಲೀಸರು ಅರೆಸ್ಟ್‌ ಮಾಡಿದ್ದು, ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದೆ. ಈ ನಡುವೆ ಹಂತಕರಿಗೆ ನೀಡಲು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಆರ್‌.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಆರೋಪಿಗಳ ತಂಡ ಪಾರ್ಟಿ ಮಾಡಿತ್ತು. ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ಸೀಜ್ ಮಾಡಲಾಗಿದೆ. ಇದು ಕೊಲೆ ಆರೋಪ ಹೊರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ತಲಾ 5 ಲಕ್ಷ ನೀಡಲು ಹಣ ಇಡಲಾಗಿತ್ತು.

ಪವಿತ್ರಾ ಗೌಡ ಕಾಲಿಗೆ ಬಿದ್ದರೂ ಕರಗಲಿಲ್ಲ ಆರೋಪಿಗಳ ಮನಸ್ಸು

ಹಲ್ಲೆ ಸಮಯದಲ್ಲಿ ಪವಿತ್ರಾ ಗೌಡ ಕಾಲಿಗೆ ರೇಣುಕಾಸ್ವಾಮಿಯನ್ನು ಬೀಳಿಸಿ ಡಿ ಗ್ಯಾಂಗ್ ಕ್ಷಮಾಪಣೆ ಕೇಳಿಸಿತ್ತು ಎನ್ನಲಾಗಿದೆ. ಅಕ್ಕನ ಕಾಲಿಗೆ ಬೀಳೋ ಎಂದು ಸೂ… ಮಗನನೇ ಎಂದು ಹಿಂಸೆ ನೀಡಲಾಗಿದೆ. ದರ್ಶನ್ ಹೊಡೆತಕ್ಕೆ ನೋವು ತಾಳಲಾರದೆ ಪವಿತ್ರಾ ಗೌಡ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಅಂಗಲಾಚಿಕೊಂಡಿದ್ದ. ಮೆಡ್ಂ ತಪ್ಪಾಯಿತು, ಕ್ಷಮಿಸಿ ಬಿಡಿ, ನಿಮ್ಮ ಕಾಲು ಹಿಡಿದುಕೊಳ್ತೇನೆ ಎಂದು ಗೋಗರೆದಿದ್ದ. ಆಗ ತಪ್ಪಾಯಿತು ಸಾರ್ ಎಂದು ಕಾಲಿಗೆ ಬಿದ್ದಾಗ, ದರ್ಶನ್ ಎಗರಿಸಿ ಒದ್ದಿದ್ದರು. ಪೊಲೀಸರು ಸ್ಥಳ ಮಹಜರು ಮಾಡುವಾಗ ಈ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ | Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?

ಎ13 ಆರೋಪಿಯ ರಕ್ಷಣೆಗೆ ಪೊಲೀಸರ ಯತ್ನ?

ಪ್ರಕರಣದಲ್ಲಿ ಎ13 ಆರೋಪಿಯ ರಕ್ಷಣೆಗೆ ಪೊಲೀಸರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ದೀಪಕ್ ಬಗ್ಗೆ ಮಾಹಿತಿ ಬಹಿರಂಗಪಡಿಸದಂತೆ ಒತ್ತಡ ಹೇರಲಾಗಿದೆ. ದೀಪಕ್ ಪೋಟೋ ಲೀಕ್ ಮಾಡದಂತೆಯೂ ದೊಡ್ಡ ಮೊತ್ತದ ಡೀಲ್‌ಗ ಮುಂದಾದ ಆರೋಪ ಕೇಳಿಬಂದಿದೆ. ಆದರೆ ಹಂತಕ ದೀಪಕ್ ಪೋಟೋ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ದೀಪಕ್, ಪ್ರಭಾವಿ ರಾಜಕಾರಣಿ ಸೋದರಿಯ ಮಗಳ ಪತಿ ಎಂದು ತಿಳಿದುಬಂದಿದೆ.

