Amrit Mahotsav | ಅಮರವಾಗಿದೆ ಅಮರ ಸುಳ್ಯ ದಂಗೆ-1837; ಬ್ರಿಟಿಷರ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ - Vistara News

ಕರ್ನಾಟಕ

Amrit Mahotsav | ಅಮರವಾಗಿದೆ ಅಮರ ಸುಳ್ಯ ದಂಗೆ-1837; ಬ್ರಿಟಿಷರ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ

ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಪ್ರಸಿದ್ಧಿ ಪಡೆದಿದ್ದ ಬ್ರಿಟಿಷರನ್ನು ಬಗ್ಗುಬಡಿದು ಎರಡು ವಾರಗಳ ಕಾಲ ಆಂಗ್ಲರಿಂದ ವಿಮೋಚನೆಯನ್ನು ಗಳಿಸಿದ ಜನರ ಅಸೀಮ ಸಾಹಸದ ಕತೆ ಇದು. ಅಮರ ಸುಳ್ಯ ಹೋರಾಟದ ಬಗ್ಗೆ ಇಂದಿಗೂ ಹಲವಾರು ಯಶೋಗಾಥೆಗಳಿವೆ.

VISTARANEWS.COM


on

Amrit Mahotsav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara-Logo-Azadi-ka-amrit-Mahotsav

| ಗಂಗಾಧರ ಕಲ್ಲಪಳ್ಳಿ, ಸುಳ್ಯ
ಬ್ರಿಟಿಷರ ದಬ್ಬಾಳಿಕೆಯ ಸಂಕೊಲೆಯಲ್ಲಿ ನಲುಗಿದ ಭಾರತೀಯರ ಆಕ್ರೋಶದ ದನಿ ಮೊಳಗಿದ್ದು 1857ರಲ್ಲಿ ಎಂಬುದು ಇತಿಹಾಸದ ಪುಟಗಳನ್ನು ತೆರೆದಾಗ ನಮಗೆ ತಿಳಿಯುತ್ತದೆ. ಇದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ (Amrit Mahotsav) ಎಂದು ಇತಿಹಾಸಕಾರರು ಪರಿಗಣಿಸಿದ್ದಾರೆ. ಆದರೆ, ಇದಕ್ಕೂ ಎರಡು ದಶಕಗಳ ಮೊದಲೇ 1837ರಲ್ಲಿ ರೈತಾಪಿ ವರ್ಗದಿಂದ ರಾಜ್ಯದಲ್ಲಿ ನಡೆದಿತ್ತು ‘ಅಮರ ಸುಳ್ಯ ದಂಗೆ’ ಅಥವಾ ‘ಕೊಡಗು-ಕೆನರಾ ಬಂಡಾಯ’…

1837ರಲ್ಲಿ ನಡೆದ ಆ ಹೋರಾಟದಲ್ಲಿ ಬ್ರಿಟಿಷರನ್ನು ಸೋಲಿಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಿ 13 ದಿನಗಳ ಕಾಲ ಮಂಗಳೂರನ್ನು ಆಳಿದ್ದರು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಅಮರ ಸುಳ್ಯ ಹೋರಾಟದ ನೆನಪುಗಳು ಶಾಶ್ವತವಾಗಿ ಉಳಿಯಲು ಯೋಜನೆ ರೂಪಿಸಲಾಗಿದೆ. ಅಂದಿನ ಹೋರಾಟದ ನೇತೃತ್ವ ವಹಿಸಿದ್ದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರಿನಲ್ಲಿ ಸ್ಥಾಪಿಸಿರುವುದು ಅದರ ಪ್ರಮುಖ ಭಾಗ.

ಕ್ರಿ.ಶ.1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದ ರಣಾಂಗಣದಲ್ಲಿ ಟಿಪ್ಪು ಮಡಿದ ನಂತರ ಮಂಗಳೂರು ಸಂಪೂರ್ಣವಾಗಿ ಇಂಗ್ಲಿಷರ ವಶವಾಯಿತು. ಅದಾದ ಕೆಲವೇ ದಿನಗಳಲ್ಲಿ ವಿಟ್ಲದ ರವಿವರ್ಮ ನರಸಿಂಹ ದೊಂಬ ಹೆಗ್ಗಡೆ ತಾನು ಸ್ವತಂತ್ರ ರಾಜನೆಂದು ಘೋಷಿಸಿಕೊಂಡ, ಆದರೆ ಮಂಗಳೂರನ್ನು ಗೆಲ್ಲುವ ಆತನ ಉದ್ದೇಶ ವಿಫಲವಾಯಿತು. ಹೆಗ್ಗಡೆ ಮತ್ತು ಆತನ ಸೇನಾಧಿಕಾರಿಯನ್ನು ಬಂಧಿಸಿದ ಇಂಗ್ಲಿಷರು ಅವರಿಗೆ ಗಲ್ಲು ಶಿಕ್ಷೆ ನೀಡುತ್ತಾರೆ. ಮುಂದೆ ಕ್ರಿ.ಶ.1811ರಲ್ಲಿ ಮಂಗಳೂರು ಮತ್ತು ಸುತ್ತಲ ಗ್ರಾಮಗಳ ರೈತರು ಅಸಹಕಾರ ಚಳವಳಿಗೆ ಧುಮುಕಿದರು. ಶಾಂತ ರೀತಿಯ ಪ್ರತಿಭಟನೆಗೆ ಮಹತ್ತರವಾದ ಬದಲಾವಣೆಗಳಾಗದಿದ್ದರೂ ಅಲ್ಪಸ್ವಲ್ಪ ಪರಿಹಾರದ ದಾರಿಯನ್ನು ತೋರಿಸಿದ ಬ್ರಿಟಿಷರು ಹೋರಾಟವನ್ನು ತಣ್ಣಗಾಗಿಸಿದರು.

ಇದನ್ನೂ ಓದಿ | Amrit Mahotsav | ಬ್ರಿಟಿಷರ ವಿರುದ್ಧ ದಂಗೆ ಸಂಘಟಿಸಿದ್ದ ಅಪ್ಪಾಸಾಹೇಬ ಪಟವರ್ಧನ್‌

ಇದು ನಡೆದು 20 ವರ್ಷಗಳಾಗುತ್ತಿದ್ದಂತೆ ಕೆನರಾ ಜಿಲ್ಲೆಯ ಗಡಿಪ್ರದೇಶವಾದ ಇಂದಿನ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಊರಿನಲ್ಲಿ ರೈತ ಹೋರಾಟವೊಂದು ಮೊಗ್ಗೊಡೆಯಿತು. ಮೈಸೂರು ಮುಮ್ಮುಡಿ ಕೃಷ್ಣರಾಜ ಒಡೆಯರ್‌ನ ಕಂದಾಯ ನೀತಿಯ ವಿರುದ್ಧ ನಡೆದ ಬಂಡಾಯವದು. ತಣ್ಣಗೆ ಆರಂಭವಾದ ಈ ‘ನಗರ ರೈತದಂಗೆ’ ಮುಂದೆ ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಇದೇ ಸಮಯದಲ್ಲಿ ಮಂಗಳೂರಿನ ರೈತರು ಕೂಡ ಬ್ರಿಟಿಷರನ್ನು ಪ್ರತಿಭಟಿಸುವ ದಾರಿಯನ್ನು ಹಿಡಿದರು. ಶಾಂತ ಸ್ವರೂಪದ ಪ್ರತಿಭಟನೆ ನಂತರ ದಿನಗಳಲ್ಲಿ ಹಿಂಸಾತ್ಮಕ ರೂಪ ಪಡೆಯಿತು. ಈ ವಿಶಿಷ್ಟ ಪ್ರತಿಭಟನೆಯು ‘ ಮಂಗಳೂರು ಕೂಟ ಹೋರಾಟ ‘ ಎಂದು ಪ್ರಸಿದ್ಧಿಯನ್ನು ಪಡೆದಿದೆ . ಈ ಹೋರಾಟದಲ್ಲಿ ಭಾಗಿಗಳಾದ ದೇರೆಬೈಲು ರಾಮಯ್ಯ, ಸಂಕು ಪೂಂಜ ಸೂರಪ್ಪ , ಕೃಷ್ಣರಾವ್ ಮೊದಲಾದವರನ್ನು ಬ್ರಿಟಿಷರು ಬಂಧಿಸಿ ಬಿಡುಗಡೆಗೊಳಿಸಿದರು, ಮುಂದೆ ಈ ಹೋರಾಟ ಅಂತ್ಯವಾಯಿತು.

ನಂತರ ನಡೆದ ಅತ್ಯಂತ ಪ್ರಮುಖ ಹೋರಾಟವೆಂದರೆ 1837ರಲ್ಲಿ ನಡೆದ ʼಅಮರಸುಳ್ಯ ದಂಗೆ’ ಅಥವಾ ʼಕೊಡಗು-ಕೆನರಾʼ ಬಂಡಾಯ ಎಂದು ಕರೆಯಲಾಗಿರುವ ಬ್ರಿಟಿಷ್ ವಿರೋಧಿ ಸಶಸ್ತ್ರ ಕದನ. ಈ ಹೋರಾಟ ಆರಂಭಗೊಳ್ಳಲು ಮೂಲ ಕಾರಣ, ಕೊಡಗಿನ ಹಾಲೇರಿ ವಂಶದ ಅರಸ ಚಿಕ್ಕವೀರರಾಜೇಂದ್ರ ಒಡೆಯನ ವಿರುದ್ಧ ಬ್ರಿಟಿಷರು ಸುಳ್ಳು ಆರೋಪಗಳನ್ನು ಹೊರಿಸಿ ಆತನನ್ನು ಕುತಂತ್ರದಿಂದ ಪದಚ್ಯುತಿಗೊಳಿಸಿ ಜನರ ಇಚ್ಛೆಗೆ ವಿರುದ್ಧವಾಗಿ ಕಾಶಿಗೆ ಗಡಿಪಾರು ಮಾಡಿದುದು.

