ಕರ್ನಾಟಕ
Karnataka Election results 2023: ಎಲ್ಲ 224 ನೂತನ ಶಾಸಕರ ಫುಲ್ ಡಿಟೇಲ್; ಯಾವ ಜಿಲ್ಲೆಯಲ್ಲಿ ಯಾರ ಮೇಲುಗೈ?
Election results: ರಾಜ್ಯ ವಿಧಾನಸಭೆ ಚುನಾವಣೆಯ 224 ಕ್ಷೇತ್ರಗಳಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳ ಪೂರ್ಣ ಮಾಹಿತಿ ಇಲ್ಲಿದೆ. ಜಿಲ್ಲಾವಾರು ಬಲಾಬಲವೂ ಇದೆ. ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ, ಬಿಜೆಪಿ 66ರಲ್ಲಿ, ಜೆಡಿಎಸ್ 19 ಮತ್ತು ಇತರರು ನಾಲ್ಕು ಕಡೆ ಗೆದ್ದಿದ್ದಾರೆ.
ಬೆಳಗಾವಿ ಜಿಲ್ಲೆ : 18 ಕ್ಷೇತ್ರಗಳು: 11 ಕಾಂಗ್ರೆಸ್- 7 ಬಿಜೆಪಿ
1.ನಿಪ್ಪಾಣಿ: ಶಶಿಕಲಾ ಜೊಲ್ಲೆ- ಬಿಜೆಪಿ
2. ಚಿಕ್ಕೋಡಿ ಸದಲಗ: ಗಣೇಶ್ ಹುಕ್ಕೇರಿ- ಕಾಂಗ್ರೆಸ್
3. ಅಥಣಿ: ಲಕ್ಷ್ಮಣ ಸವದಿ- ಕಾಂಗ್ರೆಸ್
4. ಕಾಗವಾಡ: ಭರಮಗೌಡ ಆಲಗೌಡ ಕಾಗೆ- ಕಾಂಗ್ರೆಸ್
5. ಕುಡಚಿ: ಮಹೇಂದ್ರ ಕೆ. ತಮ್ಮಣ್ಣನವರ್- ಕಾಂಗ್ರೆಸ್
6. ರಾಯಭಾಗ: ದುರ್ಯೋಧನ ಐಹೊಳೆ-ಬಿಜೆಪಿ
7. ಹುಕ್ಕೇರಿ: ನಿಖಿಲ್ ಕತ್ತಿ-ಬಿಜೆಪಿ
8. ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
9. ಗೋಕಾಕ: ರಮೇಶ್ ಜಾರಕಿಹೊಳಿ- ಬಿಜೆಪಿ
10. ಯಮಕನಮರಡಿ: ಸತೀಶ್ ಜಾರಕಿಹೊಳಿ- ಕಾಂಗ್ರೆಸ್
11. ಬೆಳಗಾವಿ ಉತ್ತರ: ಆಸಿಫ್ ಸೇಠ್- ಕಾಂಗ್ರೆಸ್
12. ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್- ಬಿಜೆಪಿ
13. ಬೆಳಗಾವಿ ಗ್ರಾ.: ಲಕ್ಷ್ಮೀ ಹೆಬ್ಬಾಳ್ಕರ್- ಕಾಂಗ್ರೆಸ್
14. ಖಾನಾಪುರ: ವಿಠಲ್ ಹಲಗೇಕರ್- ಬಿಜೆಪಿ
15. ಕಿತ್ತೂರು: ಬಾಬಾಸಾಹೇಬ್ ಡಿ. ಪಾಟೀಲ್- ಕಾಂಗ್ರೆಸ್
16. ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ- ಕಾಂಗ್ರೆಸ್
17. ಸವದತ್ತಿ: ವಿಶ್ವಾಸ್ ವಸಂತ್ ವೈದ್ಯ-ಕಾಂಗ್ರೆಸ್
18. ರಾಮದುರ್ಗ: ಅಶೋಕ್ ಎಂ. ಪಟ್ಟಣ್- ಕಾಂಗ್ರೆಸ್
ಬಾಗಲಕೋಟೆ ಜಿಲ್ಲೆ: ಏಳು ಕ್ಷೇತ್ರಗಳು: ಕಾಂಗ್ರೆಸ್-5, ಬಿಜೆಪಿ-2
19. ಮುಧೋಳ: ಆರ್.ಬಿ. ತಿಮ್ಮಾಪುರ-ಕಾಂಗ್ರೆಸ್
20. ತೇರದಾಳ: ಸಿದ್ದು ಸವದಿ- ಬಿಜೆಪಿ
21. ಜಮಖಂಡಿ: ಜಗದೀಶ್ ಗುಡಗಂಟಿ- ಬಿಜೆಪಿ
22. ಬೀಳಗಿ: ಜೆ.ಟಿ. ಪಾಟೀಲ್- ಕಾಂಗ್ರೆಸ್
23. ಬಾದಾಮಿ: ಬಿ.ಬಿ. ಚಿಮ್ಮನಕಟ್ಟಿ-ಕಾಂಗ್ರೆಸ್
24. ಬಾಗಲಕೋಟೆ: ಎಚ್.ವೈ. ಮೇಟಿ- ಕಾಂಗ್ರೆಸ್
25. ಹುನಗುಂದ- ವಿಜಯಾನಂದ ಕಾಶಪ್ಪನವರ್- ಕಾಂಗ್ರೆಸ್
ವಿಜಯಪುರ ಜಿಲ್ಲೆ: 8 ಕ್ಷೇತ್ರಗಳು: ಕಾಂಗ್ರೆಸ್-6, ಬಿಜೆಪಿ-1, ಜೆಡಿಎಸ್-1
26. ಮುದ್ದೇಬಿಹಾಳ- ಅಪ್ಪಾಜಿ ನಾಡಗೌಡ- ಕಾಂಗ್ರೆಸ್
27. ದೇವರಹಿಪ್ಪರಗಿ- ರಾಜುಗೌಡ ಪಾಟೀಲ್- ಜೆಡಿಎಸ್
28. ಬಸವನ ಬಾಗೇವಾಡಿ- ಶಿವಾನಂದ ಪಾಟೀಲ್- ಕಾಂಗ್ರೆಸ್
29. ಬಬಲೇಶ್ವರ- ಎಂ.ಬಿ. ಪಾಟೀಲ್- ಕಾಂಗ್ರೆಸ್
30. ವಿಜಯಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್-ಬಿಜೆಪಿ
31. ನಾಗಠಾಣ- ವಿಠಲ್ ಕಾಕಟಧೋಂದ್- ಕಾಂಗ್ರೆಸ್
32. ಇಂಡಿ- ಯಶ್ವಂತ್ ಗೌಡ ಪಾಟೀಲ್-ಕಾಂಗ್ರೆಸ್
33. ಸಿಂದಗಿ- ಅಶೋಕ್ ಎಂ. ಮನಗೂಳಿ- ಕಾಂಗ್ರೆಸ್
ಯಾದಗಿರಿ ಜಿಲ್ಲೆ: 4 ಕ್ಷೇತ್ರಗಳು: ಕಾಂಗ್ರೆಸ್-3, ಜೆಡಿಎಸ್-1
34. ಶೋರಾಪುರ- ರಾಜಾ ವೆಂಕಟಪ್ಪ ನಾಯಕ್-ಕಾಂಗ್ರೆಸ್
35. ಶಹಾಪುರ- ಶರಣಬಸಪ್ಪ ಗೌಡ- ಕಾಂಗ್ರೆಸ್
36. ಯಾದಗಿರಿ- ಚೆನ್ನಾರೆಡ್ಡಿ ಪಾಟೀಲ್ ತುನ್ನೂರು- ಕಾಂಗ್ರೆಸ್
37. ಗುರುಮಿಠಕಲ್ – ಶರಣ್‌ಗೌಡ- ಜೆಡಿಎಸ್
ಕಲಬುರಗಿ ಜಿಲ್ಲೆ: 9 ಕ್ಷೇತ್ರಗಳು: 7 ಕಾಂಗ್ರೆಸ್, 2 ಬಿಜೆಪಿ
