Karnataka Election 2023: ಮತ ಚಲಾಯಿಸಿದ ಸೋಂದಾ ಸ್ವರ್ಣವಲ್ಲೀ ಶ್ರೀ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ - Vistara News

ಉತ್ತರ ಕನ್ನಡ

Karnataka Election 2023: ಮತ ಚಲಾಯಿಸಿದ ಸೋಂದಾ ಸ್ವರ್ಣವಲ್ಲೀ ಶ್ರೀ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ

Assembly Election: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮತದಾನ ಮಾಡಿದ್ದಾರೆ. ಇನ್ನೊಂದು ಕಡೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಹಕ್ಕು ಚಲಾವಣೆ ಮಾಡಿದ್ದಾರೆ.

VISTARANEWS.COM


on

Sonda Swarnavalli seer and Padmashri Sukri Bommagowda cast their votes
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಾಡಿನ ಸ್ವಾಮೀಜಿಗಳು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಸ್ವರ್ಣವಲ್ಲೀ ಸೋಂದಾ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮತದಾನ ಮಾಡಿದ್ದಾರೆ.

ಶಿರಸಿ ವಿಧಾನಸಭಾ ಕ್ಷೇತ್ರದ ಸೋಂದಾದ ಖಾಸಾಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಸ್ವರ್ಣವಲ್ಲೀ ಸೋಂದಾ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, “ಪ್ರತಿಯೊಬ್ಬ ಮತದಾರರು ಕೂಡ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡುವುದು ದೇವರ ಕೆಲಸವಿದ್ದಂತೆ. ಬೇರೆ ರಾಜ್ಯದಲ್ಲಿ ಶೇ.50ರಷ್ಟು ಮತದಾನವಾಗುತ್ತದೆ ಎಂದು ಕೇಳಿದ್ದೇವೆ. ಆದರೆ, ರಾಜ್ಯದಲ್ಲಿ ಅಷ್ಟು ಕಡಿಮೆ ಮತದಾನವಾಗುವುದಿಲ್ಲ. ಈ ಭಾರಿ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.

Sonda Swarnavalli seer voting in sirsi
ಸೋಂದಾದ ಖಾಸಾಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಸ್ವರ್ಣವಲ್ಲೀ ಸೋಂದಾ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಇದನ್ನೂ ಓದಿ: Karnataka Election 2023 Live Updates: ರಾಜ್ಯ ವಿಧಾನಸಭೆ ಚುನಾವಣೆಯ ಕ್ಷಣಕ್ಷಣದ ಸುದ್ದಿ: ರಾಜ್ಯದಲ್ಲಿ ಶೇ. 37.25 ರಷ್ಟು ಮತದಾನ

ರಾಜ್ಯಭಾರ ನಡೆಸುವುದು ಕೂಡ ದೇವರ ಕೆಲಸ. ಪ್ರಜಾಪ್ರಭುತ್ವದಲ್ಲಿ ಸೂಕ್ತ ವ್ಯಕ್ತಿಯ ಆಯ್ಕೆ ಹಾಗೂ ಸರ್ಕಾರವನ್ನು ರಚನೆ ಮಾಡುವ ಅಧಿಕಾರವು ಮತದಾರರ ಕೈಯಲ್ಲಿದೆ. ಎಲ್ಲರಿಗೂ ಒಪ್ಪುವ ಸರ್ಕಾರ ಬರಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.

Padmashri Sukri Bommagowda voting in ankola
ಅಂಕೋಲಾದ ಬಡಗೇರಿಯ ಮತಗಟ್ಟೆಯಲ್ಲಿ ಮತದಾನ ನೆರವೇರಿಸಿದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ

ಅಂಕೋಲಾದ ಬಡಗೇರಿಯಲ್ಲಿ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮತದಾನ

ರಾಜ್ಯದಲ್ಲಿ ಹಿರಿಯರು, ಶತಾಯುಷಿಗಳೂ ಸಹ ಮತದಾನಕ್ಕೆ ಉತ್ಸಾಹ ತೋರುತ್ತಿದ್ದು, ಬೆಳಗ್ಗೆಯಿಂದಲೇ ಹಕ್ಕು ಚಲಾಯಿಸುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ವ್ಹೀಲ್‌ಚೇರ್ ಮೇಲೆ ಬಂದು ಮತದಾನ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಡಗೇರಿಯ ಮತಗಟ್ಟೆ ಸಂಖ್ಯೆ 182ರಲ್ಲಿ ಮತದಾನ ನೆರವೇರಿಸಿದ್ದು, ಎಲ್ಲರೂ ಕಡ್ಡಾಯವಾಗಿ ಹಕ್ಕು ಚಲಾಯಿಸುವಂತೆ ಕರೆ ನೀಡಿದ್ದಾರೆ.