ವ್ಯಗ್ರರಾದ ರೈತರು

ಚಿಕ್ಕವೀರರಾಜನ ಹಿರಿಯರು ಇಂಗ್ಲಿಷರಿಗೆ ಆಪ್ತರಾಗಿದ್ದರೂ ಆತ ಮಾತ್ರ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿ ಪಂಥಾಹ್ವಾನ ನೀಡಿದ್ದ. ಶಿವಮೊಗ್ಗದ ನಗರ ದಂಗೆಗೆ ಬೆಂಬಲ ಕೊಟ್ಟಿದ್ದಲ್ಲದೆ, ಬೆಂಗಳೂರಿನ ಬ್ರಿಟಿಷ್ ಮಿಲಿಟಲಿ ದಂಡಿನಲ್ಲಿ ಕ್ಷೋಭೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ. ಹೈದರಾಬಾದ್, ಪಂಜಾಬ್ ರಾಜರೊಡನೆ ಸೇರಿ ಬ್ರಿಟಿಷ್ ವಿರೋಧಿ ಒಕ್ಕೂಟವನ್ನು ರೂಪಿಸುವ ಪ್ರಯತ್ನ ನಡೆಸಿದ್ದ. ಇದೇ ಹೊತ್ತಲ್ಲಿ ಕೊಡಗಿನೊಳಗೆ ರಾಜಕುಟುಂಬದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯವನ್ನು ಬಳಸಿ ಅವನನ್ನು ಸಿಂಹಾಸನದಿಂದ ಕೆಳಗಿಳಿಸಲಾಯಿತು. ಇದರಿಂದ ರಾಜನ ಆಪ್ತರಾದ ಒಂದು ವರ್ಗದ ರೈತರು ವ್ಯಗ್ರರಾದರು. ಅದು ಮುಂದೆ 1837ರ ಹೋರಾಟದ ಮೂಲದ್ರವ್ಯವಾಯಿತು.

ಕೆದಂಬಾಡಿ ರಾಮಯ್ಯ ಗೌಡ

ಆಶ್ರಮದಲ್ಲಿ ಶಸ್ತ್ರಾಸ್ತ್ರ ತರಬೇತಿ

ಹೋರಾಟವನ್ನು ಶಿಸ್ತುಬದ್ಧವಾಗಿ ಸಂಘಟಿಸಿದ ಸುಳ್ಯ ಉಬರಡ್ಕ ಗ್ರಾಮದ ಕೆದಂಬಾಡಿ ರಾಮಯ್ಯ ಗೌಡ ಎಂಬ ಪ್ರಭಾವಶಾಲಿಯಾದ ಶ್ರೀಮಂತ ಜಮೀನ್ದಾರ, ಜನನಾಯಕನಾಗಿ ಹೊರಹೊಮ್ಮುತ್ತಾರೆ. ಸಶಸ್ತ್ರ ಸಮರಕ್ಕೆ ನಾಯಕನೊಬ್ಬ ಅನಿವಾರ್ಯ, ಅಂತಹ ನಾಯಕ ರಾಜ ಮನೆತನಕ್ಕೆ ಸೇರಿದವನಾದರೆ ಜನಸಾಮಾನ್ಯರು ಭಾವನಾತ್ಮಕತೆಯಿಂದ ಆಪ್ತತೆಯಿಂದ ಸ್ವೀಕರಿಸುತ್ತಾರೆ ಎಂದು ತಿಳಿದಿದ್ದ ಇವರು, ಶನಿವಾರಸಂತೆ ಹೆಮ್ಮನೆಯಿಂದ ಪುಟ್ಟಬಸಪ್ಪ ಎಂಬ ತರುಣನನ್ನು ಕರೆತರುತ್ತಾರೆ. ಅವನಿಗೆ ಸನ್ಯಾಸಿಯ ವೇಷ ತೊಡಿಸುತ್ತಾರೆ. ‘ಕಲ್ಯಾಣಸ್ವಾಮಿ’ ಎಂಬ ಹೆಸರನ್ನು ಇಡುತ್ತಾರೆ. ಸನಿಹದ ಪೂಮಲೆ ಕಾಡಲ್ಲಿ ಆಶ್ರಮ ಕಟ್ಟಿಸಿ ನೆಲೆ ನಿಲ್ಲಿಸುತ್ತಾರೆ. ಈತ ಹಾಲೇರಿ ರಾಜವಂಶಸ್ಥ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ. ಜನ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಈ ಮೂಲಕ ಸುಳ್ಯದ ಸುತ್ತಲಿನ ಗ್ರಾಮಗಳ ಯುವಕರನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿ, ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ.

1837ರ ಮಾರ್ಚ್ 30ರಂದು ಹೋರಾಟಕ್ಕೆ ಸಜ್ಜುಗೊಳ್ಳುತ್ತಾರೆ, ಕಲ್ಯಾಣಸ್ವಾಮಿಯನ್ನು ಪೂಮಲೆ ಕಾಡಿನ ಆಶ್ರಮದಿಂದ ಗೌರಪೂರ್ವಕವಾಗಿ ಕರೆದುಕೊಂಡು ಬರುತ್ತಾರೆ. ಈ ದಿನ ಕೆದಂಬಾಡಿ ರಾಮಯ್ಯ ಗೌಡನ ಮಗನ ಮದುವೆಯೆಂಬ ಯುದ್ಧಸನ್ನದ್ಧತೆಯ ಸಂಕೇತದ ಸುದ್ದಿಯನ್ನು ಸಾರಲಾಗಿರುತ್ತದೆ. ಜನ ಆಯುಧಪಾಣಿಗಳಾಗಿ ಕೆದಂಬಾಡಿ ರಾಮಯ್ಯ ಗೌಡರ ಮನೆಯ ಮುಂದಿನ ಗದ್ದೆಯಲ್ಲಿ ಸೇರುತ್ತಾರೆ. ಕನಿಷ್ಠ 2000 ಹೋರಾಟಗಾರರು ಅಲ್ಲಿ ಸೇರಿರುತ್ತಾರೆ. ಅದೇ ದಿನ ಪೆರಾಜೆ, ಸುಳ್ಯ, ಸುಬ್ರಹ್ಮಣ್ಯ, ಮಂಜ್ರಾಬಾದ್, ಬಿಸಲೆ ಮೊದಲಾದ ಕಡೆಗಳಲ್ಲಿ ಯುದ್ಧದ ನಿರೂಪಗಳನ್ನು (War proclamation ) ಪ್ರಕಟಿಸಲಾಗುತ್ತದೆ.

ಯುದ್ಧದ ನಾಯಕತ್ವದ ಪಟ್ಟ

ಕೊಡಗಿನ ದಿವಾನನಾಗಿದ್ದ ತುದಿಯಡ್ಕ ಲಕ್ಷ್ಮೀನಾರಾಯಣರ ತಮ್ಮನಾದ ಅಟ್ಲೂರು ರಾಮಪ್ಪಯ್ಯ ಸುಳ್ಯದ ಪ್ರಭಾವದ ವ್ಯಕ್ತಿಯಾಗಿದ್ದ. ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದರೂ ಕೊನೆಗೆ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದ. ದಂಡು ಹೊರಡುವ ಮೊದಲು ಅವನನ್ನು ಕರೆತರಲು ಕೆದಂಬಾಡಿ ರಾಮಯ್ಯ ಗೌಡರು ತಂಡವೊಂದನ್ನು ರಚಿಸಿ ಪಯಸ್ವಿನಿ ನದಿಯ ಪಶ್ಚಿಮದ ದಡದಲ್ಲಿನ ಅಟ್ಲೂರಿಗೆ ಕಳುಹಿಸುತ್ತಾರೆ. ಆದರೆ ರಾಮಪ್ಪಯ್ಯನ ಜನ ಇವರ ವಿರುದ್ಧ ಕಾದಾಟ ನಿಲ್ಲುತ್ತಾರೆ. ಆತನನ್ನು ಬಂಧಿಸಿ ಕರೆತರುವುದು ಅವರಿಗೆ ಅನಿವಾರ್ಯವಾಗುತ್ತದೆ. ಇಂದು ಮದುವೆಗದ್ದೆಯೆಂದು ಕರೆಯುವ ಮನೆಯ ಮುಂಭಾಗದ ಗದ್ದೆಯಲ್ಲಿ ಕಲ್ಯಾಣಸ್ವಾಮಿಗೆ ರಾಮಯ್ಯಗೌಡರ ನೇತೃತ್ವದಲ್ಲಿ ನಡೆದ ಕಾರ್ಯಯೋಜನೆಯಂತೆ ಯುದ್ಧದ ನಾಯಕತ್ವದ ಪಟ್ಟವನ್ನು ಕಟ್ಟಲಾಗುತ್ತದೆ.

ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ

ಕಲ್ಯಾಣಸ್ವಾಮಿಗೆ ಬಣ್ಣದ ಕುದುರೆಯನ್ನು ರಾಜಾಶ್ವವಾಗಿ ಅರ್ಪಿಸಲಾಗುತ್ತದೆ. ಜತೆಗೆ ಪ್ರೀತಿ, ಗೌರವದ ಪರಾಕಾಷ್ಟೆ ಎಂಬಂತೆ ಮಿತ್ತೂರು ನಾಯರ್ ದೈವದ ಕೆಂಪು ಕೊಡೆಯನ್ನು ಹಿಡಿಯುತ್ತಾರೆ. ಮಿತ್ತೂರ್ ನಾಯರ್‌ ಸುಳ್ಯ ಪರಿಸರದ ಅತ್ಯಂತ ಕಾರಣಿಕದ ದೈವವೆಂಬ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ. ಇಂತಹ ದೈವದ ಛತ್ರಚಾಮರವನ್ನು ಮನುಷ್ಯ ಮಾತ್ರನೊಬ್ಬನಿಗೆ ಹಿಡಿಯುವುದೆಂದರೆ ಈ ಹೋರಾಟದ ಬಗ್ಗೆ ಜನ ಸಾಮಾನ್ಯರಿಗಿದ್ದ ಅರ್ಪಣಾ ಮನೋಭಾವ ಅರ್ಥವಾಗುತ್ತದೆ. ಮದುವೆ ಗದ್ದೆಯಲ್ಲಿ ಕ್ರಿ.ಶ.1837 ಮಾರ್ಚ್ 30 ರಂದು ರೈತ ಸೈನ್ಯ ಜಮಾವಣೆಯಾದಲ್ಲಿಂದ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಗುಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಮೊದಲು ಈ ದಂಡು ಬೆಳ್ಳಾರೆಯತ್ತ ಸಾಗಿ ಕಂಪನಿಯ ಖಜಾನೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ. ಆಗ ಸ್ಥಳೀಯ ಶಿರಸ್ತೇದಾರ ದೇವಪ್ಪನ ಪ್ರತಿಭಟನೆ ನಿಷ್ಪಲಗೊಳ್ಳುತ್ತದೆ.

೪ ತಂಡಗಳಾಗಿ ವಿಂಗಡನೆ

ಪೈಶ್ಕಾರನ ಕಚೇರಿಯ ಮುಖ್ಯ ಶಿರಸ್ತೇದಾರ, ತಹಸೀಲ್ದಾರ್ ಇನ್ನಿತರ ಉದ್ಯೋಗಿಗಳನ್ನು ಸೆರೆ ಹಿಡಿಯುತ್ತಾರೆ. ಬೆಳ್ಳಾರೆಯಲ್ಲಿ 3000ಕ್ಕಿಂತಲೂ ಹೆಚ್ಚು ಹೋರಾಟಗಾರರು ಜಮಾವಣೆಗೊಂಡಿದ್ದರು. ದಂಡಿನಲ್ಲಿ ಕುದುರೆ ಮತ್ತು ಆನೆಗಳೂ ಇದ್ದವು. ಬೆಳ್ಳಾರೆಯಲ್ಲಿ ಹೋರಾಟದ ಸೇನಾಳುಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ. 800 ಜನರ ಮೊದಲ ದಂಡು ಕುಡೆಕಲ್ಲು ಪುಟ್ಟ ಗೌಡ ಹಾಗೂ ಕುಂಚಡ್ಕ ರಾಮ ಗೌಡರ ನೇತೃತ್ವದಲ್ಲಿ ಕುಂಬ್ಳೆ- ಕಾಸರಗೋಡು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಲಾಯಿತು. ಎರಡನೇ ದಳ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮೂರನೇ ತಂಡವು ಕೂಜುಗೋಡು ಮಲ್ಲಪ್ಪ ಗೌಡ ಹಾಗೂ ಅಪ್ಪಯ್ಯ ಗೌಡರ ಮುಂದಾಳುತನದಲ್ಲಿ ಉಪ್ಪಿನಂಗಡಿ – ಬಿಸಲೆ- ಐಗೂರಿಗೆ ಹೋಗುತ್ತದೆ. ಕಲ್ಯಾಣಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕುಕ್ಕುನೂರು ಚೆನ್ನಯ್ಯ ಇವರಿದ್ದ ಪ್ರಧಾನ ಸೈನ್ಯವು ಮಂಗಳೂರಿಗೆ ಹೊರಟಿತು. ಜನಪ್ರಿಯವಾಗಿ ಕರೆಯಲಾಗುತ್ತಿದ್ದ ಮಂಗಳೂರಿಗೆ ಹೊರಟ ಮುಖ್ಯ ಸೈನ್ಯ ಮೊದಲು ಪುತ್ತೂರಿಗೆ ಲಗ್ಗೆ ಇಟ್ಟಿತು.

ಕಾಸರಗೋಡು ಕದನ

ಜನಸಮರದ ಸುದ್ದಿ ತಿಳಿದ ಕೆನರಾ ಜಿಲ್ಲೆಯ ಕಲೆಕ್ಟರ್ ಲೆವಿನ್ ಮಂಗಳೂರಿನಿಂದ ಹೊರಟು ತುಕಡಿಯೊಂದಿಗೆ ಪುತ್ತೂರಿಗೆ ಆಗಮಿಸಿದ. ಪುತ್ತೂರಲ್ಲಿ ಕಂಪನಿ ಕಚೇರಿ ಸುಲಭವಾಗಿ ಹೋರಾಟಗಾರರ ವಶಕ್ಕೆ ಬಂತು. ಅಲ್ಲಿನ ಉದ್ಯೋಗಿಗಳು ಬಂಧನಕ್ಕೊಳಗಾದರು. ಎರಡು ದಿನ ದೂರದಲ್ಲಿದ್ದು ಹೊಂಚು ಹಾಕಿದ ಲೆವಿನ್ ಯುದ್ಧ ನಡೆಸಿದರೆ ತನಗೇ ಅಪಾಯ ಎಂದು ತಿಳಿದು ಏಪ್ರಿಲ್ 2ರಂದು ರಾತ್ರಿ ಅಲ್ಲಿಂದ ಮಂಗಳೂರು ಕಡೆ ಕಾಲ್ಕಿತ್ತ. ಪುತ್ತೂರಲ್ಲಿ ಅದಾಗಲೇ ಅಪಾರ ಪ್ರಮಾಣದ ಸಶಸ್ತ್ರ ಜನ ಸೇರಿದ್ದರು. ಅಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುವುದಕ್ಕಿಂತ ದುರ್ಬಲ ಮಂಗಳೂರನ್ನು ರಕ್ಷಿಸಲು ಮುಂದಾಗುವುದು ಒಳಿತೆಂದು ಲೆವಿನ್ ಭಾವಿಸಿದ. ಮಂಗಳೂರಲ್ಲಿ ಸಹ ಅಲ್ಲಿನ ನಿವಾಸಿಗಳ ಅಸಹಕಾರ ಲೆವಿನ್ ಗಮನಕ್ಕೆ ಬಂತು. ಪುತ್ತೂರಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಲೆವಿನ್ ಸೈನಿಕರನ್ನು ಒಟ್ಟು ಸೇರಿಸಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಕೊಟ್ಟರೂ ಅವರು ತಮಗೆ ಕೊಟ್ಟ ಕೆಲಸವನ್ನು ನಿರ್ವಹಿಸುವ ಬದಲು ಯಾರಿಗೂ ತಿಳಿಸದೆ ನಾಪತ್ತೆಯಾದರು. ಈ ಕಲೆಕ್ಟರ್ ಮಂಗಳೂರಿಗೆ ತಲಪುವ ಹೊತ್ತಿಗೆ ಊರು ನಿರ್ಜನವಾಗಿತ್ತು. ಅಲ್ಲಿನ ಜನ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿರುವುದು ಅವನ ಗಮನಕ್ಕೆ ಬಂದಿತು. ನಗರದ ಕಾವಲು ಪಡೆ ಸಹ ಅವರೊಂದಿಗೆ ಸೇರಿಕೊಂಡಿತ್ತು.

ಒಂದೆಡೆ ಹೋರಾಟಗಾರರೊಂದಿಗೆ ಕಾದಾಡುತ್ತಾ, ಇನ್ನೊಂದೆಡೆ ಯುರೋಪಿಯನ್ ಕುಟುಂಬಗಳನ್ನು ಮಂಗಳೂರಿನಿಂದ ತೆರವು ಮಾಡಿ ಅಪಾಯಕಾರಿಯಲ್ಲದ ಸ್ಥಳಕ್ಕೆ ಕಳುಹಿಸಲು ಕಂಪನಿಯ ಅಧಿಕಾರಿಗಳು ತೀರ್ಮಾನಿಸಿದ್ದರು. ಏಪ್ರಿಲ್ 5ರಂದು ಅವರನ್ನು ಹಡಗಿಗೆ ಹತ್ತಿಸಲು ನಿರ್ಧರಿಸಿದ್ದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಖಜಾನೆಯನ್ನು ಸಂರಕ್ಷಿಸುವ ಪ್ರಯತ್ನದಿಂದ ಅವರ ಉಳಿದ ಕೆಲಸಕ್ಕೂ ಅಡಚಣೆಯಾಯಿತು. ಕೊನೆಗೂ ಆ ಸಾಹಸವನ್ನು ಕೈಬಿಡಬೇಕಾಯಿತು. ಅಂತೂ ಇಂತೂ ಏಪ್ರಿಲ್ 6 ಮತ್ತು 7 ರಂದು ಒಂದಷ್ಟು ಜನ ಮಂಗಳೂರು ತೊರೆದು ಕಣ್ಣನೂರಿಗೆ ಪಲಾಯನ ಮಾಡಿದರು. 1837ರ ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅಪಾರವಾದ ಜನಬೆಂಬಲ, ನೆರವು ದೊರಕುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷ್ಮಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ. ಬೆಳ್ಳಾರೆಯಿಂದ ಮಾರ್ಚ್ 30ರಂದು ಕಾಸರಗೋಡನ್ನು ಲಗ್ಗೆ ಹಾಕಲು ಹೊರಟ ತಂಡವು ಅದರಲ್ಲಿ ಯಶಸ್ಸನ್ನು ಕಂಡಿತು.

