Gold Rate Today: ಬಂಗಾರದ ಬೆಲೆಯಲ್ಲಿ ಸ್ವಲ್ಪ ಏರಿಕೆ, 10 ಗ್ರಾಂ ದರ ಹೀಗಿದೆ - Vistara News

ಕರ್ನಾಟಕ

Gold Rate Today: ಬಂಗಾರದ ಬೆಲೆಯಲ್ಲಿ ಸ್ವಲ್ಪ ಏರಿಕೆ, 10 ಗ್ರಾಂ ದರ ಹೀಗಿದೆ

ಚಿನ್ನದ ಬೆಲೆ (Gold Rate Today) ಸೋಮವಾರ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಏರಿದೆ. 22 ಕ್ಯಾರಟ್‌ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳು ಕ್ರಮವಾಗಿ ₹10 ಹಾಗೂ ₹11 ಹೆಚ್ಚಳ ಕಂಡಿದೆ.

VISTARANEWS.COM


on

gold rate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಿನ್ನದ ಬೆಲೆ (Gold Rate Today) ಸೋಮವಾರ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಏರಿದೆ. 22 ಕ್ಯಾರಟ್‌ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳು ಕ್ರಮವಾಗಿ ₹10 ಹಾಗೂ ₹11 ಹೆಚ್ಚಳ ಕಂಡಿದೆ.

ಬೆಂಗಳೂರಿನಲ್ಲಿ ನೀವಿಂದು ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹5,555ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹44,400 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹55,550 ಮತ್ತು ₹ 5,55,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,060 ಆಗಿದ್ದರೆ, ಎಂಟು ಗ್ರಾಂ ಬೆಲೆ ₹48,480 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹60,600 ಮತ್ತು ₹6,06,000 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ ₹71.75, ಎಂಟು ಗ್ರಾಂ ₹574 ಮತ್ತು 10 ಗ್ರಾಂ ₹717.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,175 ಮತ್ತು 1 ಕಿಲೋಗ್ರಾಂಗೆ ₹71,750 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ
22 ಕ್ಯಾರಟ್ 24 ಕ್ಯಾರಟ್
ದಿಲ್ಲಿ
55,700 60,750
ಮುಂಬಯಿ55,550 61,090
ಬೆಂಗಳೂರು
55,550 61,090
ಚೆನ್ನೈ 56,150 61,750

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ:

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

Prajwal Revanna Case: 2 ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು.

VISTARANEWS.COM


on

Prajwal Revanna Case
Koo

ಬೆಂಗಳೂರು: ಎಚ್‌.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ 2 ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್ 14ಕ್ಕೆ ಹೈಕೋರ್ಟ್ ಮೂಂದೂಡಿದೆ. ಹೈಕೋರ್ಟ್‌ನ ನ್ಯಾ. ಕೃಷ್ಣ ಧೀಕ್ಷಿತ್ ಅವರಿದ್ದ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಇದೇ ವೇಳೆ ರೇವಣ್ಣ ಜಾಮೀನು ರದ್ದು ಮಾಡಲು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ಮುಂದೂಡಿಕೆ.

ಈವರೆಗೆ 2 ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಹೊಳೆನರಸೀಪುರದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Prajwal Revanna Case), ಕೆ.ಆರ್.ನಗರದ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣಗಳಲ್ಲಿ ಹುರುಳಿಲ್ಲ, ಇದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ರೇವಣ್ಣ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತೀಚೆಗೆ ಕೆ.ಆರ್‌.ನಗರದ ಸಂತ್ರಸ್ತೆಯ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಮೇ 13ರಂದು ಜಾಮೀನು ದೊರೆತಿತ್ತು. ನಂತರ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಮೇ 20ರಂದು ಜಾಮೀನು (Bail) ಮಂಜೂರಾಗಿತ್ತು. ಇದೀಗ ಎರಡು ಎಫ್‌ಐಆರ್‌ ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ | Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

ಬೆಂಗಳೂರು: ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ (Bhavani Revanna) ಅವರು ಕೆ.ಆರ್‌.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ವಿಚಾರಣೆಗಾಗಿ ಎಚ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ (Prajwal Revanna Case) ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿರುವುದು ಕಂಡುಬಂದಿದೆ.