ವ್ಹೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿದ ಸುಕ್ರಿ ಬೊಮ್ಮಗೌಡ

ಇದನ್ನೂ ಓದಿ: Karnataka Election: ಪತ್ನಿ ಚೆನ್ನಮ್ಮ ಜತೆ ಬಂದು ಮತ ಹಾಕಿದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು

ಊರನ್ನು ಅಭಿವೃದ್ಧಿ ಮಾಡುವವರು ಆಯ್ಕೆಯಾಗಬೇಕು. ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಮುಂದಿನ ನಾಯಕರನ್ನು ಆಯ್ಕೆ ಮಾಡಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದು ಸುಕ್ರಿ ಬೊಮ್ಮಗೌಡ ಮನವಿ ಮಾಡಿದ್ದಾರೆ.

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಮಳೆ

Karnataka Rain : ನಿರಂತರ ಮಳೆಗೆ ಬೆಂಗಳೂರಿಗರು ಕಂಗಾಲು; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Karnataka Rain : ನಿರಂತರ ಮಳೆಗೆ ಬೆಂಗಳೂರಿಗರು ಕಂಗಾಲಾಗಿದ್ದಾರೆ. ನಾಳೆ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Rain
Koo

ಬೆಂಗಳೂರು: ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ನಿರಂತರ ಮಳೆಗೆ (Karnataka Rain) ಜನರು ಕಂಗಲಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ (School Holidays) ನಾಳೆ (ಬುಧವಾರ) ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಡಿಸಿ ಜಗದೀಶ್ ಮಾಹಿತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆ ಒಂದು ದಿನ ರಜೆ ನೀಡಲು ನಿರ್ಧಾರ ಮಾಡಲಾಗಿದೆ. ಮಳೆಯ ಸ್ಥಿತಿಗತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು. ಖಾಸಗಿ ಹಾಗೂ ಸರ್ಕಾರಿ ಎರಡೂ ಶಾಲಾ ಕಾಲೇಜಿಗೆ ರಜೆ ನೀಡಲು ನಿರ್ಧಾರ ಮಾಡಲಾಗಿದೆ.

ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ವೈಟ್ ಫೀಲ್ಡ್‌, ಮಾರತಹಳ್ಳಿ, ಸರ್ಜಾಪುರ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಡ್ರೈನೇಜ್ ಪೈಪ್ ಹೊಡೆದು ರಸ್ತೆ ಮಧ್ಯೆ ಮೋರಿ ನೀರು ಹಾರಿಯುತ್ತಿದೆ. ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇತ್ತ ಹಲಸೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಪ್ತ ಲೇಔಟ್‌ನಲ್ಲಿ ಮ್ಯಾನ್ ಹೋಲ್ ಉಕ್ಕಿ ಹರಿದಿದೆ. ಭಾರಿ ಮಳೆಗೆ ಬನಶಂಕರಿ ಸಿಂಡಿಕೇಟ್ ಕಾಲೋನಿ ಸಮೀಪ ಮರವೊಂದು ನೆಲಕ್ಕೆ ಉರುಳಿದೆ. ಅದೃಷ್ಟವಶಾತ್‌ ಮಳೆ ಕಾರಣಕ್ಕೆ ಜನರ ಓಡಾಟ ಇರಲಿಲ್ಲ ಹೀಗಾಗಿ ಅನಾಹುತ ಸಂಭವಿಸಿಲ್ಲ.

ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ

ಹಂಪಿ ನಗರ 26 ಮಿ.ಮೀ, ಕೆಂಗೇರಿ 25.5 ಮಿ.ಮೀ, ಮಾರುತಿ ಮಂದಿರ 25 ಮಿ.ಮೀ, ದೊರೆಸಾನಿಪಾಳ್ಯ 21.5 ಮಿ.ಮೀ, ರಾಜರಾಜೇಶ್ವರಿ ನಗರ 19.5 ಮಿ.ಮೀ, ನಾಯಂಡಹಳ್ಳಿ 17 ಮಿ.ಮೀ, ನಂದಿನಿ ಲೇಔಟ್​​ 16.5 ಮಿ.ಮೀ, ಬಿಟಿಎಂ ಲೇಔಟ್​​ 16.5 ಮಿ.ಮೀ ಮಳೆಯಾಗಿದೆ.