ಕಾಸರಗೋಡು, ಕುಂಬ್ಳೆ, ಮಂಜೇಶ್ವರಗಳನ್ನು ಗೆದ್ದ ಆ ರೈತರು ಪುತ್ತೂರಿನಿಂದ ಸೇನೆಯು ಮಂಗಳೂರು ಸೇರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿತು. ಈ ನಡುವೆ ಚಂದ್ರಗಿರಿ ಫೆರಿ, ಬಿಸಿಲೆ ಪಾಸ್ ಮತ್ತಿತರ ದಾರಿಗಳ ಮೂಲಕ ನಡೆಯುತ್ತಿದ್ದ ಕಂಪನಿಯ ಟಪಾಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿತ್ತು. ಹೋರಾಟಗಾರರು ಪ್ರತಿಯೊಂದು ಉಕ್ಕಡದಲ್ಲಿಯೂ, ಪ್ರತಿಯೊಂದು ಗಡಿಯಲ್ಲಿಯೂ ಕಾವಲು ಪಡೆಯನ್ನು ನಿಯೋಜಿಸಿದ್ದರು. ಉದ್ದೇಶಿತ ಹೋರಾಟ ಪ್ರಥಮ ಹಂತದಲ್ಲಿ ಅಭೂತಪೂರ್ವ ಜಯವನ್ನು ಗಳಿಸಿ ಸುಳ್ಯ, ಸುಬ್ರಹ್ಮಣ್ಯ , ಬಿಸಲೆ, ಉಪ್ಪಿನಂಗಡಿ, ಬೆಳ್ತಂಗಡಿ, ಕುಂಬ್ಳೆ , ಕಾಸರಗೋಡು, ಮಂಜೇಶ್ವರ, ಬಂಟ್ವಾಳ, ಮುಲ್ಕಿ, ಸುರತ್ಕಲ್, ಪುತ್ತೂರು ಈ ಎಲ್ಲ ಊರುಗಳೂ ರೈತಸೈನ್ಯದ ಕೈವಶವಾಗುತ್ತವೆ. ಕೊನೆಗೆ ನಡೆದ ಮಂಗಳೂರು ಆಕ್ರಮಣದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತಿತರರು ಅಪ್ರತಿಮ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಕೆನರಾ ಜಿಲ್ಲೆಯ ಕೇಂದ್ರಸ್ಥಾನ ಪತನಗೊಳ್ಳುತ್ತದೆ. ಆ ಸಮಯದಲ್ಲಿ ಸಂಗ್ರಾಮದ ಯೋಧರ ಸಂಖ್ಯಾಬಲ 10 ರಿಂದ 12 ಸಾವಿರದಷ್ಟು ಇತ್ತು ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.

ಮಂಗಳೂರನ್ನು ಆಕ್ರಮಿಸಿದ ಹೋರಾಟಗಾರರ ಸೈನ್ಯ ಮೊದಲು ಮಾಡಿದ ಕೆಲಸವೆಂದರೆ ಲೈಟ್‌ಹೌಸ್‌ ಪ್ರದೇಶದಲ್ಲಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 7 ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಹಾರಿಸಲಾಗುತ್ತದೆ. ಹೋರಾಟದ ಮುಖ್ಯಸ್ಥರಲ್ಲೊಬ್ಬನಾದ ಗುಡ್ಡೆಮನೆ ತಮ್ಮಯ್ಯರು ರಾಮಯ್ಯ ಗೌಡರ ಸೂಚನೆಗೆ ಅನುಗುಣವಾಗಿ ಈ ಕಾರ್ಯವನ್ನು ನೆರವೇರಿಸಿ ವಿಜಯದ ಸಂಕೇತವನ್ನು ಸಾರುತ್ತಾರೆ. ಅಂದಿನಿಂದ ಮಂಗಳೂರಿನ ಈ ಉನ್ನತ ಮತ್ತು ಪ್ರಮುಖ ಪ್ರದೇಶವು “ಬಾವುಟ ಗುಡ್ಡ” ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ. ನಂತರ ಸೈನ್ಯವು ಇಂಗ್ಲಿಷರ ಕಟ್ಟಡ, ಕುರುಹುಗಳನ್ನು ಸುಟ್ಟು ಹಾಕುತ್ತದೆ. ಸೆರೆಮನೆಯನ್ನು ಒಡೆದು, ಬ್ರಿಟಿಷ್ ನ್ಯಾಯವ್ಯವಸ್ಥೆಯಲ್ಲಿ ವಿನಾಕಾರಣ ಶಿಕ್ಷೆಗೆ ಈಡಾಗಿದ್ದ ಸ್ಥಳೀಯ ಜನರನ್ನು ಮುಕ್ತಗೊಳಿಸಲಾಗುತ್ತದೆ. ಅವರು ಸ್ವಂತ ಇಚ್ಛೆಯಿಂದ ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಾರೆ. ನಂತರ ಮಂಗಳೂರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಆಡಳಿತವನ್ನು ವಹಿಸಿಕೊಂಡ ಹೋರಾಟಗಾರರು ರೈತರಿಗೆ ಕಂದಾಯ ವಿನಾಯಿತಿಯನ್ನು ಘೋಷಿಸುತ್ತಾರೆ. ಮಂಗಳೂರಿನ ವರ್ತಕರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ.

ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ

ಮಂಗಳೂರನ್ನು ಭದ್ರಪಡಿಸಿದ ನಂತರ ಹೋರಾಟಗಾರರ ಹಲವು ಪ್ರಮುಖರು ಮಡಿಕೇರಿ ಪಟ್ಟಣಕ್ಕೆ ಲಗ್ಗೆ ಹಾಕಲು ಸುಳ್ಯ, ಸುಬ್ರಹ್ಮಣ್ಯದ ಕಡೆ ಹಿಂದಿರುಗುತ್ತಾರೆ. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ರೈತಸೈನ್ಯ ಮಡಿಕೇರಿಯ ಕಡೆ ಸಾಗಿತು. ಬಲಮುರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಮಡಿಕೇರಿಗೆ ಮುತ್ತಿಗೆ ಹಾಕಲು ಜನರನ್ನು ಒಟ್ಟು ಸೇರಿಸಲು ಪಾಡಿ ನಾಲ್ಕುನಾಡಿನ ಕಡೆ ತೆರಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೇಜರ್ ಡ್ರಾಯರ್‌ನ ಬೆಟಾಲಿಯನ್‌ ಪಾಂಡವಪುರದಿಂದ ಮಡಿಕೇರಿ ತಲುಪಿಯಾಗಿತ್ತು. ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಉಗ್ರವಾಗಿ ಗುಂಡಿನ ಕಾಳಗ ನಡೆಯಿತು. ಆದರೆ ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ. ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತಿತರರ ಕೆಚ್ಚೆದೆಯ ಪ್ರತಾಪವು ಸಾಫಲ್ಯವನ್ನು ಪಡೆಯಲಿಲ್ಲ. ಸಂಗ್ರಾಮದಲ್ಲಿ ವೀರೋಚಿತ ಸೋಲು ಎದುರಾಯಿತು. ಅತ್ತ ಮಂಗಳೂರಿನ ಸಹಾಯಕ್ಕೆ ಮುಂಬೈನಿಂದ ಸೈನ್ಯ , ಮದ್ದುಗುಂಡು, ಸಂಗ್ರಾಮ ಸಾಧನಗಳು ಬರುವ ವ್ಯವಸ್ಥೆಯಾಯಿತು. ಸೈನಿಕರನ್ನೂ, ಸಾಮಾನು ಸರಂಜಾಮನ್ನು ಒಯ್ಯಲು ಜಹಜುಗಳು ಸಿದ್ಧವಾದವು. ಧಾರವಾಡ, ಬೆಳಗಾವಿಯಿಂದ ಸೈನ್ಯ ಮಂಗಳೂರಿಗೆ ಹೊರಟವು. ಕೆನರಾ ಸೈನ್ಯಗಳ ನಾಯಕ ಬ್ರಿಗೇಡಿಯರ್ ಅಲನ್‌ಗೆ ಮಂಗಳೂರಿನ ಸಮಾಚಾರ ಹೋಯಿತು. ಕೂಡಲೇ ಕರ್ನಲ್ ಗ್ರೀನ್ ನಾಯಕತ್ವದಲ್ಲಿ ಸೈನ್ಯವನ್ನು ಮಂಗಳೂರಿಗೆ ಕಳುಹಿಸಿಸಲಾಯಿತು. ಮುಂಬೈ ಕಡೆಯಿಂದಲೂ ಸೈನ್ಯ ಬಂತು.

