Cyber crime | ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಮಹಿಳೆಯರ ಜತೆ ಅಸಭ್ಯ ವರ್ತನೆ - Vistara News

ಕರ್ನಾಟಕ

Cyber crime | ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಮಹಿಳೆಯರ ಜತೆ ಅಸಭ್ಯ ವರ್ತನೆ

ಖ್ಯಾತ ವೈದ್ಯರಾಗಿರುವ ಡಾ. ಪದ್ಮಿನಿ ಪ್ರಸಾದ್‌ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಸೈಬರ್‌ ಕ್ರೈಮ್‌ ದೂರು ದಾಖಲಾಗಿದೆ.

VISTARANEWS.COM


on

cyber crime Fake account love matter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖ್ಯಾತ ಮಹಿಳಾ ವೈದ್ಯರಾಗಿರುವ ಪದ್ಮಿನಿ ಪ್ರಸಾದ್‌ ಅವರ ಹೆಸರಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ. ಡಾ. ಪದ್ಮಿನಿ ಪ್ರಸಾದ್‌ ಅವರೇ ಈ ಬಗ್ಗೆ ಉತ್ತರ ವಿಭಾಗ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪದ್ಮಿನಿ ಪ್ರಸಾದ್‌ ಅವರು ಖ್ಯಾತ ಮಹಿಳಾ ಮತ್ತು ಪ್ರಸೂತಿ ತಜ್ಞರು. ಗರ್ಭಧಾರಣೆ, ಸಂತಾನ ಸಮಸ್ಯೆ, ಕೃತಕ ಗರ್ಭಧಾರಣೆಯ ಆಧುನಿಕ ವಿಧಾನಗಳ ಬಗ್ಗೆ ಸಾಕಷ್ಟು ಜನರರಲ್ಲಿ ಅರಿವು ಮೂಡಿಸಿದವರು. ಲೈಂಗಿಕ ಸಮಸ್ಯೆಗಳಿಗೆ ಮುಕ್ತವಾದ ಸಲಹೆಗಳನ್ನು ನೀಡುವುದಕ್ಕೆ ಪ್ರಸಿದ್ಧರು.

ಡಾ. ಪದ್ಮಿನಿ ಪ್ರಸಾದ್‌

ಯಾರೋ ಕಿಡಿಗೇಡಿಗಳು ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿದ್ದಲ್ಲದೆ, ಲೈಂಗಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವುದು ಡಾ. ಪದ್ಮಿನಿ ಪ್ರಸಾದ್‌ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಅವರು ದೂರು ನೀಡಿದ್ದಾರೆ.

ಈ ಹಿಂದೆಯೂ ಇದೇ ರೀತಿ ಆಗಿತ್ತು
೨೦೨೧ರ ಜನವರಿಯಲ್ಲೂ ಪದ್ಮಿನಿ ಪ್ರಸಾದ್‌ ಅವರು ಇದೇ ರೀತಿ ದೂರು ನೀಡಿದ್ದರು. ಆಗಲೂ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ ಮಾಡಿದ್ದಲ್ಲದೆ, ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಲಾಗಿತ್ತು.

ಡಾ. ಪದ್ಮಿನಿ ಅವರ ನೈಜ ಖಾತೆಯಲ್ಲಿನ ಫೋಟೊಗಳನ್ನು ಎತ್ತಿಕೊಂಡ ಖದೀಮರು, ನಕಲಿ ಖಾತೆ ಸೃಷ್ಟಿ ಮಾಡಿದ್ದಲ್ಲದೆ ಸೈಕಾಲಜಿಸ್ಟ್‌ ಎಂದು ಬರೆದುಕೊಂಡಿದ್ದರು. ನಕಲಿ ಖಾತೆಯಿಂದ ನೂರಾರು ಮಹಿಳೆಯರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ರಿಕ್ವೆಸ್ಟ್‌ ಸ್ವೀಕರಿಸಿದವರ ಜತೆ ಅಸಭ್ಯವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Self Harming : ಆನೇಕಲ್ ಸರ್ಕಾರಿ ಆಸ್ಪತ್ರೆ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

Self Harming : ಆನೇಕಲ್‌ನಲ್ಲಿ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Self Harming
Koo

ಆನೇಕಲ್: ಸರ್ಕಾರಿ ಆಸ್ಪತ್ರೆಯ ಮಹಡಿ ಮೇಲಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಜಿಗಣಿ ನಿವಾಸಿ ಮುನಿಯಲ್ಲಪ್ಪ (46) ಮೃತ ದುರ್ದೈವಿ,.

