ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್‌; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ - Vistara News

ಕರ್ನಾಟಕ

ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್‌; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ

ರಾಮನಗರದಲ್ಲಿ ಜೆಡಿಎಸ್‌ ವರ್ಸಸ್‌ ಬಿಜಿಪಿ ಸ್ಥಿತಿ ನಿರ್ಮಾಣವಾಗಿದೆ. ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಎಚ್‌ಡಿಕೆ ಅವರನ್ನು ಆಹ್ವಾನ ಮಾಡಿಲ್ಲ ಎಂದು ಆರೋಪ ಮಾಡಲಾಗಿದ್ದು, ಸಿಪಿವೈ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

ramanagara protest 8
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಿ.ಪಿ.ಯೋಗೇಶ್ವರ್‌ ಅವರ ಕಾರಿಗೆ ಜೆಡಿಎಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ: ಜಿಲ್ಲೆಯಲ್ಲಿ ನಡೆಯುತ್ತಿರುವ ಗುದ್ದಲಿ ಪೂಜೆಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬೆನ್ನಲ್ಲೇ ಜೆಡಿಎಸ್‌ ಕಾರ್ಯಕರ್ತರು ಸಿಡಿದೆದ್ದಿದ್ದು, ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌, ಸಚಿವ ಅಶ್ವತ್ಥ ನಾರಾಯಣ ಅವರಿಗೆ ಅಡ್ಡಿಪಡಿಸಿದೆ. ಅಲ್ಲದೆ, ಸಿ.ಪಿ.ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಮೊಟ್ಟೆ ಎಸೆಯಲಾಗಿದೆ. ಉದ್ರಿಕ್ತ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮುಂದೂಡಿದೆ.

ramanagara protest 6
ರಾಂಪುರದಲ್ಲಿ ಉದ್ರಿಕ್ತ ವಾತಾವರಣ

ರಾಮನಗರ ಜಿಲ್ಲೆಯ 5 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಚನ್ನಪಟ್ಟಣದ ಹೊಂಗನೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುದ್ರಿಸಲಾಗಿರುವ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೆಸರನ್ನೂ ಪ್ರಕಟಿಸಲಾಗಿತ್ತು. ಆದರೆ, ಅವರನ್ನು ಆಹ್ವಾನ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕಾರಣದಿಂದ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಪೊಲೀಸರಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌

ಪರಿಸ್ಥಿತಿ ಉದ್ವಿಗ್ನ, ಲಾಠಿ ಚಾರ್ಜ್‌
ಚನ್ನಪಟ್ಟಣ ರಾಂಪುರದಲ್ಲಿ ಗುದ್ದಲಿ ಪೂಜೆಗೆ ಬಿಜೆಪಿ ನಾಯಕರು ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಮುತ್ತಿಗೆ ಹಾಕಿದ ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಭೂಮಿ ಪೂಜೆ ನೆರವೇರಿಸಬಾರದು ಎಂದು ಆಗ್ರಹಿಸಿದರು. ಅಲ್ಲದೆ, ಈ ವೇಳೆ ಬಿಜೆಪಿ- ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ವಾಗ್ವಾದವಾಗಿದೆ. ಅಲ್ಲದೆ, ಸಿ.ಪಿ. ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಲಾಗಿದ್ದು, ಮೊಟ್ಟೆಯನ್ನೂ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪನ್ನು ಚದುರಿಸುವ ಸಂಬಂಧ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ | ಮೋದಿ ಅಂಗಳಕ್ಕೆ BMS ಟ್ರಸ್ಟ್‌ ವಿವಾದ: ʼಸಚಿವ ಅಶ್ವತ್ಥನಾರಾಯಣ + ಒಂದು ಕಾಣದ ಕೈʼ ಎಂದ ಕುಮಾರಸ್ವಾಮಿ

