Physical Abuse : ಮದ್ಯದ ನಶೆಯಲ್ಲಿ ಪತಿಗೆ ಥಳಿಸಿದ ಕಿರಾತಕರು; ಪತ್ನಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ - Vistara News

ಕೊಪ್ಪಳ

Physical Abuse : ಮದ್ಯದ ನಶೆಯಲ್ಲಿ ಪತಿಗೆ ಥಳಿಸಿದ ಕಿರಾತಕರು; ಪತ್ನಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ

Physical Abuse : ಮದ್ಯದ ನಶೆಯಲ್ಲಿ ಕಿರಾತಕರ ಗುಂಪುವೊಂದು ಕ್ಯಾತೆ ತೆಗೆದಿದ್ದು, ಅದರಲ್ಲಿ ಒಬ್ಬ ವಿವಾಹಿತೆ ಮೇಲೆ ಎರಗಿ ಬಲಾತ್ಕರ ಮಾಡಿದ್ದಾನೆ.

VISTARANEWS.COM


on

Gang raped at Gangavathi bus stand
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಪ್ಪಳ: ಗಂಗಾವತಿ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪತಿ-ಪತ್ನಿ ನಡುವೆ ಬಂದ ಕಿರಾತಕರ ಗುಂಪೊಂದು ಮದ್ಯದ ನಶೆಯಲ್ಲಿ ಕಿರಿಕ್‌ (Physical Abuse) ಮಾಡಿದ್ದಾರೆ. ಪತಿಗೆ ಥಳಿಸಿ ನಂತರ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

ಅವರಿಬ್ಬರು ಪ್ರೀತಿಸಿ ಮದುವೆ ಆಗಿ ಬೆಂಗಳೂರಲ್ಲಿ ವಾಸವಿದ್ದರು. ಯಾವುದೋ ವಿಚಾರಕ್ಕೆ ಕಲಹ ಉಂಟಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಮುನಿಸಿಕೊಂಡಿದ್ದ ಪತ್ನಿಯನ್ನು ಹುಡುಕಿಕೊಂಡು ಬೆಂಗಳೂರಿಂದ ಗಂಗಾವತಿಗೆ ಪತಿ ಬಂದಿದ್ದ. ಫೆ.9ರ ರಾತ್ರಿ 9 ಗಂಟೆ ಸುಮಾರಿಗೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಕೂತು ಇಬ್ಬರು ಏರು ಧ್ವನಿಯಲ್ಲಿ ಜಗಳವಾಡುತ್ತಿದ್ದರು.

ದಂಪತಿಯ ಕಲಹವನ್ನೇ ಬಂಡವಾಳ ಮಾಡಿಕೊಂಡು ಅಲ್ಲಿಗೆ ಬಂದ ಕಿರಾತಕರ ಗುಂಪೊಂದು, ಪತಿ ಮಂಜುನಾಥ್‌ನನ್ನು ಥಳಿಸಲು ಮುಂದಾಗಿದ್ದರು. ಯುವತಿಯನ್ನು ಚುಡಾಯಿಸುತ್ತಿದ್ದೀಯಾ ಎಂದು ಕ್ಯಾತೆ ತೆಗೆದಿದ್ದರು. ಈ ವೇಳೆ ಸಂತ್ರಸ್ತೆ ನಾವಿಬ್ಬರು ಗಂಡ-ಹೆಂಡತಿ ಎಂದರೂ ಬಿಡದೇ, ಎಲ್ಲರೂ ಸೇರಿಕೊಂಡು ಮಂಜುನಾಥ್‌ಗೆ ಥಳಿಸಿದ್ದಾರೆ. ಈ ವೇಳೆ ಮಂಜುನಾಥ್‌ ಪತ್ನಿಯ ಮೈ-ಕೈ ಮುಟ್ಟಿ ಬಟ್ಟೆ ಹಿಡಿದು ಎಳೆದಾಡಿದ್ದಾರೆ.

ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಗಲಾಟೆಯಾಗಿದ್ದು, ಇದರಿಂದ ಗಾಬರಿಗೊಂಡ ಸಂತ್ರಸ್ತೆ ರಕ್ಷಣೆಗಾಗಿ ಸಮೀಪದ ನೆಹರೂ ಪಾರ್ಕ್‌ ಕಡೆ ಓಡಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಹಿಂಬಾಲಿಸಿ ಬಂದ ಲಿಂಗರಾಜ ಎಂಬಾತ ಬಲಾತ್ಕಾರ ಮಾಡಿದ್ದಾನೆ. ಹಲ್ಲೆ ಮಾಡಿದ ಉಳಿದ ಆರೋಪಿಗಳನ್ನು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂದು ಗುರುತಿಸಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ಪ್ರೀತ್ಸೆ ಅಂತ ಅಪ್ರಾಪ್ತೆಯನ್ನು ಕೊಂದಿದ್ದ ಕಿರಾತಕ 2ನೇ ಬಾರಿ ಆತ್ಮಹತ್ಯೆ ಯತ್ನ

