Suicide Attempt: ಪೊಲೀಸ್ ‌ಠಾಣೆ ಮೇಲೇರಿ ಮಹಿಳೆ ಆತ್ಮಹತ್ಯೆ ಯತ್ನ - Vistara News

ಕ್ರೈಂ

Suicide Attempt: ಪೊಲೀಸ್ ‌ಠಾಣೆ ಮೇಲೇರಿ ಮಹಿಳೆ ಆತ್ಮಹತ್ಯೆ ಯತ್ನ

ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಶಿಲ್ಪ ವಿರುದ್ಧ ಸಮನ್ಸ್ ಜಾರಿ‌ ಮಾಡಲಾಗಿತ್ತು. ಕೋರ್ಟ್ ಸಮನ್ಸ್ ಹಿಡಿದು ಠಾಣೆಗೆ ಬಂದ ಶಿಲ್ಪ ಇದ್ದಕ್ಕಿದ್ದಂತೆ ಚಾವಣಿ ಏರಿ ಸಾಯಲು ಮುಂದಾಗಿದ್ದಾರೆ.

VISTARANEWS.COM


on

Suicide Attempt
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ಪೊಲೀಸ್ ‌ಠಾಣೆಯ ಮೇಲೇರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಪೊಲೀಸ್‌ ಠಾಣೆಯ ಚಾವಣಿ ಮೇಲೆ ಏರಿ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಹಳೇ ಮೂಡಿಗೆರೆ ಗ್ರಾಮದ ಶಿಲ್ಪ ಆತ್ಮಹತ್ಯೆಗೆ ಯತ್ನಿಸಿದ‌ ಮಹಿಳೆ. ಶಿಲ್ಪ‌ ವಿರುದ್ಧ 2022ರಲ್ಲಿ ಮೂಡಿಗೆರೆ ‌ಠಾಣೆಯಲ್ಲಿ‌ ದೂರು ದಾಖಲಾಗಿತ್ತು. ಶಿಲ್ಪ‌ ಮತ್ತು ಅಕ್ಕನ ನಡುವೆ ಗಲಾಟೆ ನಡೆದಿದ್ದು‌, ಠಾಣೆಯಲ್ಲಿ ಮಹಿಳಾ ಪೊಲೀಸ್ ‌ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು.

ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಶಿಲ್ಪ ವಿರುದ್ಧ ಸಮನ್ಸ್ ಜಾರಿ‌ ಮಾಡಲಾಗಿತ್ತು. ಕೋರ್ಟ್ ಸಮನ್ಸ್ ಹಿಡಿದು ಠಾಣೆಗೆ ಬಂದ ಶಿಲ್ಪ ಇದ್ದಕ್ಕಿದ್ದಂತೆ ಚಾವಣಿ ಏರಿ ಸಾಯಲು ಮುಂದಾಗಿದ್ದಾರೆ. ಕೂಡಲೇ ಮಹಿಳಾ ಪೊಲೀಸರು ಅವರನ್ನು ಹಿಡಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.

ವಾಹನ ತಪಾಸಣೆ ವೇಳೆಯೇ ಧಗಧಗಿಸಿದ ಕಾರು

ಬಾಗಲಕೋಟೆ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ನಿಲ್ಲಿಸಿದಾಗ ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.