ಸಿಐಡಿಯಲ್ಲಿರುವ ಎಸ್ಐಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ‌ ಆಗಮಿಸಿದ್ದಾರೆ. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್‌ಐಟಿ (SIT) ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಭವಾನಿ ರೇವಣ್ಣ ಪ್ರತ್ಯಕ್ಷವಾಗಿದ್ದಾರೆ.

ಒಂದು ವಾರ ಮಧ್ಯಂತರ ಜಾಮೀನು

ಕೆ.ಆರ್. ನಗರ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿತ್ತು. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿತ್ತು.

ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು 11 ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್‌ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಭವಾನಿ ಅವರಿಗೆ ಕೋರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವರು ನಡೆದುಕೊಳ್ಳಬೇಕಿದೆ. ಅವುಗಳು ಹೀಗಿವೆ:
1) ಭವಾನಿ ಅವರು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಬೇಕು.
2) ವಿಚಾರಣೆಯ ನಂತರ ಐದು ಗಂಟೆಯ ಬಳಿಕ ಅವರನ್ನು ಇಟ್ಟುಕೊಳ್ಳಬಾರದು.
3) ಕೆ.ಆರ್‌ ನಗರ ತಾಲ್ಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಬಾರದು.
4) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗಿತ್ತು. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆದಿತ್ತು. ಅವರ ಮೊಬೈಲ್ ಲೊಕೇಶನ್‌ ಟವರ್ ಡಂಪ್, ಸಿಡಿಆರ್ ಪರಿಶೀಲನೆ ನಡೆಸಲಾಗಿತ್ತು. ಇದೀಗ ಮಧ್ಯಂತ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಅವರೇ ವಿಚಾರಣೆಗೆ ಆಗಮಿಸಿದ್ದಾರೆ.

Continue Reading

ಕರ್ನಾಟಕ

Pesticides in Spices: MDH, Everest ಬೆನ್ನಲ್ಲೇ ರಾಜ್ಯದ ಮಸಾಲೆ ಪದಾರ್ಥಗಳಿಗೂ ತಟ್ಟಿದ ಬ್ಯಾನ್‌ ಬಿಸಿ

Pesticides in Spices: ಸುದ್ದಿ ಮಾಧ್ಯಮಗಳಲ್ಲಿ ಮಸಾಲೆ ಪದಾರ್ಥಗಳ ಗುಣಮಟ್ಟವು ಕಳಪೆಯಾಗಿರುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿದೆ.

VISTARANEWS.COM


on

Pesticides in Spices
Koo

ನವದೆಹಲಿ: ಇತ್ತೀಚೆಗಷ್ಟೇ ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪದ ನಂತರ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳ ಮಾರಾಟವನ್ನು ಸಿಂಗಾಪುರ, ಹಾಂಗ್ ಕಾಂಗ್ ನಿಷೇಧಿಸಲಾಗಿತ್ತು. ಇದೀಗ ಕರ್ನಾಟಕ ಸರ್ಕಾರ(Karnataka Government) ಕೂಡ ಗುಣಮಟ್ಟವಲ್ಲದ ಮಸಾಲೆ ಪದಾರ್ಥ(Pesticides in Spices) ಮತ್ತು ‘ಚಹಾಪುಡಿ’ಗಳ ಪಟ್ಟಿ ಬಿಡುಗಡೆ ಮಾಡಿದೆ.

ಸುದ್ದಿ ಮಾಧ್ಯಮಗಳಲ್ಲಿ ಮಸಾಲೆ ಪದಾರ್ಥಗಳ ಗುಣಮಟ್ಟವು ಕಳಪೆಯಾಗಿರುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿದೆ.

