Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು? - Vistara News

ಕರ್ನಾಟಕ

Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?

liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!

VISTARANEWS.COM


on

Liquor Consumption of poor man
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅನೇಕ ಬಜೆಟ್‌ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್‌ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜುಲೈ 7ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ (Liquor Consumption) ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್‌ (Viral News) ಆಗಿದೆ.

ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!

ಇದನ್ನೂ ಓದಿ: Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

ಮನವಿ ಪತ್ರದಲ್ಲೇನಿದೆ?

ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು,‌ ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.

ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.

ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ‌ಬಿಪಿಎಲ್‌ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್‌. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.

ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್!‌ 90 ರೂಪಾಯಿ ಮಿನಿಮಮ್ ಚಾರ್ಜ್‌ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?

ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

ಚಿನ್ನದ ಬೆಲೆಗಳು ಇಂದು ಮತ್ತೆ ಇಳಿದಿವೆ. ನಿನ್ನೆಯೂ ಇಳಿದಿತ್ತು. ಅಕ್ಷಯ ತದಿಗೆಯಂದು ನಡೆದ ಭಾರಿ ಏರಿಕೆ ಹಾಗೂ ವ್ಯಾಪಾರದ ಬಳಿಕ ಬಂಗಾರದ ಬೆಲೆ (Gold Rate Today) ಬೆಂಗಳೂರಿನಲ್ಲಿ ಇಳಿಯುತ್ತಿದೆ.

VISTARANEWS.COM


on

gold rate today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹40 ಹಾಗೂ ₹43 ಇಳಿಕೆಯಾಗಿವೆ. ಅಕ್ಷಯ ತದಿಗೆಯಂದು ಚಿನ್ನ ಬೆಳ್ಳಿ ದರಗಳು ತೀವ್ರವಾಗಿ ಏರಿಕೆ ಕಂಡಿದ್ದವು. ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ವ್ಯಾಪಾರ ಆಗಿತ್ತು. ಇಂದು ಅದು ಹಿಂದಿನ ಸ್ಥಿತಿಗೆ ಮರಳಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,675ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,400 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,750 ಮತ್ತು ₹6,67,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,282 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,256 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,820 ಮತ್ತು ₹7,28,200 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹86, ಎಂಟು ಗ್ರಾಂ ₹688 ಮತ್ತು 10 ಗ್ರಾಂ ₹860ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,600 ಮತ್ತು 1 ಕಿಲೋಗ್ರಾಂಗೆ ₹86,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ66,90072,970
ಮುಂಬಯಿ66,750 72,820
ಬೆಂಗಳೂರು66,750 72,820
ಚೆನ್ನೈ66,90072,980

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Rate Today: ವೀಕೆಂಡ್‌ನಲ್ಲಿ ಬೆಲೆ ಏರಿಕೆ ಕಾಣದ ಚಿನ್ನ, ಈಗಲೇ ಖರೀದಿಸಿದರೆ ಚೆನ್ನ

Continue Reading

ಬೆಂಗಳೂರು

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Karnataka Rain: ಸೋಮವಾರ ರಾತ್ರಿ ಸುರಿದ ಮಳೆಗೆ (Heavy Rain) ಜನರು ಕಂಗಲಾಗಿದ್ದಾರೆ. ಹಲವೆಡೆ ಭಾರಿ ಮಳೆಗೆ (Karnataka Weather) ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಜಾಗರಣೆ ಮಾಡುವಂತಾಯಿತು.