ಪೊಲೀಸರೊಂದಿಗೆ ಜೆಡಿಎಸ್‌ ಕಾರ್ಯಕರ್ತರ ವಾಗ್ವಾದ

ಜೆಡಿಎಸ್ ಕಾರ್ಯಕರ್ತರ ಬಂಧನ
ಗುದ್ದಲಿ ಪೂಜೆ ಗಲಾಟೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರತೊಡಗಿದರು. ಸಿ.ಪಿ. ಯೋಗೇಶ್ವರ್ ಹೋದ ಕಡೆಯಲ್ಲೆಲ್ಲ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರೊಂದಿಗೆ ಜೆಡಿಎಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಬಳಿಕ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದರಿಂದ ಜೆಡಿಎಸ್‌ ಕಾರ್ಯಕರ್ತರನ್ನು ಬಂಧಿಸಲಾಯಿತು. ಗುದ್ದಲಿ ಪೂಜೆಗೆ ವಿರೋಧ ಮಾಡಿದ ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಕಾರ್ಯಕ್ರಮ ಮುಂದೂಡಿದ ಜಿಲ್ಲಾಡಳಿತ
ಮಾಜಿ ಮುಖ್ಯಮಂತ್ರಿ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಎಚ್ಚೆತ್ತ ಜಿಲ್ಲಾಡಳಿತ ಶನಿವಾರ ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಿ ಆದೇಶ ಹೊರಡಿಸಿದೆ. 50 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಬೇಕಾಗಿತ್ತು.

ಪೋಸ್ಟರ್‌ಗಳ ಮೂಲಕ ಆಕ್ರೋಶ
ರಾಮನಗರದಲ್ಲಿ ಗುದ್ದಲಿಪೂಜೆ ಕಾರ್ಯಕ್ರಮ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌, ಸಚಿವ ಅಶ್ವತ್ಥ ನಾರಾಯಣ ನಡುವೆ ಕೆಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಅಲ್ಲದೆ, ತಮಗೆ ಆಮಂತ್ರಣ ಬಂದಿಲ್ಲ ಎಂದು ಎಚ್‌ಡಿಕೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಸಂಬಂಧ ಜೆಡಿಎಸ್‌ ಕಾರ್ಯಕರ್ತರು ಸಹ ಭೂಮಿ ಪೂಜೆ ಕಾರ್ಯಕ್ರಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್‌ ಗುದ್ದಲಿ ಪೂಜೆ ಮಾಡಬಾರದು ಎಂದು ಪಟ್ಟುಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧವೂ ವಿವಿಧ ಪೋಸ್ಟರ್‌ಗಳನ್ನು ಸಿದ್ಧಪಡಿಸಿ, ಹರಿಬಿಡಲಾಗಿದೆ. ಅಲ್ಲದೆ, ಈ ಪೋಸ್ಟರ್‌ಗಳನ್ನು ಪ್ರತಿಭಟನಾ ಸ್ಥಳದಲ್ಲಿ ಹಿಡಿದು ಮೆರವಣಿಗೆ ನಡೆಸಲಾಗಿದೆ.

ಪೋಸ್ಟರ್‌ನಲ್ಲೇನಿದೆ?
೧. ಶಿಕ್ಷಣ ಸಂಸ್ಥೆಯನ್ನೇ ಮಾರಿದ ಅಸ್ವಸ್ಥ, ಸರ್ಕಾರಕ್ಕೆ ಸೇರಿದ ವಿದ್ಯಾಸಂಸ್ಥೆಯನ್ನು ಖಾಸಗಿಯವರಿಗೆ ಮಾರಿದ ಶಿಕ್ಷಣ ಸಚಿವ ಅಸ್ವಸ್ಥ ನಾರಾಯಣ.
೨. ೪೦% ಸರ್ಕಾರದ ೧೦೦% ಸಚಿವ ಅಶ್ವತ್ಥನಾರಾಯಣನಿಗೆ ಚನ್ನಪಟ್ಟಣದ ಜನತೆಯಿಂದ ಧಿಕ್ಕಾರ! – ಎಂದು ಬರೆದುಕೊಂಡಿರುವ ಪೋಸ್ಟರ್‌ಗಳನ್ನು ಜೆಡಿಎಸ್‌ ಕಾರ್ಯಕರ್ತರು ಪ್ರದರ್ಶನ ಮಾಡುತ್ತಿದ್ದಾರೆ.