ತುಮಕೂರಿನ ಮೆಣಸಿನಕಾಯಿ ಪುಡಿ, ಮೈಸೂರು ಗ್ರಾಮಾಂತರದ ಕೌಶಿಕ್ ಪುಡ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಕೊಪ್ಪಳದ ಶ್ರೀ ಮಂಜುನಾಥ ಬ್ರ್ಯಾಂಡ್‍ನ ಮೆಣಿಸಿನಕಾಯ ಮತ್ತು ಕ್ಯಾಪ್ಸಿಕಾಂ (ಲಾಲ್ ಮಿರ್ಚಿ), ಮಂಡ್ಯದ ಸಾಂಬರ್ ಪುಡಿ, ದಾವಣಗೆರೆಯ ಅಪೇಕ್ಷಾ ಬ್ರ್ಯಾಂಡ್‍ನ ಸಾಂಬಾರು ಪುಡಿ, ಚಿಕ್ಕಬಳ್ಳಾಪುರದ ಎ.ಆರ್.ಕೆ ಬ್ರ್ಯಾಂಡ್‍ನ ಮೆಣಿಸಿನಕಾಯಿ ಪುಡಿ, ದಕ್ಷಿಣ ಕನ್ನಡದ ಅರುಣ್ ಮಸಾಲ ಬ್ರ್ಯಾಂಡ್‍ನ ಗರಂ ಮಸಾಲ, ಚಿಕ್ಕಮಗಳೂರಿನ ಎವರೆಸ್ಟ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಚಿಕ್ಕಬಳ್ಳಾಪುರದ ಮೆಣಸಿನಕಾಯಿ ಪುಡಿ, ಕೊಡುಗಿನ ಈಸ್ಟ್ರನ್ ಬ್ರ್ಯಾಂಡ್‍ನ ಧನಿಯಾ ಪುಡಿ, ಲೋಲಾರದ ಸಾಂಬರುಪುಡಿ ಮತ್ತು ಮೆಣಸಿನಕಾಯಿ ಪುಡಿ, ರಾಯಚೂರಿನ ಜಿ.ಸ್ಪೆಷಲ್ (ಸ್ಥಳೀಯ) ಬ್ರ್ಯಾಂಡ್‍ನ ಜಿ.ಟಿ. ಸ್ಪೆಷಲ್ ಮೆಣಸಿನಕಾಯಿಪುಡಿ, ಗದಗಿನ ಎಂ.ಜಿ.ಆರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚಿತ್ರದುರ್ಗದ ಮಾರುತಿ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಯಾದಗಿರಿಯ ಚಾರ್‍ಮಿನಾರ್ ಸ್ಪೀಸಿಸ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಹಾವೇರಿಯ ಮೆಣಸಿನಕಯಿ ಪುಡಿ, ಕಲಬುರಗಿಯ ಎಂಟಿಆರ್ ಚಿಲ್ಲಿಪೌಡರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚೆನ್ನರಾಯಪಟ್ಟಣದ ತೇಜು ಸಾಂಬರ್ ಪೌಡರ್ ಬ್ರ್ಯಾಂಡ್‍ನ ಸಾಂಬಾರು ಪುಡಿ, ಶಿವಮೊಗ್ಗೆ ಎವರೆಸ್ಡ್ ಬ್ರ್ಯಾಂಡ್‍ನ ತೀಕಾಲಾಲ್ ಹಾಟ್ ಅಂಡ್ ರೆಡ್ ಮೆಣಸಿನಕಾಯಿ ಪುಡಿ, ಬಿ.ಬಿ.ಎಂ.ಪಿ, ಪೂರ್ವದ ಎ.ವಿವಿಎ ಬ್ರ್ಯಾಂಡ್‍ನ ಬಿಸಿಬೇಳೆ ಬಾತ್ ಪಛಡರ್, ಸಾಂಬಾರು ಪುಡಿ, ವಾಂಗಿಬಾತ್ ಪುಡಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಸಮಬಂಧ ಆಹಾರ ಮಾದರಿಗಳ ತಯಾರಕರುಗಳ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳು 2011ರನ್ವಯ ಕನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಹಾಪುಡಿಗಳಲ್ಲೂ ಫೆಸ್ಟಿಸೈಡ್‌ ಪತ್ತೆ

