Karave Protest: ನಾರಾಯಣ ಗೌಡರಿಗೆ 14 ದಿನ ನ್ಯಾಯಾಂಗ ಬಂಧನ, ಇಂದು ಸಚಿವರ ಮನೆ ಮುಂದೆ ಪ್ರತಿಭಟನೆ - Vistara News

ಕರ್ನಾಟಕ

Karave Protest: ನಾರಾಯಣ ಗೌಡರಿಗೆ 14 ದಿನ ನ್ಯಾಯಾಂಗ ಬಂಧನ, ಇಂದು ಸಚಿವರ ಮನೆ ಮುಂದೆ ಪ್ರತಿಭಟನೆ

ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (IPC 353) ರಡಿ ಪ್ರಕರಣವನ್ನು ಪ್ರತಿಭಟನೆ ನಡೆಸಿದ (Karave Protest) ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ.

VISTARANEWS.COM


on

narayana gowda karave
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ (Kannada Name plates) ಆಗ್ರಹಿಸಿ ನಡೆಸಲಾದ ಚಳವಳಿಗೆ (Karave Protest) ಸಂಬಂಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಅಧ್ಯಕ್ಷ ನಾರಾಯಣ ಗೌಡರನ್ನು (Narayana Gowda) ಬಂಧಿಸಲಾಗಿದ್ದು, ಜನವರಿ‌ 10ರವರೆಗೆ ನ್ಯಾಯಾಂಗ ಬಂಧನಕ್ಕೆ‌ (judicial custody) ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (IPC 353) ರಡಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ.

ಪ್ರತಿಭಟನೆ ವೇಳೆ‌ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪ ದಾಖಲಾಗಿದೆ. ನಾರಾಯಣ ಗೌಡ ಸೇರಿ 6 ಮಂದಿ ವಿರುದ್ದ ಪಿಎಸ್ ಐ ಲಿತೀನ್ ದೂರಿನನ್ವಯ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದ್ದು, ನ್ಯಾಷನಲ್ ಹೈವೆ ಅಥಾರಿಟಿ ಆ್ಯಕ್ಟ್ IPC 283, 188, 427, 341 ,188 283ರಡಿ ಎಫ್ಐಆರ್ ಮಾಡಲಾಗಿದೆ. ನಾರಾಯಣ ಗೌಡ A1, ಜಗದೀಶ್ A2, ಸುರೇಶ್ A3, ಬಿ.ಕೆ.ನಾರಾಯಣ ಸ್ವಾಮಿ A4, ಬಿ.ಟಿ .ಅನಿಲ್ ಕುಮಾರ್ A5, ಅಂಬರೀಶ್ A6 ಆಗಿದ್ದಾರೆ.

ಹೋರಾಟ ನಡೆಸಿದ ನಾರಾಯಣ ಗೌಡ ಹಾಗೂ ಸಂಗಡಿಗರನ್ನು ನಿನ್ನೆ ಪೊಲೀಸ್‌ ವಶಕ್ಕೆ ಪಡೆಯಲಾಗಿತ್ತು. ಇಂದು ನಸುಕಿನ ಜಾವ ನಾರಾಯಣ ಗೌಡ ಸೇರಿದಂತೆ 29 ಮಂದಿಯನ್ನು ದೇವನಹಳ್ಳಿಯಲ್ಲಿರುವ ನಿವಾಸಕ್ಕೆ ಹಾಜರುಪಡಿಸಲಾಯಿತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ಹೊರಡಿಸಿದರು.

