ಉತ್ತರ ಕನ್ನಡ
Sirsi News: ಸೆ. 23, 24ರಂದು ಸ್ವರ್ಣವಲ್ಲೀಯಲ್ಲಿ ಯಕ್ಷೋತ್ಸವ, ಮಕ್ಕಳ ತಾಳಮದ್ದಲೆ ಸ್ಪರ್ಧೆ
Sirsi News: ಸೆ.23, 24 ರಂದು ಎರಡು ದಿನಗಳ ಕಾಲ ಶಿರಸಿಯ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಯಕ್ಷ ಶಾಲ್ಮಲಾ ಸಂಸ್ಥೆಯಿಂದ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಹೊಸ್ತೋಟ, ದಂಟ್ಕಲ್ ಪ್ರಶಸ್ತಿ ಪ್ರದಾನ, ತಾಳಮದ್ದಲೆ ಹಾಗೂ ಯಕ್ಷಗಾನ ಕಾರ್ಯಕ್ರಮಗಳ ಯಕ್ಷೋತ್ಸವ ನಡೆಯಲಿದೆ.
ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆ ಕಳೆದ 19 ವರ್ಷದಿಂದ ನಡೆಸುತ್ತಿರುವ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಹೊಸ್ತೋಟ, ದಂಟ್ಕಲ್ ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳ ಯಕ್ಷೋತ್ಸವ (Yakshotsava) ಸೆ.23, 24ರಂದು ಎರಡು ದಿನಗಳ ಕಾಲ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ (Swarnavalli Maha Samsthan) ನಡೆಯಲಿದೆ.
ಈ ಕುರಿತು ನಗರದ ಯೋಗ ಮಂದಿರದಲ್ಲಿ ಸಂಸ್ಥೆಯ ಆರ್.ಎಸ್. ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ ಜೋಶಿ ಮಾಹಿತಿ ನೀಡಿದರು.
ಉದ್ಘಾಟನೆ, ಪ್ರಶಸ್ತಿ ಪ್ರದಾನ
ಯಕ್ಷ ಶಾಲ್ಮಲಾ ಸಂಸ್ಥೆ ಮಠದ ಅಂಗ ಸಂಸ್ಥೆಯಾಗಿದ್ದು, 25 ವರ್ಷಗಳಿಂದ ಸಕ್ರೀಯವಾಗಿ ಯಕ್ಷಗಾನದ ಉಳಿವು, ಶಾಸ್ತ್ರ ಬದ್ಧತೆ, ಬೆಳವಣಿಗೆಗೆ ಸಕ್ರೀಯವಾಗಿ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Gold Rate Today: ಹಬ್ಬದ ದಿನವೇ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ; ಇಂದಿನ ಬೆಲೆ ಇಷ್ಟು
ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷ ಶಾಲ್ಮಲಾದ ಅಧ್ಯಕ್ಷರೂ ಆಗಿದ್ದ ದಿ.ಎಂ.ಎ ಹೆಗಡೆ ಅವರ ನೆನಪಿನ ಪ್ರಶಸ್ತಿ ಹಿರಿಯ ವಿದ್ವಾಂಸ ಅತ್ತಿಮುರಡು ವಿಶ್ವೇಶ್ವರ ಅವರಿಗೆ ಹಾಗೂ ಯಕ್ಷ ಶಾಲ್ಮಲಾದ ಸ್ಥಾಪಕ ಅಧ್ಯಕ್ಷರೂ ಆಗಿದ್ದ ಹೊಸ್ತೋಟ ಮಂಜುನಾಥ ಭಾಗವತ ಅವರ ನೆನಪಿನ ಪ್ರಶಸ್ತಿ ಹಿರಿಯ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎರಡೂ ದಿನ ಸಮಾರಂಭದ ಸಾನ್ನಿಧ್ಯವನ್ನು ಸ್ವರ್ಣವಲ್ಲೀ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ವಹಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 23ರ ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್, ಹಿರಿಯ ಅರ್ಥದಾರಿ ಅಶೋಕ ಭಟ್ಟ ಉಜಿರೆ ಪಾಲ್ಗೊಳ್ಳುವರು. ಕಲಾವಿದ ಶ್ರೀಪಾದ ಭಟ್ಟರಿಗೆ ಹೊಸ್ತೋಟ ಪ್ರಶಸ್ತಿ ಪ್ರದಾನವಾಗಲಿದೆ.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಸೆ.24ರ ಸಂಜೆ 4:30 ಕ್ಕೆ ನಡೆಯಲಿದ್ದು, ಅತಿಥಿಯಾಗಿ ಸಚಿವರಾದ ಮಂಕಾಳು ವೈದ್ಯ, ವಕೀಲ, ಕಲಾವಿದ ನಾಗರಾಜ ನಾಯ್ಕ ಕಾರವಾರ, ವಿನಾಯಕ ಹೆಗಡೆ ದಂಟ್ಕಲ್ ಭಾಗವಹಿಸುವರು. ಇದೇ ವೇಳೆ ದಂಟ್ಕಲ್ ಪ್ರಶಸ್ತಿ ಅತ್ತಿಮುರಡು ಅವರಿಗೆ ಪ್ರದಾನವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Ganesha Chaturthi 2023 : ಕೇರಳ, ಆಂಧ್ರಕ್ಕೆ ಹೋಗಲು ಸಿದ್ಧವಾಗಿದ್ದ ಪಿಒಪಿ ಗಣೇಶ ಮೂರ್ತಿ ಸೀಜ್!
ಮೊದಲ ದಿನ ಸಭಾ ಕಾರ್ಯಕ್ರಮದ ಬಳಿಕ ವೀರಮಣಿ ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಕೇಶವ ಕೊಳಗಿ, ಬೆಣ್ಣೆಮನೆ ಅನಿರುದ್ಧ, ಮುಮ್ಮೇಳದಲ್ಲಿ ವಿ.ಉಮಾಕಾಂತ ಕೆರೇಕೈ, ಅಶೋಕ ಭಟ್ಟ ಉಜಿರೆ, ಎಂ.ಎನ್.ಹೆಗಡೆ ಹಳವಳ್ಳಿ ಭಾಗವಹಿಸುವರು.
ಎರಡನೇ ದಿನ ಸಂಜೆ ಅತಿಥಿ ಕಲಾವಿದರಿಂದ ವೀರಮಣಿ ಯಕ್ಷಗಾನ ಕೂಡ ನಡೆಯಲಿದ್ದು ಹಿಮ್ಮೇಳದಲ್ಲಿ ರಾಮಕೃಷ್ಣಹಿಲ್ಲೂರು, ಬೆಣ್ಣೆಮನೆ ಅನಿರುದ್ಧ, ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಥಂಡಿಮನೆ, ಗಣಪತಿ ನಾಯ್ಕ, ಭಾಸ್ಕರ ಗಾಂವಕರ, ಚಂದ್ರಹಾಸ ಹೊಸಪಟ್ಟಣ, ಸನ್ಮಯ ಭಟ್ಟ, ನಿರಂಜನ ಜಾಗನಳ್ಳಿ ಪಾಲ್ಗೊಳ್ಳುವರು ಎಂದರು.