ಇದಲ್ಲದೇ ಚಹಾಪುಡಿಗಳಲ್ಲಿನ ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳಿಗೆ ಸಂಬಂಧಿಸಿದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಚಹಾಪುಡಿಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳ 45 ಮಾದರಿಗಳಲ್ಲಿ ಕೆಲವು ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳು ನಿಗಧಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿ ನೀಡಲಾಗಿದೆ.

ಯಾವೆಲ್ಲಾ ಕಾಫಿ ಪುಡಿ ಬ್ರ್ಯಾಂಟ್‌ ಪಟ್ಟಿಯಲ್ಲಿವೆ?

ಧಾರವಾಡದ ಅಮೃತ್ ಟೀ ಪೌಡರ್ ಬ್ಯಾಚ್ ನಂ 3, ಅಮೃತ್ ಪ್ರೀಮಿಯಂ ಟೀ ಪೌಡರ್ ಬ್ಯಾಚ್ ನಂ. 2, ಅಮೃತ್ ಗೋಲ್ಡ್ ಟೀ ಪೌಡರ್ ಬ್ಯಾಚ್ ನಂ.2, ಬಾಗಲಕೋಟೆಯ ಸಲಿಮಾರ್ – ಗೋಲ್ಡ್ ಪ್ರೀಮಿಯಂ ಅಸ್ಸಾಂ ಟೀ ಪೌಡರ್ ಬ್ಯಾಚ್ ನಂ. ಡಿಸಿ1476, ವಾಗ್ ಬಕ್ರಿ ಲೀಪ್ ಟೀ ಬ್ಯಾಚ್ ನಂ.ಡಿಕೆಕೆಸಿಎಲ್‍ಜಿಎಎಸ್‍ಇಸಿಬಿ5127, ಅಸ್ಸಾಂ ಗೋಲ್ಡ್ ಕಪ್ ಸಿಟಿಸಿ ಟೀ ಬ್ಯಾಚ್ ನಂ.ಎಎಸ್‍ಎಲ್ 226 ಟೀಪೌಡರ್ (ಅನ್‍ಬ್ರಾಂಡೆಡ್) ಬೆಳಗಾವಿಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಬಳ್ಳಾರಿಯ ಬ್ರೂಕ್ ಬ್ರಾಂಡ್ ಲೆಡ್ ಲೇಬಲ್ ಟೀ ಬ್ಯಾಚ್ ನಂ.ಎಫ್11ಸಿಐ, ಟೀ ಪೌಡರ್ – ಮಿಲಿ ಪ್ರೀಮಿಯಂ ಬ್ಯಾಚ್ ನಂ ಡಿಡಿ.ಸಿಎಚ್7 ಎಫ್‍ಬಿಎಸ್‍ಇಸಿಬಿ1173, ಮಂಜುನಾಥ ಸ್ಪೆಷಲ್ ರಾಯಲ್ ಟೀ ಬ್ಯಾಚ್ ನಂ.ಎಂಸಿ05, ಬೀದರ್‍ನ ಟೀ ಪೌಡರ್ (ಅನ್‍ಬ್ರಾಂಡೆಡ್) ಲೂಸ್ ಟೀ ಪೌಡರ್ (ಅನ್‍ಬ್ರಾಂಡೆಡ್), ಹಾವೇರಿಯ ಲೂಸ್ ಟೀ ಪೌಡರ್ ಬ್ಯಾಚ್ ಎ431/1ಎ525/1, ಟೀ ಪೌಡರ್ ಅನ್‍ಬ್ರಾಂಡೆಡ್ ಬಾಗಲಕೋಟೆಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಗದಗ್‍ನ ಟೀ ಪೌಡರ್ ಅನ್‍ಬ್ರಾಂಡೆಡ್ ಬ್ಯಾಚ್ ನ. 06ಪಿಪಿ44-2, ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ರಾಯಚೂರಿನ ಮೋದಿ ಗೋಲ್ಡ್ ಟೀ ಬ್ಯಾಚ್ ನಂ.4ಎಚ್40ಜಿ, ಟೀ ಪೌಡರ್ (ರೂಬಿ) ಬ್ಯಾಚ್ ನಂ. ಎಚ್‍ಎಫ್21ಎ6, ಟೀ ಪೌಡರ್-ಮಹಾವೀರ್ ಸಿಟಿಸಿ ಡಸ್ಟ್ ಟೀ ಬ್ಯಾಚ್ ನಂ ಆರ್‍ಕೆ25, ನೂಟಾನ್ಸ್ ಸೂಪರ್ ಟೇಸ್ಟಿ ಸ್ಪೆಷಲ್ ಗಾರ್ಡನ್ ಪ್ರೆಶ್ ಟೀ ಬ್ಯಾಚ್ ನಂ.ಎಸ್‍ಟಿ07, ನೂಟಾನ್ಸ್ ಸೂಪರ್ ಟೇಸ್ಟಿ ಟೀ ಬ್ಯಾಚ್ ನಂ.ಇಎಲ್09, ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯಪುರದ ಟಿಇಝಡ್ ಎಲಾಚೀ ಚಾಯ್ ಬ್ಯಾಚ್ ನಂ.ಎ324/4, ಟೀ ಪೌಡರ್ (ರೆಡ್ ಲೇಬಲ್) ಬ್ಯಾಚ್ ನಂ. ಜೆ10ಬಿ2, ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ ಜೆ10ಬ6, ಟೀ-ಪೌಡರ್ ಜಿಎಸ್ ಟೀ, ಎಚ್‍ಡಿಎಂಸಿ ಹುಬ್ಬಳ್ಳಿಯ ಟೀ ಪೌಡರ್ (ಲೂಸ್), ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ. ಎಫ್12ಎ2, ಕೊಪ್ಪಳದ ಶಾಲಿಮರ್ ಗೋಲ್ಡ್ ಟೀ ಬ್ಯಾಚ್ ನಂ ಡಿಸಿ1022, ಶಿವಗಂಗ ಗೋಲ್ಡ್ ಟೀ ಬ್ಯಾಚ್ ನಂ 00, ಟೀ (ಅನ್‍ಬ್ರಾಂಡೆಡ್), ಯಾದಗಿರಿಯ ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯನಗರದ ಟೀ ಪೌಡರ್ ಅನ್‍ಬ್ರಾಂಡೆಡ್, ಟೀ ಪೌಡರ್ ವಾಗ್ ಬಕ್ರಿ ಬ್ಯಾಚ್ ನಂ.ಡಿಡಿಎಚ್‍ಎಸ್3ಜಿಎಎಸ್‍ಇಸಿಬಿ3032 ಅಸುರಕ್ಷಿತ ಎಂದು ವರದಿ ನೀಡಲಾಗಿದೆ.

