5G Services Launch | ದೇಶದಲ್ಲಿ ಅಂತರ್ಜಾಲದ ಹೊಸ ಯುಗ: 5 ಜಿ ಉದ್ಘಾಟಿಸಿ ಮೋದಿ ಭರವಸೆ Vistara News

5 G

5G Services Launch | ದೇಶದಲ್ಲಿ ಅಂತರ್ಜಾಲದ ಹೊಸ ಯುಗ: 5 ಜಿ ಉದ್ಘಾಟಿಸಿ ಮೋದಿ ಭರವಸೆ

5G ಸೇವೆಗಳ ಮೂಲಕ ದೇಶದಲ್ಲಿ ಇಂಟರ್‌ನೆಟ್ ಸೇವೆಗಳ ಹೊಸ ಯುಗವೊಂದು ತೆರೆದುಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

VISTARANEWS.COM


on

‌ಪ್ರಧಾನಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 5 ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದರು.

ನವ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯನ್‌ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಅವರು ದೇಶದಲ್ಲಿ 5G ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ೧೨೫ ಕೋಟಿ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ಅವರು ನುಡಿದರು.

ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್‌ ಒದಗಿಸಿದಂತೆ ವಿದ್ಯುತ್‌ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.

ಇದೇ ೨ ಜಿಗೂ ೫ ಜಿಗೂ ಇರುವ ವ್ಯತ್ಯಾಸ!

ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್‌ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನವರಾತ್ರಿಯ ಹಬ್ಬದಲ್ಲಿ ಈ ಐತಿಹಾಸಿಕ ದಿವಸ ದಾಖಲಾಗಲಿದೆ. ಇದೊಂದು ರೋಮಾಂಚಿತಗೊಳಿಸುವ ಅನುಭವ. ಇದರಲ್ಲಿ ನಮ್ಮೊಂದಿಗೆ ದೊಡ್ಡ ದೊಡ್ಡ ತಂತ್ರಜ್ಞಾನದ ಉದ್ಯಮಿಗಳೊಂದಿಗೆ ಗ್ರಾಮಿಣ ಶಾಲೆಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೆಲಸಗಾರರು ಸಹ ಸಹಭಾಗಿಗಳಾಗಿದ್ದಾರೆ. ಇದು ನವ ಭಾರತದ ಸಂಕಲ್ಪದ ದಿನ. ನಾವು ಇಂದು ಟೆಕ್ನಾಲಜಿಯ ಗ್ರಾಹಕರಾಗಿರುವುದು ಮಾತ್ರವಲ್ಲ, ಭವಿಷ್ಯದ ವೈರ್‌ಲೆಸ್‌ ತಂತ್ರಜ್ಞಾನ ರೂಪಿಸುವಲ್ಲಿಯೂ ಭಾರತದ ಭೂಮಿಕೆಯಿದೆ. 5G ಅಳವಡಿಕೆಯಲ್ಲಿ ನಾವು ಜಾಗತಿಕ ಮಾನದಂಡವನ್ನು ಸರಿಗಟ್ಟಿದ್ದೇವೆ ಎಂದರು.

