New Year 2023 | ಚರ್ಚ್‌ ಸ್ಟ್ರೀಟ್‌ನಲ್ಲಿ ಯುವತಿಯಿಂದ ಅಪ್ಪಿಕೋ ಅಭಿಯಾನ; ಪೋಸ್ಟರ್‌ ಹಿಡಿದವರನ್ನು ಅಟ್ಟಿದ ಪೊಲೀಸರು - Vistara News

New year 2023

New Year 2023 | ಚರ್ಚ್‌ ಸ್ಟ್ರೀಟ್‌ನಲ್ಲಿ ಯುವತಿಯಿಂದ ಅಪ್ಪಿಕೋ ಅಭಿಯಾನ; ಪೋಸ್ಟರ್‌ ಹಿಡಿದವರನ್ನು ಅಟ್ಟಿದ ಪೊಲೀಸರು

Free hug | ನ್ಯೂಇಯರ್‌ (New Year 2023) ಹಿನ್ನೆಲೆಯಲ್ಲಿ ಫ್ರೀ ಹಗ್‌ ಎಂಬ ಬರಹವುಳ್ಳ ಪೋಸ್ಟರ್‌ ಹಿಡಿದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಹೊಸ ಹುಚ್ಚಾಟ ಮಾಡಲು ಮುಂದಾಗಿದ್ದಳು. ಇದಕ್ಕೆ ಈಗ ಪೊಲೀಸರು ತಡೆ ಹಿಡಿದಿದ್ದಾರೆ.

VISTARANEWS.COM


on

free hug
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಲ್ಲಿನ ಚರ್ಚ್‌ ಸ್ಟ್ರೀಟ್‌ನಲ್ಲಿ Free hug (ಅಪ್ಪಿಕೋ) ಎಂದು ಪೋಸ್ಟರ್‌ ಹಿಡಿದು ಅಭಿಯಾನವನ್ನು ಯುವತಿಯೊಬ್ಬಳು ಮಾಡಿದ ಘಟನೆ ನಡೆದಿದೆ. ಹೊಸ ವರ್ಷವನ್ನು (New Year 2023) ಸ್ವಾಗತಿಸಲು ರಾಜಧಾನಿ ಬೆಂಗಳೂರಿಗರು ಸಜ್ಜಾಗಿದ್ದಾರೆ.

New Year 2023

ಚರ್ಚ್‌ ಸ್ಟ್ರೀಟ್‌, ಎಂ.ಜಿ. ರೋಡ್‌ ಸೇರಿ ವಿವಿಧೆಡೆ ಸಂಭ್ರಮ ಮನೆ ಮಾಡಿದೆ. ವೀಕೆಂಡ್‌ನಲ್ಲಿಯೇ ಹೊಸ ವರ್ಷ ಬಂದಿರುವುದರಿಂದ ಚರ್ಚ್‌ ಸ್ಟ್ರೀಟ್‌ನತ್ತ ಯುವಕ-ಯುವತಿಯರು ಹೆಜ್ಜೆ ಹಾಕುತ್ತಿದ್ದಾರೆ.

New Year 2023

ಇತ್ತ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಲ ಯುವಕ-ಯುವತಿಯರು ಚರ್ಚ್ ಸ್ಟ್ರೀಟ್‌ ಬಳಿ Free hug ಅಭಿಯಾನವನ್ನು ಮಾಡಿದರು. Free hug ಎಂದು ಪೋಸ್ಟರ್ ಹಿಡಿದು ನಿಂತಿದ್ದ ಯುವತಿಯನ್ನು ಕಂಡೊಡನೆ, ಎಚ್ಚೆತ್ತ ಕಬ್ಬನ್‌ ಪಾರ್ಕ್‌ ಪೊಲೀಸರು ಸ್ಥಳಕ್ಕಾಗಮಿಸಿ ಬುದ್ಧಿವಾದ ಹೇಳಿ ಕಳಿಸಿದ್ದಾರೆ.

