Conversion | ಬಲವಂತದ ಮತಾಂತರಕ್ಕೆ ಯತ್ನ ಆರೋಪ, ಹುಬ್ಬಳ್ಳಿಯಲ್ಲಿ 11 ಜನರ ವಿರುದ್ಧ ಕೇಸ್‌ ದಾಖಲು - Vistara News

ಕ್ರೈಂ

Conversion | ಬಲವಂತದ ಮತಾಂತರಕ್ಕೆ ಯತ್ನ ಆರೋಪ, ಹುಬ್ಬಳ್ಳಿಯಲ್ಲಿ 11 ಜನರ ವಿರುದ್ಧ ಕೇಸ್‌ ದಾಖಲು

ಹುಬ್ಬಳ್ಳಿಯಲ್ಲಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿ 11 ಜನರ ವಿರುದ್ಧ ಪೊಲೀಸರು ಕೇಸ್‌ ದಾಖಲಿಸಿದ್ದು, (Conversion) ತನಿಖೆ ಮುಂದುವರಿದಿದೆ.

VISTARANEWS.COM


on

murder ಸುರಪುರ ಕೆಂಬಾವಿ ಜೋಡಿ ಕೊಲೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಮತಾಂತರಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ (Conversion) ದಾಖಲಾಗಿದೆ.

ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಎಂಬುವವರು ಮತಾಂತರಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ್ದಾರೆ. ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಶ್ರೀಧರ ದೂರು ದಾಖಲಿಸಿದ್ದಾರೆ.

ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್‌ ದಸ್ತಗಿ‌, ಮಹ್ಮದ್ ಇನ್ಸಾಲ್, ರಫಿಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಳೆದ ಮೇ ತಿಂಗಳಲ್ಲಿ ಶ್ರೀಧರ ಅವರನ್ನು ಬೆಂಗಳೂರಿಗೆ ಆರೋಪಿಗಳು ಕರೆದೊಯ್ದಿದ್ದರು. ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟು ಮತಾಂತರಕ್ಕೆ ಯತ್ನಿಸಲಾಗಿದೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಲಾಗಿದೆ.

ಪ್ರತಿವರ್ಷ ಮೂವರನ್ನು ಇಸ್ಲಾಂಗೆ ಮತಾಂತರ ಮಾಡಬೇಕೆಂದು ಆಗ್ರಹಿಸಲಾಗಿದೆ. ಕೈಯ್ಯಲ್ಲಿ ಪಿಸ್ತೂಲ್‌ ಹಿಡಿಸಿ ಫೋಟೊ ತೆಗೆದು, ಭಯೋತ್ಪಾದಕನೆಂದು ಬಿಂಬಿಸುವುದಾಗಿ ಬೆದರಿಕೆ ಹಾಕಲಾಗಿದೆ. ಸೆಪ್ಟೆಂಬರ್ 21ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪಕ್ಕೆ ಬಂದಾಗ ಹಲ್ಲೆ ನಡೆಸಲಾಗಿದೆ ಎಂದು ಶ್ರೀಧರ ಅವರು ಆರೋಪಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rameswaram cafe: ದೇಶಾದ್ಯಂತ 18 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕದಲ್ಲಿಯೇ 12 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಕೆಲವು ಮಹತ್ವದ ಅಂಶಗಳು ಪತ್ತೆಯಾಗಿದ್ದಲ್ಲದೆ, ಕೆಲವು ಸುಳಿವುಗಳು ಸಹ ಸಿಕ್ಕಿದೆ. ಈಗ ಬಾಂಬ್‌ ಬ್ಲಾಸ್ಟ್‌ನ ಪ್ರಮುಖ ಆರೋಪಿ ಮುಜಾವೀರ್ ಹುಸೇನ್‌ಗೆ ಸಹಕಾರ ನೀಡಿದ ಪ್ರಮುಖ ಸಂಚುಕೋರನಾಗಿರುವ ಮುಜಾಮಿಲ್ ಶರೀಫ್‌ನನ್ನು ಬಂಧಿಸಲಾಗಿದೆ. ಈತ ಅಬ್ದುಲ್ ಮತೀನ್ ತಾಹಾ ಜತೆ ಕೂಡ ಸಂಪರ್ಕವನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Rameswaram cafe bomb blast case
Koo