ಮುನಿಯಲ್ಲಪ್ಪ ಅಸ್ತಮಾ, ಹೊಟ್ಟೆನೋವು, ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ ಜು. 16ರಂದು ಸರ್ಕಾರಿ ಆಸ್ಪತ್ರೆಗೆ ಹೋದವರು ದಾಖಲಾಗದ್ದರು. ಆದರೆ ಅಡ್ಮಿಟ್ ಆದ ಒಂದೇ ದಿನಕ್ಕೆ ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಇದಾದ ಬಳಿಕ ಅನಾರೋಗ್ಯ ಮತ್ತಷ್ಟು ಬಿಗಾಡಯಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ ಆಸ್ಪತ್ರೆಗೆ ಮುನಿಯಲ್ಲಪ್ಪ ಬಂದಿದ್ದರು.

ಈ ವೇಳೆ ಆಸ್ಪತ್ರೆಯ ಎರಡನೇ ಮಹಡಿಗೆ ಬಂದು ಏಕಾಏಕಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

ತುಮಕೂರು: ಗಂಡ ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಪರ ಪುರುಷನೊಂದಿಗೆ (Illicit relationship) ಓಡಿ ಹೋಗಿದ್ದಾಳೆ. ಮರ್ಯಾದೆಗೆ ಅಂಜಿದ ಪತಿ ವಿಷ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ದೇವರಾಜ್ ಮೃತ ದುರ್ದೈವಿ. ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ.

ದೇವರಾಜ್‌ ಹಾಗೂ ಮಾಧವಿ ಇಬ್ಬರು ಪ್ರೀತಿಸಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪರ ಪುರುಷನ ಮೇಲೆ ವ್ಯಾಮೋಹಕ್ಕೆ ಸಿಲುಕಿದ ಮಾಧವಿ, ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬಾತನೊಟ್ಟಿಗೆ ಪರಾರಿ ಆಗಿದ್ದಾಳೆ.

ಪರ ಪುರುಷನೊಂದಿಗೆ ಪತ್ನಿ ಓಡಿ ಹೋದ ಸುದ್ದಿ ತಿಳಿದ ದೇವರಾಜ್‌ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ-ಎಸ್ಪಿಗೆ ನನ್ನ ಸಾವಿಗೆ ನ್ಯಾಯಕೊಡಿಸಿ ಎಂದು ದೇವರಾಜ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Road Accident : ಪಾದಚಾರಿ ಬಲಿ ಪಡೆದು ಎಸ್ಕೇಪ್‌ ಆದ ಬಸ್‌ ಚಾಲಕ; ಬಾಲಕಿಗೆ ಗುದ್ದಿ ಪ್ರಾಣ ಕಸಿದ ಲಾರಿ

ಮಾಧವಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೆ. ನಮಗೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ ಪ್ರತಿ ನಿತ್ಯ ಅಂಗಡಿಯ ಬಳಿ ಬರುತ್ತಿದ್ದ ಆನಂದ್ ಕುಮಾರ್, ಈ ವೇಳೆ ಮಾಧವಿಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಪರಾರಿ ಆಗಿದ್ದಾನೆ ಎಂದು ಬರೆದಿದ್ದಾರೆ.

ಪತ್ನಿ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ದೇವರಾಜ್, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟು, ತನಗೆ ಆನಂದ್‌ನಿಂದ ಜೀವ ಬೆದರಿಕೆ ಹಾಕಿದ್ದ ಎಂದು ಉಲ್ಲೇಖಿಸಿದ್ದಾರೆ. ಇಬ್ಬರಿಗೂ ತಕ್ಕ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಾಧವಿ, ಆನಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪ ಮೇಲೆ ದೂರು ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಮಾಧವಿ, ಆನಂದ್ ತಲೆಮರೆಸಿಕೊಂಡಿದ್ದಾರೆ. ಇತ್ತ ತಾಯಿ ಇಲ್ಲದೇ ತಂದೆಯನ್ನು ಕೆಳದುಕೊಂಡ ಇಬ್ಬರು ಹೆಣ್ಮಕ್ಕಳು ತಬ್ಬಲಿಗಳಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Assembly Session: ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಬ್ಬರ; ತಲೆ ನಿಯಂತ್ರಣದಲ್ಲಿ ಇಲ್ವಾ ಎಂದ ಸ್ಪೀಕರ್‌!