VISTARANEWS.COM


on

By

karnataka Rain Effected
Koo

ಬೆಂಗಗಳೂರು/ಬೆಳಗಾವಿ: ತಡರಾತ್ರಿ ಸುರಿದ ಮಳೆಯು (Karnataka Rain) ಅವಾಂತರವನ್ನೇ ಸೃಷ್ಟಿಸಿ ಮಾಡಿದೆ. ಬೆಂಗಳೂರಿನಲ್ಲಿ ರಾತ್ರಿ ಪೂರ್ತಿ ಅಬ್ಬರಿಸಿದ ಮಳೆಗೆ (Rain News) ಮರಗಳು ಧರೆಗುರುಳಿದ್ದವು. ನೃಪತುಂಗದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎದುರಿಗೆ ಮರದ ಕೊಂಬೆ ನೆಲಕ್ಕೆ ಉರುಳಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಬುಕ್‌ಫೀಲ್ಡ್‌ನಲ್ಲಿ ಮರ ಬಿದ್ದು ಕಾರೊಂದು ಜಖಂಗೊಂಡಿತ್ತು. ಚಾಮರಾಜಪೇಟೆಯ ಗುಡ್ಡದಹಳ್ಳಿಯಲ್ಲಿ ಮನೆಗಳಿಗೆ ಕೆಸರುಮಯ ನೀರು ನುಗ್ಗಿದ್ದರಿಂದ ಹೊರಹಾಕಲು ಜನರು ತೊಂದರೆ ಅನುಭವಿಸಿದರು.

ಮೈಸೂರಿನಲ್ಲಿ ಕುಸಿದು ಬಿದ್ದ ಮನೆ

ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಮನೆ ಕುಸಿದು ಬಿದ್ದಿದ್ದು, ವಾಸ ಮಾಡಲು ಮನೆ ಇಲ್ಲದೆ ಭಾಗ್ಯಮ್ಮ ಕಣ್ಣೀರು ಹಾಕಿದರು. ಮನೆಯಲ್ಲಿ ಸುಮಾರು 6 ತಿಂಗಳು ಸಣ್ಣ ಮಗುವಿದ್ದು ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಕುಟುಂಬವು ಕಂಗಲಾಗಿದೆ. ಮನೆಯಲ್ಲಿದ್ದ ಸಾಮಾನುಗಳು ನಾಶವಾಗಿವೆ. ನಮಗೆ ಆದಷ್ಟು ಬೇಗ ಸರ್ಕಾರ ಪರಿಹಾರ ಮಾಡಿಕೊಡಬೇಕು ಎಂದು ಭಾಗ್ಯಮ್ಮ ಮನವಿ ಮಾಡಿದರು.

ವಿಜಯನಗರದಲ್ಲಿ ಮಳೆಗೆ ಬೆಳೆ ಹಾನಿ

ಕಳೆದ ರಾತ್ರಿ ಮಳೆ ಜೆತಗೆ ಬಿರುಗಾಳಿ ಬೀಸಿದ ಹಿನ್ನೆಲೆಯಲ್ಲಿ ಬಾಳೆ, ಭತ್ತ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ವಿಜಯನಗರದ ಹುರುಳಿಹಾಳ ಗ್ರಾಮದಲ್ಲಿ ಗಾಳಿ ಪ್ರಮಾಣ ಹೆಚ್ಚಿದರಿಂದ ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ಕಾನಾಹೊಸಹಳ್ಳಿ ಹೋಬಳಿಯ ಎಕ್ಕೆಗೊಂದಿ ಗ್ರಾಮದಲ್ಲಿ ರೇಷ್ಮೆ ಸಾಗಾಣೆ ಮನೆಗೆ ಹಾನಿಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಗುಡುಗು, ಮಿಂಚು ಸಿಡಿಲಿನ ಆರ್ಭಟ ಮಧ್ಯೆ ಸಾಧಾರಣ ಮಳೆ ವರದಿಯಾಗಿದೆ.