New Year 2023

ಹಿಂದೊಮ್ಮೆ ಕೆಲ ಪುಂಡರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ನಡೆದಿತ್ತು. ಹೀಗಾಗಿ ಇಂತಹ ಹುಚ್ಚು ಅಭಿಯಾನ ಮಾಡಿದರೆ ಅಂತಹ ಪುಂಡರನ್ನು ಬರಮಾಡಿಕೊಂಡಂತೆ ಆಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಯುವತಿ ಹಾಗೂ ಸಂಗಡಿಗರ ಬಳಿ ಇದ್ದ ಪೋಸ್ಟರ್‌ ಕಸಿದು, ಅವರನ್ನು ಅಲ್ಲಿಂದ ಕಳಿಸಲಾಗಿದೆ.

new year 2023 free hug

ವಿದೇಶಗಳಲ್ಲಿ ಇಂತಹ ಪೋಸ್ಟರ್‌ ಅಭಿಯಾನಗಳು ಸಾಮಾನ್ಯವಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಯುವ ಜನತೆಯನ್ನು ಸೆಳೆಯುತ್ತದೆ. ಅಲ್ಲದೆ, ಸಹಾಯ ಕೇಳಿ ಪೋಸ್ಟರ್‌ ಹಿಡಿದು ಅಭಿಯಾನ ನಡೆದರೆ ಜನ ಬೆಂಬಲ ಇರುತ್ತದೆ. ಇಲ್ಲಿ ದೇಶೀಯ ಪರಂಪರೆ ಬಿಟ್ಟು ಯುವತಿಯೊಬ್ಬಳು ವಿದೇಶಿ ಸಂಪ್ರದಾಯವನ್ನು ಅನುಸರಿಸಲು ಹೊರಟಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಹಿಂದು ಸಂಘಟನೆಯವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | New Year 2023 | ಕ್ರೀಡಾಕೂಟದ ವೇಳಾಪಟ್ಟಿ 2023; ಎಲ್ಲಿ, ಯಾವಾಗ ನಡೆಯುತ್ತವೆ ಕ್ರೀಡಾಕೂಟಗಳು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂರು ದಿನ ಸಂಚರಿಸಲಿದೆ. ಜನವರಿ 6ರಂದು ಹರ್ಯಾಣಕ್ಕೆ ಕಾಲಿಡಲಿದೆ. ಜನವರಿ 20ಕ್ಕೆ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಿ, ಜನವರಿ 30ರಂದು ಕೊನೆಗೊಳ್ಳಲಿದೆ.

VISTARANEWS.COM


on

Congress Leader Rahul Gandhi to address British Parliament
ರಾಹುಲ್ ಗಾಂಧಿ
Koo

ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.

ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್​ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Continue Reading

New year 2023

BMTC Income | ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷಾರಂಭದಲ್ಲಿ ಹರ್ಷ!

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದ ಬಿಎಂಟಿಸಿಗೆ ಮೊದಲ ದಿನವೇ ಭರ್ಜರಿ (BMTC Income) ಆದಾಯ ಗಳಿಸಿದೆ. ನಷ್ಟದ ಸುಳಿಯಲಿ ಸಿಲುಕಿ ನರಳಾಡುತ್ತಿದ್ದ ಬಿಎಂಟಿಸಿಗೆ ಕೊಂಚ ಹರ್ಷ ತಂದಿದೆ.

VISTARANEWS.COM


on

By

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಿಎಂಟಿಸಿ ನಿಗಮಕ್ಕೆ ಈ ಹೊಸ ವರ್ಷ ಕೊಂಚ ಹರ್ಷ ತಂದಿದೆ. ವರ್ಷದ ಮೊದಲ ದಿನ ಬಿಎಂಟಿಸಿಗೆ ಬಂಪರ್ ಆದಾಯ (BMTC Income) ಗಳಿಸಿದೆ. ಹೊಸ ವರ್ಷಕ್ಕೆಂದು ಸುಮಾರು 87 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸಿತ್ತು. ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷದ ಮೊದಲ ದಿನವೇ ಬಂದ ಆದಾಯದ ಕಿಕ್ ಹೆಚ್ಚಿಸಿದೆ.