ಆತ್ಮ ನಿರ್ಭರ ಭಾರತ

2G, 3G, 4Gಯ ಸಮಯದಲ್ಲಿ ನಮಗೆ ಅನ್ಯ ದೇಶಗಳ ಅವಲಂಬನೆ ಇತ್ತು. ಆದರೆ 5Gಯ ವೇಳೆಗೆ ಸಮಯದಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ನಾನು ಆತ್ಮನಿರ್ಭರ ಭಾರತದ ಕುರಿತು ಮಾತಾಡಿದ್ದಾಗ ಕೆಲವರು ತಮಾಷೆ ಮಾಡಿದರು. ಆದರೆ 2014ರಲ್ಲಿ ನಮ್ಮ ದೇಶದಲ್ಲಿ ಎರಡೇ ಮೊಬೈಲ್‌ ತಯಾರಿ ಯುನಿಟ್‌ಗಳಿದ್ದವು. ಈಗ ಅವುಗಳ ಸಂಖ್ಯೆ 200ಕ್ಕೂ ಹೆಚ್ಚಿದೆ. ನಾವು ಉದ್ಯಮಕ್ಕೆ ಭತ್ಯೆ ಕೊಟ್ಟೆವು, ಖಾಸಗಿ ವಲಯವನ್ನು ಪ್ರೋತ್ಸಾಹಿಸಿದೆವು. ಈಗ ಕೋಟ್ಯಂತರ ಮೊಬೈಲ್‌ಗಳನ್ನು ರಫ್ತು ಮಾಡುವಷ್ಟು ಬೆಳೆದು ನಿಂತಿದ್ದೇವೆ. 2014ರಲ್ಲಿ, 6 ಕೋಟಿ ಬ್ರಾಂಡ್‌ಬ್ಯಾಂಡ್‌ ಬಳಕೆದಾರರನ್ನು ಹೊಂದಿದ್ದೆವು, ಈಗ ನಾವು ಸುಮಾರು 80 ಕೋಟಿ ಬಳಕೆದಾರರನ್ನು ಹೊಂದಿದ್ದೇವೆ. 2014ರಲ್ಲಿ ನಾವು 25 ಕೋಟಿ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿದ್ದೆವು, ಈಗ ನಾವು ಸುಮಾರು 85 ಕೋಟಿ ಸಂಪರ್ಕಗಳನ್ನು ಹೊಂದಿದ್ದೇವೆ. 5G ಮೂಲಕ ಭಾರತದ ಯುವಜನತೆಗೆ ಇನ್ನಷ್ಟು ದೊಡ್ಡ ಅವಕಾಶಗಳು ದೊರೆಯಲಿವೆ ಎಂದರು.

ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್‌ ಕ್ರಾಂತಿ? ಏನಿದರ ಅನುಕೂಲ?

ನಮ್ಮ ಡಿಜಿಟಲ್‌ ಇಂಡಿಯಾ ಯೋಜನೆ ಸಫಲತೆ ಕಂಡಿದೆ. ಮೊದಲಿಗೆ ಬಹಳ ಮಂದಿ ಇದೊಂದು ಕೇವಲ ಸರ್ಕಾರಿ ಯೋಜನೆ ಎಂದು ಭಾವಿಸಿದ್ದರು. ಆದರೆ ಅದು ದೇಶದ ವಿಕಾಸದ ದೂರದೃಷ್ಟಿಯಾಗಿತ್ತು. ಇಂದು ಸಣ್ಣಪುಟ್ಟ ವ್ಯಾಪಾರಿಯ ಬಳಿಯೂ ಯುಪಿಐ ಪಾವತಿ ಮಾಡುತ್ತಾನೆ. ಇಂದು ಭಿಕ್ಷುಕನೂ ಡಿಜಿಟಲ್‌ ಪಾವತಿ ಅಪೇಕ್ಷಿಸುತ್ತಾನೆ. ಪಾರದರ್ಶಕತೆ ಗಮನಿಸಿ. ನಾವು ಜನರಿಗಾಗಿ, ಜನರ ಜತೆ ಕೈಜೋಡಿಸಿ ಕೆಲಸ ಮಾಡಬೇಕು.

ಅಂದು ೧ ಜಿಬಿಗೆ ೩೦೦ ರೂ, ಇಂದು ೧೦ ರೂ.