ಇದನ್ನೂ ಓದಿ | JDS ಪಕ್ಷದ ಕೆಲಸವನ್ನು ನಿರ್ಲಕ್ಷ್ಯ ಮಾಡುವ ಪದಾಧಿಕಾರಿಗಳಿಗೆ ಕುಮಾರಸ್ವಾಮಿ ಎಚ್ಚರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

Blast in Bengaluru : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಯೂ ಸಂಬಂಧವಿದೆ ಎಂಬ ಗುಮಾನಿಯೊಂದು ಹರಡಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.

VISTARANEWS.COM


on

Blast in Bengaluru Anant Ambani
Koo

ಬೆಂಗಳೂರು: ಬೆಂಗಳೂರಿನ (Blast in Bengaluru) ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಸ್ಫೋಟಕ್ಕೂ ಗುಜರಾತ್‌ನ ಜಾಮ್‌ ನಗರದಲ್ಲಿ (Jam Nagar in Gujarat) ನಡೆಯುತ್ತಿರುವ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ ಅವರ ಮದುವೆಗೂ (Anant Amabani Marriage) ಸಂಬಂಧವಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಸ್ಫೋಟದ‌ ಬಗ್ಗೆ ಮಾತನಾಡುವ ವೇಳೆ, ಇದು ಯಾವ ಕಾರಣಕ್ಕಾಗಿ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿರುವ ಕ್ರೈಂ ಆಂಗಲ್‌ ಮತ್ತು ಬ್ಯುಸಿನೆಸ್‌ ದ್ವೇಷದ ಆಂಗಲ್‌ ಕೂಡಾ ತನಿಖೆ ನಡೆಯಲಿದೆ ಎಂದು ಹೇಳಿದ್ದರು. ಹಾಗಿದ್ದರೆ ಇದರ ಹಿಂದೆ ಉದ್ಯಮ ದ್ವೇಷದ ಸಾಧ್ಯತೆ ಇದೆಯಾ?

ರಾಮೇಶ್ವರಂ ಕೆಫೆ ಕಳೆದ ಎರಡೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ಹೋಟೆಲ್‌ ಚೈನ್‌. ಈಗ 4.5 ಕೋಟಿ ರೂ. ಬೆಲೆ ಬಾಳುವ ಈ ಉದ್ಯಮದ ಸ್ಥಾಪಕರು ದಿವ್ಯಾ ರಾಘವೇಂದ್ರ ರಾವ್‌ ಮತ್ತು ರಾಘವೇಂದ್ರ ರಾವ್‌. ದಿವ್ಯಾ ರಾಘವೇಂದ್ರ ರಾವ್‌ ಅವರು ಮೂಲತಃ ಒಬ್ಬ ಐಐಎಂ ಪದವೀಧರೆ. ಗುಜರಾತ್‌ನ ಅಹಮದಾಬಾದ್‌ನವರು. ಅವರು ಪ್ರೀತಿಸಿ ಮದುವೆಯಾಗಿದ್ದು ಬೆಂಗಳೂರಿನ ರಾಘವೇಂದ್ರ ರಾವ್‌ ಅವರನ್ನು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಸ್ಪೂರ್ತಿಯಿಂದ ಅವರ ಹುಟ್ಟೂರಾದ ರಾಮೇಶ್ವರಂ ಕೆಫೆ ಎಂದು ಹೆಸರಿಟ್ಟಿದ್ದರು.

ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಅಂಬಾನಿ ಮದುವೆಗೆ ಏನು ಕನೆಕ್ಷನ್‌?

ಗುಜರಾತ್‌ನ ಜಾಮ್‌ ನಗರದಲ್ಲಿ ಈಗ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಮದುವೆಯ ವಿವಾಹಪೂರ್ವ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲಿ ದಕ್ಷಿಣ ಭಾರತದ ಖಾದ್ಯ ಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ರಾಮೇಶ್ವರಂ ಕೆಫೆ ಹೊತ್ತುಕೊಂಡಿದೆ. ಇದು ಹಲವರ ಕಣ್ಣು ಕುಕ್ಕಿದೆ ಎಂದು ಹೇಳಲಾಗಿದೆ.

ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ತಮ್ಮ ಸಂಪರ್ಕ ಬಳಸಿ ಈ ಮಹತ್ವದ ಕಾರ್ಯಕ್ರಮದ ಕ್ಯಾಟರಿಂಗ್‌ ವ್ಯವಸ್ಥೆಯನ್ನು ಪಡೆದಿದ್ದರು. ಇದರ ಜವಾಬ್ದಾರಿಯನ್ನು ಹೊತ್ತುಕೊಂಡೇ ರಾಘವೇಂದ್ರ ರಾವ್‌ ಅವರು ಶುಕ್ರವಾರ ಜಾಮ್‌ನಗರದಲ್ಲಿದ್ದರು.

ಈ ಕಾರ್ಯಕ್ರಮದ ಕ್ಯಾಟರಿಂಗ್‌ ಪಡೆಯುವ ವಿಚಾರದಲ್ಲಿ ಇನ್ನೂ ಕೆಲವರು ಪೈಪೋಟಿಯಲ್ಲಿದ್ದರು ಎನ್ನಲಾಗಿದೆ. ಅವರು ಅವಕಾಶ ಸಿಗದೆ ಸಿಟ್ಟುಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರಾಮೇಶ್ವರಂ ಹೋಟೆಲ್‌ನಲ್ಲಿ ಕೆಲವೊಂದು ಕಿರಿಕಿರಿ ಮಾಡುವ ಕೆಲಸಗಳನ್ನು ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಈ ಉದ್ಯಮ ದ್ವೇಷವೇ ಇಲ್ಲಿ ಬಾಂಬ್‌ ತಂದು ಇಟ್ಟು ಸ್ಫೋಟಿಸುವ ಕೆಲಸಕ್ಕೆ ಕಾರಣವಾಯಿತಾ ಎನ್ನುವ ಚರ್ಚೆಯೂ ಇದ್ದು ಪೊಲೀಸರು ಇದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಕೃತ್ಯಗಳ ಮೂಲಕ ರಾಮೇಶ್ವರಂ ಕೆಫೆ ಸೇಫ್‌ ಅಲ್ಲ ಎಂದು ದಾಖಲಿಸಿ ಉದ್ಯಮಕ್ಕೆ ಹೊಡೆತ ನೀಡುವ ಉದ್ದೇಶವಿದೆಯಾ ಎಂಬ ಸಂಶಯವೂ ಇದೆ. ಇದೆಲ್ಲವೂ ತನಿಖೆಯಿಂದ ಸ್ಪಷ್ಟಗೊಳ್ಳಬೇಕಾಗಿದೆ.

Continue Reading

ಬೆಂಗಳೂರು

Blast in Bengaluru: ಬಾಂಬ್‌ ಇಟ್ಟು ಇಡ್ಲಿ ತಿಂದ; 1 ಗಂಟೆಗೆ ಟೈಮರ್‌ ಇಟ್ಟ: ಪಿನ್‌ ಟು ಪಿನ್‌ ಮಾಹಿತಿ ಬಿಚ್ಚಿಟ್ಟ ಡಿಕೆಶಿ

Blast in Bengaluru: ಬಾಂಬ್‌ ಸ್ಫೋಟಗೊಂಡ ಸ್ಥಳ ಪರಿಶೀಲನೆ ಬಳಿಕ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್‌, ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆರೋಪಿ ಪತ್ತೆ ಸಹಿತ ತನಿಖೆಗೆ 8 ತಂಡಗಳನ್ನು ರಚನೆ ಮಾಡಲಾಗಿದ್ದು, ಕೆಲವೇ ಗಂಟೆಗಳಲ್ಲಿ ಬಂಧನವಾಗಲಿದೆ ಎಂದು ಹೇಳಿದ್ದಾರೆ.