ಧರೆಗುರುಳಿದ ಮರಗಳು

ಚಿಕ್ಕೋಡಿ ಗಡಿ ತಾಲೂಕು ನಿಪ್ಪಾಣಿಯಲ್ಲಿ ರಣ ಗಾಳಿ-ಮಳೆಗೆ ಸಿಕ್ಕಿ ನಲುಗಿದೆ. ನಿಪ್ಪಾಣಿ ನಗರದ ವಿವಿಧೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ನಿಪ್ಪಾಣಿಯ ಭೀಮನಗರ,ವಿದ್ಯಾನಗರ,ಅಂಬೇಡ್ಕರ್ ನಗರದ ಹತ್ತಿರ ಮರಗಳು ಬಿದ್ದಿವೆ. ಮುನ್ಸಿಪಲ್ ಹೈಸ್ಕೂಲ್,ಅಬಕಾರಿ ಫೀಸ್ ಸೇರಿದಂತೆ ವಿವಿಧೆಡೆ ಹಾನಿಯಾಗಿದೆ. ಭಾರಿ ಗಾಳಿಗೆ ವಿದ್ಯುತ್ ಕಂಬಗಳು ವಾಲಿದರೆ, ಮನೆಯ ಚಾವಣೆ ಹಾರಿ ಹೋಗಿವೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವಾಹನ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಹಾನಿಯಾದ ಪ್ರದೇಶಗಳಿಗೆ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಿಪ್ಪಾಣಿ ನಗರ ತತ್ತರಿಸಿದೆ. ಭಾರಿ ಮಳೆಗೆ 20 ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿದೆ. ಪತ್ರಾಸ್ ಶೇಡ್ ಹಾಗೂ ಹಂಚಿನ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಭಾರಿ ಮಳೆ ಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಮರಗಳ ಜತೆಗೆ ನಗರದಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿವೆ. ಮರಗಳು ಬಿದ್ದು 10 ಕ್ಕೂ ಹೆಚ್ಚು ವಾಹನಗಳು ಸಹ ಜಖಂಗೊಂಡಿವೆ. ಕಳೆದ ರಾತ್ರಿಯಿಂದ ನಿಪ್ಪಾಣಿ ನಗರದಲ್ಲಿ ವಿದ್ಯುತ್ ಕಟ್ ಆಗಿದೆ. ನಿಪ್ಪಾಣಿ ನಗರಸಭೆಯಿಂದ ಮರಗಳ ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿಪ್ಪಾಣಿ ನಗರಸಭೆ ಅಧಿಕಾರಿಗಳು ಹಾನಿಯಾದ ಮನೆಗಳ ಸರ್ವೆಗೆ ಮುಂದಾಗಿದ್ದಾರೆ. ನಿಪ್ಪಾಣಿ ಪಟ್ಟಣದ ಅಂಬೇಡ್ಕರ್ ಗಲ್ಲಿಗೆ ಭೀಮ ನಗರ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

ಆನೇಕಲ್‌ನಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಮನೆಗಳಿಗೆ ಹಾಗೂ ಬಡಾವಣೆಗಳಿಗೆ ಕೊಳಚೆ ನೀರು ನುಗ್ಗಿದೆ. ಚರಂಡಿ-ರಾಜಕಾಲುವೆ ವ್ಯವಸ್ಥೆ ಸರಿ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ನೀರಿನಲ್ಲಿ ನಿವಾಸಿಗಳು ಕಾಲ ಕಳೆದಿದ್ದಾರೆ. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಮನೆಯೊಳಗೆ ನುಗ್ಗಿದ ಕೊಳಚೆ ನೀರನ್ನು ಸ್ವಚ್ಛ ಮಾಡುವುದರಲ್ಲಿ ದಿನದೂಡುತ್ತಿದ್ದಾರೆ.

ವಿಜಯನಗರದಲ್ಲಿ ವರುಣನ ಕೃಪೆಗಾಗಿ ಜಪ – ತಪ

ಜಪ – ತಪ ಮಾಡಿದ ಕೇವಲ ಎಂಟು ದಿನದಲ್ಲಿ ವರುಣನ ಆಗಮನವಾಗಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ವಿಜಯನಗರದ ಹೊಸಪೇಟೆ ತಾಲೂಕಿನಲ್ಲಿ ಮಳೆ ಸುರಿದಿದೆ. ಭೀಕರ ಬರಗಾಲ, ಬಿಸಿಲಿನ ಧಗೆಯಿಂದ ಜನರು ಆಂಜನೇಯನ ಮೊರೆ ಹೋಗಿದ್ದರು. ಮಳೆಗಾಗಿ ನೂರಾರು ವರ್ಷ ಹಳೆಯದಾದ ಐತಿಹಾಸಿಕ ಹಿನ್ನೆಲೆವೊಳ್ಳ ಆಂಜನೇಯನಿಗೆ ಮಳೆಗಾಗಿ ನಿತ್ಯ ಪೂಜೆ, ಭಜನೆ ಮಾಡುತ್ತಿದ್ದರು. ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರೋ ಐತಿಹಾಸಿಕ ಆಂಜನೇಯ ದೇಗುಲವನ್ನು ವಿಜಯನಗರ ಅರಸರ ಕಾಲದಿಂದಲೂ ವಿಶೇಷ ಸಲ್ಲಿಕೆ ಮಾಡುತ್ತಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತ ನೀರು

