ಉತ್ತರ ಕನ್ನಡ
DC raid | ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದಾಗ ಪಿಎಚ್‌ಸಿಯಲ್ಲಿದ್ದುದು ಡಿ ಗ್ರೂಪ್ ನೌಕರರು ಮಾತ್ರ! ನೋಟಿಸ್ ಜಾರಿ
ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಬುಧವಾರ ಅಂಕೋಲಾ ಪಿಎಚ್‌ಸಿಗೆ ದಿಢೀರ್ ಭೇಟಿ ನೀಡಿದ್ದರು. ಆಗ ಅಲ್ಲಿ ವೈದ್ಯರೇ ಇರಲಿಲ್ಲ!
ಕಾರವಾರ: ಹೊಸದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಆರಂಭದಲ್ಲೇ ಆಘಾತವಾಗಿದೆ! ಬುಧವಾರ ಅವರು ಅಂಕೋಲಾದ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದಾಗ ಅಲ್ಲಿ ವೈದ್ಯರೇ ಇರಲಿಲ್ಲ, ಅರೆವೈದ್ಯಕೀಯ ಸಿಬ್ಬಂದಿಯೂ ಇಲ್ಲ. ಇದ್ದಿದ್ದು ಕೇವಲ ಡಿ ಗ್ರೂಪ್ ನೌಕರರು ಮಾತ್ರ! ಅದೂ ಹಾಡಹಗಲೇ, ಎಲ್ಲರೂ ಡ್ಯೂಟಿಯಲ್ಲಿರಬೇಕಾಗಿದ್ದ ಸಮಯದಲ್ಲೇ ಎಲ್ಲರೂ ಗೈರುಹಾಜರಾಗಿದ್ದರು.
ಹಾಗಂತ, ಜಿಲ್ಲಾಧಿಕಾರಿಗಳು ಬೇಕು ಅಂತಲೇ ನಡೆಸಿದ ದಾಳಿ ಇದಲ್ಲ. ಕರ್ತವ್ಯದ ನಿಮಿತ್ತ ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಂಕೋಲಾ ಪಿಎಚ್‌ಸಿಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ನಿಜವಾದ ಪರಿಸ್ಥಿತಿಯ ದರ್ಶನ ಅವರಿಗಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಸಿಬ್ಬಂದಿ ಕರ್ತವ್ಯಲೋಪಕ್ಕೆ ಪ್ರತಿಯಾಗಿ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಪರಿಸ್ಥಿತಿ ಹೀಗಾದರೆ ಹೇಗೆ? ನಾನು ಭೇಟಿ ನೀಡುವ ವೇಳೆ ಯಾರು ಎಲ್ಲಿದ್ದರು ಎಂಬ ಬಗ್ಗೆ ವರದಿ ಕೊಡಿ ಎಂದು ಜಿಲ್ಲಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಪಿಹೆಚ್‌ಸಿಗೆ ವೈದ್ಯರನ್ನು ನೇಮಿಸಲಾಗಿದೆ. ಅವರು ಕಾಲ ಕಾಲಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ತಾಲೂಕು ಮಟ್ಟದ ಅಧಿಕಾರಿಯಾಗಿ ನೀವು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಧೀನ ವೈದ್ಯರು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾಗಿ ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
3 ದಿನದಲ್ಲಿ ಜಿಲ್ಲಾಧಿಕಾರಿ ಎದುರು ಹಾಜರಾಗಿ ಲಿಖಿತ ಕಾರಣ ನೀಡಬೇಕು, ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಅಂಕೋಲಾ ಟಿಹೆಚ್‌ಓಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಉತ್ತರ ಕನ್ನಡ
Mundagoda News: ಮುಂಡಗೋಡದ ಅಗಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವಶ
Mundagoda News: ಹಸನಸಾಬ ಎಂಬಾತ ತಮ್ಮ ಸ್ಕೂಟಿಯಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮುಂಡಗೋಡ: ದಾಖಲೆ ಇಲ್ಲದೆ 3.39 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳ ತಂಡ ತಾಲೂಕಿನ ಅಗಡಿ ಚೆಕ್‌ಪೋಸ್ಟ್‌ನಲ್ಲಿ (Agadi Check Post) ಶುಕ್ರವಾರ (ಮಾ.31) ವಶಕ್ಕೆ ಪಡೆದಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಪಟ್ಟಣದ ನಿವಾಸಿ ಹಸನಸಾಬ ಎಂಬುವವರು ತಮ್ಮ ಸ್ಕೂಟಿಯಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಅಗಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಕಾರಣ 3.39 ಲಕ್ಷ ರೂ.ವನ್ನು ವಶಕ್ಕೆ ಪಡೆಯಲಾಗಿದೆ.