ಬಾಗಲಕೋಟೆಯಿಂದ ಕಮತಗಿ ಮಾರ್ಗವಾಗಿ ಧನ್ನೂರ ಗ್ರಾಮದ ಕಡೆ ಹೊರಟಿದ್ದ ಕೆಎ 22 ಎನ್-3355 ವಿಸ್ತಾ ಕಾರನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಲ್ಲಿಸಿ ವಾಹನ ಚೆಕ್ ಮಾಡುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಾರು ಧಗಧಗಿಸಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ತಪಾಸಣೆ ಸಂದರ್ಭ ಚಾಲಕ ಕೆಳಗಿಳಿದಿದ್ದರಿಂದ ಅಪಾಯವಾಗಿಲ್ಲ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road accident : ತಿರುವಿನಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Physical Abuse : ತಪಾಸಣೆಗೆ ಬಂದ ರೋಗಿಗಳಿಬ್ಬರನ್ನು ಅತ್ಯಾಚಾರ ಮಾಡಿದ ಸರ್ಕಾರಿ ವೈದ್ಯ; ಜೂನಿಯರ್​ ವೈದ್ಯರ ಪೆಟ್ಟು ತಿಂದು ಐಸಿಯು ಸೇರಿದ ಆರೋಪಿ

Physical Abuse : ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ತಿಳಿಸಿದ್ದಾರೆ. ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

VISTARANEWS.COM


on

Physical Abuse
Koo

ಕಟಕ್: ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ವ್ಯಕ್ತಗೊಳ್ಳುತ್ತಿರುವ ನಡುವೆಯೇ ಒಡಿಶಾದ ಕಟಕ್​​ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಬ್ಬರಿಗೆ ಅಲ್ಲಿನ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ (Physical Abuse) ಪ್ರಕರಣ ನಡೆದಿದೆ. ಆದರೆ, ವಿಷಯ ತಿಳಿದ ತಕ್ಷಣವೇ ಜೂನಿಯರ್ ವೈದ್ಯರುಗಳು ಆತನಿಗೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಆತ ಐಸಿಯು ಸೇರಿದ್ದಾನೆ.

ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ತಾಯಿ ಮತ್ತು ಚಿಕ್ಕಮ್ಮ ಶುಕ್ರವಾರ ತಪಾಸಣೆಗಾಗಿ ಹೃದ್ರೋಗ ವಿಭಾಗಕ್ಕೆ ಹೋಗಿದ್ದಾಗ ಆರೋಪಿ ವೈದ್ಯ ಕೃತ್ಯ ಎಸಗಿದ್ದಾನೆ. ಇಬ್ಬರು ಮಹಿಳೆಯರಿಗೆ ಎಕೋಕಾರ್ಡಿಯೋಗ್ರಾಮ್​ಗೆ ಸಲಹೆ ನೀಡಲಾಗಿತ್ತು ಕಾರ್ಡಿಯಾಲಜಿ ಎಂಡಿ ವಿದ್ಯಾರ್ಥಿಯಾಗಿರುವ ಪುರುಷ ವೈದ್ಯ ಇಸಿಜಿ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. .

ವಿಷಯ ತಿಳಿದ ಕಿರಿಯ ವೈದ್ಯರ ಸಂಘದ ಸದಸ್ಯರು ಆರೋಪಿ ವೈದ್ಯನಿಗೆ ಚೆನ್ನಾತಿ ಥಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದರು. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಧ್ಯಪ್ರವೇಶಿಸಿ ಹಾಗೆ ಮಾಡಲು ಮನವೊಲಿಸಿದ ನಂತರ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ತಿಳಿಸಿದ್ದಾರೆ. ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಆರೋಪಿಯನ್ನು ರೋಗಿಗಳ ಕೆಲವು ಸಂಬಂಧಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಮಿಶ್ರಾ ಹೇಳಿದರು.

ಸಿಆರ್ಪಿಸಿಯ ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆಗಸ್ಟ್ 11ರಂದು ಈ ಘಟನೆ ನಡೆದಿದೆ. ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ, ನಾವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಹೆಚ್ಚುವರಿ ಡಿಸಿಪಿ ಅನಿಲ್ ಮಿಶ್ರಾ ಹೇಳಿದ್ದಾರೆ.

ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

ಧಾರವಾಡ: ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Hindenburg Report : ಸೆಬಿ ಅಧ್ಯಕ್ಷರ ವಜಾಗೆ ಆಗ್ರಹಿಸಿದ ಕಾಂಗ್ರೆಸ್​ನಿಂದ ಆಗಸ್ಟ್​​ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ.