Assembly Session: ಸದನದಲ್ಲಿ ವಿಪಕ್ಷ ನಾಯಕರ ವಿರುದ್ಧ ಮುಗಿಬಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ರನ್ನು ನಿಯಂತ್ರಿಸಲು ಸ್ಪೀಕರ್‌ ಯು.ಟಿ.ಖಾದರ್‌ ಹೈರಾಣಾದರು. ಕುಳಿತುಕೊಳ್ಳಿ ಎಂದು ಹೇಳುತ್ತಿದ್ದರೂ ಮಾತು ಕೇಳದ ಹಿನ್ನೆಲೆಯಲ್ಲಿ ಸ್ಪೀಕರ್‌ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

VISTARANEWS.COM


on

Assembly Session
Koo

ಬೆಂಗಳೂರು: ಬಿಜೆಪಿ ವಿರುದ್ಧ ಸದನದಲ್ಲೂ (Assembly Session) ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ಮುಂದುವರಿಸಿದ್ದಾರೆ. ಮಳೆ ಹಾನಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂಬ ಸೂಚನೆ ನಡುವೆಯೂ, ಬಿಜೆಪಿ ಅವಧಿಯ ಹಗರಣಗಳ ಪಟ್ಟಿ ಓದುತ್ತಾ ಪ್ರದೀಪ್ ಈಶ್ವರ್ ಸದ್ದು ಮಾಡಿದ್ದರಿಂದ ಅವರನ್ನು ಮನವೊಲಿಸಲು ಸ್ಪೀಕರ್‌ ಹೈರಾಣಾದರು. ಕುಳಿತುಕೊಳ್ಳಿ ಎಂದು ಹೇಳುತ್ತಿದ್ದರೂ ಮಾತು ಕೇಳದ ಹಿನ್ನೆಲೆಯಲ್ಲಿ “ಏನಾಗಿದೆ ಇವರಿಗೆ, ಕೈಗೆ ಕಬ್ಬಿಣ ಏನಾದರೂ ಕೊಡ್ರಿ, ತಲೆ ನಿಯಂತ್ರಣದಲ್ಲಿ ಇಲ್ವಾ?” ಎಂದು ಸ್ಪೀಕರ್‌ ಯು.ಟಿ.ಖಾದರ್ ಅಸಮಾಧಾನ ಹೊರಹಾಕಿದ್ದಾರೆ.

ಸ್ಪೀಕರ್‌ ಯು.ಟಿ.ಖಾದರ್ ಒತ್ತಾಯ ಮಾಡುತ್ತಿದ್ದರೂ ಮಾತು ನಿಲ್ಲಿಸದಿದ್ದರಿಂದ ಕೊನೆಗೆ ಪ್ರದೀಪ್ ಈಶ್ವರ್ ಬಳಿ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೋಗಿ ಕುಳಿತುಕೊಳ್ಳುವಂತೆ ಕೈ ಮುಗಿದು ಮನವಿ ಮಾಡಿದರು. ನಂತರ ಪ್ರದೀಪ್ ಬಳಿ ಹೋಗಿ ಕುಳಿತುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಆಗ ಪ್ರದೀಪ್ ಈಶ್ವರ್‌ಗೆ ಬಿಜೆಪಿ ಸದಸ್ಯರು ಛೇಡಿಸಿದರು.

ಪ್ರದೀಪ್ ಈಶ್ವರ್ ಹೇಡಿ ಅಲ್ಲಾ, ಪ್ರದೀಪ್ ಈಶ್ವರ್ ಯು ಕೆನ್ ಡು ಇಟ್ ಎಂದು ಬಿಜೆಪಿ ಶಾಸಕರು ಕೂಗುತ್ತಾ ಛೇಡಿಸಿದರು. ಈ ವೇಳೆ ಬಿಜೆಪಿ ಶಾಸಕರು ಹಾಗೂ ಪ್ರದೀಪ್ ಈಶ್ವರ್ ನಡುವೆ ಮಾತಿನ ಚಕಮಕಿ ಉಂಟಾಯಿತು. ಆಗ ಪ್ರದೀಪ್ ಈಶ್ವರ್‌ನ ಸಮಾಧಾನ ಮಾಡಲು ಶಾಸಕ ನಾರಾಯಣ ಸ್ವಾಮಿ ಧಾವಿಸಿ ಹೋದರು.

ಈ ವೇಳೆ ವಿಪಕ್ಷನಾಯಕ ಆರ್‌.ಅಶೋಕ್‌ ಗರಂ ಆಗಿ, ಏನು ಬೆದರಿಕೆ ಹಾಕುತ್ತೀರಾ? ಪ್ರದೀಪ್ ಈಶ್ವರ್‌ನ ಕಂಟ್ರೋಲ್ ಮಾಡಕ್ಕೆ ಆಗಲ್ಲವೇ? ಕಾಂಗ್ರೆಸ್‌ನ ಮಾನ ಮರ್ಯಾದೆ ಎಲ್ಲ ಹೊರಟೇ ಹೋಯಿತು. ಪ್ರದೀಪ್ ಈಶ್ವರ್ ಯು ಕೆನ್ ಡು ಇಟ್ ಎಂದು ಕೂಗಿದರು.