ಡಿಸಿ ಕಚೇರಿ ಆವರಣದಲ್ಲಿರುವ ಹೋಟೆಲ್‌ಗೆ ಮಳೆ ನೀರು ನುಗ್ಗಿದ್ದರೆ, ಗುಟ್ಟಹಳ್ಳಿ ಸರ್ಕಲ್ ಬಳಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಮಾನ್ಯತಾ ಟೆಕ್ ಪಾರ್ಕ್‌ನ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಟೆಕ್ ಪಾರ್ಕ್‌ನ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ.

ಬೆಳ್ಳಂದೂರು ಲೇಕ್ ರಸ್ತೆಯಲ್ಲಿ ಕೆಸರು ಮಯವಾಗಿತ್ತು. ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಕೆಸರಿನ ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರು ಪರದಾಡಿದರು. ಸುತ್ತ 2 ಕಿಲೋ ಮೀಟರ್ ಸಂಚಾರ ಸಾಧ್ಯ ಆಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಿಗ್ಗೆಯಿಂದ ಹಲವು ವಾಹನಗಳು ಕೆಟ್ಟು ನಿಂತು ಫಜೀತಿ ಉಂಟಾಗಿತ್ತು. ಆಳವಾದ ಗುಂಡಿ ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ರಸ್ತೆಯಲ್ಲಿ 4 ಅಡಿಯಷ್ಟು ನೀರು ನಿಂತಿತ್ತು. ಕೆ.ಆರ್ ವಿಧಾನಸಭಾ ಕ್ಷೇತ್ರದ ವಡ್ಡರಪಾಳ್ಯದ ಸಾಯಿ ಲೇಔಟ್‌ಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ಮನೆಗಳು ಜಲಾವೃತಗೊಂಡಿದ್ದವು.

karnataka Rain
karnataka Rain

ಬೆಂಗಳೂರಿನ ಶಿವಾಜಿನಗರದ, ಬ್ರಹ್ಮಕುಮಾರಿ ವೃತ್ತ , ಸೆಪ್ಪಿಂಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಯಲ್ಲಿ ಮೊಣಕಾಲುದ್ದ ನೀರು ತುಂಬಿದ್ದು, ಅಂಗಡಿ ಮುಂಗಟ್ಟುಗಳಿಗೆ ದೇವಸ್ಥಾನಗಳಿಗೆ ನೀರು ನುಗ್ಗಿದೆ. ವಾಹನಗಳ ಇಂಜಿನ್‌ಗೆ ನೀರು ನುಗ್ಗಿ ವಾಹನಗಳು ಕೆಟ್ಟೋ ರಸ್ತೆಯಲ್ಲೇ ನಿಂತು ಹೋಗುತ್ತಿವೆ. ಪಾಟರಿ ಟೌನ್ ಬಳಿಯ ಗಾಂಧಿ ಗ್ರಾಮದ ರಸ್ತೆಯಿಂದ ಟ್ಯಾನಿರೋಡ್‌ಗೆ ಸಂಪರ್ಕಿಸುವ ರಸ್ತೆ ಕರೆಯಂತಾಗಿದೆ. ಯಲಹಂಕದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಮತ್ತೆ ಜಲಾವೃತಗೊಂಡಿದೆ.

Continue Reading

ಮಳೆ

Karnataka Rain : ಬೆಂಗಳೂರಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಧರೆಗುರುಳಿದ ಬೃಹತ್‌ ಮರ, ಕಾರು ಜಖಂ

Karnataka Rain : ಬೆಂಗಳೂರಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೃಹತ್‌ ಮರ ಧರೆಗುರುಳಿದ್ದು, ಕಾರು ಜಖಂಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ (Karnataka Rain) ಸುರಿಯುತ್ತಿರುವ ಕಾರಣ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವರುಣ ಅಡ್ಡಿಯಾಗಿದ್ದಾನೆ. ಶೇಷಾದ್ರಿಪುರಂ, ಆರ್ ಆರ್ ನಗರ, ರಾಜಾಜಿನಗರ, ಗಾಂಧಿನಗರ, ಶಾಂತಿ ನಗರ, ಮೆಜೆಸ್ಟಿಕ್‌, ಕೆ.ಆರ್‌ ಮಾರುಕಟ್ಟೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ.