38. ಅಫ್ಜಲ್‌ಪುರ- ಎಂ.ವೈ ಪಾಟೀಲ್- ಕಾಂಗ್ರೆಸ್
39. ಜೇವರ್ಗಿ: ಡಾ. ಅಜಯ್ ಧರ್ಮ ಸಿಂಗ್- ಕಾಂಗ್ರೆಸ್
40. ಚಿತ್ತಾಪುರ- ಪ್ರಿಯಾಂಕ್ ಖರ್ಗೆ- ಕಾಂಗ್ರೆಸ್
41. ಸೇಡಂ- ಡಾ. ಶರಣ್ ಪ್ರಕಾಶ್ ಪಾಟೀಲ್- ಕಾಂಗ್ರೆಸ್
42. ಚಿಂಚೋಳಿ: ಡಾ. ಅವಿನಾಶ್ ಜಾಧವ್- ಬಿಜೆಪಿ
43. ಕಲಬುರಗಿ ಗ್ರಾ. – ಬಸವರಾಜ ಮತ್ತಿಮೋಡ- ಬಿಜೆಪಿ
44. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್- ಕಾಂಗ್ರೆಸ್
45. ಕಲಬುರಗಿ ಉತ್ತರ- ಖನೀಜಾ ಫಾತಿಮಾ- ಕಾಂಗ್ರೆಸ್
46. ಆಳಂದ; ಬಿಆರ್ ಪಾಟೀಲ್-ಕಾಂಗ್ರೆಸ್
ಬೀದರ್ ಜಿಲ್ಲೆ: 6 ಕ್ಷೇತ್ರಗಳು: 3 ಬಿಜೆಪಿ, 3 ಕಾಂಗ್ರೆಸ್
47. ಬಸವಕಲ್ಯಾಣ: ಶರಣು ಸಲಗರ- ಬಿಜೆಪಿ
48. ಹುಮನಾಬಾದ್: ಸಿದ್ದುಪಾಟೀಲ್- ಬಿಜೆಪಿ
49. ಬೀದರ್ ದಕ್ಷಿಣ: ಅಶೋಕ್ ಖೇಣಿ- ಕಾಂಗ್ರೆಸ್
50. ಬೀದರ್- ರಹೀಂ ಖಾನ್- ಕಾಂಗ್ರೆಸ್
51. ಭಾಲ್ಕಿ- ಈಶ್ವರ್ ಖಂಡ್ರೆ- ಕಾಂಗ್ರೆಸ್
52. ಔರಾದ್- ಪ್ರಭು ಚೌಹಾಣ್- ಬಿಜೆಪಿ
ರಾಯಚೂರು ಜಿಲ್ಲೆ: 7 ಕ್ಷೇತ್ರಗಳು: 4 ಕಾಂಗ್ರೆಸ್, 3 ಬಿಜೆಪಿ
53. ರಾಯಚೂರು ಗ್ರಾ.: ಬಸನಗೌಡ ದದ್ದಲ್-ಕಾಂಗ್ರೆಸ್
54. ರಾಯಚೂರು ನಗರ: ಡಾ. ಶಿವರಾಜ್ ಪಾಟೀಲ್- ಬಿಜೆಪಿ
55. ಮಾನ್ವಿ- ಹಂಪಯ್ಯ ನಾಯ್ಕ್- ಕಾಂಗ್ರೆಸ್
56. ದೇವದುರ್ಗ: ಕರೆಮ್ಮ ಜಿ. ನಾಯಕ್-ಬಿಜೆಪಿ
57. ಲಿಂಗಸುಗೂರು: ಮಾನಪ್ಪ ಡಿ. ವಜ್ಜಲ್- ಬಿಜೆಪಿ
58. ಸಿಂಧನೂರು: ಹಂಪನ ಗೌಡ ಬಾದ್ರಾಲಿ- ಕಾಂಗ್ರೆಸ್
59. ಮಸ್ಕಿ: ಬಸವಗೌಡ ತುರುವೀಹಾಳ_ ಕಾಂಗ್ರೆಸ್
ಕೊಪ್ಪಳ ಜಿಲ್ಲೆ: 5 ಕ್ಷೇತ್ರ, 3 ಕಾಂಗ್ರೆಸ್, 1 ಬಿಜೆಪಿ, 1 ಕೆ.ಆರ್‌ಪಿಪಿ
60. ಕುಷ್ಟಗಿ: ದೊಡ್ಡನಗೌಡ ಪಾಟೀಲ್- ಬಿಜೆಪಿ
61. ಕನಕಗಿರಿ: ಶಿವರಾಜ ತಂಗಡಗಿ- ಕಾಂಗ್ರೆಸ್
62. ಗಂಗಾವತಿ: ಜನಾರ್ದನ ರೆಡ್ಡಿ- ಕೆಆರ್‌ಪಿಪಿ
63. ಯಲಬುರ್ಗಾ: ಬಸವರಾಜ ರಾಯರೆಡ್ಡಿ-ಕಾಂಗ್ರೆಸ್
64. ಕೊಪ್ಪಳ: ಕೆ. ರಾಘವೇಂದ್ರ- ಕಾಂಗ್ರೆಸ್
ಗದಗ ಜಿಲ್ಲೆ: 4 ಕ್ಷೇತ್ರ; ಬಿಜೆಪಿ -2, ಕಾಂಗ್ರೆಸ್-2
65. ಶಿರಹಟ್ಟಿ: ಡಾ. ಚಂದ್ರ ಲಮಾಣಿ- ಬಿಜೆಪಿ
66. ಗದಗ: ಎಚ್.ಕೆ. ಪಾಟೀಲ್-ಕಾಂಗ್ರೆಸ್
67. ರೋಣ: ಜಿಎಸ್. ಪಾಟೀಲ್- ಕಾಂಗ್ರೆಸ್
68. ನರಗುಂದ- ಸಿ.ಸಿ. ಪಾಟೀಲ್- ಬಿಜೆಪಿ
ಧಾರವಾಡ ಜಿಲ್ಲೆ: 7 ಕ್ಷೇತ್ರ; 4 ಕಾಂಗ್ರೆಸ್, 3 ಬಿಜೆಪಿ
69. ನವಲಗುಂದ- ಕೋನ ರೆಡ್ಡಿ-ಕಾಂಗ್ರೆಸ್
70. ಕುಂದಗೋಳ:ಎಂ.ಆರ್. ಪಾಟೀಲ್- ಬಿಜೆಪಿ
71. ಧಾರವಾಡ- ವಿನಯ ಕುಲಕರ್ಣಿ- ಕಾಂಗ್ರೆಸ್
72. ಹುಬ್ಬಳ್ಳಿ- ಧಾರವಾಡ ಪೂರ್ವ: ಪ್ರಸಾದ್ ಅಬ್ಬಯ್ಯ- ಕಾಂಗ್ರೆಸ್
73. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ- ಬಿಜೆಪಿ
74. ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್- ಬಿಜೆಪಿ
75. ಕಲಘಟಗಿ- ಸಂತೋಷ್ ಲಾಡ್- ಕಾಂಗ್ರೆಸ್
ಉತ್ತರ ಕನ್ನಡ ಜಿಲ್ಲೆ: 6 ಕ್ಷೇತ್ರಗಳು; 4 ಕಾಂಗ್ರೆಸ್, 2 ಬಿಜೆಪಿ
76. ಹಳಿಯಾಳ: ಆರ್.ವಿ. ದೇಶಪಾಂಡೆ- ಕಾಂಗ್ರೆಸ್
77. ಕಾರವಾರ- ಸತೀಶ್ ಸೈಲ್- ಕಾಂಗ್ರೆಸ್
78, ಕುಮಟಾ: ದಿನಕರ ಶೆಟ್ಟಿ- ಬಿಜೆಪಿ
79. ಭಟ್ಕಳ: ಮಾಂಕಾಳ್ ವೈದ್ಯ- ಕಾಂಗ್ರೆಸ್
80. ಶಿರಸಿ: ಭೀಮಣ್ಣ ನಾಯಕ್- ಕಾಂಗ್ರೆಸ್
81. ಯಲ್ಲಾಪುರ: ಶಿವರಾಮ ಹೆಬ್ಬಾರ್- ಬಿಜೆಪಿ
ಹಾವೇರಿ ಜಿಲ್ಲೆ: 6 ಕ್ಷೇತ್ರಗಳು; 5 ಕಾಂಗ್ರೆಸ್, ಬಿಜೆಪಿ 1
82. ಹಾನಗಲ್: ಶ್ರೀನಿವಾಸ್ ವಿ. ಮಾನೆ- ಕಾಂಗ್ರೆಸ್
83. ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ- ಬಿಜೆಪಿ