ಇಲ್ಲಿನ ಸಿಪಿಐ ಎಸ್.ಎಸ್. ಸಿಮಾನಿ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚುನಾವಣೆ ಆಯೋಗದ ನಿರ್ದೇಶನದಂತೆ ಅಧಿಕಾರಿಗಳ ತಂಡ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸುತ್ತಿದೆ.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಪೊಲೀಸರ ಹುಂಡಿ ಸೇರಿದ ದೇವರ ಹುಂಡಿಗೆ ಹಾಕಲು ತಂದಿದ್ದ 2.5 ಲಕ್ಷ ರೂಪಾಯಿ!
ಚಿಕ್ಕಮಗಳೂರು: ಇದೇ ಮೇ 10ರಂದು ವಿಧಾನಸಭಾ ಚುನಾವಣೆ (Karnataka Election 2023) ನಡೆಯಲಿರುವುದರಿಂದ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುವಾಗ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಹೀಗೆ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇಷ್ಟಾದರೂ ಅಕ್ರಮಗಳು ನಡೆಯುತ್ತಲೇ ಇವೆ. ಈ ಮಧ್ಯೆ ದೇವಸ್ಥಾನದ ಹುಂಡಿಗೆ ಹಾಕಲು ಎಂದು ತೆಗೆದುಕೊಂಡು ಹೊರಟಿದ್ದ ವೈದ್ಯರೊಬ್ಬರ ಹಣವು ಪೊಲೀಸರ ಹುಂಡಿ ಸೇರುವಂತಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಹಣ ಪತ್ತೆಯಾಗಿದೆ. ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ 2.50 ಲಕ್ಷ ರೂಪಾಯಿಯು ಈಗ ಪೊಲೀಸರ ವಶದಲ್ಲಿದೆ. ಪಾವಗಡ ಮೂಲದ ವೈದ್ಯಾಧಿಕಾರಿಯೊಬ್ಬರು ದೇವರ ಹುಂಡಿಗಾಗಿ ಪ್ರತಿದಿನ ಸಂಗ್ರಹಿಸಿ ಇಡುತ್ತಿದ್ದ ಹಣವನ್ನು ತಮ್ಮ ಫಾರ್ಚುನರ್ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.
ಈ ಹಣವನ್ನು ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳಿ ದೇವರ ಹುಂಡಿಗೆ ಸಮರ್ಪಣೆ ಮಾಡುವವರಿದ್ದರು. ಆದರೆ, ಈ ವೇಳೆ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ತಪಾಸಣೆ ನಡೆಸಿದಾಗ 2.50 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ. ಇದಕ್ಕೆ ದಾಖಲೆಯನ್ನು ಪೊಲೀಸರು ಕೇಳಿದಾಗ, ಇದು ದೇವರಿಗೆ ಹಾಕಲೆಂದು ಎತ್ತಿಟ್ಟಿರುವ ಹಣವಾಗಿದ್ದು, ಇದಕ್ಕೆ ದಾಖಲೆ ಇಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಸಂಪೂರ್ಣ ಹಣವನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಖಲೆ ಇಲ್ಲದೆ 50 ಸಾವಿರ ರೂಪಾಯಿವರೆಗೆ ಮಾತ್ರ ಹಣ ಸಾಗಾಟಕ್ಕೆ ಅವಕಾಶ ಇದೆ. ಆದರೆ, ಇವರ ಬಳಿ 2.50 ಲಕ್ಷ ರೂಪಾಯಿ ಇರುವುದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಉತ್ತರ ಕನ್ನಡ
Sirsi News: ಪಕ್ಷದಲ್ಲಿ ಅಭದ್ರತೆ ಇದ್ದವರು ಮಾತ್ರ ಬೇರೆ ಪಕ್ಷದವರನ್ನು ಕರೆಯುತ್ತಾರೆ: ಸಚಿವ ಸುನೀಲ್ ಕುಮಾರ್
Sirsi News: ಕಾಂಗ್ರೆಸ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಣುತ್ತಿದೆ. ಅದಕ್ಕೆ ಬೇರೆಯವರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಶಿರಸಿ: ಪಕ್ಷದಲ್ಲಿ ಅಭದ್ರತೆ ಇದ್ದವರು ಬೇರೆ ಪಕ್ಷದಲಿದ್ದವರನ್ನು ಕರೆಯುತ್ತಾರೆ. ಭದ್ರತೆ ಇದ್ದವರು ಕರೆಯೋದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕರನ್ನು ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದತ್ತ ಸೆಳೆಯುವ ತಂತ್ರಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಟಾಂಗ್ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಸ್ಪೀಕರ್ ಕಾಗೇರಿ ಅವರ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, “ಕಾಂಗ್ರೆಸ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಣುತ್ತಿದೆ. ಅದಕ್ಕೆ ಬೇರೆಯವರನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು, ಶಾಸಕರು ಬೇರೆ ಬೇರೆ ಕಡೆ ಅಲೆದಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಭದ್ರತೆ, ಅಸ್ತಿತ್ವಕ್ಕಾಗಿ ಹೋರಾಟ ಎಲ್ಲವೂ ಅವರ ಪಾರ್ಟಿಯಲ್ಲೇ ನಡೆಯುತ್ತಿದೆ” ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಇದನ್ನೂ ಓದಿ: Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