ಡಿಜಿಟಲ್‌ ಭಾರತದ ಆಧಾರಸ್ತಂಭಗಳು ನಾಲ್ಕು. ಒಂದು ಮೊಬೈಲ್‌ ಸಾಧನದ ಬೆಲೆ. ಇಂದು ಕಡಿಮೆ ದರದಲ್ಲಿ ಹೆಚ್ಚಿನ ಪೀಚರ್‌ಗಳಿರುವ ಸಾಧನಗಳು ಲಭ್ಯವಿವೆ. ಎರಡನೆಯದು ಕನೆಕ್ಟಿವಿಟಿ. ದೇಶದ ಮೂಲೆ ಮೂಲೆಗೂ ಇಂದು ಅಂತರ್ಜಾಲ ಹಾಗೂ ಆಪ್ಟಿಕಲ್‌ ಫೈಬರ್‌ ತಲುಪಿದ್ದು, 5G ಮೂಲಕ ಅದು ಇನ್ನೊಂದು ಹಂತಕ್ಕೆ ತಲುಪಲಿದೆ. ಮೂರನೆಯದು ಡೇಟಾ ಬೆಲೆ. 5Gಯೊಂದಿಗೆ ಡೇಟಾ ಬೆಲೆಯೂ ಇಳಿಯುತ್ತದೆ. 2014ರಲ್ಲಿ ಡೇಟಾದ ಬೆಲೆ 1 ಜಿಬಿಗೆ 300 ರೂ.ಗಳಷ್ಟಿತ್ತು. ಇಂದು ಅದು 10 ರೂ.ಗೆ ಇಳಿದಿದೆ. ಮುಂದೆ 5G ಸಂಪರ್ಕ ಹೆಚ್ಚಳದೊಂದಿಗೆ ಅದು ಇನ್ನೂ ಇಳಿಯಲಿದೆ. ನಾಲ್ಕನೆಯದು ಡಿಜಿಟಲ್‌ ಫಸ್ಟ್‌ ಎಂಬ ಚಿಂತನೆ ಎಲ್ಲರಲ್ಲಿ ಮೂಡಬೇಕು. ಅದು ಈಗಾಗಲೇ ದೇಶದಲ್ಲಿ ಬೇರೂರಿದೆ. ʼಎಲ್ಲರಿಗೂ ಇಂಟರ್‌ನೆಟ್‌ʼ ಎಂಬುದು ನಮ್ಮ ದೂರದೃಷ್ಟಿ. ಡೇಟಾ ಕ್ರಾಂತಿಗೆ ಇಂದು ಜನ್ಮ ನೀಡಲಾಗಿದೆ. ಕಡು ಬಡವರೂ ಡಿಜಿಟಲ್‌ ಬಳಕೆ ಮಾಡುವ ದಿನಗಳು ದೂರವಿಲ್ಲ ಎಂದರು.

ಇದನ್ನೂ ಓದಿ | 5G Services Launch | ಇಂಟರ್‌ನೆಟ್‌ ಮಹಾ ಕ್ರಾಂತಿ: ಭಾರತದಲ್ಲಿ 5G ಸೇವೆಗೆ ಪಿಎಂ ಮೋದಿ ಚಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

5 G

Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ

ಮುಂದಿನ ನಾಲ್ಕು ತಿಂಗಳಲ್ಲಿ ಭಾರತವು (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಆಡಲಿದೆ.

VISTARANEWS.COM


on

Cricket news
Koo

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತ ನಂತರ ಬೇಸರದಲ್ಲಿದೆ. ಆದರೆ, ಹೆಚ್ಚು ದಿನ ಅದೇ ಮೂಡ್​ನಲ್ಲಿ ಇರಲು ಅವಕಾಶವಿಲ್ಲ. ಟೀಮ್ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರಲಿದೆ. ನಿರಂತರ ವೇಳಾಪಟ್ಟಿಯನ್ನು ಹೊಂದಿರುವುದರಿಂದ ತ್ವರಿತವಾಗಿ ಮರು ಸಂಘಟನೆಗೊಳ್ಳಬೇಕಾಗಿಎ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅದಕ್ಕೀಗ ತಂಡ ಪ್ರಕಟಗೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಇದಲ್ಲದೆ, ಭಾರತವು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲಿದೆ. ನಂತರ ಜನವರಿ ಕೊನೆಯ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಟಿ20ಗೆ ಆದ್ಯತೆ

ಮುಂಬರುವ ಪ್ರವಾಸಗಳು ಟಿ 20 ಪಂದ್ಯಗಳಿಂದಲೇ ತುಂಬಿರುತ್ತವೆ. ಏಕೆಂದರೆ ತಂಡದ ಪ್ರಮುಖ ಗಮನವು ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ಮೇಲೆ ಇರುತ್ತದೆ. ಇದಲ್ಲದೆ, ನಿರ್ಣಾಯಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​​ನಲ್ಲಿ ನಿರ್ಣಾಯಕ ಅಂಕಗಳನ್ನು ಸಂಗ್ರಹಿಸಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಭಾರತ ತಂಡ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಪೇಕ್ಷಿತ ಗದೆ ರೂಪದ ಟ್ರೋಫಿಗೆ ಗೆಲ್ಲಲು ಸಿದ್ಧವಾಗಬೇಕಿದೆ.