Karnataka Rain
karnataka Rain

ಕೆಲಸ- ಕಾಲೇಜುಗಳಿಗೆ ಹೋಗುವವರಿಗೆ ಮಳೆರಾಯ ಶಾಕ್‌ ಕೊಟ್ಟಿದ್ದ. ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Rain
karnataka Rain

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಸೇರಿದಂತೆ ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೇಲಿನ ಜಿಲ್ಲೆಗಳಿಗೆ ಮಂಗಳವಾರ ಹಾಗೂ ಬುಧವಾರ ಯೆಲ್ಲೋ ಅಲರ್ಟ್ ಹಾಗೂ ಅಕ್ಟೋಬರ್ 17ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

karnataka Rain
karnataka Rain

ಮಳೆಗೆ ಧರೆಗುರುಳಿದ ಮರ, ಅಂಡರ್‌ಪಾಸ್‌ ಜಲಾವೃತ

ರಾತ್ರಿ ಶುರುವಾದ ಮಳೆಯು ಬೆಳಗಾದರೂ ಬಿಟ್ಟಿಲ್ಲ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮೆಜೆಸ್ಟಿಕ್ ರೈಲ್ವೆ ಅಂಡರ್ ಪಾಸ್‌ ಜಲಾವೃತಗೊಂಡಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಎಚ್‌ಎಂಟಿ (HMT)ಲೇಔಟ್ ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಮರ ಬಿದ್ದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರಸ್ತೆಯಲ್ಲಿ ಜನರು ಛತ್ರಿ ಹಿಡಿದು ಓಡಾಡುತ್ತಿರುವ ದೃಶ್ಯ ಕಂಡು ಬಂತು. ತಗ್ಗು ಪ್ರದೇಶ ಮತ್ತು ರಸ್ತೆಗಳಲ್ಲಿ ಮಳೆ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು.

ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಬೆಳಗ್ಗೆಯಿಂದ ಸುರಿದ ಮಹಾ ಮಳೆಗೆ ಫ್ರೇಜರ್ ಟೌನ್ ಬಳಿ ಇರುವ ಎನ್ ಸಿ ಕಾಲೋನಿಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಬೆಂಗಳೂರಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಎನ್ ಸಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ. ರಾಜಕಾಲುವೆ ಉಕ್ಕಿ ಹರಿದು ಎನ್ ಸಿ ಕಾಲೋನಿಗೆ ಕೊಚ್ಚೆ ನೀರು ನುಗ್ಗಿದೆ. ನೀರು ತೆರವು ಮಾಡಲು ಸ್ಥಳೀಯ ನಿವಾಸಿಗಳ ಪರದಾಟ ಅನುಭವಿಸುತ್ತಿದ್ದಾರೆ. ರಾಜಕಾಲುವೆಗೆ ಅಂಟಿಕೊಂಡೇ ಇರುವ ಎನ್ ಸಿ ಕಾಲೋನಿ ಬಡಾವಣೆ ಇದಾಗಿದೆ. ಇನ್ನೂ ಪಣತ್ತೂರು ಅಂಡರ್ ಪಾಸ್ ನೀರು ನಿಂತಿದ್ದರಿಂದ ಸವಾರರು, ಚಾಲಕರು ಸರ್ಕಸ್‌ ಮಾಡಬೇಕಾಯಿತು

ತುಮಕೂರು, ಶಿವಮೊಗ್ಗದಲ್ಲೂ ಮಳೆ ಅಬ್ಬರ

ಕಲ್ಪತರು ನಾಡು ತುಮಕೂರಿನಲ್ಲೂ ವರುಣನ ಅಬ್ಬರ ಜೋರಾಗಿದೆ. ರಾತ್ರಿಯಿಂದಲೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೈನಂದಿನ ಕೆಲಸಕ್ಕೆ ಹೋಗುವವರ ಪರದಾಡಿದರು. ಈಗಾಗಲೇ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಲೆನಾಡು ಶಿವಮೊಗ್ಗದಲ್ಲೂ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರದಿಂದ ಮತ್ತೆ ನದಿ, ಹಳ್ಳಕೊಳ್ಳಗಳು ಜೀವಕಳೆ ಪಡೆದುಕೊಂಡಿವೆ.