ನಾರಾಯಣ ಗೌಡ ಹಾಗೂ ಸಂಗಡಿಗರನ್ನು ಭಾರಿ ಬಿಗಿ ಭದ್ರತೆ ನಡುವೆ ಪೊಲೀಸರು ಕೊಂಡೊಯ್ದಿದ್ದಾರೆ. ಇದಕ್ಕೂ ಮುನ್ನ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯುವಾಗ ಕರವೇ ಕಾರ್ಯಕರ್ತರು ಬಸ್ ತಡೆದು ಬಸ್‌ಗೆ ಕಲ್ಲು ತೂರಾಟ ನಡೆಸಿದರು. ಬಸ್ಸಿಗೆ ಕಲ್ಲು ತೂರುವಾಗ ಪೊಲೀಸರೊಬ್ಬರಿಗೆ ಕಲ್ಲೇಟು ಬಿದ್ದು ಗಾಯವಾಗಿದೆ.

ಇಂದು ಕರವೇ ಪ್ರತಿಭಟನೆ

ಬಂಧನವನ್ನು ಪ್ರತಿಭಟಿಸಿ ಎಲ್ಲಾ ಸಚಿವರ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವಂತೆ ಕರವೇ ಅಧ್ಯಕ್ಷ ನಾರಾಯಣ ಗೌಡ ನೀಡಿದ್ದಾರೆ. ʼಕನ್ನಡಪರ ಹೋರಾಟ ನಡೆಸಿದ್ದಕ್ಕಾಗಿ ಬೆಳಗ್ಗೆಯಿಂದ ವಶಕ್ಕೆ ಪಡೆದು ಕೂಡಹಾಕಿದ್ದು, ಊಟ ನೀಡಿಲ್ಲ, ನನ್ನ ಮೆಡಿಸಿನ್ ನೀಡಿಲ್ಲ. ನನ್ನ ಮೊಬೈಲ್ ಕಸಿದು ನೊವುಂಟು ಮಾಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಕಾರ್ಯಕರ್ತರನ್ನು ಬಂಧಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.

ʼಸಿದ್ದರಾಮಯ್ಯನವರೇ. ನಿಮ್ಮ ಸರ್ಕಾರ ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಂಡಿತ್ತು. ನನ್ನ ಆರೋಗ್ಯ ಹದಗೆಟ್ಟಿದೆ, ನಾನು ಸತ್ತರೂ ಚಿಂತೆ ಇಲ್ಲ. ನಾಳೆ ಕನ್ನಡಿಗರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಮಗೆ ಗುಂಡಿಟ್ಟರೂ ಚಿಂತೆ ಇಲ್ಲ, ನಾವು ಜಗ್ಗುವುದಿಲ್ಲ ಎಂದುʼ ನಾರಾಯಣ ಗೌಡ ಕಿಡಿ ಕಾರಿದ್ದಾರೆ.

ಬಂಧಿತ ಕರವೇ ಕಾರ್ಯಕರ್ತರಲ್ಲಿ ಒಬ್ಬ ಅಸ್ವಸ್ಥನಾಗಿದ್ದಾನೆ. ಸೂರಿ ಎಂಬಾತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಪೊಲೀಸರ ವಶದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: Karave Protest: ಕನ್ನಡ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಕರವೇ; ಇಂಗ್ಲಿಷ್‌ ನಾಮಫಲಕಗಳ ಧ್ವಂಸ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan: ಪೊಲೀಸ್‌ ಕಸ್ಟಡಿ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ ಸೇರಿ ಹಲವು ಆರೋಪಿಗಳ ಅವಧಿಯು ಮುಕ್ತಾಯಗೊಂಡ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದರು. ಇದರಿಂದಾಗಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾದಂತಾಗಿದೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಬಂಧಿತನಾಗಿರುವ ನಟ ದರ್ಶನ್‌ಗೆ (Actor Darshan) ಮತ್ತೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಆರ್ಥಿಕ ಅಪರಾಧಗಳ ಕೋರ್ಟ್‌ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಕಸ್ಟಡಿ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ ಸೇರಿ ಹಲವು ಆರೋಪಿಗಳ ಅವಧಿಯು ಮುಕ್ತಾಯಗೊಂಡ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದರು. ಇದರಿಂದಾಗಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾದಂತಾಗಿದೆ.

Actor Darshan Will Attend The Court Hearing From Online

ದರ್ಶನ್‌ ಪತ್ನಿ ನಾನು ಎಂದ ವಿಜಯಲಕ್ಷ್ಮೀ

ನಟ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavitra Gowda) ಸಂಬಂಧದ ಕುರಿತು ಕಮಿಷನರ್‌ ಬಿ. ದಯಾನಂದ್‌ (Police commissioner B Dayanand) ಅವರು ನೀಡಿರುವ ಉಲ್ಲೇಖದ ಬಗ್ಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi) ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼಪವಿತ್ರ ಗೌಡ ಅವರು ದರ್ಶನ್‌ ಪತ್ನಿ ಅಲ್ಲ, ದರ್ಶನ್‌ ಪತ್ನಿ ನಾನುʼ ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನದ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.‌ದಯಾನಂದ್ ಸುದ್ದಿಗೋಷ್ಠಿ ಮಾಡಿದ್ದರು. ಆ ವೇಳೆ,‌‌ ʼದರ್ಶನ್ ಪತ್ನಿ ಪವಿತ್ರ ಗೌಡಗೆ ರೇಣುಕಾ ಸ್ವಾಮಿ ‌ಅಶ್ಲೀಲ‌ ಸಂದೇಶ ಕಳಿಸಿದ್ದʼ ಎಂದು ಉಲ್ಲೇಖ ಮಾಡಿದ್ದರು. ಆ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ, ‌ಪತ್ರಿಕೆಗಳಲ್ಲಿ‌ ಪ್ರಸಾರವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ‌ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

“ನೀವು ಸುದ್ದಿಗೋಷ್ಠಿಯಲ್ಲಿ ದರ್ಶನ್ ಪತ್ನಿ ಪವಿತ್ರ ಗೌಡ ಎಂದು ಹೇಳಿಕೆ‌ ನೀಡಿದ್ದೀರಿ. ದರ್ಶನ್‌ಗೆ ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ವಿವಾಹವು 19.05.2003ರಂದು ಧರ್ಮಸ್ಥಳದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವಿತ್ರ ಗೌಡ ನನ್ನ ಪತಿ ದರ್ಶನ್ ಸ್ನೇಹಿತೆ ನಿಜ. ಆದರೆ ಅವರು ದರ್ಶನ್ ಅವರ ಹೆಂಡತಿಯಲ್ಲ ಎಂದು ದಯವಿಟ್ಟು ಗಮನಿಸಿ” ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಮತ್ತು ದರ್ಶನ್‌ ಸಂಬಂಧ ಅದಲ್ಲ: ಕಮಿಷನರ್‌ಗೆ ಪತ್ರ ಬರೆದ ವಿಜಯಲಕ್ಷ್ಮಿ

Continue Reading

ಪ್ರಮುಖ ಸುದ್ದಿ

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

CM Siddaramaiah: ʼಬಿಜೆಪಿಯವರಿಗೆ ಏನೂ ವಿಷಯ ಇಲ್ಲ. ಅವರು ಆರ್. ಎಸ್.ಎಸ್ ಹೇಳಿದಂತೆ ಕೇಳ್ತಾರೆ. ಮುಡಾದಲ್ಲಿ ಏನು ವಿಷಯ ಇದೆ? ಬಿಜೆಪಿ ಅವರೇ ಕೊಟ್ಟು ಅವರೇ ಆರೋಪ ಮಾಡಿದರೆ, ಕಾನೂನು ಬಾಹಿರ ಎಂದು ಹೇಳಿದರೆ ಹೇಗೆ? ನಾನೇಕೆ ರಾಜೀನಾಮೆ ನೀಡಲಿ?’ ಎಂದು ಸಿಎಂ ಪ್ರಶ್ನಿಸಿದರು.