ಧಾರಾಕಾರ ಮಳೆಗೆ ಹಳೇ ಮೈ-ಬೆಂ ಹೆದ್ದಾರಿಯಲ್ಲಿ ಜಲಾವೃತಗೊಂಡಿತ್ತು. ಶ್ರೀರಂಗಪಟ್ಟಣದ ಅಗ್ನಿಶಾಮಕ ದಳದ ಎದುರಿನ ಮೈ- ಬೆಂ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಮೂರು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಹೆದ್ದಾರಿಯಲ್ಲಿ ತೆರಳಲಾಗದೆ ಬೈಕ್ ಸವಾರರು ಬದಲಿ ರಸ್ತೆಯಲ್ಲಿ ಸಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Bomb Hoax: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್, ತಪಾಸಣೆ

Bomb Hoax: ಇಂದು ಬೆಳಗ್ಗೆ ಏಳೂವರೆಗೆ ಶಾಲಾ ಸಿಬ್ಬಂದಿ ಕಚೇರಿ ಒಪನ್‌ ಮಾಡಿದ್ದರು. ಈ ವೇಳೆ ಮೇಲ್ ಬಂದಿರುವುದು ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾತ್ರಿ ಸುಮಾರು 12.20ರ ಸುಮಾರಿಗೆ ಬಾಂಬ್ ಬೆದರಿಕೆಯ ಮೇಲ್ ರವಾನೆಯಾಗಿದೆ.

VISTARANEWS.COM


on

bomb hoax bengaluru
Koo

ಬೆಂಗಳೂರು: ರಾಜಧಾನಿಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇಮೇಲ್‌ (Bomb Hoax, bomb threat Email) ಬಂದಿದೆ. ಅಮೃತಹಳ್ಳಿಯ ಕೆಂಪಾಪುರದಲ್ಲಿರುವ ಜೈನ್ ಹೆರಿಟೇಜ್‌ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ನಿನ್ನೆ ಮಧ್ಯರಾತ್ರಿ ಬಾಂಬ್ ಬೆದರಿಕೆ ಇಮೇಲ್ ಅನ್ನು ದುಷ್ಕರ್ಮಿಗಳು (miscreants) ಕಳಿಸಿದ್ದಾರೆ.

ಇಂದು ಬೆಳಗ್ಗೆ ಏಳೂವರೆಗೆ ಶಾಲಾ ಸಿಬ್ಬಂದಿ ಕಚೇರಿ ಒಪನ್‌ ಮಾಡಿದ್ದರು. ಈ ವೇಳೆ ಮೇಲ್ ಬಂದಿರುವುದು ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾತ್ರಿ ಸುಮಾರು 12.20ರ ಸುಮಾರಿಗೆ ಬಾಂಬ್ ಬೆದರಿಕೆಯ ಮೇಲ್ ರವಾನೆಯಾಗಿದೆ. ಶಾಲೆಗೆ ಸ್ಥಳೀಯ ಪೊಲೀಸರು, ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಸದ್ಯ ಪೊಲೀಸರಿಂದ ಪರಿಶೀಲನೆ ಮುಂದುವರಿದಿದೆ. ಪರಿಶೀಲನೆಯಲ್ಲಿ ಇದೊಂದು ಹುಸಿ ಬಾಂಬ್ ಮೇಲ್ ಎನ್ನುವುದು ಧೃಢವಾಗಿದೆ.