VISTARANEWS.COM


on

Blast in Bengaluru Timer kept at 1 pm DK Shivakumar reveals details
Koo

ಬೆಂಗಳೂರು: ಇಲ್ಲಿನ ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟವಾಗಿದ್ದರಿಂದ (Blast in Bengaluru) ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar), ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (DR G Parameshwar) ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬಾಂಬ್‌ ಸ್ಫೋಟದ (Bomb Blast) ಬಗ್ಗೆ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆರೋಪಿ ಬಸ್‌ನಿಂದ ಬಂದಿಳಿದು ಹೋಟೆಲ್‌ನಲ್ಲಿ ತಿಂಡಿ ತಿಂದು ಬಾಂಬ್‌ ಇಟ್ಟ ಘಟನಾವಳಿಯನ್ನು ವಿವರಿಸಿದ್ದಾರೆ. ಇನ್ನು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಾರೆ.

ಸ್ಥಳ ಪರಿಶೀಲನೆ ಬಳಿಕ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್‌, ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಆರೋಪಿಯು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್‌ನಲ್ಲಿ ಬಂದಿದ್ದಾನೆ. ಅಲ್ಲಿಂದ ರಾಮೇಶ್ವರಂ ಕೆಫೆಗೆ ಬಂದು ಟೋಕನ್‌ ಪಡೆದುಕೊಂಡಿದ್ದಾನೆ. ಅಲ್ಲೇ ರವೆ ಇಡ್ಲಿಯನ್ನು ತಿಂದಿದ್ದಾನೆ. 1 ಗಂಟೆ ಬಳಿಕ ಬಾಂಬ್ ಸ್ಫೋಟಗೊಳ್ಳುವಂತೆ ಟೈಮರ್‌ ಇಟ್ಟು, ಆ ಬ್ಯಾಗ್‌ ಅನ್ನು ಹೋಟೆಲ್‌ನಲ್ಲಿ ಬಿಟ್ಟಿದ್ದಾನೆ. ಈ ಎಲ್ಲ ದೃಶ್ಯಾವಳಿಗಳೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ತನಿಖೆಯನ್ನು ಪೊಲೀಸರು ಬಹಳ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಬಾಂಬ್‌ ಇಟ್ಟ ವ್ಯಕ್ತಿ ಯಾರು ಎಂಬುದು ಬಹುತೇಕ ಗೊತ್ತಾಗಿದೆ. ಸಿಸಿಬಿಯೂ ತನಿಖೆಯಲ್ಲಿ ಭಾಗಿಯಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಹೈ ಇಂಟೆನ್ಸಿಟಿಯ ಬಾಂಬ್‌ ಅಲ್ಲ

ಈಗ ಸ್ಫೋಟಗೊಂಡಿರುವುದು ಹೈ ಇಂಟೆನ್ಸಿಟಿಯುಳ್ಳ ಬಾಂಬ್‌ ಅಲ್ಲ. ಕಡಿಮೆ ತೀವ್ರತೆಯುಳ್ಳದ್ದಾಗಿದೆ. ಹೀಗಾಗಿ ಸೌಂಡ್‌ ಜೋರಾಗಿ ಬಂದಿದ್ದು, ಹಾನಿಯ ತೀವ್ರತೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೆಲವರ ಕಿವಿಗಳಿಗೆ ತೊಂದರೆಯಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಬಾಂಬ್‌ ಸ್ಕ್ವಾಡ್‌, ಎಫ್‌ಎಸ್‌ಎಲ್‌ ಟೀಂ ಭೇಟಿ

ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್‌ ಟೀಂ, ಬಾಂಬ್‌ ಸ್ಕ್ವಾಡ್‌ ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದೆ. ಸಿಸಿಬಿಯವರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಏಳೆಂಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಯಾರೂ ಗಾಬರಿಗೊಳ್ಳುವುದು ಬೇಡ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಅಧಿಕಾರಿಗಳಿಂದ ತನಿಖೆ

ಸ್ಥಳಕ್ಕೆ ಬೆಂಗಳೂರು ನಗರ ಆಯುಕ್ತ ದಯಾನಂದ ದೌಡಾಯಿಸಿದ್ದು, ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ ಎಂದು ಖಚಿತ ಪಡಿಸಲಾಗಿದೆ.ಮೈಕ್ರೊ ಓವನ್‌ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದೆಯಾ ಎಂಬುದನ್ನು ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಂತಹ ಯಾವುದೇ ಸ್ಫೋಟ ಆಗಿಲ್ಲ ಎಂದು ದೃಢಪಡಿಸಿದ್ದಾರೆನ್ನಲಾಗಿದೆ. ಎಫ್‌ಎಸ್‌ಎಲ್ ಅಧಿಕಾರಿಗಳು ತನಿಖೆ ನಡೆಸಿದ್ದು, ಟೈಮರ್‌ ಬಾಂಬ್‌ನಲ್ಲಿ ಏನೆಲ್ಲ ಬಳಕೆ ಮಾಡಲಾಗಿದೆ ಎಂಬುದನ್ನು ಬಹಿರಂಗಗೊಳಿಸಬೇಕಿದೆ.

ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು. ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Blast in Bangalore : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ; ಐವರು ಗಂಭೀರ

ನವ್ಯಾ (25), ಶ್ರೀನಿವಾಸ್ (67), ನಾಗಶ್ರೀ (25), ಬಾಲಮುರುಳಿ (34), ಮೋನಿ (30), ಶಂಕರ್ (41) ಎಂಬುವವರು ಗಾಯಗೊಂಡ ಕೆಲವರು ಎನ್ನಲಾಗಿದೆ. ಇವರಲ್ಲಿ ನಾಗಶ್ರಿ ಅವರ ಕಣ್ಣಿಗೆ ಏಟಾಗಿದೆ. ಮೋನಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

PSI Exam Result: ಪಿಎಸ್‌ಐ ಮರು ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

PSI Exam Result: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದೆ. ತಾತ್ಕಾಲಿಕ ಅಂಕಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗಳಿದ್ದಲ್ಲಿ ಇ-ಮೇಲ್ ಮೂಲಕ ಪ್ರಾಧಿಕಾರಕ್ಕೆ ಸಲ್ಲಿಸಬಹುದು.

VISTARANEWS.COM


on

PSI Exam
Koo

ಬೆಂಗಳೂರು: ಪಿಎಸ್‌ಐ ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯ (PSI Exam Result) ತಾತ್ಕಾಲಿಕ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ತಾತ್ಕಾಲಿಕ ಅಂಕಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗಳಿದ್ದಲ್ಲಿ ಇ-ಮೇಲ್ ಮೂಲಕ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಮಾರ್ಚ್‌ 5ರ ಸಂಜೆ 5.30 ವರೆಗೂ keauthority-ka@nic.in ಇ-ಮೇಲ್‌ಗೆ ಮಾತ್ರ ಸಲ್ಲಿಸಬೇಕು. ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಕೆಇಎ ಮಾಹಿತಿ ನೀಡಿದೆ.

ಮಾ. 1ರಂದು ಪ್ರಕಟಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾತ್ರ ಇ-ಮೇಲ್ ಮೂಲಕ ಸಲ್ಲಿಸಬೇಕು. ಈಗಾಗಲೇ ಕೀ ಉತ್ತರಗಳನ್ನು ಅಂತಿಮಗೊಳಿಸಿದ್ದು, ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ | Job Alert: ದ್ವಿತೀಯ ಪಿಯುಸಿ ಪಾಸ್‌ ಆದವರಿಗೆ ಗುಡ್‌ನ್ಯೂಸ್‌; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಿಂದ ಜ. 23ರಂದು ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ನಡೆಸಿತ್ತು. ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 54 ಸಾವಿರ ಅಭ್ಯರ್ಥಿಗಳಲ್ಲಿ ಶೇ 66ರಷ್ಟು ಮಂದಿ ಹಾಜರಾಗಿದ್ದರು.

Continue Reading

ರಾಯಚೂರು

Raichur News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ

Raichur News: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದು ಖಂಡನೀಯ. ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಲಿಂಗಸುಗೂರುನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

VISTARANEWS.COM


on

ABVP demands strict action against those who shouted pro Pak slogan
Koo

ಲಿಂಗಸುಗೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದು ಖಂಡನೀಯ. ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ (Raichur News) ಸಲ್ಲಿಸಿದರು.