ಇದನ್ನೂ ಓದಿ | Amrit Mahotsav | ದೆಹಲಿ ಕೆಂಪುಕೋಟೆ ಮೇಲೆ ಹಾರಾಡೋದು ಧಾರವಾಡದಲ್ಲಿ ತಯಾರಾದ ಧ್ವಜ!

ಬ್ರಿಟಿಷ್‌ ಮೇಲುಗೈ

ಏಪ್ರಿಲ್ 16ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಚರ್ಚಿಸಿ ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು. 1200 ಮಂದಿ ಯುರೋಪಿಯನ್ನರು ಮತ್ತು ಸಿಪಾಯಿಗಳ ನೇತೃತ್ವವನ್ನು ಗ್ರೀನ್ ವಹಿಸಿದ ಮೇಜರ್ ಎವರೆಸ್ಟನೂ ಮುಂಬಯಿ ಸೈನ್ಯದೊಂದಿಗೆ ಬಂದು ಸೇರಿಕೊಂಡ. ಹಲವು ಕಡೆ ಬ್ರಿಟಿಷರ ಸುಸಜ್ಜಿತ ಸೇನೆಗೂ ರೈತಸೈನ್ಯಕ್ಕೂ ನಡುವೆ ಕಾಳಗ ನಡೆಯಿತು. ಭೀಕರ ಕದನವನ್ನು ನಡೆಸಿದರೂ ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ವಿವಿಧ ಪ್ರದೇಶಗಳಲ್ಲಿ ಸೋಲು ಹಿಂಬಾಲಿಸಿತು. ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಬ್ರಿಟಿಷರ ಸೆರೆಯಾದರು. ಸ್ಥಳೀಯ ಗೇಣಿಕಾರರ ನೆರವಿನಿಂದ ಇಂಗ್ಲಿಷರು ಹೋರಾಟಗಾರರ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಯಿತು. ಪುಟ್ಟಬಸಪ್ಪ ತನ್ನ ಸ್ವಂತ ಊರು ಹೆಮ್ಮನೆಯಲ್ಲಿ ಸೆರೆಯಾದರೆ, ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ಉಪ್ಪಿನಂಗಡಿ ಮಂಜ ಮತ್ತು ಲಕ್ಷ್ಮಪ್ಪ ಬಂಗರಸ ಮಂಗಳೂರಿನಲ್ಲಿ ಬಂಧಿಸಲ್ಪಡುತ್ತಾರೆ. ಈ ನಡುವೆ ಶಿವಮೊಗ್ಗದ ನಗರ ಪ್ರಾಂತದ ಹೋರಾಟಗಾರರ ಬೆಂಬಲದಿಂದ ಮತ್ತೆ ಸೈನ್ಯವನ್ನು ಆಯೋಜಿಸಲು ಹೊರಟಿದ್ದ ಕೆದಂಬಾಡಿ ರಾಮಯ್ಯ ಗೌಡರನ್ನು ಕಾರ್ಕಳದ ಸಮೀಪ ಕಬ್ಬನಾಲೆಯಲ್ಲಿ ಸೆರೆಹಿಡಿಯಲಾಯಿತು.

ಬಿಕರ್ನಕಟ್ಟೆಯಲ್ಲಿ ಗಲ್ಲು

ಕ್ರಿ.ಶ. 1837ರ ಹೋರಾಟಕ್ಕೆ ಸಂಬಂಧಿಸಿದಂತೆ ಒಟ್ಟು 1115 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ 12 ಮಂದಿಯನ್ನು ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸಲಾಯಿತು. ವಿಶೇಷ ಆಯೋಗದ ಮುಂದೆ 54 ಕೇಸು ನಡೆದಿತ್ತು‌, ಅಲ್ಲಿ ಒಟ್ಟು 416 ಜನರ ವಿಚಾರಣೆ ನಡೆಸಲಾಗಿತ್ತು. ಕ್ರಿಮಿನಲ್ ನ್ಯಾಯಾಲಯದಲ್ಲಿ 133 ಜನರ ವಿಚಾರಣೆ ನಡೆಸಲಾಯಿತು. 35 ವಿಚಾರಣಾಧೀನ ಕೈದಿಗಳು ಸೆರೆಮನೆ ವಾಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಕೆಲವರನ್ನು ಮುಚ್ಚಳಿಕೆ ಪಡೆದು ಬಿಡಲಾಯಿತು. ಎಲ್ಲ ಬಂದಿಗಳನ್ನು ಸೆರೆಮನೆಯಲ್ಲಿಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. 1837ರ ಹೋರಾಟದಲ್ಲಿ ಭಾಗವಹಿಸಿದ ಲಕ್ಷ್ಮಪ್ಪ ಬಂಗರಸನನ್ನು 1837ರ ಮೇ 23 ರಂದು, ಉಪ್ಪಿನಂಗಡಿಯ ಮಂಜನನ್ನು ಮೇ 30 ರಂದು ಮತ್ತು ಕಲ್ಯಾಣಸ್ವಾಮಿ ಎಂಬ ಹೆಸರಿನ ಪುಟ್ಟಬಸಪ್ಪನನ್ನು ಜೂನ್ 19ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅದೇ ವರ್ಷ ಅಕ್ಟೋಬರ್ 31ರಂದು ಮಡಿಕೇರಿ ಕೋಟೆಯೊಳಗೆ ನೇಣುಗಂಬಕ್ಕೆ ಏರಿಸಲಾಯಿತು.

ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ ಬಂಟ, ಕಾರ್ಯಕಾರ ಸುಬೇದಾರ್ ಕೃಷ್ಣಯ್ಯ, ಗುಡ್ಡೆಮನೆ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ತೊಡಿಸಿ ಪ್ರಖರವಾದ ಶಿಕ್ಷೆಯನ್ನು ಕೊಟ್ಟು ಅವರ ಶವವೂ ದೊರಕದಂತೆ ನೋವು ನೀಡಲಾಯಿತು. ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಪ್ಪು, ಕುಕ್ಕೆಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ್ಲ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಗಿತ್ತು. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚೆರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಿ ಜೈಲಿನಲ್ಲಿಯೇ ಮೃತಪಟ್ಟಿದ್ದರು.

ಜಮೀನು ಮುಟ್ಟುಗೋಲು

ಹೋರಾಟದ ಅಪ್ರತಿಮ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸುಳ್ಯದ ಉಬರಡ್ಕ ಮತ್ತು ಭಾಗಮಂಡಲದ ಚೆಟ್ಟಮಾನಿ ಎರಡು ಸ್ಥಳಗಳಲ್ಲಿ ಮನೆಗಳು ಇದ್ದು, ಅಪಾರ ಪ್ರಮಾಣದ ಜಮೀನುಗಳ ಮಾಲೀಕನಾಗಿದ್ದರು. ಕೊಡಗಿನ ರಾಜಕುಟುಂಬದ ಜತೆ ಇವರಿಗೆ ಉತ್ತಮ ಬಾಂಧವ್ಯವಿತ್ತು. ಅವರ ಒಬ್ಬ ಮಗನ ಹೆಸರು ಸಣ್ಣಯ್ಯ ಗೌಡ, ಮಗಳ ಗಂಡನ ಹೆಸರು ಮಡಿಯಾಲ ತಮ್ಮಯ್ಯ, ಅಣ್ಣ ಕೃಷ್ಣಪ್ಪ ಗೌಡ, ಕೆದಂಬಾಡಿ ರಾಮಯ್ಯ ಗೌಡರ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಶಿಕ್ಷೆಗೆ ಈಡಾಗುತ್ತಾರೆ. ಅವರ ಜಮೀನುಗಳನ್ನು ಕಂಪನಿ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ, ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಪುಟಿದೆದ್ದಿದ್ದ ಅಪ್ರತಿಮ ಹೋರಾಟಗಾರ, ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬ ವರ್ಗವು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದಿದ್ದರು. ಈ ಮೂಲಕ ೨ ವಾರಗಳ ಕಾಲ ಬ್ರಿಟಿಷರ ಕಪಿಮುಷ್ಟಿಯಿಂದ ಈ ಭಾಗವನ್ನು ರಕ್ಷಿಸಿದ್ದರು. ಕೊನೆಗೆ ಗುರುತು, ಪರಿಚಯವಿಲ್ಲದ ಕಡಲಾಚೆಗಿನ ಪ್ರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರಲ್ಲದೆ ಇನ್ನೂ ಹಲವು ಜನ ನಾಡಿಗಾಗಿ ತ್ಯಾಗ ಮಾಡಿದ್ದಾರೆ.