ಕಳೆದ ವರ್ಷ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಇದು ಕೂಡ ಹುಸಿಯಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ಹತ್ತಾರು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದು, ಆ ಎಲ್ಲ ಶಾಲೆಗಳ ಮಕ್ಕಳಿಗೂ ರಜೆ ನೀಡಿ ಆವರಣ ತಲಾಶ್‌ ಮಾಡಲಾಗಿತ್ತು. ಇದು ಕೂಡ ಹುಸಿ ಎಂದು ಕಂಡುಬಂದಿತ್ತು. ಹೀಗೆ ಬೆದರಿಕೆ ಇಮೇಲ್‌ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇತ್ತೀಚೆಗೆ ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಹೀಗೆ ಬೆದರಿಕೆ ಮೇಲ್‌ ಮಾಡುತ್ತಿರುವವರ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ದೇಶದ ಸರ್ವರ್‌ ಕನೆಕ್ಷನ್‌ ತಪ್ಪಿಸಿ ವಿಪಿಎನ್‌ ಮೂಲಕ ಕಾರ್ಯಾಚರಿಸಿ ವಿದೇಶಗಳ ಸರ್ವರ್‌ನಿಂದ ಬಂದಂತೆ ತೋರಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಹೀಗಾಗಿ ಇದನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ. ಒಂದು ಶಾಲೆಗೆ ಮಾತ್ರ ಬೆದರಿಕೆ ಮೇಲ್‌ ಬಂದಿರುವ ಹಿನ್ನೆಲೆಯಲ್ಲಿ, ವೈಯಕ್ತಿಕ ದ್ವೇಷ ಕಾರ್ಯಾಚರಿಸಿರಬಹುದು ಎಂದು ಶಂಕಿಸಲಾಗಿದೆ.

ಕೋರ್ಟ್‌ ಇಂಜಂಕ್ಷನ್‌ ಇರುವ ಜಮೀನಿಗೆ ಕಾಲಿಟ್ಟಿದ್ದಕ್ಕೆ ಕುಡುಗೋಲಿನಿಂದ ಕಡಿದು ಕೊಂದರು!

ಶಿವಮೊಗ್ಗ: ತಾಲೂಕಿನ ದುಮ್ಮಳ್ಳಿ ಗ್ರಾಮದ ಒಂದು ಜಮೀನು (Land dispute) ಹಲವು ವರ್ಷಗಳಿಂದ ವಿವಾದದಲ್ಲಿತ್ತು. ಈ ಹಿನ್ನೆಲೆಯಲ್ಲಿ ಇಂಜಂಕ್ಷನ್‌ ಆರ್ಡರ್‌ (Injenction Order) ಅನ್ನು ಸಹ ತರಲಾಗಿತ್ತು. ಇಷ್ಟಾದರೂ ಈ ಜಮೀನಿಗೆ ಪ್ರವೇಶ ಮಾಡಿದ್ದಾನೆ ಎಂಬ ಕಾರಣಕ್ಕೆ ಇನ್ನೊಂದು ಕಡೆಯ ಗುಂಪಿನವರು ದಾಳಿ ನಡೆಸಿ ಕುಡುಗೋಲು ಬೀಸಿ ಕೊಂದು (Murder case) ಹಾಕಿದ್ದಾರೆ.

ಜಮೀನು ವಿವಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಾಡಹಗಲೇ ಕೊಲೆ ನಡೆದಿದೆ. ಇಂಜಂಕ್ಷನ್‌ ಆರ್ಡರ್ ಇದ್ದ ಜಮೀನಿಗೆ ತೆರಳಿದ್ದ ಸತೀಶ್ ನಾಯ್ಕ (28) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ಈ ಜಮೀನು ವಿವಾದದಲ್ಲಿತ್ತು. ಯಾರೂ ಕೂಡ ಜಮೀ‌ನಿನೊಳಗೆ ತೆರಳದಂತೆ ಇಂಜಂಕ್ಷನ್‌ ಆದೇಶವನ್ನು ತರಲಾಗಿತ್ತು. ಆದರೆ, ಸೋಮವಾರ ಬೆಳಗ್ಗೆ ಸತೀಶ್ ನಾಯ್ಕ ಜಮೀನಿಗೆ ತೆರಳಿದ್ದರು. ಈ ವೇಳೆ ಅಖಿಲೇಶ್‌ ಹಾಗೂ ಕೆಲವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ತೀವ್ರ ವಾಗ್ವಾದಗಳು ನಡೆದಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ.