84. ಹಾವೇರಿ: ರುದ್ರಪ್ಪ ಲಮಾಣಿ-ಕಾಂಗ್ರೆಸ್
85. ಬ್ಯಾಡಗಿ: ಬಸವರಾಜ ಎನ್. ಶಿವಣ್ಣನರ್- ಕಾಂಗ್ರೆಸ್
86. ಹಿರೇಕೆರೂರ್- ಯು.ಬಿ. ಬಣಕಾರ್- ಕಾಂಗ್ರೆಸ್
87. ರಾಣೆಬೆನ್ನೂರು: ಪ್ರಕಾಶ್ ಕೆ. ಕೋಳಿವಾಡ: ಕಾಂಗ್ರೆಸ್
ವಿಜಯ ನಗರ ಜಿಲ್ಲೆ: 5 ಕ್ಷೇತ್ರ; 2 ಕಾಂಗ್ರೆಸ್, 1 ಬಿಜೆಪಿ, 1 ಜೆಡಿಎಸ್, 1 ಪಕ್ಷೇತರ
88. ಹಡಗಲಿ: ಕೃಷ್ಣ ನಾಯಕ- ಬಿಜೆಪಿ
89. ಹಗರಿ ಬೊಮ್ಮನಹಳ್ಳಿ: ನೇಮಿರಾಜ ನಾಯಕ್- ಜೆಡಿಎಸ್
90. ವಿಜಯನಗರ: ಎಚ್.ಆರ್. ಗವಿಯಪ್ಪ-ಕಾಂಗ್ರೆಸ್
96. ಕೂಡ್ಲಿಗಿ: ಡಾ. ಶ್ರೀನಿವಾಸ್ ಎನ್.ಟಿ- ಕಾಂಗ್ರೆಸ್
104. ಹರಪನಹಳ್ಳಿ: ಲತಾ ಮಲ್ಲಿಕಾರ್ಜುನ – ಪಕ್ಷೇತರ
ಬಳ್ಳಾರಿ ಜಿಲ್ಲೆ: 5 ಕ್ಷೇತ್ರ; ಎಲ್ಲವೂ ಕಾಂಗ್ರೆಸ್
91. ಕಂಪ್ಲಿ: ಜೆ.ಎನ್. ಗಣೇಶ್- ಕಾಂಗ್ರೆಸ್
92. ಸಿರಗುಪ್ಪ: ಎಂ.ಬಿ. ನಾಗರಾಜ್-ಕಾಂಗ್ರೆಸ್
93. ಬಳ್ಳಾರಿ: ಬಿ. ನಾಗೇಂದ್ರ- ಕಾಂಗ್ರೆಸ್
94. ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ- ಕಾಂಗ್ರೆಸ್
95. ಸಂಡೂರು: ವಿ. ತುಕಾರಾಮ್-ಕಾಂಗ್ರೆಸ್
ದಾವಣಗೆರೆ ಜಿಲ್ಲೆ: 6 ಕ್ಷೇತ್ರ; 5 ಕಾಂಗ್ರೆಸ್, 1 ಬಿಜೆಪಿ
97. ಮೊಳಕಾಲ್ಮುರು: ಎನ್.ವೈ. ಗೋಪಾಲಕೃಷ್ಣ- ಕಾಂಗ್ರೆಸ್
98.ಚಳ್ಳಕೆರೆ: ಟಿ.ರಘುಮೂರ್ತಿ- ಕಾಂಗ್ರೆಸ್
99. ಚಿತ್ರದುರ್ಗ: ಕೆ.ಸಿ. ವೀರೇಂದ್ರ- ಕಾಂಗ್ರೆಸ್
100. ಹಿರಿಯೂರು: ಡಿ. ಸುಧಾಕರ್- ಕಾಂಗ್ರೆಸ್
101. ಹೊಸದುರ್ಗ: ಗೋವಿಂದಪ್ಪ ಬಿ.ಜಿ- ಕಾಂಗ್ರೆಸ್
102. ಹೊಳಲ್ಕೆರೆ: ಎಂ.ಚಂದ್ರಪ್ಪ- ಬಿಜೆಪಿ
ದಾವಣಗೆರೆ ಜಿಲ್ಲೆ: 7 ಕ್ಷೇತ್ರ; 6 ಕಾಂಗ್ರೆಸ್, 1 ಬಿಜೆಪಿ
103. ಜಗಳೂರು: ದೇವೇಂದ್ರಪ್ಪ-ಕಾಂಗ್ರೆಸ್
105. ಹರಿಹರ: ಬಿ.ಪಿ. ಹರೀಶ್- ಬಿಜೆಪಿ
106. ದಾವಣಗೆರೆ ಉತ್ತರ: ಎಸ್.ಎಸ್. ಮಲ್ಲಿಕಾರ್ಜುನ್-ಕಾಂಗ್ರೆಸ್
10.7: ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್
108: ಮಾಯಗೊಂಡ: ಕೆ.ಎಸ್. ಬಸವರಾಜು- ಕಾಂಗ್ರೆಸ್
109. ಚನ್ನಗಿರಿ: ಬಸವರಾಜ್ ವಿ.ವಿ. ಶಿವಗಂಗಾ- ಕಾಂಗ್ರೆಸ್
110. ಹೊನ್ನಾಳಿ: ಡಿ.ಜಿ ಶಾಂತನಗೌಡರ್- ಕಾಂಗ್ರೆಸ್
ಶಿವಮೊಗ್ಗ ಜಿಲ್ಲೆ: 7 ಕ್ಷೇತ್ರಗಳು; 3 ಬಿಜೆಪಿ, 3 ಕಾಂಗ್ರೆಸ್, 1 ಜೆಡಿಎಸ್
111. ಶಿವಮೊಗ್ಗ ಗ್ರಾಮಾಂತರ: ಶಾರದಾ ಪೂರ್ಯ ನಾಯ್ಕ್- ಜೆಡಿಎಸ್
112. ಭದ್ರಾವತಿ: ಸಂಗಮೇಶ್ವರ್ ಬಿ.ಕೆ. -ಕಾಂಗ್ರೆಸ್
113: ಶಿವಮೊಗ್ಗ: ಚನ್ನಬಸಪ್ಪ- ಬಿಜೆಪಿ
114. ತೀರ್ಥಹಳ್ಳಿ- ಆರಗ ಜ್ಞಾನೇಂದ್ರ- ಬಿಜೆಪಿ
115. ಶಿಕಾರಿಪುರ: ಬಿವೈ ವಿಜಯೇಂದ್ರ- ಬಿಜೆಪಿ
116. ಸೊರಬ: ಮಧು ಬಂಗಾರಪ್ಪ- ಕಾಂಗ್ರೆಸ್
117. ಸಾಗರ: ಗೋಪಾಲಕೃಷ್ಣ ಬೇಳೂರು- ಕಾಂಗ್ರೆಸ್
ಉಡುಪಿ ಜಿಲ್ಲೆ: 5 ಕ್ಷೇತ್ರಗಳು; ಎಲ್ಲ ಕಡೆ ಬಿಜೆಪಿ ಗೆಲುವು
118. ಬೈಂದೂರು: ಗುರುರಾಜ್ ಗಂಟಿಹೊಳೆ- ಬಿಜೆಪಿ
119. ಕುಂದಾಪುರ: ಕಿರಣ್ ಕೊಡ್ಗಿ- ಬಿಜೆಪಿ
120. ಉಡುಪಿ: ಯಶ್‌ಪಾಲ್ ಸುವರ್ಣ-ಬಿಜೆಪಿ
121. ಕಾಪು: ಗುರ್ಮೆ ಸುರೇಶ್ ಶೆಟ್ಟಿ- ಬಿಜೆಪಿ
122. ಕಾರ್ಕಳ: ವಿ. ಸುನಿಲ್ ಕುಮಾರ್- ಬಿಜೆಪಿ
ಚಿಕ್ಕಮಗಳೂರು: 5 ಕ್ಷೇತ್ರ: ಎಲ್ಲವೂ ಕಾಂಗ್ರೆಸ್
123. ಶೃಂಗೇರಿ: ರಾಜೇಗೌಡ- ಕಾಂಗ್ರೆಸ್
124. ಮೂಡಿಗೆರೆ: ನಯನಾ ಮೋಟಮ್ಮ- ಕಾಂಗ್ರೆಸ್
125. ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ- ಕಾಂಗ್ರೆಸ್
126. ತರೀಕೆರೆ: ಜಿ.ಎಚ್. ಶ್ರೀನಿವಾಸ್- ಕಾಂಗ್ರೆಸ್
127. ಕಡೂರು: ಆನಂದ್ ಕೆ.ಎಸ್.- ಕಾಂಗ್ರೆಸ್