ಇದನ್ನೂ ಓದಿ | Amrit Mahotsav | ಮುಳುಬಾಗಿಲು ಸ್ವಾಮಿ ಎಂಬ ಕ್ರಾಂತಿಕಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Vijayapura News: ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

VISTARANEWS.COM


on

Vijayapura news
Koo

ವಿಜಯಪುರ : ತಮ್ಮ ಮಗಳನ್ನು ಮದುವೆಯಾಗಲು ಬಂದ ಆಕೆಯ ಪ್ರಿಯಕರನ ಮೇಲೆ ಪೋಷಕರೇ ಪೆಟ್ರೋಲ್​ ಹಾಕಿ ಸುಟ್ಟಿರುವ ಪ್ರಕರಣವೊಂದು ವಿಜಯಪುರ ಜಿಲ್ಲೆಯ (Vijayapura News) ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಅದರೆ, ಯುವತಿಯ ಪೋಷಕರು ಇದನ್ನು ನಿರಾಕರಿಸಿದ್ದು ಮಗಳನ್ನು ಕೊಡದಿರಲು ನಿರ್ಧರಿಸಿದ ನಮ್ಮನ್ನು ಸುಡಲು ಯುವಕ ಪೆಟ್ರೋಲ್ ತಂದಿದ್ದ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ರಾಹುಲ್​ ರಾಮನಗೌಡ ಬಿರಾದಾರ ಸುಟ್ಟ ಗಾಯಗಳು ಹಾಗೂ ಮಾರಕಾಸ್ತ್ರಗಳ ಪೆಟ್ಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯುವತಿಯ ಮನೆಯ ನಾಲ್ವರು ಆಸ್ಪತ್ರೆ ಸೇರಿದ್ದಾರೆ. ಘಟನೆ ಬಗ್ಗೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಆಸ್ಪತ್ರೆ ಸೇರಿರುವ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ಅವರ ಕುಟುಂಬಸ್ಥರು ಆತನ ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ಕನ್ಯೆ ಕೇಳಲು ಹೋದ ನಮ್ಮಣ್ಣನಿಗೆ ಬೆಂಕಿ ಹಾಕಿ ಸುಟ್ಟು ರಾಡ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಐಶ್ವರ್ಯ ಸೇರಿದಂತೆ ಅವರ ಕುಟುಂಬಸ್ಥರು ಮದುವೆಗೆ ಒಪ್ಪದ ನಮ್ಮನ್ನು ಸುಡಲು ರಾಹುಲ್ ಯತ್ನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಶೇಕಡಾ 70ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಹುಲ್​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?

ರಾಹುಲ್ ರಾಮನಗೌಡ ಬಿರಾದಾರ ಅವರು ಐಶ್ವರ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ವರ್ಷದಿಂದ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಅಂತೆಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದ ಯುವತಿಯ ಪೋಷಕರು ಹುಡುಗನ ಮನೆಯವರಿಗೆ ಬರಲು ಹೇಳಿದ್ದರು. ಅವರು ಅಲ್ಲಿಗೆ ಹೋಗಿದ್ದಾಗ ಯುವತಿ ಮದುವೆ ನಿರಾಕರಿಸಿದ್ದಳು. ಆತನ ಗುಣ ಸರಿ ಇಲ್ಲ, ಹೀಗಾಗಿ ನಾನು ಮದ್ವೆಯಾಗಲ್ಲ ಎಂದು ಹೇಳಿದ್ದಳು. ಹುಡುಗಿ ಮದುವೆ ನಿರಾಕರಣೆ ಮಾಡಿದ್ದಾಳೆ ಎಂದು ರಾಹುಲ್ ಮನೆಯವರು ವಾಪಸ್ ಹೋಗಿದ್ದರು.

ಪ್ರೀತಿಸಿದ ಹುಡುಗಿಯೇ ಸಿಗಬೇಕು ಹಠ ಹಿಡಿದು ರಾಹುಲ್​ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಅಲ್ಲದೆ, ಮದುವೆಯಾಗದೇ ಹೋದರೆ ತಾವಿಬ್ಬರು ಜತೆಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದ. ಫೋಟೋ ಬೆದರಿಕೆಗೆ ತಣ್ಣಾಗಾದ ಯುವತಿಯ ಕುಟುಂಬಸ್ಥರು ಆಕೆ ಒಪ್ಪಿದರೆ ಲಗ್ನ ಮಾಡಿ ಕೊಡುವುದಾಗಿ ರಾಜಿ ಮಾಡಿ ಕಳುಹಿಸಿದ್ದರು. ಆ ಬಳಿಕವೂ ವಿವಾದ ಮುಂದುವರಿದಿತ್ತು. ಅಲ್ಲದೆ, ಹಲವು ಬಾರಿ ರಾಜಿ ಪಂಚಾಯತಿ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

ಸೋಮವಾರ ಮತ್ತೆ ರಾಹುಲ್ ಬಿರಾದಾರ ಐಶ್ವರ್ಯಾ ಮನೆಗೆ ಮತ್ತೆ ಹೋಗಿದ್ದ. ಈ ವೇಳೆ ಮತ್ತೆ ಮಾತುಕತೆ ನಡೆದಿದೆ. ಐಶ್ವರ್ಯಾ ಪೋಷಕರ ಪ್ರಕಾರ ಆತ ಮಾತುಕತೆಗೆ ಬರುವಾಗ ಪೆಟ್ರೋಲ್ ತಂದಿದ್ದ. ಅದನ್ನು ನಮ್ಮ ಮೇಲೆ ಹಾಕಿ ಸುಡಲು ಯತ್ನಿಸಿದ್ದ. ಆದರೆ, ಯುವಕನ ಪೋಷಕರು ಹೇಳುವ ಪ್ರಕಾರ ಐಶ್ವರ್ಯಾ ಅವರ ಪೋಷಕರು ರಾಹುಲ್ ಕೈಯಲ್ಲಿದ್ದ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಕೊಡದೇ ಹೋದಾಗ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಬಳಿಕ ಮೊದಲೇ ತಂದಿಟ್ಟಿದ್ದ ಪೆಟ್ರೋಲ್​ನಿಂದ ಸುಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್.ನಾಯಕ ಅವರು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಘಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Prajwal Revanna Case: ಮಂಗಳವಾರ (ಮೇ 27ರಂದು) ನಾಳೆ ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ ಹೆಸರಗಳಲ್ಲಿ ಒಂದು ಹೆಸರು ಚೇತನ್​. ಸದ್ಯ ಎಸ್ಐಟಿ ಯಿಂದ ಚೇತನ್ ಗೌಡ ಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಸೇರಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊ ಹಗರಣದ (Prajwal Revanna Case ) ಸಂಬಂಧ ತನಿಖೆ ನಡೆಸುತ್ತಿರವು ಎಸ್​ಐಟಿ ಪೊಲೀಸರು ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತ ಚೇತನ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಾಸನದ ಸೆನ್ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳವಾರ (ಮೇ 27ರಂದು) ನಾಳೆ ಯಾವುದೇ ಪರಿಸ್ಥಿತಿಯಲ್ಲಿ ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಎಸ್ಐಟಿ ತಿಳಿಸಿದೆ. ಪೆನ್ ಡ್ರೈವ್ ಪ್ರಕರಣ ಸದ್ದು ಮಾಡಿದಾಗ ಅದರಲ್ಲಿ ಕೇಳಿ ಬಂದ ಹೆಸರಗಳಲ್ಲಿ ಒಂದು ಹೆಸರು ಚೇತನ್​. ಸದ್ಯ ಎಸ್ಐಟಿ ಯಿಂದ ಚೇತನ್ ಗೌಡ ಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ನಾಳೆ ಚೇತನ್ ಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದ್ದು, ಬೆಳಗ್ಗೆ 11 ಗಂಟೆ ಮೊದಲು ಬರಲು ಸೂಚನೆ ನೀಡಲಾಗಿದೆ. ಹೀಗಾಗಿ ಚೇತನ್​ 10 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಬರಲಿದ್ದಾರೆ. ಪೆನ್ ಡ್ರೈವ್ ಲೀಕ್ ವಿಚಾರವಾಗಿ ಚೇತನ್ ಗೌಡ ನನ್ನು ಎಸ್.ಐ.ಟಿ ವಿಚಾರಿಸುವ ಸಾಧ್ಯತೆ ಇದೆ.

ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

ಪ್ರಜ್ವಲ್‌ ರೇವಣ್ಣ ಅವರು ಬರಲಿ ವಿಚಾರಣೆ ಎದುರಿಸಲಿ. ಸಂತ್ರಸ್ತೆಯರಲ್ಲಿ ಜೆಡಿಎಸ್‌ ಕಾರ್ಯಕರ್ತರೆಯರೇ ಹೆಚ್ಚಾಗಿದ್ದಾರೆ. ಅವರಿಗೆಲ್ಲ ನ್ಯಾಯ ದೊರಕಬೇಕು. ಪ್ರಜ್ವಲ್‌ ಕೇಸ್‌ನಿಂದ (Prajwal Revanna Case) ಎಷ್ಟೋ ಜನ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಎಸ್‌ಐಟಿ ಮುಂದೆ ವಿಚಾರಣೆಗೆ ಅವರೂ ಬರಲಿ, ನಾನೂ ಹಾಜರಾಗುತ್ತೇನೆ ಎಂದು ಅಶ್ಲೀಲ ವಿಡಿಯೊ ವೈರಲ್‌ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿರುವ ನವೀನ್‌ ಗೌಡ ಹೇಳಿದ್ದಾನೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಮೇ 31ರಂದು ಬೆಂಗಳೂರಿಗೆ ಆಗಮಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ನವೀನ್‌ ಗೌಡ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾನೆ.