ಗಲಾಟೆ ಜೋರಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಅಖಿಲೇಶ್‌ ಗುಂಪಿನವರಲ್ಲೊಬ್ಬರು ಸ್ಥಳದಲ್ಲಿದ್ದ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ. ಮತ್ತೆ ಕೆಲವರು ಕೈಯಿಂದಲೇ ಗುದ್ದಿದ್ದಾರೆ. ಬಹಳಷ್ಟು ಜನ ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡ ಸತೀಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್‌ ವಾರ್‌ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಯೆಬ್ ಅಲಿಯಾಸ್ ಸೇಬು‌, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಯೆಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Continue Reading

ಪ್ರಮುಖ ಸುದ್ದಿ

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

‌Prajwal Revanna Case: ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

VISTARANEWS.COM


on

HD Deve gowda prajwal revanna case
Koo

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರು ಇಂದು ಜಾಮೀನಿನಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಕುಟುಂಬಕ್ಕೆ ಆಗಿರುವ ಅವಮಾನದ ಸೇಡು ತೀರಿಸಿಕೊಳ್ಳಲು ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Deve Gowda) ಸಜ್ಜಾಗಿದ್ದಾರೆ. ಸದಾ ನೀಟ್‌ ಶೇವ್‌ ಮಾಡಿಕೊಳ್ಳುವ ದೇವೇಗೌಡರು ಮಗ ಜೈಲುಪಾಲಾದ ಬಳಿಕ ಮೊದಲ ಬಾರಿಗೆ ಗಡ್ಡ ಬಿಟ್ಟಿದ್ದು, ಇದೀಗ ಎದುರಾಳಿಗಳನ್ನು ಎದುರಿಸಲು ಎದ್ದು ಕೂತಿದ್ದಾರೆ.

ಇಂದು ರೇವಣ್ಣ ಮನೆಗೆ

ಹನ್ನೊಂದು ದಿನಗಳ ಹಿಂದೆ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಆರೆಸ್ಟ್ ಆಗಿದ್ದ ಎಚ್‌.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ಸಿಗುವವರೆಗೂ ಬಿಡುಗಡೆ ದೊರೆಯುವುದಿಲ್ಲ. ಬೆಳಿಗ್ಗೆ ಹತ್ತುವರೆಗೆ ಕೋರ್ಟ್ ಕಲಾಪ ಆರಂಭವಾಗಲಿದ್ದು, ಹತ್ತುವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಜೈಲರ್‌ ಬರಲಿದ್ದಾರೆ. ರೇವಣ್ಣ ಪರ ವಕೀಲರಿಂದ ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ನೀಡಿ ಹನ್ನೊಂದು ಗಂಟೆ ಬಳಿಕ ಬಿಡುಗಡೆ ಸಾಧ್ಯತೆ ಇದೆ. ಬಹುತೇಕ ಅಭಿಜಿನ್ ಮುಹೂರ್ತ 11.40ರ ಸಮಯದಲ್ಲಿ ಬಿಡುಗಡೆ ಸಾಧ್ಯತೆ ಇದೆ.

ರೇವಣ್ಣ ಬಿಡುಗಡೆ ಬಳಿಕ ನೇರವಾಗಿ ಪದ್ಮನಾಭ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ರೇವಣ್ಣ ಬಿಡುಗಡೆಯಿಂದ ಗೌಡರ ಕುಟುಂಬದಲ್ಲಿ ಸಂತೋಷ ಮೂಡಿದ್ದು, ಬಿಡುಗಡೆ ‌ಬಳಿಕ ತಂದೆ ದೇವೇಗೌಡರು, ಹೆಚ್‌ಡಿಕೆ ಸೇರಿ ಕುಟುಂಬ ಸದಸ್ಯರ ಜೊತೆಗೆ ರೇವಣ್ಣ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಾಜಿ ಪಿಎಂ ಎಚ್.ಡಿ ದೇವೇಗೌಡರ ಆಶೀರ್ವಾದ ಪಡೆದು ಬಳಿಕ ಮುಂದಿನ ಕೆಲಸಗಳಿಗಾಗಿ ಹಾಸನ ಕಡೆ ಹೊರಡಲಿದ್ದಾರೆ.