Continue Reading

ಪ್ರಮುಖ ಸುದ್ದಿ

Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

Darshan Arrested: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬೀಗರ ಊಟ ನಡೆಯುತ್ತಿದೆಯೇ? ಅಲ್ಲಿ ಯಾಕೆ ಶಾಮಿಯಾನ ಹಾಕಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಠಾಣೆಯಲ್ಲೇ ಮದುವೆ ಮನೆ, ಬೀಗರ ಊಟ ಹೀಗೆ ಸಾಲು ಸಾಲು ಕಮೆಂಟ್​ಗಳು ಬಂದಿವೆ.

VISTARANEWS.COM


on

Darshan Arrested
Koo

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್(Darshan Arrested) ಮತ್ತು ಆತನ ಗ್ಯಾಂಗ್​ ಸದ್ಯ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯ ಲಾಕ್​ಅಪ್​ನಲ್ಲಿದ್ದಾರೆ. ಕೋರ್ಟ್​​ನಿಂದ ಕಸ್ಟಡಿಗೆ ಪಡೆದಿರುವ ಪೊಲೀಸರು ಸ್ಥಳ ಮಹಜರು ಸೇರಿದಂತೆ ನಾನಾ ಕಾನೂನು ಹಾಗೂ ತನಿಖಾ ಪ್ರಕ್ರಿಯಗಳನ್ನು ನಡೆಸುತ್ತಿದ್ದಾರೆ. ಹೈಪ್ರೊಫೈಲ್ ಕೇಸ್​ ಆಗಿದ್ದರಿಂದ ಪೊಲೀಸ್​ ಠಾಣೆಯ ಕಡೆಗೆ ಮಾಧ್ಯಮಗಳು ಹಾಗೂ ಜನರ ದೃಷ್ಟಿ ನೆಟ್ಟಿರುವುದು ಸಹಜ. ಆದರೆ ಎಲ್ಲರ ಕಣ್ತಪ್ಪಿಸಲು ಉದ್ದೇಶಿಸಿರುವ ಪೊಲೀಸರು ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಾರೆ. ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ದರ್ಶನ್​ನಂಥ ಕೊಲೆಗಾರರು ಇರುವ ಸ್ಟೇಷನ್​​ಗೆ ಶಾಮಿಯಾನ ಹಾಕಿರುವ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಇವೆಲ್ಲದರ ನಡುವೆ ಪೊಲೀಸರ ಶಾಮಿಯಾನ ತಂತ್ರ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿದೆ.

ದರ್ಶನ್​ಗೆ ಸಿಗರೇಟ್​, ಹೆಂಡವೆಂದರೆ ಬಲು ಪ್ರೀತಿ. ಪೊಲೀಸರ ವಶದಲ್ಲಿದ್ದ ಸಮಯದಲ್ಲೂ ಎಣ್ಣೆ, ಕೊಡಿ ಎಂದು ಕೇಳಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿತ್ತು. ನ್ಯಾಯಾಲಯದಿಂದ ತಮ್ಮ ಕಸ್ಟಡಿಗೆ ಪಡೆದ ಮೊದಲ ದಿನವೇ ಪೊಲೀಸರು ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟು ಸುದ್ದಿಯಾಗಿದ್ದರು. ಹೀಗಾಗಿ ಪೊಲೀಸರು ತಮಗೆ ಬೇಕಾದ ರೀತಿಯಲ್ಲಿ ವರ್ತಿಸಲು ಹಾಗೂ ದರ್ಶನ್​ ಗ್ಯಾಂಗ್​ನ ಬೇಕು, ಬೇಡಗಳನ್ನು ಪೂರೈಸಲು ಶಾಮಿಯಾನ ಹಾಕಿದ್ದಾರೆ ಎಂಬ ಊಹಾಪೋಹಗಳೇ ಹೆಚ್ಚಾಗಿದೆ.

ತರೇಹವಾರಿ ಚರ್ಚೆ

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬೀಗರ ಊಟ ನಡೆಯುತ್ತಿದೆಯೇ? ಅಲ್ಲಿ ಯಾಕೆ ಶಾಮಿಯಾನ ಹಾಕಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಠಾಣೆಯಲ್ಲೇ ಮದುವೆ ಮನೆ, ಬೀಗರ ಊಟ ಹೀಗೆ ಸಾಲು ಸಾಲು ಕಮೆಂಟ್​ಗಳು ಬಂದಿವೆ.