ಇದನ್ನೂ ಓದಿ: Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಪಂತ್​ಗಾಗಿ ಕಾಯುವಿಕೆ

ಪ್ಯಾಕ್ ಆಗಿರುವ ವೇಳಾಪಟ್ಟಿಯ ಹೊರತಾಗಿ, 2022 ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದ ಬಳಿಕ ಸುಧಾರಿಸಿಕೊಳ್ಳುತ್ತಿರುವ ಮತ್ತು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದ ರಿಷಭ್ ಪಂತ್ ಮತ್ತೆ ಭಾರತೀಯ ತಂಡಕ್ಕೆ ಮರಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಐಪಿಎಲ್ 2024 ರಲ್ಲಿ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಪುನರಾಗಮನವು ಫೆಬ್ರವರಿ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.

Continue Reading

5 G

BSNL 5G : ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಂತ್ಯಕ್ಕೆ ದೇಶಾದ್ಯಂತ ಸಿಗಲಿದೆ ಬಿಎಸ್ಸೆನ್ನೆಲ್‌ 5ಜಿ

VISTARANEWS.COM


on

BSNL 5G: Good news for customers, BSNL 5G will be available across the country by the end of the year
Koo

ನವ ದೆಹಲಿ: ಬಿಎಸ್ಸೆನ್ನೆಲ್‌ನ (BSNL 5G) 4ಜಿ ನೆಟ್‌ ವರ್ಕ್‌ 2023ರ ವರ್ಷಾಂತ್ಯದ ವೇಳೆಗೆ 5ಜಿಗೆ ಮೇಲ್ದರ್ಜೆಗೇರಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. (BSNL 5G) ಕಂಪನಿಯು ಪಂಜಾಬ್-ಫಿರೋಜ್‌ಪುರ್‌, ಪಠಾಣ್‌ ಕೋಟ್‌ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್‌ ವರ್ಕ್‌ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್‌ ವೇಳೆಗೆ 5ಜಿಗೆ ಅಪ್‌ಗ್ರೇಡ್‌ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ಈಗಾಗಲೇ ಟಿಸಿಎಸ್‌ ಮತ್ತು ಐಟಿಐ ಲಿಮಿಟೆಡ್‌ ಜತೆಗೆ 4ಜಿ ನೆಟ್‌ ವರ್ಕ್‌ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ನೆಟ್‌ ವರ್ಕ್‌ ಆರಂಭದಲ್ಲಿ 4ಜಿಯಲ್ಲಿ ಇರಲಿದೆ. ಬಳಿಕ ನವೆಂಬರ್-ಡಿಸೆಂಬರ್‌ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್‌ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ವಿವರಿಸಿದ್ದಾರೆ.

ಅಮೆರಿಕಕ್ಕೆ ಭಾರತದ ಟೆಲಿಕಾಂ ತಂತ್ರಜ್ಞಾನ ರಫ್ತು:

ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಈಗ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕವಾಗಿವೆ. ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ: BSNL OTT : ಬಿಎಸ್ಸೆನ್ನೆಲ್‌ನಿಂದ OTT ಸೇವೆ ಸಿನಿಮಾಪ್ಲಸ್‌ ಆರಂಭ

Continue Reading

5 G

Jio True 5G | ಜಿಯೋದಿಂದ ಹೊಸ ವರ್ಷದ ಕೊಡುಗೆ; ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಪ್ರಾರಂಭ

ದೇಶದ ವಿವಿಧ ನಗರಗಳಲ್ಲಿ 5ಜಿ ಸೇವಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಆರಂಭಿಸಿದೆ.

VISTARANEWS.COM


on

Jio True 5G @ Mysuru
Koo

ಮೈಸೂರು: ರಿಲಯನ್ಸ್ ಜಿಯೋ ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ (Jio True 5G) ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಬುಧವಾರದಿಂದಲೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. “ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ

Continue Reading

5 G

5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?

ಭಾರತದಲ್ಲಿ 5ಜಿ ಸೇವೆಗೆ (5G Service Launch) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಈ ಸೇವೆ ದೊರೆಯಲಿದೆ.