ತುಮಕೂರು ಜಿಲ್ಲೆ: 11 ಕ್ಷೇತ್ರ, ಕಾಂಗ್ರೆಸ್-7, ಜೆಡಿಎಸ್-2, ಬಿಜೆಪಿ-2
128. ಚಿಕ್ಕನಾಯಕನಹಳ್ಳಿ: ಸಿ.ವಿ. ಸುರೇಶ್ ಬಾಬು- ಜೆಡಿಎಸ್
129. ತಿಪಟೂರು: ಕೆ. ಷಡಕ್ಷರಿ- ಕಾಂಗ್ರೆಸ್
130. ತುರುವೇಕೆರೆ: ಎಂ.ಟಿ. ಕೃಷ್ಣಪ್ಪ- ಜೆಡಿಎಸ್
131. ಕುಣಿಗಲ್: ಡಾ. ಎಚ್.ಡಿ. ರಂಗನಾಥ್- ಕಾಂಗ್ರೆಸ್
132. ತುಮಕೂರು: ಜ್ಯೋತಿ ಗಣೇಶ್- ಬಿಜೆಪಿ
133. ತುಮಕೂರು ಗ್ರಾಮೀಣ: ಸುರೇಶ್ ಗೌಡ ಬಿ- ಬಿಜೆಪಿ
134. ಕೊರಟಗೆರೆ: ಡಾ. ಜಿ. ಪರಮೇಶ್ವರ್- ಕಾಂಗ್ರೆಸ್
135. ಗುಬ್ಬಿ: ಎಸ್.ಆರ್. ಶ್ರೀನಿವಾಸ್- ಕಾಂಗ್ರೆಸ್
136. ಸಿರಾ: ಟಿ.ಬಿ. ಜಯಚಂದ್ರ- ಕಾಂಗ್ರೆಸ್
137. ಪಾವಗಡ: ಎಚ್.ವಿ. ವೆಂಕಟೇಶ್ -ಕಾಂಗ್ರೆಸ್
138. ಮಧುಗಿರಿ- ಕೆ.ಎನ್. ರಾಜಣ್ಣ- ಕಾಂಗ್ರೆಸ್
ಚಿಕ್ಕಬಳ್ಳಾಪುರ: 5 ಕ್ಷೇತ್ರ; ಕಾಂಗ್ರೆಸ್-3, ಜೆಡಿಎಸ್-1, ಪಕ್ಷೇತರ-1
139. ಗೌರಿಬಿದನೂರು- ಪುಟ್ವಸ್ವಾಮಿ ಗೌಡ- ಪಕ್ಷೇತರ
140. ಬಾಗೇಪಲ್ಲಿ: ಎಸ್.ಎನ್. ಸುಬ್ಬಾರೆಡ್ಡಿ- ಕಾಂಗ್ರೆಸ್
141. ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್- ಕಾಂಗ್ರೆಸ್
142. ಶಿಡ್ಲಘಟ್ಟ- ರವಿಕುಮಾರ್-ಜೆಡಿಎಸ್
143. ಚಿಂತಾಮಣಿ: ಡಾ.ಎಂ.ಸಿ. ಸುಧಾಕರ್- ಕಾಂಗ್ರೆಸ್
ಕೋಲಾರ ಜಿಲ್ಲೆ: 6 ಕ್ಷೇತ್ರಗಳು; ಕಾಂಗ್ರೆಸ್-4, ಜೆಡಿಎಸ್-2
144. ಶ್ರೀನಿವಾಸಪುರ- ವೆಂಕಟಶಿವಾ ರೆಡ್ಡಿ- ಜೆಡಿಎಸ್
145. ಮುಳಬಾಗಿಲು- ಸಮೃದ್ಧಿ ಮಂಜುನಾಥ್-ಜೆಡಿಎಸ್
146. ಕೆಜಿಎಫ್- ರೂಪಕಲಾ ಎಂ- ಕಾಂಗ್ರೆಸ್
147. ಬಂಗಾರಪೇಟೆ: ಎಸ್.ಎನ್. ನಾರಾಯಣ ಸ್ವಾಮಿ- ಕಾಂಗ್ರೆಸ್
148. ಕೋಲಾರ: ಕೊತ್ತೂರು ಮಂಜುನಾಥ್- ಕಾಂಗ್ರೆಸ್
149. ಮಾಲೂರು: ಕೆ.ವೈ. ನಂಜೇಗೌಡ- ಕಾಂಗ್ರೆಸ್
ಗ್ರೇಟರ್ ಬೆಂಗಳೂರು: 32 ಕ್ಷೇತ್ರ: ಬಿಜೆಪಿ-17, ಕಾಂಗ್ರೆಸ್- 15
150. ಯಲಹಂಕ: ಎಸ್.ಆರ್. ವಿಶ್ವನಾಥ್- ಬಿಜೆಪಿ
151. ಕೆ.ಆರ್. ಪುರ: ಬೈರತಿ ಬಸವರಾಜ್- ಬಿಜೆಪಿ
152. ಬ್ಯಾಟರಾಯನಪುರ: ಕೃಷ್ಣ ಭೈರೇಗೌಡ- ಕಾಂಗ್ರೆಸ್
153. ಯಶ್ವಂತಪುರ: ಎಸ್.ಟಿ. ಸೋಮಶೇಖರ್- ಬಿಜೆಪಿ
154. ರಾಜರಾಜೇಶ್ವರಿ ನಗರ: ಮುನಿರತ್ನ- ಬಿಜೆಪಿ
155. ದಾಸರಹಳ್ಳಿ: ಎಸ್. ಮುನಿರಾಜು- ಬಿಜೆಪಿ
156. ಮಹಾಲಕ್ಷ್ಮಿ ಲೇಔಟ್- ಎಚ್. ಗೋಪಾಲಯ್ಯ- ಬಿಜೆಪಿ
157.. ಮಲ್ಲೇಶ್ವರಂ: ಡಾ.ಸಿ.ಎನ್ ಅಶ್ವಥ್ ನಾರಾಯಣ- ಬಿಜೆಪಿ
158. ಹೆಬ್ಬಾಳ: ಸುರೇಶ್ ಬಿ.ಎಸ್.- ಕಾಂಗ್ರೆಸ್
159. ಪುಲಿಕೇಶಿ ನಗರ: ಎ.ಸಿ. ಶ್ರೀನಿವಾಸ್- ಕಾಂಗ್ರೆಸ್
160. ಸರ್ವಜ್ಞ ನಗರ: ಕೆ.ಜೆ. ಜಾರ್ಜ್-ಕಾಂಗ್ರೆಸ್
161. ಸಿ.ವಿ. ರಾಮನ್ ನಗರ: ಆರ್. ರಘು- ಬಿಜೆಪಿ
162. ಶಿವಾಜಿ ನಗರ: ರಿಜ್ವಾನ್ ಅರ್ಷದ್- ಕಾಂಗ್ರೆಸ್
163. ಶಾಂತಿನಗರ: ಎನ್.ಎ ಹ್ಯಾರಿಸ್- ಕಾಂಗ್ರೆಸ್
164. ಗಾಂಧಿ ನಗರ: ದಿನೇಶ್ ಗುಂಡೂರಾವ್-ಕಾಂಗ್ರೆಸ್
165. ರಾಜಾಜಿ ನಗರ: ಸುರೇಶ್ ಕುಮಾರ್- ಬಿಜೆಪಿ
166. ಗೋವಿಂದರಾಜ ನಗರ: ಪ್ರಿಯಾಕೃಷ್ಣ- ಕಾಂಗ್ರೆಸ್
167. ವಿಜಯನಗರ: ಎಂ. ಕೃಷ್ಣಪ್ಪ- ಕಾಂಗ್ರೆಸ್
168. ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್- ಕಾಂಗ್ರೆಸ್
169. ಚಿಕ್ಕಪೇಟೆ: ಉದಯ ಗರುಡಾಚಾರ್- ಬಿಜೆಪಿ
170. ಬಸವನಗುಡಿ: ರವಿ ಸುಬ್ರಹ್ಮಣ್ಯ೦- ಬಿಜೆಪಿ
171. ಪದ್ಮನಾಭ ನಗರ: ಆರ್. ಅಶೋಕ್- ಬಿಜೆಪಿ
172. ಬಿಟಿಎಂ ಲೇಔಟ್: ರಾಮಲಿಂಗಾರೆಡ್ಡಿ- ಕಾಂಗ್ರೆಸ್
173. ಜಯನಗರ: ಎಂ.ಕೆ. ರಾಮಮೂರ್ತಿ-ಬಿಜೆಪಿ
174. ಮಹದೇವಪುರ: ಮಂಜುಳಾ ಅರವಿಂದ ಲಿಂಬಾವಳಿ- ಬಿಜೆಪಿ