ಸದ್ಯ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸದ್ಯ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Continue Reading

ಧಾರವಾಡ

Physical Abuse : ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

Physical Abuse: ಧಾರವಾಡದಲ್ಲಿ ಅಪ್ರಾಪ್ತೆಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದುಕೊಂಡ ಹೋದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜತೆಗೆ ಆಕೆಯೊಂದಿಗೆ ಇದ್ದ ವಿಡಿಯೊ ಮಾಡಿಕೊಂಡು ಎಲ್ಲೆಡೆ ಹರಿಬಿಟ್ಟಿದ್ದಾನೆ. ಇತ್ತ ಬೆಂಗಳೂರಿನಲ್ಲಿ ಅನುಮಾನಸ್ಪಾದ ರೀತಿಯಲ್ಲಿ ಗೃಹಿಣಿಯೊಬ್ಬಳು ಮೃತಪಟ್ಟಿದ್ದಾಳೆ.

VISTARANEWS.COM


on

By

Physical abuse
Koo

ಧಾರವಾಡ: ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ.

ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ.

ಸದ್ಯ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸದ್ಯ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಕಂಡವರ ಹೆಂಡ್ತಿ ಮೇಲೆ ವ್ಯಾಮೋಹ; ಸುಪಾರಿ ಕೊಟ್ಟು ಚಟ್ಟ ಕಟ್ಟಿದ ಕಿರಾತಕ

ಪ್ರೀತಿಸಿ ಮದುವೆಯಾದ ಯುವತಿ ಸಾವು

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಮೃತಪಟ್ಟಿದ್ದಾಲೇ. ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ‌ ಕೊಲೆಯಾಗಿದೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಉತ್ತನಹಳ್ಳಿ ಬಳಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಮೃತ ದುರ್ದೈವಿ.

ಕಳೆದ ಎರಡು ವರ್ಷಗಳಿಂದ ದುರ್ಗಮ್ಮ ಮಾರುತಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಪೋಷಕರ ವಿರೋಧದ ನಡುವೆ ಮದುವೆಯಾಗಿ ನಂತರ ಎರಡು ಕುಟುಂಬಗಳು ಒಂದಾಗಿದ್ದರು. ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿ ಚಿಕ್ಕಜಾಲದ ಉತ್ತನಹಳ್ಳಿ ಬಳಿ ಗಾರೆ ಕೆಲಸ‌ ಮಾಡಿಕೊಂಡು ಜೀವನ ಮಾಡುತ್ತಿದ್ದರು.

ಆದರೆ ಇತ್ತೀಚಿಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಮಾರುತಿ ಹೊಡೆದು ಕಿರುಕುಳ ನೀಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆಯೂ ಗಲಾಟೆ‌ ಮಾಡಿಕೊಂಡು ದುರ್ಗಮ್ಮ ಊರಿಗೆ ಹೋಗಿದ್ದಳು. ಆದರೆ 15 ದಿ‌‌ನಗಳ ಹಿಂದೆ ಪತ್ನಿಯ ಮನವೊಲಿಸಿ ಮಾರುತಿ ಬೆಂಗಳೂರಿಗೆ ಕರೆತಂದಿದ್ದ. ಇದೀಗ ದುರ್ಗಮ್ಮ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Murder Case : ಕಂಡವರ ಹೆಂಡ್ತಿ ಮೇಲೆ ವ್ಯಾಮೋಹ; ಸುಪಾರಿ ಕೊಟ್ಟು ಚಟ್ಟ ಕಟ್ಟಿದ ಕಿರಾತಕ