“ನಾವು ಖುಷಿಯಿಂದ ರಾಜ್ಯಾದ್ಯಂತ ಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಬಹುಮತದದೊಂದಿಗೆ ಸರ್ಕಾರ ರಚನೆಗೆ ಚಿಂತನೆ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜವಾಬ್ದಾರಿಯುತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪದಾಧಿಕಾರಿಗಳ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. ಟಿಕೆಟ್ ನೀಡುವ ವೇಳೆಗೆ ಕಾರ್ಯಕರ್ತರ ಅಭಿಪ್ರಾಯ ಕೂಡ ಮಾನದಂಡವಾಗಲಿದೆ” ಎಂದರು.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಉತ್ತರ ಕನ್ನಡ
Karwar News: ವಿಜೃಂಭಣೆಯ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವ
Karwar News: ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಧಾರ್ಮಿಕ ಪೂಜಾ ವಿಧಿವಿಧಾನಗಳು ಮಾ.23 ರಿಂದ ಆರಂಭಗೊಂಡಿದ್ದು, ಇಂದು ಕೊನೆಗೊಳ್ಳಲಿದೆ. ಶುಕ್ರವಾರ ಸೂರ್ಯೋದಯದಿಂದಲೇ ಸಾವಿರಾರು ಭಕ್ತರು ರಥ ಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.
ಕಾರವಾರ: ಭಟ್ಕಳ ಪಟ್ಟಣದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತಾಧಿಗಳ ಜಯಘೋಷಗಳ ನಡುವೆ ವೈಭವಯುತವಾಗಿ ಗುರುವಾರ (ಮಾ.30) ರಾಮ ನವಮಿಯಂದು ಸಂಪನ್ನಗೊಂಡಿತು.
ಮಾ.23 ರಿಂದ ಆರಂಭಗೊಂಡ ಧಾರ್ಮಿಕ ಪೂಜಾ ವಿಧಿವಿಧಾನಗಳು ಮಾ.31 ರವರೆಗೆ ನಡೆಯಲಿದೆ. ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಸೂರ್ಯೋದಯದಿಂದಲೇ ಸಾವಿರಾರು ಭಕ್ತರು ರಥ ಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ 5.35ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ವಾಡಿಕೆಯಂತೆ ಶಿರ್ಕಿನ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆಯಿಂದ ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯ ಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಇದನ್ನೂ ಓದಿ: New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ರಥೋತ್ಸವದ ಸಂದರ್ಭದಲ್ಲಿ 20 ಸಾವಿಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಬಾರಿ ಡೊಳ್ಳು ಕುಣಿತ, ರೇಡಿಯೋ ಕಲಾವಿದ ಉದಯಪ್ರಭು ತಂಡದಿಂದ ಭಜನೆ, ವಾದ್ಯಗೋಷ್ಠಿ ಜನಮನ ಸೆಳೆದವು. ಆಡಳಿತಾಧಿಕಾರಿ ಮಮತಾ ದೇವಿ ಎಸ್, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ ನಾಯ್ಕ, ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ ಮತ್ತಿತರ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿದರು.
ದೇವಸ್ಥಾನದ ಶ್ರೀಧರ ಮೊಗೇರ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯ ಕುಮಾರ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಉಪ ವಿಭಾಗದ ಡಿವೈಎಸ್‌ಪಿ ಶ್ರೀಕಾಂತ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ಸುರಕ್ಷತೆಯನ್ನು ಒದಗಿಸಿದ್ದು ಬ್ರಹ್ಮ ರಥೋತ್ಸವವು ಶಾಂತಿಯುತವಾಗಿ ಜರುಗಿತು.