ಗದ್ದಲದ ನಡುವೆಯೇ ಬಿಜೆಪಿ ವಿರುದ್ಧ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. ಬಿಜೆಪಿಯವರನ್ನು ಸದನದಿಂದ ಹೊರಗೆ ಹಾಕಿ ಎಂದು ಶ್ರೀನಿವಾಸ ಆಗ್ರಹಿಸಿದರು. ಈ ವೇಳೆ ಬಿಜೆಪಿ ಅವಧಿಯ ಹಗರಣಗಳ ಪಟ್ಟಿಯನ್ನು ಪ್ರದೀಪ್ ಈಶ್ವರ್ ಓದಿದರು. ಈ ವೇಳೆ ಬಿಜೆಪಿ ಸದಸ್ಯರು ಬಂಡಲ್ ಬಂಡಲ್ ಎಂದು ಕೂಗುತ್ತಾ ಸದನದ ಬಾವಿಯಿಂದಲೇ ಸನ್ನೆ ಮಾಡಿ ಕಿಚಾಯಿಸಿದರು.

ಈ ವೇಳೆ ಬಿಜೆಪಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಸ್ಪೀಕರ್ ಮನವಿಗೂ ಜಗ್ಗದೇ ಬಿಜೆಪಿ ವಿರುದ್ಧ ಹರಿಹಾಯ್ದರು. ಕೊನೆಗೆ ಬಲವಂತವಾಗಿ ಪ್ರದೀಪ್ ಈಶ್ವರ್‌ರನ್ನು ಕಾಂಗ್ರೆಸ್ ಶಾಸಕರಾದ ಎಸ್.‌ಎನ್. ನಾರಾಯಣಸ್ವಾಮಿ ಮತ್ತು ಜಿ.ಎಚ್. ಶ್ರೀನಿವಾಸ್ ಸುಮ್ಮನಿರಿಸಿದರು. ಕುಳಿತುಕೊಂಡರೂ ಮತ್ತೆ ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸುತ್ತಿದ್ದರು. ಆಗ ಪ್ರದೀಪ್ ನಡೆಗೆ ಸ್ಪೀಕರ್‌ ಕೂಡ ತೀವ್ರ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Karnataka Job Reservation: ಕನ್ನಡಿಗರಿಗೆ ಮೀಸಲಾತಿ ನೀಡಲು ಕರವೇ ಆಗ್ರಹ; ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು!

ಈ ವೇಳೆ ಸರ್ಕಾರ ಗೂಂಡಾಗಿರಿ ಮಾಡುತ್ತಿದೆ, ಆಡಳಿತ ಪಕ್ಷದವರಿಗೇ ಮಾತನಾಡಲು ಬಿಡುತ್ತಿಲ್ಲ. ಪ್ರದೀಪ್ ಈಶ್ವರ್ ಟ್ಯಾಲೆಂಟ್ ಏನು? ಆದರೆ, ಅವರಿಗೆ ಮಾತನಾಡಲೂ ಸರ್ಕಾರ ಬಿಡುತ್ತಿಲ್ಲ ಎಂದ ವಿಪಕ್ಷ ನಾಯಕ ಅಶೋಕ್ ಸದನದಲ್ಲಿ ಲೇವಡಿ ಮಾಡಿದರು.

Continue Reading

ಪ್ರಮುಖ ಸುದ್ದಿ

Lokayukta Raid: ಲೋಕಾಯುಕ್ತ ದಾಳಿಯ ವೇಳೆ ಚಿನ್ನಾಭರಣ ಪಕ್ಕದ ಮನೆಗೆಸೆದ ಅಖ್ತರ್‌ ಅಲಿ!

Lokayukta Raid: ಪಕ್ಕದ ಮನೆಯ ಕಿಟಕಿಗೆ ಅಖ್ತರ್ ಆಲಿ ಮನೆ ಗೋಡೆ ಕನೆಕ್ಟ್‌ ಆಗಿದ್ದು, ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದ ಅಖ್ತರ್ ಆಲಿ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅಖ್ತರ್ ಆಲಿ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ಚಿನ್ನ ತುಂಬಿ ಅಖ್ತರ್ ಆಲಿ ಎಸೆದಿದ್ದ.

