ಅಪಾಯಕಾರಿ ಮಾಂಜಾ ಮಾರಾಟ ಕಂಡರೆ ಈ ನಂಬರ್‌ಗೆ ಕರೆ ಮಾಡಿ, ಬಹುಮಾನ ಗಳಿಸಿ! - Vistara News

ಕರ್ನಾಟಕ

ಅಪಾಯಕಾರಿ ಮಾಂಜಾ ಮಾರಾಟ ಕಂಡರೆ ಈ ನಂಬರ್‌ಗೆ ಕರೆ ಮಾಡಿ, ಬಹುಮಾನ ಗಳಿಸಿ!

ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಎಸ್‌ಪಿ ಮಾಂಜಾ ಮಾರಾಟ ಅಥವಾ ಬಳಕೆ ಕಂಡು ಬಂದರೆ ಕಾನೂನು ಕ್ರಮ ಕೈಗೂಳ್ಳುವ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಅಪಾಯಕಾರಿ ಗಾಳಿಪಟ ಮಾಂಜಾ ದಾರಗಳ ಮಾರಾಟ ಅಥವಾ ಬಳಕೆ ಕಂಡು ಬಂದರೆ ಮಾಹಿತಿ ನೀಡಿ, ಸೂಕ್ತ ಬಹುಮಾನ ಗಳಿಸಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಾರ್ವಜನಿಕವಾಗಿ ಕೋರಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಎಸ್‌ಪಿ ಡಾ. ಸಂಜೀವ ಪಾಟೀಲ್, ಅಪಾಯಕಾರಿ ಗಾಳಿಪಟ ಎಳೆಗಳ ಮಾರಾಟ ಅಥವಾ ಬಳಕೆ ಬಗ್ಗೆ ಮಾಹಿತಿ ನೀಡಲು ಮನವಿ ನೀಡಿದ್ದಾರೆ.

ಎಸ್‌ಪಿ ಡಾ.ಸಂಜೀವ ಪಾಟೀಲ್ ಸಂದೇಶ

ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿ ಇರಿಸಲಾಗುತ್ತದೆ. ಜತೆಗೆ ಮಾಂಜಾ ಮಾರಾಟದ ಕುರಿತು ತಿಳಿಸಿದರೆ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. 9480804000 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

ಮಗುವಿನ ಜೀವ ತೆಗೆದ ಮಾಂಜಾ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವರ್ಧನ್ ಬ್ಯಾಳಿ (5) ಎಂಬ ಬಾಲಕ ತಂದೆಯೊಂದಿಗೆ ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗೆಣದು ಬೆಳಗಾವಿಗೆ ಬಂದು ವಾಪಸ್‌ ಹೋಗುವಾಗ ಕೊರಳಿಗೆ ಗಾಳಿಪಟದ ಮಾಂಜಾದಾರ ಬಿಗಿದುಕೊಂಡು ಮೃತಪಟ್ಟಿದ್ದ. ದಾರ ತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಅದು ಬಿಡಿಸಿಕೊಳ್ಳದೆ ಕೊರಳಿಗೆ ಇನ್ನಷ್ಟು ಬಿಗಿಯಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೈಲಾನ್‌ನಿಂದ ಮಾಡಲಾದ ಮಾಂಜಾ ದಾರಗಳು ಪಕ್ಷಿಗಳ ಕೊರಳಿಗೆ ಉರುಳಾಗುತ್ತಿರುವ ತುಂಬಾ ಪ್ರಕರಣಗಳು ನಡೆದಿತ್ತು. ಆದರೆ, ಈಗ ದಾರ ಮಗುವಿನ ಪ್ರಾಣ ತೆಗೆದಿದೆ. ಯಾರದ್ದೋ ಮೋಜಿಗೆ ಬಾಳಿ ಬದುಕಬೇಕಾದ ಮಗುವೊಂದು ಜೀವ ಕಳೆದುಕೊಂಡಿದ್ದು, ದುರದೃಷ್ಟಕರ.