ನೋಂದಣಿ ಆರಂಭ
ತಾಳಮದ್ದಲೆಯ ಸ್ಪರ್ಧೆಯಲ್ಲಿ ಈಗಾಗಲೇ 15 ಪ್ರೌಢ ಶಾಲಾ ತಂಡದ ಮಕ್ಕಳು, 12 ಪ್ರಾಥಮಿಕ ಶಾಲಾ ತಂಡಗಳು ತಾಳಮದ್ದಲೆಗೆ ಈಗಾಗಲೇ ಹೆಸರು ನೋಂದಾಯಿಸಿವೆ. ಈವರೆಗೆ ಇಷ್ಟೊಂದು ದಾಖಲಾಗಿದ್ದು ದಾಖಲೆಯಾಗಿದೆ. ಕಳೆದ ವರ್ಷ 25 ತಂಡಗಳು ಭಾಗವಹಿಸಿದ್ದವು. ತಾಳಮದ್ದಲೆ ಸ್ಪರ್ಧೆ ಎರಡೂ ದಿನ ಬೆಳಿಗ್ಗೆ 10.30ರಿಂದ ನಡೆಯಲಿದೆ. ಮಕ್ಕಳ ತಂಡಗಳಿಗೆ ಹಿಮ್ಮೇಳದಲ್ಲಿ ಸತೀಶ ದಂಟ್ಕಲ್, ಶ್ರೀಪಾದ ಬಾಳೆಗದ್ದೆ, ಗಜಾನನ ತುಳಗೇರಿ, ಶ್ರೀಪತಿ ಕಂಚಿಮನೆ, ಕೃಷ್ಣ ಹೆಗಡೆ ಜೋಗದಮನೆ ಇತರರು ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ: Wild Animal : ಗುಂಡ್ಲುಪೇಟೆಯಲ್ಲಿ ಕಾಣಿಸಿದ ಚಿರತೆ ಮರಿಗಳು; ಸತ್ತರೆ ಜೀವ ಕೊಡುತ್ತೀರಾ ಎಂದ ರೈತರು!
ಆಸಕ್ತ ವಿದ್ಯಾರ್ಥಿ ತಂಡಗಳು ಸೆ.21ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9448756273 ಗೆ ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಜಿ.ಜಿ.ಹೆಗಡೆ ಕನೇನಳ್ಳಿ ಇದ್ದರು.
ಉಡುಪಿ
Weather Report : ನಾಳೆವರೆಗೂ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ
Rain News : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ ಇದ್ದು, ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಲ್ಲಿ (Weather report) ಸಾಮಾನ್ಯವಾಗಿರಲಿದೆ.
ಬೆಂಗಳೂರು: ಸೆ.23-24ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡಲ್ಲಿ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಬಿಡುವೇ ಇಲ್ಲ
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚೆನಯನ್ನು (weather report) ನೀಡಲಾಗಿದೆ. ಎಡಬಿಡದೆ ಮಳೆ ಸುರಿಯಲಿದ್ದು, ಜತೆಗೆ ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.
ದಕ್ಷಿಣ ಒಳನಾಡಲ್ಲಿ ಲಘು ಮಳೆ
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿಯಲ್ಲಿ ತಗ್ಗಿದ ಅಬ್ಬರ
ಕರಾವಳಿಯಲ್ಲಿ ಮಳೆ ಅಬ್ಬರ ತಗ್ಗಿದೆ. ಆದಾಗ್ಯೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.
ಬೆಂಗಳೂರಲ್ಲಿ ಸಂಜೆಗೆ ಮಳೆ ಕಾಟ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವೊಮ್ಮೆ ಬಿಸಿಲಿನ ತಾಪ ಜಾಸ್ತಿ ಇದ್ದರೆ, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Cauvery Protest: ಕಾವೇರಿ ಕಿಚ್ಚು: ಮಂಡ್ಯ ಬಂದ್; ಹೆದ್ದಾರಿಯಲ್ಲಿ ಉರುಳುಸೇವೆ, ರೈತರ ಜತೆ ಸೇರಿದ ಬಿಜೆಪಿ, ಜೆಡಿಎಸ್
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ – 20 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಗದಗ: 31 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 24 ಡಿ.ಸೆ
ಕಲಬುರಗಿ: 31 ಡಿ.ಸೆ – 23 ಡಿ.ಸೆ