VISTARANEWS.COM


on

lokayukta raid akhtar ali
ಅಖ್ತರ್‌ ಅಲಿ ಮನೆಯಿಂದ ವಶಪಡಿಸಿಕೊಂಡ ಚಿನ್ನಾಭರಣ ಮತ್ತು ನಗದು
Koo

ಬೆಂಗಳೂರು: ಇಂದು ಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಅಖ್ತರ್‌ ಅಲಿ ಎಂಬ ಅಧಿಕಾರಿಯ ಮನೆಗೆ ಅಧಿಕಾರಿಗಳು ದಾಳಿ ನಡೆಸಿದಾಗ ಆತ ಚಿನ್ನಾಭರಣಗಳನ್ನು (Gold Jewelry) ಪಕ್ಕದ ಮನೆಗೆ (neighbour house) ಎಸೆದು ಪಾರಾಗಲು ನೋಡಿದ್ದಾರೆ! ಇದನ್ನೂ ಲೋಕಾಯುಕ್ತ ಅಧಿಕಾರಿಗಳು (Lokayukta Officers) ವಶಪಡಿಸಿಕೊಂಡಿದ್ದಾರೆ.

ಭೂಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅಖ್ತರ್ ಅಲಿ ಮನೆಗೆ ದಾಳಿ ನಡೆಸಿದಾಗ ಈ ಘಟನೆ ನಡೆಯಿತು. ಪಕ್ಕದ ಮನೆಯ ಕಿಟಕಿಗೆ ಅಖ್ತರ್ ಆಲಿ ಮನೆ ಗೋಡೆ ಕನೆಕ್ಟ್‌ ಆಗಿದ್ದು, ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದ ಅಖ್ತರ್ ಆಲಿ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅಖ್ತರ್ ಆಲಿ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ಚಿನ್ನ ತುಂಬಿ ಅಖ್ತರ್ ಆಲಿ ಎಸೆದಿದ್ದ.

ಬ್ಯಾಗ್ ಎಸೆದದ್ದನ್ನು ನೋಡಿ ನೆರೆ ಮನೆ ನಿವಾಸಿ ಖುದ್ದು ಅಧಿಕಾರಿಗಳನ್ನು ಕರೆದು ತೋರಿಸಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಕೂಡಲೇ ಬ್ಯಾಗನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಬ್ಯಾಗನ್ನು ಅಖ್ತರ್ ಆಲಿ ಮನೆಗೆ ತಂದು ಪರಿಶೀಲನೆ ಮಾಡಿದಾಗ, ಒಂದು ಬ್ಯಾಗ್ ತುಂಬಾ ಚಿನ್ನದ ಒಡವೆಗಳು ಇರುವುದು ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಚಿನ್ನ ತೂಕ ಹಾಕಲು ಸಿಬ್ಬಂದಿಯನ್ನು ಕರೆಸಲಾಗಿದೆ. ಅಖ್ತರ್‌ ಅಲಿ ಅಕ್ಕಪಕ್ಕದ ಮನೆಯಲ್ಲೂ ಅಧಿಕಾರಿಗಳ ತಂಡ ತಲಾಶ್ ಮಾಡಿದೆ.

ದಾಳಿ ವೇಳೆ ಮನೆಯಲ್ಲೇ ಇದ್ದ ಅಖ್ತರ್ ಆಲಿಯ ಬಳಿಯಿಂದ ಸದ್ಯ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತಂಡ ಪರಿಶೀಲನೆ ಮಾಡುತ್ತಿದೆ. ಕೆಲವು ದಾಖಲೆಗಳನ್ನೂ ಪಕ್ಕದ ಮನೆಯ ಕಿಟಕಿಯ ಮೂಲಕ ಅಲಿ ತಳ್ಳಿರುವ ಶಂಕೆ ಇದೆ. ಹೀಗಾಗಿ ಪಕ್ಕದ ಮನೆಯನ್ನೂ ಶೋಧ ನಡೆಸಲಾಗಿದೆ. ಇದುವರೆಗೆ ಅಖ್ತರ್ ಅಲಿ ಮನೆಯಲ್ಲಿ 25 ಲಕ್ಷ ರೂ. ನಗದು, 2.20 ಕೆಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, ಐವತ್ತಕ್ಕೂ ಹೆಚ್ಚು ದುಬಾರಿ ವಾಚ್‌ಗಳು, ಲಕ್ಷಾಂತರ ಮೌಲ್ಯದ ಡೈಮಂಡ್ ಆಭರಣಗಳು ಪತ್ತೆಯಾಗಿವೆ.

ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ʼಇವತ್ತು ಬೆಂಗಳೂರು ಸಿಟಿ ಘಟಕದಿಂದ ಮೂರು ಆಫೀಸರ್ಸ್ ಮನೆ ದಾಳಿ ಮಾಡಲಾಗಿದೆ. ಅಖ್ತರ್ ಅವರ ಮನೆಯಲ್ಲೂ ಚಿನ್ನಾಭರಣ ಸಿಕ್ಕಿದೆ. ಈಗಾಗಲೇ 2.2 ಕೆಜಿ ಚಿನ್ನಾಭರಣ, 25 ಲಕ್ಷ ಹಣ ಸಿಕ್ಕಿದೆ. ಅವರು ಚಿನ್ನದ ಬ್ಯಾಗನ್ನು ಪಕ್ಕದ ಮನೆಗೆ ಎಸೆದಿದ್ದಾರೆ. ಅದನ್ನು ಕೂಡ ನಮ್ಮ ಟೀಂ ರಿಕವರಿ ಮಾಡಿದೆ. ಸದ್ಯ ಇನ್ನೂ ಪರಿಶೀಲನೆ ಮುಂದುವರೆದಿದೆ. ಬಿ.ಕೆ ರಾಜ ಹಾಗೂ ರಮೇಶ್ ಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆʼ ಎಂದಿದ್ದಾರೆ.

ಯಾವ ಅಧಿಕಾರಿಗಳ ಮೇಲೆ ದಾಳಿ?

ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
ಬೆಂಗಳೂರು ಸಿಟಿ – ಬಿವಿ ರಾಜ ಎಫ್‌ಡಿಎ ಕೆಐಎಡಿಬಿ
ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕ‌ ಇಲಾಖೆ ಅಧಿಕಾರಿ ಮಂಡ್ಯ ವಿಭಾಗ
ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು‌ ನಾರ್ತ್ ಸಬ್ ಡಿವಿಷನ್ ಆಫೀಸರ್

ಇದನ್ನೂ ಓದಿ: Lokayukta Raid: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್‌, ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

Continue Reading

ದಕ್ಷಿಣ ಕನ್ನಡ

Electric shock : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ವೃದ್ಧ ಸೇರಿ ಶ್ವಾನಗಳು ಸಾವು

Electric shock : ಜಾನುವಾರು ಮೇಯಿಸಲು ಹೋದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಪ್ರತ್ಯೇಕ ಕಡೆ ಇಬ್ಬರು ಮೃತಪಟ್ಟಿದ್ದಾರೆ. ಜತೆಗೆ ಎರಡು ಶ್ವಾನಗಳು ಪ್ರಾಣ ಕಳೆದುಕೊಂಡಿವೆ.

VISTARANEWS.COM


on

By

Electric Shock
Koo

ಮಂಗಳೂರು/ಚಿತ್ರದುರ್ಗ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ (Electric shock) ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ಹೊರವಲಯದ ಗುರುಪುರ ಕಲ್ಲಕಲೆಂಬಿ ಎಂಬಲ್ಲಿ ಘಟನೆ ನಡೆದಿದೆ. ಆಶ್ಮಿ ಶೆಟ್ಟಿ (19)ಮೃತ ವಿದ್ಯಾರ್ಥಿನಿ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದ ಆಶ್ಮಿ ಶೆಟ್ಟಿ, ದನಗಳನ್ನು ಮೇಯಿಸಿಲು ಗೆದ್ದೆಗೆ ತೆರಳಿದ್ದಳು. ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಗಂಭೀರ ಗಾಯಗೊಂಡಿದ್ದ ಆಶ್ಮಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಶ್ಮಿ ಮೃತಪಟ್ಟಿದ್ದಾಳೆ.

ಆಶ್ಮಿ ಜತೆ ಬಂದಿದ್ದ ಎರಡು ನಾಯಿಗಳೂ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿವೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್‌ ತಂತಿ ತುಳಿದು ವ್ಯಕ್ತಿ ಸಾವು

ಎಮ್ಮೆ ಮೇಯಿಸಲು ಹೋಗಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ಶಿವಲಿಂಗಯ್ಯ(60) ಮೃತ ದುರ್ದೈವಿ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮೆಂಗಸಂದ್ರದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

6 ಜನರ ಶವ ಪತ್ತೆ, ಇನ್ನೂ ನಾಲ್ವರಿಗಾಗಿ ಶೋಧ; ಭಾರಿ ಮಳೆ ನಡುವೆ ಮಣ್ಣು ತೆರವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada Landslide) ಅಂಕೋಲಾ- ಶಿರೂರು ಗುಡ್ಡಕುಸಿತ (Ankola Shiruru landslide) ಪ್ರಕರಣದಲ್ಲಿ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ನಾಪತ್ತೆಯಾದ 10 ಜನರಲ್ಲಿ ನಿನ್ನೆಯವರೆಗೆ 6 ಮಂದಿಯ ಶವ ಪತ್ತೆಯಾಗಿದೆ. ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ನಡುವೆ ನಿನ್ನೆ ಸಂಜೆ ವೇಳೆಗೆ ಅಂಕೋಲಾ ತಾಲೂಕಿನ ಬೆಳಂಬಾರ ಕಡಲತೀರದಲ್ಲಿ ಛಿದ್ರಗೊಂಡಿದ್ದ ದೇಹವೊಂದು ಪತ್ತೆಯಾಗಿದ್ದು, ಅದು ಇಲ್ಲಿಂದ ಕೊಚ್ಚಿಕೊಂಡು ಹೋದ ವ್ಯಕ್ತಿಯ ಶವವಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತದ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ; ಇವರಲ್ಲಿ 6 ಮಂದಿಯ ಶವಗಳು ಸಿಕ್ಕಿವೆ ಹಾಗೂ ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.