ಅಶ್ಲೀಲ ವಿಡಿಯೊ ಆರೋಪದಲ್ಲಿ ಏ. 23ರಂದು ನನ್ನ ಮೇಲೆಯೂ ಎಫ್‌ಐಆರ್‌ ದಾಖಲಿಸಿದ್ದಾರೆ. ಹಾಸನದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ನಾಪತ್ತೆಯಾಗಿದ್ದಾರೆ ಎಂಬುವುದು ಮರು ತನಿಖೆಯಾಗಬೇಕಿದೆ. ಈ ಆತ್ಮಹತ್ಯೆಗಳಿಗೂ ಕೂಡ ಪ್ರಜ್ವಲ್‌ ರೇವಣ್ಣಗೆ ಸಂಬಂಧವಿದೆ. ಎಸ್‌ಐಟಿಯವರುವ ವಿಚಾರಣೆಗೆ ನನ್ನನ್ನು ಕರೆದಿಲ್ಲ. ಅವರು ಕರೆದರೆ ನಾನು ಹೋಗುತ್ತೇನೆ. ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇಸ್‌ ಹಾಕಿದ್ದಾರೆ ಹೇಳಿದ್ದಾನೆ.

ಅಶ್ಲೀಲ ವಿಡಿಯೊ ವಿಷಯ ಬಹಿರಂಗಪಡಿಸದಂತೆ ನನಗೂ ಪ್ರಜ್ವಲ್‌ ರೇವಣ್ಣ ಅವರು ಆಮಿಷ ಒಡ್ಡಿದ್ದರು. ಅವರ ಸಹಚರನನ್ನು ನನ್ನ ಭೇಟಿಯಾಗಲು ಕಳುಹಿಸಿದ್ದರು ಎಂದು ಆರೋಪಿಸಿದ್ದಾನೆ.

ನವೀನ್‌ ಗೌಡ ಯಾರು?

ನವೀನ್‌ ಗೌಡ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಶಾಸಕ ಜಮೀರ್‌ ಅಹಮ್ಮದ್‌ ಆಪ್ತರಲ್ಲೊಬ್ಬನಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೀಲ್‌ಗೂ ಆಪ್ತರಾಗಿದ್ದರು. ಚುನಾವಣೆ ವೇಳೆ ಶ್ರೇಯಸ್‌ ಪರವಾಗಿ ಪ್ರಚಾರವನ್ನೂ ಮಾಡಿದ್ದ. ಈತನೇ ಹಾಸನ ಜಿಲ್ಲಾದ್ಯಂತ ಪೆನ್‌ಡ್ರೈವ್‌ ಅನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನವೀನ್ ಗೌಡ ಮೇಲೆ ಏ.23ರಂದು ಹಾಸನ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಬಳಿಕ ನವೀನ್ ಗೌಡ ನಾಪತ್ತೆಯಾಗಿದ್ದ. ಆದರೆ, ಭಾನುವಾರ ಫೇಸ್‌ಬುಕ್‌ನಲ್ಲಿ ದಿಢೀರನೆ ಪ್ರತ್ಯಕ್ಷ

Continue Reading

ದೇಶ

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Samsung Galaxy: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದ್ದು, ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ರಿಲೀಸ್‌ ಮಾಡಿದೆ.

VISTARANEWS.COM


on

Samsung Galaxy F55 5G Smartphone Released With Exciting Classy Veegan Leather Design
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಫ್ ಸರಣಿಯ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ (Samsung Galaxy) ಎಫ್ 55 5ಜಿ ಅನ್ನು ಇಂದು ಬಿಡುಗಡೆ ಮಾಡಿದೆ.

ನಯವಾಗಿ ಮತ್ತು ಸೊಗಸಾಗಿರುವ ಗ್ಯಾಲಕ್ಸಿ ಎಫ್55 5ಜಿ ಪ್ರೀಮಿಯಂ ಬ್ಯಾಕ್ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದ್ದು, ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎಫ್55 5ಜಿ ಸೂಪರ್ ಅಮೋಲ್ಡ್+ ಡಿಸ್ಪ್ಲೇ, ಶಕ್ತಿಶಾಲಿ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್, 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್, 4 ಜನರೇಷನ್ ಆಂಡ್ರಾಯ್ಡ್ ಅಪ್ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್‌ಗಳಂತಹ ವಿಭಾಗ-ಶ್ರೇಷ್ಠ ಫೀಚರ್‌ಗಳನ್ನು ಹೊಂದಿದ್ದು, ಬಳಕೆದಾರರು ಮುಂದಿನ ಹಲವು ವರ್ಷಗಳ ಕಾಲ ಹೊಸ ಫೀಚರ್ ಮತ್ತು ಹೆಚ್ಚಿನ ಭದ್ರತೆಯನ್ನು ಹೊಂದಬಹುದಾಗಿದೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಈ ಕುರಿತು ಮಾತನಾಡಿ, “ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸರಣಿಯಲ್ಲಿಯೇ ಮೊದಲ ಬಾರಿಗೆ ಸ್ಯಾಡಲ್ ಸ್ಟಿಚ್ ಮಾದರಿಯ ಕ್ಲಾಸಿ ವೀಗನ್ ಲೆದರ್ ವಿನ್ಯಾಸವನ್ನು ನೀಡಲಾಗುತ್ತಿದೆ. ಗ್ಯಾಲಕ್ಸಿ ಎಫ್55 5ಜಿ ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಬರಲಿದೆ. ಇದರ ಜತೆಗೆ, ಸೂಪರ್ ಅಮೋಲ್ಡ್+ 120ಹರ್ಟ್ಜ್ ಡಿಸ್ಪ್ಲೇ, ಶಕ್ತಿಯುತ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹಾಗೂ 4 ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು, ಐದು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಮತ್ತು ನಾಕ್ಸ್ ಸೆಕ್ಯೂರಿಟಿ ಫೀಚರ್‌ಗಳನ್ನು ಹೊಂದಿದೆ. ಈ ಮೂಲಕ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಉನ್ನತ-ಶ್ರೇಣಿಯ ಅನುಭವಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಕ್ಲಾಸಿ ವೀಗನ್ ಲೆದರ್ ಡಿಸೈನ್

ಮಂತ್ರಮುಗ್ಧಗೊಳಿಸುವಂತೆ ವಿನ್ಯಾಸಗೊಳಿಸಲಾಗಿರುವ ಗ್ಯಾಲಕ್ಸಿ ಎಫ್55 5ಜಿ ವಿಶಿಷ್ಟವಾದ ಸ್ಯಾಡಲ್ ಸ್ಟಿಚ್ ಮಾದರಿ ಜತೆಗೆ ಕ್ಲಾಸಿ ವೀಗನ್ ಲೆದರ್ ಫಿನಿಶ್ ಬ್ಯಾಕ್ ಪ್ಯಾನೆಲ್ ಹೊಂದಿದೆ. ಕ್ಯಾಮೆರಾ ಡೆಕೊ ಗೋಲ್ಡನ್ ಬಣ್ಣದಲ್ಲಿ ಬರುತ್ತದೆ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಏಪ್ರಿಕಾಟ್ ಕ್ರಶ್ ಮತ್ತು ರೈಸಿನ್ ಬ್ಲ್ಯಾಂಕ್ ಎಂಬ ಎರಡು ಮನಮೋಹಕ ಬಣ್ಣಗಳ ಆಯ್ಕೆಗಳು ಲಭ್ಯವಿದೆ. ಸ್ಮಾರ್ಟ್‌ಫೋನ್ ಕೇವಲ 180 ಗ್ರಾಂ ತೂಗುತ್ತದೆ ಮತ್ತು 7.8 ಎಂಎಂ ಅಗಲ ಹೊಂದಿದ್ದು, ನಯವಾಗಿದೆ ಹಾಗೂ ಬಳಸುವಾಗ ಅದ್ಭುತ ಅನುಭವ ಉಂಟು ಮಾಡಲಿದೆ.

ಇದನ್ನೂ ಓದಿ: Snake Rescue: ಶಿರಾದಲ್ಲಿ ಹೆಬ್ಬಾವು ರಕ್ಷಿಸಿದ ಮಾಜಿ ಸೈನಿಕ

6.7″ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಎಫ್55 5ಜಿ ಗ್ರಾಹಕರಿಗೆ ಅತ್ಯದ್ಭುತ ದೃಶ್ಯ ವೈಭವ ಮತ್ತು ಸೊಗಸಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ದೊಡ್ಡ ಡಿಸ್‌ಪ್ಲೇಯು 1000 ನಿಟ್‌ಗಳ ಸಾಮರ್ಥ್ಯದ ಹೆಚ್ಚಿನ ಬ್ರೈಟ್‌ನೆಸ್‌ ಹೊಂದಿದೆ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನದಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಬಳಕೆದಾರರು ತಮ್ಮ ಮೊಬೈಲ್ ಅನ್ನು ಅಡೆತಡೆಯಿಲ್ಲದೆ ವೀಕ್ಷಣೆ ಮಾಡಬಹುದಾಗಿದೆ.

