Cat Care| ಟ್ವೀಟ್‌ ಮನವಿಗೆ ಸ್ಪಂದಿಸಿದ ಅಗ್ನಿಶಾಮಕ ದಳ, ಕಟ್ಟಡದ ಮೇಲೆ ಸಿಲುಕಿದ್ದ ಬೆಕ್ಕಿನ ರಕ್ಷಣೆ - Vistara News

ಕರ್ನಾಟಕ

Cat Care| ಟ್ವೀಟ್‌ ಮನವಿಗೆ ಸ್ಪಂದಿಸಿದ ಅಗ್ನಿಶಾಮಕ ದಳ, ಕಟ್ಟಡದ ಮೇಲೆ ಸಿಲುಕಿದ್ದ ಬೆಕ್ಕಿನ ರಕ್ಷಣೆ

ಕಟ್ಟಡದ ಮೇಲೆ ಸಿಕ್ಕಿಹಾಕಿಕೊಂಡ ಒಂದು ಬೆಕ್ಕನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. ಅಚ್ಚರಿ ಎಂದರೆ, ಅವರಿಗೆ ಬೆಕ್ಕಿನ ಆರ್ತನಾದ ಕೇಳಿದ್ದು ಒಂದು ಟ್ವೀಟ್‌ನ ಮೂಲಕ. ಅದನ್ನೇ ಆಧರಿಸಿ ನಡೆಸಿದ ಕಾರ್ಯಾಚರಣೆಗೆ ಮೆಚ್ಚುಗೆ ಮಹಾಪೂರ ಹರಿದುಬಂದಿದೆ.

VISTARANEWS.COM


on

cat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಅಗ್ನಿಶಾಮಕ ದಳ ಅಂದರೆ ಬೆಂಕಿ ಆರಿಸುವ ಕೆಲಸ ಮಾತ್ರ ಮಾಡೋದಲ್ಲ. ಯಾರಿಗೆ ಏನು ತೊಂದರೆ ಆದರೂ, ಯಾರು ಕಷ್ಟದಲ್ಲಿ ಸಿಲುಕಿದರೂ ಬಂದು ರಕ್ಷಣೆ ಮಾಡುತ್ತಾರೆ ಅದರ ಸಿಬ್ಬಂದಿ. ಈ ಬಾರಿ ಅವರು ರಕ್ಷಣೆಗೆ ಮುಂದಾಗಿದ್ದು ಮನುಷ್ಯರನ್ನಲ್ಲ, ಮುಂದೇನು ಎಂದು ದಿಕ್ಕು ತೋಚದೆ ಕುಳಿತಿದ್ದ ಒಂದು ಬೆಕ್ಕನ್ನು.

ಅಚ್ಚರಿ ಎಂದರೆ ನನ್ನನ್ನು ರಕ್ಷಿಸಿ ಎಂದು ಬೆಕ್ಕು ಕೂಗಿ ಕರೆದದ್ದೂ ಅಲ್ಲ. ಬೆಕ್ಕು ಕಷ್ಟದಲ್ಲಿದೆ ಅಂತ ನೋಡಿದವರೂ ಕರೆ ಮಾಡಿದ್ದಲ್ಲ. ಬೆಕ್ಕಿನ ಮಾಲೀಕರೂ ೧೦೧ ನಂಬರ್‌ಗೆ ಕರೆ ಮಾಡಿ ನಮ್ಮ ಬೆಕ್ಕು ಈ ತರ ಸಿಲುಕಿಕೊಂಡಿದೆ. ದಯವಿಟ್ಟು ಕಾಪಾಡಿ ಎಂದು ಕೇಳಿಕೊಂಡಿಲ್ಲ.

ಯಾರೋ ಸ್ಥಳೀಯರು ಟ್ವಿಟರ್‌ನಲ್ಲಿ ತಮ್ಮ ಬೆಕ್ಕು ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಗ್ನಿ ಶಾಮಕದಳದವರು ಕೂಡಲೇ ಧಾವಿಸಿ ಮೂಕ ಪ್ರಾಣಿಯನ್ನು ರಕ್ಷಣೆ ಮಾಡಿದರು.