ಪ್ರಮಾಣಿಕವಾಗಿ ತನಿಖೆ ನಡೆಸುವವರಿಗೆ ಯಾಕೆ ಬೇಕು ಈ ಶಾಮಿಯಾನದ ಮರೆಯಾಕೆ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಪೊಲೀಸರ ಮೊದಲ ದಿನದ ಅರ್ಭಟ ಈಗ ಕಡಿಮೆಯಾಗಿದೆ, ಶಾಮಿಯಾನದ ಕಳ್ಳಾಟಕ್ಕೆ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಅರೆ. ನಿಜವಾಗ್ಲೋ ಇದು ಪೊಲೀಸ್ ಠಾಣೆಯೋ ಮದುವೆ ಮಂಟಪವೊ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನಾವೂ ಠಾಣೆಗೆ ಹೋದರೆ ಊಟ ಇದೆಯಾ ಎಂದು ಕೇಳಿದ್ದಾರೆ.

ಇದನ್ನೂ ಓದಿ: V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

ಪೊಲೀಸ್ ಠಾಣೆಯ ಗೇಟೂಗೂ ಶಾಮಿಯಾನ ಯಾಕೆ? ಒಳಗೆ ಆತ ಎಣ್ಣೆ ಹೊಡೆಯೋದು ಸಿಗರೇಟು ಸೇದೋದು ಕಾಣಬಾರದು ಅಂಥನಾ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಅನ್ನಪೂರ್ಣೇಶ್ವರಿ ಸ್ಟೇಷನ್​ನಲ್ಲಿ ಇನ್ವೆಸ್ಟಿಗೇಷನ್ ನಡಿತಿಯೆಯಾ ಅಥವಾ ಫಂಕ್ಷನ್ ನಡೆಯುತ್ತಿದೆಯಾ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಶಾಮಿಯಾನ, ಪರ್ದಾ ಎಲ್ಲ ಪೊಲೀಸ್​ ಸ್ಟೇಷನ್​ಗೆ ಯಾಕೆ ಹಾಕುತ್ತಾರೆ. ಆರಕ್ಷಕ ಠಾಣೆ ಅರ್ಥ ಕಳೆದುಕೊಳ್ಳುತ್ತದೆ. ಇಸ್ಸಿ ಮೊದಲು ತೆಗಿರಿ ಇದನ್ನು ಎಂದು ಬರೆದುಕೊಂಡಿದ್ದಾರೆ. ಪೊಲೀಸರು ಶಾಮಿಯಾನ ಹಾಕಿದ್ದು ಯಾಕೆ ಗೊತ್ತಾ? ಒಳಗೆ ಪ್ರೈವೆಸಿ ಮ್ಯಾಟರ್ ನಡೀತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇವತ್ತು ಶಾಮಿಯಾನ ಹಾಕ್ತಾರೆ, ನಾಳೆ ತಗಡು ಹೊಡೆಸ್ತಾರೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

Continue Reading

ಕರ್ನಾಟಕ

Pralhad Joshi: ಚುನಾವಣೆ ಸೋಲಿನ ಸೇಡಿಗಾಗಿ ಯಡಿಯೂರಪ್ಪ ಮೇಲೆ ರಾಜಕೀಯ ವೈಷಮ್ಯ; ಪ್ರಲ್ಹಾದ್‌ ಜೋಶಿ

Pralhad Joshi: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಸಕ್ತ ಲೋಕಸಭೆ ಚುನಾವಣೆ ಸೋಲನ್ನು ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ರಾಜಕೀಯ ವೈಷಮ್ಯ ತೋರುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿದ್ದಾರೆ.