ಹನ್ನೊಂದು ದಿನಗಳ ಸಂಕಷ್ಟದ ಮೂಡ್‌ನಿಂದ ಇಂದು ಹೊರಬಂದಿರುವ ದೇವೇಗೌಡರು, ನಿನ್ನೆ ರಾತ್ರಿ ಒಂದು ಗಂಟೆವರೆಗೂ ತಮ್ಮ ಮಕ್ಕಳೊಂದಿಗೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಮಾಜಿ ಸಿಎಂ ಎಚ್‌ಡಿಕೆ ಸೇರಿದಂತೆ ದೇವೇಗೌಡರ ಪುತ್ರಿಯರು ಸಹ ಇದರಲ್ಲಿ ಭಾಗಿಯಾಗಿದ್ದರು. ಇಂದು ಮನೆಯಲ್ಲಿ ಹಬ್ಬದ ವಾತಾವರಣವಿದ್ದು, ನಿನ್ನೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

“ಪೆನ್ ಡ್ರೈವ್ ಪ್ರಕರಣದಿಂದ ಈಗಾಗಲೇ ನಮ್ಮ ಕುಟುಂಬದ ಮಾನ ಬೀದಿಗೆ ಬಂದಿದೆ. ಲೋಕಸಭೆ ‌ಚುನಾವಣೆ ಹೊತ್ತಿನಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೇವೆ. ಈ ಹೊತ್ತಲ್ಲಿ ರಾಜಕೀಯ ಹೇಳಿಕೆ ಸೇರಿದಂತೆ ಯಾವುದಕ್ಕೂ ಹೇಳಿಕೆ ನೀಡಬೇಡಿ. ಹೆಚ್ಚು ಮಾತನಾಡಬೇಡಿ” ಎಂದು ದೇವೇಗೌಡರು ಮಕ್ಕಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಎಚ್ಚರಿಸಿದ್ದಾರೆ.

ಸರ್ಕಾರದ ವಿರುದ್ಧ ಯಾವ ಅಸ್ತ್ರ?

ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

ಈ ನಿಟ್ಟಿನಲ್ಲಿ ತಂತ್ರ ರೆಡಿಯಾಗುತ್ತಿದ್ದು, ರಾಜಕೀಯ, ಸಾಮಾಜಿಕ ಎಲ್ಲ ನೆಲೆಗಳಲ್ಲೂ ಎದುರಾಳಿಗಳಿಗೆ ಕೌಂಟರ್‌ ಕೊಡಲು ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂರು ಅಸ್ತ್ರಗಳು ತಯಾರಾಗುತ್ತಿವೆ ಎನ್ನಲಾಗಿದೆ.

ಅಸ್ತ್ರ – 1: ಡಿಕೆಶಿ ಸಿದ್ದರಾಮಯ್ಯ ವಿರುದ್ಧ ಪ್ರಯೋಗ

ಒಕ್ಕಲಿಗ ಸಮುದಾಯದ ಮುಂದೆ ಡಿಕೆಶಿಯನ್ನು ವಿಲನ್ ಮಾಡುವುದು, ದೇವೇಗೌಡರ ಫ್ಯಾಮಿಲಿಯನ್ನು ಜೈಲಿಗೆ ಕಳುಹಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಂತ ಬಿಂಬಿಸುವುದು ಈ ಅಸ್ತ್ರ. ಡಿಕೆಶಿಗೆ ದೇವೇಗೌಡರ ಕುಟುಂಬ ನೋಡಿದರೆ ಆಗಲ್ಲ. ಹೀಗಾಗಿ ಪೆನ್ ಡ್ರೈವ್ ಕೇಸ್‌ನಲ್ಲಿ ನಮ್ಮನ್ನು ಸಿಕ್ಕಿ ಹಾಕಿಸಿದ್ದಾರೆ. ಸಿದ್ದರಾಮಯ್ಯಗೆ ಒಕ್ಕಲಿಗ ಸಮುದಾಯ ಕಂಡರೆ ಆಗಲ್ಲ ಅಂತ ಬಿಂಬಿಸುವುದು, ರಾಜ್ಯಾದ್ಯಂತ ಸರ್ಕಾರದ ನಡೆ ವಿರುದ್ಧ ಮೈತ್ರಿ ಪಕ್ಷದ ಜತೆ ಜನಾಭಿಪ್ರಾಯ ಸಂಗ್ರಹಿಸುವುದು, ಇವರ ತಪ್ಪು ಮರೆ ಮಾಚಲು ಪೆನ್ ಡ್ರೈವ್ ಪ್ರಕರಣ ತಂದರು ಅಂತ ಪ್ರಚಾರ ಮಾಡುವುದು ಇತ್ಯಾದಿಗಳ ಮೂಲಕ ಮುಗಿಬೀಳುವುದು.