ಕಟ್ಟಡದ ಮೇಲಿತ್ತು ಬೆಕ್ಕು
ಬೆಕ್ಕಿನ ರಕ್ಷಣೆಯ ಕಾರ್ಯಾಚರಣೆ

ಈ ಘಟನೆ ನಡೆದಿರುವುದು ಬೆಂಗಳೂರಿನ ಬಾಣಸವಾಡಿಯ ಕಲ್ಯಾಣ ನಗರದಲ್ಲಿ. ಇಲ್ಲಿನ ರೆಸಿಡೆನ್ಶಿಯಲ್‌ ಕಟ್ಟಡದ ತುತ್ತ ತುದಿಯಲ್ಲಿ ಬೆಕ್ಕು ಸಿಲುಕಿತ್ತು. ಅಲ್ಲಿಂದ ಕೆಳಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ರಾತ್ರಿಯ ನೀರವತೆಯಲ್ಲಿ ಬೆಕ್ಕು ಅಳುತ್ತಿರುವುದನ್ನು ಯಾರೋ ಕೇಳಿಸಿಕೊಂಡಿದ್ದರು. ಬಳಿಕ ಅದು ಎಲ್ಲರಿಗೂ ಗೊತ್ತಾಯಿತು. ಆದರೆ, ರಕ್ಷಿಸುವ ದಾರಿ ಯಾರಿಗೂ ಕಾಣಲಿಲ್ಲ. ಅಥವಾ ದಾರಿ ಗೊತ್ತಿದ್ದವರು ಯಾರೂ ಈ ಬೆಕ್ಕಿನ ಬಗ್ಗೆ ಮಾನವೀಯವಾಗಿ ಯೋಚನೆ ಮಾಡಲಿಲ್ಲ.

ಈ ನಡುವೆ, ಸ್ಥಳೀಯರೊಬ್ಬರು ನಮ್ಮ ಮನೆ ಪಕ್ಕದಲ್ಲಿ ಈ ರೀತಿ ಬೆಕ್ಕೊಂದು ಕಟ್ಟಡದ ಮೇಲೆ ಸಿಕ್ಕಿಬಿದ್ದಿದೆ ಎಂದು ಟ್ವೀಟ್‌ ಮಾಡಿದ್ದರು. ಇದನ್ನು ಗಮನಿಸಿದ ಅಗ್ನಿಶಾಮಕ ದಳದ ಮಾನವೀಯ ಸಿಬ್ಬಂದಿಯೊಬ್ಬರು ತಕ್ಷಣವೇ ತಮ್ಮ ಇತರ ಸಿಬ್ಬಂದಿಗೆ ವಿಷಯ ತಿಳಿಸಿದರು. ಎಲ್ಲರೂ ಮಾತನಾಡಿಕೊಂಡು ಬೆಕ್ಕನ್ನು ರಕ್ಷಿಸಲು ಮುಂದಾದರು. ಹೀಗೆ ಅವರೆಲ್ಲರ ಮಾನವೀಯ ನಿಲುವಿನಿಂದ ಅಗ್ನಿಶಾಮಕದಳದ ವಾಹನವೇ ರೆಸಿಡೆನ್ಶಿಯಲ್‌ ಕಟ್ಟಡದ ಮುಂದೆ ಬಂದು ನಿಂತಿತು.

ನೋಡಿದರೆ ಬೆಕ್ಕು ತುಂಬ ಎತ್ತರದಲ್ಲಿ ಸಿಕ್ಕಿಹಾಕಿಕೊಂಡಿತು. ಆದರೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಿಬ್ಬಂದಿ ತುಂಬಾ ಸಾಹಸ ಮಾಡಿ ವಾಹನ ಬಳಸಿ, ಕೋಲುಗಳನ್ನು ಬಳಸಿ ಬೆಕ್ಕನ್ನು ಹೇಗೋ ಇಳಿಸಿದರು. ಎದುರಾದ ಸಂಕಷ್ಟದಿಂದ ಭಯಗೊಂಡಿದ್ದ, ಆಹಾರವಿಲ್ಲದೆ ಬಸವಳಿದಿದ್ದ ಬೆಕ್ಕು ಬದುಕಿದೆಯಾ ಬಡಜೀವ ಎಂಬಂತೆ ಭಯದಿಂದಲೇ ಕೆಳಗೆ ಇಳಿದುಬಂತು. ಅಗ್ನಿಶಾಮಕ ದಳದ ಸಿಬ್ಬಂದಿ ತಾವೊಂದು ದೊಡ್ಡ ಕೆಲಸ ಮಾಡಿದಂತೆ ತೃಪ್ತಿಯ ನಗು ಬೀರಿದರು. ಅಗ್ನಿಶಾಮಕ ದಳದ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಶಹಭಾಸ್‌ ಹೇಳಿದ್ದಾರೆ. ಹಿರಿಯ ಅಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ |Viral Video | ನಂಗೂ ಮಸಾಜ್‌ ಬೇಕು ಎಂದು ಮುಖ ಕೊಟ್ಟ ಬೆಕ್ಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