ಬಿರುಗಾಳಿ ಸಹಿತ ಭಾರಿ ಮಳೆಗೆ ನೆಲಕ್ಕುರುಳಿದ ಟೆಂಟ್‌

ಬಿರುಗಾಳಿ ಸಹಿತ ಭಾರೀ ಮಳೆಗೆ ಡ್ರಾಮಾ ಟೆಂಟ್ ನೆಲಕ್ಕುರುಳಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಚಿತ್ತರಗಿಯ ಶ್ರೀಕುಮಾರ ವಿಜಯ ನಾಟಕ ಸಂಘದ ಬೃಹತ್ ಗಾತ್ರದ ಟೆಂಟ್‌ಗೆ ಹಾನಿಯಾಗಿದೆ. ಪಟ್ಟಣದ‌ ಅನ್ನದಾನೀಶ್ವರ ಮಠದ ಜಾಗೆಯಲ್ಲಿ ಹಾಕಲಾಗಿದ್ದ ನಾಟಕದ ಬೃಹತ್ ರಂಗಮಂದಿರ‌‌ ಸಜ್ಜಿಕೆ, ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆಯಲ್ಲಿ ರಂಗಮಂದಿರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ‌ ಪ್ರಾಣಹಾನಿ ಇಲ್ಲ. ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಬೀದಿಗೆ ಬಿದ್ದಿದೆ. ನಾಟಕದ ಬ್ಯಾಗ್ರೌಂಡ್‌ ಸೀನ್ರಿ, ಸೌಂಡ್ ಸಿಸ್ಟಮ್, ಲೈಟಿಂಗ್, ಕುರ್ಚಿ ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಒಂದು ಕಾರು, ಎರಡು ಬೈಕ್‌ಗಳು ಜಖಂಗೊಂಡಿದೆ. ಸಹಾಯಹಸ್ತದ ನೀರಿಕ್ಷೆಯಲ್ಲಿ ರಂಗ ಕಲಾವಿದರು ಇದ್ದಾರೆ.

ದಾವಣಗೆರೆಯಲ್ಲಿ ಮಲೆನಾಡು ವಾತಾವರಣ

ದಾವಣಗೆರೆ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಜಿಲ್ಲೆಯ ಬಹುತೇಕ ಕಡೆ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬಾರದಂತಾಗಿದೆ.ದಾವಣಗೆರೆ ತಾಲೂಕಿನ ಅಣ್ಣಾಪುರ, ನರಗನಹಳ್ಳಿ, ಹೊನ್ನಾಯಕನಹಳ್ಳಿ , ಸುಲ್ತಾನಿಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ನಿರಂತರ ಮಳೆಯಾಗಿದೆ. ಮಳೆಯಿಂದ ಅಡಿಕೆ ತೆಂಗಿನ ತೋಟಗಳ ರೈತರಲ್ಲಿ ಸಂತಸ ಮೂಡಿದೆ. ಜಿಲ್ಲೆಯ ಬಹುತೇಕ ನಡೆ ಕೆರೆ ಕಟ್ಟೆಗಳು ಭರ್ತಿಯಾಗಿದೆ. ಜಿಟಿ ಜಿಟಿ ಮಳೆಗೆ ದಿನ ನಿತ್ಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಕಲಬುರಗಿಯಲ್ಲಿ ಮತ್ತೆ ವರುಣನ ಆಗಮನವಾಗಿದ್ದು, ಒಂದು ಗಂಟೆಯಿಂದ ಸುರಿಯುತ್ತಿದೆ. ಭಾರಿ ಗುಡುಗು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಎರಡು ದಿನದಿಂದ ಬಿಸಿಲಿಗೆ ಬೆಂದಿದ್ದ ಕಲಬುರಗಿ ಜನತೆಗೆ ವರುಣ ತಂಪೆರದಿದ್ದಾನೆ.

ಸತತ ಮಳೆಗೆ ಬತ್ತಿದ ಕೊಳವೆಗಳಲ್ಲಿ ಚಿಮ್ಮುತ್ತಿರುವ ನೀರಿನ ಸೆಲೆ

ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಹಲವೆಡೆ ಬತ್ತಿದ ಕೊಳವೆಗಳಲ್ಲಿ ನೀರಿನ ಸೆಲೆ ಚಿಮ್ಮುತ್ತಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚೌಡಯ್ಯಧಾನಪುರ ಗ್ರಾಮದಲ್ಲಿ ಬೊರ್ ವೆಲ್ನಿಂದ ನೀರು ಚಿಮ್ಮುತ್ತಿದೆ. ಚೌಡಯ್ಯಧಾನಪುರ ಗ್ರಾಮದ ಸಿದ್ದಪ್ಪ ದೀಪಾವಳಿ ಎಂಬುವ ರೈತರಿಗೆ ಸೇರಿದ ಬೋರ ವೆಲ್ ಇದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಜಿಟಿ ಜಿಟಿ ಮಳೆಗೆ ಬೆಂಗಳೂರು ಕೂಲ್‌ ಕೂಲ್‌; ಮುಂದಿನ 4 ದಿನಗಳು ವರ್ಷಧಾರೆ