ಒಂದೇ ದಿನ ಬಿಎಂಟಿಸಿ ಹೆಚ್ಚುವರಿ ಬಸ್ ಕಾರ್ಯಾಚರಣೆಯಿಂದ ₹1,99,983 ಹೆಚ್ಚಿನ ಆದಾಯ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಡಿ.31 ಹಾಗೂ ಜ.1ರ ಮಧ್ಯರಾತ್ರಿವರೆಗೂ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಹೆಚ್ಚುವರಿ ಬಸ್‌ಗಳು ಸುಮಾರು 4443.9 ಕಿ.ಮೀ ನಷ್ಟು ಸಂಚಾರ ಮಾಡಿವೆ. ವರ್ಷದ ಮೊದಲ ದಿನ ಹೆಚ್ಚುವರಿ ಕಾರ್ಯಾಚರಣೆ ಮಾಡಿದ ಬಸ್‌ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣಿಸಿರುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮುಷ್ಕರ-ಕೋವಿಡ್‌ನಿಂದ ಕುಗ್ಗಿದ್ದ ಬಿಎಂಟಿಸಿ
ಮೊದಲೇ ಮುಳುಗುವ ಹಡುಗು ಆಗಿದ್ದ ಬಿಎಂಟಿಸಿ ನಿಗಮಕ್ಕೆ ನೌಕರರ ಸಾಲು ಸಾಲು ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾ ಹೊಡೆತದಿಂದಾಗಿ ಬಸ್‌ ಓಡಾಟ ಇಲ್ಲದೆ ನಷ್ಟನ ಸುಳಿಯಲ್ಲಿ ಸಿಲುಕಿತು. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಬಸ್‌ ಓಡಿಸಿದರೂ ಕಷ್ಟ, ಸುಮ್ಮನೆ ನಿಲ್ಲಿಸಿದರೂ ನಷ್ಟ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಸಿಬ್ಬಂದಿಯ ಸಂಬಳವನ್ನು ನೀಡಲು ಆಗದೆ ನಿಗಮವು ಸರ್ಕಾರದ ಸಹಾಯಹಸ್ತ ಚಾಚಿತ್ತು. ಹಾಗೆ ನೌಕರರ ಪಿಎಫ್‌ ಹಣವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಹೊತ್ತಿತ್ತು. ಇವೆಲ್ಲದರ ನಡುವೆ ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

Continue Reading

New year 2023

Swiggy Order | ಹೊಸ ವರ್ಷದ ಪಾರ್ಟಿಗೆ ಸ್ವಿಗ್ಗಿಯಲ್ಲಿ 3.5 ಲಕ್ಷ ಬಿರ್ಯಾನಿ, 1.76 ಲಕ್ಷ ಚಿಪ್ಸ್‌ ಪ್ಯಾಕೆಟ್‌ ಆರ್ಡರ್!

ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ, ಚಿಪ್ಸ್‌ ಪ್ಯಾಕೆಟ್‌ಗಳನ್ನು ಆರ್ಡರ್‌ (Swiggy Order) ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

VISTARANEWS.COM


on

Swiggy Order On New Years Eve
Koo

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್‌ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್‌ ಮೂಲಕ ಕೋಟ್ಯಂತರ ಜನ ಫುಡ್‌ ಆರ್ಡರ್‌ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್‌ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಲಾಗಿದೆ.

ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್‌ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್‌ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.

ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್‌ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್‌ ಪ್ಯಾಕೆಟ್‌, 2,757 ಪ್ಯಾಕೆಟ್‌ ಡ್ಯುರೆಕ್ಸ್‌ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

Continue Reading

New year 2023

Ras Al Khaimah | 673 ಡ್ರೋನ್‌, 4.7 ಕಿ.ಮೀವರೆಗೆ ಆಗಸದಲ್ಲಿ ಪಟಾಕಿ, ಬೆಳಕಿನ ಚಿತ್ತಾರ, 2 ಗಿನ್ನೆಸ್‌ ದಾಖಲೆ ಬರೆದ ರಸ್‌ ಅಲ್‌ ಖೈಮಾ

ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್‌ ಅಲ್‌ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್‌ ದಾಖಲೆ ಬರೆದಿದೆ.