ಇದನ್ನೂ ಓದಿ | ವಿಸ್ತಾರ Explainer | ಗಾಳಿಪಟದ ಚೈನೀಸ್ ಮಾಂಜಾ ದಾರ, ದೇಶದಲ್ಲಿ ಏಕಿಷ್ಟು ವಿವಾದದ ಆಗರ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ

Karnataka Weather Forecast : ರಾಜ್ಯಾದ್ಯಂತ ಮಳೆಯ (Rain News) ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಉಡುಪಿಯ ಶಾಲೆಗೆ ನೀರು ನುಗ್ಗಿದ್ದರಿಂದ ಮಕ್ಕಳಿಗೆ ರಜೆ ನೀಡಲಾಗಿತ್ತು. ಕೆಲವೆಡೆ ರಸ್ತೆಗಳು ಕೆರೆಯಂತೆ ಮಾರ್ಪಾಡಾಗಿತ್ತು. ಎಲ್ಲೆಲ್ಲಿ ಏನೆಲ್ಲ ಅವಾಂತರಗಳು ಆಗಿವೆ. ಇನ್ನೂ ಎಷ್ಟು ದಿನ ಮಳೆಯಾಟ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Karnataka weather Forecast
Koo

ಉಡುಪಿ: ಉತ್ತರ ಒಳನಾಡು, ಕರಾವಳಿ ಸೇರಿ ಮಲೆನಾಡು ಭಾಗದ ವಿವಿಧೆಡೆ ಭಾರಿ ವರ್ಷಧಾರೆಗೆ ಜನರು ತತ್ತರಿಸಿಹೋಗಿದ್ದಾರೆ. ನಾಲ್ಕೈದು ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ (Rain News) ಉಡುಪಿಯ ಬೈಂದೂರು ತಾಲೂಕಿನ ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ತರಗತಿ ಕೋಣೆಗಳು ಜಲಾವೃತಗೊಂಡ ಪರಿಣಾಮ ಶಾಲಾ ಮಕ್ಕಳಿಗೆ ಶನಿವಾರ ರಜೆ ನೀಡಲಾಗಿತ್ತು. ಶಾಲೆ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ಹರಿದ ನೀರು ನೇರ ಶಾಲೆಗೆ ನುಗ್ಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ ಕೆರೆಯಂತಾದ ಜಮೀನುಗಳು

ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಶನಿವಾರ ಭರ್ಜರಿ ಮಳೆಯಾಗಿದೆ. ಹನುಮಂತಪುರ, ದಿದ್ದಗಿ , ಹುಚ್ಚವನಹಳ್ಳಿ ಪಲ್ಲಾಗಟ್ಟೆ, ಮೇದಕೇರನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಜಮೀನುಗಳು ಕೆರೆಯಂತಾಗಿದೆ.

ಧಾರವಾಡದ ಆಯಟ್ಟಿ ಬ್ರಿಡ್ಜ್ ಬಂದ್‌

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಬ್ರಿಡ್ಜ್ ಮಳೆಗೆ ಮುಳುಗಡೆಯಾಗಿದ್ದು, ಸಂಚಾರ ಬಂದ್‌ ಮಾಡಲಾಗಿದೆ. ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮಳೆ ಬಂದರೆ ಸಾಕು ನೀರಿನಲ್ಲಿ ಮುಳುಗಡೆಯಾಗುತ್ತದೆ. ಹೀಗಾಗಿ ಸೇತುವೆ ಮೇಲೆ ನೀರು ತಗ್ಗುವವರೆಗೂ ಜನರ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನೂ ಸೇತುವೆ ಎತ್ತರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತಿಲ್ಲ. ಇತ್ತ ಹೊಸ ಬ್ರಿಡ್ಜ್ ನಿರ್ಮಾಣ ಮಾಡುವವರೆಗೂ ಜನರ ಸಮಸ್ಯೆ ತಪ್ಪಿದ್ದಲ್ಲ. ಬ್ರಿಡ್ಜ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದರೂ ಸಹ ಕೆಲಸ ಮಾತ್ರ ಶುರುವಾಗಿಲ್ಲ.