175. ಬೊಮ್ನಳ್ಳಿ: ಸತೀಶ್ ರೆಡ್ಡಿ- ಬಿಜೆಪಿ
176. ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ- ಬಿಜೆಪಿ
177. ಆನೇಕಲ್: ಬಿ. ಶಿವಣ್ಣ- ಕಾಂಗ್ರೆಸ್
178. ಹೊಸಕೋಟೆ: ಶರತ್ ಬಚ್ಚೇಗೌಡ- ಕಾಂಗ್ರೆಸ್
179. ದೇವನಹಳ್ಳಿ: ಕೆ.ಎಚ್. ಮುನಿಯಪ್ಪ- ಕಾಂಗ್ರೆಸ್
180. ದೊಡ್ಡಬಳ್ಳಾಪುರ: ಧೀರಜ್ ಮುನಿರಾಜು- ಬಿಜೆಪಿ
181. ನೆಲಮಂಗಲ: ಶ್ರೀನಿವಾಸಯ್ಯ- ಕಾಂಗ್ರೆಸ್
ರಾಮ ನಗರ ಜಿಲ್ಲೆ: 4 ಕ್ಷೇತ್ರಗಳು; ಕಾಂಗ್ರೆಸ್ 3, ಜೆಡಿಎಸ್ 1
182. ಮಾಗಡಿ: ಎಚ್.ಸಿ. ಬಾಲಕೃಷ್ಣ- ಕಾಂಗ್ರೆಸ್
183. ರಾಮನಗರ: ಇಕ್ಬಾಲ್ ಹುಸೇನ್ ಎಚ್.ಎ- ಕಾಂಗ್ರೆಸ್
184. ಕನಕಪುರ: ಡಿ.ಕೆ. ಶಿವಕುಮಾರ್- ಕಾಂಗ್ರೆಸ್
185. ಚನ್ನಪಟ್ಟಣ ಎಚ್.ಡಿ. ಕುಮಾರಸ್ವಾಮಿ- ಜೆಡಿಎಸ್
ಮಂಡ್ಯ ಜಿಲ್ಲೆ: 7 ಕ್ಷೇತ್ರಗಳು; 5 ಕಾಂಗ್ರೆಸ್, 1 ಜೆಡಿಎಸ್, 1 ಪಕ್ಷೇತರ
186. ಮಳವಳ್ಳಿ: ಪಿ.ಎಂ. ನರೇಂದ್ರ ಸ್ವಾಮಿ- ಕಾಂಗ್ರೆಸ್
187. ಮದ್ದೂರು: ಕೆ.ಎಂ ಉದಯ್- ಕಾಂಗ್ರೆಸ್
188. ಮೇಲುಕೋಟೆ: ದರ್ಶನ್ ಪುಟ್ಟಣಯ್ಯ- ಸರ್ವೋದಯ-ಪಕ್ಷೇತರ
189. ಮಂಡ್ಯ: ಪಿ. ರವಿ ಕುಮಾರ್- ಕಾಂಗ್ರೆಸ್
190. ಶ್ರೀರಂಗಪಟ್ಟಣ: ರಮೇಶ್ ಬಂಡಿಸಿದ್ದೇಗೌಡ- ಕಾಂಗ್ರೆಸ್
191. ನಾಗಮಂಗಲ: ಚೆಲುವರಾಯಸ್ವಾಮಿ- ಕಾಂಗ್ರೆಸ್
192. ಕೆ.ಆರ್. ಪೇಟೆ: ಎಚ್.ಡಿ. ಮಂಜುನಾಥ್- ಜೆಡಿಎಸ್
ಹಾಸನ ಜಿಲ್ಲೆ: 7 ಕ್ಷೇತ್ರಗಳು; ಜೆಡಿಎಸ್-5, ಬಿಜೆಪಿ-2, ಕಾಂಗ್ರೆಸ್-1
193. ಶ್ರವಣಬೆಳಗೊಳ: ಸಿ.ಎನ್. ಬಾಲಕೃಷ್ಣ- ಜೆಡಿಎಸ್
194. ಅರಸೀಕೆರೆ: ಕೆ.ಎಂ. ಶಿವಲಿಂಗೇಗೌಡ- ಕಾಂಗ್ರೆಸ್
195. ಬೇಲೂರು: ಹುಲ್ಲಳ್ಳಿ ಕೆ. ಸುರೇಶ್- ಬಿಜೆಪಿ
196. ಹಾಸನ: ಸ್ವರೂಪ್ ಪ್ರಕಾಶ್- ಜೆಡಿಎಸ್
197. ಹೊಳೆನರಸೀಪುರ: ಎಚ್.ಡಿ. ರೇವಣ್ಣ- ಜೆಡಿಎಸ್
198. ಅರಕಲಗೂಡು: ಎ. ಮಂಜು- ಜೆಡಿಎಸ್
199. ಸಕಲೇಶಪುರ- ಸಿಮೆಂಟ್ ಮಂಜು- ಬಿಜೆಪಿ
ದಕ್ಷಿಣ ಕನ್ನಡ ಜಿಲ್ಲೆ: 8 ಕ್ಷೇತ್ರಗಳು; ಬಿಜೆಪಿ-6, ಕಾಂಗ್ರೆಸ್ 2
200. ಬೆಳ್ತಂಗಡಿ: ಹರೀಶ್ ಪೂಂಜಾ- ಬಿಜೆಪಿ
201. ಮೂಡುಬಿದಿರೆ: ಉಮಾನಾಥ ಕೋಟ್ಯಾನ್- ಬಿಜೆಪಿ
202. ಮಂಗಳೂರು ನಗರ ಉತ್ತರ- ವೈ ಭರತ್ ಶೆಟ್ಟಿ- ಬಿಜೆಪಿ
203. ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್- ಬಿಜೆಪಿ
204. ಮಂಗಳೂರು: ಯು.ಟಿ. ಖಾದರ್- ಕಾಂಗ್ರೆಸ್
205. ಬಂಟ್ವಾಳ: ರಾಜೇಶ್ ನಾಯ್ಕ್- ಬಿಜೆಪಿ
206. ಪುತ್ತೂರು: ಅಶೋಕ್ ಕುಮಾರ್ ರೈ- ಕಾಂಗ್ರೆಸ್
207. ಸುಳ್ಯ: ಭಾಗೀರಥಿ ಮುರುಳ್ಯ- ಬಿಜೆಪಿ
ಮಡಿಕೇರಿ ಜಿಲ್ಲೆ: 2 ಕ್ಷೇತ್ರಗಳು: ಎರಡೂ ಕಾಂಗ್ರೆಸ್
208. ಮಡಿಕೇರಿ: ಡಾ. ಮಂಥರ್ ಗೌಡ- ಕಾಂಗ್ರೆಸ್
209. ವಿರಾಜಪೇಟೆ: ಎ.ಎಸ್. ಪೊನ್ನಣ್ಣ- ಕಾಂಗ್ರೆಸ್
ಮೈಸೂರು ಜಿಲ್ಲೆ: 11 ಕ್ಷೇತ್ರಗಳು: 8 ಕಾಂಗ್ರೆಸ್, 2 ಜೆಡಿಎಸ್, 1 ಬಿಜೆಪಿ
210. ಪಿರಿಯಾಪಟ್ಟಣ: ಕೆ.ವೆಂಕಟೇಶ್ -ಕಾಂಗ್ರೆಸ್
211. ಕೆ.ಆರ್. ನಗರ: ಡಿ. ರವಿಶಂಕರ್- ಕಾಂಗ್ರೆಸ್
212. ಹುಣಸೂರು: ಹರೀಶ್ ಗೌಡ- ಜೆಡಿಎಸ್
213. ಎಚ್.ಡಿ. ಕೋಟೆ: ಅನಿಲ್ ಕುಮಾರ್- ಕಾಂಗ್ರೆಸ್
214. ನಂಜನಗೂಡು: ದರ್ಶನ್ ಧ್ರುವನಾರಾಯಣ – ಕಾಂಗ್ರೆಸ್
215. ಚಾಮುಂಡೇಶ್ವರಿ: ಜಿ.ಟಿ. ದೇವೇಗೌಡ- ಜೆಡಿಎಸ್
216. ಕೃಷ್ಣರಾಜ: ಟಿ.ಎಸ್. ಶ್ರೀವತ್ಸ- ಬಿಜೆಪಿ
217. ಚಾಮರಾಜ: ಕೆ. ಹರೀಶ್ ಗೌಡ- ಕಾಂಗ್ರೆಸ್
218. ನರಸಿಂಹ ರಾಜ: ತನ್ವೀರ್ ಸೇಠ್- ಕಾಂಗ್ರೆಸ್
219. ವರುಣ: ಸಿದ್ದರಾಮಯ್ಯ- ಕಾಂಗ್ರೆಸ್