Karnataka Rain : ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯ ಸಿಂಚನವಾಗಲಿದೆ. ಸೋಮವಾರ ಬೆಳಗಿನಂದಲೇ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ವಾತಾವರಣ ಕೂಲ್‌ ಆಗಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದ್ದು, ವಾತಾವರಣ ಕೂಲ್‌ ಆಗಿದೆ. ಮಲ್ಲೇಶ್ವರಂ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಜಯನಗರ ಸೇರಿದಂತೆ ನಸುಕಿನ ಜಾವದಿಂದ ಮಳೆ ಶುರುವಾಗಿದೆ. ಹಲವೆಡೆ ಮಂಜಿ ಹೊದಿಕೆ ಇದ್ದು, ದಿನವಿಡಿ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 17ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

Road Accident in chikkmagaluru
Road Accident in chikkmagaluru

ಮಳೆಗೆ ರಸ್ತೆ ತಿರುವಿನಲ್ಲಿ ಟಿಟಿ ವಾಹನ ಪಲ್ಟಿ

ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಘಟನೆ ನಡೆದಿದೆ. ಟಿಟಿ ವಾಹನದಲ್ಲಿ ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದರು. ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ಹೊರಟಾಗ ಅವಘಡ ಸಂಭವಿಸಿದೆ. 15 ಜನ ಪ್ರಯಾಣಿಕರಲ್ಲಿ 9 ಜನರಿಗೆ ಗಾಯವಾಗಿದ್ದು ಕಳಸ, ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದಲ್ಲೂ ಮಳೆಯಾಟ

ಬಂಗಾಳ ಕೊಲ್ಲಿ ಸೈಕ್ಲೋನ್ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಇನ್ನೂ ಮೂರು ದಿನಗಳ‌ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ, ಆಂಧ್ರಪ್ರದೇಶದ ಗಡಿಗೆ ಹೊಂದಿರುವ ಕೋಲಾರದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಮಳೆ ಹೆಚ್ಚಾದರೆ ತೋಟಗಾರಿಕ ಬೆಳೆಗಳಾದ ಹೂ , ಬಿನ್ಸ್ ,ಟೊಮ್ಯಾಟೊ, ಜೋಳಕ್ಕೆ ಹಾನಿಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ನಿರಂತರ ಮಳೆಗೆ ಮನೆಗಳು ನೆಲಸಮ; ಕಾಲುವೆ ಒಡೆದು ಜಮೀನು ಜಲಾವೃತ

Karnataka Rain : ಭಾರಿ ವರ್ಷಧಾರೆಗೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಮನೆಗಳು ನೆಲಸಮವಾಗಿದ್ದು, ಕಾಲುವೆ ಒಡೆದು ಜಮೀನುಗಳು ಜಲಾವೃತಗೊಂಡಿದೆ.

VISTARANEWS.COM


on

By

karnataka Rain
Koo

ವಿಜಯನಗರ : ವಿಜಯನಗರದ ಹರಪನಹಳ್ಳಿ ತಾಲೂಕಿನಲ್ಲಿ ಮಳೆಯ ಅವಾಂತರ (Karnataka Rain ) ಮುಂದುವರಿದಿದೆ. ಮಳೆಯಿಂದಾಗಿ 10ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಬಂಡ್ರಿ ತಾಂಡದಲ್ಲಿ ಕೊಟ್ರಿಬಾಯಿ, ಚಿಗಟೇರಿಯಲ್ಲಿ ಉತ್ತಂಗಿ ದೀಪ, ಹಗರಿಗಜಾಪುರದಲ್ಲಿ ಶಂಭುಲಿಂಗಯ್ಯ ಎಂಬುವವರ ಮನೆಗೆ ಹಾನಿಯಾಗಿದೆ, ಕೂಲಹಳ್ಳಿ ಗುರುವಿನ ಬಸವರಾಜ, ಬಸವನಾಳು ಗ್ರಾಮ ಕೊಟ್ರೇಶ್‍, ಶ್ರೀಕಂಠಾಪುರದಲ್ಲಿ ಅಣ್ಣಪ್ಪ, ಕುಣೆಮಾದಿಹಳ್ಳಿ, ದಡಿಗಾರನಹಳ್ಳಿ, ಕೆಸರಹಳ್ಳಿ ಗ್ರಾಮದಲ್ಲಿ ತಲಾ ಒಂದು ಮನೆ, ಚಿಗಟೇರಿ ಹೋಬಳಿ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಲಕ್ಷ್ಮಿಪುರದಲ್ಲಿ ಸಿಡಿಲು ಬಡಿದು ಹಸು ಮೃತಪಟ್ಟಿದೆ. ಮಾದಾಪುರ ಗ್ರಾಮದಲ್ಲಿನ ಕೆರೆ ಕೋಡಿ ಬಿದ್ದಿದೆ. ಕೂಲಹಳ್ಳಿ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗುವ ಹಂತದಲ್ಲಿದೆ. ಹರಪನಹಳ್ಳಿ ಅಯ್ಯನಕೆರೆ, ಕಾಯಕದಹಳ್ಳಿ ರಸ್ತೆಯ ನಾಯಕನಕೆರೆಗೆ ಮಳೆ ನೀರಿಂದ ಭರ್ತಿ ಹಂತಕ್ಕೆ ತಲುಪಿದೆ.