karnataka weather Forecast

ಇದನ್ನೂ ಓದಿ: Murder Case : ತಂಗಿಗೆ ವರದಕ್ಷಿಣೆ ಟಾರ್ಚರ್‌; ಬಾಮೈದನ ಕೊಲೆ ಮಾಡಿದ ಬಾವ

ವಿಜಯಪುರದ ದೋಣಿ ನದಿ ಸೇತುವೆ ಜಲಾವೃತ

ವಿಜಯಪುರದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಭಾರಿ ಮಳೆಗೆ ಸಂಪೂರ್ಣ ದೋಣಿ ನದಿ ಸೇತುವೆ ಜಲಾವೃತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಜಲಾವೃತದಿಂದ ಹೊಲಗಳಿಗೆ ತೆರಳುವ ರೈತರಿಗೂ ಸಂಕಷ್ಟ ಎದುರಾಗಿದೆ. ಡೋಣಿ ನದಿಗೆ ಕಟ್ಟಿರುವ ಹಳೆಯ ನೆಲ ಸೇತುವೆ ಜಲಾವೃತಗೊಂಡಿದೆ. ಹೊಸ ಸೇತುವೆ ಕಳಪೆ‌ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೀಗಾಗಿ ಜಲಾವೃತವಾದ ಹಳೆಯ ಸೇತುವೆಯ‌ ಮೇಲೆಯೇ ವಾಹನಗಳು ಸಂಚಾರಿಸುತ್ತಿದೆ. ಹೊಸ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ. ಹೀಗಾಗಿ ಹೊಸ ಸೇತುವೆ ಮೇಲೆ ಕಳೆದ ಎರಡು ವರ್ಷಗಳಿಂದ ಸಂಚಾರ‌ ನಿಷೇಧಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ನೆಲ ಮಟ್ಟದ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು

ವಿಜಯನಗರ ಜಿಲ್ಲೆಯ ಗುಡೇಕೋಟೆ ಹೋಬಳಿಯ ಮಹದೇವಪುರ ಗ್ರಾಮದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಬೀದಿಗಳಲ್ಲಿ ರಭಸವಾಗಿ ಹರಿದು ಮನೆ ಒಳಗೆ ನುಗ್ಗಿದೆ. ಮಹದೇವಪುರ ಗ್ರಾಮದ ಮಾರಿಗುಡ್ಡ ಏರಿಯಾದಿಂದ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಮಹದೇವಪುರ ಗ್ರಾಮದಲ್ಲಿ ದಲಿತ ಕೇರಿ ತಗ್ಗು ಪ್ರದೇಶದಲ್ಲಿ ಇದೆ.

ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಕರಾವಳಿಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಗೆ ವಾಹನ ಸವಾರರು ಪರದಾಡಿದರು. ಮಳೆ ರಭಸಕ್ಕೆ ರಸ್ತೆ ಕಾಣದೆ ಇರುವುದರಿಂದ ಸವಾರರು ಕೊಟ್ಟಿಗೆಹಾರದಲ್ಲೇ ವಾಹನ ನಿಲ್ಲಿಸಿಕೊಂಡಿರುವುದು ಕಂಡು ಬಂತು.

ಗದಗದಲ್ಲಿ ಕೊಚ್ಚಿ ಹೋದ ಕಿರುಸೇತುವೆ

ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಧರ್ಮಾಪುರ ಗ್ರಾಮದ ಗಣಪತಿ ಕೆರೆಯ ಕಿರುಸೇತುವೆ ಕೊಚ್ಚಿ ಹೋದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಿದ್ದ ಕಿರುಸೇತುವೆ ನೀರುಪಾಲಾಗಿದೆ. ಕಳೆದ ವರ್ಷವಷ್ಟೇ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಕಿರುಸೇತುವೆ ರಸ್ತೆ ಕೊಚ್ಚಿ ಹೋಗಿದ್ದು, ರೈತರು ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಹಿನ್ನೆಲೆ ಇದೀಗ ರೈತರು ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗಿದೆ.