VISTARANEWS.COM


on

Ras Al Khaimah New Year Celebration
Koo

ಅಬುಧಾಬಿ: ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ, ಹಾಡಿ, ಕುಣಿದು, ನಲಿದು ಹೊಸ ಸಂವತ್ಸರವನ್ನು ಸ್ವಾಗತಿಸಲಾಗಿದೆ. ಹೀಗೆ, ಅದ್ಧೂರಿಯಾಗಿ ಹೊಸ ವರ್ಷಾವನ್ನು ಸ್ವಾಗತಿಸುವ ಮೂಲಕ ಯುಎಇಯ ರಸ್‌ ಅಲ್‌ ಖೈಮಾ (Ras Al Khaimah) ನಗರವು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಹೊಸ ವರ್ಷಾಚರಣೆಗೆ ತಾನೇ ಅಧಿಪತಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಹೌದು, ರಸ್‌ ಅಲ್‌ ಖೈಮಾದಲ್ಲಿ ಶನಿವಾರ ರಾತ್ರಿ 673 ಡ್ರೋನ್‌ಗಳನ್ನು ಬಳಸಿ ಸುಮಾರು 4.7 ಕಿ.ಮೀ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ಕೊನೆಗೆ ಆಗಸದಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌ 2023’ (Happy New Year 2023) ಎಂಬ ಅಕ್ಷರಗಳು ಮೂಡುವ ಮೂಲಕ ಶುಭಕೋರಲಾಗಿದೆ. ಹಾಗಾಗಿ, ರಸ್‌ ಅಲ್‌ ಖೈಮಾದಲ್ಲಿ ಪಟಾಕಿ ಹಾಗೂ ದೀಪಗಳ ಚಿತ್ತಾರ ಮೂಡಿಸಿದ್ದು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಸುಮಾರು 1,100 ಮೀಟರ್‌ ಎತ್ತರದಲ್ಲಿ ಪಟಾಕಿ ಸಿಡಿಸಿ, ವಿದ್ಯುತ್‌ ದೀಪಗಳನ್ನು ಬೆಳಗಲಾಗಿದೆ. ಹೀಗೆ, ಆಗಸದಲ್ಲಿ ಬೆಳಕಿನ ರಂಗಿನಾಟವಿರುವ 12 ನಿಮಿಷದ ವಿಡಿಯೊವನ್ನು ರಸ್‌ ಅಲ್‌ ಖೈಮಾದ ಆಡಳಿತವು ಶೇರ್‌ ಮಾಡಿದೆ.

ಇದಕ್ಕೂ ಮೊದಲು ಸುಮಾರು 458 ಡ್ರೋನ್‌ಗಳನ್ನು ಬಳಸಿ, ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿದ್ದು ಗಿನ್ನೆಸ್‌ ದಾಖಲೆ ಆಗಿತ್ತು. ಈಗ ಈ ದಾಖಲೆಯನ್ನು ರಸ್‌ ಅಲ್‌ ಖೈಮಾ ಮುರಿದಿದೆ. ಹೊಸ ವರ್ಷಾಚರಣೆಗೆ ರಸ್‌ ಅಲ್‌ ಖೈಮಾ ಖ್ಯಾತಿ ಗಳಿಸಿದ್ದು, ಈ ಬಾರಿ 30 ಸಾವಿರಕ್ಕೂ ಅಧಿಕ ಜನ ಹೊಸ ವರ್ಷ ಆಚರಿಸಲು ನಗರಕ್ಕೆ ಆಗಮಿಸಿದ್ದರು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Continue Reading
Advertisement
Rahul Gandi
ದೇಶ1 min ago

Rahul Gandhi : ಸುಳ್ಳು ಹರಡಬೇಡಿ, ಸುಮ್ಮನಿರಿ; ರಾಹುಲ್​ ಗಾಂಧಿಗೆ ಬಹಿರಂಗ ಪತ್ರ ಬರೆದು ಕುಟುಕಿದ ಯೂನಿವರ್ಸಿಟಿಗಳ ಕುಲಪತಿಗಳು

Lok Sabha Election 2024
ಬಾಗಲಕೋಟೆ10 mins ago

Lok Sabha Election 2024: ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು

The Goat Life OTT Release Date Fix
ಒಟಿಟಿ19 mins ago

The Goat Life: ಪೃಥ್ವಿರಾಜ್ ಸುಕುಮಾರನ್ ಅಭಿನಯದ ʻಆಡುಜೀವಿತಂʼ ಒಟಿಟಿ ರಿಲೀಸ್‌ ಎಲ್ಲಿ?

No Diet Day
ಆರೋಗ್ಯ19 mins ago

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

Dead Body Found
ಕ್ರೈಂ25 mins ago

Dead Body Found: ಕಾಫಿ ತೋಟದ ಮಧ್ಯೆ ನೇತಾಡುತ್ತಿತ್ತು ವ್ಯಕ್ತಿ ಶವ; ಕೆರೆಯಲ್ಲಿ ತೇಲಿ ಬಂದ ಅಪರಿಚಿತ

Medical Students
ದೇಶ30 mins ago

Medical Students: ಸಮುದ್ರದಲ್ಲಿ ಮುಳುಗಿ 5 ಮೆಡಿಕಲ್‌ ವಿದ್ಯಾರ್ಥಿಗಳ ಸಾವು!

India's T20 World Cup Jersey
ಕ್ರೀಡೆ38 mins ago

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Job Alert
ಉದ್ಯೋಗ42 mins ago

Job Alert: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ 3,712 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆಯೇ ಕೊನೆಯ ದಿನ

assault case in bengaluru
ಬೆಂಗಳೂರು2 hours ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ23 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ23 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ5 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