ಕೋಲಾರ: ಪ್ರೀತ್ಸೆ.. ಪ್ರೀತ್ಸೆ ಎಂದು ಪೀಡಿಸಿ ಅಪ್ರಾಪ್ತೆಯ ಕೊಂದಿದ್ದ ಪಾಗಲ್‌ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಡ್ರಾಮಾ (Self Harming) ಮಾಡಿದ್ದ. ಹೀಗಾಗಿ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೊಲೆ ಆರೋಪಿ ನಿತಿನ್ ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಾಣೆಯಾಗಿದ್ದ 15 ವರ್ಷದ ಬಾಲಕಿ ಬೆಂಗಳೂರು ಗ್ರಾಮಾಂತರದ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಸಿಕ್ಕಿದ್ದಳು. ಕೋಲಾರದ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಂದಿತಾಳನ್ನು (15) ಬರಗೂರು ಗ್ರಾಮದ ನಿವಾಸಿ ನಿತಿನ್ (23) ಪ್ರೀತಿಸುವಂತೆ ಪೀಡಿಸುತ್ತಿದ್ದ.

ಆದರೆ ನಂದಿತಾ ನಿರಾಕರಿಸಿದ್ದಳು. ಈ ವೇಳೆ ಶಾಲೆ ಮುಗಿಸಿ ಮನೆಗೆ ಬರುವಾಗ ನಂದಿತಾಳನ್ನು ಅಪಹರಿಸಿದ್ದ. ಆಗಲೂ ಆಕೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಚಾಕುವಿನಿಂದ ತಿವಿದು ಕೊಲೆಗೈದಿದ್ದ. ಕೊಲೆ ನಂತರ ಆರೋಪಿ ನಿತಿನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದ.

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಿತಿನ್‌ನನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡಲು ಬಂದಾಗ ಎರಡನೇ ಮಹಡಿಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ನಿತಿನ್‌ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Koppala News: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಮಹಾರಥೋತ್ಸವವು ಶುಕ್ರವಾರ ಅಪಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Huligemma Devi Maharathotsava in Hulagi
Koo

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ (Koppala News) ಜರುಗಿತು.

ಇದನ್ನೂ ಓದಿ: Old Students Association: ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಆದೇಶ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಿಂದ ಜೂನ್ 3 ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಸಂಜೆ ಮಹಾರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನಡೆಯಿತು.

ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತಗುಂಡಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು

Continue Reading

ಮಳೆ

Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

Rain News : ರಾಜ್ಯಾದ್ಯಂತ ಬ್ರೇಕ್‌ ಕೊಟ್ಟಿದ್ದ ವರುಣ ಜೂನ್‌ ಮೊದಲ ವಾರದಿಂದ ಮತ್ತೆ ಅಬ್ಬರಿಸಲಿದ್ದಾನೆ. ಗುಡುಗು ಸಹಿತ ಸಾಧಾರಣ ಮಳೆಯಾಗಲಿದ್ದು, ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಮಳೆ (Rain news) ಪ್ರಮಾಣವು ತಗ್ಗಿದೆ. ಕಳೆದ ಎರಡ್ಮೂರು ದಿನದಿಂದ ಮಳೆಯು ಕಣ್ಮರೆಯಾಗಿದೆ. ನಿನ್ನೆ ಗುರುವಾರ ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉತ್ತರ ಒಳನಾಡಿನಲ್ಲಿ ಒಣಹವೆ (Dry Weather) ಇತ್ತು.

ಶಿವಮೊಗ್ಗದ ಆಗುಂಬೆಯಲ್ಲಿ 5 ಸೆಂ.ಮೀ, ಕೊಡಗಿನ ಗೋಣಿಕೊಪ್ಪಲು 3 ಸೆಂ.ಮೀ ಮಳೆಯಾಗಿದೆ. ಹಾಗೇ ದಕ್ಷಿಣ ಕನ್ನಡದ ಧರ್ಮಸ್ಥಳ, ಉಡುಪಿಯ ಕೋಟ, ಉತ್ತರ ಕನ್ನಡದ ಮಂಕಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಇನ್ನೂ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41.3 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

ನಾಳೆಯಿಂದ ಮತ್ತೆ ಶುರುವಾಗುತ್ತಾ ಅಬ್ಬರ?

ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಭಾಗಗಳಲ್ಲಿ ಮಳೆ ಅಬ್ಬರ ಇರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ 30-40 ಕಿ.ಮೀ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಇನ್ನೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ (30-40 kmph) ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: Kukke Subramanya: ಹೊಳೆ ಉಕ್ಕಿ ಹರಿದು ಕೊಚ್ಚಿ ಹೋದ ಪಿಕ್ಅಪ್ ವಾಹನ; ಚಾಲಕನ ರಕ್ಷಣೆ

ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಕಲಬುಲಗಿ, ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಗುಡುಗು ಸಹಿತ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ 40-50 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಮೇಲ್ಮೈ ಮಾರುತಗಳು (30-40 kmph) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಮೇಲೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿಯಲಿದೆ. ಕೆಲವೊಮ್ಮೆ ಹಗುರ ಮಳೆಯಾಗಲಿದ್ದು, ಮೇಲ್ಮೈ ಗಾಳಿಯು ಪ್ರಬಲವಾಗಿರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಪ್ಪಳ

Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದ ಭಕ್ತರ ಮೇಲೆ ಹಿಂಬದಿಯಿಂದ ಬಂದ ಲಾರಿಯೊಂದು (Road Accident) ಹರಿದಿದೆ. ಪರಿಣಾಮ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Huligemma Temple Road Accident
Koo

ಕೊಪ್ಪಳ: ಹುಲಿಗೆಮ್ಮ ದೇವಿ ಜಾತ್ರೆ (Huligemma Temple) ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಲಾರಿಯೊಂದು (Lorry Hit) ಹರಿದಿದೆ. ಪಾದಯಾತ್ರೆ ಹೊರಟಿದ್ದವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಕೆರಳ್ಳಿ ಫ್ಲೈಓವರ್ ಬಳಿ ಘಟನೆ ನಡೆದಿದೆ. ಯಮನೂರಪ್ಪ ಸಣ್ಣಮನಿ (34) ಮೃತ ದುರ್ದೈವಿ. ಯಮನೂರಪ್ಪ ಬಾಗಲಕೋಟಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಆಗಿದ್ದಾರೆ. ಯಮನೂರಪ್ಪ ಹಾಗೂ ಮಹಾಂತೇಶ್‌ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರಟ್ಟಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಯಮನೂರಪ್ಪ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್‌ ಫ್ಲೈಓವರ್‌ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಅವರ ಕಾಲಿನ ಪಾದವೇ ತುಂಡಾಗಿ ಬಿದ್ದಿತ್ತು. ಸದ್ಯ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳು ಮಹಾಂತೇಶ್‌ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಕಿ ದುರಂತ ಸ್ಥಳದಲ್ಲಿ ಜಮಾಯಿಸಿದ್ದ ಜನ; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

ಬಿಸಿ ಗಾಳಿ ಶಾಖಕ್ಕೆ ತತ್ತರಿಸಿದ ಬಿಹಾರ; ಎರಡೇ ಗಂಟೆಗಳಲ್ಲಿ 16 ಮಂದಿ ಸಾವು

ಪಾಟ್ನಾ: ಬಿಹಾರ(Bihar)ದಲ್ಲಿ ಬಿಸಿ ಗಾಳಿ(Heat Wave) ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಇದರ ಪರಿಣಾಮವಾಗಿ ಕೇವಲ ಎರಡೇ ಗಂಟೆಗಳಲ್ಲಿ ಬಿಸಿಗಾಳಿ ಶಾಖಕ್ಕೆ ಬರೋಬ್ಬರಿ 16 ಜನ ಬಲಿಯಾಗಿದ್ದಾರೆ. ಔರಂಗಾಬಾದ್‌ ಜಿಲ್ಲಾಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಗರದ ಉಷ್ಣಾಂಶ 48.2 ಡಿಗ್ರಿಗೆ ಏರಿಕೆ ಆಗಿದೆ. ಇದು ಬಿಹಾರದಲ್ಲೇ ಅತಿ ಹೆಚ್ಚ ಉಷ್ಣಾಂಶ ಹೊಂದಿರುವ ನಗರವಾಗಿದೆ.