ಮಂಡ್ಯದಲ್ಲೂ ಮಳೆ ಅವಾಂತರ

ಸತತವಾಗಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿ ಉಮರ್ ನಗರದ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದೆ. ಮಳೆ ನೀರಿನಿಂದ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.
ಮೈಸೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ರಸ್ತೆ ಇದಾಗಿದೆ. ಅಂಡರ್ ಪಾಸ್ ರಸ್ತೆ ಜಲಾವೃತದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಂಡರ್ ಪಾಸ್ ರಸ್ತೆ ದಾಟಲು ಬೈಕ್ ಸವಾರ ಪರದಾಡಿದರು. ಸಮಸ್ಯೆ ಸರಿಪಡಿಸಿದ ರೈಲ್ವೆ ಅಧಿಕಾರಿಗಳು ಹಾಗು ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು

ವಿಜಯನಗರದ ಕೊಟ್ಟೂರು ಕೆರೆಯ ಕೋಡಿಯಲ್ಲಿ ಬಿರುಕು ಬಿಟ್ಟಿದೆ. ನಿನ್ನೆ ರಾತ್ರಿ ಸಮೃದ್ಧ ಮಳೆಯಾಗಿ ಕೊಟ್ಟೂರು ಕೆರೆಗೆ ನೀರು ಬಂದಿದೆ. ಕೆರೆ ಕೋಡಿ ಬೀಳಲು ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿ ಇದೆ. ಇದೇ ರೀತಿ ಇನ್ನೆರಡು ಮಳೆಗಳು ಬಂದರೆ ಕೋಡಿ ಬೀಳಬಹುದು. ಈಗಾಗಲೇ ಕೊಡಿಯ ಗೋಡೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಹತ್ತಿದೆ. ಕೋಡಿ ತನ್ನ ಉದ್ದಕ್ಕೂ ಎಂಟು ಹತ್ತಿರ ಬಿರುಕು ಬಿಟ್ಟು ಇದರಿಂದ ನೀರು ಹೊರಗಡೆ ಹರಿಯುತ್ತಿದೆ. ಅದರಲ್ಲೂ ಕೋಡಿಯ ಪ್ರಮುಖ ಭಾಗದಲ್ಲಿ ನೀರು ಹೋಗುತ್ತದೆ. ಇದನ್ನು ಹೀಗೆ ಬಿಟ್ಟರೆ ಕೊಡಿಯೇ ಒಡೆದು ಹೋಗಿ ನೀರೆಲ್ಲಾ ಪೋಲಾಗುವುದು ಗ್ಯಾರಂಟಿ.

ವಿಜಯನಗರ ಜಿಲ್ಲೆಯಾದ್ಯಂತ‌ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಭಾರೀ‌‌ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ನೀರು ನುಗ್ಗಿ ಇಡೀ ಬಡಾವಣೆ ಕೆರೆಯಂತಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನರ ಪರದಾಡಿದರು. ದಿನಸಿ, ಕಿರಾಣಿ ವಸ್ತುಗಳು, ಸಂಪೂರ್ಣ ನೀರುಮಯವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ವಿದ್ಯಾ ನಗರದಲ್ಲಿ ಘಟನೆ ನಡೆದಿದೆ. ಸಣ್ಣ ಕಾಲುವೆ ಮೂಲಕ ದೊಡ್ಡ ಕಾಲುವೆಗೆ ಸೇರಬೇಕಿದ್ದ ಮಳೆ‌ ನೀರು ಅವೈಜ್ಞಾನಿಕವಾಗಿ ಸಣ್ಣ ಕಾಲುವೆ ನಿರ್ಮಾಣ ಮಾಡಿದ ಹಿನ್ನೆಲೆ ಬಡಾವಣೆಗೆ ರಭಸವಾಗಿ ಹರಿದು ಬಂದು ಮನೆಗಳಿಗೆ ನುಗ್ಗಿ ಅವಾಂತರ‌ ಸೃಷ್ಟಿಯಾಗಿದೆ.