VISTARANEWS.COM


on

cm siddaramaiah MUDA scam
Koo

ಬೆಂಗಳೂರು: ಮುಡಾ (MUDA) ಸೈಟ್‌ ಪ್ರಕರಣದ ಬಗ್ಗೆ ಬಿಜೆಪಿ (BJP) ನಡೆಸುತ್ತಿರುವ ಆರೋಪಗಳ ಸುರಿಮಳೆ ಹಾಗೂ ಪ್ರತಿಭಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಸಚಿವ ಸಂಪುಟ (Cabinet) ಸಭೆಯಲ್ಲಿ ಸ್ಪಷ್ಟನೆ ನೀಡಿದರು. ಮುಡಾ ಹಗರಣದ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲ ಊಹಾಪೋಹಗಳು ಎಂದು ಸ್ಪಷ್ಟನೆ ನೀಡಿದರಲ್ಲದೆ, ʼನಾನು ಸಿಎಂ ಅನ್ನುವ ಕಾರಣಕ್ಕೆ ನನ್ನ ಸೈಟ್‌ ಬಿಡೋಕೆ ಆಗುತ್ತಾ?ʼ ಎಂದು ಪ್ರಶ್ನಿಸಿದರು.

ʼಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟ. ಬಿಜೆಪಿ ಸರ್ಕಾರದ ಕಾಲದಲ್ಲೇ ಇದರ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ ಅಂದರೆ 2023, ಅಕ್ಟೋಬರ್‌ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ‌ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ. ಯಾವುದೇ ಕಾನೂನು ಮೀರಿಲ್ಲ. ನಮ್ಮ ಮೇಲೆ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳುʼ ಎಂದು ಕ್ಯಾಬಿನೆಟ್‌ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ನಂತರ ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ʼಬಿಜೆಪಿಯವರಿಗೆ ಏನೂ ವಿಷಯ ಇಲ್ಲ. ಅವರು ಆರ್. ಎಸ್.ಎಸ್ ಹೇಳಿದಂತೆ ಕೇಳ್ತಾರೆ. ಮುಡಾದಲ್ಲಿ ಏನು ವಿಷಯ ಇದೆ? ಬಿಜೆಪಿ ಅವರೇ ಕೊಟ್ಟು ಅವರೇ ಆರೋಪ ಮಾಡಿದರೆ, ಕಾನೂನು ಬಾಹಿರ ಎಂದು ಹೇಳಿದರೆ ಹೇಗೆ? ನಾನೇಕೆ ರಾಜೀನಾಮೆ ನೀಡಲಿ? ಎಂದು ಸಿಎಂ ಪ್ರಶ್ನಿಸಿದರು.

ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿದ್ದೇವಾ? ನಾವು ಇಂತಹ ಕಡೆ ಎಂದು ಕೇಳಿಲ್ಲ. ಅದು ಕೊಟ್ಟಿರುವುವರ ತಪ್ಪು. ಹಾಗಾದರೆ ಪರಿಹಾರ ಕೊಟ್ಟು ಬಿಡಲಿ. 62 ಸಾವಿರ ಕೋಟಿ ಬೆಲೆ ಬಾಳುವ ಜಮೀನು ಹೋಗಿದೆ. ನಮ್ಮ ಕೇಸ್ ಪ್ರತ್ಯೇಕ. ನನಗೆ ಕಡಿಮೆ ಸಿಕ್ಕಿದೆ. ನಾನು ಸಿಎಂ ಅಂತ ಸುಮ್ಮನೆ ಬಿಡಲು ಆಗುತ್ತಾ?ʼ ಎಂದು ಪ್ರಶ್ನಿಸಿದರು.