ಇದನ್ನೂ ಓದಿ:Election Results 2024: ಸಂಸದರಾಗಿ ಆಯ್ಕೆಯಾದ ಉತ್ತರ ಪ್ರದೇಶದ ಎಂಟು ಶಾಸಕರು; ಶೀಘ್ರ ಉಪಚುನಾವಣೆ

Continue Reading

ಸ್ಯಾಂಡಲ್ ವುಡ್

Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

Nikhil Kumaraswamy: ಜಾಗ್ವಾರ್’ ಸಿನಿಮಾ ಮೂಲಕ ನಿಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಿಖಿಲ್‌ ಕೆಲವು ದಿನಗಳ ಹಿಂದೆ ಹೊಸ ಸಿನಿಮಾಗೆ ಚಿತ್ರೀಕರಣ ತೊಡಗಿಸಿಕೊಂಡಿದ್ದರು. ಕಮಲ್ ಹಾಸನ್, ರಜನಿಕಾಂತ್, ಅಜಿತ್‌, ವಿಜಯ್‌ ಸೇರಿದಂತೆ ಅನೇಕ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಕುಮಾರ್ (Nikhil Kumaraswamy) ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ.

VISTARANEWS.COM


on

Nikhil Kumaraswamy may Good Bye To Cinema
Koo

ಬೆಂಗಳೂರು: ಎಚ್‌ಡಿ ಕುಮಾರಸ್ವಾಮಿ ಗೆಲುವಿನ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವ ಜವಾಬ್ದಾರಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಮೇಲೆ ಬಿದ್ದಿದೆ. ಈ ಸಂಬಂಧ ಇತ್ತೀಚೆಗೆ ಪ್ರತಿಕಾಗೋಷ್ಠಿಯನ್ನು ನಡೆಸಿ, ತಮ್ಮ ಮುಂದಿನ ನಡೆಯ ಬಗ್ಗೆ ಮಾತಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ. “ಸಿನಿಮಾವನ್ನು ಸಂಪೂರ್ಣ ಬಂದ್ ಮಾಡಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.  ನಾನು‌ ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತೇನೆ” ಎಂದರು.

ಜೆಡಿಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಈ ಫಲಿತಾಂಶದ ಬಳಿಕ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ʻʻನಾನು ಸಿನಿಮಾ ಸಂಪೂರ್ಣವಾಗಿ ಬಂದ್‌ ಮಾಡಿದ್ದೇನೆ. ರಾಜಕೀಯದಲ್ಲಿ ಇವತ್ತು ನನ್ನದೇ ಆದ ಜವಾಬ್ದಾರಿಗಳಿವೆ. ನಾನು‌ ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತೇನೆ.  ರಾಜ್ಯಾಧ್ಯಕ್ಷನಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಯುವ ಕಾರ್ಯಕರ್ತರಿಗೆ ಹೊಸ ಚೇತನವನ್ನು ತುಂಬಿಸಬೇಕು. ಹಾಗೇ ಜೆಡಿಎಸ್ ಕಾರ್ಯಕರ್ತನಾಗಿ ಕೆಲಸವನ್ನು ಮುಂದುವರಿಸುತ್ತೇನೆʼʼ ಎಂದು ಅವರು ಘೋಷಿಸಿದ್ದಾರೆ. ಈ ಮೂಲಕ ಅವರು ಸಿನಿಮಾ ರಂಗ ತೊರಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

‘ಜಾಗ್ವಾರ್’ ಸಿನಿಮಾ ಮೂಲಕ ನಿಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಿಖಿಲ್‌ ಕೆಲವು ದಿನಗಳ ಹಿಂದೆ ಹೊಸ ಸಿನಿಮಾಗೆ ಚಿತ್ರೀಕರಣ ತೊಡಗಿಸಿಕೊಂಡಿದ್ದರು. ಕಮಲ್ ಹಾಸನ್, ರಜನಿಕಾಂತ್, ಅಜಿತ್‌, ವಿಜಯ್‌ ಸೇರಿದಂತೆ ಅನೇಕ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಕುಮಾರ್ (Nikhil Kumaraswamy) ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಶುರುವಾಗಿತ್ತು. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