ಬೆಂಗಳೂರು: ವೈಟ್‌ಫೀಲ್ಡ್‌ ಬಳಿಕ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ಗೆ (Rameswaram cafe blast case) ಸಂಬಂಧಪಟ್ಟಂತೆ ಎನ್ಐಎ ಅಧಿಕಾರಿಗಳು (NIA Officers) ಮುಖ್ಯ ಸಂಚುಕೋರನೊಬ್ಬನನ್ನು ಬಂಧಿಸಿದ್ದಾರೆ. ಬಾಂಬರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧನ ಮಾಡಲಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಮುಜಾಮಿಲ್ ಶರೀಫ್ ಬಂಧಿತ ಉಗ್ರ ಎನ್ನಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಮುಜಾವೀರ್ ಹುಸೇನ್ ಜತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೇಶಾದ್ಯಂತ 18 ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕದಲ್ಲಿಯೇ 12 ಕಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಕೆಲವು ಮಹತ್ವದ ಅಂಶಗಳು ಪತ್ತೆಯಾಗಿದ್ದಲ್ಲದೆ, ಕೆಲವು ಸುಳಿವುಗಳು ಸಹ ಸಿಕ್ಕಿದೆ ಎನ್ನಲಾಗಿದೆ. ಮುಜಾವೀರ್ ಹುಸೇನ್‌ಗೆ ಮುಜಾಮಿಲ್ ಶರೀಫ್ ಸಹಕಾರ ನೀಡಿದ್ದ ಅಲ್ಲದೆ, ಅಬ್ದುಲ್ ಮತೀನ್ ತಾಹಾ ಜತೆ ಕೂಡ ಸಂಪರ್ಕವನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಗುರುವಾರ ದಾಳಿ ನಡೆಸಿದ್ದ NIA

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಕೇಸ್ ಸಂಬಂಧ ಬುಧವಾರ ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಹದಿನೆಂಟು ಕಡೆ ಎನ್‌ಐಎ ತಂಡ ದಾಳಿ ನಡೆಸಿದೆ. ದಾಳಿ ವೇಲೆ ಹಲವು ವಸ್ತುಗಳು ಹಾಗೂ ಭಾರಿ ಪ್ರಮಾಣದ ಹಣ ಸಹ ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿತ್ತು. ಡಿಜಿಟಲ್ ಡಿವೈಸ್‌ಗಳನ್ನೂ ಸೀಜ್‌ ಮಾಡಲಾಗಿತ್ತು. ಈಗ ಓರ್ವ ಶಂಕಿತನನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಾಂಬರ್‌ಗೆ ಸಹಾಯ ಮಾಡಿದ್ದ?

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಮಾಡಿದವನಿಗೆ ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದ. ಆತನ ಓಡಾಟಕ್ಕೆ ಹಾಗೂ ಪರಾರಿಯಾಗಲು ಸಹಾಯ ಮಾಡಿದ್ದ ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ. ಮುಜಾವೀರ್ ಶಜೀಬ್ ಹುಸೇನ್, ಅಬ್ದುಲ್ ಮತೀನ್ ತಾಹಗೆ ಸಹ ಸಹಾಯ ಮಾಡಿದ್ದ ಎಂದು ತಿಳಿದುಬಂದಿದೆ.

ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ದಾಳಿ ವೇಳೆ ಹಲವು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ರಾಮೇಶ್ವರಂ ಕೆಫೆಗೆ ಪ್ರಮುಖ ಆರೋಪಿ ಮುಜಾವೀರ್ ಶಜೀಬ್ ಹುಸೇನ್ ಬಾಂಬ್ ಅನ್ನು ತಂದಿದ್ದ. ಈತನಿಗೆ ಅಬ್ದುಲ್ ಮತೀನ್ ತಾಹ, ಮುಜಾಮಿಲ್ ಶರೀಫ್ ಸಹಾಯ ಮಾಡಿದ್ದರು ಎಂಬುದು ಎನ್‌ಐಎಗೆ ತನಿಖೆ ವೇಳೆ ಗೊತ್ತಾಗಿದೆ. ಈ ಮಾಹಿತಿ ಸಿಕ್ಕ ಕೂಡಲೇ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿದೆ. ಈಗ ಉಳಿದ ಇಬ್ಬರಿಗಾಗಿ ತೀವ್ರ ಹುಡುಕಾಟವನ್ನು ನಡೆಸಲಾಗಿದೆ.

ಗುರಪ್ಪನಪಾಳ್ಯದಲ್ಲಿ ನೆಲಸಿದ್ದ ಮುಜಾವೀರ್ ಹುಸೇನ್!

ಸುದ್ಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ ಉಗ್ರ ಮುಜಾವೀರ್ ಹುಸೇನ್ ನೆಲಸಿದ್ದ. ಎನ್‌ಐಎ ದಾಳಿ ನಡೆಸಿದಾಗ 10ಕ್ಕೂ ಹೆಚ್ಚು ಜೀವಂತ ಗುಂಡುಗಳು, ಒಂದು ಗನ್, ಡಿಟೋನೇಟರ್ ಹಾಗೂ ಕಚ್ಚಾ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸೀಜ್‌ ಮಾಡಲಾಗಿತ್ತು. 2020ರಂದು ಎನ್‌ಐಎ ದಾಳಿ ನಡೆಸಿತ್ತು. ಅಂದಿನಿಂದ ಮುಜಾವಿರ್ ಹುಸೇನ್ ತಲೆಮರೆಸಿಕೊಂಡಿದ್ದ. ಸದ್ಯ ಈತನಿಗೆ ಸಹಾಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಸ್ಫೋಟ; ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ!

ಅಬ್ದುಲ್ ಮತೀನ್ ಜತೆಗೂ ಮುಜಾಮಿಲ್ ಶರೀಫ್ ಸಂಪರ್ಕ

ಮುಜಾಮಿಲ್ ಶರೀಫ್‌ ಇದ್ದ ನಿವಾಸದ ಮೇಲೆ ದಾಳಿ ನಡೆಸಿ ಡಿಜಿಟಲ್ ಡಿವೈಸ್,‌ ನಗದನ್ನು ವಶಕ್ಕೆ ಪಡೆಯಲಾಗಿದೆ. ಈತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಮೋಸ್ಟ್‌ ವಾಂಟೆಡ್‌ ಅಬ್ದುಲ್ ಮತೀನ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಅಬ್ದುಲ್ ಮತೀನ್ ನೇರವಾಗಿ ಹೊರದೇಶದ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕವನ್ನು ಹೊಂದಿದ್ದ. ಅಲ್ಲದೆ, ಶಾರೀಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಜತೆಗೂ ಈತ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.

Rameswaram cafe bomb blast Main conspirator trapped by NIA and Terrorist Abdul mateen taha
ಅಬ್ದುಲ್ ಮತೀನ್ ತಾಹ

ಯಾರು ಈ ಅಬ್ದುಲ್ ಮತೀನ್ ತಾಹ?