ಬೆಳಗಾವಿಯಲ್ಲಿ ಕೆರೆಯಂತಾದ ರಸ್ತೆಗಳು

ಮಳೆರಾಯನ ಅರ್ಭಟಕ್ಕೆ ಬೆಳಗಾವಿ ಕ್ಯಾಂಪ್‌ ಪ್ರದೇಶದ ಹತ್ತಿರ ರಸ್ತೆಗಳು ಕೆರೆಯಂತೆ ಮಾರ್ಪಾಟ್ಟಿವೆ. ಬೆಳಗಾವಿಯ ವಿವಿಧೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಎರಡು ‌ಅಡಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ಬೆಳಗಾವಿಯ ಗ್ಲೋಬ್ ಥೀಯೇಟರ್‌ ಅಂಗಳಕ್ಕೆ ನೀರು ನುಗ್ಗಿತ್ತು. ಟಿಕೆಟ್ ಕೌಂಟರ್ ಸಂಪೂರ್ಣ ಜಲಾವೃತಗೊಂಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Wheelchair Cricket Tournament: ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ರವಿಶಂಕರ್ ಗುರೂಜಿ

Wheelchair Cricket Tournament: ಜೀವನದಲ್ಲಿ ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದಿರಬೇಕು. ಬಲವಾದ, ಸಂತೋಷವಾದ ಮನಸ್ಸನ್ನು ಹೊಂದುವುದು ಮುಖ್ಯ ಎಂದು ಖ್ಯಾತ ಆಧ್ಯಾತ್ಮಿಕ ಗುರು ರವಿಶಂಕರ್‌ ಗುರೂಜಿ ಅವರು ತಿಳಿಸಿದ್ದಾರೆ.

VISTARANEWS.COM


on

Koo

ಬೆಂಗಳೂರು: ಪರಿಶ್ರಮ ದಿವ್ಯಾಂಗ ಕ್ರೀಡಾ ಅಕಾಡೆಮಿಯು ಆಯೋಜಿಸಿದ್ದ ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿಯನ್ನು (Wheelchair Cricket Tournament) ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಖ್ಯಾತ ಆಧ್ಯಾತ್ಮಿಕ ಗುರುಗಳಾದ ಗುರುದೇವ್‌ ಶ್ರೀ ಶ್ರೀ ರವಿಶಂಕರ್‌ ಹಾಗೂ ಇತರ ಗಣ್ಯರು ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ, 35 ಪುರುಷರು, 25 ಮಹಿಳಾ ಕ್ರೀಡಾಪಟುಗಳು ಹಾಗೂ 10 ಸಹಚರರು ಭಾಗಿಯಾಗಿದ್ದರು.

ಕ್ರೀಡೆಗಳಲ್ಲಿ ನೈತಿಕತೆಯ ಬೆಂಬಲ ನೀಡಲು ದನಿಯಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾತನಾಡಿ, “ಈ ಅಕಾಡೆಮಿಯು ಎಲ್ಲರಿಗೂ ಆಶಾಕಿರಣವನ್ನು ಮೂಡಿಸುತ್ತಿದೆ. ಇಂದಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗುತ್ತಿರುವ ಯುವಕರಿಗೆ ಇದು ದಾರಿಯನ್ನು ತೋರಿಸುತ್ತಿದೆ. ಏನೇ ಆದರೂ ಜೀವನದಲ್ಲಿ ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದಿರಬೇಕು. ಬಲವಾದ, ಸಂತೋಷವಾದ ಮನಸ್ಸನ್ನು ಹೊಂದುವುದು ಮುಖ್ಯ. ಇಂದು ಪ್ರತಿ 40 ಸೆಕೆಂಡುಗಳಿಗೊಮ್ಮೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಆಶಾಕಿರಣವನ್ನು ನೀಡಿ, ಜೀವನವನ್ನು ಸನ್ಮಾನಿಸಿ, ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದುವಂತೆ ಹೇಳುತ್ತಿರುವಿರಿ. ಕ್ರೀಡೆಗಳನ್ನು ಆಡಲು ಉತ್ಸಾಹ, ಸ್ಫೂರ್ತಿ ಮತ್ತು ಧ್ಯಾನ ಬೇಕು” ಎಂದು ಸಲಹೆ ನೀಡಿದರು.