ತಮಿಳಿನಲ್ಲಿ ‘ಕತ್ತಿ’, ‘2.0’, ‘ದರ್ಬಾರ್’, ‘ಪೊನ್ನಿyನ್ ಸೆಲ್ವನ್’ ಸೇರಿದಂತೆ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಕೆಲವೇ ದಿನಗಳ ಹಿಂದೆಯಷ್ಟೆ ಖಾಸಗಿ ಹೋಟೆಲ್‌ನಲ್ಲಿ ಪ್ರೊಡಕ್ಷನ್ ನಂ. 28 ಸಿನಿಮಾ ಮುಹೂರ್ತ ನೆರವೇರಿತ್ತು. ಮಾಜಿ ಪ್ರಧಾನಿ ಎಚ್‌. ಡಿ ದೇವಗೌಡರು, ಮಾಜಿ ಸಿಎಂ ಎಚ್‌. ಡಿ ಕುಮಾರಸ್ವಾಮಿ ಈ ಸಮಾರಂಭದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿದ್ದರು.

Continue Reading

ಬೆಂಗಳೂರು

Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

Road Accident: ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ಶುಕ್ರವಾರ ಬೆಳಗ್ಗೆ ಅಪಘಾತ ನಡೆದಿದೆ. ವೇಗವಾಗಿ ಬಂದು ವಾಟರ್‌ ಟ್ಯಾಂಕರ್‌ ಡಿಕ್ಕಿಯಾಗಿದ್ದರಿಂದ ಬೈಕ್‌ನಲ್ಲಿ ಹೋಗುತ್ತಿದ್ದ ಅಕ್ಕ-ತಮ್ಮ ಮೃತಪಟ್ಟಿದ್ದಾರೆ.

VISTARANEWS.COM


on

Road accident
Koo

ಬೆಂಗಳೂರು: ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ ತಮ್ಮ-ಬಲಿಯಾಗಿರುವ ಘಟನೆ (Road Accident) ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ವೇಗವಾಗಿ ಬಂದ ವಾಟರ್ ಟ್ಯಾಂಕರ್, ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳಾದ ಮಧುಮಿತ (20), ರಂಜನ್(18) ಮೃತರು. ಬೆಂಗಳೂರಿನ ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಮಧುಮಿತ ವ್ಯಾಸಂಗ ಮಾಡುತ್ತಿದ್ದಳು. ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಹೋಗಿದ್ದ. ಈ ವೇಳೆ ಕಿಲ್ಲರ್ ವಾಟರ್ ಟ್ಯಾಂಕರ್ ಇಬ್ಬರನ್ನೂ ಬಲಿ ಪಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಗಿದೆ.

ಬೈಕ್‌ ಮಿರರ್‌ಗೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾಗುತ್ತಲೇ ಅಕ್ಕ-ತಮ್ಮ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ‌ ಹರಿದು ದುರಂತ ಸಂಭವಿಸಿದೆ. ವಾಟರ್ ಟ್ಯಾಂಕರ್ ಚಾಲಕನ ಅತಿ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ಕಾರು ಅಪಘಾತ, 3 ಸಾವು, ಮರದಲ್ಲಿ ನೇತಾಡಿದ ಪ್ರಯಾಣಿಕನ ಶವ

road accident gauribidanuru

ಚಿಕ್ಕಬಳ್ಳಾಪುರ: ಭೀಕರ ಕಾರು ಅಪಘಾತವೊಂದರಲ್ಲಿ (Road Accident) ಕಾರು ಕಾಲುವೆಗೆ ಬಿದ್ದು (car Accident) ಮೂವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದ್ದು, ಇದನ್ನು ನೋಡಿದವರೇ ಬೆಚ್ಚಿಬಿದ್ದಿದ್ದಾರೆ.