ಅಸ್ತ್ರ – 2: ಭ್ರಷ್ಟಾಚಾರದ ಪ್ರಸ್ತಾಪ

ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಈ ಹಿಂದೆ ಸರ್ಕಾರದ ಸಚಿವರ ವರ್ಗಾವಣೆ ದಂಧೆ ಸಂಬಂಧ ಇದೆ ಎನ್ನಲಾದ ಪೆನ್ ಡ್ರೈವ್ ಅಸ್ತ್ರ ಪ್ರಯೋಗ ಮಾಡುವುದು ಪ್ಲಾನ್‌ನಲ್ಲಿದೆ.

ಅಸ್ತ್ರ – 3: ಕಾನೂನು ಅಸ್ತ್ರಗಳು

ಡಿಕೆಶಿ ವಿರುದ್ಧ ಇರುವ, ಕೇಂದ್ರ ತನಿಖಾ ಏಜೆನ್ಸಿಗಳ ಮುಂದೆ ದಾಖಲಾಗಿರುವ ಪ್ರಕರಣಗಳಿಗೆ ಮರುಜೀವ ಕೊಡಿಸುವುದು, ಡಿಕೆಶಿಗೆ ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಾಗುವಂತೆ ನೋಡಿಕೊಳ್ಳುವುದು, ಈ ಬಗ್ಗೆ ಕೇಂದ್ರದ ಮುಂದೆ ಇನ್ನಷ್ಟು ದಾಖಲೆ ನೀಡಿ ಮೈತ್ರಿ ಪಕ್ಷದ ಬೆಂಬಲ ಪಡೆಯುವುದು ಈ ಪ್ಲಾನ್‌ನಲ್ಲಿದೆ.

ಇದನ್ನೂ ಓದಿ: HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Continue Reading
Advertisement
gold rate today
ಚಿನ್ನದ ದರ6 mins ago

Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

pm narendra modi nomination varanasi
ಪ್ರಮುಖ ಸುದ್ದಿ45 mins ago

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

karnataka Rain Effected
ಬೆಂಗಳೂರು54 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Viral Video
ವೈರಲ್ ನ್ಯೂಸ್55 mins ago

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Salman Khan
ಬಾಲಿವುಡ್1 hour ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

RCB Vs CSK
ಕ್ರೀಡೆ1 hour ago

RCB vs CSK: ಆರ್​ಸಿಬಿ ಪ್ಲೇ ಆಫ್​ ಹಾದಿಗೆ ಕೊಳ್ಳಿ ಇಡಲಿದೆಯೇ ಮಳೆ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

Narendra Modi
ದೇಶ1 hour ago

Narendra Modi Live: ವಾರಾಣಸಿಯಲ್ಲಿ ನಮೋ ನಾಮಿನೇಶನ್‌; ಹ್ಯಾಟ್ರಿಕ್‌ ಗೆಲುವಿನ ಹುಮ್ಮಸ್ಸಿನಲ್ಲಿ ಮೋದಿ

bomb hoax bengaluru
ಕ್ರೈಂ2 hours ago

Bomb Hoax: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್, ತಪಾಸಣೆ

Team India Coach
ಕ್ರಿಕೆಟ್2 hours ago

Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

Job Alert
ಉದ್ಯೋಗ2 hours ago

Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effected
ಬೆಂಗಳೂರು54 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ8 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ18 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ18 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ18 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ19 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ19 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

ಟ್ರೆಂಡಿಂಗ್‌