ಬೆಣ್ಣಿ ಹಳ್ಳದ ತೀರದಲ್ಲಿ ಭಾರಿ ಮಳೆ

ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕುರುಗೋವಿನಕೊಪ್ಪ ಗ್ರಾಮದಲ್ಲಿ 10 ಕುಟುಂಬದ 50 ಕ್ಕೂ ಹೆಚ್ಚು ಜನ ಸಿಲುಕಿ ಪರದಾಟ ಅನುಭವಿಸಿದರು. ಕುರುಗೋವಿನಕೊಪ್ಪ ಗ್ರಾಮ ಸುತ್ತುವರಿದ ಮಲಪ್ರಭಾ ನದಿ ನಡುಗಡ್ಡೆಯಾಗಿದೆ. ಬೆಣ್ಣಿಹಳ್ಳ ಉಕ್ಕಿ ಹರಿದು ಮಲಪ್ರಭಾ ನದಿ ಸೇರಿ ಅವಾಂತರವೇ ಸೃಷ್ಟಿಯಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರು ಗ್ರಾಮದಲ್ಲಿ ಸಿಲುಕಿ ಪರದಾಡಿದ್ದರು. ಎಮ್ಮೆ, ಆಕಳು ಸೇರಿದಂತೆ ಮೂಕ ಪ್ರಾಣಿಗಳು ಗ್ರಾಮದಲ್ಲಿ ಸಿಲುಕಿಕೊಂಡಿವೆ. ಕ್ಷಣ ಕ್ಷಣಕ್ಕೂ ಮಲಪ್ರಭಾ ನದಿ ನೀರು ಏರುತ್ತಿದೆ. ಗ್ರಾಮದಲ್ಲಿ ಸಿಲುಕಿದ ಜನರಲ್ಲಿ ಆತಂಕ ಹೆಚ್ಚಿದೆ.

ಹಾವೇರಿಯಲ್ಲಿ ವರುಣ ಆರ್ಭಟ

ಹಾವೇರಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಮಳೆಯ ರೌದ್ರನರ್ತನಕ್ಕೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಹೋಗಿದೆ. ಕಾಲುವೆ ಒಡೆದು ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಕಾಲುವೆ ಒಡೆದು ಎರಡು ದಿನ ಕಳೆದರು ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕಾಲುವೆ ಸರಿಪಡಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕೊಚ್ಚಿ ಹೋದ ಸೇತುವೆ

ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಗ್ರಾಮಸ್ಥರು ಹಗ್ಗದ ಸಹಾಯದಿಂದ ಕೊಚ್ಚಿ ಹೋದ ಸೇತುವೆಯನ್ನು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಮಧ್ಯ ಇರುವ ಸೇತುವೆ ಇದಾಗಿದೆ. ಸದ್ಯ ಸೇತುವೆ ಕೊಚ್ಚಿಹೋಗಿರೋದರಿಂದ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಸಂಪರ್ಕ ಸ್ಥಗಿತಗೊಂಡಿದೆ. ಕಳೆದ 2019ರ ಪ್ರವಾಹದಲ್ಲಿ‌ ಸೇತುವೆ ಅರ್ಧ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಸಚಿವ ಸಂತೋಷ ಲಾಡ್ಗೆ‌ ಮನವಿ ಸಲ್ಲಿಸಿದ್ದರು. ಕಳೆದ 4 ದಿನಗಳಿಂದ ಸುರಿದ ಮಳೆಗೆ ಪೂರ್ತಿಯಾಗಿ ಸೇತುವೆ ಕೊಚ್ಚಿಹೋಗಿದೆ.

Continue Reading
Advertisement
Gode Bengaluru
ಬೆಂಗಳೂರು6 ಗಂಟೆಗಳು ago

Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌

Pralhad Joshi
ದೇಶ6 ಗಂಟೆಗಳು ago

Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ

African boy successfully undergoes surgery for rare aplastic anemia
ಬೆಂಗಳೂರು7 ಗಂಟೆಗಳು ago

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Self Harming
ಚಿತ್ರದುರ್ಗ10 ಗಂಟೆಗಳು ago

Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Actress Amulyas brother film director Deepak aras passes away
ಸಿನಿಮಾ11 ಗಂಟೆಗಳು ago

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Fraud case Union Minister Pralhad Joshis brother duped of ticket for Lok Sabha polls
ಬೆಂಗಳೂರು12 ಗಂಟೆಗಳು ago

Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

Dina bhavishya
ಭವಿಷ್ಯ18 ಗಂಟೆಗಳು ago

Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

Gosavi samaj lathicharged Sri Ram Sene calls for bandh in Lakshmeshwara town on October 19
ಗದಗ1 ದಿನ ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು1 ದಿನ ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ1 ದಿನ ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