ಅಬ್ದುಲ್ ಮತೀನ್ ತಾಹ ಅಲ್ ಹಿಂದ್‌ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿಯಾಗಿರುವ ಈತ 2020ರಿಂದ ನಾಪತ್ತೆ ಆಗಿದ್ದಾನೆ. ಕಳೆದ ಐದು ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಆರಂಭದಲ್ಲಿ ಬ್ರಾಡ್‌ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ನಂತರ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಡಾರ್ಕ್‌ವೆಬ್ ಬಳಕೆ ಮಾಡುವುದರಲ್ಲಿ ಈತ ಪರಿಣಿತಿಯನ್ನು ಹೊಂದಿದ್ದ. ಇದರ ಜತೆಗೆ ಕುಕ್ಕರ್ ಬಾಂಬ್ ತಯಾರಿಕೆ ಮಾಡುವುದರಲ್ಲೂ ನಿಪುಣನಾಗಿದ್ದ. ಮ್ಯಾಚ್‌ಸ್ಟಿಕ್‌ನಲ್ಲಿರುವ ಫಾಸ್ಪರಸ್ ಬಳಸಿ ಕುಕ್ಕರ್ ಬಾಂಬ್ ಅನ್ನು ಈತ ತಯಾರಿಸುತ್ತಿದ್ದ. ಇದಲ್ಲದೆ, ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಡಗುದಾಣ ಕಲ್ಪಿಸುವ ಜವಾಬ್ದಾರಿ ಈತನದ್ದಾಗಿದೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಈಗಾಗಲೇ ಘೋಷಿಸಿದೆ.

Continue Reading

ಬೆಂಗಳೂರು

SSLC Students Fight: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹೊಡಿಬಡಿ; ಮೂವರಿಗೆ ಚಾಕು ಇರಿತ

SSLC Students Fight: ಬ್ಯಾಗ್‌ ಇಡುವ ವಿಚಾರಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ಮೂವರು ವಿದ್ಯಾರ್ಥಿಗಳಿಗೆ ಚಾಕು (Attempt to Murder Case) ಇರಿಯಲಾಗಿದೆ.

VISTARANEWS.COM


on

By

SSLC Students Fighting
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಎಸ್ಎಸ್ಎಲ್‌ಸಿ ಹುಡುಗರ ಮಾರಾಮಾರಿ ನಡೆದಿದ್ದು, ಮೂವರು ವಿದ್ಯಾರ್ಥಿಗಳು ಚಾಕು (SSLC Students Fight) ಇರಿತಕ್ಕೊಳಗಾಗಿದ್ದಾರೆ. ಪರೀಕ್ಷಾ ಕೊಠಡಿಯ ಹೊರಗೆ ಬ್ಯಾಗ್ ಇಡುವ ವಿಚಾರಕ್ಕೆ ರಾಗಿ ಗುಡ್ಡ ಹಾಗೂ ಸಾರಕ್ಕಿ ಬಳಿ ಇರುವ ಶಾಲಾ ವಿದ್ಯಾರ್ಥಿಗಳ ನಡುವೆ ಕಿರಿಕ್ ನಡೆದಿದೆ. ಪರೀಕ್ಷೆ ಮಗಿಸಿ ಮನೆಗೆ ಹೋಗುವಾಗ ಎರಡು ಶಾಲೆಗಳ ಮಕ್ಕಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಖಾಸಗಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಎರಡು ಶಾಲೆಯ ಮಕ್ಕಳು, ಪರೀಕ್ಷಾ ಕೇಂದ್ರದಲ್ಲಿ ಜಗಳ ನಡೆಸಿದ್ದಾರೆ. ಒಳಗೆ ಜಗಳವಾಡಿ ಅದೇ ದ್ವೇಷದಿಂದ ಹಿಂಬಾಲಿಸಿ ಬಂದಿದ್ದ ರಾಗಿ ಗುಡ್ಡ ಬಳಿ ಇರುವ ಶಾಲಾ ಬಾಲಕರು, ನಂತರ ಸಾರಕ್ಕಿ ಬಳಿ ಇರುವ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದು ಪರಾರಿ ಆಗಿದ್ದಾರೆ.