ಇದನ್ನೂ ಓದಿ: Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್ ಆಗ್ತಿದೆ ಈತನ ಕೆಲಸ
ಉತ್ತರ ಕನ್ನಡ
Sirsi News: ಏ.6 ರಂದು ಮಂಜುಗುಣಿಯ ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ
Sirsi News: ಮಂಜುಗುಣಿಯ ವೆಂಕಟರಮಣ ದೇವರ ರಥೋತ್ಸವ ಏ.6 ರಂದು ನಡೆಯಲಿದೆ. ಅಂದು ರಾತ್ರಿ ರಥಾವರೋಹಣ, ವಸಂತ ಪೂಜೆ ನಡೆಯಲಿದೆ.
ಶಿರಸಿ: ತಾಲೂಕಿನ ಮಂಜುಗುಣಿಯ (Manjuguni) ಪುರಾಣ ಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ ಏ.6ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏ.1 ರಂದು ಬೆಳಗ್ಗೆ ಧ್ವಜ ಪೂಜೆ, ಧ್ವಜಾರೋಹಣ, ಧ್ವಜ ಬಲಿ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ರತ್ನ ಮಂಟಪೋತ್ಸವ, ಏ.2 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಗಜ ಯಂತ್ರೋತ್ಸವ, ಏ.3 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಸಿಂಹ ಯಂತ್ರೋತ್ಸವ, ಏ.4 ರಂದು ಬೆಳಗ್ಗೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಧನಲಕ್ಷ್ಮೀ ಪೂಜೆ, ಕಾಣಿಕೆ ಡಬ್ಬಿ ಪೂಜೆ, ಮುಸಲ ಪೂಜೆ ಚೂರ್ಣಿಕರಣ, ಸಂಜೆ ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ಶೇಷ ಯಂತ್ರೋತ್ಸವ ನಡೆಯಲಿದೆ.
ಇದನ್ನೂ ಓದಿ: K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?
ಏ.5 ರಂದು ಬೆಳಗ್ಗೆ ದೇವರ ವರ್ಧಂತಿ ಉತ್ಸವ, ಹಂಡೆ ಪೂಜೆ, ಪಾಕಸಿದ್ಧಿ, ಅನ್ನ ಸಂಗ್ರಹ, ಕ್ಷೇತ್ರ ಪ್ರಾಕಾರ ಬಲಿ, ಭೂತರಾಜ ಬಲಿ, ವರ್ಧಂತಿ, ಮಹಾ ಸಂತರ್ಪಣೆ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ರಾತ್ರಿ ಕ್ಷೇತ್ರ ಪ್ರಾಕಾರ ಬಲಿ, ಧ್ವಜ ಪ್ರಾಥನೆ, ಮಹಾ ದಂಡ ಬಲಿ, ವಿಶೇಷ ಭೂತರಾಜ ಬಲಿ, ಗರುಡ ಯಂತ್ರೋತ್ಸವ, ಏ.7 ರಂದು ಮಧ್ಯಾಹ್ನ ವಸಂತ ಪೂಜಾ ಸಂವಾದ, ಕಲಹ, ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾರೋಹಣ, ಏ.19 ರಂದು ಅಮಾವಾಸ್ಯೆಯ ದಿನ ಸಂಪ್ರೋಕ್ಷಣ ಇರುತ್ತದೆ.
ಇದನ್ನೂ ಓದಿ: ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ
ರಥೋತ್ಸವ: ಏ.6 ರಂದು ಶ್ರೀ ದೇವರ ರಥೋತ್ಸವವಿದ್ದು, ಪ್ರಾತಃಕಾಲ ಮಹಾರಥ ಶುದ್ಧಿ, ರಥ ಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನ ರಥನಯನ(ರಥ ಎಳೆಯುವುದು), ನಂತರ ಭಕ್ತರಿಗೆ ಶ್ರೀ ದೇವರ ದರ್ಶನವಿರುತ್ತದೆ. ಅಂದು ರಾತ್ರಿ 9 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ರಥದ ಗಾಲಿಗೆ ಕಾಯಿ ಒಡೆಯುವುದು, ರಥಾವರೋಹಣ, ವಸಂತ ಪೂಜೆ ನಡೆಯಲಿದೆ.
ಇದನ್ನೂ ಓದಿ: Chenab Bridge | ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ದೇಶ20 hours ago
Chenab Bridge | ಐಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್10 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ21 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್