wheelchair cricket tournament

ಇದನ್ನೂ ಓದಿ | IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

ಈ ಪಂದ್ಯಾವಳಿಯನ್ನು, ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿಶಂಕರ್, ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಕ್ರೀಡಾಪಟುಗಳ ವಿಭಾಗದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ, ಮಾಜಿ ಯೋಧರು, ಮುಖ್ಯ ಕ್ಲಸಿಫೈಯರ್ ಹಾಗೂ ಟೋಕ್ಯೋ ಪಾರಾ ಒಲಿಂಪಿಕ್ಸ್‌ನ ವೈದ್ಯಕೀಯ ನಿರ್ದೇಶಕರು ಡಾ. ಅಮೇಯ, ಮಾಜಿ ಕೆಪಿಎಸ್‌ಇ ಸದಸ್ಯರು, ಬಿಬಿಎಂಪಿ ಕಾರ್ಪೊರೇಟರ್ ಡಾ.ಮಂಗಳಾ ಶ್ರೀಧರ್, ಸುಮಧುರ ಗ್ರೂಪ್ ಸಿಒಒ ಗಿರಿಧರ್ ಕುಮಾರ್. ಬಿ, ಸುಮಧುರ ಗ್ರೂಪ್‌ನ ಸಸ್ಟೇಪಬಿಲಿಟಿ ಮತ್ತು ಸಿಎಸ್ ಆರ್ನ ಮುಖ್ಯಸ್ಥೆ ಜೀವನ ಕಲಾಕುಂದಲ, ಟಿಸಿಎಫ್ಎಂ-ಎಂಬಸ್ಸಿ ಗ್ರೂಪ್ ಸಿಇಒ ಅಶ್ವಿನಿ ವಲಾವಲ್ಕರ್ ಉದ್ಘಾಟಿಸಿದರು.

ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಕ್ರೀಡಾಪಟುಗಳ ಅಧ್ಯಕ್ಷರಾದ ಸತ್ಯನಾರಾಯಣ ಅವರು ಗುರುದೇವರನ್ನು ಕುರಿತು ಮಾತನಾಡಿ, “ತಮ್ಮ ಆಶ್ರಮದಲ್ಲಿ ಅನೇಕ ವರ್ಷಗಳಿಂದಲೂ, ಗುರುದೇವ ಶ್ರೀ ಶ್ರೀ ರವಿಶಂಕರರು ಈ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇಂದು ಎಲ್ಲೆಡೆಯೂ ಪ್ಯಾರಾ ಒಲಿಂಪಿಕ್ ಕ್ರೀಡೆಗಳಿಗೆ ಬಹಳ ಪ್ರೋತ್ಸಾಹ ದೊರಕುತ್ತಿದೆ. ಹಿಂದೆ ಈ ರೀತಿಯ ಪ್ರೋತ್ಸಾಹ ಇರಲಿಲ್ಲ. ಈಗ ಸರ್ಕಾರವೂ ಸಹ ಬಹಳ ಪ್ರೋತ್ಸಾಹವನ್ನು ನೀಡುತ್ತಿದೆ. ಈಗ ಬೇಕಾಗಿರುವುದೆಂದರೆ, ದಿವ್ಯಾಂಗ ಪಟುಗಳು ಪ್ರತಿ ದಿನ ಅಭ್ಯಾಸ ಮಾಡುವುದು” ಎಂದರು.

ಇದನ್ನೂ ಓದಿ | Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ

ಜೂನ್ 8 ಮತ್ತು 9ರಂದು ಎಸ್‌ಎಸ್ಆರ್‌ವಿಎಮ್‌ ಗ್ರೌಂಡ್ಸ್‌ನಲ್ಲಿ ಪುರುಷರ ಪಂದ್ಯಾವಳಿ ನಡೆಯಲಿದ್ದು, ವಿರಾಮದ ಸಮಯದಲ್ಲಿ ಮಹಿಳೆಯರ ಟಿ20 ಪಂದ್ಯಾವಳಿಯೂ ನಡೆಯಲಿದೆ.

Continue Reading

ಕರ್ನಾಟಕ

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Congress Guarantee: ಮತದಾರರನ್ನು ʼಸ್ಯಾಡಿಸ್ಟ್ʼ ಮನಸ್ಥಿತಿಯವರು ಎಂದು ಕರೆದಿರುವ ಮೈಸೂರು- ಕೊಡಗು ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್, ನನ್ನನ್ನು ಸೋಲಿಸಿ ಬೇಜಾರಿಲ್ಲ. ಆದರೆ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ.