220. ಟಿ. ನರಸೀಪುರ: ಎಚ್.ಸಿ. ಮಹದೇವಪ್ಪ- ಕಾಂಗ್ರೆಸ್
ಚಾಮರಾಜನಗರ ಜಿಲ್ಲೆ: 5 ಸ್ಥಾನ: ಕಾಂಗ್ರೆಸ್-3, ಜೆಡಿಎಸ್-1
221. ಹನೂರು: ಮಂಜುನಾಥ್- ಜೆಡಿಎಸ್
222. ಕೊಳ್ಳೇಗಾಲ: ಎ.ಆರ್. ಕೃಷ್ಣಮೂರ್ತಿ- ಕಾಂಗ್ರೆಸ್
223. ಚಾಮರಾಜನಗರ: ಸಿ. ಪುಟ್ಟರಂಗ ಶೆಟ್ಟಿ-ಕಾಂಗ್ರೆಸ್
224. ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್- ಕಾಂಗ್ರೆಸ್
ನೋಟಿಸ್ ಬೋರ್ಡ
NEP 2020: ನಾಳೆ ಜೈನ್ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾಗೃತಿಗಾಗಿ ವಿಚಾರಗೋಷ್ಠಿ
NEP 2020: ಬೆಂಗಳೂರಿನ ಜಯನಗರದ ಜೈನ್ ಯನಿವರ್ಸಿಟಿ ಕ್ಯಾಂಪಸ್‌ನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಾಗೃತಿ ಮೂಡಿಸಲು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಬೆಂಗಳೂರು ದಕ್ಷಿಣ ವತಿಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 (NEP 2020) ಜಾರಿ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 28ರಂದು ಸಂಜೆ 5 ಗಂಟೆಗೆ ಜಯನಗರ 9ನೇ ಬ್ಲಾಕ್‌ನ ಜೈನ್ ಯನಿವರ್ಸಿಟಿ ಕ್ಯಾಂಪಸ್‌ನಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಿಕಟಪೂರ್ವ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ವಿಚಾರಗೋಷ್ಠಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9945499923, 9986261639 ಸಂಪರ್ಕಿಸಬಹುದು.
ಇದನ್ನೂ ಓದಿ | SBI SO Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಯಾದಗಿರಿ
Yadgiri News: ಯಾದಗಿರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ
Yadgiri News: ಯಾದಗಿರಿ ನಗರದ ಲುಂಬಿನಿ ವನದಲ್ಲಿ ಬುಧವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಜರುಗಿತು.
ಯಾದಗಿರಿ: ದೇಶ ಸುತ್ತುವುದರಿಂದ ಕೋಶ ಓದುವುದರಿಂದ ನಮ್ಮ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಹೆಚ್ಚಾಗಿ ದೇಹ, ಮನಸ್ಸುಗಳಲ್ಲಿ ಚೈತನ್ಯ ತುಂಬುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕಲಾನಿಕೇತನ ಟ್ರಸ್ಟ್ ವತಿಯಿಂದ ನಗರದ ಲುಂಬಿನಿ ವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಗಿಡನೆಟ್ಟು ನೀರೆರೆದು, ಜಿಲ್ಲೆಯ ಪ್ರವಾಸಿ ತಾಣಗಳ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ದೇಶದ ಆರ್ಥಿಕತೆ ಸದೃಢಗೊಳಿಸುವಲ್ಲಿ ಪ್ರವಾಸೋದ್ಯಮ ಸಹಕಾರಿಯಾಗಿದೆ. ಪ್ರವಾಸಿ ತಾಣಗಳನ್ನು ನೋಡುವುದರಿಂದ ಹಲವು ಪ್ರಯೋಜನಗಳಿವೆ. ಮಾನಸಿಕವಾಗಿ ನಾವು ನೆಮ್ಮದಿಯಿಂದ ಇದ್ದಾಗ ದೈಹಿಕವಾಗಿ ಸದೃಢರಾಗುತ್ತೇವೆ ಎಂದರು.
ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಪಾಠದ ಜತೆ ಮುಂದಿನ ಜೀವನದ ಕನಸು ಕಾಣಬೇಕು. ಆ ಕನಸು ನಿಮ್ಮ ನಿದ್ದೆಗೆಡಿಸುವಂತೆ ಇರಬೇಕು. ಅಂದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇತಿಹಾಸ ತಜ್ಞ ಹಾಗೂ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ಇದೇ ವೇಳೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದನ್ನೂ ಓದಿ: Viral News: ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ರೂ. ತಿಂದು ಹಾಕಿದ ಗೆದ್ದಲು! ಮುಂದೇನು?