VISTARANEWS.COM


on

ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‌‌ ಅಭ್ಯರ್ಥಿ ಸಮರ್ಥ್​ ಮಲ್ಲಿಕಾರ್ಜುನ್‌‌‌‌‌‌ ವಿಜಯ ಪತಾಕೆ ಹಾರಿಸಿದ್ದಾರೆ. ದಿವಂಗತ ಶಾಮನೂರು ಶಿವಶಂಕರಪ್ಪ ಮೊಮ್ಮಗ ಹಾಗೂ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್‌ ಉಪಸಮರದಲ್ಲಿ ಗೆದ್ದು ಬೀಗಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಏ.9ರಂದು ಉಪಚುನಾವಣೆ ನಡೆದಿತ್ತು.

Continue Reading

Latest

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

VISTARANEWS.COM


on

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌‌ ಮೇಟಿ ಗೆಲುವು ಸಾಧಿಸಿದ್ದಾರೆ. 21,866 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಮಠ ವಿರುದ್ಧ ಕಾಂಗ್ರೆಸ್‌‌ನ ಉಮೇಶ್‌ ಮೇಟಿ ಗೆಲುವು ಪಡೆದಿದ್ದಾರೆ. ಉಮೇಶ್‌ ಮೇಟಿ 97,941 ಮತಗಳನ್ನು ಪಡೆದಿದ್ರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದುಕೊಂಡಿದ್ದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಉಮೇಶ್‌‌ ಮೇಟಿಯವರ ತಂದೆ ಹೆಚ್‌.ವೈ.ಮೇಟಿ ಯವರ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಪಕ್ಷ ಯಶಸ್ವಿಯಾಗಿದೆ.

Continue Reading

Latest

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

VISTARANEWS.COM


on

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಗಂಡು ಮಗು ಜನಿಸಿದ ವಿಚಾರವನ್ನು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಶೇರ್‌ ಮಾಡಿದ್ದಾರೆ. ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ಗಂಡು ಮಗುವನ್ನು ಸ್ವಾಗತಿಸಿದೆ.

Continue Reading

Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

VISTARANEWS.COM


on

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಇಂದಿನಿಂದ (ಮೇ.1) ರಿಂದ ಹೊಸ ದರ ಅನ್ವಯವಾಗಲಿದ್ದು, ಹೋಟೆಲ್‌, ರೆಸ್ಟೋರೆಂಟ್‌, ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 993 ರೂಪಾಯಿ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ 2161 ರೂ ಇದ್ದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗ 3154 ರೂಪಾಯಿಗೆ ಏರಿದೆ. ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಹೆಚ್ಚಳವಾಗಿರುವುದು ವ್ಯಾಪಾರ ವಲಯದಲ್ಲಿ ಆತಂಕ ಮೂಡಿಸಿದೆ. ಈ ಬೆಲೆ ಏರಿಕೆಯಿಂದಾಗಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮಿಗಳಿಗೆ ಹೆಚ್ಚುವರಿ ವೆಚ್ಚದ ಒತ್ತಡ ಎದುರಾಗಲಿದೆ. ಈಗಾಗಲೇ ಹೆಚ್ಚುತ್ತಿರುವ ಇತರೆ ಖರ್ಚುಗಳ ನಡುವೆ ಈ ಏರಿಕೆ ಮತ್ತಷ್ಟು ಭಾರವಾಗಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆಯಿಂದ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದೆ.

Continue Reading
Advertisement
Latest7 minutes ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

Latest20 hours ago

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

Latest21 hours ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest21 hours ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest22 hours ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest24 hours ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

Rakshit Shetty Richard Anthony Produce By Hombale
ಅವಿಭಾಗೀಕೃತ1 day ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest2 days ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest3 days ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest3 days ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