ನಿನ್ನೆ ಬುಧವಾರ ಮಧ್ಯಾಹ್ನ 1-45ಕ್ಕೆ ಘಟನೆ ನಡೆದಿದ್ದು, ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಎಲ್ಲ ಬಾಲಕರ ಮೇಲೂ ಕೊಲೆ ಯತ್ನ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ. ಪುಸ್ತಕ ಹಿಡಿಯಬೇಕಿದ್ದ ಕೈಗಳಿಗೆ ಈಗ ಕೋಳ ಬಿದ್ದಿದೆ.

ಇದನ್ನೂ ಓದಿ:Toll Hike: ಮತ್ತೆ ಟೋಲ್‌ ಬರೆ; ಬೆಂಗಳೂರು-ಮೈಸೂರು ಓಡಾಟ ಇನ್ನಷ್ಟು ದುಬಾರಿ

ಕುಡಿಯುವ ನೀರಿಗಾಗಿ ಚಿಮ್ಮಿತು ರಕ್ತ; ಚಾಕು ಇರಿದು ಯುವಕನ ಕೊಲೆ

ಯಾದಗಿರಿ: ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕರ (Water Crisis) ಶುರುವಾಗಿದೆ. ಗಂಟೆಗಟ್ಟಲೇ ಕಾಯುತ್ತಾ, ಹಗಲಿರುಳು ಎನ್ನದೇ ನಲ್ಲಿ ಮುಂದೆ ಕೂರುವಂತಾಗಿದೆ. ಬರಗಾಲವು ತೀವ್ರವಾಗಿ ಆವರಿಸಿದೆ. ಈ ಮಧ್ಯೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಂಬಂಧಿಕರೇ ಕಿತ್ತಾಡಿಕೊಂಡಿದ್ದು, ರಕ್ತವನ್ನೇ (Murder Case) ಹರಿಸಿದ್ದಾರೆ.

ಕುಡಿಯುವ ನೀರಿಗಾಗಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ನಂದಕುಮಾರ ಕಟ್ಟಿಮನಿ (21)ಕೊಲೆಯಾದವನು. ಹಣಮಂತ ಹಾಗೂ ಹಣಮವ್ವ ಕೊಲೆ ಆರೋಪಿಗಳಾಗಿದ್ದಾರೆ. ನೀರಿನ ವಿಚಾರವಾಗಿ ನಂದಕುಮಾರನ ಅಜ್ಜಿ ಜತೆ ಆರೋಪಿಗಳು ಜಗಳವಾಡಿದ್ದರು.

ಹೊರಹೋಗಿ ಮನೆಗೆ ವಾಪಸ್‌ ಬಂದ ನಂದಕುಮಾರಗೆ ಗಲಾಟೆ ವಿಚಾರವನ್ನು ಅಜ್ಜಿ ತಿಳಿಸಿದ್ದರು. ಹೀಗಾಗಿ ಅಜ್ಜಿ ಜತೆ ನೀವೂ ಯಾಕೆ ಜಗಳ ಮಾಡಿದ್ದೀರಿ ಎಂದು ಮೊಮ್ಮಗ ನಂದಕುಮಾರ್‌ ಸಂಬಂಧಿಗಳಾದ ಹಣಮಂತ ಮತ್ತು ಹಣಮವ್ವರಿಗೆ ಪ್ರಶ್ನೆ ಮಾಡಿದ್ದ. ಇದೇ ವೇಳೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಜಗಳವು ವಿಕೋಪಕ್ಕೆ ತಿರುಗಿದ್ದು, ನಂದಕುಮಾರ್‌ಗೆ ಹಾಗೂ ಈತನ ತಾಯಿಗೂ ಹಲ್ಲೆ ನಡೆಸಿದ್ದಾರೆ.

murder case Youth killed over drinking water dispute
ಕೊಲೆಯಾದ ನಂದಕುಮಾರ ಕಟ್ಟಿಮನಿ

ಇಷ್ಟಕ್ಕೆ ಸುಮ್ಮನಾಗದೆ ಹಣಮಂತ ಹಾಗೂ ಹಣಮವ್ವ ಎಂಬುವವರು ನಂದಕುಮಾರಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಣಮಂತ ಹಾಗೂ ಹಣಮವ್ಬ ಇಬ್ಬರನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು ಗ್ರಾಮಾಂತರ

Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ

Murder Case : ತವರು ಮನೆ ಸೇರಿದ್ದ ಪತ್ನಿ ವಾಪಸ್‌ ಬರಲಿಲ್ಲವೆಂಬ ಸಿಟ್ಟಿಗೆ ಪಾಪಿ ಪತಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

VISTARANEWS.COM


on

By

Murder case Family Dispute
ಪತ್ನಿಯನ್ನು ಕೊಂದ ಮುಬಾರಕ್‌
Koo

ಆನೇಕಲ್: ಪತ್ನಿಯನ್ನು ಬರ್ಬರವಾಗಿ ಕೊಂದು (Murder case) ಪತಿಯೊಬ್ಬ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಅರ್ಬಿಯಾ ತಾಜ್( 24) ಮೃತ ದುರ್ದೈವಿ. ಮುಬಾರಕ್(28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದವನು.

ಮುಬಾರಕ್‌ ಮಚ್ಚಿನಿಂದ ಕೊಚ್ಚಿ ಅರ್ಬಿಯಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅರ್ಬಿಯಾ ತಾಜ್ ಮುಬಾರಕ್‌ನ ಕಿರುಕುಳದಿಂದ ಬೇಸತ್ತಿದ್ದಳು. ಹೀಗಾಗಿ ತಿಂಗಳ ಹಿಂದೆ ತವರು ಮನೆಗೆ ಸೇರಿಕೊಂಡಿದ್ದಳು. ವಾರದ ಹಿಂದೆ ಅರ್ಬಿಯಾಳನ್ನು ಮನೆಗೆ ವಾಪಸ್‌ ಬರುವಂತೆ ಒತ್ತಾಯಿಸಿದ್ದ.

ಆದರೆ ಅರ್ಬಿಯಾ ತಾಜ್ ಗಂಡನ ಮನೆಗೆ ತೆರಳಲು ನಿರಾಕರಿಸಿದ್ದಳು. ಪತ್ನಿಯ ತವರು ಮನೆಗೆ ಬಂದಿದ್ದ ಮುಬಾರಕ್‌, ಬಾಗಿಲು ಬಡಿದಿದ್ದ. ತೆರೆಯದೇ ಇದ್ದಾಗ ಕೊಡಲಿ ಹಾಗೂ ಮಚ್ಚಿನಿಂದ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ನಂತರ ಮುಬಾರಕ್‌ ಮಚ್ಚಿನಿಂದ ಪತ್ನಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಂದಿದ್ದಾನೆ. ಇತ್ತ ಮಗಳ ಕೂಗಾಟ ಕೇಳಿ ತಾಯಿ ನೆರವಿಗೆ ಧಾವಿಸಿದಾಗ, ರೂಮಿನ ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.

Murder Case

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಗಣಿ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಬಿಯಾ ತಾಜ್‌ಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

ಎದುರಾಳಿಯ ಮುಗಿಸಲು ತಾನೇ ರೆಡಿ ಮಾಡಿದ್ದ ಹುಡುಗರಿಂದಲೇ ಕೊಲೆಯಾದ ರೌಡಿಶೀಟರ್‌

ಬೆಂಗಳೂರು: ಎದುರಾಳಿಯ ಕೊಲೆಗೆ ಸ್ಕೆಚ್ ಹಾಕಿ ಹುಡುಗರನ್ನು ರೆಡಿ ಮಾಡಿದ್ದ ರೌಡಿಶೀಟರ್‌ ದಿನೇಶ್‌ ಕುಮಾರ್‌, ಅವರಿಂದಲೇ ಬರ್ಬರವಾಗಿ ಕೊಲೆಯಾಗಿ (Murder case) ಹೋಗಿದ್ದ. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಟ್ಟು ಕೊಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ದಿನೇಶ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ‌ ಆರೋಪಿಗಳ ಪೈಕಿ ಇಬ್ಬರು ಕೊತ್ತನೂರು ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್‌ನನ್ನು ಹತ್ಯೆಗೈದಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Child Abduction: ಮಲೆನಾಡಿನ ಗ್ರಾಮದಲ್ಲಿ ಹೆಣ್ಣು ಮಗು ಅಪಹರಣ, ಆತಂಕ