ಇದನ್ನೂ ಓದಿ: Yadgiri News: ಮಕ್ಕಳು ಶ್ರದ್ಧೆಯಿಂದ ಓದಿದರೆ ಗುರಿ ಸಾಧನೆ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್‌ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ಖಂಡನೀಯ. ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಮೇಲೆ ದೇಶದ್ರೋಹದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿಬೇಕು. ಈ ಬಗ್ಗೆ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆದು ತೀರ್ಪು ಪ್ರಕಟವಾಗುವ ತನಕ ನಾಸೀರ್‌ಹುಸೇನ್ ಅವರಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ನೀಡಬಾರದು ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: water crisis: ಕರ್ನಾಟಕಕ್ಕೆ ಜಲಾಘಾತ! ಹಳ್ಳಿ ಹಳ್ಳಿಯಲ್ಲಿ ನೀರಿಲ್ಲ; ಖಾಸಗಿ ಬೋರ್‌ವೆಲ್‌ನಿಂದ ಪೂರೈಕೆಗೆ ಸರ್ಕಾರ ಸೂಚನೆ

ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮೌನೇಶ ನಾಯಕ, ಹನುಮಂತ ನಾಯಕ, ಹನುಮಂತ ಅಂಬಿಗೇರ್, ಅಮರೇಶ, ಶಿವು ಕಾಳಾಪುರ, ದೇವರಾಜ, ಮನೋಜ, ಮೌನೇಶ ನಾಯಕ, ವಿಜಯ ಚಂದ್ರು ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading
Advertisement
Puneri Paltan vs Haryana Steelers
Latest3 mins ago

Pro Kabaddi Final: ಚೊಚ್ಚಲ ಟ್ರೋಫಿ ಗೆದ್ದ ಪುಣೇರಿ ಪಲ್ಟಾನ್‌

Rahanna In Anant Ambani Pre Wedding
ದೇಶ10 mins ago

ಅಂಬಾನಿ ಮಗನ ಮದುವೆ ಸಂಭ್ರಮದಲ್ಲಿ ರಿಹಾನಾ; ಶೋಗೆ ಪಡೆಯೋದು ಇಷ್ಟು ಕೋಟಿನಾ? ಅಬ್ಬಾ!

Blast in Bengaluru Anant Ambani
ಬೆಂಗಳೂರು20 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

Blast in Bengaluru Timer kept at 1 pm DK Shivakumar reveals details
ಬೆಂಗಳೂರು22 mins ago

Blast in Bengaluru: ಬಾಂಬ್‌ ಇಟ್ಟು ಇಡ್ಲಿ ತಿಂದ; 1 ಗಂಟೆಗೆ ಟೈಮರ್‌ ಇಟ್ಟ: ಪಿನ್‌ ಟು ಪಿನ್‌ ಮಾಹಿತಿ ಬಿಚ್ಚಿಟ್ಟ ಡಿಕೆಶಿ

PSI Exam
ಕರ್ನಾಟಕ30 mins ago

PSI Exam Result: ಪಿಎಸ್‌ಐ ಮರು ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ABVP demands strict action against those who shouted pro Pak slogan
ರಾಯಚೂರು31 mins ago

Raichur News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ

Inauguration programme of new Annapurna Bhojanalaya building
ಶಿವಮೊಗ್ಗ34 mins ago

Hosanagara News: ಪಂಚ ಆಲಯಗಳಿಂದ ಗ್ರಾಮಾಭಿವೃದ್ಧಿ ಸಾಧ್ಯ: ಡಾ.ಕೆ.ವಿ.ಪತಂಜಲಿ

Fishes die in Hottakeri lake
ಶಿವಮೊಗ್ಗ35 mins ago

Shivamogga News: ಹೊಟ್ಟಕೇರಿ ಕೆರೆಯಲ್ಲಿ ನೂರಾರು ಮೀನುಗಳ ಸಾವು

Paytm
ದೇಶ53 mins ago

Paytm Fine: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌, ಬಿತ್ತು 5.49 ಕೋಟಿ ರೂ. ದಂಡ

Ishan Kishan
ಕ್ರೀಡೆ1 hour ago

Ishan Kishan: ರಣಜಿ ಟೂರ್ನಿಗೆ ಚಕ್ಕರ್​, ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮಕ್ಕೆ ಹಾಜರ್!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು3 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು5 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ6 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ16 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