ಈ ಕುರಿತು ಔರಂಗಾಬಾದ್‌ ಜಿಲ್ಲಾಸ್ಪತ್ರೆ ವೈದ್ಯರು ಪ್ರತಿಕ್ರಿಯಿಸಿದ್ದು, ತೀವ್ರ ಬಿಸಿ ಗಾಳಿಗೆ ತುತ್ತಾಗಿ ಅಸ್ವಸ್ಥಗೊಂಡಿರುವ 35 ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದುರಾದೃಷ್ಟವಶಾತ್‌ 16ಕ್ಕೂ ಅಧಿಕ ಜನ ಬಿಸಿಗಾಳಿ ಶಾಖಕ್ಕೆ ಬಲಿಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ನಮ್ಮ ಸಾಕಷ್ಟು ತಜ್ಞ ವೈದ್ಯರಿದ್ದಾರೆ. ಔಷಧ, ಐಸ್‌ ಪ್ಯಾಕ್‌ ಮತ್ತು ಅನೇಕ ಕೂಲರ್‌ಗಳ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಗಾಳಿ ಸಮಸ್ಯೆಯಿಂದಾಗಿ ಮುಂಜಾಗೃತಾ ಕ್ರಮವಾಗಿ ಬಿಹಾರ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳನ್ನು ಜೂ.8ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಕೆಲವು ದಿನಗಳಿಂದ ಶಾಲೆಗಳಲ್ಲಿ ಬಿಸಿ ಗಾಳಿ ಶಾಖಕ್ಕೆ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆ ವರದಿ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಕ್ಕಳು ಪ್ರಜ್ಞೆ ತಪ್ಪಿರುವ ವೀಡಿಯೊಗಳು ವೈರಲ್ ಆಗಿದ್ದು, ಶಾಲೆಯ ವಿದ್ಯಾರ್ಥಿಗಳು ತುಂಬಾ ದಣಿದಿದ್ದಾರೆ ಎಂದು ಕಂಡುಬಂದಿದೆ. ಶಿಕ್ಷಕರು ಅವರಿಗೆ ನೀರು ಒದಗಿಸುವ ಮೂಲಕ ಮತ್ತು ಅವರಿಗೆ ಗಾಳಿ ಬೀಸುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರಿಗೆ ಸಲೈನ್ ಚುಚ್ಚುಮದ್ದು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರೂ ಬಿಸಿಗಾಳಿಯ ತಾಪಮಾನಕ್ಕೆ ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆಯೂ ವರದಿ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ರಾಜ್ಯದಲ್ಲಿಂದು ಭಾರಿ ಮಳೆಗೆ ಗುಡುಗು, ಮಿಂಚು ಸಾಥ್‌

Rain News : ರಾಜ್ಯಾದ್ಯಂತ ರಭಸವಾಗಿ ಗಾಳಿ ಬೀಸಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮಂಡ್ಯ, ಮೈಸೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಬಹುಶಃ ಒಣಹವೆ ಇರಲಿದೆ.

ಉತ್ತರಒಳನಾಡಿನ ಬೆಳಗಾವಿ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಮಲೆನಾಡಿನ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ: BMTC Driver : ಬಿಎಂಟಿಸಿ ಎಲೆಕ್ಟ್ರಿಕಲ್‌ ಬಸ್‌ಗೆ ಪರಭಾಷಿಕರ ನೇಮಕ; ಡಿಸಿ ಕಚೇರಿಗೆ ನುಗ್ಗಿ ಕನ್ನಡಿಗರ ಆಕ್ರೋಶ

ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Kanyakumari Tour
ಪ್ರವಾಸ37 mins ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ45 mins ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ46 mins ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ47 mins ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Exit Polls
Lok Sabha Election 202449 mins ago

Exit Poll: 2004, 2009, 2014, 2019ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಆಗಿದ್ದೇನು?

Heart Attack
ದೇಶ56 mins ago

Heart Attack: ತಿರಂಗಾ ಹಿಡಿದು ಕುಣಿಯುವಾಗಲೇ ಹೃದಯಾಘಾತಕ್ಕೆ ನಿವೃತ್ತ ಯೋಧ ಬಲಿ; ಸಾವಿನಲ್ಲೂ ಸಾರ್ಥಕತೆ!

Prajwal revanna Case
ಚಿಕ್ಕಮಗಳೂರು1 hour ago

Prajwal Revanna Case: ಭವಾನಿ ರೇವಣ್ಣ ಕಾರು ಚಾಲಕನನ್ನು ವಶಕ್ಕೆ ಪಡೆದ ಎಸ್‌ಐಟಿ

Modi Meditation
ಪ್ರಮುಖ ಸುದ್ದಿ2 hours ago

Modi Meditation: ಮೋದಿ ಮಾಡ್ತಿರೋದು ‘ಧ್ಯಾನ’ ಅಲ್ಲ ‘ಡ್ರಾಮಾ’ ಎಂದ ಮಲ್ಲಿಕಾರ್ಜುನ ಖರ್ಗೆ!

Virat Kohli
ಪ್ರಮುಖ ಸುದ್ದಿ2 hours ago

Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

Anjali Murder Case
ಕರ್ನಾಟಕ2 hours ago

Anjali Murder Case: ಅಂಜಲಿ ಹಂತಕ ಗಿರೀಶ್‌ಗೆ ಜೂನ್ 16ರವರೆಗೆ‌ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