ಈ ಸಂದರ್ಭದಲ್ಲಿ ಬಾಲಕಾರ್ಮಿಕ ನಿರ್ಮೂಲನೆಯ ಯೋಜನೆ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಕಲಾನಿಕೇತನ ಟ್ರಸ್ಟ್‌ನ ಬಸವರಾಜ ಸಿನ್ನೂರ, ಪೊಲೀಸ್ ಅಧಿಕಾರಿ ವೆಂಕಟರೆಡ್ಡಿ ಎಸ್, ಪ್ರವಾಸೋದ್ಯಮ ಇಲಾಖೆಯ ಪರಮೇಶ್ವರ , ಹಿರಿಯ ಮುಖಂಡರಾದ ಶಾಂತಗೌಡ ಪಾಟೀಲ, ಲಿಂಗನಗೌಡ, ಗುರುಪ್ರಸಾದ್ ವೈದ್ಯ, ಸಂಗೀತಗಾರರಾದ ಮಲ್ಲಿಕಾರ್ಜುನ ಮತ್ತು ಮಲ್ಲಯ್ಯ ಶಹಾಪುರ ಸೇರಿದಂತೆ ವಿದ್ಯಾರ್ಥಿಗಳು, ಲುಂಬಿನಿ ವನದ ಸಿಬ್ಬಂದಿ ಉಪಸ್ಥಿತರಿದ್ದರು.
ಕರ್ನಾಟಕ
CM Siddaramaiah : ಅಕ್ಕಿ ಬೇಕೋ, ಹಣ ಬೇಕೋ?; ಸಿದ್ದರಾಮಯ್ಯ ಕೈಲಿ ತಗಲಾಕ್ಕೊಂಡು ಡಿಸಿ ಕಕ್ಕಾಬಿಕ್ಕಿ!
CM Siddaramaiah : ಜನರಿಗೆ ಹಣ ಬೇಕೋ ಅಕ್ಕಿ ಬೇಕೋ ಎಂಬ ಪ್ರಶ್ನೆ ಕೇಳಿ ಅಧಿಕಾರಿಗಳನ್ನು ಕಕ್ಕಾಬಿಕ್ಕಿ ಮಾಡಿದರು ಸಿದ್ದರಾಮಯ್ಯ. ಜತೆಗೆ ಅಧಿಕಾರಿಗಳನ್ನು ಚೆನ್ನಾಗಿ ಬೆಂಡೆತ್ತಿದರು.
ಚಾಮರಾಜನಗರ: ಜನರಿಗೆ ಅಕ್ಕಿ ಬೇಕಂತಾ? ಹಣ ಬೇಕಂತಾ? ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪ್ರಶ್ನೆಗೆ ಉತ್ತರ ನೀಡುವಾಗ ಚಾಮರಾಜನಗರ ಜಿಲ್ಲಾಧಿಕಾರಿ (Chamarajanagara DC) ಶಿಲ್ಪಾ ನಾಗ್ (Shilpa Nag) ಅವರು ಸಿಕ್ಕಾಕಿಕೊಂಡರು. ಈ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರವೇ ಬೇರೆ, ಆಹಾರ ಇಲಾಖೆ ಉಪ ನಿರ್ದೇಶಕರ (Deputy director of Food department) ಉತ್ತರವೇ ಬೇರೆ! ಆದರೆ, ಇದನ್ನು ಸಿದ್ದರಾಮಯ್ಯ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳದೆ ಮುಂದೆ ಹೋದರು.
ಬುಧವಾರ ಚಾಮರಾಜ ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಹಂತದಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಾ ಚುರುಕು ಮುಟ್ಟಿಸಿದರು ಸಿದ್ದರಾಮಯ್ಯ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರಿಗೆ ತಪ್ಪು ಮಾಹಿತಿ, ಅರೆಬರೆ ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.
ಜನ ಅಕ್ಕಿ ಬೇಕು ಅಂತಿದ್ದಾರೋ ಹಣ ಬೇಕು ಅಂತಿದ್ದಾರೋ?
ಅನ್ನ ಭಾಗ್ಯ ಯೋಜನೆಯಡಿ ಜನ ಅಕ್ಕಿ ಬೇಕು ಅಂತಿದ್ದಾರೋ ಹಣ ಬೇಕು ಅಂತಿದ್ದಾರೋ? (Anna Bhagya Scheme) ಎಂಬ ಪ್ರಶ್ನೆ ಕೇಳಿ ನಿಮ್ಮ ಅಭಿಪ್ರಾಯ ಹೇಳಿ ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಡಿಸಿ ಶಿಲ್ಪಾ ನಾಗ್ ಅವರು ಹಣ ನೀಡುವುದೇ ಒಳ್ಳೆಯದ್ದು ಅಂತ ಕೇಳುತ್ತಿದ್ದಾರೆ ಎಂದರು. ನಾವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೇಳುವಾಗ ಈ ಅಭಿಪ್ರಾಯ ಬಂದಿದೆ ಎಂದರು.
ಆದರೆ, ಆಹಾರ ಇಲಾಖೆ ಉಪ ನಿರ್ದೇಶಕರ ಉತ್ತರವೇ ಬೇರೆ. ʻʻತಾಲೂಕುವಾರು ಅನೇಕ ಕಡೆಗಳಲ್ಲಿ ಫಲಾನುಭವಿಗಳನ್ನು ಭೇಟಿ ಮಾಡಿದ್ದೇನೆ. 590 ಜನ ಭೇಟಿ ಮಾಡಿದ್ದೇನೆ. ಅದರಲ್ಲಿ 19 ಜನ ಮಾತ್ರ ಹಣ ಬೇಕು ಅಂತ ಕೇಳಿದ್ದಾರೆ. ಉಳಿದವರೆಲ್ಲ ಅಕ್ಕಿ ಬೇಕು ಅಂದಿದ್ದಾರೆʼʼ ಎಂದು ಸಮೀಕ್ಷೆಯ ಮಾಹಿತಿಯನ್ನು ನೀಡಿದರು.
ಅಂಕಿ ಅಂಶ ಕೇಳಿ ಕಕ್ಕಾಬಿಕ್ಕಿಯಾದ ಡಿಸಿ ಅವರು, ತಮ್ಮದೇ ಹೇಳಿಕೆಯಿಂದ ಉಲ್ಟಾ ಹೊಡೆದರು. ಸಮೀಕ್ಷೆ ಸರಿ ಇರಬಹುದು. ನಾವು ಜನರಲ್ ಆಗಿ ಪ್ರಶ್ನೆ ಕೇಳಿದ್ದೇವೆ ಎಂದರು.
ಆಹಾರ ಇಲಾಖೆ ಉಪನಿರ್ದೇಶಕರಿಗೆ ಸಿಎಂ ತರಾಟೆ
ಅನ್ನಭಾಗ್ಯದ ಅಕ್ಕಿಗೆ ಹಣ ನೀಡುವ ಯೋಜನೆಯ ಲಾಭವನ್ನು ಫಲಾನುಭವಿಗಳಿಗೆ ತಲುಪಿಸದೆ ಇರುವುದಕ್ಕೆ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ʻʻಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. ಸಮನ್ವಯತೆ ಇರದಿದ್ದರೆ ತೊಂದರೆಯಾಗುತ್ತದೆ. ನಾಲ್ಕು ಗ್ಯಾರಂಟಿ ಜಾರಿ ಮಾಡಲಾಗಿದೆ. ಮತ್ತೊಂದು ಗ್ಯಾರಂಟಿ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ. ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕುʼʼ ಎಂದು ಹೇಳಿದ ಅವರು, ʻʻಪಡಿತರ ಚೀಟಿ ಇರುವ ಎಲ್ಲಾ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ತಲುಪಿದೆಯಾʼʼ ಎಂದು ಕೇಳಿದರು.