ಶಕ್ತಿಯುತ ಪ್ರೊಸೆಸರ್

ಗ್ಯಾಲಕ್ಸಿ ಎಫ್55 5ಜಿ 4ಎನ್ಎಂ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್‌ ಹೊಂದಿದ್ದು, ಬಳಕೆದಾರರಿಗೆ ನಿರರ್ಗಳವಾಗಿ ಮಲ್ಟಿ ಟಾಸ್ಕಿಂಗ್ ಮಾಡುವ ಅವಕಾಶ ಒದಗಿಸುತ್ತದೆ. 5ಜಿಯ ಅಪ್ರತಿಮ ವೇಗ ಮತ್ತು ಸಂಪರ್ಕ ಇರುವ ಕಾರಣ ಬಳಕೆದಾರರು ಎಲ್ಲಿಗೆ ಹೋದರೂ ಕನೆಕ್ಟೆಡ್ ಆಗಿರಬಹುದು ಮತ್ತು ಸಂಪರ್ಕದಲ್ಲಿರಬಹುದು. ವೇಗವಾಗಿ ಡೌನ್‌ಲೋಡ್‌, ಸುಗಮ ಸ್ಟ್ರೀಮಿಂಗ್ ಮತ್ತು ನಿರರ್ಗಳವಾಗಿ ಬ್ರೌಸಿಂಗ್ ಮಾಡಬಹುದು. ಪ್ರೊಸೆಸರ್ ಉತ್ತಮ ಗುಣಮಟ್ಟದ ಆಡಿಯೋ ಮತ್ತು ದೃಶ್ಯಗಳನ್ನು ನೀಡುವುದರ ಜತೆಗೆ ಹೈಸ್ಪೀಡ್ ಕನೆಕ್ಟಿವಿಟಿ ಹೊಂದಿದ್ದು, ಸೊಗಸಾದ ಮೊಬೈಲ್ ಗೇಮಿಂಗ್ ಅನುಭವವನ್ನು ನೀಡುತ್ತದೆ.

ನೈಟೋಗ್ರಫಿ ಕ್ಯಾಮೆರಾ

ಗ್ಯಾಲಕ್ಸಿ ಎಫ್55 5ಜಿ ಹೆಚ್ಚಿನ ರೆಸೆಲ್ಯೂಶನ್ ಹೊಂದಿರುವ ಮತ್ತು ಶೇಕ್-ಫ್ರೀ ಅಂದರೆ ಕೈ ಅಲುಗಾಡಿದರೂ ಸ್ಪಷ್ಟವಾದ ವೀಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಬಹುದಾದ 50 ಎಂಪಿ (ಓಐಎಸ್) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಕೈ ನಡುಕ ಅಥವಾ ಆಕಸ್ಮಿಕ ಅಲುಗಾಟಗಳಿಂದ ಉಂಟಾಗುವ ಮಸುಕುತನವನ್ನು ತಡೆಯುತ್ತದೆ. ಕ್ಯಾಮೆರಾ ಸೆಟಪ್ 8ಎಂಪಿ ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ವಿಶೇಷವಾಗಿ ಗ್ಯಾಲಕ್ಸಿ ಎಫ್55 5ಜಿ ನೈಟೋಗ್ರಫಿ ಫೀಚರ್ ಜತೆಗೆ ಬರುತ್ತದೆ, ಈ ಫೀಚರ್ ಕಡಿಮೆ-ಬೆಳಕಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ವಿವರವಾದ, ತೀಕ್ಷ್ಣವಾದ ಸೆಲ್ಫಿ ತೆಗೆಯಲು 50ಎಂಪಿ ಸಾಮರ್ಥ್ಯದ ಹೈ ರೆಸಲ್ಯೂಶನ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸೂಪರ್-ಫಾಸ್ಟ್ ಚಾರ್ಜಿಂಗ್

ಗ್ಯಾಲಕ್ಸಿ ಎಫ್55 5ಜಿ ಪ್ಯಾಕ್‌ಗಳು 5000 ಎಂಎಎಚ್ ಬ್ಯಾಟರಿ ಹೊಂದಿದೆ. ಅದರಿಂದ ದೀರ್ಘ ಕಾಲ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವೀಕ್ಷಣೆ ಮಾಡಬಹುದಾಗಿದೆ. ಗ್ಯಾಲಕ್ಸಿ ಎಫ್55 5ಜಿ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಆರಾಮಾಗಿ ಮೊಬೈಲ್ ಬಳಸಲು, ಸಂಪರ್ಕದಲ್ಲಿರಲು, ಮನರಂಜನೆ ನೀಡಲು ಮತ್ತು ಉತ್ಪಾದಕತೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್55 5ಜಿ ಕಡಿಮೆ ಸಮಯದಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾದ 45ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಗ್ಯಾಲಕ್ಸಿ ಎಫ್55 5ಜಿ, ಹಲವಾರು ಹೊಸ ಆವಿಷ್ಕಾರಗಳನ್ನು ಹೊಂದಿದೆ. ಇದರ ವಾಯ್ಸ್ ಫೋಕಸ್‌ ಫೀಚರ್ ವಾತಾವರಣದಲ್ಲಿನ ಶಬ್ದವನ್ನು ಕಡಿತಗೊಳಿಸಿ ಅದ್ಭುತ ಕರೆ ಅನುಭವ ನೀಡುತ್ತದೆ ಮತ್ತು ಆ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲಿದೆ. ಕ್ವಿಕ್ ಶೇರ್ ವೈಶಿಷ್ಟ್ಯವು ಬಳಕೆದಾರರಿಗೆ ಫೈಲ್‌ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್‌ಗಳನ್ನು ನಿಮ್ಮ ಲ್ಯಾಪ್‌ಟಾಪ್ ಮತ್ತು ಟ್ಯಾಬ್ ಸೇರಿದಂತೆ ಯಾವುದೇ ಸಾಧನ ಅದು ದೂರದಲ್ಲಿದ್ದರೂ ಕೂಡ ತ್ವರಿತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್55 5ಜಿ ನೊಂದಿಗೆ ನಾಲ್ಕು ಜನರೇಷನ್‌ಗಳ ಓಎಸ್ ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್‌ಗಳನ್ನು ಒದಗಿಸುತ್ತಿದ್ದು, ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚಿನ ಭದ್ರತೆಯನ್ನು ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

Continue Reading

ಕರ್ನಾಟಕ

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Kannada New Movie: ʼರಂಗಿ ತರಂಗʼ, ʼಅವನೇ ಶ್ರೀಮನ್ನಾರಾಯಣʼ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ” ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್ ಈಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ʼದಿಯಾʼ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್ ಈಚೆಗೆ (Kannada New Movie) ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ʼರಂಗಿ ತರಂಗʼ, ʼಅವನೇ ಶ್ರೀಮನ್ನಾರಾಯಣʼ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ” ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್‌ ಟೀಸರ್, ಕನ್ನಡ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎನ್ನಬಹುದಾಗಿದೆ. ಈ ಟೀಸರ್ ಮೂಲಕ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಅನಿಮೇಷನ್‌ ಟೀಸರ್ ಗಾಗಿ ಏಳೆಂಟು ಜನ ನುರಿತ ತಂತ್ರಜ್ಞರು ಸುಮಾರು ತಿಂಗಳ ಕಾಲ ಶ್ರಮ ಪಟ್ಟಿದ್ದಾರೆ‌. ಅನಿಮೇಷನ್‌ ಟೀಸರ್ ಗೆ ಬರುತ್ತಿರುವ ರೆಸ್ಪಾನ್ಸ್ ಗೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕರು.

ಇದನ್ನೂ ಓದಿ: SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿದೆ.ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ದೀಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ “ಪ್ರೇಮಂ ಪೂಜ್ಯಂ” ಹಾಗೂ “ಕೌಸಲ್ಯ ಸುಪ್ರಜಾ ರಾಮ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಬೃಂದಾ ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರ ಜತೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ಎಂ. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಭಿಷೇಕ್ ಅವರೇ ಬರೆದಿದ್ದಾರೆ. ಹೆಸರಾಂತ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ಹಾಗೂ ಅಭಿಷೇಕ್ ಅವರ ಸಾರಥ್ಯದ “ಪಿನಾಕ” ವಿ ಎಫ್ ಎಕ್ಸ್ ಸ್ಟುಡಿಯೋದಲ್ಲೇ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಟೀಸರ್‌ನ ಅನಿಮೇಷನ್‌ ವರ್ಕ್ ನಡೆದಿದೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ರಘು ಮೈಸೂರ್ ಕಲಾ ನಿರ್ದೇಶನ ಹಾಗೂ ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Continue Reading
Advertisement
Vijayapura news
ಪ್ರಮುಖ ಸುದ್ದಿ3 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Prajwal Revanna Case
ಪ್ರಮುಖ ಸುದ್ದಿ3 hours ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ4 hours ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ4 hours ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ4 hours ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ4 hours ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Kannada New Movie
ಕರ್ನಾಟಕ5 hours ago

Kannada New Movie: ʼಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿʼ ಚಿತ್ರದ ಅನಿಮೇಷನ್‌ ಟೀಸರ್‌ ರಿಲೀಸ್‌

Golden Star Ganesh Krishnam Pranaya Sakhi movie first song release in Mysore
ಕರ್ನಾಟಕ5 hours ago

Golden Star Ganesh: ಮೊದಲ ಹಾಡಿನಲ್ಲೇ ಮೋಡಿ ಮಾಡಿದ ʼಕೃಷ್ಣಂ ಪ್ರಣಯ ಸಖಿʼ

Mandya News
ಪ್ರಮುಖ ಸುದ್ದಿ5 hours ago

Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

11th Annual Mahotsav of Sri Annapurneswari Temple in Belagavi from 29th May
ಬೆಳಗಾವಿ5 hours ago

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ9 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