ತಿರುಗು ಬಾಣ ಬಿಟ್ಟ ರೌಡಿ ದಿಲೀಪ್‌

ಇನ್ನೂ ಈ ದಿನೇಶ್‌ ತನ್ನ ಎದುರಾಳಿ ಆಗಿರುವ ರಾಮಮೂರ್ತಿನಗರದ ರೌಡಿಶೀಟರ್‌ ದಿಲೀಪ್‌ನ ಕೊಲೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಸತೀಶ್ ಅರವಿಂದ , ಗೌತಮ್ ಸೇರಿ ಹತ್ತು ಜನ ಹುಡುಗರನ್ನು ರೆಡಿ ಮಾಡಿದ್ದ. ಆದರೆ ಈ ಹತ್ತು ಜನರು ದಿನೇಶ್‌ನ ವಿರೋಧಿ ಆಗಿರುವ ರೌಡಿ ದಿಲೀಪ್ ಜತೆಗೆ ಸಂಪರ್ಕದಲ್ಲಿ ಇದ್ದರು.

ಯಾವ ಹುಡುಗರ ಜತೆಗೆ ದಿನೇಶ್ ಪ್ಲಾನ್ ಮಾಡಿದ್ದನೋ ಅವರನ್ನೇ ಸೆಟ್ ಮಾಡಿಕೊಂಡ ರೌಡಿ ದಿಲೀಪ್‌ ತಿರುಗು ಬಾಣ ಬಿಟ್ಟಿದ್ದ. ದಿನೇಶ್‌ ಜತೆಗಿದ್ದುಕೊಂಡೇ ಆತನನ್ನೇ ಕೊಂದು ಮುಗಿಸಿದ್ದಾರೆ. ದಿಲೀಪ್, ಕ್ರಿಸ್ಟೋಫರ್, ಅರವಿಂದ, ಗೌತಮ್ ಸೇರಿ ಒಟ್ಟು ಹನ್ನೆರಡು ಜನರನ್ನು ಜೈಲಿಗೆ ಕಳುಹಿಸಲಾಗಿದೆ.

ಮೂರೇ ನಿಮಿಷದಲ್ಲಿ ಕೊಂದು ಹಾಕಿದ್ರು

ಮಾ.27ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಕಂ ಸುಪಾರಿ ಕಿಲ್ಲರ್‌ ದಿನೇಶ್‌ನನ್ನು ಕಮ್ಮನಹಳ್ಳಿ ಓಯೋ ರೂಂ ಬಳಿ ಬರ್ಬರ ಹತ್ಯೆ ನಡೆದಿತ್ತು. ಹಣ ಇಲ್ಲ ಎಂದು ಕಾರ್ಡ್ ಕೊಡುವ ಬಗ್ಗೆ ರಿಸೆಪ್ಷನಿಸ್ಟ್ ಜತೆ ಆತನ ಹುಡುಗರು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಸೋಫಾದಲ್ಲಿ ಕೂತಿದ್ದ ದಿನೇಶ್ ಮೇಲೆ ಏಕಾಏಕಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ, ಕೇವಲ ಮೂರು ನಿಮಿಷದಲ್ಲಿ ಕೊಂದು ಹಂತಕರು ಪರಾರಿಯಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Bike Service : ಬೈಕ್‌ ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟ ಪರಿಣಾಮ ಯುವಕನೊಬ್ಬ (Bengaluru News) ಮೃತಪಟ್ಟಿದ್ದಾನೆ.