VISTARANEWS.COM


on

Congress Guarantee
Koo

ಮೈಸೂರು: ಗ್ಯಾರಂಟಿಗಳನ್ನು ನೀಡಿದರೂ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಮತದಾರರ ವಿರುದ್ಧ ಮೈಸೂರು-ಕೊಡಗು ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ (M. Lakshman) ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಇಷ್ಟ ಆಗಿಲ್ಲ. ಅದನ್ನು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ನಮ್ಮ ಗ್ಯಾರಂಟಿಗಳ ವಿರುದ್ಧ ಮಾತನಾಡುತ್ತಿತ್ತು. ಆದರೂ ಅವರನ್ನು ಜನ ಬೆಂಬಲಿಸಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳಿತು ಎಂದು ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಜನರಿಗೆ ಗ್ಯಾರಂಟಿಗಳು ಇಷ್ಟವಿಲ್ಲ ಎಂಬುವುದು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಹೀಗಾಗಿ ನಿಲ್ಲಿಸುವುದು ಒಳಿತು. ಗ್ಯಾರಂಟಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ಮರು ಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | Election Results 2024: ಡಿ.ಕೆ. ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

ಶೇ.70 ರಷ್ಟು ಮೇಲ್ವರ್ಗದವರು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ, ಅದನ್ನು ಜನರು ತಿರಸ್ಕಾರ ಮಾಡಿದ್ದಾರೆ. ಬೆಂಜ್ ಕಾರ್ ಹೊಂದಿರುವವನು, 25 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ಮರು ಪರಿಶೀಲಿಸುವ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಅನುಕೂಲ ಪಡೆದು ವೋಟ್‌ ಹಾಕದವರಿಗೆ ಉದಾಹರಣೆ ನೀಡುತ್ತಾ, ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600ಕ್ಕೂ ಹೆಚ್ಚು ಮತ ನೀಡಿದ್ದಾರೆ. ನನಗೆ ಕೇವಲ ಮೂರು, ಏಳು ಮತಗಳನ್ನು ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮತದಾರರು ‌ʼಸ್ಯಾಡಿಸ್ಟ್ʼ ಎಂದು ಟೀಕೆ

ಮತದಾರರನ್ನು ಸ್ಯಾಡಿಸ್ಟ್ ಎಂದು ಕರೆದಿರುವ ಎಂ.ಲಕ್ಷ್ಮಣ್, ನನ್ನನ್ನು ಸೋಲಿಸಿ ಬೇಜಾರಿಲ್ಲ. ಆದರೆ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ? ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್ ಇದ್ದರೆ ಹೇಗೆ? ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಐದು ರೂಪಾಯಿ ಕೊಟ್ಟಿದ್ರಾ? ಆದರೆ ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಎಲ್ಲಾದರೂ ಇದ್ದಾರಾ? ಸಾಹೇಬರು ಯಾವುದನ್ನೂ ಹೇಳಿಕೊಳ್ಳೋದಿಲ್ಲ. ಆದರೆ ಮೈಸೂರಿನ ಜನ ಸಿದ್ದರಾಮಯ್ಯ ಅವರಿಗೆ ಎಷ್ಟೋ ಬಾರಿ ನೋವು ಕೊಡ್ತೀರಿ? ಎಂದು ಮತದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನು ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ಳುತ್ತಾರೋ, ಇಲ್ಲವೋ ಗೊತ್ತಿಲ್ಲ.
ನಾಳೆಯಿಂದಲೇ ನಾನು ಜನರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ನನಗೆ ಮತ ಕೊಟ್ಟವರು, ಕೊಡದೇ ಇರುವವರು ಎಲ್ಲರೂ ನನ್ನ ಸಂಪರ್ಕ ಮಾಡಬಹುದು. ನಾಳೆಯೇ ನನ್ನ ಕಚೇರಿ ಸಹ ತೆರೆಯುತ್ತೇನೆ. ಆ ಕಚೇರಿಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ

ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಆದರೂ ಚುನಾವಣೆ ವೇಳೆ ನನ್ನನ್ನು ಒಕ್ಕಲಿಗನೇ ಅಲ್ಲ ಅಂದು ಪ್ರಚಾರ ಮಾಡಿದರು. ಹಳೇ ಮೈಸೂರು ಭಾಗದಲ್ಲಿ 8 ಜನ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಒಬ್ಬ ಒಕ್ಕಲಿಗನನ್ನು ನೀವು ಆಯ್ಕೆ ಮಾಡಿಕೊಳ್ಳಲಿಲ್ಲ? ಮೈಸೂರಿನಲ್ಲಿ ಹಲವು ವರ್ಷಗಳ ನಂತರ ಒಕ್ಕಲಿಗೆ ಸಮುದಾಯಕ್ಕೆ ಟಿಕೆಟ್ ನೀಡಿದ್ದರು. ಈ ಅವಕಾಶವನ್ನೂ ನೀವು ಕೈ ಚೆಲ್ಲಿದ್ದೀರಿ ಎಂದು ಸಮುದಾಯದ ವಿರುದ್ಧ ಬೇಸರ ಹೊರಹಾಕಿದ್ದಾರೆ.

Continue Reading

ಮೈಸೂರು

Murder Case : ತಂಗಿಗೆ ವರದಕ್ಷಿಣೆ ಟಾರ್ಚರ್‌; ಬಾಮೈದನ ಕೊಲೆ ಮಾಡಿದ ಬಾವ

Murder Case : ತಂಗಿಗೆ ವರದಕ್ಷಿಣಿ ಕಿರುಕುಳ ಕೊಡುತ್ತಿದ್ದ ಕಾರಣಕ್ಕೆ ತವರು ಮನೆಗೆ ಕರೆದುಕೊಂಡು ಬರಲು ಹೋದ ಅಣ್ಣನ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಮೈಸೂರಿನಲ್ಲಿ ಬಾವನೇ ಬಾಮೈದನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

VISTARANEWS.COM


on

By

Murder case in Mysuru
ಕೊಲೆಯಾದ ಅಭಿಷೇಕ್‌ ಹಾಗೂ ಆರೋಪಿ ರವಿಕುಮಾರ್‌
Koo

ಮೈಸೂರು: ತಂಗಿ ಗಂಡನಿಂದಲೇ ಯುವಕನೊಬ್ಬ (Murder Case) ಕೊಲೆಯಾಗಿ ಹೋಗಿದ್ದಾನೆ. ಮೈಸೂರಿನ ಕುವೆಂಪು ನಗರದ ಐ ಬ್ಲಾಕ್‌ನಲ್ಲಿ ಘಟನೆ ನಡೆದಿದೆ. ಅಭಿಷೇಕ್ (27) ಮೃತ ದುರ್ದೈವಿ.

ಅಭಿಷೇಕ್‌ ತಂಗಿಗೆ ಆಕೆಯ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ತಂಗಿಗೆ ಹೊಡೆದು ಬಡಿದು ಮಾಡುತ್ತಿದ್ದರು. ಗಂಡನ ಮನೆಯವರ ಕಾಟಕ್ಕೆ ಬೇಸತ್ತ ತಂಗಿಗೆ ಹೆತ್ತವರಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಈ ವಿಷಯ ತಿಳಿದ ಅಭಿಷೇಕ್‌ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ಹೋಗಿದ್ದ.