VISTARANEWS.COM


on

Karnataka Election Results- 217 Crorepatis In 224 Member Karnataka Assembly
Koo

ನವ ದೆಹಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆ(5G Service Launch)ಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ರಿಮೋಟ್‌ ಬಟನ್‌ ಒತ್ತುವ ಮೂಲಕ ಅವರು ಸೇವೆಗಳನ್ನು ಉದ್ಘಾಟಿಸಿದರು. ಏತನ್ಮಧ್ಯೆ, ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲೂ 5ಜಿ ಸೇವೆ ದೊರೆಯಲಿದೆ. ಈ ಮೊದಲು ಬೆಂಗಳೂರು ಆರಂಭದಲ್ಲಿ ಈ ಸೇವೆ ದೊರೆಯುವಿುದಿಲ್ಲ ಎಂದು ಹೇಳಲಾಗುತ್ತಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬೆಂಗಳೂರು ಸೇರಿದಂತೆ ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಸಿಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ ಕಡೆ 5ಜಿ ಸೇವ ದೊರೆಯಲಿದೆ. ಸದ್ಯಕ್ಕೆ ಬೆಂಗಳೂರು, ಚಂಡೀಗಢ, ಅಹ್ಮದಾಬಾದ್, ಗಾಂಧಿನಗರ, ಗುರುಗ್ರಾಮ್, ಹೈದ್ರಾಬಾದ್, ಜಾಮನಗರ್, ಚೆನ್ನೈ, ದಿಲ್ಲಿ, ಕೋಲ್ಕೊತಾ, ಮುಂಬೈ, ಪುಣೆ ಮತ್ತು ಲಖನೌ ನಗರಗಲ್ಲಿ 5ಜಿ ಸೇವೆ ದೊರೆಯಲಿದೆ.

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಕಂಪನಿಗಳು ಈ 5ಜಿ ಸೇವೆಯನ್ನು ಒದಗಿಸಲಿವೆ. ಈಗಾಗಲೇ ಈ ಬಗ್ಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈ ಕಂಪನಿಗಳು ಮಾಡಿಕೊಂಡಿವೆ.

ಹೊಸ ಯುಗ ಆರಂಭ- ಮೋದಿ
5ಜಿ ಸಂಪರ್ಕದೊಂದಿಗೆ, ದೇಶದಲ್ಲಿ ಆಧುನಿಕತೆಯ ಹೊಸ ಯುಗವೊಂದು ಆರಂಭವಾಗಲಿದೆ. ಯುವಜನತೆಗೆ ನೂತನ ಅವಕಾಶಗಳು ತೆರೆದುಕೊಳ್ಳಲಿವೆ. ಶಕ್ತಿದೇವತೆಯನ್ನು ಪೂಜಿಸುವ ನವರಾತ್ರಿಯ ಶುಭಪರ್ವದ ಸಂದರ್ಭದಲ್ಲಿ ಶಕ್ತಿಯ ಇನ್ನೊಂದು ಮಾಧ್ಯಮವೆನಿಸಿದ 5G ದೇಶದ ಜನತೆಗೆ ಅರ್ಪಿಸುವುದಕ್ಕೆ ನನಗೆ ಆನಂದವೆನಿಸುತ್ತದೆ. ಇದೊಂದು ಐತಿಹಾಸಿಕ ದಿನ, ಕ್ಷಣ. ಭಾರತದ ಇದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ಜಗತ್ತಿಗೇ ಮಾದರಿಯನ್ನು ಕಲ್ಪಿಸಲಿದೆ ಎಂದು ನರೇಂದ್ರ ಮೋದಿ ಅವರು 5ಜಿ ಸೇವೆಯನ್ನು ಉದ್ಘಾಟಿಸಿ ಹೇಳಿದರು.

ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್‌ ಒದಗಿಸಿದಂತೆ ವಿದ್ಯುತ್‌ ಅವಲಂಬಿಸಿ ಮಾಡಬಹುದಾದ ಕೆಲಸಗಳು ಹಾಗೂ ಉಪಕರಣಗಳ ಮಾರುಕಟ್ಟೆಯೂ ವರ್ಧಿಸಿತು. ಹಾಗೆಯೇ 5G ಅವಂಬಿಸಿಯೂ ಜೀವನಶೈಲಿಯಲ್ಲಿ ದೊಡ್ಡ ಮಾರ್ಪಾಡು ಆಗಲಿದೆ. 5G ಎಂದರೆ ಕೇವಲ ಮನರಂಜನೆಯ ಹೆಚ್ಚಳ ಮಾತ್ರ ಆಗುವುದಿಲ್ಲ. ಅದು ಬಡವರೂ ಸೇರಿದಂತೆ ಎಲ್ಲ ವಲಯದ ಜೀವನವನ್ನು ಸುಧಾರಿಸಲಿದೆ. ನಾವು ನೇರ ಪಾವತಿ ಕಾರ್ಯಕ್ರಮವನ್ನು ಆರಂಭಿಸಿದಾಗ ತುಂಬಾ ಮಂದಿ ಅದರ ಪರಿಣಾಮಕಾರತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಜಗತ್ತಿನ ಬೇರೆ ಬೇರೆ ಮುಂದುವರಿದ ದೇಶಗಳು ಕೂಡ ಇದನ್ನು ಒದಗಿಸುವಲ್ಲಿ ಸೋತಿದ್ದವು. ಆದರೆ ಭಾರತ ಅದನ್ನು ಒಂದೇ ಕ್ಲಿಕ್‌ನಲ್ಲಿ ಸಾಧಿಸಬಹುದು ಎಂಬುದನ್ನು ತೋರಿಸಿತು. 5G ವಿಷಯದಲ್ಲೂ ಹೀಗೇ ಆಗಲಿದೆ ಎಂದರು.

ಇಂದು ನಾವು ಆತ್ಮನಿರ್ಭರ ಭಾರತ, ಡಿಜಿಟಲ್‌ ಭಾರತ ಆಗಿದ್ದೇವೆ. ಸರ್ಕಾರ ಸರಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು ಎಂದು ತೋರಿಸಿದ್ದೇವೆ. ಇದೇ 2G ನಿಯತ್ತಿಗೂ 5G ನಿಯತ್ತಿಗೂ ಇರುವ ವ್ಯತ್ಯಾಸ ಎಂದು ಪ್ರಧಾನಿ ಯುಪಿಎ ಸರ್ಕಾರದ ʻ2G ಹಗರಣʼಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಇದನ್ನೂ ಓದಿ | 5G Services Launch | ಭಾರತದಲ್ಲಿ 5ಜಿ ಜಮಾನಾ ಶುರು; ಏನಿದು ಇಂಟರ್‌ನೆಟ್‌ ಕ್ರಾಂತಿ? ಏನಿದರ ಅನುಕೂಲ?

Continue Reading
Advertisement
Dina Bhavihsya
ಪ್ರಮುಖ ಸುದ್ದಿ36 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News6 hours ago

Election Results 2023 Live: ಕೆಲವೇ ಕ್ಷಣಗಳಲ್ಲಿ 4 ರಾಜ್ಯಗಳ ಚುನಾವಣೆ ಫಲಿತಾಂಶ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ6 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

women seriously injured
ಕರ್ನಾಟಕ6 hours ago

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Bangalore Bulls
ಕ್ರೀಡೆ6 hours ago

Pro Kabaddi : ಗುಜರಾತ್​ ತಂಡಕ್ಕೆ ಸೆಡ್ಡು ಹೊಡೆಯುವುದೇ ಬುಲ್ಸ್​

Heart Attack
ಆರೋಗ್ಯ6 hours ago

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Pro Kabaddi Day 1
ಕ್ರೀಡೆ7 hours ago

Pro Kabaddi: ಮೊದಲ ದಿನ ಗುಜರಾತ್​, ಮುಂಬಾ ತಂಡಕ್ಕೆ ಗೆಲುವು

States economy
ಕರ್ನಾಟಕ7 hours ago

ರಾಜ್ಯದ ಆರ್ಥಿಕತೆ ವೃದ್ಧಿಸಲು ವಾರ್ಷಿಕ 1.4 ಲಕ್ಷ ಕೋಟಿ ಹೂಡಿಕೆಯ ಗುರಿ ನಿಗದಿ

JP Nadda And BY Vijayendra
ಕರ್ನಾಟಕ7 hours ago

BY Vijayendra: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ನಡ್ಡಾ ಭೇಟಿಯಾದ ವಿಜಯೇಂದ್ರ; ಏನೇನು ಚರ್ಚೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ36 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ13 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