VISTARANEWS.COM


on

By

Bengaluru News air pressure pipe
ಮೃತ ಯೋಗೇಶ್‌ ಹಾಗೂ ಅರೆಸ್ಟ್‌ ಆದ ಮುರಳಿ
Koo

ಬೆಂಗಳೂರು: ಸ್ನೇಹಿತರ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃತಪಟ್ಟಿದ್ದಾನೆ. ಸ್ನೇಹಿತರ ಹುಡುಗಾಟದಲ್ಲಿ ಘನಘೋರ ಘಟನೆ ಬೆಂಗಳೂರಲ್ಲಿ ನಡೆದಿದೆ.

ಯೋಗಿಶ್ (28) ಮೃತ ದುರ್ದೈವಿ. ಕಳೆದ ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗಿಶ್‌ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗಿಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ.

ಇವರಿಬ್ಬರು ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ.

ಇದನ್ನೂ ಓದಿ: Kalaburagi News : ರಾತ್ರಿ ಹೊತ್ತಲ್ಲಿ ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಶಂಕಾಸ್ಪದ ಡ್ರೋನ್‌ ಹಾರಾಟ!

ಈ ವೇಳೆ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್‌ ಮೃತಪಟ್ಟಿದ್ದಾನೆ.

ಸದ್ಯ ಮೃತ ಯೋಗೇಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ. ಮೃತ ಯೋಗೇಶ್ ಮೂಲತಃ ವಿಜಯಪುರದವನು. ಡೆಲವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಥಣಿಸಂದ್ರದಲ್ಲಿ ವಾಸವಿದ್ದ. ಮೊನ್ನೆ ಸಂಜೆ ಬೈಕ್ ಸರ್ವೀಸ್ ಮಾಡಿಸಲು ಹೋಗಿದ್ದ. ಮುರುಳಿ ಕೂಡ ಅದೇ ಬೈಕ್‌ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ.

ಇಬ್ಬರು ಸ್ನೇಹಿತರಾಗಿದ್ದ ಕಾರಣ ಆಟ ಆಡಲು ಹೋಗಿ ಘಟನೆ ಸಂಭವಿಸಿದೆ. ಮೊದಲಿಗೆ ಮುರುಳಿ ಮುಖ ಹಾಗೂ ಎದೆಗೆ ಗಾಳಿ ಬಿಟ್ಟಿದ್ದಾನೆ. ಬಳಿಕ ಹಿಂಬದಿಯಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಈ ವೇಳೆ ಹೊಟ್ಟೆ ಒಮ್ಮೆಲೆ ಊದಿಕೊಂಡು ಯೋಗೇಶ್‌ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Tata Ace vehicle overturned Two persons dead five seriously injured
ಕರ್ನಾಟಕ8 mins ago

Road Accident: ಟಾಟಾ ಏಸ್ ವಾಹನ ಪಲ್ಟಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Xiaomi Car in China
ಪ್ರಮುಖ ಸುದ್ದಿ47 mins ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

viral video
ವೈರಲ್ ನ್ಯೂಸ್57 mins ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

BJP State Vice President Malavika Avinash latest statement
ಬೆಂಗಳೂರು1 hour ago

Bengaluru News: ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್ ಟೀಕೆ

Lok Sabha Election 2024 Prajwal Revanna gets Rs 40 crore worth asset
Lok Sabha Election 20241 hour ago

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Uttara Kannada Lok Sabha constituency Congress candidate Dr Anjali Nimbalkar latest statement
ಉತ್ತರ ಕನ್ನಡ1 hour ago

Uttara Kannada News: ಚುನಾವಣೆಯನ್ನು ಸುಲಭವಾಗಿ ಪರಿಗಣಿಸದಿರಿ: ನಿಂಬಾಳ್ಕರ್

Rameswaram cafe bomb blast case
ಬೆಂಗಳೂರು2 hours ago

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rajasthan Royals
ಪ್ರಮುಖ ಸುದ್ದಿ2 hours ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ2 hours ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ2 hours ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20248 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202410 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