VISTARANEWS.COM


on

Union Food and Consumer Affairs Minister Pralhad Joshi latest statement
Koo

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌ಗೆ (Congress) ಲೋಕಸಭೆ ಚುನಾವಣೆ (Lok Sabha Election) ಸೋಲನ್ನು ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ರಾಜಕೀಯ ವೈಷಮ್ಯ ತೋರುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತ ಮರೆಮಾಚಲು ಮಾಜಿ ಸಿಎಂ, 81 ವರ್ಷದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಷಡ್ಯಂತ್ರ ನಡೆಸುತ್ತಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಅದನ್ನು ಜೀರ್ಣಿಸಿಕೊಳ್ಳಲಾಗದೆ ಆಡಳಿತವನ್ನು ಮನಬಂದಂತೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

ಮೂರ್ನಾಲ್ಕು ತಿಂಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧ ಪೋಸ್ಕೋ ಪ್ರಕರಣ ದಾಖಲಿಸಿದ ಮಹಿಳೆ ಮಾನಸಿಕ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ ಎಂದು ಆಗಲೇ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಆದರೆ ಈಗ ಚುನಾವಣೆ ಮುಗಿದ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಹೊಸ ಡ್ರಾಮಾ ಶುರು ಮಾಡಿದ್ದಾರೆ ಎಂದು ಸಚಿವರು ಖಂಡಿಸಿದ್ದಾರೆ.

ಆ ಮಹಿಳೆ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದೂ ಗೃಹ ಮಂತ್ರಿಗಳೇ ಖುದ್ದಾಗಿ ಈ ಹಿಂದೆ ಹೇಳಿದ್ದರು. ಈಗ ತಮ್ಮ ದುರಾಡಳಿತವನ್ನು ಮರೆಮಾಚಲು ಬಿಜೆಪಿ ವರಿಷ್ಠ ಬಿಎಸ್‌ವೈ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಟ್ವೀಟ್ ಮೂಲಕ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

ಇಲ್ಲ ಸಲ್ಲದ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಎಳೆಯುತ್ತಿರುವುದು ರಾಜಕೀಯ ವೈಷಮ್ಯ ಸರಿ. ಅವರ ಈ ದುರ್ಬುದ್ಧಿಗೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ.

Continue Reading
Advertisement
Nari Samman 2024 award ceremony on June 15 in Bengaluru
ಕರ್ನಾಟಕ6 mins ago

Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

Viral Video
ವಿದೇಶ16 mins ago

ಹಿಂದೂಗಳ ಆಸ್ತಿ ಲೂಟಿ ಮಾಡಿ, ದೇವರ ವಿಗ್ರಹ ಕದ್ದು ಪಾಕಿಸ್ತಾನ ಸ್ಥಾಪನೆ; ಪಾಕ್‌ ಪತ್ರಕರ್ತನ ವಿಡಿಯೊ ವೈರಲ್‌

Actor Darshan
ಪ್ರಮುಖ ಸುದ್ದಿ24 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್

Flight issues
Latest27 mins ago

flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

Darshan Arrested
ಪ್ರಮುಖ ಸುದ್ದಿ27 mins ago

Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

NEET UG 2024
ಶಿಕ್ಷಣ43 mins ago

NEET UG 2024: ನೀಟ್ ಯುಜಿ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಮನವಿ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್

Union Food and Consumer Affairs Minister Pralhad Joshi latest statement
ಕರ್ನಾಟಕ44 mins ago

Pralhad Joshi: ಚುನಾವಣೆ ಸೋಲಿನ ಸೇಡಿಗಾಗಿ ಯಡಿಯೂರಪ್ಪ ಮೇಲೆ ರಾಜಕೀಯ ವೈಷಮ್ಯ; ಪ್ರಲ್ಹಾದ್‌ ಜೋಶಿ

Aliens
ವಿಜ್ಞಾನ54 mins ago

Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

Actress Siri marriage to actor prabhakar
ಬಿಗ್ ಬಾಸ್55 mins ago

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Yusuf Pathan
ಕ್ರೀಡೆ1 hour ago

Yusuf Pathan: ಜಮೀನು ಒತ್ತುವರಿ ಆರೋಪ; ನೂತನ ಸಂಸದ ಯೂಸುಫ್ ಪಠಾಣ್​ಗೆ ನೋಟಿಸ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