ʼಮುಡಾದವರು ನಮ್ಮ 3 ಎಕರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದಾರೆ ಅವರು. ನಮ್ಮ ಜಮೀನು ಸೈಟ್, ಪಾರ್ಕ್ ಮಾಡಿದ್ದಾರೆ. ಇದು ಮುಡಾದ ತಪ್ಪು. ಆ ತಪ್ಪನ್ನು ಮುಡಾದವರು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ನಾನು ಸಿಎಂ ಅಂತ ಬಿಡಲು ಆಗುತ್ತಾ? ನಾವು 50:50 ನಿಯಮ ಒಪ್ಪಿಕೊಂಡಿದ್ದೇವೆ. ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿಲ್ಲ. ನಾವೇನು ವಿಜಯನಗರದ 3-4ನೇ ಹಂತದಲ್ಲಿ ಕೊಡಿ ಎಂದು ಕೇಳಿಲ್ಲ. ಅಲ್ಲಿ ಜಾಗ ಇಲ್ಲ ಅಂತ ಇಲ್ಲಿ ಕೊಟ್ಟಿದ್ದಾರೆ. ಈಗ ಕೊಟ್ಟ ಸೈಟ್ ದರ ಎಷ್ಟಿದೆ ಎಂದು ಕೂಡ ನನಗೆ ಗೊತ್ತಿಲ್ಲ. ನಂತರ 50:50 ರದ್ದು ಮಾಡಿ ಎಂದು ಆದೇಶ ಮಾಡಿದ್ದಾರೆ. ಹಾಗಾದರೆ ಸೈಟ್ ವಾಪಸ್ ತೆಗೆದುಕೊಂಡು ಪರಿಹಾರ ನೀಡಲಿ. ನನಗೆ 62 ಕೋಟಿ ಪರಿಹಾರ ಕೊಟ್ಟು ಬಿಡಲಿ. ಒಂದು ಎಕರೆಗಿಂತ ಕಡಿಮೆ ಕೊಟ್ಟಿದ್ದಾರೆ. ಸಚಿವರು ಯಾವ ಫೈಲೂ ತಂದಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ ಆರೋಪಗಳುʼ ಎಂದು ಸಿಎಂ ವಿವರಿಸಿದರು.

ಇದನ್ನೂ ಓದಿ: MUDA site scandal: ಮುಡಾ ಸೈಟ್ ಅಕ್ರಮ; ನಾನು ಯಾಕಪ್ಪ ರಾಜೀನಾಮೆ ಕೊಡಲಿ, ನನ್ನ ಪಾತ್ರ ಏನಿದೆ ಎಂದ ಸಿಎಂ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Bengaluru News: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಇದೇ ಜು.5 ರಂದು ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Satsang programme on 5th July in Bengaluru
Koo

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಜು.5ರಂದು ಶುಕ್ರವಾರ ಸಂಜೆ 5 ಗಂಟೆಗೆ ನಗರದ (Bengaluru News) ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿರುವರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ಬ್ರಹ್ಮಚಾರಿ ಶ್ರೀ ಸಾಯಿ ಕೀರ್ತಿನಾಥ್‌ಜಿ ಮತ್ತು ತಂಡದವರಿಂದ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಕ್ರಮಣ ಗುರುವಂದನ ಬಳಗ ಕಾರ್ಯಕ್ರಮ ಆಯೋಜನೆ ಮತ್ತು ನಿರ್ವಹಿಸಲಿದ್ದಾರೆ.

Continue Reading

ಹಾಸನ

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

Hassan News: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.

VISTARANEWS.COM


on

Hassan News Distribution of free notebook bag to government primary schools in Alur
Koo

ಹಾಸನ: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್ ವತಿಯಿಂದ ಹಾಸನ ಜಿಲ್ಲೆಯ (Hassan News) ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌ ಅವರು, “ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ ” ಎಂಬ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕಳೆದ 12 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬರುತಿದ್ದಾರೆ.

ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು, ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಿದರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ನೋಟ್ ಬುಕ್ಸ್‌ನ ಕವರ್ ಪೇಜ್‌ನಲ್ಲಿ ಮುದ್ರಿಸಿರುವ 5 ಪಂಚ ಸೂತ್ರಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದಲ್ಲದೇ ಪ್ರತಿ ಶಾಲೆಯಲ್ಲಿ ಪ್ರಮಾಣ ವಚನ ಬೋಧಿಸುವುದರೊಂದಿಗೆ ನೀಡಲಾಯಿತು. ಗುರುಹಿರಿಯರಲ್ಲಿ ಭಕ್ತಿ ಭಾವ, ವಿನಯ, ತಂದೆ ತಾಯಿಯನ್ನು ಕೊನೆಯವರೆಗೂ ನೋಡಿಕೊಳ್ಳುವುದು, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಇರುವುದು, ಶಾಲೆಯೊಂದಿಗೆ ನಿಕಟ ಸಂಪರ್ಕ, ಯಾವುದೇ ಸಂದರ್ಭದಲ್ಲಿಯೂ ಹಣದ ಆಮಿಷಕ್ಕೆ ಒಳಗಾಗದೆ ಇರುವುದು ಇವು ಪಂಚ ಸೂತ್ರಗಳಾಗಿವೆ.

ಈ ಸಂದರ್ಭದಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಬ್ಯಾಗ್‌ಗಳನ್ನು ವಿತರಣೆ ಮಾಡಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಪಿಯು ಕಾಲೇಜು ಪ್ರಾಚಾರ್ಯ ಕುಮಾರಪ್ಪ, ಎಚ್‌.ಎಂ. ಮಹಾದೇವಪ್ಪ, ಎಸ್‌ಡಿಎಂಸಿಯ ಶೇಖರ್, ಕಾಂತರಾಜ್, ರಾಜಣ್ಣ, ಶಾಲಾ ಶಿಕ್ಷಕರು, ಪೋಷಕರು ಪಾಲ್ಗೊಡಿದ್ದರು.

Continue Reading
Advertisement
Sumalatha Ambareesh Reaction about darshan
ಸ್ಯಾಂಡಲ್ ವುಡ್4 mins ago

Sumalatha Ambareesh: ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದ ಸುಮಲತಾ; ದೊಡ್ಡ ಮಗನ ಬಗ್ಗೆ ಹೇಳಿದಿಷ್ಟು!

Kalki 2898 AD
ಸಿನಿಮಾ8 mins ago

Kalki 2898 AD: ಕಲ್ಕಿ 2898 ಎಡಿ ಚಿತ್ರದ 10 ಕುತೂಹಲಕರ ಸಂಗತಿಗಳಿವು!

Costliest City
ದೇಶ11 mins ago

Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?

Actor Darshan
ಕರ್ನಾಟಕ17 mins ago

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Team India
ಕ್ರೀಡೆ18 mins ago

Team India: ಮೋದಿಗೆ ನಮೋ ಹೆಸರಿನ ಟೀಮ್​ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಬಿಸಿಸಿಐ

Sumalatha Ambareesh First Reaction To Darshan Arrest And Renuka Swamy Murder Case
ಸ್ಯಾಂಡಲ್ ವುಡ್23 mins ago

Sumalatha Ambareesh: ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ ; ದರ್ಶನ್​ ಬಗ್ಗೆ ಸುಮಲತಾ ಅಂಬರೀಶ್‌​ ಮೊದಲ ಪ್ರತಿಕ್ರಿಯೆ

cm siddaramaiah MUDA scam
ಪ್ರಮುಖ ಸುದ್ದಿ24 mins ago

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

Satsang programme on 5th July in Bengaluru
ಬೆಂಗಳೂರು42 mins ago

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Hassan News Distribution of free notebook bag to government primary schools in Alur
ಹಾಸನ44 mins ago

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

To complete pending railway projects in the state former MP DK Suresh appeals central government
ಬೆಂಗಳೂರು46 mins ago

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ2 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ3 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ4 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