Murder Case : ಪರಸ್ತ್ರೀ ಮೇಲೆ ಕಣ್ಣು ಹಾಕಿದ್ದ ಕಿರಾತಕನೊಬ್ಬ, ಆಕೆಯನ್ನು ಒಲಿಸಿಕೊಳ್ಳಲು ಸುಪಾರಿ ಕೊಟ್ಟು ಮಹಿಳೆಯ ಗಂಡನನ್ನೇ ಕೊಲ್ಲಿಸಿದ್ದಾನೆ. ಸುಪಾರಿ ಪಡೆದವರು ಅರೆಸ್ಟ್‌ ಆಗಿದ್ದು, ಮುಖ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

VISTARANEWS.COM


on

By

Murder Case
ಕೊಲೆ ಆರೋಪಿ ನಾಗಪ್ಪ ಹಾಗೂ ಹತ್ಯೆಯಾದ ಕಾಡಪ್ಪ
Koo

ಬೆಳಗಾವಿ: ಪರಸ್ತ್ರೀಯನ್ನು ಒಲಿಸಿಕೊಳ್ಳಲು ಕಿರಾತಕನೊಬ್ಬ ಆಕೆಯ ಗಂಡನಿಗೆ ಚಟ್ಟ ಕಟ್ಟಿದ್ದಾನೆ. ಪಾರ್ಟಿ ಮಾಡೋಣ ಬಾ ಎಂದು ಕರೆದಿದ್ದಾನೆ. ಬಳಿಕ ನಶೆಯಲ್ಲಿದ್ದಾಗಲೇ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ (Murder Case) ಮಾಡಿ ಪರಾರಿ ಆಗಿದ್ದಾನೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕಾಡಪ್ಪ ಶಿಗರಸಂಗಿ (42) ಕೊಲೆಯಾದ ದುರ್ದೈವಿ. ನಾಗಪ್ಪ ರೈನಾಪುರ ಎಂಬಾತ ಕೊಲ್ಲಲ್ಲು ಸುಪಾರಿ ಕೊಟ್ಟವನು. ಕೊಲೆಯಾದ ಕಾಡಪ್ಪನ ಪತ್ನಿಯ ಮೇಲೆ ಕಣ್ಣು ಹಾಕಿದ ನಾಗಪ್ಪ ಆಕೆಯನ್ನು ವ್ಯಾಮೋಹಿಸಿದ್ದ. ಹೀಗಾಗಿ ಕಾಡಪ್ಪನನ್ನು ಕೊಲ್ಲಲು 2.5 ಲಕ್ಷ ರೂ. ಸುಪಾರಿ ಕೊಟ್ಟಿದ್ದ.

ಕೊಲೆ ಮಾಡಲು ವ್ಯವಸ್ಥಿತ ಪ್ರೀ ಪ್ಲಾನ್ ಮಾಡಿದ್ದ ನಾಗಪ್ಪ, ಸುಪಾರಿ ಕೊಟ್ಟ ಆರೋಪಿ ಲಕ್ಷ್ಮಣ ಜತೆ ಕಡೆಯದಾಗಿ ಬೆನಕಟ್ಟಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಕಾಣಿಸಿಕೊಂಡಿದ್ದ. ಇವರಿಬ್ಬರ ಚಲನವಲನ ಅಲ್ಲಿನ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಮೊದಲು ಲಕ್ಷ್ಮಣನನ್ನು ಸೆರೆಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆಯ ಸಂಪೂರ್ಣ ಸಂಚು ಬಯಲಾಗಿದೆ. ಸದ್ಯ ಐವರು ಆರೋಪಿಗಳ ಪೈಕಿ ಲಕ್ಷ್ಮಣ ವಿಠ್ಠಲ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ನಾಗಪ್ಪ, ಶಿವಾನಂದ ಬಸವರಾಜ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

ಚೂರಿ ಹಿಡಿದು ಮ್ಯಾನೇಜರ್‌ನನ್ನು ಅಟ್ಟಾಡಿಸಿದ ಸೆಕ್ಯೂರಿಟಿ ಗಾರ್ಡ್‌!