ಬೆಳಗಾವಿ: 28 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ಸೆಪ್ಟೆಂಬರ್ 23ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನ ಮಟ್ಟ (ಅಡಿಗಳಲ್ಲಿ) | ಒಳ ಹರಿವು (ಕ್ಯೂಸೆಕ್) | ಹೊರ ಹರಿವು (ಕ್ಯೂಸೆಕ್) |
ಕೆಆರ್‌ಎಸ್ ಜಲಾಶಯ (KRS Dam) | 38.04 | 20.61 | 6016 | 5735 |
ಆಲಮಟ್ಟಿ ಜಲಾಶಯ (Almatti Dam) | 519.6 | 114.73 | 405 | 405 |
ಮಲಪ್ರಭಾ ಜಲಾಶಯ (Malaprabha Dam) | 633.80 | 21.44 | 0 | 194 |
ಘಟಪ್ರಭಾ ಜಲಾಶಯ (Ghataprabha Dam) | 662.91 | 42.40 | 2311 | 181 |
ತುಂಗಾಭದ್ರಾ ಜಲಾಶಯ (Tungabhadra Dam) | 497.71 | 62.92 | 4378 | 10316 |
ಭದ್ರಾ ಜಲಾಶಯ (Bhadra Dam) | 657.73 | 43.23 | 290 | 290 |
ಕಬಿನಿ ಜಲಾಶಯ (Kabini Dam) | 696.13 | 14.80 | 3166 | 4390 |
ಹಾರಂಗಿ (Harangi Dam) | 871.38 | 8.06 | 1335 | 2791 |
ಲಿಂಗನಮಕ್ಕಿ (Linganamakki Dam) | 554.44 | 68.30 | 5493 | 5393 |
ಹೇಮಾವತಿ (Hemavathi Dam) | 890.58 | 17.66 | 4986 | 1300 |
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉತ್ತರ ಕನ್ನಡ
Uttara Kannada News: ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಡಿಸಿ ಗಂಗೂಬಾಯಿ ಮಾನಕರ್
Uttara Kannada News: ಕಾರವಾರ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರವಾರ: ಪ್ರಸಕ್ತ ಸಾಲಿನ ಕಬ್ಬು (Sugarcane) ಅರೆಯುವ ಹಂಗಾಮು ನವೆಂಬರ್ 1 ರಿಂದ 15ರ ವರೆಗೆ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ (Sugar Factory) ವತಿಯಿಂದ ಜಿಲ್ಲೆಯ ಕಬ್ಬು ಬೆಳೆಗಾರರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2022-23 ರಲ್ಲಿ 10,18,382 ಮೆ. ಟನ್ ಕಬ್ಬು ನುರಿಸಲಾಗಿದ್ದು, 1,19,478 ಮೆ.ಟನ್ ಸಕ್ಕರೆ ಉತ್ಪಾದಿಸುವುದರೊಂದಿಗೆ 11.97% ಶೇಕಡಾ ಇಳುವರಿ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 6,633 ಹೆಕ್ಟೇರ್ ಹೊಸ ಕಬ್ಬು ಹಾಗೂ 8,005 ಹೆಕ್ಟೇರ್ ಕುಳೆ ಕಬ್ಬು ಸೇರಿದಂತೆ ಒಟ್ಟು 14,638 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ.
ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಹಳಿಯಾಳ ತಾಲೂಕಿನ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಇವರು ಪ್ರತಿ ಟನ್ ಗೆ ರೂ.3678 ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗಧಿಪಡಿಸಿದ್ದಾರೆ. ಜಿಲ್ಲೆಯ ಕಬ್ಬು ಬೆಳಗಾರರಿಂದ ಕಬ್ಬು ಖರೀದಿಸುವ ಸಂದರ್ಭದಲ್ಲಿ ಬೆಳಗಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪರಸ್ಪರ ಸಮನ್ವಯದಿಂದ ಕಬ್ಬು ಖರೀದಿಯ ಎಲ್ಲಾ ಪ್ರಕ್ರಿಯೆಯನ್ನು ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಅವರು ರೈತರು ಕಾರ್ಖಾನೆಗೆ ತರುವ ಕಬ್ಬನ್ನು ತೂಕ ಮಾಡುವಾಗ ಬೆಳಗಾರರು ಮತ್ತು ಕಾರ್ಖಾನೆಯ ನಡುವೆ ಗೊಂದಲಗಳು ಇದ್ದು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ತೂಕ ಮಾಡುವಂತೆ ಮತ್ತು ತೂಕದ ಪ್ರಮಾಣವನ್ನು ಬೆಳಗಾರರು ನೋಡಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಮುಂದಿನ ಅವಧಿಯ ವೇಳೆಗೆ ಕಾರ್ಖಾನೆಯ ಪ್ರವೇಶ ದ್ವಾರದಲ್ಲಿಯೇ ತೂಕ ಪರೀಕ್ಷಿಸಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಇತರೆ ಜಿಲ್ಲೆಯಲ್ಲಿ ಪ್ರತಿ ಟನ್ ಗೆ 772 ದರ ಇದ್ದು, ಜಿಲ್ಲೆಯಲ್ಲಿ 893 ರೂ. ದರ ಇದೆ ಎಂದು ಅಸಮದಾನ ವ್ಯಕ್ತಪಡಿಸಿ, ಹಿಂದಿನ ಆದೇಶದ ಪ್ರಕಾರ ದರ ಪಡೆಯುವಂತೆ ತಿಳಿಸಿದರು. ಈ ಕುರಿತಂತೆ ಕಾರ್ಖಾನೆಯ ಅಧಿಕಾರಿಗಳು ಪರಿಶೀಲಿಸಿ ದರ ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಖಾನೆಗೆ ತೆಗೆದುಕೊಂಡು ಬಂದ ಕಬ್ಬನ್ನು ಕೂಡಲೇ ತೂಕ ಮಾಡದೇ 2-3 ದಿನ ತಡವಾಗಿ ತೂಕ ಮಾಡುವುದರಿಂದ ಕಬ್ಬು ಒಣಗಿ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಪ್ಲಾಂಟೇಷನ್ ಸ್ಲಿಪ್ ಮತ್ತು ಆದ್ಯತಾ ಪಟ್ಟಿ ನೀಡಬೇಕು. ಪ್ರತಿದಿನ ರಿಕವರಿಯನ್ನು ಪಾರದರ್ಶಕವಾಗಿ ತೋರಿಸುವಂತೆ ರೈತರು ಆಗ್ರಹಿಸಿದರು. ಜಿಲ್ಲೆಯ ಕಬ್ಬು ಬೆಳಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಸಕ್ಕರೆ ಕಾರ್ಖಾನೆಯು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಉಳಿದಂತೆ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ 2016-17 ರಲ್ಲಿನ ಎಫ್.ಆರ್.ಪಿ ಮೇಲಿನ ಹೆಚ್ಚುವರಿ ಬಾಕಿ ಮೊತ್ತ ರೂ.305 ರೂಪಾಯಿಗಳನ್ನು ಬೆಳಗಾರರಿಗೆ ಪಾವತಿಸುವಂತೆ ತಿಳಿಸಿದರು. ಈ ಹಿಂದೆ ರೈತರ ಮೇಲೆ ಕಾರ್ಖಾನೆ ದಾಖಲಿಸಿರುವ ಪ್ರಕರಣಗಳ ವಿವರ ಪಡೆದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಇ.ಐ.ಡಿ.ಪ್ಯಾರಿ (ಇಂಡಿಯಾ) ಪ್ರೈ.ಲಿ ವ್ಯವಸ್ಥಾಪಕ ವೆಂಕಟರಾವ್, ಕಬ್ಬು ಬೆಳಗಾರರ ಮುಖಂಡರು ಮತ್ತು ರೈತ ಮುಖಂಡರು ಮತ್ತಿತರರು ಭಾಗವಹಿಸಿದ್ದರು.
ಉತ್ತರ ಕನ್ನಡ
Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
Sirsi News: ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ಮನೆಯ ಹಿಂಬಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ 15 ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿದಳ ವಶಪಡಿಸಿಕೊಂಡಿದ್ದಾರೆ.
ಶಿರಸಿ: ಮನೆಯ ಹಿಂಬಾಗದಲ್ಲಿ ಅಕ್ರಮವಾಗಿ (Illegal) ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ 15 ಶ್ರೀಗಂಧದ (Sandalwood) ತುಂಡುಗಳನ್ನು ಅರಣ್ಯ ಸಂಚಾರಿದಳ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ.