ಈ ವೇಳೆ ಬಾವ ರವಿಕುಮಾರ್‌ ಚಾಕುವಿನಿಂದ ಬಾಮೈದ ಅಭಿಷೇಕ್‌ಗೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾದ ಅಭಿಷೇಕ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡ ಅಭಿ ಮೃತಪಟ್ಟಿದ್ದಾನೆ. ಸದ್ಯ ಸ್ಥಳಕ್ಕೆ ಕುವೆಂಪು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Bengaluru Murder : ನಾಪತ್ತೆಯಾದವನು ಅಕ್ರಮ ಸಂಬಂಧಕ್ಕೆ ಬಲಿ; ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್‌; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ (MM Hills) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Self Harming) ಯತ್ನಿಸಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಚಂದಗಾಲು ಗ್ರಾಮದ ಮಹದೇವನಾಯಕ (65) ಅವರ ಪುತ್ರಿ ರಿಷಿಕಾ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತೀಚೆಗೆ ಆತನಿಂದ ಅಂತರ ಕಾಯ್ದುಕೊಂಡಾಗ ರಿಷಿಕಾಳ ಜತೆಗಿದ್ದ ನಗ್ನ ವಿಡಿಯೊ ಹಾಗೂ ಫೋಟೋ ಇಟ್ಟುಕೊಂಡು ಬೆದರಿಕೆ (Black mail Case) ಹಾಕುತ್ತಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ಅನೇಕ ಬಾರಿ ಯುವಕನ ಹಾಗು ರಿಷಿಕಾ ಕುಟುಂಬದ ಜತೆ ಗಲಾಟೆ ಸಹ ಆಗಿದೆ. ಈತನ ಕಾಟಕ್ಕೆ ಬೇಸತ್ತ ಕುಟುಂಬ, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿ ಅಸ್ವಸ್ಥಳಾಗಿದ್ದ ರಿಷಿಕಾಳನ್ನು ಹನೂರು ತಾಲೂಕಿನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ತಾಯಿ ಗೌರಮ್ಮ ಹಾಗೂ ಲೀಲಾವತಿಗೆ ಹೆಚ್ಚಿನ ಚಿಕಿತ್ಸೆಗೆಂದು ಕೊಳ್ಳೇಗಾಲದಿಂದ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಲ್ಲಿ ರಿಷಿಕಾ ತಂದೆ ಮಹದೇವನಾಯಕ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Love‌ Torture : ಪ್ರೀತ್ಸೆ ಅಂತ ಪ್ರಾಣ ತಿಂದ; ಒಪ್ಪದೇ ಇದ್ದಾಗ ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್‌ ಪ್ರೇಮಿ

MM Hills

ಮಾದಪ್ಪನ ದರ್ಶನ ಮಾಡಿ ವಿಷ ಸೇವಿಸಿದ ಕುಟುಂಬ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ನಾಲ್ವರು ವಿಷ ಸೇವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟರೆ, ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಲೆಮಹದೇಶ್ವರ ಬೆಟ್ಟ (MM Hills) ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿತ್ತು.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತ ದುರ್ದೈವಿ. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಪರಿಶೀಲನೆ ನಡೆಸಿದಾಗ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ. ಕೂಡಲೇ ಅಲ್ಲಿದ್ದವರು ನಾಲ್ವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಹದೇವನಾಯಕರಿಗೆ ವಿಷ ದೇಹದೊಳಗೆ ಸೇರಿದ್ದರಿಂದ ಅದಾಗಲೇ ಉಸಿರು ಚೆಲ್ಲಿದ್ದರು. ಸದ್ಯ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka weather Forecast
ಮಳೆ13 mins ago

Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ

ಬೆಂಗಳೂರು19 mins ago

Wheelchair Cricket Tournament: ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ರವಿಶಂಕರ್ ಗುರೂಜಿ

Ambani Family Fashion
ಫ್ಯಾಷನ್33 mins ago

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

Narendra Modi
ದೇಶ35 mins ago

Narendra Modi: ನಾಳೆ 3ನೇ ಬಾರಿ ಮೋದಿಗೆ ಪ್ರಧಾನಿ ಗಾದಿ; ಇಲ್ಲಿದೆ ಅವರ ರಾಜಕೀಯದ ಹಾದಿ!

Norway Chess
ಕ್ರೀಡೆ44 mins ago

Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ

IND vs PAK
ಕ್ರೀಡೆ1 hour ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

Money Guide
ಮನಿ-ಗೈಡ್1 hour ago

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Niveditha Gowda chandan shetty age differance
ಸ್ಯಾಂಡಲ್ ವುಡ್1 hour ago

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Viral Video
ವೈರಲ್ ನ್ಯೂಸ್1 hour ago

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Congress Guarantee
ಕರ್ನಾಟಕ1 hour ago

Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ23 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