ಮತ್ತೆ ಗುಡ್ಡ ಕುಸಿತದ ಆತಂಕ

ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಣ್ಣು ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಭರದಿಂದ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್‌, ಪೊಲೀಸ್ ತಂಡಗಳು ಶೋಧ ಕಾರ್ಯ ಮುನ್ನಡೆಸಿವೆ. ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ವಿಸ್ತಾರ ನ್ಯೂಸ್‌ಗೆ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಪ್ರತಿಕ್ರಿಯೆ ನೀಡಿದ್ದು, ಇನ್ನೂ 40 ಮೀಟರ್ ಕೆಲಸ ಬಾಕಿ ಇದೆ, ಇಂದು ಪೂರ್ಣಗೊಳ್ಳಬಹುದು ಎಂದಿದ್ದಾರೆ. ಆದರೆ ಇಲ್ಲಿನ ಇನ್ನೊಂದು ಬದಿ ಕುಸಿಯುವ ಆತಂಕ ಎದುರಾಗಿದೆ. ನಿನ್ನೆ ಅಲ್ಪ ಪ್ರಮಾಣದಲ್ಲಿದ್ದ ಬಿರುಕು ಇಂದು ಹೆಚ್ಚಾಗಿದೆ. ಅದೂ ಕುಸಿದರೆ ಮತ್ತೆ ಕಾರ್ಯಾಚರಣೆಗೆ ಹಿನ್ನಡೆಯಾಗಬಹುದು ಎಂದಿದ್ದಾರೆ.

ಗಂಗಾವಳಿ ನದಿಯಲ್ಲಿ ಮಣ್ಣಿನ ದಿಬ್ಬಗಳು ನಿರ್ಮಾಣವಾಗಿವೆ. ಇದರಿಂದ ನದಿಯ ಹರಿವು ರಸ್ತೆಗೆ ಕೊರೆತ ಉಂಟುಮಾಡುವ ಸಾಧ್ಯತೆಯಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಗುಡ್ಡ ಕುಸಿತದಿಂದ ಉಳುವರೆ ಗ್ರಾಮದ ಮನೆಗಳಿಗೆ ಹಾನಿಯಾದ ವಿಚಾರದಲ್ಲಿ, ಆಸ್ಪತ್ರೆಗೆ ದಾಖಲಾಗಿದ್ದ 15 ಮಂದಿಗೆ ಬಾಡಿಗೆ ಮನೆ ಮಾಡಿ ಇರಿಸಲು ಚಿಂತನೆ ನಡೆಸಲಾಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡಿರುವ ಉಳುವರೆ ಗ್ರಾಮದ ನಿವಾಸಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕಾಳಜಿ ಕೇಂದ್ರದ ಬದಲು ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗುತ್ತಿದೆ. ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ಗ್ಯಾಸ್‌ ಟ್ಯಾಂಕರ್‌ನ ಅನಿಲ

ಮಣ್ಣು ಕುಸಿತದ ವೇಳೆ ನದಿಯಲ್ಲಿ ತೇಲಿಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ತಜ್ಞರ ತಂಡ ಅನಿಲ ಟ್ಯಾಂಕರ್ ಖಾಲಿ ಮಾಡುವ ಕಾರ್ಯ ಮಾಡುತ್ತಿದೆ. ಉಳಿದ ಅನಿಲ ಇಂದು ಖಾಲಿ ಮಾಡುತ್ತೇವೆ. ಭಾರೀ ಮಳೆ ಹಾಗೂ ಗಾಳಿ‌ ಇರುವುದರಿಂದ ಅನಿಲ ಖಾಲಿ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಸತೀಶ್‌ ಸೈಲ್‌ ತಿಳಿಸಿದ್ದಾರೆ.