ನರೂರು ಗ್ರಾಮದ ಸದಾನಂದ ಬಸಪ್ಪ ಗೌಡ ಅವರ ಮನೆಯ ಹಿಂಬಾಗದಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಇಟ್ಟಿರುವ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 2 ಲಕ್ಷ 25 ಸಾವಿರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನಾದ ಸದಾನಂದ ಬಸಪ್ಪ ಗೌಡ ತಲೆಮರೆಸಿಕೊಂಡಿದ್ದು ಆರೋಪಿಗೆ ಹುಡುಕಾಟ ನಡೆದಿದೆ.
ಇದನ್ನೂ ಓದಿ: Oscars 2024: ಮುಂದಿನ ʻಆಸ್ಕರ್ʼ ರೇಸ್‌ನಲ್ಲಿ ಯಾವೆಲ್ಲ ಸಿನಿಮಾಗಳು ಇರಲಿವೆ?
ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅಹಮದ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ವಾಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಇಲಿಯಾಸ್ ಶೇಖ್,ರಾಜು ಪೂಜಾರ,ಚಿದಂಬರ ಗೌಡ ಹಾಗೂ ಚಾಲಕ ನಂದೀಶ್ ಗಾಡಿಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕನ್ನಡ
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ
ಅನ್ಯಕೋಮಿನ ಯುವಕ ಗುಂಪೊಂದು ಶಿವನ ದೇವಾಲಯದ ಅವಶೇಷಕ್ಕೆ ಕಲ್ಲೆಸೆದು ಹಾನಿ ಮಾಡಿರುವ ಘಟನೆ ನಡೆದಿದೆ.
ಕಾರವಾರ: ಇಲ್ಲಿನ ಜೋಯಿಡಾ ರಾಮನಗರದ ನಾಗೋಡಾ ಕ್ರಾಸ್ ಬಳಿ ಜಲಾಶಯ ವ್ಯಾಪ್ತಿಯಲ್ಲಿದ್ದ ಶಿವ ದೇವಾಲಯದ ಅವಶೇಷಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ಅನ್ಯಕೋಮಿನ ಯುವಕರು ಈ ಕೃತ್ಯ ಎಸಗಿದ್ದು, ಹಿಂದು ಸಂಘಟನೆಗಳು ಕಿಡಿಕಾರಿದ್ದಾರೆ. ಸೂಪಾ ಜಲಾಶಯದಲ್ಲಿ ಶಿವನ ದೇವಾಲಯವು ಮುಳುಗಡೆಯಾಗಿತ್ತು. ಸದ್ಯ ಮಳೆ ಇಲ್ಲದೆ ನೀರು ಕಡಿಮೆಯಾಗುವ ವೇಳೆ ದೇವಾಲಯ ಕಾಣಿಸಿಕೊಳ್ಳುತ್ತದೆ. ಹೀಗೆ ಕಂಡ ದೇವಾಲಯದ ಕಲ್ಲುಗಳಿಗೆ ಹಾನಿ ಮಾಡಿದ್ದಾರೆ.
ಸೆ.18 ರಂದು ಅನ್ಯಕೋಮಿನ ಯುವಕರ ಗುಂಪು ಶಿವನ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಹೊಡೆದು ಹಾಕಿದ್ದಾರೆ. ದಾಂಡೇಲಿ ಮೂಲದ 6 ಮಂದಿ ಈ ದುಷ್ಕೃತ್ಯ ವೆಸಗಿದ್ದಾರೆ.
ಅವಶೇಷಗಳಿಗೆ ಹಾನಿ ಮಾಡುವುದನ್ನು ಸೆಲ್ಫಿ ವಿಡಿಯೋ ಮಾಡಿ ಹಾಕಿಕೊಂಡು ಹುಸೈನ್ ಶೇಖ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾನೆ. ಹಿಂದೂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವವರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಿಂದು ಸಂಘಟನೆಯ ಕಾರ್ಯಕರ್ತರು ರಾಮನಗರ ಪೊಲೀಸರಿಗೆ ಮನವಿ ಪತ್ರವನ್ನು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ22 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ದೇಶ23 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ17 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ20 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ23 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ21 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ
-
ಉಡುಪಿ22 hours ago
Weather report : ಉತ್ತರ ಕರ್ನಾಟಕಕ್ಕೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಲ್ಲಿ ತಗ್ಗದ ಅಬ್ಬರ