ಗೌರಿಬಿದನೂರು (Gauribidanur) ತಾಲ್ಲೂಕಿನ ವಾಟದಹೊಸಹಳ್ಳಿ ಬಳಿ ದುರ್ಘಟನೆ ನಡೆದಿದೆ. ರಾತ್ರಿಯೇ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದ್ದು, ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಕೊಂಡಿದೆ. ಕಾರಿನಲ್ಲಿ ನಾಲ್ವರಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ. ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದ ಕಾರಿನಿಂದ ಚಿಮ್ಮಿದ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಯತ್ನ; ಅಕ್ಷರ ದಾಸೋಹದಲ್ಲಿ ಮೇಲಧಿಕಾರಿಗಳ ಕಿರುಕುಳ?

ರಾಯಚೂರು: ರಾಯಚೂರಲ್ಲಿ ಅಕ್ಷರ ದಾಸೋಹ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ವರದಿಯಾಗುತ್ತಿರುವ ಇಂಥ ಮೂರನೇ ಪ್ರಕರಣವಾಗಿದೆ.

ಲಿಂಗಸಗೂರು ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕ ಮೌನೇಶ್ ಕಂಬಾರ ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಸುಮಾರು 40ಕ್ಕೂ ಹೆಚ್ಚು ನಿದ್ರೆ ಟ್ಯಾಬ್ಲೆಟ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ತಿಂಗಳು ಹಿಂದಷ್ಟೇ ಸಹಾಯ ನಿರ್ದೇಶಕರಾಗಿ ಇವರು ನೇಮಕಗೊಂಡಿದ್ದರು. ಕೆಲಸದ ಜತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಏಕಾಏಕಿ ಕಚೇರಿಯಿಂದ ಒಂದು ದಿನದ ಮಟ್ಟಿಗೆ ರಜೆ ಪಡೆದಿದು ಮನೆಗೆ ಬಂದಿದ್ದ ಮೌನೇಶ್, ಮನೆಯಲ್ಲೇ ಟ್ಯಾಬ್ಲೆಟ್‌ಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಲಿಂಗಸಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Murder Case : ಸ್ನೇಹಿತರೇ ಕೊಲೆಗಾರರು; ಬರ್ತ್‌ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ

ಕಳೆದ ತಿಂಗಳು ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಅವರು ಬರೆದಿಟ್ಟ ಡೆತ್‌ನೋಟ್‌ ಇದೀಗ ಸಚಿವರ ತಲೆದಂಡ ಪಡೆದಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಮಹಾ ನಿರ್ದೇಶಕರೊಬ್ಬರು ಕಾಮಗಾರಿ ನಡೆಸಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಬಿಲ್‌ ಹಣ ಬಿಡುಗಡೆಯಾಗಿತ್ತು.

Continue Reading
Advertisement
Prajwal Revanna Case
ಕರ್ನಾಟಕ1 min ago

Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

Pesticides in Spices
ಕರ್ನಾಟಕ19 mins ago

Pesticides in Spices: MDH, Everest ಬೆನ್ನಲ್ಲೇ ರಾಜ್ಯದ ಮಸಾಲೆ ಪದಾರ್ಥಗಳಿಗೂ ತಟ್ಟಿದ ಬ್ಯಾನ್‌ ಬಿಸಿ

Narendra Modi
Lok Sabha Election 202423 mins ago

Narendra Modi: ಮುಂದಿನ ಹತ್ತು ವರ್ಷ ನಾವೇ: ನರೇಂದ್ರ ಮೋದಿ

Nikhil Kumaraswamy may Good Bye To Cinema
ಸ್ಯಾಂಡಲ್ ವುಡ್35 mins ago

Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

Road accident
ಬೆಂಗಳೂರು40 mins ago

Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

karnataka rain
ಮಳೆ50 mins ago

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

karnataka Rain
ಮಳೆ52 mins ago

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

T20 World Cup
ಕ್ರೀಡೆ52 mins ago

T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

NDA Meeting
Lok Sabha Election 20241 hour ago

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ

Chetan Ahimsa says that Upendra is not intelligent he is delusional
ಸ್ಯಾಂಡಲ್ ವುಡ್1 hour ago

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