ʻʻಇನ್ನು ಒಂದು ಲಕ್ಷ ಫಲಾನುಭವಿಗಳಿಗೆ ತಲುಪಬೇಕು. ಬ್ಯಾಂಕ್ ಖಾತೆ ಸಮಸ್ಯೆಯಿಂದ ತಲುಪಿಲ್ಲʼʼ ಎಂದು ಉತ್ತರ ಕೊಟ್ಟರು ಅಧಿಕಾರಿ.
ಆಗ ಸಿದ್ದರಾಮಯ್ಯ ಅವರು, ʻʻಮೂರು ತಿಂಗಳು ಬೇಕಾ ನಿಮಗೆʼʼ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ʻʻಇದು ಆಗಸ್ಟ್ ತಿಂಗಳ ವರೆಗಿನ ಮಾಹಿತಿʼʼ ಎಂದು ಅಧಿಕಾರಿಯಿಂದ ಉತ್ತರ. ನನಗೆ ಅಗಸ್ಟ್ ಮಾಹಿತಿ ಯಾಕೆ ಕೊಟ್ಟೆ ಎಂದು ಗದರಿದರು ಸಿಎಂ ಸಿದ್ದರಾಮಯ್ಯ.
ಅಟ್ರಾಸಿಟಿ ಕೇಸ್:ಚಾಮರಾಜನಗರದಲ್ಲಿ ಶಿಕ್ಷೆ ಶೂನ್ಯ!
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಚಾಮರಾಜನಗರದಲ್ಲಿ ಶಿಕ್ಷೆ ಪ್ರಮಾಣ ಶೂನ್ಯ ಎಂಬ ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ ಅಚ್ಚರಿಪಟ್ಟರು. ಮಾತ್ರವಲ್ಲ, ಎಸ್ಪಿ ಪದ್ಮಿನಿ ಸಾಹುಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ʻʻಪ್ರತಿ ವರ್ಷ 20- 25 ಕೇಸ್ ದಾಖಲಾಗುತ್ತಿದೆ. ಮೂರು ವರ್ಷಗಳಿಂದ ಒಂದೇ ಒಂದು ಕೇಸ್‌ಗೆ ಶಿಕ್ಷೆ ಆಗಿಲ್ಲ. 5 ಕೇಸ್ ವಜಾ ಆಗಿವೆʼʼ ಎಂದು ಎಸ್‌ಪಿ ವಿವರಿಸಿದರು.
ಇದನ್ನೂ ಓದಿ : CM Siddaramaiah : ಆಕ್ಸಿಜನ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಕಾಯಂ ಉದ್ಯೋಗ; ಸಿಎಂ ಭರವಸೆ
ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ʻʻʻಅಲ್ಲಮ್ಮ, ಶಿಕ್ಷೆ ಆಗಲ್ಲ ಅಂದ್ರೆ ಭಯ ಹೇಗೆ ಬರುತ್ತೆ ? ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕುʼʼ ಎಂದರು. ಆಗ ಪದ್ಮಿನಿ ಸಾಹೋ ಅವರು ಏನೋ ಹೇಳಲು ಹೋದಾಗ, ʻʻನೀನು ಹೊಸಬಳು ಇರಬಹುದು. ಆದರೆ, ಸುಮ್ಮನೆ ವಾದ ಮಾಡಬೇಡʼʼ ಎಂದು ಸೂಚನೆ ನೀಡಿದರು. ಪರಿಶೀಲನೆ ನಡೆಸುವಂತೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯಗೆ ಸೂಚನೆ ನೀಡಿದರು.
ಕೊಪ್ಪಳ
Koppala News: ಗಂಗಾವತಿಯಲ್ಲಿ ಕಾಲಭೈರವ ರೂಪಿ ಗಣೇಶ ಮೂರ್ತಿ ವಿಸರ್ಜನೆ: ಮೆರವಣಿಗೆಗೆ ಕಲಾತಂಡಗಳ ಮೆರುಗು
Koppala News: ಗಂಗಾವತಿಯ ದೇವಾಂಗ ಮಠದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವೀರಮದಕರಿ ನಾಯಕ ಯುವಕ ಸಂಘದಿಂದ ಪ್ರತಿಷ್ಠಾಪಿಸಲ್ಪಟ್ಟ ಕಾಲಭೈರವನ ರೂಪದಲ್ಲಿರುವ ಗಣೇಶ ಮೂರ್ತಿಯನ್ನು ಬುಧವಾರ ವಿಜೃಂಭಣೆಯಿಂದ ಮೆರವಣಿಗೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಜರುಗಿತು.
ಗಂಗಾವತಿ: ಇಲ್ಲಿನ ಕಲ್ಮಠದ ರಸ್ತೆಯಲ್ಲಿರುವ ದೇವಾಂಗ ಮಠದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವೀರಮದಕರಿ ನಾಯಕ ಯುವಕ ಸಂಘದಿಂದ ಪ್ರತಿಷ್ಠಾಪಿಸಲ್ಪಟ್ಟ ಕಾಲಭೈರವನ (Kalabhairava) ರೂಪದಲ್ಲಿರುವ ಗಣೇಶ ಮೂರ್ತಿಯನ್ನು (Ganesha Idol) ಬುಧವಾರ ವಿಜೃಂಭಣೆಯಿಂದ ಮೆರವಣಿಗೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಜರುಗಿತು.
13 ಅಡಿ ಎತ್ತರದ ಆಕರ್ಷಕ ವಿನ್ಯಾಸದಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಯು ಕಾಲಭೈರವ ರೂಪದಲ್ಲಿ ಜನರ ಆಕರ್ಷಣೆಯ ಕೇಂದ್ರವಾಗಿತ್ತು. ವಿನಾಯಕನ ವಿಸರ್ಜನೆಗೂ ಮುನ್ನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಬಳಿಕ ದೇವಾಂಗ ಮಠದಿಂದ ಆರಂಭವಾದ ಅದ್ಧೂರಿ ಮೆರವಣಿಗೆಯು ನಗರದ ಕಲ್ಮಠ ವೃತ್ತ, ಬಸವಣ್ಣ, ಮಹಾತ್ಮಗಾಂಧಿ, ಮಹಾವೀರ, ಸಿಬಿಎಸ್ ಸರ್ಕಲ್ ಹಾಯ್ದು, ಕೊಪ್ಪಳ ರಸ್ತೆ ಮೂಲಕ ಸಾಗಿ ದಾಸನಾಳದ ಬಳಿರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ಮಹಿಳಾ ವೀರಗಾಸೆ, ಕೂಡ್ಲಿಗಿಯ ವೀಣಾ ಮಹಿಳಾ ಡೊಳ್ಳು ಕುಣಿತ ತಂಡ ಸೇರಿದಂತೆ ದಾವಣಗೆರೆಯ ಮತ್ತೊಂದು ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಭಾಗಿಯಾಗಿದ್ದವು.
ಇದನ್ನೂ ಓದಿ: IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ
ಶಾಸಕ ಜಿ. ಜನಾರ್ದನ ರೆಡ್ಡಿ, ಉದ್ಯಮಿ ನೆಕ್ಕಂಟಿ ಸೂರಿಬಾಬು ಸೇರಿದಂತೆ ಇತರೆ ಮುಖಂಡರು ಭೇಟಿ ನೀಡಿದ್ದರು. ಪ್ರಮುಖರಾದ ಜೋಗದ ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ದುರುಗಪ್ಪ ದಳಪತಿ. ಕೃಷ್ಣ ನಾಯಕ, ಕನಕಪ್ಪ, ಚಂದ್ರು, ಸುರೇಶ, ಗಾದಿಲಿಂಗಪ್ಪ ನಾಯಕ ಸೇರಿದಂತೆ ಹಲವರು ಭಾಗಿಯಾಗಿದ್ದರು.
-
ದೇಶ21 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ಪ್ರಮುಖ ಸುದ್ದಿ13 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ3 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ದೇಶ22 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ4 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ದೇಶ22 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಕ್ರೈಂ8 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!