ನದಿಯಲ್ಲಿ ತೇಲಿಹೋಗಿದ್ದ ಟ್ಯಾಂಕರ್‌ ಅನ್ನು ಸದ್ಯ ಸಗಡಗೇರಿ‌ ಬಳಿ ನೌಕಾನೆಲೆ, NDRF ತಂಡಗಳು ತಡೆದು ನಿಲ್ಲಿಸಿದ್ದವು. ನಿನ್ನೆ ಶೇ.60ರಷ್ಟು ಗ್ಯಾಸ್ ಅನ್ನು ಗಂಗಾವಳಿ ನದಿಗೆ ಬಿಟ್ಟಿದ್ದ ಹೆಚ್‌ಪಿಎಲ್ ಕಂಪೆನಿ ತಜ್ಞರು, ಇಂದು ಮತ್ತೆ ಶೇ.40ರಷ್ಟು ಗ್ಯಾಸ್ ನೀರಿಗೆ ಬಿಡಲಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕದಳ, SDRF, NDRF, ಪೊಲೀಸರು, ವೈದ್ಯಾಧಿಕಾರಿಗಳ ತಂಡ ಮೊಕ್ಕಾಂ ಹೂಡಿದೆ. ಎರಡು ಆ್ಯಂಬುಲೆನ್ಸ್ ಸ್ಥಳದಲ್ಲಿ ನಿಯೋಜನೆಯಾಗಿದೆ. ಗ್ರಾಮದ 34 ಮನೆಗಳ ಜನರನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ. ಟ್ಯಾಂಕರ್ ಒಟ್ಟು 18 ಕ್ವಿಂಟಾಲ್ ಗ್ಯಾಸ್ ಹೊಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Suryakumar Yadav
ಕ್ರಿಕೆಟ್15 mins ago

Suryakumar Yadav: ಸೂರ್ಯಕುಮಾರ್​ಗೆ ನಾಯಕತ್ವ ಒಲಿದದ್ದು ಕಾಪು ಮಾರಿಯಮ್ಮನ ಆಶೀರ್ವಾದದಿಂದ!

Trinity Golf Champions League
ಪ್ರಮುಖ ಸುದ್ದಿ17 mins ago

Trinity Golf Champions League : ಕಪಿಲ್ ದೇವ್​ ನೇತೃತ್ವದ ಟ್ರಿನಿಟಿ ಗಾಲ್ಫ್ ಚಾಂಪಿಯನ್ಸ್ ಲೀಗ್​​ನ 2ನೇ ಆವೃತ್ತಿಗೆ ಬೆಂಗಳೂರು ಆತಿಥ್ಯ

OTT Releases
Latest18 mins ago

OTT Releases : ಈ ವಾರ ಥಿಯೇಟರ್ ಮತ್ತು ಒಟಿಟಿಯಲ್ಲಿ ಬಿಡುಗಡೆ ಆಗಲಿವೆ ಈ ಚಿತ್ರಗಳು; ಟ್ರೇಲರ್‌ ನೋಡಿ

Self Harming
ಬೆಂಗಳೂರು ಗ್ರಾಮಾಂತರ20 mins ago

Self Harming : ಆನೇಕಲ್ ಸರ್ಕಾರಿ ಆಸ್ಪತ್ರೆ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

Assembly Session
ಕರ್ನಾಟಕ23 mins ago

Assembly Session: ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಬ್ಬರ; ತಲೆ ನಿಯಂತ್ರಣದಲ್ಲಿ ಇಲ್ವಾ ಎಂದ ಸ್ಪೀಕರ್‌!

Martin' movie delayed even after 3 years
ಸ್ಯಾಂಡಲ್ ವುಡ್37 mins ago

Dhruva Sarja: 3 ವರ್ಷವಾದರೂ ʻಮಾರ್ಟಿನ್‌ʼ ಸಿನಿಮಾ ರಿಲೀಸ್‌ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?

lokayukta raid akhtar ali
ಪ್ರಮುಖ ಸುದ್ದಿ1 hour ago

Lokayukta Raid: ಲೋಕಾಯುಕ್ತ ದಾಳಿಯ ವೇಳೆ ಚಿನ್ನಾಭರಣ ಪಕ್ಕದ ಮನೆಗೆಸೆದ ಅಖ್ತರ್‌ ಅಲಿ!

Microsoft Global Outage
ದೇಶ1 hour ago

Microsoft Global Outage: ವಿಶ್ವಾದ್ಯಂತ ನೆಲಕಚ್ಚಿದ ಮೈಕ್ರೋಸಾಫ್ಟ್‌; ವಿಂಡೋಸ್‌ನಲ್ಲಿ ತಾಂತ್ರಿಕ ದೋಷ

Electric Shock
ದಕ್ಷಿಣ ಕನ್ನಡ1 hour ago

Electric shock : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ವೃದ್ಧ ಸೇರಿ ಶ್ವಾನಗಳು ಸಾವು

DK Shivakumar
ಕರ್ನಾಟಕ1 hour ago

DK Shivakumar: ಬಿಎಸ್‌ವೈ, ಬೊಮ್ಮಾಯಿ ಕಾಲದಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ: ಡಿಕೆಶಿ ಆರೋಪ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ22 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ24 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