ಸೆಕ್ಯೂರಿಟಿ ಗಾರ್ಡ್‌ನಿಂದ ಶೋರೂಂ ಕ್ಲಸ್ಟರ್ ಮ್ಯಾನೇಜರ್‌ ಚೂರಿಯಿಂದ ಇರಿದು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಚೂರಿಯಿಂದ ಇರಿದ ದೃಶ್ಯ ವಿಸ್ತಾರ ನ್ಯೂಶ್‌ಗೆ ಲಭ್ಯವಾಗಿದೆ. ಉಡುಪಿಯ ಹರ್ಷ ಶೋರೂಂನಲ್ಲಿ ಘಟನೆ ನಡೆದಿದೆ.

ಹರ್ಷ ಶೋರೂಂನಲ್ಲಿ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ ಹಲ್ಲೆ ನಡೆಸಿದವನು. ಪ್ರಸಾದ್‌ ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ರೋನ್ಸನ್‌ ವಾರ್ನಿಂಗ್ ನೀಡಿದ್ದರು. ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ಕೇಳಿಕೊಂಡಿದ್ದ. ಮರುದಿನ ಮೀಟಿಂಗ್‌ನಲ್ಲಿ ಚರ್ಚಿಸುವುದಾಗಿ ರೋನ್ಸನ್‌ ಹೇಳಿದ್ದರು.

ಆಗಸ್ಟ್ 10 ರ ಸಂಜೆ 7.30ರಂದು ಮಾತುಕತೆ ಬಳಿಕ ಗ್ರೌಂಡ್ ಫ್ಲೋರ್‌ನಲ್ಲಿ ಕಾದು ಕುಳಿತಿದ್ದ ಆರೋಪಿ ಪ್ರಸಾದ್ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಬರುತ್ತಿದ್ದಂತೆ ಚೂರಿಯಲ್ಲಿ ಇರಿದಿದ್ದ. ಕೂಡಲೇ ಈತನಿಂದ ತಪ್ಪಿಸಿಕೊಂಡು ರೋನ್ಸನ್‌ ಓಡಿದ್ದರು. ಆದರೂ ಬಿಡದೇ ಪ್ರಸಾದ್‌ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನಿಸಿದ್ದಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Kolkata Doctor Murder Case: ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

Kolkata Doctor Murder Case: ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಗಿನ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ.

VISTARANEWS.COM


on

kolkata doctor murder case
Koo

ಕೋಲ್ಕತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣವನ್ನು ಹೈಕೋರ್ಟ್‌ ಸಿಬಿಐ(CBI Probe) ತನಿಖೆಗೆ ಆದೇಶಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೋಲ್ಕತಾ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ.

ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಗಿನ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಘೋಷ್ ಅವರು ರಾಜೀನಾಮೆ ನೀಡಿದ ಗಂಟೆಗಳ ನಂತರ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಏಕೆ ನೇಮಕಗೊಂಡರು ಎಂದು ಪೀಠವು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

Continue Reading
Advertisement
Ashwini Ponnappa
ಪ್ರಮುಖ ಸುದ್ದಿ2 hours ago

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Sowmya Reddy
ರಾಜಕೀಯ2 hours ago

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Cricket News
ಪ್ರಮುಖ ಸುದ್ದಿ2 hours ago

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Koppala News
ಕೊಪ್ಪಳ2 hours ago

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News
ಕರ್ನಾಟಕ3 hours ago

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Kannada New Movie
ಬೆಂಗಳೂರು3 hours ago

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Independence Day 2024
ದೇಶ3 hours ago

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Vinesh Phogat
ಪ್ರಮುಖ ಸುದ್ದಿ3 hours ago

Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

Cauvery Water Dispute
ಕರ್ನಾಟಕ3 hours ago

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Sheikh Hasina
ಪ್ರಮುಖ ಸುದ್ದಿ4 hours ago

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